Tag: ಮಹಿಳಾ ಕಾಂಗ್ರೆಸ್

  • ಕೇರಳ ರಾಜಕಾರಣದಲ್ಲೂ ಕಾಸ್ಟಿಂಗ್ ಕೌಚ್ ಕೋಲಾಹಲ; ಪಕ್ಷದ ನಾಯಕರಿಂದ ಕಿರುಕುಳ – ಕಾಂಗ್ರೆಸ್ ನಾಯಕಿ ರೋಸ್‌ಬೆಲ್ ಬಾಂಬ್‌

    ಕೇರಳ ರಾಜಕಾರಣದಲ್ಲೂ ಕಾಸ್ಟಿಂಗ್ ಕೌಚ್ ಕೋಲಾಹಲ; ಪಕ್ಷದ ನಾಯಕರಿಂದ ಕಿರುಕುಳ – ಕಾಂಗ್ರೆಸ್ ನಾಯಕಿ ರೋಸ್‌ಬೆಲ್ ಬಾಂಬ್‌

    ತಿರುವನಂತಪುರಂ: ಮಲಯಾಳಂ ಚಿತ್ರೋದ್ಯಮದಲ್ಲಿ ಮಾತ್ರ ಕಾಸ್ಟಿಂಗ್ ಕೌಚ್ ಇಲ್ಲ.. ಕೇರಳ ರಾಜಕಾರಣದಲ್ಲೂ ಇದು ಹಾಸುಹೊಕ್ಕಾಗಿದ್ಯಂತೆ. ಕೇರಳ ಕಾಂಗ್ರೆಸ್ ಘಟಕದಲ್ಲಿ ಕ್ಯಾಸ್ಟಿಂಗ್ ಕೌಚ್ (Casting Couch) ರೀತಿಯ ಪರಿಸ್ಥಿತಿಗಳಿವೆ ಎಂದು ಕಾಂಗ್ರೆಸ್ ನಾಯಕಿ ಸಿಮಿ ರೋಸ್‌ಬೆಲ್ ಜಾನ್ (Simi Rosebell John) ಬಾಂಬ್‌ ಸಿಡಿಸಿದ್ದಾರೆ. ಈ ಬೆನ್ನಲ್ಲೇ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC)ಯು ರೋಸ್‌ಬೆಲ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.

    ಪಕ್ಷದಲ್ಲಿ ತುಂಬಾ ಹೆಣ್ಮಕ್ಕಳು, ಪುರುಷ ನಾಯಕರಿಂದ ಆಕ್ಷೇಪಾರ್ಹವಾದ ರೀತಿ ಕಿರುಕುಳ ಎದುರಿಸ್ತಿದ್ದಾರೆ. ಉನ್ನತ ಹುದ್ದೆಗಳ ಆಸೆ ತೋರಿಸಿ ಪಕ್ಷದ ಕೆಲವು ಹಿರಿಯ ನಾಯಕರು, ಮಹಿಳಾ ನಾಯಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆ ಭಯಾನಕ ಅನುಭವಗಳನ್ನು ಕೆಲವರು ತಮ್ಮ ಬಳಿ ಹಂಚಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಅಗತ್ಯ ಸಾಕ್ಷ್ಯಗಳು ನನ್ನ ಬಳಿಯಿವೆ. ಸಮಯ ಬಂದಾಗ ಅವುಗಳನ್ನು ಬಯಲು ಮಾಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

    ಕೆಲ ಮಹಿಳಾಮಣಿಗಳು ಅರ್ಹತೆ ಇಲ್ಲದಿದ್ದರೂ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಹೈಕಮಾಂಡ್‌ಗೆ ಆಪ್ತವಾಗಿರುವ ಮಂದಿಗೆ ಅವಕಾಶ ಸಿಕ್ತಿವೆ ಎಂದು ಆರೋಪಿಸಿದ್ದಾರೆ. ಸಿಮಿ ರೋಸ್‌ಬೆಲ್ ಮಾತು ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿವೆ. ಕಾಂಗ್ರೆಸ್‌ನಲ್ಲೂ ಆಂತರಿಕ ಸಂಘರ್ಷಕ್ಕೆ ಕಾರಣವಾಗಿವೆ. ಇದನ್ನೂ ಓದಿ: ಆಂಧ್ರ, ತೆಲಂಗಾಣದಲ್ಲಿ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ – 9 ಸಾವು, ಜನಜೀವನ ಅಸ್ತವ್ಯಸ್ತ

