Tag: ಮಹಿಳಾ ಪೈಲಟ್

  • US ಏವಿಯೇಷನ್ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ಭಾರತದ ಮೊದಲ ಮಹಿಳಾ ಪೈಲಟ್

    US ಏವಿಯೇಷನ್ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ಭಾರತದ ಮೊದಲ ಮಹಿಳಾ ಪೈಲಟ್

    ವಾಷಿಂಗ್ಟನ್/ನವದೆಹಲಿ: ಉತ್ತರಧ್ರುವದಲ್ಲಿ ವಿಮಾನ ಹಾರಿಸಿ ವಿಶೇಷ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಪೈಲಟ್ ಅಮೆರಿಕದ ಏವಿಯೇಷನ್ ವಸ್ತು ಸಂಗ್ರಹಾಲಯದಲ್ಲಿ ಸ್ಥಾನ ಪಡೆದು ದಾಖಲೆ ನಿರ್ಮಿಸಿದ್ದಾರೆ.

    ಏರ್ ಇಂಡಿಯಾದ ಹಿರಿಯ ಪೈಲಟ್ (ಬೋಯಿಂಗ್-777 ವಿಮಾನ) ಕ್ಯಾಪ್ಟನ್ ಜೋಯಾ ಅಗರ್ವಾಲ್ ಅವರು, ಉತ್ತರ ಧ್ರುವ (ಉತ್ತರ ಗೋಳಾರ್ಧದಲ್ಲಿ ಭೂಮಿಯ ತಿರುಗುವಿಕೆಯ ಅಕ್ಷವು ಅದರ ಮೇಲ್ಮೈಯನ್ನು ಸಂಧಿಸುವ ಬಿಂದು)ದ ಮೇಲೆ ವಿಮಾನ ಹಾರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. 16,000 ಕಿಮೀ ಕ್ರಮಿಸಿ ದಾಖಲೆ ನಿರ್ಮಿಸಿದ್ದು, SFO ಏವಿಯೇಷನ್ ಮ್ಯೂಸಿಯಂನಲ್ಲಿ ಸ್ಥಾನ ಗಳಿಸಿದ್ದಾರೆ. ಇದನ್ನೂ ಓದಿ: 11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ

    ಜೋಯಾ ಅಗರ್ವಾಲ್ ನೇತೃತ್ವದ ಏರ್ ಇಂಡಿಯಾದ ಮಹಿಳಾ ಪೈಲಟ್ ತಂಡವು 2021 ರಲ್ಲಿ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿರುವ ಸ್ಯಾನ್ ಫ್ರಾನ್ಸಿಸ್ (SFO) ನಿಂದ ಭಾರತದ ಬೆಂಗಳೂರು ನಗರಕ್ಕೆ ವಿಶ್ವದ ಅತಿ ಉದ್ದದ ವಿಮಾನ ಮಾರ್ಗವನ್ನು ಕ್ರಮಿಸಿತ್ತು. ಏರ್‌ಇಂಡಿಯಾ ಮಹಿಳೆಯರ ಈ ಸಾಧನೆಯಿಂದ ಪ್ರಭಾವಿತವಾದ ಯುಎಸ್ ಮೂಲದ ಏವಿಯೇಷನ್ ತನ್ನ ಮ್ಯೂಸಿಯಂನಲ್ಲಿ ಸ್ಥಾನ ನೀಡಿದೆ. ಇದನ್ನೂ ಓದಿ: ಫಿನ್‌ಲ್ಯಾಂಡ್ ಪ್ರಧಾನಿಯ ಖಾಸಗಿ ವೀಡಿಯೋ ಲೀಕ್ – ಮುಚ್ಚಿಡಲು ಏನೂ ಇಲ್ಲವೆಂದ ಮರಿನ್

    ಈ ಸಂತಸವನ್ನು ಹಂಚಿಕೊಂಡಿರುವ ಕ್ಯಾಪ್ಟನ್ ಜೋಯಾ ಅಗರ್ವಾಲ್, ಯುಎಸ್‌ನ ಮ್ಯೂಸಿಯಂನಲ್ಲಿ ನಾನೊಬ್ಬಳೇ ಅಲ್ಲಿರುವ ಏಕೈಕ ಜೀವಂತ ವಸ್ತು. ಅದನ್ನು ಕಂಡು ನನಗೆ ಆಶ್ಚರ್ಯವಾಯಿತು. ಸದ್ಯ ಯುಸ್‌ನ ಪ್ರತಿಷ್ಟಿತ ವಾಯುಯಾನ ಮ್ಯೂಸಿಯಂನ ಭಾಗವಾಗಿದ್ದೇನೆ. ನಾನು ಅದಕ್ಕೆ ಪ್ರಾಮಾಣಿಕಳಾಗಿರುತ್ತೇನೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾನಲ್ಲಿ ಹಾರುವ ಕನಸು ಈಡೇರಿಸಿಕೊಂಡ ಛಲಗಾತಿ

