Tag: ಮಹಿಳಾ ಸಹಾಯವಾಣಿ

  • 89 ವರ್ಷವಾದ್ರೂ ನನ್ನ ಪತಿ ಸೆಕ್ಸ್‌ಗಾಗಿ ಪೀಡಿಸ್ತಾನೆ – ಮಹಿಳಾ ಸಹಾಯವಾಣಿಗೆ ಕರೆ ಮಾಡಿದ 87ರ ವೃದ್ಧೆ

    89 ವರ್ಷವಾದ್ರೂ ನನ್ನ ಪತಿ ಸೆಕ್ಸ್‌ಗಾಗಿ ಪೀಡಿಸ್ತಾನೆ – ಮಹಿಳಾ ಸಹಾಯವಾಣಿಗೆ ಕರೆ ಮಾಡಿದ 87ರ ವೃದ್ಧೆ

    ಗಾಂಧಿನಗರ: ಗುಜರಾತ್‍ನ 87 ವರ್ಷದ ವೃದ್ಧೆಯೊಬ್ಬರು(Old Women) 89 ವರ್ಷದ ತನ್ನ ಪತಿ(Husband) ಪದೇ, ಪದೇ ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಾನೆ ಎಂದು ಮಹಿಳಾ ಸಹಾಯವಾಣಿ ಸಂಖ್ಯೆಗೆ ( Women’s helpline number) ಕರೆ ಮಾಡಿ ದೂರು ನೀಡಿದ್ದಾರೆ.

    ವಡೋದರಾದ(Vadodara) 87 ವರ್ಷದ ವೃದ್ಧೆ ಪದೇ, ಪದೇ ಲೈಂಗಿಕ ಕ್ರಿಯೆ(Sex) ನಡೆಸುತ್ತವಂತೆ ಒತ್ತಾಯಿಸುತ್ತಿದ್ದ ತನ್ನ ಪತಿಯ ಕಿರುಕುಳದಿಂದ ಬೇಸತ್ತಿದ್ದಾರೆ. ಗುಜರಾತ್‍ನ(Gujarat) ಎಲ್ಲಾ ಮಹಿಳಾ ನಿವಾಸಿಗಳಿಗೆ ಸರ್ಕಾರ ಟೋಲ್-ಫ್ರೀ ಮಹಿಳಾ ಸಹಾಯವಾಣಿ ಸಂಖ್ಯೆ -181 ಅಭಯಂ ಯೋಜನೆ ರೂಪಿಸಿದ್ದು, ಈ ಬಗ್ಗೆ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಈ ಕರೆಯನ್ನು ಸ್ವೀಕರಿಸಿದ ಅಭಯಂ ತಂಡ ನಿಜಕ್ಕೂ ದಿಗ್ಭ್ರಮೆಗೊಂಡಿದೆ. ತನ್ನ ಗಂಡನ ಕಿರುಕುಳದಿಂದ ಹೇಗಾದರೂ ಪಾರು ಮಾಡುವಂತೆ ವೃದ್ಧೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಪಾಕ್‌ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್‌ ಸಿಂಗ್‌ ಪತ್ನಿ ರಸ್ತೆ ಅಪಘಾತದಲ್ಲಿ ಸಾವು

    89 ವರ್ಷದ ತನ್ನ ಪತಿ ಇಂಜಿನಿರ್ ಆಗಿದ್ದು, ವಡೋದರದ ಸಯಾಜಿಗಂಜ್ ಪ್ರದೇಶದಲ್ಲಿ (Sayajiganj area) ವಾಸಿಸುತ್ತಿದ್ದಾರೆ. ವಯಸ್ಸಾದರೂ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೇ ಇಬ್ಬರಿಗೂ ಹಲವಾರು ವರ್ಷಗಳಿಂದ ಆರೋಗ್ಯ ಸಂಬಂಧ ಸಮಸ್ಯೆಗಳಿದೆ. ತಮ್ಮ ಮಗ ಹಾಗೂ ಸೊಸೆಯೊಂದಿಗೆ ವೃದ್ಧ ದಂಪತಿ ನೆಲೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆನ್ನಟ್ಟಿಕೊಂಡು ಬಂದ ಬೀದಿ ನಾಯಿಗಳು- ಬಾಲಕರು ಗ್ರೇಟ್ ಎಸ್ಕೇಪ್

