ಕೊಯಮತ್ತೂರು: ಇಶಾ ಫೌಂಡೇಶನ್ ವತಿಯಿಂದ ಆಯೋಜನೆಯಾಗಿರುವ ಶಿವರಾತ್ರಿ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದಾರೆ.
ಇಶಾ ಯೋಗ ಕೇಂದ್ರದಲ್ಲಿ ಮಹಾ ಶಿವರಾತ್ರಿ ಆಚರಣೆಗಳು ಬುಧವಾರ ಸಂಜೆ 6 ಗಂಟೆಯಿಂದ ಆರಂಭವಾಗಿ ಗುರುವಾರ ಬೆಳಗ್ಗೆ 6 ಗಂಟೆಯವರೆಗೆ ನಡೆಯಲಿದೆ. ಸಾವಿರಾರು ಜನರು ಭಾಗಿಯಾಗಿರುವ ಕಾರ್ಯಕ್ರಮದಲ್ಲಿ ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಮಧ್ಯದಲ್ಲಿ ಕುಳಿತಿದ್ದರೆ ಬಲಗಡೆ ಡಿಕೆ ಶಿವಕುಮಾರ್, ಎಡಗಡೆ ಅಮಿತ್ ಶಾ ಕುಳಿತಿದ್ದಾರೆ.
ಪ್ರತಿ ವರ್ಷ ಇಶಾ ಫೌಂಡೇಶ್ ವತಿಯಿಂದ ಶಿವರಾತ್ರಿ ಜಾಗರಣೆ ನಡೆಯುತ್ತದೆ. ಅಹೋರಾತ್ರಿ ನೃತ್ಯ, ಸಂಗೀತ ಕಾರ್ಯಕ್ರಮ ಆಯೋಜನೆ ಆಗಿರುತ್ತದೆ.
ಶಿವ ಭಕ್ತಿ ಪ್ರಿಯ. ಭಕ್ತರಿಗೆ ಅತಿ ಬೇಗನೆ ಒಲಿಯುವ ದೇವ. ನಿಷ್ಕಲ್ಮಶ, ಶುದ್ಧ, ಮುಗ್ದ ಮನಸ್ಸಿನಿಂದ ಏನು ಬೇಡಿಕೊಂಡರೂ ಭಕ್ತರಿಗಾಗಿ ದಯಪಾಲಿಸುವ ಕರುಣಾಮಯಿ ಹರ. ಶಿವ ಭಕ್ತರಿಂದ ಭಕ್ತಿಯ ಹೊರತು ಬೇರೇನನ್ನೂ ಕೇಳುವುದಿಲ್ಲ. ಭಕ್ತಿಯಿಂದ ತನ್ನನ್ನು ಜಪಿಸುವ, ಆರಾಧಿಸುವ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ. ಇದನ್ನು ನಾವು ಮಹಾದೇವನ ಕುರಿತ ಹಲವಾರು ಪುರಾಣ ಕಥೆಗಳಲ್ಲಿ ಓದಿದ್ದೇವೆ. ಭಕ್ತರಲ್ಲಿ ಎಂದಿಗೂ ಭೇದವೆಣಿಸದ ಶಂಕರ. ಆದ್ದರಿಂದಲೇ ಅಸುರರು ಸಹ ಶಿವನನ್ನು ಧ್ಯಾನಿಸಿ ವರಗಳನ್ನು ಪಡೆದರು. ಶಿವನಿಗೆ ಅಚ್ಚುಮೆಚ್ಚಿನ ಭಕ್ತರು ಯಾರು? ಅವರಿಗಾಗಿ ಶಿವ ಏನನ್ನು ಮಾಡಿದ ಎಂಬುದನ್ನು ತಿಳಿಯೋಣ ಬನ್ನಿ.
ಬೇಡರ ಕಣ್ಣಪ್ಪ
ಈ ಶಿವಭಕ್ತನ ಹೆಸರು ಕಣ್ಣಪ್ಪ. ಬೇಡರ ಕುಲದವನಾದ್ದರಿಂದ ಬೇಡರ ಕಣ್ಣಪ್ಪ ಎಂದು ಹೆಸರಾಗಿರುತ್ತಾನೆ. ಭಕ್ತಿ, ಪೂಜೆ, ಪಾಪ, ಪುಣ್ಯದ ಬಗ್ಗೆ ಏನೂ ಗೊತ್ತಿಲ್ಲದ ಕಣ್ಣಪ್ಪನ ಕನಸಿನಲ್ಲಿ ಆಗಾಗ್ಗೆ ಶಿವ ಕಾಣಿಸಿಕೊಳ್ಳುತ್ತಿರುತ್ತಾರೆ. ಪ್ರಾಣಿ-ಪಕ್ಷಗಳನ್ನು ಬೇಟೆಯಾಡಿ ಜೀವನ ಸಾಗಿಸುವ ಕುಲದವ ಕಣ್ಣಪ್ಪ. ಎಂದಿನಂತೆ ಒಮ್ಮೆ ಬೇಟೆಗೆ ಹೋಗಿದ್ದಾಗ ಏನೂ ಸಿಗದೇ ಕತ್ತಲಾಗಿಬಿಡುತ್ತದೆ. ಪ್ರಾಣಿಗಳ ಭಯದಿಂದ ಆ ರಾತ್ರಿ ಬಿಲ್ವಪತ್ರೆ ಮರವನ್ನು ಏರಿ ಕುಳಿತುಕೊಳ್ಳುತ್ತಾನೆ. ನಿದ್ರೆ ಬಾರದಿರಲಿ ಎಂದು ಒಂದೊಂದೇ ಬಿಲ್ವಪತ್ರೆ ಎಲೆಯನ್ನು ಕಿತ್ತು ನೆಲದ ಮೇಲೆ ಇಡುತ್ತಿರುತ್ತಾನೆ. ಅಲ್ಲೇ ಮರದ ಕೆಳಗಿದ್ದ ಶಿವಲಿಂಗದ ಮೇಲೆ ಬಿಲ್ವಪತ್ರೆ ಬೀಳುತ್ತದೆ. ಬೆಳಗ್ಗೆ ಕೆಳಗಿಳಿದು ನೋಡಿದಾಗ ಕಣ್ಣಪ್ಪನಿಗೆ ಶಿವಲಿಂಗ ಕಾಣುತ್ತದೆ. ತನ್ನ ಕನಸಿನಲ್ಲಿ ಬರುತ್ತಿದ್ದ ಲಿಂಗ ಇದೇ ಎಂದು ತಿಳಿದು ಅಲ್ಲಿಂದ ಪ್ರತಿದಿನ ಪೂಜೆಗೈಯ್ಯಲು ಪ್ರಾರಂಭಿಸುತ್ತಾನೆ. ಲಿಂಗದ ಜೊತೆ ಮಾತಾಡುತ್ತಾನೆ. ಭಕ್ತಿಯಿಂದ ಶಿವಲಿಂಗವನ್ನು ಅಪ್ಪಿಕೊಳ್ಳುತ್ತಾನೆ. ಅದೇ ಲಿಂಗಕ್ಕೆ ನಿತ್ಯ ಅರ್ಚಕ ಕೂಡ ಪೂಜೆ ಮಾಡುತ್ತಿರುತ್ತಾನೆ. ಅರ್ಚಕ ಲಿಂಗವನ್ನು ಶುಚಿಗೊಳಿಸಿ ಹೂವುಗಳಿಂದ ಅಲಂಕರಿಸಿ ಹಣ್ಣು, ಬಗೆಬಗೆಯ ಭಕ್ಷ್ಯವನ್ನು ಲಿಂಗಕ್ಕೆ ಅರ್ಪಿಸುತ್ತಿರುತ್ತಾನೆ. ಆದರೆ, ಕಣ್ಣಪ್ಪ ತಾನು ಬೇಟೆಯಾಡಿದ ಪ್ರಾಣಿಗಳ ಮಾಂಸವನ್ನೇ ಶಿವನಿಗೆ ನೈವೇದ್ಯವಾಗಿ ಇಡುತ್ತಾನೆ. ಇದನ್ನು ಗಮನಿಸಿದ ಅರ್ಚಕ ಸಿಟ್ಟುಗೊಂಡು ಕಣ್ಣಪ್ಪನಿಗೆ ಶಿಕ್ಷೆ ವಿಧಿಸುತ್ತಾನೆ. ತನ್ನ ಪ್ರಿಯ ಭಕ್ತನನ್ನು ಶಿಕ್ಷಿಸುತ್ತಿರುವುದನ್ನು ಕಂಡು ಶಿವಲಿಂಗದ ಕಣ್ಣಿನಿಂದ ನೀರು ಬರಲು ಪ್ರಾರಂಭಿಸುತ್ತದೆ. ಶಿವ ಅಳುತ್ತಿದ್ದಾನೆಂದು ಕಣ್ಣಪ್ಪ ಸಂತೈಸುತ್ತಾನೆ. ಆದರೆ ಕಣ್ಣಲ್ಲಿ ನೀರು ನಿಲ್ಲುವುದಿಲ್ಲ. ಕೊನೆಗೆ ದಿಕ್ಕು ತೋಚದೆ ಕಣ್ಣಪ್ಪ ತನ್ನ ಎರಡೂ ಕಣ್ಣುಗಳನ್ನು ಕಿತ್ತು ಲಿಂಗದ ಮುಂದಿಡುತ್ತಾನೆ. ಆಗ ಲಿಂಗದ ಕಣ್ಣಲ್ಲಿ ನೀರು ನಿಂತು ಶಿವ-ಪಾರ್ವತಿ ಪ್ರತ್ಯಕ್ಷರಾಗಿ ಪ್ರಿಯಭಕ್ತನಿಗೆ ಕಣ್ಣು ಮರಳಿ ಬರುವಂತೆ ಮಾಡುತ್ತಾರೆ. ಇದನ್ನೂ ಓದಿ: ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ – ಮುಂಜಾನೆಯಿಂದಲೇ ಶಿವಲಿಂಗಕ್ಕೆ ರುದ್ರಾಭಿಷೇಕ
ಮಾರ್ಕಂಡೇಯ
ಒಂದಾನೊಂದು ಕಾಲದಲ್ಲಿ ಮೃಕಂಡು ಎಂಬ ಮುನಿವರ್ಯನಿದ್ದ. ಆತನಿಗೆ ಮದುವೆಯಾಗಿ ಬಹಳ ವರ್ಷಗಳು ಕಳೆದರೂ ಮಕ್ಕಳಾಗಿರಲ್ಲ. ದುಃಖಿತನಾದ ಮೃಕಂಡು ಪರಮೇಶ್ವರನ ಕುರಿತು ಘೋರ ತಪಸ್ಸು ಮಾಡುತ್ತಾನೆ. ಅವನ ತಪಸ್ಸಿಗೆ ಮೆಚ್ಚಿ ಈಶ್ವರ ಪ್ರತ್ಯಕ್ಷನಾಗಿ, ‘ನಿನಗೆ ಮಂದಬುದ್ದಿಯ ನೂರು ವರ್ಷ ಬಾಳುವ ಮಗ ಬೇಕೋ? ಹದಿನಾರೇ ವರ್ಷ ಬಾಳುವ ಅಲ್ಪಾಯುಷಿ ಸುಜ್ಞಾನಿ ಮಗ ಬೇಕೋ?’ ಎಂದು ಕೇಳುತ್ತಾನೆ. ಅದಕ್ಕೆ ಮೃಕಂಡು ಸುಜ್ಞಾನಿ ಮಗನನ್ನೇ ಕೊಡು ಎಂದು ಕೇಳಿಕೊಳ್ಳುತ್ತಾನೆ. ಶಿವನ ವರದಿಂದ ಮೃಕಂಡು ದಂಪತಿಗೆ ಮಾರ್ಕಂಡೇಯ ಜನಿಸುತ್ತಾನೆ. ಅಲ್ಪಾಯುಷಿಯಾದ ಬಾಲಭಕ್ತ ಶಿವನನ್ನು ಸದಾ ಪೂಜಿಸುತ್ತಾನೆ. ಶಿವನನ್ನು ಬಿಟ್ಟಿರಲಾರಂಥ ಭಕ್ತನಾಗಿರುತ್ತಾನೆ. ಮಾರ್ಕಂಡೇಯನ ಆಯಸ್ಸು ಮುಗಿದಾಗ, ಪಾಶ ಹಾಕಿ ಕರೆದುಕೊಂಡು ಹೋಗಲು ಯಮ ಬರುತ್ತಾನೆ. ಶಿವಲಿಂಗವನ್ನು ಬಿಟ್ಟು ನಾನು ಎಲ್ಲಿಗೂ ಬರುವುದಿಲ್ಲ ಎಂದು ಮಾರ್ಕಂಡೇಯ ಹಠ ಹಿಡಿಯುತ್ತಾನೆ. ಕೊನೆಗೆ ಯಮಧರ್ಮ ಸಿಟ್ಟಿನಿಂದ ಯಮಪಾಶ ಹಾಕಲು ಬರುತ್ತಾನೆ. ಆಗ ಶಿವ ಪ್ರತ್ಯಕ್ಷನಾಗಿ ಯಮನನ್ನು ತಡೆಯುತ್ತಾನೆ. ಮಾರ್ಕಂಡೇಯನ ಭಕ್ತಿಗೆ ಮೆಚ್ಚಿ, ನೀನು ಚಿರಂಜೀವಿಯಾಗಿ ಬಾಳು ಎಂದು ವರ ನೀಡುತ್ತಾನೆ. ಬಳಿಕ ಮಾರ್ಕಂಡೇಯ ತಂದೆ-ತಾಯಿ ಬಳಿಗೆ ಹೋಗಿ ನೂರ್ಕಾಲ ಬಾಳುತ್ತಾನೆ.
ರಾವಣ
ಲಂಕಾದ ರಾಜ ರಾವಣ. ಈ ರಾಜನಿಗೆ ಹತ್ತು ತಲೆ. ರಾಮಾಯಣದ ರಾಮನಿಗೆ ಎದುರಾಳಿ. ಆದರೂ, ರಾವಣ ಶಿವನ ಪರಮಭಕ್ತ. ಶಿವ ತಾಂಡವ ಸ್ತೋತ್ರದಿಂದ ರಾವಣನ ಭಕ್ತಿ ಅಮರವಾಗಿದೆ. ದಂತಕಥೆ ಪ್ರಕಾರ, ಲಂಕಾಸುರ ರಾವಣ ತನ್ನ ಶಕ್ತಿ ಪ್ರದರ್ಶಿಸಲು ಶಿವನ ವಾಸಸ್ಥಾನವಾದ ಕೈಲಾಸ ಪರ್ವತವನ್ನೇ ಮೇಲೆತ್ತಲು ಪ್ರಯತ್ನಿಸುತ್ತಾನೆ. ಪರ್ವತ ಮೇಲೆತ್ತಲು ಬಿಡಬಾರದೆಂದು ಶಿವ ತನ್ನ ಕಾಲ್ಬೆರಳಿನಿಂದ ಪರ್ವತವನ್ನು ಕಳೆಗೆ ಒತ್ತುತ್ತಾನೆ. ಪರಿಣಾಮ ಪರ್ವತದ ಕೆಳಗೆ ರಾವಣ ಸಿಲುಕಿಕೊಳ್ಳುತ್ತಾನೆ. ಶಿವನಲ್ಲಿ ಕ್ಷಮೆಯಾಚಿಸಲು ರಾವಣ ಘೋರ ತಪಸ್ಸು ಮಾಡುತ್ತಾನೆ. ಶಿವನನ್ನು ಮೆಚ್ಚಿಸಲು ತಾಂಡವ ಸ್ತೋತ್ರವನ್ನು ರಚಿಸುತ್ತಾನೆ. ರಾವಣನ ಭಕ್ತಿಗೆ ಮೆಚ್ಚಿ ಶಿವ ಕ್ಷಮಿಸುತ್ತಾನೆ. ಜೊತೆಗೆ ಆಕಾಶ ಖಡ್ಗವನ್ನು ರಾವಣನಿಗೆ ನೀಡುತ್ತಾನೆ. ಇದನ್ನೂ ಓದಿ: ಅಮೆರಿಕ | ಲಿವರ್‌ಮೋರ್‌ನ ಶಿವ-ವಿಷ್ಣು ದೇವಾಲಯದಲ್ಲಿ ನಿತ್ಯ ಆರಾಧನೆ
ನಂದನಾರ್
ಭಗವಾನ್ ಶಿವನ ಮೇಲೆ ಆಳವಾದ ಭಕ್ತಿ ಹೊಂದಿದ್ದ ಸಂತ ನಂದನಾರ್. ಚಿಕ್ಕವಯಸ್ಸಿನಲ್ಲಿಯೇ ತಂದೆ-ತಾಯಿ ಕಳೆದುಕೊಂಡು ಅನಾಥನಾಗಿದ್ದ ನಂದನಾರ್ ಜೀತ ಮಾಡಿಕೊಂಡಿದ್ದರು. ಶಿವನ ಸ್ತೋತ್ರಗಳನ್ನು ಹಾಡುತ್ತಾ ಬೆಳೆದರು. ಜಮೀನ್ದಾರರ ಬಳಿ ಜೀತಕ್ಕಿದ್ದ ನಂದನಾರ್, ಶಿವನ ದೇವಾಲಯಕ್ಕೆ ಭೇಟಿ ನೀಡುವ ಆಸೆ ವ್ಯಕ್ತಪಡಿಸಿದರು. ಆದರೆ, ಜಮೀನ್ದಾರರು ಅದಕ್ಕೆ ಅವಕಾಶ ನೀಡಲಿಲ್ಲ. ಕೆಲಸ ಮಾಡುವಂತೆ ಹೇಳುತ್ತಿದ್ದರು. ಒಮ್ಮೆ ಹೇಗೋ ಜಮೀನ್ದಾರರನ್ನು ಒಪ್ಪಿಸುವಲ್ಲಿ ನಂದನಾರ್ ಯಶಸ್ವಿಯಾದರು. ದೇವಾಲಯಕ್ಕೆ ಹೋದಾಗ, ಅಸ್ಪೃಶ್ಯ ಎಂಬ ಕಾರಣಕ್ಕೆ ಒಳಗಡೆ ಬಿಡಲಿಲ್ಲ. ಅವರ ಪ್ರವೇಶಕ್ಕೆ ನಂದಿ ವಿಗ್ರಹವೂ ಅಡ್ಡಲಾಗಿತ್ತು. ಇದರಿಂದ ದುಃಖಿತರಾದ ನಂದನಾರ್, ಶಿವನ ಕುರಿತು ಹಾಡುಗಳನ್ನು ಹೇಳಲು ಪ್ರಾರಂಭಿಸಿದರು. ಅಚ್ಚರಿ ಎಂಬಂತೆ ನಂದಿ ವಿಗ್ರಹ ದಾರಿ ಬಿಟ್ಟು ಪಕ್ಕಕ್ಕೆ ಸರಿಯಿತು. ಇದು ನೆರೆದಿದ್ದವರಿಗೆ ಅಚ್ಚರಿ ಮೂಡಿಸಿತು. ನಂದನಾರ್ ಅವರು ಶಿವ ದೇವಾಲಯ ಪ್ರವೇಶಿಸಿ ಭಕ್ತಿ ಸಮರ್ಪಿಸಿದರು.
ಮಾಣಿಕವಾಸಾಗರ
ಮಾಣಿಕವಾಸಾಗರ ಪ್ರಸಿದ್ಧ ತಮಿಳು ಕವಿ ಮತ್ತು ಸಂತ. ಶಿವನ ಕುರಿತು ಭಕ್ತಿ ಸ್ತುತಿಗೀತೆಗಳನ್ನು ರಚಿಸಿದ ಸಂತ ಇವರು. ಮಾಣಿಕವಾಸಾಗರ್ ಅವರು 9ನೇ ಶತಮಾನದವರು. ರಾಜ ಅರಿಮಾರ್ಟಾನಾ ಪಾಂಡ್ಯ ಸಾಮ್ರಾಜ್ಯದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಆದಾಗ್ಯೂ, ಆಧ್ಯಾತ್ಮಿಕ ಅನುಭವಗಳಿಂದ ಹೆಸರಾಗಿದ್ದರು. ತನ್ನ ಲೌಕಿಕ ಜೀವನವನ್ನು ತ್ಯಜಿಸಿ, ಭಗವಾನ್ ಶಿವನ ಸೇವೆಗೆ ತನ್ನನ್ನು ತಾನು ಸಮರ್ಪಿಸಿಕೊಂಡರು. ಅವರ ಕವಿತೆಗಳನ್ನು ತಮಿಳು ಶೈವ ಸಾಹಿತ್ಯದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಇದನ್ನೂ ಓದಿ: ಶಿವರಾತ್ರಿ ವಿಶೇಷ: ಹಿಂದೂಗಳ ಆದ್ಯ ತೀರ್ಥಕ್ಷೇತ್ರ – ಮಾರಿಷಸ್‌ನ ಮಂಗಲ ಮಹಾದೇವ ಶಿವಾಲಯ!
ಕಾರೈಕಲ್ ಅಮ್ಮಯ್ಯರ್
ತಮಿಳು ಶೈವ ಧರ್ಮದ ನಾಯನ್ಮಾರ್ ಸಂತರಲ್ಲಿ ಒಬ್ಬರಾದ ಕರೈಕಲ್ ಅಮ್ಮಯ್ಯರ್, ಶಿವನ ಬಗ್ಗೆ ಆಳವಾದ ಭಕ್ತಿಗೆ ಹೆಸರುವಾಸಿಯಾದ ಧರ್ಮನಿಷ್ಠ ತಪಸ್ವಿ. ಕರೈಕಲ್ (ಈಗಿನ ತಮಿಳುನಾಡು)ನಲ್ಲಿ ಜನಿಸಿದ ಅವರ ಮೂಲ ಹೆಸರು ಪುನೀತಾವತಿ. ಶ್ರೀಮಂತ ವ್ಯಾಪಾರಿಯ ಮಗಳು ಪುನಿತಾವತಿ, ಪರಮದತ್ತನನ್ನು ಮದುವೆಯಾಗುತ್ತಾಳೆ. ಒಮ್ಮೆ ಪರಮದತ್ತನು ಶಿವಭಕ್ತನಿಂದ ಎರಡು ಮಾವಿನ ಹಣ್ಣುಗಳನ್ನು ಪಡೆದು ಮನೆಗೆ ಕಳುಹಿಸಿದನು. ಭಗವಾನ್ ಶಿವನು ಬೇರೆ ರೂಪತಾಳಿ ಭಿಕ್ಷೆ ಬೇಡಲು ಬಂದಾಗ, ಪುನಿತಾವತಿ ಆ ಮಾವಿನ ಹಣ್ಣುಗಳಲ್ಲಿ ಒಂದನ್ನು ಕೊಟ್ಟಳು.
