Tag: ಮಹಿಳಾ ಮೀಸಲಾತಿ

  • ಬಿಹಾರ ಚುನಾವಣೆಗೆ ನಿತೀಶ್ ಸಜ್ಜು – ಬಿಹಾರದ ಮಹಿಳೆಯರಿಗೆ ಉದ್ಯೋಗದಲ್ಲಿ 35% ಮೀಸಲಾತಿ ಘೋಷಣೆ

    ಬಿಹಾರ ಚುನಾವಣೆಗೆ ನಿತೀಶ್ ಸಜ್ಜು – ಬಿಹಾರದ ಮಹಿಳೆಯರಿಗೆ ಉದ್ಯೋಗದಲ್ಲಿ 35% ಮೀಸಲಾತಿ ಘೋಷಣೆ

    ಪಾಟ್ನಾ: ಬಿಹಾರ ಚುನಾವಣೆಗೆ ಸಿಎಂ ನಿತೀಶ್‌ ಕುಮಾರ್‌ (Nitish Kumar) ಸಜ್ಜಾಗಿದ್ದಾರೆ. ಬಿಹಾರ ಮಹಿಳೆಯರಿಗೆ ಉದ್ಯೋಗದಲ್ಲಿ 35% ಮೀಸಲಾತಿ ಘೋಷಣೆ ಮಾಡಿದ್ದಾರೆ.

    ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಈ ಮೀಸಲಾತಿ ಕಲ್ಪಿಸಲಾಗುವುದು. ಎಲ್ಲಾ ವರ್ಗದ ಮಹಿಳೆಯರಿಗೂ ಸೌಲಭ್ಯ ಸಿಗಲಿದೆ. ಆದರೆ, ಅವರು ಬಿಹಾರದ (Bihar) ಖಾಯಂ ನಿವಾಸಿಗಳಾಗಿರಬೇಕು ಎಂದು ಎಕ್ಸ್‌ ಖಾತೆಯಲ್ಲಿ ಸಿಎಂ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ – ಪ್ರಮುಖ ಆರೋಪಿ ಎನ್‌ಕೌಂಟರ್‌ಗೆ ಬಲಿ

    ಆಡಳಿತದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಪಾಟ್ನಾದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಈ ಘೋಷಣೆ ಹೊರಬಿದ್ದಿದೆ.

    ಮೀಸಲಾತಿಯ ಜೊತೆಗೆ, ಬಿಹಾರ ಸರ್ಕಾರವು ರಾಜ್ಯದ ಯುವಜನರ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಬಿಹಾರ ಯುವ ಆಯೋಗ ಎಂಬ ಹೊಸ ಶಾಸನಬದ್ಧ ಸಂಸ್ಥೆಯ ರಚನೆಗೆ ಅನುಮೋದನೆ ನೀಡಿತು. ಇದನ್ನೂ ಓದಿ: ಬಿಹಾರ ಮತದಾರರ ಪಟ್ಟಿ ನವೀಕರಣ: ಜುಲೈ 10 ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

    ಬಿಹಾರದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು, ಅವರಿಗೆ ತರಬೇತಿ ನೀಡಲು ಮತ್ತು ಅವರನ್ನು ಸಬಲೀಕರಣಗೊಳಿಸಲು, ಸಮರ್ಥರನ್ನಾಗಿ ಮಾಡಲು, ಸರ್ಕಾರ ಬಿಹಾರ ಯುವ ಆಯೋಗವನ್ನು ರಚಿಸಲು ನಿರ್ಧರಿಸಿದೆ. ಇಂದು ಇದಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.

    ಆಯೋಗವು ಯುವ ಕಲ್ಯಾಣ, ಶಿಕ್ಷಣ, ಉದ್ಯೋಗ ಮತ್ತು ನೀತಿ ಸುಧಾರಣೆಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡುತ್ತದೆ. ಕೌಶಲ್ಯ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬಿಹಾರದೊಳಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ಸಿಗುವಂತೆ ಮೇಲ್ವಿಚಾರಣೆ ಮಾಡಲು ಇದು ಇಲಾಖೆಗಳೊಂದಿಗೆ ಕೆಲಸ ಮಾಡುತ್ತದೆ. ಇದು ಹೊರಗೆ ಅಧ್ಯಯನ ಮಾಡುತ್ತಿರುವ ಅಥವಾ ಉದ್ಯೋಗದಲ್ಲಿರುವ ರಾಜ್ಯದ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುತ್ತದೆ.

  • 10 ವರ್ಷಗಳ ಸಾಧನೆ ಬಿಜೆಪಿಗೆ ಬೂಸ್ಟರ್‌ ಡೋಸ್‌ ಕೊಡುತ್ತಾ? 

    10 ವರ್ಷಗಳ ಸಾಧನೆ ಬಿಜೆಪಿಗೆ ಬೂಸ್ಟರ್‌ ಡೋಸ್‌ ಕೊಡುತ್ತಾ? 

    ನವದೆಹಲಿ: 2024ರ ಲೋಕಸಭಾ ಚುನಾವಣೆ ಕಳೆಗಟ್ಟಿದೆ. ಈಗಾಗಲೇ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮೊದಲಿಗೆ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಇದರಿಂದಾಗಿ ರಾಷ್ಟ್ರೀಯ ಪಕ್ಷಗಳ ನಡುವೆ ಕೆಸರೆರಚಾಟ ಶುರುವಾಗಿದೆ. ಕಾಂಗ್ರೆಸ್‌ ತನ್ನ ಗ್ಯಾರಂಟಿಗಳ ಮೇಲೆ ನಂಬಿಕೆಯಿಟ್ಟಿದ್ದರೆ, ಬಿಜೆಪಿ ಮೋದಿ ಗ್ಯಾರಂಟಿಯ ಮೇಲೆ ಭರವಸೆ ಹೊಂದಿದೆ. ಅದಕ್ಕೆ ಪೂರಕವಾಗಿ ಕಳೆದ 10 ವರ್ಷಗಳಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಬಿತ್ತರಿಸಲು ಶುರು ಮಾಡಿದ್ದಾರೆ.

    ಕಳೆದ 10 ವರ್ಷಗಳ ಸಾಧನೆಯನ್ನು ಬಣ್ಣಿಸುತ್ತಿರುವ ಪ್ರಧಾನಿ ಮೋದಿ ಅವರು, ಮುಂದಿನ ಗ್ಯಾರಂಟಿಗಳೊಂದಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮಗಳಿಗೆ ನೀಡುತ್ತಿರುವ ಸಂದರ್ಶನಗಳಲ್ಲಿ ನೆರೆ-ಹೊರೆ ದೇಶಗಳ ಜೊತೆಗಿನ ಸಂಬಂಧ, ಲೋಕಸಭಾ ಚುನಾವಣೆ, ಭಾರತದಲ್ಲಿ ಪ್ರಜಾಪ್ರಭುತ್ವ, ಮುಕ್ತ ಪತ್ರಿಕಾ ಸ್ವಾತಂತ್ರ್ಯ, ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಡಿಜಿಟಲ್ ಕೇತ್ರದಲ್ಲಿನ ಭಾರತದ ಸಾಧನೆ ಮೊದಲಾದ ವಿಷಯಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

    ಪ್ರಸ್ತುತ ಚುನಾವಣೆಯಲ್ಲಿ 3ನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಪ್ರಧಾನಿ ಮೋದಿ, 3ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಮಾಡುವ ಗುರಿ ಹೊಂದಿರುವುದಾಗಿ ಮಹತ್ವದ ಗ್ಯಾರಂಟಿ ನೀಡಿದ್ದಾರೆ. ಹಾಗಾದ್ರೆ ಕಳೆದ 10 ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರದಲ್ಲಿ ಏನೇನು ಬೆಳವಣಿಯಾಗಿದೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಸಂವಿಧಾನದ 370ನೇ ವಿಧಿ ರದ್ದು:

    ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿತು. ಭಾರತದ ಸಂವಿಧಾನದ 370ನೇ ವಿಧಿಯು ಉತ್ತರ ಭಾರತದಲ್ಲಿ ವಿವಾದಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟಿತ್ತು. ಇದು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ರಾಜ್ಯಧ್ವಜ ಮತ್ತು ಆಂತರಿಕ ಆಡಳಿತ ಸ್ವಾಯತತ್ತೆಯನ್ನು ಒದಗಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವಿಧಿಯನ್ನ ರದ್ದುಗೊಳಿಸಿತು. 370ನೇ ವಿಧಿ ರದ್ದತಿಯ ನಂತರ ಆ ಪ್ರದೇಶ ಜಾಗತಿಕ ಕಾರ್ಯಕ್ರಮಗಳ ತಾಣವಾಗಿ ಬದಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೇ ಇತ್ತೀಚೆಗೆ ಪ್ರಮುಖ ಹೂಡಿಕೆಗಾದರರೂ ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳಲ್ಲಿ ಹೂಡಿಕೆಗೆ ಮನಸ್ಸು ಮಾಡುತ್ತಿರುವುದು ಗಮನಾರ್ಹ.

    ಮಹಿಳೆಯರಿಗೆ ಮೀಸಲಾತಿ:

    ಕೇಂದ್ರ ಸರ್ಕಾರ ಹೊಸ ಸಂಸತ್‌ ಕಟ್ಟಡದ ಮೊದಲ ವಿಶೇಷ ಅಧಿವೇಶನ ಸಮಯದಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ (Women Reservation) ನೀಡುವ ಮಸೂದೆಯನ್ನು ಪಾಸ್‌ ಮಾಡಿದೆ. 1989 ರಿಂದ ಈ ವಿಚಾರ ಸಂಸತ್ತಿನಲ್ಲಿ ಚರ್ಚೆ ಆಗುತ್ತಲೇ ಇತ್ತು. ಆದರೆ 2023ರ ಸೆಪ್ಟೆಂಬರ್‌ನಲ್ಲಿ ಮಸೂದೆಯನ್ನು ಪಾಸ್‌ ಮಾಡಲಾಗಿದೆ.  ಅಲ್ಲದೇ ಸಶಸ್ತ್ರ ಮೀಸಲು ಪಡೆಗಳು ಸೇರಿದಂತೆ ಎಲ್ಲ ಕ್ಷೇತ್ರಗಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ಅಲ್ಲದೇ ಮಹಿಳೆಯರಿಗಾಗಿ ನಮೋ ಡ್ರೋನ್‌ ದೀದಿ, ಲಕ್‌ಪತಿ ದೀದಿ, ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ನಾರಿ ಶಕ್ತಿಯ ಬಲ ಹೆಚ್ಚಿಸಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ:

    ಕಳೆದ ಮಾರ್ಚ್‌ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಗೊಳಿಸಿತು.. 2014ರ ಡಿಸೆಂಬರ್‌ 31ಕ್ಕೂ ಮುನ್ನ  ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಕಾರಣಕ್ಕೆ ಅಲ್ಲಿ ಕಿರುಕುಳ ಅನುಭವಿಸಿ, ಬದುಕಲಾಗದೆ 31 ಡಿಸೆಂಬರ್‌ 2014ಕ್ಕಿಂತ ಮುಂಚೆ ಭಾರತದೊಳಗೆ ಓಡಿಬಂದ ಹಿಂದೂ, ಜೈನ, ಭೌದ್ಧ, ಕ್ರಿಶ್ಚಿಯನ್‌, ಪಾರ್ಸಿ ಮತ್ತು ಸಿಖ್ಖರನ್ನು ಭಾರತೀಯ ನಾಗರಿಕರು ಎಂದು ಪರಿಗಣಿಸಿ ಅವರಿಗೆ ಈ ಕಾಯ್ದೆಯ ಅಡಿ ಪೌರತ್ವ ನೀಡಲಾಗುತ್ತದೆ. 

    ತ್ರಿವಳಿ ತಲಾಖ್‌ ನಿಷೇಧ:

    2019ರ ಜುಲೈ 30 ರಂದು ಭಾರತದ ಸಂಸತ್ತು ತ್ರಿವಳಿ ತಲಾಖ್‌ ಪದ್ದತಿಯನ್ನು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಘೋಷಣೆ ಮಾಡಿತು. ಆನಂತರ 2019ರ ಆಗಸ್ಟ್‌ 1 ರಂದು ಮುಸ್ಲಿಂ ಮಹಿಳೆಯರ ವಿಹಾಹದ ಮೇಲಿನ ಹಕ್ಕುಗಳ ಸಂರಕ್ಷಣೆ ಕಾಯ್ದೆ 2019 ಹೆಸರಿನಲ್ಲಿ ಶಿಕ್ಷಾರ್ಹ ಕಾಯ್ದೆಯನ್ನು ಅನುಷ್ಟಾನಗೊಳಿಸಲಾಯಿತು. ಈ ನಿಯಮ ಉಲ್ಲಂಘಿಸಿದರೆ ಕನಿಷ್ಠ 3 ವರ್ಷ ಜೈಲು ಶಿಕ್ಷಗೆ ವ್ಯಕ್ತಿ ಗುರಿಯಾಗಬಹುದು ಜೊತೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೇ ತ್ರಿವಳಿ ತಲಾಖ್‌ ಪಡೆದ ಸಂತ್ರಸ್ತೆಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ, ಜೊತೆಗೆ ಮಕ್ಕಳನ್ನು ತನ್ನ ಸುಪರ್ದಿಗೆ ಪಡೆಯುವ ಅವಕಾಶವೂ ಮಹಿಳೆಗೆ ಇರುತ್ತದೆ ಎಂಬುದು ಗಮನಾರ್ಹ.

    ಹೆದ್ದಾರಿಗಳ ಸಂಖ್ಯೆಯಲ್ಲಿ ಹೆಚ್ಚಳ:

    ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ ಶೇ.60 ರಷ್ಟು ಹೆಚ್ಚಳವಾಗಿದೆ. 91,287 ಕಿಮೀ ಗಳಿಂದ 1,46,145 ಕಿಮೀಗಳಿಗೆ ಹೆಚ್ಚಿಸಿದ್ದೇವೆ. ದೇಶಾದ್ಯಂತ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ. 1 ಕೋಟಿ ಮನೆಗಳಿಗೆ ಸೌರ ವಿದ್ಯುತ್‌ ಕಲ್ಪಿಸಲಾಗಿದೆ. ಅಲ್ಲದೇ ಕಳೆದ 1 ದಶಕದಲ್ಲಿ ಸೌರಶಕ್ತಿ ಬಳಕೆಯಲ್ಲೂ ಗಣನೀಯ ಏರಿಕೆ ಕಂಡಿದೆ ಎಂಬುದಾಗಿ ಪ್ರಧಾನಿ ಹೇಳಿದ್ದಾರೆ. ದೇಶದಲ್ಲಿ ಸೌರಶಕ್ತಿ ಸಾಮರ್ಥ್ಯವೂ 2014 ರಿಂದ 2024ರ ಅವಧಿಗೆ 2,820 ಮೆಗಾವ್ಯಾಟ್‌ನಿಂದ 72,000 ಮೆಗಾವ್ಯಾಟ್‌ಗೆ ತಲುಪಿದೆ. ಭಾರತ ಕೈಗೊಂಡಿರುವ ಭವಿಷ್ಯದ ಯೋಜನೆಗಳೂ ಸಹ ಹವಾಮಾನ ಸುಧಾರಣೆಯ ವಿಚಾರದಲ್ಲಿ ಭದ್ರತೆ ಹೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೇ 12,349 ಕಿಮೀ ರಾಷ್ಟ್ರೀಯ ಹೆದ್ದಾರಿಯನ್ನು 2023-24ರ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ.

    ಪ್ರಮುಖ ಬೆಳವಣಿಗೆ ಮುಖ್ಯಾಂಶಗಳು:

    • ಹೆಚ್‌ಎಎಲ್‌ 2026ರ ವೇಳೆ 2 ಲಕ್ಷ ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದೆ.
    • ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗ ಸಭೆ ಆಯೋಜನೆ
    • ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ 5ನೇ ಸ್ಥಾನಕ್ಕೆ ಜಿಗಿದಿದೆ.
    • ಸೆನ್ಸೆಕ್ಸ್‌ ಸಾರ್ವಕಾಲಿಕ ದಾಖಲೆ. 2014ರಲ್ಲಿ 25,000 ಸಾವಿರ ದಷ್ಟಿದ್ದ ಷೇರುಪೇಟೆ ಸೂಚ್ಯಂಕ 2024ರಲ್ಲಿ 75000 ಅಂಕಗಳನ್ನು ದಾಟಿದೆ.
    • 3ನೇ ಅತಿದೊಡ್ಡ ಸ್ಟಾರ್ಟ್‌ಅಪ್‌ ಪರಿಸರ ವ್ಯವಸ್ಥೆ ಹೊಂದಿದ ದೇಶವಾಗಿ ಭಾರತ ಗುರುತಿಸಿಕೊಂಡಿದೆ ಎಂಬುದಾಗಿಯೂ ಪ್ರಧಾನಿ ಮೋದಿ ತಿಳಿಸಿದ್ದಾರೆ.

  • ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ – ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಹೈಕಮಾಂಡ್ ಉತ್ಸುಕ

    ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ – ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಹೈಕಮಾಂಡ್ ಉತ್ಸುಕ

    ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯು (Women’s Reservation Bill) ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ಬೆನ್ನಲ್ಲೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.

    7 ಲೋಕಸಭೆ ಕ್ಷೇತ್ರಗಳ ಪೈಕಿ ಮೀನಾಕ್ಷಿ ಲೇಖಿ ಅವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದನ್ನು 2ಕ್ಕೆ ಏರಿಸಲು ಚರ್ಚೆಗಳು ಆರಂಭಗೊಂಡಿವೆ. ಕಳೆದ ವರ್ಷ ನಡೆದ ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿಯು 137 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆಮ್ ಆದ್ಮಿ ಪಕ್ಷ 140 ಮಹಿಳೆಯರಿಗೆ ಟಿಕೆಟ್‌ ನೀಡಿ ಕೌಂಟರ್ ಕೊಟ್ಟಿತ್ತು. ಇದನ್ನೂ ಓದಿ: Ind vs Pak ರೋಚಕ ಸಮರಕ್ಕೆ ಕ್ಷಣಗಣನೆ – ಮೋದಿ ಕ್ರೀಡಾಂಗಣದಲ್ಲಿ ಜನಸಾಗರ, ಭಾರತದ ಗೆಲುವಿಗೆ ಹೋಮ ಹವನ

    ದೆಹಲಿಗೆ ಸಂಬಂಧಿಸಿದಂತೆ ಈಗಾಗಲೇ ಲೋಕಸಭೆ ಚುನಾವಣೆಗೆ ಕೆಲಸ ಆರಂಭವಾಗಿದೆ. ರಾಷ್ಟ್ರ ರಾಜಧಾನಿಯಿಂದ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಪಕ್ಷದ ನಾಯಕತ್ವ ಉತ್ಸುಕವಾಗಿದೆ. ಆದರೆ ಎಲ್ಲವೂ ಗೆಲುವಿನ ಮಾನದಂಡದ ಮೇಲೆ ಅವಲಂಬಿತವಾಗಿದೆ ಎಂದು ಬಿಜೆಪಿ (BJP) ಕಾರ್ಯಕಾರಿ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಹಂತದಲ್ಲಿ ನಾವು ಗಮನಾರ್ಹವಾದ ಅನುಯಾಯಿಗಳನ್ನು ಹೊಂದಿರುವ ದೆಹಲಿಯ ಸಕ್ರೀಯ ಪಕ್ಷದ ಕಾರ್ಯಕರ್ತರನ್ನು ಶಾರ್ಟ್‌ಲಿಸ್ಟ್ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೋಟಿ ಕೋಟಿ ಹಣ ಎಣಿಸುತ್ತಾ ಇರೋ ಅಧಿಕಾರಿಗಳು- ಅಂಬಿಕಾಪತಿ ಮನೆಯ Exclusive ಫೋಟೋ

    ದೆಹಲಿಯಲ್ಲಿ 7 ಲೋಕಸಭೆ ಕ್ಷೇತ್ರಗಳಿದ್ದು, 7 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ನವದೆಹಲಿ ಕ್ಷೇತ್ರವನ್ನು ನಾಕ್ಷಿ ಲೇಖಿ, ಚಾಂದಿನಿ ಚೌಕ್ ಕ್ಷೇತ್ರವನ್ನು ಹರ್ಷವರ್ಧನ್, ಈಶಾನ್ಯ ದೆಹಲಿಯನ್ನು ನಟ-ರಾಜಕಾರಣಿ ಮನೋಜ್ ತಿವಾರಿ, ಪೂರ್ವದಿಂದ ಕ್ರಿಕೆಟಿಗ-ರಾಜಕಾರಣಿ ಗೌತಮ್ ಗಂಭೀರ್, ವಾಯುವ್ಯ ದೆಹಲಿಯಿಂದ ಗಾಯಕ-ರಾಜಕಾರಣಿ ಹನ್ಸ್ ರಾಜ್ ಹನ್ಸ್, ಪಶ್ಚಿಮ ದೆಹಲಿಯಿಂದ ಜಾಟ್ ನಾಯಕ ಪರ್ವೆಸ್ ವರ್ಮಾ ಮತ್ತು ಗುಜ್ಜರ್ ನಾಯಕ ರಮೇಶ್ ಬಿಧುರಿ ದಕ್ಷಿಣ ದೆಹಲಿವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಪ್ರೊ. ಭಗವಾನ್ ಮನೆಗೆ ಮುತ್ತಿಗೆಗೆ ಯತ್ನ

    ಮಹಿಳೆಯರಿಗೆ 2 ಸ್ಥಾನಗಳನ್ನು ಬಿಟ್ಟು ಕೊಡುವುದಾದರೆ ಓರ್ವ ಸಂಸದ ಕ್ಷೇತ್ರ ಬಿಟ್ಟುಕೋಡಬೇಕಾಗುತ್ತಿದೆ. ಕಳೆದ ಕ್ಯಾಬಿನೆಟ್ ಪುನರ್ ರಚನೆಯಲ್ಲಿ ಕೊವೀಡ್ ಸಂದರ್ಭದಲ್ಲಿ ಕೆಲಸ‌ ಮಾಡಿದ್ದ ಆರೋಗ್ಯ ಸಚಿವ ಹರ್ಷವರ್ಧನ ರಾಜೀನಾಮೆ‌ ನೀಡಿದ್ದರು. ಲೋಕಸಭೆಯಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ರಮೇಶ್ ಬಿಧುರಿ ಅವರ ನಿರಂತರ ವಿವಾದಗಳು ಬಿಜೆಪಿಯನ್ನು ಮುಜುಗರಕ್ಕೀಡು ಮಾಡುತ್ತಿವೆ. ಹನ್ಸ್ ರಾಜ್ ಹನ್ಸ್ ಕೂಡ ತಮ್ಮ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ ಎಂಬ ದೂರು ಬಿಜೆಪಿ ನಾಯಕತ್ವದ ಕಿವಿಗೆ ತಲುಪಿದೆ ಎಂದು ವರದಿಯಾಗಿದೆ. ಯಾರ ಕ್ಷೇತ್ರ ಖಾಲಿಯಾಗಲಿದೆ ಎನ್ನುವ ಕುತೂಹಲ ಮೂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳೆಯರ ರಾಜಕೀಯ ಮೀಸಲಾತಿಗೆ ಮುನ್ನುಡಿ ಬರೆದದ್ದು ಕಾಂಗ್ರೆಸ್: ಸಿಎಂ

    ಮಹಿಳೆಯರ ರಾಜಕೀಯ ಮೀಸಲಾತಿಗೆ ಮುನ್ನುಡಿ ಬರೆದದ್ದು ಕಾಂಗ್ರೆಸ್: ಸಿಎಂ

    ಬೆಂಗಳೂರು: ಈಗ ಕೇಂದ್ರ ಸರ್ಕಾರ ಜಾರಿ ಮಾಡಿದ್ದೀವಿ ಎಂದು ಹೇಳಿಕೊಳ್ಳುತ್ತಿರುವ ಮಹಿಳೆಯರ ರಾಜಕೀಯ ಮೀಸಲಾತಿಗೆ (Womens Political Reservation) ಮುನ್ನುಡಿ ಬರೆದದ್ದು ಕಾಂಗ್ರೆಸ್ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸ್ವಚ್ಚ ಸರ್ವೇಕ್ಷಣಾ ಗ್ರಾಮೀಣ ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಇದನ್ನೂ ಓದಿ: ವಿಮಾನದಲ್ಲಿ ಮಗುವಿಗೆ ದಿಢೀರ್ ಉಸಿರಾಟ ಸ್ಥಗಿತ – ಮರುಜೀವ ನೀಡಿದ ವೈದ್ಯ, ಐಎಎಸ್ ಅಧಿಕಾರಿ

    ಮಹಾತ್ಮ ಗಾಂಧಿ ಅವರ ಕನಸಿನ ‘ಅಧಿಕಾರ ವಿಕೇಂದ್ರೀಕರಣ’ ಮತ್ತು ‘ಮಹಿಳಾ ಮೀಸಲಾತಿ’ಗೆ ಮುನ್ನುಡಿ ಬರೆದವರು ದಿ. ರಾಜೀವ್ ಗಾಂಧಿ ಅವರು. ಅಧಿಕಾರ ವಿಕೇಂದ್ರಕರಣದಿಂದ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನಂಬಿದ್ದರು. ಹೀಗಾಗಿ ಗ್ರಾಮ ಸ್ವರಾಜ್ಯವನ್ನು ಪ್ರತಿಪಾದಿಸಿದರು ಎಂದು ಹೇಳಿದರು. ಇದನ್ನೂ ಓದಿ: ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

    ಗ್ರಾಮಗಳ ಅಭಿವೃದ್ಧಿ ಇಲ್ಲದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದು ಗಾಂಧೀಜಿಯವರ ನೀತಿಯಾಗಿತ್ತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮಹಾತ್ಮ ಗಾಂಧಿಯವರ ಆಶಯದಂತೆ ಅಧಿಕಾರ ವಿಕೇಂದ್ರೀಕರಣಕ್ಕೆ ಮುನ್ನುಡಿ ಬರೆದರು. ಜನತಂತ್ರದ ವಿಕೇಂದ್ರೀಕರಣಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದವರು ರಾಜೀವ್ ಗಾಂಧಿಯವರು ಮತ್ತು ಇದನ್ನು ಜಾರಿ ಮಾಡಿದವರು ಮಾಜಿ ಪ್ರಧಾನಿ ನರಸಿಂಹರಾವ್ ಅವರು. ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಗಳಲ್ಲಿ 50% ಮೀಸಲಾತಿ ಜಾರಿಗೆ ಬರಲು ಕಾರಣ ಆದವರು ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಕಗ್ಗತ್ತಲ ಮಳೆಯಲ್ಲಿ ನದಿಯನ್ನು ರಸ್ತೆ ಎಂದು ತೋರಿಸಿದ ಜಿಪಿಎಸ್ – ಕಾರು ಮುಳುಗಿ ಕೇರಳದ ಇಬ್ಬರು ವೈದ್ಯರು ಸಾವು

    ಈಗ ಕೇಂದ್ರ ಸರ್ಕಾರ ಜಾರಿ ಮಾಡಿದ್ದೀವಿ ಎಂದು ಹೇಳಿಕೊಳ್ಳುತ್ತಿರುವ ಮಹಿಳೆಯರ ರಾಜಕೀಯ ಮೀಸಲಾತಿಗೆ ಮುನ್ನುಡಿ ಬರೆದದ್ದು ಕಾಂಗ್ರೆಸ್ ಸರ್ಕಾರ. ಈಗ ಹಿಂದುಳಿದ ವರ್ಗಗಳ ಮಹಿಳೆಯರಿಗೂ ಮೀಸಲಾತಿ ಕಲ್ಪಿಸಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು. ಇದನ್ನೂ ಓದಿ: ಭಯೋತ್ಪಾದಕರಿಗೆ ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್‌ ಹತ್ಯೆ ಖಂಡಿಸಿದ ಮೋದಿ

    ಗ್ರಾಮಗಳ ವ್ಯಾಜ್ಯಗಳು ಗ್ರಾಮಗಳಲ್ಲೇ ಬಗೆಹರಿಯಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮಹಾತ್ಮಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಗ್ರಾಮ ಸ್ವರಾಜ್ಯ ಮತ್ತು ಅಧಿಕಾರ ವಿಕೇಂದ್ರೀಕರಣ ಆಶಯದಂತೆ ಗ್ರಾಮ ನ್ಯಾಯಾಲಯಗಳ ಸ್ಥಾಪನೆಯಾದರೆ ಗ್ರಾಮಸ್ಥರಿಗೆ ಬಹಳ ಅನುಕೂಲ ಆಗುತ್ತದೆ. ಜೊತೆಗೆ ಖಾದಿ-ಗ್ರಾಮೋದ್ಯೋಗ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಗ್ರಾಮೋದ್ಯೋಗ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಸಿಎಂ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳಾ ಮೀಸಲಾತಿ ಹೆಸರಲ್ಲಿ ಲಿಪ್‌ಸ್ಟಿಕ್‌, ಹೇರ್ ಸ್ಟೈಲ್ ಮಾಡಿಕೊಂಡವರು ಮುಂದೆ ಬರ್ತಾರೆ: RJD ನಾಯಕನ ವಿವಾದಿತ ಹೇಳಿಕೆ

    ಮಹಿಳಾ ಮೀಸಲಾತಿ ಹೆಸರಲ್ಲಿ ಲಿಪ್‌ಸ್ಟಿಕ್‌, ಹೇರ್ ಸ್ಟೈಲ್ ಮಾಡಿಕೊಂಡವರು ಮುಂದೆ ಬರ್ತಾರೆ: RJD ನಾಯಕನ ವಿವಾದಿತ ಹೇಳಿಕೆ

    ಪಾಟ್ನಾ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿದ್ದ‌ ಮಹಿಳಾ‌ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದು, ಕೇಂದ್ರ ಸರ್ಕಾರ ಶುಕ್ರವಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಇದಾದ ಒಂದು ದಿನದ ಬಳಿಕ ರಾಷ್ಟ್ರೀಯ ಜನತಾ ದಳದ (RJD) ಹಿರಿಯ ನಾಯಕ ಅಬ್ದುಲ್‌ ಬಾರಿ ಸಿದ್ದಿಕಿ (Abdul Bari Siddiqui) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಬಿಹಾರದ ಮುಜಾಫರ್‌ ನಗರದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ಹೆಸರಿನಲ್ಲಿ ಲಿಪ್‌ಸ್ಟಿಕ್‌ ಮತ್ತು ಬಾಬ್ ಕಟ್ ಹೇರ್ ಸ್ಟೈಲ್ ಮಾಡಿಕೊಂಡ ಮಹಿಳೆಯರು ಮುಂದೆ ಬರುತ್ತಾರೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದ ಚುನಾವಣೆ ಗಾಂಧಿ ಮತ್ತು ಗೋಡ್ಸೆ ಸಿದ್ಧಾಂತಗಳ ನಡುವಿನ ಹೋರಾಟ: ರಾಹುಲ್‌ ಗಾಂಧಿ

