Tag: ಮಹಿಳಾ ಕಾರ್ಯಕರ್ತೆ

  • ಲಕ್ಷ್ಮಿ ಏನ್ ಮಲ್ಲಿಕಾ ಶೆರಾವತ್, ರಾಖಿ ಸಾವಂತ್, ಸನ್ನಿ ಲಿಯೋನ್: ಕಾಂಗ್ರೆಸ್ ಕಾರ್ಯಕರ್ತೆ

    ಲಕ್ಷ್ಮಿ ಏನ್ ಮಲ್ಲಿಕಾ ಶೆರಾವತ್, ರಾಖಿ ಸಾವಂತ್, ಸನ್ನಿ ಲಿಯೋನ್: ಕಾಂಗ್ರೆಸ್ ಕಾರ್ಯಕರ್ತೆ

    ವಿಜಯಪುರ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಏನು ಮಲ್ಲಿಕಾ ಶೆರಾವತ್, ರಾಖಿ ಸಾವಂತ್, ಸನ್ನಿ ಲಿಯೋನ್‍ನಾ ಎಂದು ಕಾಂಗ್ರೆಸ್ ಬೆಳಗಾವಿ ಕಾರ್ಯಕರ್ತೆ ವಾಗ್ದಾಳಿ ನಡೆಸಿರುವ ವಿಡಿಯೋ ವೈರಲ್ ಆಗಿದೆ.

    ಮಾಧ್ಯಮಗಳಲ್ಲಿ ನಮ್ಮನ್ನು ಸ್ವಲ್ಪ ಹೈಲೆಟ್ ಮಾಡಿ ತೋರಿಸಿ. ಯಾವಾಗಲೂ ಕೇವಲ ಲಕ್ಷ್ಮೀ ಹೆಬ್ಬಾಳ್ಕರ್ ನನ್ನು ತೋರಿಸುತ್ತೀರಾ. ಅವಳೇನು ಮಹಾರಾಣಿ ನಾ? ಅಥವಾ ಲಕ್ಷ್ಮಿ¸ ಏನು ಮಲ್ಲಿಕಾ ಶೆರಾವತ್, ರಾಖಿ ಸಾವಂತ್ ಹಾಗೂ ಸನ್ನಿ ಲಿಯೊನ್ ನಾ? ಲಕ್ಷ್ಮಿ, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸಹಾಯದಿಂದ ಎಲ್ಲ ಕೆಲಸವನ್ನು ಮಾಡಿಸಿಕೊಂಡಿದ್ದಾಳೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದೇ ವೇಳೆ ಕಾರ್ಯಕರ್ತೆ ಅಥಣಿ ಕಾಂಗ್ರೆಸ್ ಅಭ್ಯರ್ಥಿ ಪರವು ವಾಗ್ದಾಳಿ ನಡೆಸಿದ್ದಾರೆ. ಗಜಾನನ ಮಂಗಸೂಳಿ ಡಮ್ಮಿ ಕ್ಯಾಂಡಿಡೇಟ್. ಮಂಗಸೂಳಿ ಪರವಾಗಿ ಎಲ್ಲಿಯೇ ಪ್ರಚಾರಕ್ಕೆ ಹೋದರು ಜನರು ತಂದೆ- ತಾಯಿಯನ್ನೆ ಹೊರಗಡೆ ಇಟ್ಟಿದ್ದಾನೆ ಎಂದು ಹೇಳುತ್ತಾರೆ. ಅವನ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ. ನಮಗೆ ಹಣ ಕೊಡುತ್ತಿಲ್ಲ ಸುಮ್ಮನೆ ಪಕ್ಷದಲ್ಲಿದ್ದೇವೆ ಎಂದು ಪ್ರಚಾರಕ್ಕಾಗಿ ಓಡಾಡುತ್ತಿದ್ದೇವೆ ಎಂದು ತಮ್ಮ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

  • ಪಕ್ಷದಲ್ಲಿನ ಆಂತರಿಕ ವಿಚಾರ ಬಹಿರಂಗಪಡಿಸಿದ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ

    ಪಕ್ಷದಲ್ಲಿನ ಆಂತರಿಕ ವಿಚಾರ ಬಹಿರಂಗಪಡಿಸಿದ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ

    ಶ್ರೀನಗರ: ಬಿಜೆಪಿಯಲ್ಲಿ ಹಿರಿಯ ನಾಯಕರಿಂದ ಮಹಿಳಾ ಕಾರ್ಯಕರ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಜಮ್ಮು ಮಹಿಳಾ ಮೋರ್ಚಾ ಸದಸ್ಯೆ ಪ್ರಿಯಾ ಜರಲ ಗಂಭೀರ ಆರೋಪ ಮಾಡಿದ್ದಾರೆ. ಹಿರಿಯರ ಸಮ್ಮುಖದಲ್ಲಿಯೇ ಪ್ರಿಯಾ ಜರಲ್ ಆರೋಪಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ನಾವು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಟೀಕಿಸುತ್ತೇವೆ. ಮಷೀನ್ ನಲ್ಲಿ ಈ ಕಡೆಯಿಂದ ಆಲೂಗಡ್ಡೆ ಹಾಕಿದ್ರೆ ಮತ್ತೊಂದು ಕಡೆ ಬಂಗಾರ ತೆಗೆಯಲಾಗುತ್ತದೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿ ನಾಯಕರು ವ್ಯಂಗ್ಯ ಮಾಡುತ್ತಾರೆ. ಆದ್ರೆ ನಮ್ಮ ಪಕ್ಷದಲ್ಲಿ ಹೋಟೆಲ್ ಒಳಗಡೆ ಹೋದ ಸಾಮಾನ್ಯ ಕಾರ್ಯಕರ್ತೆಯೊಬ್ಬಳು, ಹೊರಗಡೆ ಬರುವಾಗ ಬಿಜೆಪಿಯ ದೊಡ್ಡ ನಾಯಕಿಯಾಗಿ ಹೊರಹೊಮ್ಮುತ್ತಾಳೆ ಎಂದು ಹೇಳುವ ಮೂಲಕ ಪಕ್ಷದಲ್ಲಿಯ ಆಂತರಿಕ ವಿಚಾರವನ್ನು ಪ್ರಿಯಾ ಜರಲ್ ಬಹಿರಂಗಗೊಳಿಸಿದ್ದಾರೆ.

    ಬಿಜೆಪಿ ಸಭೆಯಲ್ಲಿ ಪ್ರಿಯಾ ಜರಲ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ಸದಸ್ಯೆಯರು ಪ್ರಿಯಾರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತ ಹಿರಿಯ ನಾಯಕರು ಈ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಿಯಾರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.

    ಸಭೆಯಿಂದ ಹೊರ ಬಂದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾ ಜರಲ್, ನಾವು ರಾಹುಲ್ ಗಾಂಧಿಯವರ ಎಲ್ಲ ಹೇಳಿಕೆಗಳನ್ನು ಟೀಕಿಸುತ್ತೇವೆ. ಆದ್ರೆ ನಮ್ಮಲ್ಲಿ ಎಲ್ಲವೂ ಸರಿ ಇಲ್ಲ. ಹೋಟೆಲ್ ಒಳ ಹೋಗಿದ್ದ ಸಾಮನ್ಯ ಕಾರ್ಯಕರ್ತೆ, ಹೊರ ಬಂದ ಮೇಲೆ ಆಕೆ ದೊಡ್ಡ ನಾಯಕಿಯಾಗಿ ಬರುತ್ತಾಳೆ. ಯಾರು ಈ ಕೆಲಸಕ್ಕೆ ಒಪ್ಪಿಕೊಳ್ಳುವುದಿಲ್ಲ. ಅವರನ್ನು ಎಲ್ಲ ಸ್ಥಾನದಿಂದ ಕೆಳಗೆ ಇಳಿಸಲಾಗುತ್ತದೆ. ಕೆಲ ಮಹಿಳೆಯರು ನನ್ನ ಹೇಳಿಕೆ ಸುಳ್ಳು ಎಂದು ವಾದಿಸಬಹುದು. ಅವರು ಎಂಥವರು ಎಂಬುವುದೇ ನಿಮಗೆ ಗೊತ್ತಾಗಲಿದೆ. ಪಕ್ಷದಲ್ಲಿ ಹಿರಿಯ ನಾಯಕರಿಂದ ತುಳಿತಕ್ಕೊಳಗಾದ ನಿಜವಾದ ಕಾರ್ಯಕರ್ತರು ನನ್ನನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.