    ಅವರ ಬೇಡಿಕೆಗಳಿಗೆ ಸ್ಪಂದಿಸದೇ, ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದಾಗ ತನ್ನ ಮೇಲೆ ಕೋಪಗೊಂಡು ಕಿರುಚಾಡುತ್ತಾರೆ ಮತ್ತು ನಿಂದಿಸುತ್ತಾರೆ. ಅನಾರೋಗ್ಯದ ಮಧ್ಯೆಯೂ ಪತಿ ಲೈಂಗಿಕ ಸಂಭೋಗಕ್ಕೆ ಒತ್ತಾಯಿಸಿದ್ದಕ್ಕೆ ವೃದ್ಧೆ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ನಂತರ ಅಭಯಂ(Abhayam team) ತಂಡ ಅವರ ಮನೆಗೆ ಭೇಟಿ ನೀಡಿ ಕೌನ್ಸೆಲಿಂಗ್(Counseling) ಆರಂಭಿಸಿ, ಈ ವಯಸ್ಸಿನಲ್ಲಿ ಯೋಗಾಭ್ಯಾಸ ಮಾಡುವಂತೆ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಂತೆ ವೃದ್ಧೆಯ ಪತಿಗೆ ತಿಳಿಸಿದೆ. ಅವರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಉದ್ಯಾನವನಗಳಿಗೆ ಭೇಟಿ ನೀಡುವಂತೆಯೂ ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರೇ ಎಚ್ಚರ – ಎಲ್ಲೆಡೆ ಹರಿದಾಡ್ತಿದೆ ಬೆಂಗ್ಳೂರು ಪೊಲೀಸ್ ಸಹಾಯವಾಣಿಯ ನಕಲಿ ನಂಬರ್

    ಮಹಿಳೆಯರೇ ಎಚ್ಚರ – ಎಲ್ಲೆಡೆ ಹರಿದಾಡ್ತಿದೆ ಬೆಂಗ್ಳೂರು ಪೊಲೀಸ್ ಸಹಾಯವಾಣಿಯ ನಕಲಿ ನಂಬರ್

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಮಹಿಳಾ ಸಹಾಯವಾಣಿಯ ನಕಲಿ ನಂಬರ್. ದಯವಿಟ್ಟು ಇಂತಹ ಸುಳ್ಳು ಸುದ್ದಿಗಳಿಂದ ಜಾಗೃತರಾಗಿರಿ ಎಂದು ಸ್ವತಃ ಬೆಂಗಳೂರು ಸಿಟಿ ಪೊಲೀಸರು(ಬಿಸಿಪಿ) ಟ್ವೀಟ್ ಮಾಡಿ ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.

    ಹೈದರಾಬಾದ್ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ನಡೆದ ಮೇಲೆ ಎಲ್ಲಾ ರಾಜ್ಯದಲ್ಲಿಯೂ ಮಹಿಳೆಯರ ಸುರಕ್ಷತೆ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಈ ವಿಚಾರವನ್ನೇ ದುರುಪಯೋಗ ಮಾಡಿಕೊಂಡ ದುಷ್ಕರ್ಮಿಗಳು, ಬೆಂಗಳೂರು ಪೊಲೀಸರು ಮಹಿಳಾ ಸಹಾಯವಾಣಿಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ನಕಲಿ ಫೋನ್ ನಂಬರ್ ಹಾಕಿ, ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ನಕಲಿ ಪೋಸ್ಟ್‌ನಲ್ಲಿ ಏನಿದೆ?
    ರಾತ್ರಿ ವೇಳೆ ಮಹಿಳೆಯರಿಗೆ ಓಡಾಡಲು ವಾಹನ ಸಿಗದಿದ್ದರೆ ಅವರಿಗೆ ಬೆಂಗಳೂರು ಸಿಟಿ ಪೊಲೀಸರು ತಮ್ಮ ವಾಹನದಲ್ಲಿಯೇ ಕರೆದುಕೊಂಡು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತಾರೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ಮಹಿಳೆಯರು ಪೊಲೀಸರಿಗೆ ಕರೆ ಮಾಡಿ ಸಹಾಯ ಕೋರಬಹುದಾಗಿದೆ. ಈ ನಂಬರ್‍ಗೆ (1091 ಮತ್ತು 7837018555) ಕರೆ ಮಾಡಿ. ಪೊಲೀಸರು 24/7 ಕೆಲಸ ಮಾಡುತ್ತಿರುತ್ತಾರೆ. ನೀವು ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಕಂಟ್ರೋಲ್ ರೂಮ್, ಹತ್ತಿರದ ಪಿಸಿಆರ್ ವಾಹನ ಅಥವಾ ಎಸ್‍ಎಚ್‍ಒ ವಾಹನ ನೀವಿದ್ದಲ್ಲಿ ಬಂದು, ನಿಮ್ಮನ್ನು ಸುರಕ್ಷಿತವಾಗಿ ನೀವು ತಲುಬೇಕಾದ ಸ್ಥಳಕ್ಕೆ ತಲುಪಿಸುತ್ತದೆ. ಈ ಸೇವೆಯನ್ನು ಪೊಲೀಸರು ಉಚಿತವಾಗಿ ನೀಡುತ್ತಿದ್ದಾರೆ. ದಯವಿಟ್ಟು ಈ ಸಂದೇಶವನ್ನು ಫಾರ್ವರ್ಡ್ ಮಾಡಿ ಎಂದು ಸುಳ್ಳು ಫೋನ್ ನಂಬರಿನೊಂದಿಗೆ ಸಂದೇಶ ಹರಿಬಿಡಲಾಗಿದೆ.

