ಮುಂಬೈ: ಮಹಿಳಾ ವಕೀಲರು ಮುಕ್ತ ನ್ಯಾಯಾಲಯದಲ್ಲಿ (Open Court) ತಮ್ಮ ತಲೆಗೂದಲನ್ನು ಪದೇಪದೆ ಸರಿಪಡಿಸಿಕೊಳ್ಳದಿರಿ. ಇದರಿಂದ ನ್ಯಾಯಾಲಯದ (Court) ಕಲಾಪಕ್ಕೆ ತೊಂದರೆಯಾಗುತ್ತದೆ ಎಂಬ ವಿಲಕ್ಷಣ ಪ್ರಕಟಣೆಯೊಂದನ್ನು ಪುಣೆ ಜಿಲ್ಲಾ ನ್ಯಾಯಾಲಯ (Pune District Court) ಹೊರಡಿಸಿತ್ತು.
ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ವಿವಾದಾತ್ಮಕ ಪ್ರಕಟಣೆಯನ್ನು ಹಿಂಪಡೆದಿದೆ. ಮಹಿಳಾ ವಕೀಲರು (Women Advocates) ಓಪನ್ ಕೋರ್ಟ್‌ನಲ್ಲಿ ಪದೇಪದೆ ತಮ್ಮ ತಲೆಗೂದಲು ಸರಿಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇದು ನ್ಯಾಯಾಲಯದ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುತ್ತಿದೆ. ಆದ್ದರಿಂದ ಹಾಗೆ ಮಾಡದಿರಲು ಮಹಿಳಾ ವಕೀಲರಿಗೆ ಈ ಮೂಲಕ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿತ್ತು. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು
ನ್ಯಾಯಾಲಯದ ಸೌಹಾರ್ದತೆಯನ್ನು ಕಾಪಾಡಲು ಮಾತ್ರ ನೋಟಿಸ್ ನೀಡಲಾಗಿದೆಯೇ ಹೊರತು ಯಾರನ್ನೂ ನೋಯಿಸಲು ಮಾಡಿಲ್ಲ. ಕೆಲವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ನೋಟಿಸ್ ಹಿಂಪಡೆದಿರುವುದಾಗಿ ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಅವರಿಗೆ ಗಂಡೆದೆ ಇದೆ – ಆರ್.ಅಶೋಕ್
ಪ್ರಕಟಣೆ ಕುರಿತು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ `ವಾವ್, ಈಗ ಇಲ್ಲಿ ನೋಡಿ, ಮಹಿಳಾ ವಕೀಲರಿಂದ ಯಾರು ವಿಚಲಿತರಾಗಿದ್ದಾರೆ’ ಎಂದು ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ನ್ಯಾಯಾಂಗದಲ್ಲಿ ಮಹಿಳೆಯರಿಗೆ 50% ಮೀಸಲಾತಿಯನ್ನು ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಇಂದು ಕರೆ ನೀಡಿದರು.
ಹೊಸದಾಗಿ ನೇಮಕಗೊಂಡ ಒಂಬತ್ತು ನ್ಯಾಯಾಧೀಶರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದು, ಈ ವೇಳೆ ಸುಪ್ರೀಂ ಕೋರ್ಟ್‍ನ ಮಹಿಳಾ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ನಿಮ್ಮ ಹಕ್ಕು. ನ್ಯಾಯಾಂಗ ಮತ್ತು ಕಾನೂನು ಕಾಲೇಜಿನಲ್ಲಿ ಮೀಸಲಾತಿ ನೀಡಲು ನೀವು ಅರ್ಹರು ಎಂದು ತಿಳಿಸಿದರು.
ನ್ಯಾಯಾಂಗದಲ್ಲಿ ಮಹಿಳೆಯರಿಗೆ 50% ಮೀಸಲಾತಿ ಬೇಕು. ಇದು ಸಾವಿರಾರು ವರ್ಷಗಳ ದಬ್ಬಾಳಿಕೆಯಾಗಿದೆ. ನ್ಯಾಯಾಂಗದ ಕೆಳಮಟ್ಟದಲ್ಲಿ 30% ಕ್ಕಿಂತ ಕಡಿಮೆ ಮಹಿಳಾ ನ್ಯಾಯಾಧೀಶರಿದ್ದಾರೆ. ಇನ್ನೂ ಹೈಕೋರ್ಟ್‍ಗಳಲ್ಲಿ 11.5%, ಸುಪ್ರೀಂ ಕೋರ್ಟ್‍ನಲ್ಲಿ ಕೇವಲ 11-12% ಮಹಿಳೆಯರು ಇದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾದ ಕನ್ನಡತಿ
ಇಡೀ ದೇಶದಲ್ಲಿ 17 ಲಕ್ಷ ವಕೀಲರಿದ್ದಾರೆ. ಆದರೆ ಇದರಲ್ಲಿ ಮಹಿಳೆಯರು ಕೇವಲ 15% ಮಾತ್ರ ಇದ್ದಾರೆ. ರಾಜ್ಯ ಬಾರ್ ಕೌನ್ಸಿಲ್‍ಗಳಲ್ಲಿ ಮಹಿಳೆಯರು ಕೇವಲ ಎರಡು ಪ್ರತಿಶತ ಚುನಾಯಿತ ಪ್ರತಿನಿಧಿಗಳಿರುತ್ತಾರೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ನ್ಯಾಷನಲ್ ಕಮಿಟಿಯಲ್ಲಿ ಒಬ್ಬ ಮಹಿಳಾ ಪ್ರತಿನಿಧಿಯೂ ಏಕೆ ಇಲ್ಲ? ಈ ಸಮಸ್ಯೆಗಳಿಗೆಲ್ಲ ತುರ್ತು ತಿದ್ದುಪಡಿ ಅಗತ್ಯವಿದೆ ಎಂದು ಪ್ರಸ್ತಾಪಿಸಿದರು.
ಈ ವೇಳೆ ಅವರು ಕಾರ್ಲ್ ಮಾಕ್ರ್ಸ್ ಹೇಳಿದ, ವಿಶ್ವದ ಪ್ರತಿಯೊಬ್ಬ ಕೆಲಸಗಾರರು ಒಟ್ಟಿಗೆ ಇರಬೇಕು. ಇದರಿಂದ ನೀವು ಕಳೆದುಕೊಳ್ಳುವುದು ಏನು ಇಲ್ಲ. ನೀವು ಸರಪಳಿಗಳು ಎಂದು ಹೇಳಿರುವುದನ್ನು ನೆನೆಪಿಸಿದ್ದು, ಮಹಿಳೆಯರು ಒಂದಾಗಿ ಇರಬೇಕು. ಇದರಿಂದ ನೀವು ಏನನ್ನು ಕಳೆದುಕೊಳ್ಳುವುದಿಲ್ಲ. ನೀವು ಸರಪಳಿಗಳು ಎಂದು ಹೇಳಿ ಎಲ್ಲರಲ್ಲೂ ಉತ್ಸಹ ತುಂಬಿದರು. ಇದನ್ನೂ ಓದಿ: ಸಾಲದ ಕಂತನ್ನು ಪಾವತಿ ಮಾಡದ್ದಕ್ಕೆ ಅಣ್ಣನನ್ನೆ ಕೊಂದ ಪಾಪಿ ತಮ್ಮ
ಕೆಲಸದ ಸ್ಥಳದಲ್ಲಿ ಅಹಿತಕರ ವಾತಾವರಣಗಳು ಸಾಮಾನ್ಯವಾಗಿರುತ್ತೆ. ಅದನ್ನು ಮಹಿಳೆಯರು ಎದುರಿಸಬೇಕಾಗುತ್ತದೆ. ಅದು ಅಲ್ಲದೇ ಕೆಲಸ ಮಾಡುವ ಸ್ಥಳದಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ, ಕೆಲಸ ಮಾಡುವ ತಾಯಂದಿರ ಮಕ್ಕಳನ್ನು ನೋಡಿಕೊಳ್ಳಲು ನರ್ಸರಿಗಳು ಇರುವುದಿಲ್ಲ. ನಾನು ಈ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇನೆ. ಈ ಕಾರ್ಯಕಾರಿಯಲ್ಲಿ ಬದಲಾವಣೆಗಳನ್ನು ಮಾಡುವಂತೆ ಒತ್ತಾಯಿಸುತ್ತಿದ್ದೇನೆ ಎಂದು ತಿಳಿಸಿದರು.
ಇಂದು ವಿಶ್ವ ಪುತ್ರಿಯರ ದಿನ ಎಂದು ನೆನಪಿಸಿಕೊಂಡ ಅವರು, ನಿಮ್ಮೆಲ್ಲರಿಗೂ ವಿಶ್ವ ಪುತ್ರಿಯರ ದಿನದ ಶುಭಾಶಯಗಳು. ಇದು ವಿದೇಶಿ ಸಂಸ್ಕøತಿ ಆದರೆ ವಿಶ್ವದ ಕೆಲವು ಒಳ್ಳೆಯ ವಿಷಯಗಳನ್ನು ತೆಗೆದುಕೊಂಡರೆ ತಪ್ಪಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸುರೇಶ್ ಅಂಗಡಿ ಇಲ್ಲೇ ಚಿಕಿತ್ಸೆ ಪಡೆದಿದ್ದರೆ ಉಳಿಯುತಿದ್ದರೆನೋ? – ಶೆಟ್ಟರ್
ಎನ್.ವಿ.ರಮಣ ಅವರು ಈ ತಿಂಗಳಲ್ಲೇ ಎರಡನೇ ಬಾರಿಗೆ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಸಮಸ್ಯೆಯನ್ನು ಎತ್ತಿದ್ದಾರೆ. ಈ ಹಿಂದೆ ಭಾರತದ ಬಾರ್ ಕೌನ್ಸಿಲ್ ಆಯೋಜಿಸಿದ ಸಮಾರಂಭದಲ್ಲಿ ಅವರು, 75 ವರ್ಷಗಳ ಸ್ವಾತಂತ್ರ್ಯದ ನಂತರ ಎಲ್ಲಾ ಹಂತಗಳಲ್ಲಿಯೂ ಮಹಿಳೆಯರಿಗೆ ಕನಿಷ್ಠ 50% ಪ್ರಾತಿನಿಧ್ಯವನ್ನು ನಿರೀಕ್ಷಿಸಿದ್ದೇವೆ. ಆದರೆ ಸುಪ್ರೀಂ ಕೋರ್ಟ್‍ನಲ್ಲಿ ನಾವು ಬಹಳ ಕಷ್ಟಪಟ್ಟು ಇಂದು ಕೇವಲ 11% ಪ್ರಾತಿನಿಧ್ಯ ಸಾಧಿಸಿದ್ದೇವೆ ಎಂದಿದ್ದರು.