ನಂತರ, ಊಟಕ್ಕೆ ಬಂದ ಪತಿ ಪರಮದತ್ತನಿಗೆ ಪುನೀತಾವತಿ ಉಳಿದಿದ್ದ ಒಂದು ಮಾವಿನಹಣ್ಣನ್ನು ಬಡಿಸುತ್ತಾಳೆ. ಪರಮದತ್ತನು, ಮಾವು ತುಂಬಾ ಸಿಹಿಯಾಗಿದೆ. ಇನ್ನೊಂದು ಕೊಡು ಎಂದು ಕೇಳುತ್ತಾನೆ. ಪುನೀತಾವತಿ ಪತಿಯನ್ನು ನಿರಾಸೆಗೊಳಿಸಬಾರದೆಂದು ಶಿವನನ್ನು ಪ್ರಾರ್ಥಿಸುತ್ತಾಳೆ. ಒಂದು ಮಾವಿನಹಣ್ಣಿನ ಕೈಗೆ ಬಂದು ಬೀಳುತ್ತದೆ. ಅದನ್ನು ಪತಿಗೆ ಬಡಿಸುತ್ತಾಳೆ. ಪರಮದತ್ತನು, ಈ ಮಾವು ಕೂಡ ಸಿಹಿಯಾಗಿದೆ ಎಂದು ಹೇಳಿದಾಗ, ಪತಿಗೆ ಸತ್ಯವನ್ನು ಹೇಳುತ್ತಾಳೆ. ಇದನ್ನು ನಂಬದ ಪತಿ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾನೆ. ಆಗ ಪತಿಯ ಎದುರೇ ತನ್ನ ಪವಾಡವನ್ನು ಪುನೀತಾವತಿ ಸಾಭೀತುಪಡಿಸುತ್ತಾಳೆ. ಇದರಿಂದ ಆಶ್ಚರ್ಯಗೊಂಡ ಪರಮದತ್ತ, ನೀನು ದೈವಿಕ ಅಂಶದವಳು. ನಿನ್ನ ಜೊತೆ ಬಾಳುವ ಅರ್ಹತೆ ನನಗಿಲ್ಲ ಎಂದು ಮನೆಬಿಟ್ಟು ಹೊರಟು ಹೋಗುತ್ತಾನೆ. ವಾಪಸ್ ಬರದೇ ಪಾಂಡ್ಯ ಸಾಮ್ರಾಜ್ಯದಲ್ಲಿ ಹೊಸ ಕುಟುಂಬದೊಂದಿಗೆ ಜೀವನ ಸಾಗಿಸುತ್ತಾನೆ. ವರ್ಷಗಳ ನಂತರ ಈ ವಿಚಾರವನ್ನು ಅರಿತ ಪುನೀತಾವತಿ, ಹೊಸ ದಂಪತಿಗಳಿಗೆ ಆಶೀರ್ವಾದ ಮಾಡುತ್ತಾರೆ. ಕೊನೆಗೆ ಲೌಕಿಕ ಜೀವನವನ್ನು ತ್ಯಜಿಸಿ ತನ್ನನ್ನು ತಾನು ಶಿವಭಕ್ತಿಯಲ್ಲಿ ಸಮರ್ಪಿಸಿಕೊಳ್ಳುತ್ತಾಳೆ. ಭಕ್ತಿ ಸ್ತುತಿಗಳನ್ನು ರಚಿಸುತ್ತಾಳೆ. ಶಿವನ ವಾಸಸ್ಥಾನವಾದ ಕೈಲಾಸ ಪರ್ವತಕ್ಕೆ ತೀರ್ಥಯಾತ್ರೆಗೆ ಹೋಗುತ್ತಾಳೆ. ಪುನೀತಾವತಿಯ ಸಮರ್ಪಣೆಯಿಂದ ಸಂತಸಗೊಂಡ ಭಗವಂತ ಆಕೆಯನ್ನು “ಅಮ್ಮೈಯೆ” (ಅಂದರೆ ತಾಯಿ) ಎಂದು ಕರೆಯುತ್ತಾರೆ.
