Tag: ಮಹಿಳಾ ಟಿ20 ಲೀಗ್

  • ಕಾಲೆಳೆದ ಅಭಿಮಾನಿಗೆ ಸ್ಮಾರ್ಟ್ ಉತ್ತರ ಕೊಟ್ಟ ಟೀಂ ಇಂಡಿಯಾ ಆಟಗಾರ್ತಿ!

    ಕಾಲೆಳೆದ ಅಭಿಮಾನಿಗೆ ಸ್ಮಾರ್ಟ್ ಉತ್ತರ ಕೊಟ್ಟ ಟೀಂ ಇಂಡಿಯಾ ಆಟಗಾರ್ತಿ!

    ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೆಮಿಮಾ ರಾಡ್ರಿಗಾಸ್ ಅವರು ತಮ್ಮ ಹುಚ್ಚು ಅಭಿಮಾನಿಯೊಬ್ಬನ ಟ್ವೀಟ್‍ಗೆ ಬುದ್ಧಿವಂತಿಕೆಯ ಉತ್ತರ ನೀಡಿ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದ್ದಾರೆ.

    ಜೆಮಿಮಾ ರಾಡ್ರಿಗಾಸ್ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್‍ನಿಂದ ಗುರುತಿಸಿಕೊಂಡವರು. ಈ ಬಾರಿಯ 2019ರ ಮಹಿಳಾ ಟಿ20 ಲೀಗ್‍ನಲ್ಲಿ ತನ್ನ ತಂಡ ಸೂಪರ್‍ನೋವಾಸ್ ಪರ ಉತ್ತಮವಾಗಿ ಅಡಿದ್ದರು ಮತ್ತು ಆ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಗುರುವಾರ ಮಹಿಳಾ ಟಿ20 ಲೀಗ್ ಫೈನಲ್ ಪಂದ್ಯದ ಬಳಿಕ ಅಭಿಮಾನಿ ವರುಣ್, “ಜೆಮಿನಾ ನಾನು ನಿಮ್ಮನ್ನು ಇಷ್ಟಪಡುತ್ತೇನೆ. ನೀವು ತುಂಬಾ ಸುಂದರವಾಗಿ ಇದ್ದಿರಾ, ನೀವು ಯಾರನ್ನಾದರೂ ನೋಡುತ್ತಿದ್ದಿರಾ?” ಎಂದು ಬರೆದು ಜೆಮಿಮಾ ರಾಡ್ರಿಗಾಸ್ ಅವನ್ನು ಟ್ಯಾಗ್ ಮಾಡಿ ಪ್ರೇಮ ನಿವೇದನೆ ಮಾಡಿದ್ದ.

    ಇದಕ್ಕೆ ಬಹಳ ಬುದ್ದಿವಂತಿಕೆಯಿಂದ ಉತ್ತರ ನೀಡಿರುವ ರಾಡ್ರಿಗಾಸ್ “ಹೌದು ನಾನು ನೋಡುತ್ತಿದ್ದೇನೆ, ಈ ಪಂದ್ಯದ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉತ್ತಮವಾದ ಭವಿಷ್ಯವನ್ನು ನೋಡುತ್ತಿದ್ದೇನೆ” ಎಂದು ಉತ್ತರಿಸಿ ಅಭಿಮಾನಿಯ ಬಾಯಿಯನ್ನು ಮುಚ್ಚಿಸಿದ್ದಾರೆ.

    ಮಹಿಳಾ ಆಟಗಾರ್ತಿಯ ಈ ಉತ್ತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರು ತುಂಬಾ ಒಳ್ಳೆಯ ಉತ್ತರ ಎಂದು ಕಾಮೆಂಟ್ ಮಾಡಿದ್ದಾರೆ. 19 ವರ್ಷದ ಮುಂಬೈನ ಬಲಗೈ ಆಟಗಾರ್ತಿ ರಾಡ್ರಿಗಾಸ್ ಮಹಿಳಾ ಟಿ20 ಲೀಗ್‍ನಲ್ಲಿ ಮೂರು ಪಂದ್ಯಗಳನ್ನಾಡಿ ಒಟ್ಟು 123 ರನ್ ಹೊಡೆದಿದ್ದಾರೆ. ಇದರಲ್ಲಿ ವಿಲೊಸಿಟಿ ತಂಡದ ವಿರುದ್ಧ ಹೊಡೆದ 77 ರನ್ (48 ಎಸೆತ) ಅವರ ಗರಿಷ್ಠ ಮೊತ್ತವಾಗಿದೆ. ಅವರ ಈ ಸಾಧನೆಗೆ 2019 ರ ಮಹಿಳಾ ಟಿ20 ಲೀಗ್‍ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ದೂರಕಿದೆ.