Tag: ಮಹಿಳಾ ಕಂಡಕ್ಟರ್

  • ಖಾಸಗಿ ಶಾಲೆ ಬಸ್‌ನ ಮಹಿಳಾ ಕಂಡಕ್ಟರ್‌ ತಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

    ಖಾಸಗಿ ಶಾಲೆ ಬಸ್‌ನ ಮಹಿಳಾ ಕಂಡಕ್ಟರ್‌ ತಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

    ಚಿತ್ರದುರ್ಗ: ಖಾಸಗಿ ಶಾಲೆಯ ಬಸ್ ನಿರ್ವಾಹಕಿಯ (Women conductors )ತಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದ ಅರಣ್ಯದಲ್ಲಿ ನಡೆದಿದೆ.

    ಮೃತರನ್ನು ಹೊಳಲ್ಕೆರೆ ತಾಲ್ಲೂಕಿನ ರಾಮಘಟ್ಟ ಗ್ರಾಮದ ನಿವಾಸಿ ಆಶಾ (25) ಎಂದು ಗುರುತಿಸಲಾಗಿದೆ. ಈಕೆ ಹೊಳಲ್ಕೆರೆಯ ಖಾಸಗಿ ಶಾಲೆಯ ಬಸ್ ನಿರ್ವಾಹಕಿಯಾಗಿದ್ದರು. ಇದನ್ನೂ ಓದಿ: ಲಾರಿ ಮಾಲೀಕರ ಜೊತೆ ಸಿಎಂ ಸಂಧಾನ ಸಭೆ ವಿಫಲ – ಇಂದಿನಿಂದ ಪ್ರತಿಭಟನೆ ತೀವ್ರಗೊಳಿಸಲು ಸಜ್ಜಾದ ಲಾರಿ ಅಸೋಸಿಯೇಷನ್!

    ಈಕೆಯು ತನ್ನ ಸ್ನೇಹಿತನಾದ ಅನಿಲಾಸನ್‌ಗೆ ಸಾಲದ ರೂಪದಲ್ಲಿ 56,000 ರೂಪಾಯಿ ನೀಡಿದ್ದರು. ಆದರೆ ಸಾಲದ ಹಣ ಹಿಂತಿರುಗಿಸದೇ ಸತಾಯಿಸ್ತಿದ್ದ ಸ್ನೇಹಿತನೊಂದಿಗೆ ಜಗಳವಾಗಿದ್ದು, ಹಲವು ಬಾರಿ ಸ್ಥಳಿಯರ ಸಮ್ಮುಖದಲ್ಲಿ ರಾಜೀ, ಪಂಚಾಯ್ತಿಗಳು ನಡೆದಿದ್ದವು. ಇದನ್ನೂ ಓದಿ: ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ ಹಲವು ರೀಲ್ಸ್‌ ಸ್ಟಾರ್‌ಗಳಿಂದ ಕ್ಷಮೆಯಾಚನೆ

    ಕಳೆದ ಎರಡು ದಿನಗಳ ಹಿಂದೆ ಹಣ ನೀಡುವುದಾಗಿ ಕರೆ ಮಾಡಿದ್ದ ಅನಿಲಾಸನ್ ಕೆಂಗುಂಟೆ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾನೆ. ಅಲ್ಲದೇ ಅತ್ಯಾಚಾರ ಎಸಗಿರುವ ಶಂಕೆಯೂ ಇದೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

    ಸದ್ಯ ಘಟನಾ ಸ್ಥಳಕ್ಕೆ ಡಿವೈಎಸ್ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ. ಇದನ್ನೂ ಓದಿ: ಬೆಂಗ್ಳೂರಿಗೆ ಸೆಡ್ಡು ಹೊಡೆಯಲು ಆಂಧ್ರ ಸರ್ಕಾರದಿಂದ ಭಾರೀ ಆಫರ್ – ಟಿಸಿಎಸ್‌ಗೆ 99 ಪೈಸೆಗೆ 21 ಎಕ್ರೆ ಭೂಮಿ

  • ಅತ್ತಿಗೆ ಮೇಲೆ ಮೈದುನನಿಂದ ಆಸಿಡ್ ದಾಳಿ

    ಅತ್ತಿಗೆ ಮೇಲೆ ಮೈದುನನಿಂದ ಆಸಿಡ್ ದಾಳಿ

    ಬೆಂಗಳೂರು: ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಕಂಡಕ್ಟರ್ ಇಂದಿರಾಬಾಯಿ ಮೇಲೆ ಆಸಿಡ್ ಹಾಕಿದ್ದು ಮೈದುನ ಅರುಣ್ ನಾಯಕ್ ಎನ್ನುವುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

    ಅರುಣ್ ನಾಯಕ್ ಪೀಣ್ಯ ಡಿಪೋದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರೆ, ಇಂದಿರಾಬಾಯಿ ಶಾಂತಿನಗರ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇಂದಿರಾಬಾಯಿ, ಅರುಣ್ ನಾಯಕ್ ಗೆ ಸಂಬಂಧದಲ್ಲಿ ಅತ್ತಿಗೆ ಆಗಬೇಕು. ಹೀಗಿದ್ದು ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.

    ಇತ್ತೀಚೆಗೆ ಇಂದಿರಾಬಾಯಿ ಬೇರೊಂದು ವ್ಯಕ್ತಿಯ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಅರುಣ್ ಕುಮರ್ ಗೆ ತಿಳಿಯಿತು. ಬಳಿಕ ಅರುಣ್ ಈ ವಿಷಯವಾಗಿ ತನ್ನ ಅತ್ತಿಗೆ ಇಂದಿರಾಬಾಯಿ ಜೊತೆ ಜಗಳವಾಡಿದ್ದನು. ಇದೇ ವಿಚಾರಕ್ಕೆ ಕೋಪಗೊಂಡ ಅರುಣ್ ನಾಯಕ್ ಆಸಿಡ್ ದಾಳಿ ನಡೆಸಿದ್ದಾನೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.