ಭಗವಾನ್ ಶಿವನ ಭಕ್ತರ ಈ ಕಥೆಗಳು ಶುದ್ಧ ಭಕ್ತಿ ಮತ್ತು ಅಚಲ ನಂಬಿಕೆಯು ಎಲ್ಲಾ ಮಿತಿಗಳನ್ನು ಮೀರಿದೆ. ದೇವರಿಂದ ಮಿತಿಯಿಲ್ಲದ ಅನುಗ್ರಹವನ್ನು ಭಕ್ತರು ಗಳಿಸುತ್ತಾರೆಂಬುದಕ್ಕೆ ಈ ಕಥೆಗಳು ನಿದರ್ಶನ. ನಿಜವಾದ ಆಧ್ಯಾತ್ಮಿಕ ಪ್ರೀತಿಯ ಮತ್ತು ಭಕ್ತಿ ಸಮರ್ಪಣೆಯ ಹಾದಿಯಲ್ಲಿ ನಡೆಯಲು ಅವರು ಪ್ರೇರಕ ಶಕ್ತಿಯಾಗಿದ್ದಾರೆ. ಇದನ್ನೂ ಓದಿ: ಮಹಾ ಶಿವರಾತ್ರಿ: ಆಡಂಬರವಿಲ್ಲ, ಅಲಂಕಾರ ಪ್ರಿಯನಲ್ಲ.. ಭಕ್ತಿಯಿಂದ ಭಜಿಸಿ ಶಿವನ
ಬೆಂಗಳೂರು: ನಾಡಿನೆಲ್ಲೆಡೆ ಮಹಾಶಿವರಾತ್ರಿ (Mahashivratri) ಹಬ್ಬ ಈ ಹಬ್ಬದ ಪ್ರಯುಕ್ತ ಮಹಾಶಿವನ ಆರಾಧನೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ಬೆಂಗಳೂರು ಹೊರವಲಯ ನೆಲಮಂಗಲ (Nelamangala) ಸಮೀಪದ ಹಾವಾರ್ಡ್ ಶಾಲೆಯಲ್ಲಿ ಶಿವರಾತ್ರಿ ಆಚರಣೆ ಮಾಡಲಾಯಿತು. ಸನಾತನ ಧರ್ಮದಲ್ಲಿ ಗೋ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮಕ್ಕಳು ಚಾಲನೆ ನೀಡಿದರು.
ಮಕ್ಕಳಿಗೆ ಶಿವ ಪಾರ್ವತಿ (Shiva Parvathi) ಸೇರಿದಂತೆ ವಿವಿಧ ವೇಷ ಭೂಷಣ ಧರಿಸಿ ಮಹಾಶಿವನ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಆವರಣದಲ್ಲಿ ಶಿವಲಿಂಗ ಮೂರ್ತಿಯನ್ನ ಪ್ರತಿಷ್ಠಾಪಿಸಿ ವಿಶೇಷವಾಗಿ ಶಾಲೆಯ ಪ್ರತಿ ಮಕ್ಕಳಿಂದ ಹಾಲಿನ ಅಭಿಷೇಕ ಮಾಡಿಸಿ ಶಿವನ ಕೃಪೆ ಮಕ್ಕಳು ಮತ್ತು ಪೋಷಕರು ಪಾತ್ರರಾದರು. ಇದನ್ನೂ ಓದಿ: Maha Shivaratri| ನಾಗ ಸಾಧುಗಳು ಶಿವನನ್ನು ಪೂಜಿಸೋದು ಯಾಕೆ?
ಮಕ್ಕಳಿಗೆ ಇತಿಹಾಸ ಹಾಗೂ ಧರ್ಮದ, ಹಬ್ಬದ ಆಚರಣೆಗಳು ಬಗ್ಗೆ ಈ ವರ್ಷವೂ ಕೂಡ ಮಹಾ ಶಿವರಾತ್ರಿ ಆರಾಧನೆ ಮಾಡಲಾಯಿತು. ಮಕ್ಕಳು ಶಿವ ಪಾರ್ವತಿ, ಋಷಿ ಮುನಿಗಳು ವೇಷ ಧರಿಸಿ ಹಬ್ಬವನ್ನು ಸಂಭ್ರಮಿಸಿದರು.
‘ನಾಗ’ ಎಂಬ ಪದವು ಪ್ರಾಚೀನ ಕಾಲದಲ್ಲಿ ಭಾರತದ ಕಾಡುಗಳು ಮತ್ತು ಬೆಟ್ಟಗಳಲ್ಲಿ ಅಲೆದಾಡುತ್ತಿದ್ದ ಹಾವಿನ ಆರಾಧಕರ ಪ್ರಾಚೀನ ಬುಡಕಟ್ಟು ಜನಾಂಗವನ್ನು ಸೂಚಿಸುತ್ತದೆ. ನಾಗ ಸಾಧುಗಳು (Naga sadhu) ಶಿವನೇ (Shiva) ದೇವರೆಂದು ನಂಬುತ್ತಾರೆ. ಶಿವನು ಆಧ್ಯಾತ್ಮಿಕ ನಿರ್ಲಿಪ್ತತೆಯ ಸಾಕಾರ ಮತ್ತು ಹಿಂದೂ ಧರ್ಮದ ಪ್ರಬಲ ರಕ್ಷಕ ಎಂದು ನಾಗ ಜನರು ಭಾವಿಸುತ್ತಾರೆ.
ನಾಗ ಜನರು ಶಿವನನ್ನು ಯಾಕೆ ಆರಾಧಿಸುತ್ತಾರೆ ಎನ್ನುವುದಕ್ಕೂ ಕಥೆಯಿದೆ. ದುರ್ವಾಸರ ಶಾಪದಿಂದ ಸ್ವರ್ಗದ ಸುವಸ್ತಗಳು ಸಮುದ್ರದಲ್ಲಿ ಮುಳುಗಿಹೋದವು. ಅದನ್ನೆಲ್ಲ ಹೊರ ತೆಗೆಯಲು ಸಮುದ್ರ ಮಥನ ಮಾಡಬೇಕಾಯಿತು. ಆಗ ತ್ರಿಮೂರ್ತಿಗಳ ಸೂಚನೆಯಂತೆ ಮಂದರಪರ್ವತವನ್ನೇ ಕಡೆಗೋಲನ್ನಾಗಿಸಿ ಕಡೆಯಲು ಉದ್ದೇಶಿಸಲಾಯಿತು. ಅದಕ್ಕೆ ಸುತ್ತು ಬರುವಷ್ಟು ಉದ್ದದ ಹಗ್ಗಕ್ಕೆ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದಾಗ ಸರ್ಪರಾಜ ವಾಸುಕಿ ತಾನೇ ಹಗ್ಗವಾಗುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ. ಆತನನ್ನು ಮಂದರ ಪರ್ವತಕ್ಕೆ ಸುತ್ತಿ ಮಥಿಸಲಾಯಿತು. ಆಗ ಮೊದಲಿಗೆ ಹಾಲಾಹಲ ವಿಷ ಉಕ್ಕಿಬಂತು. ಅದು ದೇವತೆಗಳನ್ನು ಸುಡಲಾರಂಭಿಸಿದಾಗ ಕೋಲಾಹಲ ಉಂಟಾಯಿತು.