    ಬಿಸಿಪಿ ಟ್ವೀಟ್‍ನಲ್ಲಿ ಏನಿದೆ?
    ಈ ಸುಳ್ಳು ಸುದ್ದಿ ಬೆಂಗಳೂರು ಸಿಟಿ ಪೊಲೀಸರ ಗಮನಕ್ಕೆ ಬಂದಿದ್ದು, ಈ ರೀತಿ ಯಾವುದೇ ಮಹಿಳಾ ಸಹಾಯವಾಣಿಯನ್ನು ನಾವು ಕಾರ್ಯರೂಪಕ್ಕೆ ತಂದಿಲ್ಲ. ಇದು ಸುಳ್ಳು ಸುದ್ದಿ. ಪೋಸ್ಟ್‌ನಲ್ಲಿ ಇರುವುದು ಪೊಲೀಸರ ನಂಬರ್ ಅಲ್ಲ, ನಕಲಿ ನಂಬರ್. ದಯವಿಟ್ಟು ಇಂತಹ ಸಂದೇಶ, ಪೋಸ್ಟ್‌ಗಳ ಬಗ್ಗೆ ಜಾಗೃತರಾಗಿರಿ.

    ಸುಳ್ಳು ಸುದ್ದಿಗಳನ್ನು ನಂಬಬೇಡಿ, ಶೇರ್ ಮಾಡಬೇಡಿ. ಈ ರೀತಿ ಸುಳ್ಳು ಸಂದೇಶ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ಸಿಟಿ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

    ಹಾಗೆಯೇ ಈ ಟ್ವೀಟ್‍ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಿರ್ಭಯಾ ನಂಬರ್ ಬಗ್ಗೆ ಕೇಳಿದಾಗ, ಅದು ಕೂಡ ನಕಲಿ ನಂಬರ್ ಎಂದು ಪೊಲೀಸರು ರೀ-ಟ್ವೀಟ್ ಮಾಡಿದ್ದಾರೆ. ಹೀಗಾಗಿ ವಾಟ್ಸಾಪ್, ಫೇಸ್‍ಬುಕ್, ಇನ್‍ಸ್ಟಾಗ್ರಾಂಗಳಲ್ಲಿ ಹರಿದಾಡುವ ನಕಲಿ ನಂಬರ್‌ಗಳನ್ನು ಶೇರ್ ಮಾಡುವ ಮುನ್ನ ಅದನ್ನು ಪರಿಶೀಲಿಸಿ. ಒಂದು ವೇಳೆ ಈ ರೀತಿ ಮಹಿಳಾ ಸಹಾಯವಾಣಿಗಳನ್ನು ಕಾರ್ಯರೂಪಕ್ಕೆ ತಂದರೆ ಆ ಬಗ್ಗೆ ಪೊಲೀಸರೇ ಅಧಿಕೃತ ಮಾಹಿತಿ ನೀಡುತ್ತಾರೆ. ಆದ್ದರಿಂದ ಈ ರೀತಿ ಸುಳ್ಳು ಸಂದೇಶ, ಸುದ್ದಿಗಳ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕಿದೆ.