Tag: ಮಹಿಕಾ ಶರ್ಮಾ

  • ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಲು ಬಯಸುತ್ತೇನೆ: ನಟಿ ಮಹಿಕಾ ಶರ್ಮಾ

    ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಲು ಬಯಸುತ್ತೇನೆ: ನಟಿ ಮಹಿಕಾ ಶರ್ಮಾ

    ಮುಂಬೈ: ಕಿರುತೆರೆಯ ಭಾರತೀಯ ನಟಿಯೊಬ್ಬರು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಲು ಬಯಸುವುದಾಗಿ ದಿಟ್ಟ ಹೇಳಿಕೆಯನ್ನು ನೀಡುವುದರ ಮೂಲಕ ಎಲ್ಲೆಡೆ ಸಂಚಲನ ಮೂಡಿಸಿದ್ದಾರೆ.

    ‘ರಾಮಾಯಣ’ ಮತ್ತು ‘ಎಫ್‍ಐಆರ್’ ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ಭಾರತೀಯ ನಟಿ ಮಹಿಕಾ ಶರ್ಮಾ ಅವರು ಶಾಹಿದ್ ಅಫ್ರಿದಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸುವುದಾಗಿ ಹೇಳಿಕೆ ನೀಡಿ ಬೆಳಕಿಗೆ ಬಂದಿದ್ದಾರೆ. ಶಾಹಿದ್ ಅಫ್ರಿದಿ ಅವರ ಮೇಲಿನ ನನ್ನ ಮೋಹ ಎಷ್ಟು ಹೆಚ್ಚಿದೆ ಎಂದರೆ ನಾನು ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಲು ಸಿದ್ಧಳಿದ್ದೇನೆ ಎಂದಿದ್ದಾರೆ. ಇತ್ತೀಚೆಗಷ್ಟೇ ಶಾಹಿದ್ ಅಫ್ರಿದಿ ಕೂಡ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

    ಸ್ಪಾಟ್‍ಬಾಯ್ ಪ್ರಕಾರ, ಮಹಿಕಾ ಶಾಹಿದ್ ಅಫ್ರಿದಿ ಅವರ ನರ್ಸ್ ಆಗಲು ಬಯಸಿದ್ದಾರಂತೆ. ನನಗೆ ಶಾಹಿದ್ ಅವರ ನರ್ಸ್ ಆಗಲು ಅವಕಾಶ ಸಿಗಬೇಕು. ಈ ಪ್ರೇಮಿಗಳ ದಿನದಂದು ನನ್ನ ಮೊದಲ ಕ್ರಶ್ ಅಫ್ರಿದಿ ಅವರು ತುಂಬಾ ನೋವಿನಲ್ಲಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್

    ಕಳೆದ 15-16 ವರ್ಷಗಳಿಂದ ನನಗೆ ಬೆನ್ನುನೋವಿನ ಸಮಸ್ಯೆ ಇದ್ದು, ಆ ನೋವಿನಲ್ಲು ಸಹ ನಾನು ಆಟವಾಡುತ್ತಿದ್ದೆ. ಆದರೆ ಈಗ ಈ ಸಮಸ್ಯೆಯು ನನ್ನ ಮೊಣಕಾಲಿನ ಮೇಲೆ ಪರಿಣಾಮ ಬೀರುವಷ್ಟು ಹೆಚ್ಚಾಗಿದೆ ಎಂದು ಇತ್ತೀಚೆಗೆ ಅಫ್ರಿದಿ ತಿಳಿಸಿದ್ದರು.

    ನಾನು ಶಾಹೀದ್ ಅವರ ಹುಚ್ಚು ಅಭಿಮಾನಿಯಾಗಿದ್ದು, ದೇಹ ಸುಖಕ್ಕಾಗಿ ನಮ್ಮನ್ನು ನಾವು ಸ್ಪರ್ಶಿಸುವುದು ಮತ್ತು ಸ್ವಯಂತೃಪ್ತಿಪಡಿಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿಯಲ್ಲ ಅಂತ ನಾನು ಭಾವಿಸುತ್ತೇನೆ. ಕೆಲವು ಹಿಂದುಳಿದ ಸಂಪ್ರದಾಯವಾದಿ ಜನರು ಇನ್ನೂ ಸ್ವಯಂ-ಸಂತೋಷದ ಬಗ್ಗೆ ಭಯಪಡುತ್ತಾರೆ. ಅದೃಷ್ಟವಶಾತ್ ಅದನ್ನು ನಾನು ಪ್ರಯತ್ನಿಸಿದೆ. ಆ ಅನುಭವವು ನಮಗೆ ಭಾವನಾತ್ಮಕವಾಗಿ ಹಾಗೂ ಶಾರೀರಿಕವಾಗಿ ಆರೋಗ್ಯಕರವಾಗಿದೆ ಎಂದರು. ಇದನ್ನೂ ಓದಿ: ಹಾರಿದವ ಒಬ್ಬ, ಹಿಡಿದವ ಇನ್ನೊಬ್ಬ – ಮ್ಯಾಕ್ಸ್‌ವೆಲ್‌ ಕ್ಯಾಚ್ ಕಂಡು ದಂಗಾದ ಫೀಲ್ಡರ್

    ಮಹಿಕಾ ಶರ್ಮಾ ಅವರು ʼಪೊಲೀಸ್ ಫ್ಯಾಕ್ಟರಿ’, ‘ರಾಮಾಯಣ’ ಮತ್ತು ‘ಎಫ್‍ಐಆರ್’ ನಂತಹ ದೂರದರ್ಶನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಹಿಕಾ ಶರ್ಮಾ ಸೌಂದರ್ಯ ಸ್ಪರ್ಧೆಯಾದ ಮಿಸ್ ಟೀನ್ ಈಶಾನ್ಯ ಭಾರತ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ.