Tag: ಮಹಿಳಾ ಕಾಲೇಜು

  • ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆಂಗಾವಲಾಗಿ ನಿಂತ ಹಿಂದೂ ವಿದ್ಯಾರ್ಥಿನಿಯರು

    ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆಂಗಾವಲಾಗಿ ನಿಂತ ಹಿಂದೂ ವಿದ್ಯಾರ್ಥಿನಿಯರು

    ಉಡುಪಿ: ರಾಜ್ಯಾದ್ಯಂತ ಹಿಜಬ್ ಗಲಾಟೆ ತಾರಕಕ್ಕೆ ಏರುತ್ತಿದ್ದು, ಈ ನಡುವೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಗೆ ನಾಲ್ವರು ಹಿಂದೂ ವಿದ್ಯಾರ್ಥಿನಿಯರು ಬೆಂಗಾವಲಾಗಿ ನಿಂತು ಕಾಲೇಜಿಗೆ ಕರೆದುಕೊಂಡು ಬಂದಿರುವ ದೃಶ್ಯವೊಂದು ಪಬ್ಲಿಕ್ ಟಿವಿಗೆ ಸೆರೆ ಸಿಕ್ಕಿದೆ.

    ಉಡುಪಿಯ ಮಹಿಳಾ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಭಯ, ಕಿರಿಕಿರಿಗೆ ಹಿಂದೂ ಸಹಪಾಠಿಗಳು ಮಾನಸಿಕ ಶಕ್ತಿ ತುಂಬಿ, ಮುಸ್ಲಿಂ ವಿದ್ಯಾರ್ಥಿನಿಗೆ ಬೆಂಗಾವಲಾಗಿ ಹಿಂದೂ ವಿದ್ಯಾರ್ಥಿನಿಯರು ನಿಂತಿದ್ದಾರೆ.

    ಉಡುಪಿ ಜಿಲ್ಲೆ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿತ್ತು. ಇಲ್ಲಿಯವರೆಗೂ ಯಾವುದೇ ಕೋಮು ಸಂಘರ್ಷಗಳು, ಹಿಂದೂ – ಮುಸ್ಲಿಂ ಸಮುದಾಯದ ನಡುವೆ ಬಿರುಕುಗಳಿರಲಿಲ್ಲ. ಹಿಜಬ್ ಮತ್ತು ಕೇಸರಿ ಕಾಳಗದ ನಂತರ ಜಿಲ್ಲೆಯಾದ್ಯಂತ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಒಂದೇ ಬೆಂಚ್‍ನಲ್ಲಿ ಕುಳಿತುಕೊಳ್ಳುವ ಗೆಳತಿಯಾಗಿದ್ದರೂ ಮನೆ ಪಕ್ಕದಲ್ಲಿ ಹತ್ತಾರು ವರ್ಷಗಳಿಂದ ಜೊತೆಗೆ ಜೀವನ ನಡೆಸುತ್ತಿದ್ದರೂ, ಎಲ್ಲರನ್ನೂ ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ.

    ಸರ್ಕಾರಿ ಪದವಿ ಪೂರ್ವ ಕಾಲೇಜಿನ 6 ವಿದ್ಯಾರ್ಥಿನಿಯರ ಹಿಜಬ್ ಹೋರಾಟ, ಅದೇ ಕ್ಯಾಂಪಸ್‍ನ 80ಕ್ಕಿಂತ ಹೆಚ್ಚು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಇರಿಸುಮುರುಸು ತಂದಿದೆ. ಪ್ರತಿದಿನ ಕಾಲೇಜಿನ ಮುಂದೆ ಮೂವತ್ತಕ್ಕೂ ಹೆಚ್ಚು ಮಾಧ್ಯಮಗಳ ಕ್ಯಾಮೆರಾ ಸಾಲುಗಟ್ಟಿ ನಿಂತಿರುತ್ತದೆ. ಹಿಜಬ್ ಹೋರಾಟಗಾರ್ತಿಯರು ಕಾಲೇಜಿಗೆ ಬರಬಹುದು ಪ್ರತಿಭಟನೆ ಮುಂದುವರಿಸಬಹುದು ಎಂಬ ಮಾಹಿತಿಯ ಮೇರೆಗೆ ಮಾಧ್ಯಮಗಳು ದೃಷ್ಟಿ ಇಟ್ಟಿರುತ್ತದೆ. ಇದನ್ನೂ ಓದಿ: ತಾಕತ್ತಿದ್ದರೆ ನನ್ನನ್ನು ತುಂಡು, ತುಂಡು ಮಾಡಲಿ ನೋಡೋಣ: ಆಂದೋಲಾ ಶ್ರೀ ಕಿಡಿ

