ಕಾಬೂಲ್: ಮಹಿಳೆಯರಿಗೆ ಬುರ್ಕಾ ನಿಷೇಧ ಹೇರಿದ್ದ ಬೆನ್ನಲ್ಲೇ ಮಹಿಳಾ ಶಿಕ್ಷಣ (Women Education) ನಿಷೇಧಿಸಿದ್ದ ತಾಲಿಬಾನ್ (Taliban) ಮತ್ತೆ ಮಹಿಳಾ ಶಿಕ್ಷಣ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. 1 ರಿಂದ 6ನೇ ತರಗತಿವರೆಗಿನ ಅಥವಾ ಅದಕ್ಕಿಂತಲೂ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ (Schools) ತಮ್ಮ ಅಧ್ಯಯನ ಮುಂದುವರಿಸಲು ಅವಕಾಶ ನೀಡಿದೆ.
https://twitter.com/GawharshadMedia/status/1612482642481381376?ref_src=twsrc%5Etfw%7Ctwcamp%5Etweetembed%7Ctwterm%5E1612482642481381376%7Ctwgr%5E59f3a0bec476186b0fc4fa903a31592b08a61e9e%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fnitish-kumars-remarks-population-women-uneducated-men-responsibility-controversy-2318800-2023-01-08
ತಾಲಿಬಾನ್ ಶಿಕ್ಷಣ ಸಚಿವಾಲಯವು (Taliban Education Ministry) 6ನೇ ತರಗತಿಯೊಳಗಿನ ಹೆಣ್ಣುಮಕ್ಕಳಿಗೆ ಬಾಲಕಿಯರಿಗೆ ಶಾಲೆಗಳು ಮತ್ತು ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಪತ್ರಾದೇಶ ಹೊರಡಿಸಿದೆ.
ಕೆಲ ದಿನಗಳ ಹಿಂದೆ ತಾಲಿಬಾನ್ ಮಹಿಳಾ ಶಿಕ್ಷಣಕ್ಕೆ (Women Education) ಸಂಪೂರ್ಣ ನಿಷೇಧ ಹೇರಿತ್ತು. ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಬೆನ್ನಲ್ಲೇ ಪದವಿ ಕಾಲೇಜಿನ ಪುರುಷ ವಿದ್ಯಾರ್ಥಿಗಳು ತರಗತಿಗಳನ್ನ ಬಹಿಷ್ಕರಿಸಿದ್ದರು. ಮಹಿಳಾ ವಿದ್ಯಾರ್ಥಿಗಳು ಹಾಜರಾಗುವವರೆಗೂ ನಾವೂ ಹಾಜರಾಗುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದರು.

ಮಾನವಹಕ್ಕುಗಳ ಆಯೋಗ, ತಾಲಿಬಾನ್ ಶಿಕ್ಷಣ ಕ್ರಮವನ್ನು ನಾಚಿಕೆಗೇಡಿನ ನಿರ್ಧಾರ ಎಂದು ಖಂಡಿಸಿತ್ತು. ಇದು ತಾಲಿಬಾನ್ `ಅಫ್ಘನ್ನರ ಮೂಲಭೂತ ಹಕ್ಕುಗಳ’ ಗೌರವದ ಕೊರತೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಕಿಡಿ ಕಾರಿತು. ಈ ಬೆನ್ನಲ್ಲೇ ತಾಲಿಬಾನ್ ಶಿಕ್ಷಣ ನೀತಿ ಮಾನವೀಯತೆಗೆ ವಿರೋಧ, ಮಹಿಳಾ ಶಿಕ್ಷಣದ ನೀತಿಗಳಲ್ಲಿ ಬದಲಾವಣೆಯ ಅಗತ್ಯವಿದೆ ವಿದೇಶಿ ಸರ್ಕಾರಗಳು ಹೇಳಿದ್ದವು. ಇದನ್ನೂ ಓದಿ: ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ: ತಾಲಿಬಾನ್ ಸಮರ್ಥನೆ

G7 ಗುಂಪಿನ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ ವಿದೇಶಾಂಗ ಸಚಿವರು ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ತಾಲಿಬಾನ್‌ಗೆ ಒತ್ತಾಯಿಸಿದ್ದರು. ಟರ್ಕಿ, ಕತಾರ್ ಮತ್ತು ಪಾಕಿಸ್ತಾನ ಸೇರಿದಂತೆ ಮುಸ್ಲಿಂ ರಾಷ್ಟ್ರಗಳೂ ಅಸಮಾಧಾನ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ತಮ್ಮ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿದ ತಾಲಿಬಾನ್ ಸಚಿವಾಲಯ 6ನೇ ತರಗತಿಯೊಳಗಿನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಸ್ತು ಎಂದಿದೆ. ಇದನ್ನೂ ಓದಿ: ವಿದ್ಯಾರ್ಥಿನಿಯರು ಹಾಜರಾಗದಿದ್ರೆ ನಮಗೂ ಉನ್ನತ ಶಿಕ್ಷಣ ಬೇಡ – ತಾಲಿಬಾನ್‌ಗೆ ವಿದ್ಯಾರ್ಥಿಗಳಿಂದ ಎಚ್ಚರಿಕೆ

ಆದ್ರೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದ ತಾಲಿಬಾನ್ ಸರ್ಕಾರದ ಉನ್ನತ ಶಿಕ್ಷಣ ಸಚಿವ ನಿದಾ ಮೊಹಮ್ಮದ್ ನದೀಮ್, ವಿಶ್ವವಿದ್ಯಾನಿಲಯಗಳಲ್ಲಿ ಲಿಂಗಗಳ ಸಮೀಕರಣ ತಡೆಗಟ್ಟಲು ಈ ನೀತಿ ಪರಿಚಯಿಸಲಾಗಿದೆ. ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿಯರು ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k