    ಲಿಪ್‌ಸ್ಟಿಕ್‌ ಹಾಗೂ ಬಾಬ್‌ ಕಟ್‌ ಹೇರ್‌ಸ್ಟೈಲ್‌ (Bob-Cut Hairstyles) ಮಾಡಿಕೊಂಡ ಮಹಿಳೆಯರು ಈ ಮೀಸಲಾತಿ ಹೆಸರಿನಲ್ಲಿ ಮುಂದೆ ಬರುತ್ತಾರೆ. ಆದ್ದರಿಂದ ಹಿಂದುಳಿದ ಸಮುದಾಯಗಳ ಮಹಿಳೆಯರಿಗೆ ಮಾತ್ರ ಸರ್ಕಾರ ಈ ಮೀಸಲಾತಿಯನ್ನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಸಿದ್ದಿಕಿ ಹೇಳಿಕೆಗೆ ಬೆಂಬಲಿಗರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಮುಗಿಯುವವರೆಗೂ ದೂರದರ್ಶನ ಮತ್ತು ಸೋಶಿಯಲ್‌ ಮೀಡಿಯಾಗಳಿಂದ ದೂರವಿರುವಂತೆ ಅವರು ಸಲಹೆ ನೀಡಿದ್ದಾರೆ. ಆದ್ರೆ ತಮ್ಮ ವಾದವನ್ನು ಸಮರ್ಥಿಸಿಕೊಂಡಿರುವ ಸಿದ್ದಿಕಿ, ಹೊಸ ಕಾನೂನಿನ ಪ್ರಯೋಜನವನ್ನು ನಮ್ಮ ಜನರಿಗೆ ಅರ್ಥಮಾಡಿಸಲು ಗ್ರಾಮೀಣ ಭಾಷೆ ಬಳಸಿದ್ದೇನೆ, ಬೇರೆ ದುರುದ್ದೇಶವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂತ್ರಸ್ತ ಬಾಲಕಿ ದತ್ತು ಪಡೆಯಲು ಮುಂದಾದ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿ

    ಇನ್ನೂ ಸಿದ್ದಿಕಿ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆರ್‌ಜೆಡಿ ನಾಯಕನ ಹೇಳಿಕೆ ಸಣ್ಣ ಮನಸ್ಥಿತಿಯನ್ನು ತೋರಿಸುತ್ತದೆ. ಕಾರಿಗೆ ಎರಡು ಚಕ್ರಗಳಿದ್ದಂತೆ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಸಾರ್ವಜನಿಕ ಹಿತಾಸಕ್ತಿಯ ಕಾನೂನುಗಳನ್ನು ರಚಿಸುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಆದ್ರೆ ಆರ್‌ಜೆಡಿ ನಾಯಕನ ಹೇಳಿಕೆ ಸಣ್ಣತನವನ್ನು ತೋರಿಸಿದೆ ಎಂದು ಕಿಡಿ ಕಾರಿದ್ದಾರೆ.

    ನಾವಿಂದು 21ನೇ ಶತಮಾನದಲ್ಲಿದ್ದೇವೆ. ಮಹಿಳೆಯರಿಗೆ ನೋವುಂಟು ಮಾಡುವ ಹೇಳಿಕೆಗಳನ್ನ ತಪ್ಪಿಸಬೇಕು. ಹಿಂದುಳಿದ ವರ್ಗದ ಮಹಿಳೆಯರೂ ಮುಂದೆ ಬರಬೇಕು. ಅದಕ್ಕಾಗಿ ಮೀಸಲಾತಿ ಮಸೂದೆ ಬಂದಿದೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳೆಯರಿಗೆ ವಂಚನೆ ಮಾಡಿ ಅಂತಲೇ ದೇವರು ಮೋದಿಯನ್ನ ಕಳುಹಿಸಿದ್ದಾ; ಸಿಎಂ ಪ್ರಶ್ನೆ

    ಮಹಿಳೆಯರಿಗೆ ವಂಚನೆ ಮಾಡಿ ಅಂತಲೇ ದೇವರು ಮೋದಿಯನ್ನ ಕಳುಹಿಸಿದ್ದಾ; ಸಿಎಂ ಪ್ರಶ್ನೆ

    ಬೆಂಗಳೂರು: ಮಹಿಳೆಯರಿಗೆ ವಂಚನೆ ಮಾಡಿ ಅಂತಲೇ ದೇವರು ಮೋದಿಯವರನ್ನ ಕಳುಹಿಸಿದ್ದಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ‌ (Siddaramaiah) ಪ್ರಶ್ನಿಸಿದ್ದಾರೆ.

    ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ʻಮಹಿಳಾ ಮೀಸಲಾತಿʼ (Women’s Reservation) ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಈ ಕುರಿತ ಮಾಹಿತಿಯನ್ನು ತಮ್ಮ ಟ್ವಿಟ್ಟರ್‌ (ಎಕ್ಸ್)‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ಮಹಿಳಾ ಮೀಸಲಾತಿಗೆ ಡೀಲಿಮಿಟೇಷನ್, ಜನ ಗಣತಿಯ ಕೊಕ್ಕೆ ಹಾಕಿ ಆಯಸ್ಸು ಫಿಕ್ಸ್ ಮಾಡಿರುವುದು ಬಿಜೆಪಿಯ ಡೋಂಗಿತನ. ಆದ್ದರಿಂದ ಮಹಿಳಾ ಮೀಸಲಾತಿ ಜಾರಿ ಆಗುವುದೇ ಅನುಮಾನ. ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎನ್ನುವ ಪ್ರಾಮಾಣಿಕ ಕಾಳಜಿ ಬಿಜೆಪಿಗೆ ಇದ್ದಿದ್ದರೇ ಇಷ್ಟೊಂದು ಅಡೆತಡೆಗಳನ್ನ ಹಾಕುತ್ತಿರಲಿಲ್ಲ. ಇದನ್ನೂ ಓದಿ: ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಾರಿ ಮಾಡಿರುವ ಮಹಿಳಾ ಮೀಸಲಾತಿಗೆ ಕೇಂದ್ರ ಸರ್ಕಾರ 15 ವರ್ಷ ಆಯಸ್ಸು ಫಿಕ್ಸ್ ಮಾಡಿದೆ. ಕಾಯ್ದೆ ಜಾರಿಯಾದ ದಿನದಿಂದ 15 ವರ್ಷ ಆಯಸ್ಸು ಇದೆ. ಅಂದರೆ ಈಗ ಕಾಯ್ದೆ ಜಾರಿ ಆಗಿದೆ. ಇದಕ್ಕೆ ಇನ್ನು 15 ವರ್ಷ ಮಾತ್ರ ಆಯಸ್ಸು. ಆದರೆ, ಜಾತಿ ಜನಗಣತಿ ಮತ್ತು ಡೀಲಿಮಿಟೇಷನ್ ಎನ್ನುವ ಎರಡು ಕೊಕ್ಕೆ ಹಾಕಿಟ್ಟಿದ್ದಾರೆ. ಇವರೆಡೂ ಮುಗಿಯುವ ವೇಳೆಗೆ 15 ವರ್ಷ ಆಗಿರುತ್ತದೆ. ಹೀಗಾಗಿ ಮಹಿಳಾ ಮೀಸಲಾತಿ ಕಾಯ್ದೆಯಾಗಿ ಜಾರಿ ಆಗುವ ಮೊದಲೇ ಅದರ ಆಯಸ್ಸು ಮುಗಿದು ಹೋಗಿರುತ್ತದೆ. ಇದು ಮಹಿಳೆಯರಿಗೆ ಮಾಡಿರುವ ಪರಮ ವಂಚನೆ.