    ಬಾನಲ್ಲಿ ಹಾರುವ ಕನಸು ಈಡೇರಿಸಿಕೊಂಡ ಛಲಗಾತಿ

    – ಕರ್ನಾಟಕದ ಎರಡನೇ ಮಹಿಳಾ ಪೈಲಟ್
    – ಮಗಳ ಕನಸಿಗಾಗಿ ಜಮೀನು, ಹಣ, ಮನೆ ಅಡಮಾನ

    ಚಾಮರಾಜನಗರ: ಕೊಡಗು ಜಿಲ್ಲೆ ವಿರಾಜಪೇಟೆಯ ಯುವತಿಯೊಬ್ಬಳು ತನ್ನ ಕಠಿಣ ಪರಿಶ್ರಮದ ಫಲವಾಗಿ ರಾಜ್ಯದ ಎರಡನೇ ಮಹಿಳಾ ಪೈಲಟ್ ಆಗಿ, ಫಿಲಿಪೈನ್ಸ್ ದೇಶದ ಮೊದಲ ಮಹಿಳಾ ಪೈಲಟ್ ಆಗಿದ್ದಾರೆ. ಅಲ್ಲದೇ ಕಳೆದ 12 ವರ್ಷಗಳಿಂದ ಯಶಸ್ವಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಮುನ್ನಡೆಸುತ್ತಿದ್ದಾರೆ.

    ಪೊನ್ನಮ್ಮ ಉತ್ತಯ್ಯ ಚಿಂದಮಾಡ ತನ್ನ ಕನಸಿನಂತೆ ಪೈಲಟ್ ಆಗಿದ್ದಾರೆ. ಪೊನ್ನಮ್ಮ 6ನೇ ವಯಸ್ಸಿನಲ್ಲಿಯೇ ತಾನು ಕೂಡ ಪೈಲಟ್ ಆಗಬೇಕು ಎಂದು ಕನಸು ಕಂಡಿದ್ದರು. ನಂತರ ಪೊನ್ನಮ್ಮ ಬೆಂಗಳೂರಿನ ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಎಸ್‍ಸಿ ಪದವಿ ಓದುತ್ತಿದ್ದರು. ಬಳಿಕ ಎರಡು ವರ್ಷಗಳ ಕಾಲ ಪೈಲಟ್ ತರಬೇತಿ ಪಡೆದುಕೊಂಡಿದ್ದರು. ಇತ್ತ ಪೊನ್ನಮ್ಮರ ತಂದೆ ಮಗಳ ಕನಸು ನನಸು ಮಾಡಲು ಕಷ್ಟಪಟ್ಟು ಖರೀದಿಸಿದ್ದ ಮನೆಯನ್ನೇ ಬ್ಯಾಂಕಿಗೆ ಅಡಮಾನ ಇಟ್ಟಿದ್ದರು.

    ಆದರೆ ಮಹಿಳಾ ಪೈಲಟ್‍ಗೆ ಭಾರತದಲ್ಲಿ ಹೆಚ್ಚಿನ ಅವಕಾಶ ಇಲ್ಲದೇ ಇದ್ದುದ್ದರಿಂದ ಪೊನ್ನಮ್ಮ ವಿದೇಶಗಳಲ್ಲಿ ಮಹಿಳಾ ಪೈಲಟ್ ಆಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಿದ್ದರು. ಪೊನ್ನಮ್ಮರ ಸತತ ಪ್ರಯತ್ನದ ಫಲವಾಗಿ ಫಿಲಿಪೈನ್ಸ್ ದೇಶದಲ್ಲಿ ಪೈಲಟ್ ಹುದ್ದೆ ಸಿಕ್ಕಿತ್ತು. ಇದರೊಂದಿಗೆ ಪೊನ್ನಮ್ಮ ಕರ್ನಾಟಕದ ಎರಡನೇ ಮಹಿಳಾ ಪೈಲಟ್ ಎಂಬ ಖ್ಯಾತಿ ಗಳಿಸಿದ್ದಾರೆ. ಫಿಲಿಪೈನ್ಸ್ ದೇಶದಲ್ಲಿ ಪ್ರಥಮ ಭಾರತೀಯ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪೊನ್ನಮ್ಮ ಕಳೆದ 12 ವರ್ಷಗಳಿಂದ ಅಂತರಾಷ್ಟ್ರೀಯ ಮಹಿಳಾ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಮಧ್ಯಮ ವರ್ಗದವರ ಪಾಲಿಗೆ ಪೈಲಟ್ ಎಂಬುದು ಗಗನ ಕುಸುಮವೇ ಆಗಿತ್ತು. ಅದರಲ್ಲೂ ಮಹಿಳಾ ಪೈಲಟ್ ಎಂದರೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಮಗಳು ಚಿಕ್ಕ ವಯಸ್ಸಿನಿಂದಲೇ ಪೈಲಟ್ ಆಗಬೇಕು ಎಂದುಕೊಂಡಿದ್ದಳು. ಆಕೆಯ ಕನಸು ನನಸು ಮಾಡುವ ಸಲುವಾಗಿ ಊರಿನಲ್ಲಿದ್ದ ಜಮೀನು, ಪಿಂಚಣಿ ಹಣ ಮತ್ತು ವಾಸವಿರಲು ಇದ್ದ ಪ್ಲಾಟ್ ಕೂಡ ಕಳೆದುಕೊಂಡೆ. ಕಳೆದುಕೊಂಡಿದ್ದನ್ನ ಇವತ್ತು ಪಡೆದುಕೊಂಡಿದ್ದೇನೆ. ಎಲ್ಲದ್ದಕ್ಕಿಂತ ಹೆಣ್ಣು ಮಗಳು ಪೈಲಟ್ ಆಗಬಹುದು ಎಂಬುದನ್ನ ಸಾಧಿಸಿ ತೋರಿಸಿದ ಖುಷಿ ನಮಗೆ ಇದೆ ಎಂದು ತಂದೆ ಉತ್ತಯ್ಯ ಹೆಮ್ಮೆಯಿಂದ ಹೇಳಿದ್ದಾರೆ.

    ಪೊನ್ನಮ್ಮ ಹಾಗೂ ಅವರ ತಂದೆ ಉತ್ತಯ್ಯ ಇದೀಗ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿ ಜಮೀನು ಖರೀದಿಸಿ ಮನೆ ಕಟ್ಟಿ ವಾಸಿಸುತ್ತಿದ್ದಾರೆ.

  • ಸ್ಯಾಟಲೈಟ್ ಫೋನ್ ಹೊಂದಿದ್ದ ಮಹಿಳಾ ಪೈಲಟ್ ವಶ

    ಸ್ಯಾಟಲೈಟ್ ಫೋನ್ ಹೊಂದಿದ್ದ ಮಹಿಳಾ ಪೈಲಟ್ ವಶ

    ಬೆಂಗಳೂರು: ಸ್ಯಾಟಲೈಟ್ ಫೋನ್ ಹೊಂದಿದ್ದ ಅಮೆರಿಕಾ ಮೂಲದ ಮಹಿಳಾ ಪೈಲಟನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

    ಅಮೆರಿಕಾ ಮೂಲದ ಬೆಂಟರ್ ಚಾರಿಟಿ ನೊಯಲ್ ವಶಕ್ಕೆ ಪಡೆದ ಮಹಿಳಾ ಪೈಲಟ್. ಅಂದಹಾಗೆ ವಿಶೇಷ ವಿಮಾನದ ಚಾಲಕಿಯಾಗಿರುವ ಬೆಂಡರ್ ಚಾರಿಟಿ ನೊಯಲ್ ಬಳಿ ತಪಾಸಣೆ ವೇಳೆ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ. ಹೀಗಾಗಿ ಅನುಮಾನಗೊಂಡ ಸಿಐಎಸ್‍ಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಕೆಯನ್ನ ಕೆಐಎಎಲ್ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಕೆಐಎಎಲ್‍ನ ಸಿಪಿಐ ಪ್ರಶಾಂತ್, ಮಹಿಳಾ ವಿಮಾನ ಚಾಲಕಿಯನ್ನ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

    ಭಾರತ ದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ನಿಷಿದ್ಧ ಹಾಗೂ ಕಾನೂನುಬಾಹಿರ, ಕೇವಲ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಂಸ್ಥೆಯ ಸ್ಯಾಟಲೈಟ್ ಫೋನ್ ಮಾತ್ರ ಸರ್ಕಾರಿ ಸದುದ್ದೇಶದ ಕಾರ್ಯಗಳಿಗೆ ಬಳಕೆ ಮಾಡಬಹುದಾಗಿದೆ ಎನ್ನಲಾಗಿದೆ. ಆದರೆ ಈ ಮಹಿಳಾ ಪೈಲಟ್ ಇರುಡಿಯಮ್ ಅನ್ನೋ ಸ್ಯಾಟಲೈಟ್ ಫೋನ್ ಹೊಂದಿದ್ದಾಳೆ. ಹೀಗಾಗಿ ಅಮೆರಿಕಾದಲ್ಲಿ ಈ ಸ್ಯಾಟಲೈಟ್ ಫೋನ್ ಬಳಕೆಗೆ ಅವಕಾಶ ಇದೆಯಾ ಅಥವಾ ಕಾನೂನುಬಾಹಿರವಾಗಿ ಈಕೆ ಸ್ಯಾಟಲೈಟ್ ಫೋನ್ ಹೊಂದಿದ್ದಾಳಾ ಎಂಬುದನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಕರ್ತವ್ಯಕ್ಕೆ ಹಾಜರಾದ ಭಾರತದ ಮೊದಲ ಮಹಿಳಾ ಸೇನಾ ಪೈಲಟ್

