Tag: ಮಹಿಳಾ ರೋಗಿ

  • ತಪಾಸಣೆ ನೆಪದಲ್ಲಿ ಮಹಿಳಾ ರೋಗಿಗೆ ಕಿರುಕುಳ – ವೈದ್ಯನ ವಿರುದ್ಧ ದೂರು

    ತಪಾಸಣೆ ನೆಪದಲ್ಲಿ ಮಹಿಳಾ ರೋಗಿಗೆ ಕಿರುಕುಳ – ವೈದ್ಯನ ವಿರುದ್ಧ ದೂರು

    ನವದೆಹಲಿ: ಮಹಿಳಾ ರೋಗಿಗೆ ಕಿರುಕುಳ ನೀಡಿದ ಆರೋಪದಡಿ ಖಾಸಗಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಕಾಲು ನೋವಿನಿಂದ ಬಳಲುತ್ತಿದ್ದ ಮಹಿಳೆ ಏಕಾಂಗಿಯಾಗಿ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ತಪಾಸಣೆ ವೇಳೆ ವೈದ್ಯರು ಮಹಿಳೆಯ ಭುಜದ ಮೇಲೆ ಕೈ ಹಾಕಿದ್ದು, ಅನುಚಿತವಾಗಿ ಸ್ಪರ್ಶಿಸಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಘಟನೆ ಬಳಿಕ ಮಹಿಳೆ ಆಸ್ಪತ್ರೆಯಿಂದ ಹೊರಬಂದು ತನ್ನ ಪತಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರನ್ನು ಸಂಪರ್ಕಿಸಿ ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟಿ ಕಾಜೋಲ್‍ಗೆ ಕೊರೊನಾ

    POLICE JEEP

    ಇದೀಗ ಈ ಕುರಿತಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ ಮತ್ತು ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಉಪ ಪೊಲೀಸ್ ಆಯುಕ್ತೆ ಶ್ವೇತಾ ಚೌಹಾಣ್ ಹೇಳಿದ್ದಾರೆ. ಇದನ್ನೂ ಓದಿ: ತಮ್ಮ ಜೊತೆ ಸಮಯ ಕಳೆಯುವಂತೆ ನಿರ್ದೇಶಕರೊಬ್ಬರು ಹೇಳಿದ್ದರು- ಕಾಸ್ಟಿಂಗ್ ಕೌಚ್ ಬಗ್ಗೆ ದಿವ್ಯಾಂಕ ಮಾತು

  • ಔಷಧಿ ಹಚ್ಚೋ ನೆಪದಲ್ಲಿ ಮಹಿಳಾ ರೋಗಿಯ ಖಾಸಗಿ ಅಂಗ ಮುಟ್ಟಿ ವಾರ್ಡ್ ಬಾಯ್ ಕಿರುಕುಳ!

    ಔಷಧಿ ಹಚ್ಚೋ ನೆಪದಲ್ಲಿ ಮಹಿಳಾ ರೋಗಿಯ ಖಾಸಗಿ ಅಂಗ ಮುಟ್ಟಿ ವಾರ್ಡ್ ಬಾಯ್ ಕಿರುಕುಳ!

    – ಕುಟುಂಬಸ್ಥರು ನೀಡಿದ ದೂರಿನಿಂದ ಆರೋಪಿ ಅರೆಸ್ಟ್

    ಮುಂಬೈ: ಖಾಸಗಿ ಆಸ್ಪತ್ರೆಯ ವಾರ್ಡ್ ಬಾಯ್ ಒಬ್ಬ ಮಹಿಳಾ ರೋಗಿಗೆ ಕಿರುಕುಳ ನೀಡಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದೆ.

    ಆರೋಪಿಯನ್ನು ಮುಕೇಶ್ ಪ್ರಜಾಪತಿ(25) ಎಂದು ಗುರುತಿಸಲಾಗಿದೆ. ಈತ ಸರ್ಜರಿಗೆಂದು ಬಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕಿರುಕುಳ ನೀಡಿದ್ದಾನೆ.

    ಡಿಸೆಂಬರ್ 16ರಂದು 29 ವರ್ಷದ ಮಹಿಳೆ ಸರ್ಜರಿಗಾಗಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸೆಂಬರ್ 17ರಂದು ರಾತ್ರಿ 25 ವರ್ಷದ ಯುವಕ ಮಹಿಳೆಯ ಬಳಿ ಬಂದು ನಿಮ್ಮ ದೇಹಕ್ಕೆ ಔಷಧಿ ಹಚ್ಚಬೇಕು ಎಂದು ಹೇಳಿದ್ದಾನೆ. ಆರೋಪಿ ಮಾತನ್ನು ನಂಬಿದ ಮಹಿಳೆ ಆಯ್ತು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಆರೋಪಿ ಮಹಿಳೆಯ ಖಾಸಗಿ ಅಂಗವನ್ನು ಮುಟ್ಟಿ ಕಿರುಕುಳ ನೀಡಿದ್ದಾನೆ.