    ಸಿಮಿ ರೋಸ್‌ಬೆಲ್ ವಿರುದ್ಧ ಕೆಪಿಸಿಸಿಯ ರಾಜಕೀಯ ವ್ಯವಹಾರಗಳ ಸಮಿತಿಯ ಮಹಿಳಾ ಮುಖಂಡರು, ಪಿಸಿಸಿಯ ಮಹಿಳಾ ಪದಾಧಿಕಾರಿಗಳು ಮತ್ತು ಮಹಿಳಾ ಕಾಂಗ್ರೆಸ್ ಮುಖ್ಯಸ್ಥರು ಹೈಕಮಾಂಡ್‌ಗೆ ದೂರು ನೀಡಿದೆ. ಆದ್ರೆ, ಈ ಆರೋಪಗಳೆಲ್ಲಾ ಸುಳ್ಳು ಎಂದು ಕೇರಳ ಕಾಂಗ್ರೆಸ್ ಘಟಕ ತಿಳಿಸಿದೆ. ಅಲ್ಲದೇ, ತನಿಖೆಗೂ ಮುಂದಾಗಿದೆ. ಇದನ್ನೂ ಓದಿ: ಮಹಾ ಮಳೆಗೆ ಅವಾಂತರ – ಸೋಮವಾರ ಬೀದರ್‌ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ

  • ಮಹಿಳಾ ಪೊಲೀಸರಿಗೆ ಕ್ಯಾಕರಿಸಿ ಉಗಿದು ಕೈ ನಾಯಕಿ ನೆಟ್ಟಾ ಡಿಸೋಜಾ ಆಕ್ರೋಶ

    ಮಹಿಳಾ ಪೊಲೀಸರಿಗೆ ಕ್ಯಾಕರಿಸಿ ಉಗಿದು ಕೈ ನಾಯಕಿ ನೆಟ್ಟಾ ಡಿಸೋಜಾ ಆಕ್ರೋಶ

    ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ದೇಶಾದ್ಯಂತ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

    ಪ್ರತಿಭಟನೆಯ ವೇಳೆ ಕೆಲ ಮುಖಂಡು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಳೆದ ವಾರ ಕಾಂಗ್ರೆಸ್ ಮಹಿಳಾ ನಾಯಕಿ ರೇಣುಕಾ ಚೌಧರಿ ಅವರು ಪಿಎಸ್‌ಐ ಅಧಿಕಾರಿಯ ಕೊರಳಪಟ್ಟಿ ಹಿಡಿದು ಎಳೆದಾಡಿದ್ದರು, ಮಹಿಳಾ ಪೊಲೀಸರ ಮೇಲೂ ತಮ್ಮ ದರ್ಪ ಮೆರೆದಿದ್ದರು. ಇಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಭದ್ರತೆಗೆ ನಿಯೋಜಿಸಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೆ ಉಗುಳಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು: ಸಿ.ಟಿ.ರವಿ

    ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನೆಟ್ಟಾ ಡಿಸೋಜಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಡಿಸೋಜಾ ಪೊಲೀಸರ ಮೇಲೆ ಉಗುಳಿ ಎಲ್ಲರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

    ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಬ್ಯಾರಿಕೇಡ್ ತಳ್ಳಿ ಪೊಲೀಸರ ಮೇಲೆ ನೂಕಾಟ ತಳ್ಳಾಟ ನಡೆಸಿದ್ದಾರೆ. ಇದರಿಂದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನೆಟ್ಟಾ ಡಿಸೋಜಾ ಅವರನ್ನು ವಶಕ್ಕೆ ಪಡೆದ ಪೊಲೀಸರು ವಾಹನದೊಳಕ್ಕೆ ಕೂಡಿ ಹಾಕಲು ಯತ್ನಿಸಿದ್ದಾರೆ. ಈ ವೇಳೆ ನೆಟ್ಟಾ ಡಿಸೋಜಾ ಮಹಿಳಾ ಪೊಲೀಸರ ಮೇಲೆ ಉಗುಳಿದ್ದಾರೆ. ಇದನ್ನೂ ಓದಿ: ಜು.1ರಿಂದ ಸ್ವಚ್ಛತಾ ಕಾರ್ಯ ಬಂದ್ – ಸಾರ್ವಜನಿಕರಿಗೆ ತೊಂದ್ರೆಯಾದ್ರೆ ಸರ್ಕಾರವೇ ಹೊಣೆ ಎಂದ ಪೌರಕಾರ್ಮಿಕರು

    ಹಿನ್ನೆಲೆ ಏನು?: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಿಲುಕಿರುವ ಎಐಸಿಸಿ ಮಾಜಿ ಅಧ್ಯಕ್ಷ ಸಂಸದ ರಾಹುಲ್ ಗಾಂಧಿ ಕಳೆದ ಸೋಮವಾರದಿಂದ ನಿರಂತರ ಇಡಿ ವಿಚಾರಣೆ ಎದುರಿಸುತ್ತಿದ್ದರು. 30 ಗಂಟೆಗಳ ವಿಚಾರಣೆಯಲ್ಲಿ ಸುಮಾರು 16 ಪ್ರಶ್ನೆಗಳಿಗೆ 70 ಪುಟಗಳ ಹೇಳಿಕೆ ದಾಖಲು ಮಾಡಿದ್ದರು. ಇಂದೂ ಸಹ ಇಡಿ ವಿಚಾರಣೆಗೆ ಹಾಜರಾಗಿದ್ದರು.

    ಈ ನಡುವೆ ರಾಹುಲ್ ಗಾಂಧಿ ಇಡಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಲು ಸನ್ನದ್ಧವಾಗಿದೆ. ಕಳೆದ ವಾರವೂ ಉಗ್ರ ಹೋರಾಟ ಮಾಡಿದ್ದ ಕಾಂಗ್ರೆಸ್ ನಾಯಕರು ಪ್ರತಿಭಟನೆ ತೀವ್ರಗೊಳಿಸಲು ಸಿದ್ಧವಾಗಿದ್ದಾರೆ. ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಎಐಸಿಸಿ ಮತ್ತು ಇಡಿ ಕಚೇರಿಯ ಸುತ್ತ 144 ಸೆಕ್ಷನ್ ಜಾರಿ ಮಾಡಿದ್ದು ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ.

    ರಾಹುಲ್ ಗಾಂಧಿ ಅವರ ವಿಚಾರಣೆಗೆ ಸಂಬಂಧಿಸಿದ ಮಾಹಿತಿಯನ್ನು ಕೆಲವು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

    Live Tv

  • ಬೆಲೆ ಏರಿಕೆ – ರಸ್ತೆಯಲ್ಲಿ ರಂಗೋಲಿ ಹಾಕಿ ಪ್ರತಿಭಟನೆ

    ಬೆಲೆ ಏರಿಕೆ – ರಸ್ತೆಯಲ್ಲಿ ರಂಗೋಲಿ ಹಾಕಿ ಪ್ರತಿಭಟನೆ

    ಬೆಂಗಳೂರು: ದಿನಬಳಕೆ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಆಹಾರ ಮತ್ತು ಈರುಳ್ಳಿ ದರ ಏರಿಕೆ ಖಂಡಿಸಿ, ವಿನೂತನವಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಿ, ಮಲ್ಲೇಶ್ವರಂ ಕುವೆಂಪು ಪ್ರತಿಮೆ ಬಳಿ ಮಹಿಳೆಯರು ಪ್ರತಿಭಟನೆ ಮಾಡಿದರು.

    ಬೆಂಗಳೂರು ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಶ್ರೀಮತಿ ವಿಮಲ ವೆಂಕಟ್ ರವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ವಧಿಕಾರಿ ಧೋರಣೆ ಇಂದ ದೇಶ ಸಂಕಷ್ಟದ ಪರಿಸ್ಥಿತಿ ಬಂದಿದೆ. ನೋಟು ಅಮ್ಯಾನೀಕರಣ, ಅವೈಜ್ಞಾನಿಕ ಜಿ.ಎಸ್.ಟಿ ಮತ್ತು ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ರೈತರ ಸಂಕಷ್ಟಗಳನ್ನು ಕೇಳುವವರು ಇಲ್ಲದಂತಾಗಿದೆ. ಸಿ.ಎ.ಎ ಮತ್ತು ಎನ್.ಆರ್.ಸಿ ಕಾನೂನು ಗೊಂದಲದಲ್ಲಿ ಇದ್ದು ದೇಶದ ಜನರು ಭಯದ ವಾತವರಣದಲ್ಲಿ ಇದ್ದಾರೆ ಎಂದರು.

    ಕರ್ನಾಟಕ ರಾಜ್ಯದಲ್ಲಿ 18 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಪ್ರವಾಹದಿಂದ ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ. ಕೋಟ್ಯಂತರ ರೂಪಾಯಿ ರೈತನ ಬೆಳೆ ಹಾನಿಯಾದರು ಬಿಜೆಪಿ ಕೇಂದ್ರ ಸರ್ಕಾರ ಹೆಚ್ಚು ಪರಿಹಾರ ಕೊಡುವಲ್ಲಿ ವಿಫಲವಾಗಿದೆ. ಭಾರತದ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿದೆ. ಉದ್ಯೋಗ ಸೃಷ್ಟಿ ಗಗನಕುಸಮವಾಗಿದೆ. ಯುವಕರು ಕಂಗಾಲಾಗಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಮುಂದಿನ ದಿನಗಳಲ್ಲಿ ಇದೇ ರೀತಿ ಆದರೆ ಬಡ ಜನರು ಬದುಕೋದೆ ಕಷ್ಟವಾಗುತ್ತದೆ. ಕೂಡಲೇ ಅರ್ಥಿಕ ಸುಸ್ಥಿರತೆ ಕಾಪಾಡುವ ಕೆಲಸ ಆಗಬೇಕು. ಏರುತ್ತಿರುವ ದಿನಬಳಕೆ ವಸ್ತುಗಳ ದರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

    ಬೆಂಗಳೂರು ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ವಿಮಲ ವೆಂಕಟ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಶ್ರೀಮತಿ ಉಮಾಬಾಯಿ, ಆಶಾ ರಾಜು, ಮಹಿಳಾ ಬ್ಲಾಕ್ ಅಧ್ಯಕ್ಷರುಗಳಾದ ಪಾರ್ವತಿ, ಸುಶೀಲ, ಅನಿತಾ, ಭವ್ಯ, ಚಂದ್ರಮ್ಮ ನೂರಾರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.