    ಈ ಸಂದರ್ಭದಲ್ಲಿ ಬುರ್ಖಾ ಹಿಜಬ್ ತೊಟ್ಟು ಕಾಲೇಜಿನ ಕ್ಯಾಂಪಸ್ಸಿಗೆ ಮುಸಲ್ಮಾನ ಸಮುದಾಯದ ವಿದ್ಯಾರ್ಥಿನಿಯರು ಬರುತ್ತಾರೆ. ತರಗತಿಗೆ ಹೋಗುವ ಮುನ್ನ ಬುರ್ಖಾ ಹಿಜಬ್ ಕಳಚಿ ಇಡುತ್ತಾರೆ. ಆದರೆ ಈ ಎಲ್ಲಾ ವಿದ್ಯಾರ್ಥಿಗಳು ಬಹಳ ಇರುಸುಮುರುಸು ಅನುಭವಿಸುತ್ತಿದ್ದಾರೆ. ತನ್ನ ಹಿಂದೂ ಗೆಳತಿಯರ ಜೊತೆ ಬರುತ್ತಾ ಕ್ಯಾಮರಾಗಳನ್ನು ಕಂಡು ಬುರ್ಖಾ ಹಿಜಬ್ ಮತ್ತು ಮಾಸ್ಕ್ ಹಾಕಿದ್ದರೂ ಕೈಯಿಂದ ಮುಖಮುಚ್ಚಿಕೊಂಡು ಕಾಲೇಜಿನ ಕ್ಯಾಂಪಸ್‍ಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸ್ಥಳೀಯರಿಗೆ ಖಾಸಗಿ ವಲಯದಲ್ಲಿ ಶೇ.75ರಷ್ಟು ಉದ್ಯೋಗವಕಾಶ – ಸುಪ್ರೀಂನಲ್ಲಿ ಹರ್ಯಾಣಕ್ಕೆ ಜಯ

  • ಅಂತರ್ ಕಾಲೇಜು ಮಟ್ಟದ ಪೆಂಕಾಕ್ ಸಿಲಾತ್, ಕರಾಟೆ ಸ್ಪರ್ಧೆ- ಬೀದರ್ ಮಹಿಳಾ ಕಾಲೇಜು ಚಾಂಪಿಯನ್

    ಅಂತರ್ ಕಾಲೇಜು ಮಟ್ಟದ ಪೆಂಕಾಕ್ ಸಿಲಾತ್, ಕರಾಟೆ ಸ್ಪರ್ಧೆ- ಬೀದರ್ ಮಹಿಳಾ ಕಾಲೇಜು ಚಾಂಪಿಯನ್

    ಬೀದರ್: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಪೆಂಕಾಕ್ ಸಿಲಾತ್ ಹಾಗೂ ಕರಾಟೆ ಸ್ಪರ್ಧೆಯಲ್ಲಿ ನಗರದ ‘ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು’ ಚಾಂಪಿಯನ್ ಆಗಿ ಹೊರಹೊಮ್ಮಿದೆ.

    ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಕಾಲೇಜಿನ 14 ವಿದ್ಯಾರ್ಥಿನಿಯರು ಚಿನ್ನದ ಪದಕ ಗಳಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಸ್ನೇಹಾ ಸಂಜುಕುಮಾರ್, ನಂದಿನಿ ಶರಣಪ್ಪ, ಸ್ವಾತಿ ಪಾಂಡಪ್ಪ, ಕೋಮಲ್ ಗೋಪಾಲರಾವ್, ಮಾಲಾಶ್ರೀ ಶರಣಪ್ಪ, ದಿವ್ಯಶ್ರೀ, ದಶರಥ, ಸವಿತಾ, ಭಾಗ್ಯಶ್ರೀ, ಕಲ್ಪನಾ, ಅಶೋಕ್, ಜ್ಯೋತಿ, ವೈಶಾಲಿ, ಪ್ರಿಯಾಂಕಾ ರಾಜಕುಮಾರ್, ಸರಸ್ವತಿ ಹಾಗೂ ರೇಣುಕಾ ಚಿನ್ನದ ಸಾಧನೆ ಮಾಡಿದ ಮಕ್ಕಳು. ಇದನ್ನೂ ಓದಿ: ಕಲಬುರಗಿ ನಾಲವಾರ ಜಾತ್ರೆ – ಆಡಳಿತ ಮಂಡಳಿ ಸದಸ್ಯರ ವಿರುದ್ಧ FIR

    ಮೂರು ಚಿನ್ನದ ಪದಕಗಳನ್ನು ಬಾಚಿಕೊಂಡ ವಿಜಯಪುರ ಕಾಲೇಜು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಬೆಳಗಾವಿ, ವಿಜಯಪುರ, ರಾಯಚೂರು, ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಕಾಲೇಜುಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

