Tag: ಮಹಿಳಾ ಶೌಚಾಲಯ

  • ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ

    ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ

    ಬೆಳಗಾವಿ: ನಗರದ ಕನ್ನಡ ಸಾಹಿತ್ಯ ಭವನ ಆವರಣದಲ್ಲಿರುವ ಮಹಿಳಾ ಶೌಚಾಲಯಕ್ಕೆ ವ್ಯಕ್ತಿಯೊಬ್ಬ ಒಳಗಡೆ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡು ಹುಚ್ಚಾಟ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ನಗರದ ಚೆನ್ನಮ್ಮ ವೃತ್ತದಲ್ಲಿರುವ ಸಾಹಿತ್ಯ ಭವನದ ಆವರಣದಲ್ಲಿ ಮಹಿಳಾ ಶೌಚಾಲಯಕ್ಕೆ ನುಗ್ಗಿದ ವ್ಯಕ್ತಿ ಕಿತ್ತೂರು ತಾಲೂಕಿನ ಖೋದಾನಪುರ ಮೂಲದವನು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಹುಚ್ಚಾಟ ಪ್ರದರ್ಶನ ಮಾಡುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡರು. ಇದನ್ನೂ ಓದಿ: ಯುನಿಕಾರ್ನ್‌ಗಳ ಮೌಲ್ಯ 25 ಲಕ್ಷ ಕೋಟಿಗೆ ಹೆಚ್ಚಳ – ಮೋದಿ

    ನಡೆದಿದ್ದೇನು?
    ಇಂದು ಬೆಳಗ್ಗೆ 7 ಗಂಟೆಗೆ ವ್ಯಕ್ತಿಯೊಬ್ಬ ಸಾಹಿತ್ಯ ಭವನದಲ್ಲಿರುವ ಶೌಚಾಲಯಕ್ಕೆ ಹೋಗಿ ಲಾಕ್ ಮಾಡಿಕೊಂಡಿದ್ದಾನೆ. ಈ ವೇಳೆ ಹುಚ್ಚಾಟ ಪ್ರದರ್ಶನ ಮಾಡಿದ್ದು, ಸ್ಥಳೀಯರು ಭಯಗೊಂಡಿದ್ದಾರೆ. ಪರಿಣಾಮ ಭವನದ ಸಿಬ್ಬಂದಿಗಳು ಮತ್ತು ಸ್ಥಳದಲ್ಲಿದ್ದ ಪೊಲೀಸರು ಬಾಗಿಲು ತೆಗೆಸಲು ಹರಸಾಹಸಪಟ್ಟರು.

    ಕಾರಣವೇನು?
    ಈ ವೇಳೆ ವ್ಯಕ್ತಿ, ಪಿಎಸ್‍ಐ ಸ್ಥಳಕ್ಕೆ ಬರಬೇಕು ಅಲ್ಲಿವರೆಗೂ ನಾನು ಬಾಗಿಲು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದಾನೆ. ಈ ಹಿನ್ನೆಲೆ ಸ್ಥಳಕ್ಕೆ ಮಾರ್ಕೆಟ್ ಪಿಎಸ್‍ಐ ವಿಠ್ಠಲ ಹಾವನ್ನವರ್ ಆಗಮಿಸಿ ಆತನನ್ನು ಮನವೊಲಿಸಿ ಬಾಗಿಲು ತೆಗೆಸಿದರು. ಆದ್ರೆ, ಆ ವ್ಯಕ್ತಿಯು ಕೈಯಲ್ಲಿ ಬಕೆಟ್ ಹಿಡಿದುಕೊಂಡು ಅದರ ತುಂಬ ಗಾಜಿನ ಪುಡಿಯನ್ನು ತುಂಬಿ ಶೌಚಾಲಯದಿಂದ ಹೊರಬಂದಿದ್ದಾನೆ. ಇದನ್ನೂ ಓದಿ: ಭಾರತ ನರೇಂದ್ರ ಮೋದಿ, ಅಮಿತ್ ಶಾ ಅವರದ್ದಲ್ಲ – ಓವೈಸಿ

    ದೃಶ್ಯ ನೋಡಿದ ಎಲ್ಲರು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಪೊಲೀಸರು ಸಾಹಸ ಮಾಡಿ ಅವನ ಕೈಯಲ್ಲಿದ್ದ ಗಾಜಿನ ಪುಡಿಯನ್ನು ಕೆಳಗಡೆ ಚೆಲ್ಲಿಸಿದ್ದಾರೆ. ಬಳಿಕ ವ್ಯಕ್ತಿಯನ್ನ ಮನವೊಲಿಸಿದ ಬೆಳಗಾವಿ ಮಾರ್ಕೆಟ್ ಪೊಲೀಸರು ಠಾಣೆಗೆ ಕರೆದುಕೊಂಡು ಹೋದರು.