ದೇವತೆಗಳನ್ನು ಕಾಪಾಡಲು ಶಿವನೇ ಅದನ್ನು ಹೀರಿ ಗಂಟಲಲ್ಲಿ ಇಟ್ಟುಕೊಂಡ. ಹಾಗೆ ನೀಲಕಂಠನಾದ. ಆದರೆ ಇನ್ನೂ ಸಾಕಷ್ಟು ವಿಷ ಉಳಿಯಿತು. ಆಗ ವಾಸುಕಿ ಮತ್ತು ಆತನ ಸಹಚರ ಸರ್ಪಗಳು ಸೇರಿ ಸೇವಿಸಿ ಹಲ್ಲುಗಳಲ್ಲಿ ಇಟ್ಟುಕೊಂಡು ದೇವತೆಗಳನ್ನು ಕಾಪಾಡಿದವು. ವಾಸುಕಿಯ ಈ ಸೇವೆಯಿಂದ ಪುನೀತನಾದ ಶಿವ ಆತನನ್ನು ತನ್ನ ಕೊರಳ ಸುತ್ತ ಕಂಠಾಭರಣವಾಗಿ ಧರಿಸಿ ಶಾಶ್ವತ ಸ್ಥಾನ ನೀಡಿದ. ನಾಗಗಳ ರಾಜನಾದ ವಾಸುಕಿಗೆ ತನ್ನ ಕೊರಳಿನಲ್ಲಿ ಸ್ಥಾನ ನೀಡಿದ್ದಕ್ಕೆ ನಾಗಗಳು ಈಗಲೂ ಶಿವನನ್ನೇ ದೇವರೆಂದು ಭಾವಿಸಿ ಪೂಜೆ ಮಾಡುತ್ತಾರೆ.
ಶೈವ ಸಂಪ್ರದಾಯದ ಕಟ್ಟಾ ಅನುಯಾಯಿಗಳಾಗಿರುವ ಇವರು ಶಿವಲಿಂಗಕ್ಕೆ ಬಿಲ್ವ ಪತ್ರೆ, ಬೂದಿ ಮತ್ತು ನೀರನ್ನು ಅರ್ಪಿಸುವ ಮೂಲಕ ಪೂಜಿಸುತ್ತಾರೆ. ನಾಗಾ ಸಾಧುಗಳ ಸಂಪ್ರದಾಯದಲ್ಲಿ ಬೆಂಕಿ ಮತ್ತು ಬೂದಿ ಪ್ರಮುಖ ಪಾತ್ರ ವಹಿಸುತ್ತದೆ. ಶಿವನನ್ನು ಒಲಿಸಿಕೊಳ್ಳಲು ಯೋಗ, ಧ್ಯಾನ ಮಾಡುತ್ತಾರೆ. ಇದನ್ನೂ ಓದಿ: ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ದಕ್ಷಿಣ ಕರ್ನಾಟಕದ ಪುರಾಣ ಪ್ರಸಿದ್ಧ ದೇವಾಲಯಗಳು
ಒಂದು ಬಾರಿ ಮಾತ್ರ ಊಟ ಸೇವಿಸುವ ಇವರು ಭಿಕ್ಷೆ ಬೇಡುವ ಮೂಲಕ ತಮ್ಮ ಆಹಾರವನ್ನು ಪಡೆಯುತ್ತಾರೆ. ಒಂದು ದಿನದಲ್ಲಿ ಅವರು ಕೇವಲ ಏಳು ಮನೆಗಳಿಂದಷ್ಟೇ ಭಿಕ್ಷೆ ಸಂಗ್ರಹಿಸುವ ಕಠಿಣ ನಿಯಮ ಪಾಲಿಸುತ್ತಾರೆ. ಒಂದು ವೇಳೆ ಏಳು ಮನೆಯಲ್ಲಿ ಆಹಾರ ಸಿಗದೇ ಇದ್ದರೆ ಆ ದಿನ ಅವರು ಉಪವಾಸ ಇರುತ್ತಾರೆ. ಯಾವುದೇ ಕುಂಭ ಮೇಳ ಇರಲಿ ಮೊದಲು ಸ್ನಾನ ಮಾಡುವವರು ಈ ನಾಗ ಸಾಧುಗಳು. ಕುಂಭ ಹಬ್ಬದ ಸಮಯದಲ್ಲಿಯೂ ಸಹ ಹಲವಾರು ಜನರು ನಾಗಾ ಸಾಧುಗಳ ಆಶೀರ್ವಾದ ಪಡೆಯಲು ಅವರ ಅಖಾಡಗಳಿಗೆ ಭೇಟಿ ನೀಡುತ್ತಾರೆ.