    ಕಳೆದ ಎರಡು ದಿನಗಳ ಹಿಂದೆ ಬಿಎಂಟಿಸಿ ಮಹಿಳಾ ಕಂಡಕ್ಟರ್ ಇಂದಿರಾಬಾಯಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆ್ಯಸಿಡ್ ಎರಚಿ ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೈದುನ ಅರುಣ್ ನಾಯಕ್ ಆತನ ಸ್ನೇಹಿತ ಕುಮಾರ್ ನಾಯಕ್‍ನನ್ನು ಬಂಧಿಸಿದ್ದಾರೆ.

  • ಬಿಎಂಟಿಸಿ ಬಸ್ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ

    ಬಿಎಂಟಿಸಿ ಬಸ್ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ

    ಬೆಂಗಳೂರು: ಮಹಿಳಾ ಬಿಎಂಟಿಸಿ ಬಸ್ ಕಂಡಕ್ಟರ್ ಮೇಲೆ ಆಸಿಡ್ ದಾಳಿ ನಡೆದಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಹಾವನೂರು ಲೇಔಟ್ ನಲ್ಲಿ ನಡೆದಿದೆ.

    ತುಮಕೂರಿನ ಶಿರಸಿ ಮೂಲದ ಇಂದಿರಾಬಾಯಿ ಆಸಿಡ್ ದಾಳಿಗೆ ಒಳಗಾದ ಕಂಡಕ್ಟರ್. ಶಾಂತಿನಗದ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುವ ಇಂದಿರಾಬಾಯಿ, ಎಂದಿನಂತೆ ಬೆಳಗ್ಗೆ 5:30ರ ವೇಳೆಗೆ ಮನೆಯಿಂದ ಕೆಲಸಕ್ಕೆ ಹೊರಟ್ಟಿದ್ದರು. ಈ ವೇಳೆ ಮನೆಯಿಂದ ಕೇವಲ ನೂರು ಮೀಟರ್ ಮುಂದೆ ಹೋದಾಗ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇಂದಿರಾಬಾಯಿ ಮೇಲೆ ಆಸಿಡ್ ಎರಚಿ ಎಸ್ಕೇಪ್ ಆಗಿದ್ದಾರೆ.

    ಗಂಭೀರ ಸ್ವರೂಪದ ಗಾಯವಾದ ಹಿನ್ನೆಲೆಯಲ್ಲಿ ಇಂದಿರಾ ಅವರನ್ನು ಸಪ್ತಗಿರಿ ಆಸ್ಪತ್ರೆಗೆ ಚಿಕಿತ್ಸೆ ನಡೆಸಲಾಗಿದೆ. ಕಳೆದ ಆರು ತಿಂಗಳ ಹಿಂದೆ ಕೂಡ ಇಂದಿರಾಬಾಯಿ ಮೇಲೆ ದಾಳಿ ನಡೆದಿದ್ದು, ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು. ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಮಹಿಳಾ ಕಂಡಕ್ಟರ್‌ಗಳ ಅರ್ಧ ಗಂಟೆ ಬೀದಿ ರಂಪಾಟ- ವಿಡಿಯೋ ವೈರಲ್

    ಮಹಿಳಾ ಕಂಡಕ್ಟರ್‌ಗಳ ಅರ್ಧ ಗಂಟೆ ಬೀದಿ ರಂಪಾಟ- ವಿಡಿಯೋ ವೈರಲ್

    ಗದಗ: ಪಾಳಿ ವಿಷಯಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳಾ ಕಂಡಕ್ಟರ್‌ಗಳು  ಬೀದಿ ರಂಪಾಟ ಮಾಡಿಕೊಂಡ ಘಟನೆ ಗದಗನ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ನಡೆದ ಈ ಬೀದಿ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಸಾರ್ವಜನಿಕರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ನಗರ ಸಾರಿಗೆಯ ಇಬ್ಬರು ನಿರ್ವಾಹಕಿಯರು ಪಾಳಿಯ ವಿಷಯಕ್ಕೆ ಬಾಯಿಗೆ ಬಂದಂತೆ ಅವಾಚ್ಯ ಪದಗಳನ್ನು ಬಳಸಿ ಬೈದಾಡಿಕೊಂಡಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಿತ್ತಾಡಿಕೊಂಡ ಮಹಿಳಾ ಕಂಡಕ್ಟರ್‌ಗಳ ಈ ಬೀದಿ ರಂಪಾಟಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಅಷ್ಟೇ ಅಲ್ಲದೆ ಎರಡು ಬಸ್ಸುಗಳಲ್ಲಿ ಇದ್ದ ಪ್ರಯಾಣಿಕರು ಯಾಕಾದರೂ ಈ ಸರ್ಕಾರಿ ಬಸ್ ಏರಿದೆ ಅಂತ ಕಿಡಿಕಾರಿದ್ದಾರೆ. ನಿರ್ವಾಹಕಿಯರ ಹಾದಿ ರಂಪಾಟ ನೋಡಿದ ಮೇಲಾಧಿಕಾರಿಗಳು ಇಬ್ಬರಿಗೂ ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

    https://www.youtube.com/watch?v=efo0zDEVT-w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv