Tag: ಮಹಿಳಾ ಉದ್ಯೋಗಿಗಳು

  • ಸ್ಥಳೀಯ, ವಿದೇಶಿ ಎನ್‌ಜಿಒಗಳಲ್ಲಿ ಮಹಿಳೆ ಉದ್ಯೋಗಿಗಳಿಗೆ ಅವಕಾಶ ಕೊಡ್ಬೇಡಿ – ತಾಲಿಬಾನ್‌ ಆದೇಶ

    ಸ್ಥಳೀಯ, ವಿದೇಶಿ ಎನ್‌ಜಿಒಗಳಲ್ಲಿ ಮಹಿಳೆ ಉದ್ಯೋಗಿಗಳಿಗೆ ಅವಕಾಶ ಕೊಡ್ಬೇಡಿ – ತಾಲಿಬಾನ್‌ ಆದೇಶ

    ಕಾಬೂಲ್: ಅಫ್ಘಾನಿಸ್ತಾನದ (Afghanistan) ಎಲ್ಲಾ ಸ್ಥಳೀಯ ಹಾಗೂ ವಿದೇಶಿ ಸರ್ಕಾರೇತರ ಸಂಸ್ಥೆಗಳಿಗೆ (NGO) ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ತಾಲಿಬಾನ್ (Taliban) ಆದೇಶಿಸಿದೆ.

    ಮಹಿಳೆಯರಿಗೆ ಇಸ್ಲಾಮಿಕ್‌ ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಈ ನಿಯಮವನ್ನು ಕೆಲವರು ಪಾಲಿಸದ ಕಾರಣ, ಮಹಿಳಾ ಉದ್ಯೋಗಿಗಳಿಗೆ (Women Employees) ಕಚೇರಿಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಬಾರದು ಎಂದು ತಾಲಿಬಾನ್‌ ಸೂಚಿಸಿದೆ. ಇದನ್ನೂ ಓದಿ: `ನೀವು ತುಂಬಾ ದಪ್ಪ’ – ಮಹಿಳೆಗೆ ವಿಮಾನ ಹತ್ತಲು ನಿರಾಕರಿಸಿದ ಕತಾರ್‌ ಏರ್‌ವೇಸ್‌ಗೆ 3 ಲಕ್ಷ ದಂಡ

    ವಿಶ್ವವಿದ್ಯಾನಿಲಯಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಬಾರದು ಎಂದ ಬೆನ್ನಲ್ಲೇ ತಾಲಿಬಾನ್‌ ಮತ್ತೊಂದು ಆದೇಶ ಹೊರಡಿಸಿದೆ. ಇದರ ವಿರುದ್ಧ ಅಫ್ಘಾನಿಸ್ತಾನದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಲ್ಲದೇ ಜಾಗತಿಕವಾಗಿ ಖಂಡನೆ ಕೂಡ ವ್ಯಕ್ತವಾಗಿದೆ.

    ವಿಶ್ವವಿದ್ಯಾನಿಲಯ ಶಿಕ್ಷಣದ ಮೇಲಿನ ನಿಷೇಧವನ್ನು ಪ್ರತಿಭಟಿಸುವ ಮಹಿಳೆಯರನ್ನು ಚದುರಿಸಲು ತಾಲಿಬಾನ್ ಭದ್ರತಾ ಪಡೆಗಳು ನೀರಿನ ಫಿರಂಗಿಯನ್ನು ಬಳಸಿದವು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಅಫ್ಘಾನಿಸ್ತಾನದ ಮಹಿಳೆಯರು ನಿಷೇಧದ ವಿರುದ್ಧ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು

    ವಿವಿಗಳಲ್ಲಿ ಮಹಿಳೆಯರಿಗೆ ಶಿಕ್ಷಣ ನಿಷೇಧಿಸಿದ ತಾಲಿಬಾನ್‌ ಆದೇಶಕ್ಕೆ ಸೌದಿ ಅರೇಬಿಯಾ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ದೇಶಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನೀವು ಬರಬೇಡಿ.. ನಿಮ್ಮ ಮನೆಯ ಪುರುಷರನ್ನು ಕೆಲಸಕ್ಕೆ ಕಳಿಸಿ: ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್‌ ಸೂಚನೆ

    ಕಾಬೂಲ್: ಅಫ್ಘಾನಿಸ್ತಾನದ ಮಹಿಳಾ ಉದ್ಯೋಗಿಗಳಿಗೆ ತಮ್ಮ ಕೆಲಸ ಮಾಡಲು ಪುರುಷ ಸಂಬಂಧಿಯನ್ನು ಕಳುಹಿಸುವಂತೆ ತಾಲಿಬಾನ್‌ ಸೂಚನೆ ನೀಡಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

    ಈ ಕುರಿತು ಮಾತನಾಡಿರುವ ಮಹಿಳಾ ಉದ್ಯೋಗಿಯೊಬ್ಬರು, ನಿಮ್ಮ ಬದಲಿಗೆ ಮನೆಯ ಪುರುಷನನ್ನು ಉದ್ಯೋಗಕ್ಕೆ ಕಳುಹಿಸಿ ಎಂದು ತಾಲಿಬಾನ್‌ ಅಧಿಕಾರಿಗಳು ಕರೆ ಮಾಡಿ ತಿಳಿಸಿದ್ದಾರೆ. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಿದೆ. ನಿಮ್ಮ ಬದಲು ಪುರುಷರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ ಎಂದು ತಾಲಿಬಾನ್‌ ಅಧಿಕಾರಿಗಳು ಹೇಳಿರುವುದಾಗಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ದಿಢೀರ್ ಪ್ರವಾಹ – 12 ಸಾವು, ಹಲವರು ನಾಪತ್ತೆ, ಸಾವಿರಾರು ಜನ ಸ್ಥಳಾಂತರ

    ತಾಲಿಬಾನಿಗಳು ಅಧಿಕಾರಕ್ಕೆ ಬಂದಾಗಿನಿಂದ ನನ್ನನ್ನು ಉದ್ಯೋಗದಲ್ಲಿ ಪ್ರಮುಖ ಸ್ಥಾನದಿಂದ ಕೆಳಗಿಳಿಸಿದ್ದಾರೆ. ನನ್ನ ಸಂಬಳವನ್ನು 60,000 ಅಫ್ಘಾನಿಗಳಿಂದ 12,000 ಅಫ್ಘಾನಿಗೆ ಇಳಿಸಿದ್ದಾರೆ. ಇದರಿಂದ ನನ್ನ ಮಗನ ಶಾಲಾ ಶುಲ್ಕವನ್ನು ಭರಿಸುವುದಕ್ಕೂ ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಕುರಿತು ಪ್ರಶ್ನಿಸಿದರೆ, ಕಚೇರಿಯಿಂದ ಹೊರಹೋಗುವಂತೆ ಅಧಿಕಾರಿಗಳು ಉಗ್ರವಾಗಿ ವರ್ತಿಸುತ್ತಾರೆ ಎಂದು ಉದ್ಯೋಗಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

    15 ವರ್ಷಗಳ ಕಾಲ ತಾನು ಕೆಲಸ ಮಾಡಿದ ಹುದ್ದೆಗೆ ಪುರುಷನನ್ನು ಬದಲಿ ಶಿಫಾರಸು ಮಾಡುವಂತೆ ಸಚಿವಾಲಯದ ಮಾನವ ಸಂಪನ್ಮೂಲ ಇಲಾಖೆಯಿಂದ ಕರೆ ಬಂದಿದೆ ಎಂದು ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಮತ್ತು ಸಚಿವಾಲಯದಲ್ಲಿ ವಿಭಾಗದ ಮುಖ್ಯಸ್ಥರಾಗಿರುವ ಮಹಿಳಾ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಇಂಡಿಯಾನಾದ ಮಾಲ್‍ನಲ್ಲಿ ಗುಂಡಿನ ದಾಳಿ- ಮೂವರು ಸಾವು

    ತಾಲಿಬಾನ್‌ ನೀತಿಗಳನ್ನು ಜಾಗತಿಕ ಸಂಸ್ಥೆಗಳು ತೀವ್ರವಾಗಿ ಟೀಕಿಸಿವೆ. ಇಂತಹ ನೀತಿಗಳಿಂದ ದೇಶದಲ್ಲಿ ಆರ್ಥಿಕ ನಷ್ಟದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿವೆ. ಮಹಿಳೆಯರ ಉದ್ಯೋಗದ ಮೇಲಿನ ಪ್ರಸ್ತುತ ನಿರ್ಬಂಧಗಳು 1 ಬಿಲಿಯನ್‌ ಡಾಲರ್‌ ವರೆಗೆ ತಕ್ಷಣದ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು UN ಮಹಿಳೆಯರ ಕಾರ್ಯನಿರ್ವಾಹಕ ನಿರ್ದೇಶಕಿ ಸಿಮಾ ಬಹೌಸ್ ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಅಂದಿನಿಂದ ಮಹಿಳೆಯರ ಹಕ್ಕುಗಳನ್ನು ಹಿಂತೆಗೆದುಕೊಳ್ಳುವ ಹಲವಾರು ತೀರ್ಪುಗಳನ್ನು ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]