    ಕರ್ತವ್ಯಕ್ಕೆ ಹಾಜರಾದ ಭಾರತದ ಮೊದಲ ಮಹಿಳಾ ಸೇನಾ ಪೈಲಟ್

    ನವದೆಹಲಿ: ಭಾರತೀಯ ನೌಕಪಡೆಯ ಮೊದಲ ಪೈಲಟ್ ಆಗಿ ಸಬ್ ಲೆಫ್ಟಿನೆಂಟ್ ಶಿವಾಂಗಿ ಇಂದು ಕರ್ತವ್ಯಕ್ಕ ಹಾಜರಾಗಿದ್ದಾರೆ.

    ಶಿವಾಂಗಿ ಅವರನ್ನು ಆರಂಭಿಕ ತರಬೇತಿ ನಂತರ ಭಾರತೀಯ ನೌಕಪಡೆಗೆ ಸಬ್ ಲೆಫ್ಟಿನೆಂಟ್ ಆಗಿ ನಿಯೋಜಿಸಲಾಗಿತ್ತು. ಈಗ ಅವರನ್ನು ಭಾರತದ ಮೊದಲ ಮಹಿಳಾ ಪೈಲಟ್ ಆಗಿ ನೇಮಕ ಮಾಡಿದ್ದು, ಅವರು ಕೊಚ್ಚಿ ನೌಕ ನೆಲೆಯಲ್ಲಿ ಇಂದಿನಿಂದ ತಮ್ಮ ಕರ್ತವ್ಯವನ್ನು ಆರಂಭಿಸಿದ್ದಾರೆ.

    ಬಿಹಾರದ ಮುಝಾಫರ್ ನಗರದಲ್ಲಿ ಜನಿಸಿದ ಶಿವಾಂಗಿ 2018 ರಲ್ಲಿ ಪ್ರಾಥಮಿಕ ತರಬೇತಿ ಮುಗಿಸಿ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಭಾರತದ ಮೊದಲ ಮಹಿಳಾ ಪೈಲಟ್ ಆಗಿರುವ ಶಿವಾಂಗಿ ಮಾತನಾಡಿ, ನನ್ನ ಈ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ. ಇದು ನನಗೂ ಮತ್ತು ನನ್ನ ತಂದೆ ತಾಯಿಗೂ ಖುಷಿ ತಂದಿದೆ. ನಾನು ತುಂಬಾ ದಿನಗಳಿಂದ ಈ ಕ್ಷಣಕ್ಕಾಗಿ ಕಾದಿದ್ದೆ. ಅದು ಇಂದು ಬಂದಿದೆ, ನನಗೆ ಈ ಸಂತೋಷವನ್ನು ವ್ಯಕ್ತಪಡಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

    ಈ ಮೊದಲಿನಿಂದಲೂ ಮಹಿಳೆಯರು ಭಾರತೀಯ ನೌಕಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಯಾರು ಪೈಲಟ್ ಆಗಿರಲಿಲ್ಲ. ಹಾಗಾಗಿ ಮೊದಲ ಬಾರಿಗೆ ಮಹಿಳಾ ಪೈಲಟ್ ಅಗಿರುವುದು ಒಂದು ವಿಭಿನ್ನ ಅನುಭವ. ಇದು ಮುಂದೆ ಭಾರತೀಯ ನೌಕಪಡೆಗೆ ಸೇರಬಯಸುವ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಮಾಡಿಕೊಡಲಿದೆ. ಮುಂದಿನ ದಿನದಲ್ಲಿ ಮಹಿಳೆಯರು ಚಾಪರ್ಸ್ ಮತ್ತು ಫೈಟರ್ಸ್ ಯುದ್ಧ ವಿಮಾನಗಳನ್ನು ಬಳಸಲಿದ್ದಾರೆ ಎಂದು ಶಿವಾಂಗಿ ಹೇಳಿದ್ದಾರೆ.

    ಶಿವಾಂಗಿ ಅವರಿಗಿಂತ ಮುಂಚಿತವಾಗಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಎಸ್ ಧಮಿ ಆಗಸ್ಟ್ ನಲ್ಲಿ ಫ್ಲೈಯಿಂಗ್ ಯುನಿಟ್ ನ ಫ್ಲೈಟ್ ಕಮಾಂಡರ್ ಆದ ದೇಶದ ಮೊದಲ ಮಹಿಳಾ ಅಧಿಕಾರಿ ಎನಿಸಿಕೊಂಡಿದ್ದರು.