Tag: ಮಹಿಳಾ ಟಿ-20 ಟೂರ್ನಿ

  • ಮಹಿಳಾ ಟಿ-20ಗೆ ವೇದಿಕೆ ಸಜ್ಜು – ಯುಇಎನಲ್ಲಿ ಅಬ್ಬರಿಸಲಿದ್ದಾರೆ ಭಾರತೀಯ ನಾರಿಯರು

    ಮಹಿಳಾ ಟಿ-20ಗೆ ವೇದಿಕೆ ಸಜ್ಜು – ಯುಇಎನಲ್ಲಿ ಅಬ್ಬರಿಸಲಿದ್ದಾರೆ ಭಾರತೀಯ ನಾರಿಯರು

    – ತಂಡ, ಆಟಗಾರರು, ನಾಯಕಿಯರನ್ನು ಘೋಷಿಸಿದ ಬಿಸಿಸಿಐ

    ನವದೆಹಲಿ: ಮಹಿಳಾ ಟಿ-20 ಚಾಲೆಂಜ್ ಟೂರ್ನಿಗೆ ವೇದಿಕೆ ಸಜ್ಜಾಗಿದ್ದು, ಈ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಪಟ್ಟಿ ಮತ್ತು ಅವುಗಳ ನಾಯಕಿಯರನ್ನು ಬಿಸಿಸಿಐ ಇಂದು ಘೋಷಣೆ ಮಾಡಿದೆ.

    ಈ ಮಹಿಳಾ ಟಿ-20 ಲೀಗ್ ಯುಎಇಯಲ್ಲಿ ನವೆಂಬರ್ 4 ರಿಂದ 9ರ ತನಕ ನಡೆಯಲಿದ್ದು, ಆರಂಭಿಕ ಪಂದ್ಯವು ನವೆಂಬರ್ 4 ರಂದು ಸೂಪರ್ನೋವಾಸ್ ಮತ್ತು ವೆಲಾಸಿಟಿ ನಡುವೆ ನಡೆಯಲಿದೆ. ಮೊದಲ ಮಹಿಳಾ ಟಿ-20 ಲೀಗ್ 2018ರಲ್ಲಿ ಆರಂಭವಾಗಿದ್ದು, ಮೂರನೇ ಮಹಿಳಾ ಟೂರ್ನಿಯೂ ಯುಎಇಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಈ ಬಾರಿಯೂ ಕೂಡ ಎಂದಿನಂತೆ ಮೂರು ಮಹಿಳಾ ತಂಡಗಳು ಟ್ರೋಫಿಗಾಗಿ ಸೆಣೆಸಾಡಲಿವೆ. ಇದರಲ್ಲಿ ಆಡುವ ಆಟಗಾರರ ಪಟ್ಟಿ ಮತ್ತು ತಂಡಗಳ ನಾಯಕಿಯರ ಪಟ್ಟಿಯನ್ನು ಕೂಡ ಬಿಸಿಸಿಐ ಬಿಡಗಡೆ ಮಾಡಿದೆ. ಭಾರತ ಮಾಜಿ ನಾಯಕಿ ಮಿಥಾಲಿ ರಾಜ್ ಅವರು ವೆಲಾಸಿಟಿ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದರೆ, ಹರ್ಮನ್‍ಪ್ರೀತ್ ಕೌರ್ ಸೂಪರ್ನೋವಾಸ್ ತಂಡಕ್ಕೆ ಸ್ಮೃತಿ ಮಂಧಾನ ಟ್ರೈಲ್‍ಬ್ಲೇಜರ್ಸ್ ತಂಡಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಬಿಸಿಸಿಐ ಈ ಬಗ್ಗೆ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಬಾರಿಯ ಮಹಿಳಾ ಟಿ-20 ಟೂರ್ನಿಯಲ್ಲಿ ನಾಲ್ಕು ಪಂದ್ಯ ನಡೆಯಲಿವೆ. ಈ ಪಂದ್ಯಗಳಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‍ನ ಹಲವಾರು ಪ್ರತಿಭಾವಂತ ಆಟಗಾರ್ತಿಯರು ಭಾಗಿಯಾಗಲಿದ್ದಾರೆ. ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿ ಮೂರು ತಂಡಗಳನ್ನು ಆಯ್ಕೆ ಮಾಡಿದೆ ಎಂದು ತಿಳಿಸಿದೆ.

    ಈ ಹಿಂದೆ ಬಿಸಿಸಿಐ ಸಭೆಯಲ್ಲಿ ಮಾತನಾಡಿದ್ದ ಅಧ್ಯಕ್ಷ ಸೌರವ್ ಗಂಗೂಲಿಯವರು ಈ ಭಾರಿಯೂ ಕೂಡ ಮಹಿಳಾ ಟಿ-20 ಟೂರ್ನಿಯನ್ನು ಆಡಿಸುತ್ತೇವೆ. ಇದರಿಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದರು. ಅದರಂತೆ ಬಿಸಿಸಿಐ ಈ ಬಾರಿ ಟೂರ್ನಿಯನ್ನು ಕೊರೊನಾದ ನಡುವೆಯೂ ಯುಎಇಯಲ್ಲಿ ಆಯೋಜನೆ ಮಾಡಿದೆ.

    ತಂಡಗಳು ಇಂತಿವೆ.
    ಸೂಪರ್ನೋವಾಸ್: ಹರ್ಮನ್‍ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೊಡ್ರಿಗಸ್ (ಉಪನಾಯಕಿ), ಚಮರಿ ಅಟಪಟ್ಟು, ಪ್ರಿಯಾ ಪುನಿಯಾ, ಅನುಜಾ ಪಾಟೀಲ್, ರಾಧಾ ಯಾದವ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಶಿಕಲಾ ಸಿರಿವರ್ಧನೆ, ಪೂನಮ್ ಯಾದವ್, ಶಕೇರಾ ಸೆಲ್ಮನ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕರ್, ಆಯುಶಿ ಸೋನಿ, ಅಯಬೊಂಗಾ ಖಾಕ, ಮುಸ್ಕನ್ ಮಲಿಕ್

    ಟ್ರೈಲ್‍ಬ್ಲೇಜರ್‍ಗಳು: ಸ್ಮೃತಿ ಮಂಧಾನ (ನಾಯಕಿ), ದೀಪ್ತಿ ಶರ್ಮಾ (ಉಪನಾಯಕಿ), ಪುನಮ್ ರೌತ್, ರಿಚಾ ಘೋಷ್, ಡಿ.ಹೇಮಲತಾ, ನುಜಾತ್ ಪಾರ್ವೀನ್ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಹರ್ಲೀನ್ ಡಿಯೋಲ್, ಜುಲಾನ್ ಗೋಸ್ವಾಮಿ, ಸಿಮರನ್ ದಿಲ್ ಬಹದ್ದೂರ್, ಸಲ್ಮಾ ಖತುನ್, ಸೋಫಿ ಎಕ್ಲೆಸ್ಟೋನ್, ನಥಕನ್ ಚಾಂಥಮ್, ದಿಯಾಂಡ್ರಾ ಡೊಟಿನ್, ಕಾಶ್ವೀ ಗೌತಮ್

    ವೆಲಾಸಿಟಿ: ಮಿಥಾಲಿ ರಾಜ್ (ನಾಯಕಿ), ವೇದಾ ಕೃಷ್ಣಮೂರ್ತಿ (ಉಪನಾಯಕಿ), ಶಫಾಲಿ ವರ್ಮಾ, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಏಕ್ತಾ ಬಿಶ್ತ್, ಮಾನ್ಸಿ ಜೋಶಿ, ಶಿಖಾ ಪಾಂಡೆ, ದೇವಿಕಾ ವೈದ್ಯ, ಸುಶ್ರೀ ದಿಬ್ಯದರ್ಶಿನಿ, ಮನಾಲಿ ದಕ್ಷಿಣಿ, ಲೇ ಕಾಸ್ಪೆರೆಕ್, ಡೇನಿಯಲ್ ವ್ಯಾಟ್, ಸುನೆ ಲೂಸ್, ಜಹನಾರಾ ಆಲಂ, ಎಂ. ಅನಘಾ