    ಪಕ್ಷದ ಹಿರಿಯ ನಾಯಕರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದ ಪ್ರಿಯಾ ಜರಲ್ ಅವರನ್ನು ಮಹಿಳಾ ಮೋರ್ಚಾದ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಿಳಾ ಕಾರ್ಯಕರ್ತೆಯರ ಮೈ-ಕೈ ಮುಟ್ಟಿ ಅಕೌಂಟೆಂಟ್ ನಿಂದ ಅಸಭ್ಯ ವರ್ತನೆ!

    ಮಹಿಳಾ ಕಾರ್ಯಕರ್ತೆಯರ ಮೈ-ಕೈ ಮುಟ್ಟಿ ಅಕೌಂಟೆಂಟ್ ನಿಂದ ಅಸಭ್ಯ ವರ್ತನೆ!

    ಚಿತ್ರದುರ್ಗ: ಸ್ವಯಂ ಸೇವಾ ಮಹಿಳಾ ಕಾರ್ಯಕರ್ತೆಯರು ಮೇಲೆ ಚಿತ್ರದುರ್ಗದ ನೆಹರು ಯುವ ಕೇಂದ್ರದ ಅಕೌಂಟೆಂಟ್ ಒಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪವೊಂದು ಕೇಳಿ ಬಂದಿದೆ.

    ಅಕೌಂಟೆಂಟ್ ಪ್ರಕಾಶ್ ಮೇಲೆ ಈ ಆರೋಪ ಕೇಳಿಬಂದಿದೆ. ಲಂಚಾವತಾರ ಹಾಗು ಅಸಭ್ಯ ವರ್ತನೆಯ ತೋರಿದ್ದಾನೆ ಎಂದು ಸ್ವಯಂ ಸೇವಾ ಕಾರ್ಯಕರ್ತೆಯರು ಆರೋಪಿಸಿದ್ದಾರೆ.

    ಪ್ರಕಾಶ್ ಕೆಲಸ ಮಾಡುವಾಗ ಮಹಿಳೆಯರ ಮೈ-ಕೈ ಮುಟ್ಟಿ ಅಸಭ್ಯ ವರ್ತನೆ ತೋರುತ್ತಾನೆ. ಮಹಿಳಾ ಸಿಬ್ಬಂದಿಗಳಿಗೆ ಮನೆಗೆ ಬರುವಂತೆ ಒತ್ತಾಯಿಸುತ್ತಾನೆ. ಸಂಬಳ ನೀಡುವಾಗ ಲಂಚ ಕೇಳುತ್ತಾನೆ ಹಾಗೂ ಇಬ್ಬರೇ ಪ್ರವಾಸ ಹೋಗೋಣ ಎಂದು ಪೀಡಿಸುತ್ತಾನೆಂದು ಕಾರ್ಯಕರ್ತೆಯರು ಆರೋಪಿಸಿದ್ದಾರೆ.

    ಅಲ್ಲದೇ ಅಕೌಂಟೆಂಟ್ ಲೈಂಗಿಕ ಕಿರುಕುಳಕ್ಕೆ ಮನನೊಂದ ಕಾರ್ಯಕರ್ತೆಯರು ಪ್ರಕಾಶ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಐದು ಜನ ಮಹಿಳೆಯರು ಈ ಕುರಿತು ಆರೋಪಿಸಿದ್ದು, ಆತ ನೀಡುವ ಕಿರುಕುಳ ತಾಳಲಾರದೇ ಬೇಸತ್ತು ಎಂಟು ಜನ ಮಹಿಳೆಯರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಅಂತ ಹೇಳಿದ್ದಾರೆ.

    ಮಹಿಳಾ ಸ್ವಯಂ ಸೇವಾ ಕಾರ್ಯಕರ್ತರು ದಾರಿಕಾಣದೇ ಡಿಸಿ ಮೊರೆ ಹೋದರೆ, ಮಹಿಳೆಯರ ಸಂಕಷ್ಟ ತಿಳಿದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಅಂತ ಹೇಳಲಾಗುತ್ತಿದೆ.