  • ದೇಶದಲ್ಲೇ ಮೊದಲು- ಹಳೆಯ KSRTC ಬಸ್ಸಿನಲ್ಲಿ ನಿರ್ಮಾಣವಾಯ್ತು ಮಹಿಳಾ ಶೌಚಾಲಯ

    ದೇಶದಲ್ಲೇ ಮೊದಲು- ಹಳೆಯ KSRTC ಬಸ್ಸಿನಲ್ಲಿ ನಿರ್ಮಾಣವಾಯ್ತು ಮಹಿಳಾ ಶೌಚಾಲಯ

    – 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
    – ಡಿಸಿಎಂ ಲಕ್ಷ್ಮಣ್ ಸವದಿ ಉದ್ಘಾಟನೆ

    ಬೆಂಗಳೂರು: ಕೆಎಸ್‌ಆರ್‌ಟಿಸಿ ಹಾಗೂ ಬಿಐಎಎಲ್ ಸಹಯೋಗದಲ್ಲಿ ಹಳೆಯ ಬಸ್ಸಿನಲ್ಲಿ ನಿರ್ಮಿಸಿದ ಮಹಿಳಾ ಶೌಚಾಲಯವನ್ನು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಇಂದು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಉದ್ಘಾಟಿಸಿದರು.

    ಕೆಎಸ್‌ಆರ್‌ಟಿಸಿಯು ಒಂದು ಅನುಪಯುಕ್ತ ಬಸ್ಸನ್ನು ಸುಸಜ್ಜಿತ ಮಹಿಳಾ ಶೌಚಾಲಯವನ್ನಾಗಿ ನಿರ್ಮಿಸಲಾಗಿದ್ದು, “ಸ್ತ್ರೀ ಶೌಚಾಲಯ”ಎಂದು ಹೆಸರಿಸಲಾಗಿದೆ. ಈ ಮೂಲಕ ಸ್ವಚ್ಛತೆಯತ್ತ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಬೆಂಗಳೂರುರವರು ಈ ಶೌಚಾಲಯದ ವೆಚ್ಚವನ್ನು ತಮ್ಮ ಸಾಮಾಜಿಕ ಕಳಕಳಿ(ಸಿಎಸ್‍ಆರ್) ಯೋಜನೆಯಡಿ ನೀಡಿದ್ದಾರೆ.

    ಈ ಶೌಚಾಲಯದಲ್ಲಿ ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ ನ್ಯಾಪ್‍ಕಿನ್ ವೆಂಡಿಂಗ್ ಯಂತ್ರ, ಇನ್ಸಿನಿರೇಟರ್, ಮಗುವಿಗೆ ಡೈಪರ್ ಬದಲಿಸುವ ಸ್ಥಳ, ಭಾರತೀಯ ಮತ್ತು ವಿದೇಶಿ ಮಾದರಿಯ ಶೌಚಾಲಯಗಳು, ಕೈ ತೊಳೆಯುವ ಬೇಸಿನ್‍ಗಳು, ಸಂವೇದಕ ದೀಪಗಳು ಹಾಗೂ ಸಂಪೂರ್ಣ ಸೌರ ವಿದ್ಯುತ್ ಅಳವಡಿಸಲಾಗಿದೆ.

    ಶೌಚಾಲಯದ ನಿರ್ಮಾಣ ವೆಚ್ಚ ಒಟ್ಟು ರೂ.12 ಲಕ್ಷಗಳಾಗಿದೆ. ಮಹಿಳಾ ಸ್ವಾಸ್ಥ್ಯ ಸಮಾಜ ನಿಗಮದ ಕಾಳಜಿಯಾಗಿದೆ. ದೇಶದ ರಸ್ತೆ ಸಾರಿಗೆ ನಿಗಮಗಳಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹ ಸುಸಜ್ಜಿತ ಶೌಚಾಲಯವನ್ನು ಅನುಪಯುಕ್ತ ಬಸ್ಸಿನಲ್ಲಿ ನಿರ್ಮಿಸಲಾಗಿದೆ. ನಿಗಮವು ಹಲವು ಮಹಿಳಾ ಸ್ನೇಹಿ ಉಪಕ್ರಮಗಳನ್ನು ಜಾರಿಗೆ ತಂದಿದೆ. ಬಸ್ ನಿಲ್ದಾಣ ಹಾಗೂ ಬಸ್ಸುಗಳನ್ನು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವು ನಿತಂತರವಾಗಿ ಮುಂದುವರಿದಿದೆ.