    ವಿದ್ಯಾರ್ಥಿನಿಯರು ಆತ್ಮರಕ್ಷಣೆಗೆ ಪೆಂಕಾಕ್ ಸಿಲಾತ್, ಕರಾಟೆ ಕಲೆಗಳನ್ನು ಕಲಿಯಬೇಕು ಎಂದು ಸ್ಪರ್ಧೆಯನ್ನು ಉದ್ಘಾಟಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಕಿ ತರಬೇತುದಾರ ಖುದ್ದುಸ್ ಹೇಳಿದರು. ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಐತಿಹಾಸಿಕ ಸೋಲಿನ ಭಯದಿಂದ ‘ಬಾಬಾಜಿ’ ಒತ್ತಡದಲ್ಲಿದ್ದಾರೆ: ಅಖಿಲೇಶ್

    ಪೆಂಕಾಕ್ ಸಿಲಾತ್ ಆರನೇ ಶತಮಾನದಲ್ಲಿ ಇಂಡೋನೇಷ್ಯಾದಲ್ಲಿ ಯುದ್ಧ ಕಲೆಯಾಗಿ ಬಳಸಲಾಗುತ್ತಿತ್ತು. ನಂತರ ದಕ್ಷಿಣ ಏಷ್ಯಾದ ದೇಶಗಳಲ್ಲೂ ಪ್ರಾಮುಖ್ಯತೆ ಪಡೆದುಕೊಂಡಿತು ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಮನೋಜ್‍ಕುಮಾರ್ ತಿಳಿಸಿದರು.

  • ಪದವಿ ಪರೀಕ್ಷೆಯಲ್ಲಿ ನಕಲು- ಪ್ರಾಂಶುಪಾಲರೇ ಸಾಥ್

    ಪದವಿ ಪರೀಕ್ಷೆಯಲ್ಲಿ ನಕಲು- ಪ್ರಾಂಶುಪಾಲರೇ ಸಾಥ್

    ಕೊಪ್ಪಳ: ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಬಿಎ ಮೂರನೇ ಸೆಮೆಸ್ಟರ್ ನ ಇತಿಹಾಸ ವಿಷಯದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

    ಮಂಗಳವಾರ ಕೊಠಡಿಯೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕುರಿಸಿ ಪರೀಕ್ಷೆ ಬರೆಯಿಸಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಈ ಕಾಲೇಜು ಅಕ್ಕಮಹಾದೇವಿ ಮಹಿಳಾ ವಿವಿ ವ್ಯಾಪ್ತಿಗೆ ಒಳಪಡುತ್ತದೆ. ಪರೀಕ್ಷಾ ಕಾರ್ಯಕ್ಕೆ ಖಾಯಂ, ಅತಿಥಿ ಉಪನ್ಯಾಸಕರು ಗೈರಾಗಿದ್ದರಿಂದ ಅನ್ಯವ್ಯಕ್ತಿಗಳ ಮೂಲಕ ಕೊಠಡಿ ಮೇಲ್ವಿಚಾರಣೆ ಕಾರ್ಯ ನಡೆಸಿದ ಆರೋಪ ಇದೀಗ ಪ್ರಾಚಾರ್ಯ ಡಾ.ಗಣಪತಿ ಲಮಾಣಿ ವಿರುದ್ಧ ಕೇಳಿಬಂದಿದೆ.

    ಮಂಗಳವಾರ ಬಿಎ ಮೂರನೇ ಸೆಮಿಸ್ಟರ್ ನ ಇತಿಹಾಸ ವಿಷಯದ ಪರೀಕ್ಷೆ ಇತ್ತು. ಈ ವೇಳೆ ಪ್ರಾಚಾರ್ಯ ಡಾ.ಗಣಪತಿ ಲಮಾಣಿ ವಿದ್ಯಾರ್ಥಿಗಳಿಂದ ಹಣ ಪಡೆದು ಒಂದು ಕೊಠಡಿಯಲ್ಲಿ ಇಬ್ಬರೇ ವಿದ್ಯಾರ್ಥಿನಿಯರನ್ನು ಕುರಿಸಿ, ಪರೀಕ್ಷೆ ಬರೆಯಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಡಾ.ಗಣಪತಿ ವಿರುದ್ಧ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ತನಿಖೆ ಆರಂಭವಾಗಿದ್ದು, ಕಾಲೇಜಿಗೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಾಜಕುಮಾರ್ ಪಾಟೀಲ್, ಸಹಾಯಕ ಪ್ರಾಧ್ಯಾಪಕ ಪ್ರಕಾಶ್ ಬಡಿಗೇರ್, ನಗರ ಠಾಣೆ ಇನ್‍ಸ್ಪೆಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ತನಿಖಾ ತಂಡ ಕುಲಪತಿಗಳಿಗೆ ವರದಿ ಸಲ್ಲಿಸಲಿದೆ.