Tag: ಮಹಿಳಾ ಪೇದೆ ಸಾಧನೆ

  • ಅಮೆರಿಕದಲ್ಲಿ ಬಾಗಲಕೋಟೆಯ ಮಹಿಳಾ ಪೇದೆ ಸಾಧನೆ

    ಅಮೆರಿಕದಲ್ಲಿ ಬಾಗಲಕೋಟೆಯ ಮಹಿಳಾ ಪೇದೆ ಸಾಧನೆ

    ಬಾಗಲಕೋಟೆ: ಅಮೆರಿಕದಲ್ಲಿ ಮಹಿಳಾ ಪೊಲೀಸ್ ಪೇದೆ ಮಂಜುಶ್ರೀ ಅಯ್ಯ ಲಾಂಗ್ ಜಂಪ್‍ನಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.

    ಬುಧವಾರ ಲಾಸ್ ಎಂಜಲೀಸ್‍ನಲ್ಲಿ ನಡೆಯುತ್ತಿರುವ ಪೊಲೀಸ್ ವರ್ಲ್ಡ್ ಅಥ್ಲೆಟಿಕ್ಸ್ ಕ್ರೀಡಾಕೂಟ’ದ ಲಾಂಗ್‍ಜಂಪ್ ಸ್ಪಧೆಯಲ್ಲಿ ಅಮೆರಿಕದ ಸ್ಪರ್ಧಿಯನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸುವ ಮೂಲಕ ವಿದೇಶಿ ನೆಲದಲ್ಲಿ ಸಾಧನೆ ಮಾಡಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸೋಮನಕೊಪ್ಪ ಗ್ರಾಮ ನಿವಾಸಿ ಮಂಜುಶ್ರೀ, ಕಳೆದ ಮೂರು ವರ್ಷಗಳಿಂದ ನವದೆಹಲಿಯ ಕೇಂದ್ರೀಯ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.