    ಮಹಿಳಾ ಮೀಸಲಾತಿ ಜಾರಿ ಮಾಡುವುದಕ್ಕೆ ದೇವರೇ ನನ್ನನ್ನು ಕಳುಹಿಸಿದ್ದು ಎಂದು ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಮೊನ್ನೆ ಹೇಳಿದರು. ಈಗ ನೋಡಿದ್ರೆ ಈ ರೀತಿ ಮಹಿಳೆಯರಿಗೆ ವಂಚನೆ ಆಗಿದೆ. ಮಹಿಳೆಯರಿಗೆ ವಂಚನೆ ಮಾಡಿ ಅಂತಲೇ ದೇವರು ಮೋದಿಯವರನ್ನು ಕಳುಹಿಸಿದ್ದು? ಮಹಿಳಾ ಮೀಸಲಾತಿ ಬಿಲ್ ಸಿದ್ಧಪಡಿಸಿದ್ದು ಕಾಂಗ್ರೆಸ್, ಕಾಂಗ್ರೆಸ್ ಯಾವತ್ತೂ ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಇದೆ. ಮಹಿಳಾ ಮೀಸಲಾತಿಯಲ್ಲೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಇರಬೇಕು ಎನ್ನುವುದಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಅದರಲ್ಲೂ 33% ಮಾತ್ರವಲ್ಲ, 50% ರಷ್ಟು ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲ ಇದೆ. ಇದನ್ನೂ ಓದಿ: Asian Games 2023: ಭಾರತಕ್ಕೆ ಮೂರು ಬೆಳ್ಳಿ, ಎರಡು ಕಂಚಿನ ಪದಕ

    ಈಗ ಮೋದಿಯವರು ಜಾರಿ ಮಾಡಿದ್ದೇನೆ ಎನ್ನುತ್ತಿರುವ ಈ ಮಹಿಳಾ ಮೀಸಲಾತಿ 2024ರಲ್ಲೂ ಜಾರಿ ಆಗುವುದಿಲ್ಲ. 2029ರಲ್ಲೂ ಜಾರಿ ಆಗುವುದಿಲ್ಲ, 2034ರಲ್ಲೂ ಜಾರಿ ಆಗುವುದಿಲ್ಲ. ಅಷ್ಟೊತ್ತಿಗೆ ಕಾಯ್ದೆಯ ಆಯಸ್ಸೇ ಮುಗಿದಿರುತ್ತದೆ. ಮಹಿಳೆಯರೂ ಶೂದ್ರರ ರೀತಿ ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಿದ್ದರು. ಮಹಿಳೆಯರ ಹೋರಾಟ ಮತ್ತು ಸಂವಿಧಾನದ ಕಾರಣಕ್ಕೆ ಶಿಕ್ಷಣದಲ್ಲಿ ಅವಕಾಶ ದೊರೆಯಿತು. ಅವಕಾಶ ಸಿಕ್ಕಿದ್ದರಿಂದ ಪುರುಷರಿಗಿಂತ ಶಿಕ್ಷಣದಲ್ಲಿ ಮುಂದಿದ್ದಾರೆ. ಮಹಿಳಾ ಮೀಸಲಾತಿ ಜಾರಿ ಆಗಿಬಿಟ್ಟಿತು ಎಂದು ಸುಳ್ಳು ನಂಬಿಕೊಂಡು ಸುಳ್ಳು ಚಪ್ಪಾಳೆ ಹೊಡೀಬೇಡಿ. ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಾವು, ನೀವೆಲ್ಲಾ ಹೋರಾಟ ಮುಂದುವರೆಸಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.

    ಕಾರ್ಯಕ್ರಮದಲ್ಲಿ ರಾಜಕೀಯ ವಿಶ್ಲೇಷಕ ಪ್ರೊ.ಮುಜಾಫರ್ ಅಸಾದಿ, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಶಾಸಕಿ ನಯನ ಮೋಟಮ್ಮ, ನ್ಯಾಯವಾದಿ ಅಶ್ವಿನಿ ಓಬಳೇಶ್, ಹಿಂದುಳಿದ ವರ್ಗಗಳ ಒಕ್ಕೂಟದ ನಾಯಕ ಕೆ.ಎಂ.ರಾಮಚಂದ್ರಪ್ಪ, ದಲಿತ ಹೋರಾಟಗಾರ ಮಾವಳ್ಳಿ ಶಂಕರ್, ನ್ಯಾಯವಾದಿ ಎನ್.ಅನಂತ ನಾಯಕ್, ಚುಕ್ಕಿ ನಂಜುಂಡಸ್ವಾಮಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳಾ ಮೀಸಲಾತಿ ಅಂಗೀಕಾರ – ಇದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ: ಪ್ರಹ್ಲಾದ್ ಜೋಶಿ

    ಮಹಿಳಾ ಮೀಸಲಾತಿ ಅಂಗೀಕಾರ – ಇದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಮೋದಿ (Narendra Modi) ಅವರ ಉದಾತ್ತ ಚಿಂತನೆಯಲ್ಲಿ ಮೂಡಿ ಬಂದ ಕಲ್ಪನೆ ಮಹಿಳಾ ಮೀಸಲಾತಿ (Women’s Reservation) ಇವತ್ತು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸಂತಸ ವ್ಯಕ್ತಪಡಿಸಿದ್ದಾರೆ.

    ನಾರಿ ಶಕ್ತಿ ವಂದನ್ ಅಧಿನಿಯಮ ಅಂಗೀಕಾರದ ಬಳಿಕ ತಮ್ಮ ದೆಹಲಿ ಕಚೇರಿಯಿಂದ ಹೇಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿರುವ ಅವರು, ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳಾ ಮೀಸಲಾತಿ ಇಲ್ಲ. ಭಾರತದಲ್ಲಿ ಮೋದಿ ಅವರ ನಾಯಕತ್ವದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬಂದಿದೆ. 1980-90ರ ದಶಕದಿಂದ ಮಹಿಳಾ ಮೀಸಲಾತಿ ಕೂಗಿತ್ತು. ಹಲವು ಸರ್ಕಾರಗಳು ಬಂದು ಹೋದವು. ಅಟಲ್ ಬಿಹಾರಿ ವಾಜಪೇಯಿ ಬಹಳ ಪ್ರಯತ್ನ ಪಟ್ಟರು. ಸಂಪೂರ್ಣ ಬಹುಮತ ಇರದ ಕಾರಣ ಅವರ ಪ್ರಯತ್ನ ಆಗಲಿಲ್ಲ. ಮುಂದೆ ಬಂದ ಯುಪಿಎ ಸರ್ಕಾರ ಇದನ್ನು ವೋಟ್ ಬ್ಯಾಂಕ್ ರೀತಿ ನೋಡಿ, ಪ್ರಮಾಣಿಕ ಪ್ರಯತ್ನ ಮಾಡಲಿಲ್ಲ. ಇದನ್ನೂ ಓದಿ: ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಸನ್ಮಾನ- ತಲೆಬಾಗಿ ಕೈಮುಗಿದ ಪ್ರಧಾನಿ

    ಆದರೆ ಮೋದಿ ಅವರ ಧೃಡ ನಿಶ್ಚಯ, ರಾಜಕೀಯ ಇಚ್ಛಾ ಶಕ್ತಿ ಕಾರಣದಿಂದ ಶಾಸನಸಭೆಯಲ್ಲಿ ಮಹಿಳಾ ಮೀಸಲಾತಿ ಅಂಗೀಕಾರ ಆಗಿದೆ. ಅತ್ಯಲ್ಪ ಎಂದರೆ 2 ವೋಟ್ ವಿರೋಧಿಂದ ಅಂಗೀಕಾರ ಆಗಿದೆ. ದೇಶದ ಎಲ್ಲ ಮಹಿಳೆಯರ ಪರವಾಗಿ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಬಂದ್‌ಗೆ ಕರೆ – ಪ್ರತಿಭಟನಾಕಾರರಿಗೆ ಎಚ್ಚರಿಕೆ ಕೊಟ್ಟ ಗೃಹಸಚಿವ ಜಿ.ಪರಮೇಶ್ವರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಪಾಸ್‌ – ಇಬ್ಬರಿಂದ ಮಾತ್ರ ವಿರೋಧ

    ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಪಾಸ್‌ – ಇಬ್ಬರಿಂದ ಮಾತ್ರ ವಿರೋಧ

    ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿದ್ದ ನಾರಿಶಕ್ತಿ ವಂದನ್‌ ಅಧಿನಿಯಮಕ್ಕೆ (Nari Shakti Vandan Adhiniyam) ಲೋಕಸಭೆ (Lok Sabaha) ಅನುಮೋದನೆ ನೀಡಿದೆ. ದಿನವಿಡಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದ ಬಳಿಕ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ (33% women reservation) ನೀಡುವ ಮಸೂದೆ ಪರ 454 ಮಂದಿ ಪರ ಮತದಾನ ಮಾಡಿದರೆ ಇಬ್ಬರು ವಿರೋಧಿಸಿದರು.

    ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಇ-ಇಥೇಹಾದುಲ್ ಮುಸಲ್ಮಿನ್ (AIMIM) ಪಕ್ಷದ ಇಬ್ಬರು ಸಂಸದರು ವಿರೋಧ ವ್ಯಕ್ತಪಡಿಸಿದರು. 454 ಸಂಸದರು ಮಹಿಳಾ ಮೀಸಲಾತಿ ಪರ ಮತ ಚಲಾಯಿಸಿದ ಕಾರಣ ಈ ಐತಿಹಾಸಿಕ ಮಸೂದೆ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಸುಲಭವಾಗಿ ಅನುಮೋದನೆ ಸಿಕ್ಕಿತು.

    ಬೆಳಗ್ಗೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿ (Sonia Gandhi) ಚರ್ಚೆ ಶುರು ಮಾಡಿದರು. ಇದು ರಾಜೀವ್‌ಗಾಂಧಿ ಕನಸು. ಈಗ ನನಸಾಗುತ್ತಿದೆ ಎನ್ನುವ ಮೂಲಕ ಕ್ರೆಡಿಟ್ ತೆಗೆದುಕೊಳ್ಳಲು ನೋಡಿದರು. ಈ ವಿಧೇಯಕದಲ್ಲಿ ಒಬಿಸಿ ಮಹಿಳೆಯರಿಗೂ ಒಳಮೀಸಲಾತಿ ನೀಡಬೇಕು. ಅಲ್ಲದೇ ಈ ಮೀಸಲಾತಿಯನ್ನು ಜಾರಿಗೆ ತರಲು ತಕ್ಷಣ ಜಾತಿಗಣತಿ ನಡೆಸಬೇಕು ಎಂದು ಕೇಂದ್ರವನ್ನು ಸೋನಿಯಾ ಗಾಂಧಿ ಆಗ್ರಹಿಸಿದರು. ಇದನ್ನೂ ಓದಿ: ಸಂವಿಧಾನ ಪೀಠಿಕೆಯಲ್ಲಿ ಸಮಾಜವಾದಿ, ಜಾತ್ಯಾತೀತ ಪದಗಳೇ ಮಾಯ – ಕೇಂದ್ರ ಹಂಚಿದ ಪ್ರತಿಗಳು ಸೃಷ್ಟಿಸಿವೆ ಸಂಚಲನ

    ಇದು ರಾಜೀವ್ ಕನಸು ಎಂಬ ಸೋನಿಯಾ ಮಾತಿಗೆ ಅಮಿತ್ ಶಾ ಸೇರಿ ಬಿಜೆಪಿಗರು ಆಕ್ಷೇಪಿಸಿದರು. ಒಬಿಸಿ ಕೋಟಾಗೆ ರಾಹುಲ್ ಗಾಂಧಿ ಕೂಡ ಪಟ್ಟು ಹಿಡಿದರು. ಮಸೂದೆಗೆ ನಮ್ಮ ಬೆಂಬಲವಿದೆ. ಆದರೆ ಓಬಿಸಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸದಿದ್ದರೆ ಈ ಬಿಲ್ ಅಪೂರ್ಣ ಎಂದು ವ್ಯಾಖ್ಯಾನಿಸಿದರು. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳಲ್ಲಿ ಮೂವರು ಮಾತ್ರ ಒಬಿಸಿಗಳಿದ್ದಾರೆ ಎಂಬುದನ್ನು ರಾಹುಲ್ ನೆನಪಿಸಿದ್ರು.

    ಮಹಿಳಾ ಮೀಸಲಾತಿ ಜಾರಿಯನ್ನು ಡಿಲಿಮಿಟೇಷನ್ ಜೊತೆ ಏಕೆ ತಳಕು ಹಾಕ್ತಿದ್ದೀರಿ ಎಂದು ಡಿಎಂಕೆಯ ಕನಿಮೋಳಿ ಪ್ರಶ್ನಿಸಿದ್ರು. ಈ ವಿಧೇಯಕವನ್ನು ಜೆಡಿಯು ಬೆಂಬಲಿಸುತ್ತಲೇ, ಇದು ಸಾರ್ವತ್ರಿಕ ಚುನಾವಣೆ ಸಲುವಾಗಿ ಕೇಂದ್ರ ಮಾಡ್ತಿರುವ ಗಿಮಿಕ್ ಎಂದು ಟೀಕಿಸಿತು.

    ಮಹಿಳಾ ಮೀಸಲಾತಿಯಲ್ಲಿ ಒಬಿಸಿಗಳಿಗೆ ಕೋಟಾ ಇರಬೇಕು ಎಂದು ಎನ್‌ಸಿಪಿಯ ಸುಪ್ರಿಯಾ ಸುಳೆ ಒತ್ತಾಯಿಸಿದರು. ರಾಜ್ಯಸಭೆಗೂ ಈ ಮೀಸಲಾತಿ ಅನ್ವಯಿಸಬೇಕು ಎಂಬ ಬೇಡಿಕೆಯನ್ನು ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಇಟ್ಟರು.

    2024ರ ಚುನಾವಣೆಯಲ್ಲೇ ಮೀಸಲಾತಿ ಜಾರಿ ಮಾಡಿ ಮೋದಿ ತಾಕತ್ ತೋರಿಸಬೇಕು ಎಂದು ಟಿಎಂಸಿ ಮಹುವಾ ಮೋಯಿತ್ರಾ ಸವಾಲ್ ಹಾಕಿದರು. ಅಕಾಲಿದಳ ಇದನ್ನು ಜುಮ್ಲಾ ಎಂದು ಕರೆಯಿತು. ಇದು ಮುಸ್ಲಿಮ್ ಮಹಿಳಾ ವಿರೋಧಿ ಬಿಲ್ ಎಂದು ಓವೈಸಿ ವ್ಯಾಖ್ಯಾನಿಸಿದರು.

    2029ಕ್ಕೆ ಮಹಿಳಾ ಮೀಸಲಾತಿ ಜಾರಿ ಆಗುತ್ತೆ ಅನ್ನೋದಾದ್ರೆ, ಇದಕ್ಕೆ ಇಷ್ಟು ತರಾತುರಿಯಲ್ಲಿ ವಿಶೇಷ ಅಧಿವೇಶನ ಏಕೆ ಕರೆಯಬೇಕಿತ್ತು ಎಂದು ಕೇಂದ್ರವನ್ನು ಆರ್‌ಎಸ್‌ಪಿಯ ಪ್ರೇಮಚಂದ್ರನ್ ತರಾಟೆಗೆ ತಗೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳಾ ಮೀಸಲಾತಿ ಶ್ರೇಯಸ್ಸು ಮೋದಿಗೆ ಸಲ್ಲಬೇಕು: ಕಂಗನಾ

    ಮಹಿಳಾ ಮೀಸಲಾತಿ ಶ್ರೇಯಸ್ಸು ಮೋದಿಗೆ ಸಲ್ಲಬೇಕು: ಕಂಗನಾ

    ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ (Women Reservation Bill) ಜಾರಿಗೆ ತಂದಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ನಡೆಗೆ ಕಂಗನಾ, ಇಶಾ ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನೂತನ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಬಾಲಿವುಡ್ ನಟಿಯರಾದ ಕಂಗನಾ (Kangana Ranaut), ಇಶಾ ಗುಪ್ತಾ (Esha Gupta) ಭಾಗವಹಿಸಿದ್ದರು.  ಈ ವೇಳೆ ಕಂಗ‌ನಾ ಮಾತನಾಡಿ, ಇಂದು ರಾಷ್ಟ್ರದ ಮಹಿಳೆಯರಿಗೆ ಐತಿಹಾಸಿಕ ದಿನವಾಗಿದೆ. ಹೊಸ ಸಂಸತ್ತಿನ ಮೊದಲ ಅಧಿವೇಶನವಾಗಿದ್ದು, ಇಡೀ ಅಧಿವೇಶನವು ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಉನ್ನತಿಗೆ ಮೀಸಲಾಗಿದೆ. ಇದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದಿದ್ದಾರೆ.

    ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಸೇನೆ ಮತ್ತು ವಾಯುಪಡೆಯಲ್ಲಿ ಮಹಿಳೆಯರು ಸೇವೆ ಸಲ್ಲಿಸುತ್ತಿರುವುದನ್ನು ನಾವು ನೋಡುತ್ತೇವೆ. ಮಹಿಳೆಯರ ಪರವಾಗಿ ಮೀಸಲಾತಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ನರೇಂದ್ರ ಮೋದಿ ಅವರ ನಡೆಯನ್ನು ಕಂಗನಾ ಶ್ಲಾಘಿಸಿದ್ದಾರೆ. ಇದನ್ನೂ ಓದಿ: The Vaccine War ಸಿನಿಮಾ ನೋಡಿ ಹೊಗಳಿದ ಸುಧಾ ಮೂರ್ತಿ

    ಇಶಾ ಗುಪ್ತಾ ಕೂಡ ಪ್ರತಿಕ್ರಿಯಿಸಿ, ಪಿಎಂ ಮೋದಿ ಅವರು ಮಾಡಿದ ಈ ಕೆಲಸ ಅದ್ಭುತ. ಇದು ಅತ್ಯಂತ ಪ್ರಗತಿಪರ ಕಲ್ಪನೆ. ಈ ಮೀಸಲಾತಿ ಮಸೂದೆಯು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿರುವುದು ನಮ್ಮ ದೇಶಕ್ಕೆ ಒಂದು ದೊಡ್ಡ ಹೆಜ್ಜೆ. ಪ್ರಧಾನಿ ಮೋದಿ ಅವರು ಈ ಬಗ್ಗೆ ಭರವಸೆ ನೀಡಿದರು ಮತ್ತು ಅದನ್ನು ಈಗ ಈಡೇರಿಸಿದ್ದಾರೆ ಎಂದು ನಟಿ ಮೆಚ್ಚುಗೆ ಸೂಚಿಸಿದ್ದಾರೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Women’s Reservation Bill: ಹಾಲಿ ಮಹಿಳಾ ಸದಸ್ಯರ ಸಂಖ್ಯೆ 82, ಜಾರಿಯಾದ್ರೆ 181ಕ್ಕೆ ಏರಿಕೆ – ಜಾರಿ ಯಾವಾಗ?

    Women’s Reservation Bill: ಹಾಲಿ ಮಹಿಳಾ ಸದಸ್ಯರ ಸಂಖ್ಯೆ 82, ಜಾರಿಯಾದ್ರೆ 181ಕ್ಕೆ ಏರಿಕೆ – ಜಾರಿ ಯಾವಾಗ?

    ನವದೆಹಲಿ: ಲೋಕಸಭೆಯ ವಿಶೇಷ ಅಧಿವೇಶನದ (Lok Sabha Special Session) ಮೊದಲ ದಿನವೇ ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ಮಂಡನೆಯಾಗಿದೆ.

    ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ (Arjun Ram Meghwal) ಅವರು ಮಸೂದೆಯನ್ನು ಮಂಡಿಸಿದರು. ಈ ವೇಳೆ ಮಾತನಾಡಿದ ಅವರು ಸದ್ಯ 82 ಮಹಿಳಾ ಸದಸ್ಯರು ಲೋಕಸಭೆಯಲ್ಲಿ ಇದ್ದು ಮಸೂದೆ ಕಾನೂನಾಗಿ ಜಾರಿಯಾದರೆ 181ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದರು.

    ಮಸೂದೆಯಲ್ಲಿ ಏನಿದೆ?
    ಮಸೂದೆಯು ಲೋಕಸಭೆ ಮತ್ತು ರಾಜ್ಯದ ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಕಲ್ಪಿಸುತ್ತದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ಮೀಸಲಾತಿ ಅನ್ವಯವಾಗುವುದಿಲ್ಲ.

    ಮೊದಲ ಜನಗಣತಿಗೆ ಸಂಬಂಧಿಸಿದ ಅಂಕಿ ಅಂಶ ಪ್ರಕಟವಾದ ನಂತರ ಕ್ಷೇತ್ರಗಳ ಮರು ವಿಂಗಡನೆಯಾದ (Delimitation) ಬಳಿಕ ಜಾರಿಗೆ ಬರಲಿದೆ.  ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ನಮ್ಮದು: ಸೋನಿಯಾ ಗಾಂಧಿ

    ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಮೀಸಲಾದ ಮೂರನೇ ಒಂದು ಭಾಗದಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುತ್ತವೆ. ಮಸೂದೆಯು ಒಬಿಸಿಗಳಿಗೆ (ಇತರ ಹಿಂದುಳಿದ ವರ್ಗ) ಮೀಸಲಾತಿಯನ್ನು ಒಳಗೊಂಡಿಲ್ಲ.

    ಜಾರಿ ಯಾವಾಗ?
    ಮುಂದಿನ ಜನಗಣತಿಯ (Census) ನಂತರವೇ ಕ್ಷೇತ್ರಗಳ ಮರು ವಿಂಗಡನೆಯಾಗಲಿದೆ. 2021ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್‌ ಕಾರಣದಿಂದ ವಿಳಂಬವಾಗಿದ್ದು, 2027ರಲ್ಲಿ ನಡೆಯುವ ಸಾಧ್ಯತೆಯಿದೆ. ಹೀಗಾಗಿ 2029ರ ನಂತರ ಮೀಸಲಾತಿ ಜಾರಿಯಾಗುವ ಸಾಧ್ಯತೆಯಿದೆ.

    ಮಸೂದೆಯು ಕಾಯ್ದೆಯಾದ ನಂತರ 15 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ಆದರೆ ಇದರ ಅವಧಿಯನ್ನು ವಿಸ್ತರಿಸಲು ಅವಕಾಶವಿದೆ.

    ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಯಂತಹ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ನು ದಶಕಗಳಿಂದ ವಿರೋಧಿಸುತ್ತಿದ್ದವು. ಸುಮಾರು 27 ವರ್ಷಗಳಿಂದ ಈ ಮಸೂದೆ ಬಾಕಿ ಉಳಿದಿತ್ತು. 2010 ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರವಾದರೂ ಲೋಕಸಭೆಯಲ್ಲಿ ಈ ಮಸೂದೆಗೆ ಬೆಂಬಲ ಸಿಕ್ಕಿರಲಿಲ್ಲ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]