    ಆರೋಪಿಯಿಂದ ಕಿರುಕುಳ ಎದರಿಸಿದ ಮಹಿಳೆ ಮರುದಿನ ನಡೆದ ಘಟನೆಯನ್ನು ತಮ್ಮ ಸಂಬಂಧಿಕರ ಮುಂದೆ ವಿವರಿಸಿದ್ದಾರೆ. ಇದರಿಂದ ಎಚ್ಚೆತ್ತ ಸಂತ್ರಸ್ತೆ ಕುಟುಂಬ ಕೂಡಲೇ ಆಸ್ಪತ್ರೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೆ ತಡರಾತ್ರಿ ವಾರ್ಡ್ ಬಾಯ್ ಮಹಿಳೆ ಇದ್ದ ರೂಮಿನೊಳಗೆ ಹೇಗೆ ಬಂದ ಎಂದು ಪ್ರಶ್ನಿಸಿದ್ದಾರೆ.

    ಸಂತ್ರಸ್ತೆ ಕುಟುಂಬ ಪೊಲೀಸರಿಗೂ ದೂರು ನೀಡಿದರು. ಹೀಗಾಗಿ ಡಿಸೆಂಬರ್ 18ರಂದು ವಾರ್ಡ್ ಬಾಯ್ ನನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ರಾತ್ರೋರಾತ್ರಿ ಮಹಿಳಾ ರೋಗಿಯನ್ನು ಆಸ್ಪತ್ರೆಯಿಂದ ಹೊರಹಾಕಿದ ದಾವಣಗೆರೆ ಜಿಲ್ಲಾಸ್ಪತ್ರೆ!

    ರಾತ್ರೋರಾತ್ರಿ ಮಹಿಳಾ ರೋಗಿಯನ್ನು ಆಸ್ಪತ್ರೆಯಿಂದ ಹೊರಹಾಕಿದ ದಾವಣಗೆರೆ ಜಿಲ್ಲಾಸ್ಪತ್ರೆ!

    ದಾವಣಗೆರೆ: ವೈದ್ಯರು ರಾತ್ರೋರಾತ್ರಿ ಮಹಿಳಾ ರೋಗಿಯನ್ನು ಹೊರ ಹಾಕಿದ ಮನಕಲುಕುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡದ ಗಂಗುಬಾಯಿ ಎಂಬುವರಿಗೆ ತಲೆಗೆ ಗಂಭೀರ ಪೆಟ್ಟು ಬಿದ್ದು ಜೂನ್ 9 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಬೆಳಗ್ಗೆ ಡಿಸ್ಚಾರ್ಜ್ ಲೆಟರ್ ವೈದ್ಯರು ಕೊಟ್ಟಿದ್ದರು.

    ಆದ್ರೆ ಅನಕ್ಷರಸ್ಥರಾದ ಕಾರಣ ಈ ವಿಚಾರ ರೋಗಿ ಹಾಗೂ ಜೊತೆಗಿದ್ದ ಮಹಿಳೆಗೆ ತಿಳಿದಿರಲಿಲ್ಲ. ಹೀಗಾಗಿ ಸಂಜೆ ಬಂದ ವೈದ್ಯರು ನೀವ್ಯಾಕೆ ಇನ್ನೂ ಆಸ್ಪತ್ರೆಯಲ್ಲಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆ ರಾತ್ರಿಯಾಯ್ತು ಇನ್ನು ಬಸ್ ಸಿಗಲ್ಲ ಅಂತ ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ವೈದ್ಯರು ರಾತ್ರಿ ಏಕಾಏಕಿ ಹೊರ ಹಾಕಿದ್ದಾರೆ. ರಾತ್ರೋರಾತ್ರಿ ಆಸ್ಪತ್ರೆ ಬಿಟ್ಟು ಹೊರ ಬಂದ ರೋಗಿಗಳು ರಸ್ತೆ ಬದಿಯಲ್ಲಿ ಆಶ್ರಯ ಪಡೆದಿದ್ದರು.

    ಈ ದೃಶ್ಯವನ್ನು ಕಂಡ ಅಲ್ಲೇ ಇರುವ ಅಂಬುಲೆನ್ಸ್ ಚಾಲಕ ಅಜೇಯ್ ಇವರ ಸ್ಥಿತಿಯನ್ನು ನೋಡಿ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಿದ್ರು. ಮಾನವೀಯತೆ ಇಲ್ಲದಂತೆ ವರ್ತಿಸಿದ ಜಿಲ್ಲಾಸ್ಪತ್ರೆಯ ವೈದ್ಯರ ವಿರುದ್ಧ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ತರಬೇತಿ ನಿರತ ವೈದ್ಯರುಗಳು ರೋಗಿಯನ್ನು ಹೊರಹಾಕಿದ್ದಾರೆ. ಈ ಬಗ್ಗೆ ನನಗೆ ತಿಳಿದಿರಲಿಲ್ಲ. ಇನ್ನು ಮುಂದೆ ಇಂತಹ ಘಟನೆ ನಡೆಸದಂತೆ ಪಿಜಿ ವೈದ್ಯರಿಗೆ ಎಚ್ಚರಿಕೆ ನೀಡುವುದಾಗಿ ರಾತ್ರಿ ಉಸ್ತುವಾರಿ ವಹಿಸಿಕೊಂಡಿದ್ದ ವೈದ್ಯ ಪ್ರಕಾಶ್ ಹೇಳಿದ್ದಾರೆ.