    ಬಸ್ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಪ್ರಮುಖ ಕಾಳಜಿಯೆಂದು ನಿಗಮವು ಮನಗಂಡಿದೆ. ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿಗಮದ ಪ್ರಥಮ ಆದ್ಯತೆಯಾಗಿದ್ದು, ಕೊವಿಡ್-19 ಸಂದರ್ಭದಲ್ಲಿ ಸದರಿ ಶೌಚಾಲಯ ಪ್ರಾರಂಭ ಮಾದರಿಯಾಗಲಿದೆ. ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿಯ ಪ್ರಯತ್ನ ಶ್ಲಾಘನೀಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅಲ್ಲದೆ ಇದೇ ರೀತಿಯಲ್ಲಿ ಅನುಪಯುಕ್ತ ಬಸ್ಸುಗಳನ್ನು ವಿವಿಧ ಯೋಜನೆಗಳಿಗೆ ಉಪಯೋಗಿಸಲು ಸಲಹೆ ನೀಡಿದರು.

    ಮಹಿಳಾ ಶೌಚಾಲಯ ನಿರ್ಮಿಸಿದ ಬಸ್ಸು ಅನುಪಯುಕ್ತವಾಗಿರುವುದರಿಂದ ಚಲಿಸುವುದಿಲ್ಲ. ಕೆಂಪೇಗೌಡ ಬಸ್ ನಿಲ್ದಾಣ, ಟರ್ಮಿನಲ್-1 ರಲ್ಲಿ ಮಹಿಳಾ ಪ್ರಯಾಣಿಕರ ಸೇವೆಗಾಗಿ ನಿಲ್ಲಿಸಲಾಗಿರುತ್ತದೆ ಎಂದು ಕರ್ನಾಟಕ ರಾಜ್ಯಸ ರಸ್ತೆ ಸಾರಿಗೆ ನಿಗಮ ವಿವರಿಸಿದೆ.

  • ಮಹಿಳಾ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್!

    ಮಹಿಳಾ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್!

    ಮೈಸೂರು: ನಗರದ ಮಹಿಳಾ ಶೌಚಾಲಯದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರೊಬ್ಬರು ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ.

    ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪೊಲೀಸಪ್ಪ ಈ ಎಡವಟ್ಟು ಮಾಡಿಕೊಂಡಿದ್ದಾರೆ. ಮಹಿಳೆಯರ ಶೌಚಾಲಯಕ್ಕೆ ತೆರಳಿ ಮೂತ್ರ ವಿಸರ್ಜಿಸಿ ಇನ್ಸ್ ಪೆಕ್ಟ್ ರ್ ವಾಪಸ್ಸಾಗಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ನ  ಈ ವರ್ತನೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಟ್ರಾಫಿಕ್ ಇನ್ಸ್ ಪೆಕ್ಟರ್ ಸಾರ್ವಜನಿಕವಾಗಿ ಈ ರೀತಿ ಅಸಭ್ಯ ವರ್ತನೆ ಮಾಡಿದ್ದಾರೆ. ಸಮವಸ್ತ್ರ ಧರಿಸಿಯೇ ಮಹಿಳೆಯರ ಶೌಚಾಲಯಕ್ಕೆ ತೆರಳಿದ್ದು, ಶೌಚ ಮಾಡಿ ವಾಪಸ್ ಬಂದು ಶೌಚಾಲಯದ ನಿರ್ವಹಣೆ ನೋಡಿಕೊಳ್ಳುವ ಮಹಿಳೆಯ ಮುಂದೆ ಉಡಾಫೆ ಉತ್ತರ ನೀಡಿ ಹೋಗಿದ್ದಾರೆ.

    ಇನ್ಸ್ ಪೆಕ್ಟರ್ ನ ಈ ಅಸಭ್ಯ ವರ್ತನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.