ನಾಗಾ ಸಾಧು ಆಗಲು ಬಹಳ ಕಷ್ಟಕರವಾದ ಪರೀಕ್ಷೆಗಳಿಗೆ ಒಳಗಾಗಬೇಕು ಮತ್ತು ಕಷ್ಟಕರವಾದ ತಪಸ್ಸನ್ನು ಅಭ್ಯಾಸ ಮಾಡಬೇಕಾಗುತ್ತದೆ. ನಾಗಾ ಸಾಧು ಆಗಲು ಸುಮಾರು 12 ವರ್ಷ ಅಖಾಡಗಳಲ್ಲಿಯೇ ಇರುತ್ತಾರೆ ಮತ್ತು ಸನ್ಯಾಸಿಯಾಗಲು ಅಖಾಡಗಳ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಗುರುಗಳ ಬೋಧನೆಗಳನ್ನು ಸರಿಯಾದ ರೀತಿಯಲ್ಲಿ ಪಡೆದಾಗ ನಾಗ ಸಾಧುವಾಗುವ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ನಾಗ ಸಾಧುವಾದ ಬಳಿಕ ಅಖಾಡದ ಯಾವುದಾದರೂ ವಿಭಾಗದ ಮುಖ್ಯಸ್ಥರಾಗುತ್ತಾರೆ ಅಥವಾ ಅಖಾಡದಲ್ಲಿಯೇ ಯಾವುದೇ ದೊಡ್ಡ ವಿದ್ವಾಂಸರಾಗುತ್ತಾರೆ.
ನಾಗಾ ಸಾಧುಗಳು ಸಾಮಾನ್ಯವಾಗಿ ಬೆತ್ತಲೆಯಾಗಿ ಸುತ್ತಾಡುತ್ತಾರೆ. ಕುಂಭಮೇಳದಲ್ಲಿ (Kumbh Mela) ಭಾಗವಹಿಸಿದ ನಂತರ ಹಿಮಾಲಯಕ್ಕೆ ತೆರಳುತ್ತಾರೆ. ಭಾರತದಲ್ಲಿ ಮಹಾಕುಂಭ ಹಬ್ಬದ ಸಮಯದಲ್ಲಿ ಪವಿತ್ರ ಸ್ನಾನದಲ್ಲಿ ಭಾಗವಹಿಸಲು ನಾಗ ಸಾಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಪ್ರಯಾಗ್‌ರಾಜ್: 144 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbh Mela) ನಾಳೆ ತೆರೆಬೀಳಲಿದೆ. ನಾಳೆ ಶಿವರಾತ್ರಿ ಹಿನ್ನೆಲೆ ಕೊನೆಯ ಪುಣ್ಯಸ್ನಾನಕ್ಕೆ ಸ್ಥಳೀಯ ಆಡಳಿತ ತಯಾರಿ ನಡೆಸುತ್ತಿದೆ.
ಕೊನೆಯ ಪುಣ್ಯಸ್ನಾನದ ಹಿನ್ನೆಲೆ ತ್ರಿವೇಣಿ ಸಂಗಮವನ್ನು ನೋ ವೆಹಿಕಲ್ ಝೋನ್ ಎಂದು ಘೋಷಿಸಲಾಗಿದೆ. ಇಂದು ಮತ್ತು ನಾಳೆ ಖಾಸಗಿ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಸ್ಥಳೀಯ ಆಡಳಿತ ಮತ್ತು ವೈದ್ಯಕೀಯ ತುರ್ತು ಸೇವೆಗಳ ವಾಹನಗಳಿಗೆ ಮಾತ್ರ ಪ್ರವೇಶವಿರುವುದು ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಇದನ್ನೂ ಓದಿ: Exclusive| ಬೆಳಗಾವಿ ಕಂಡಕ್ಟರ್ ಮೇಲೆ ದಾಖಲಿಸಿದ್ದ ಪೋಕ್ಸೋ ಕೇಸ್ ಹಿಂಪಡೆದ ದೂರುದಾರೆ
ಈವರೆಗೂ 63 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನ ಮಾಡಿದ್ದು, ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ವಿಶ್ವದಾದ್ಯಂತ ಕೋಟ್ಯಂತರ ಭಕ್ತರು ಭೇಟಿ ನೀಡಿದ್ದಾರೆ. ವಿಶ್ವವಿಖ್ಯಾತ ಮಹಾ ಕುಂಭಮೇಳ ಫೆ.26 ರಂದು ಅಂತ್ಯಗೊಳ್ಳಲಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಕೋರ್ಟ್‌ಗೆ ಹಾಜರಾಗಲಿರುವ ದರ್ಶನ್ & ಗ್ಯಾಂಗ್
ಚೆನೈ: ತಮಿಳುನಾಡಿನ (Tamil Nadu) ದೇವಸ್ಥಾನ ಒಂದರಲ್ಲಿ ಒಂದು ನಿಂಬೆ ಹಣ್ಣು 35,000 ರೂ.ಗೆ ಹರಾಜಾಗಿದೆ ಎಂದು ವರದಿಯಾಗಿದೆ.
ಶಿವಗಿರಿ ಗ್ರಾಮದ ಬಳಿ ಇರುವ ಪಜಪೂಸಯ್ಯನ ದೇವಸ್ಥಾನದಲ್ಲಿ ಮಹಾಶಿವರಾತ್ರಿ (Mahasivarathiri) ಉತ್ಸವದ ದಿನ ಶಿವನಿಗೆ ಅರ್ಪಿಸಿದ ನಿಂಬೆಹಣ್ಣು ಮತ್ತು ಹಣ್ಣುಗಳು ಸೇರಿದಂತೆ ಇತರ ವಸ್ತುಗಳನ್ನು ಹರಾಜು ಮಾಡಲಾಯಿತು. ಹರಾಜಿನಲ್ಲಿ ಸುಮಾರು 15 ಭಕ್ತರು ಭಾಗವಹಿಸಿದ್ದರು. ಈರೋಡ್‍ನ ಭಕ್ತರೊಬ್ಬರು ನಿಂಬೆ ಹಣ್ಣನ್ನು 35,000 ರೂ.ಗೆ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ಗ್ಯಾರಂಟಿಗೆ ವಾರಂಟಿ ಇಲ್ಲ: ಟಿಎಂಸಿ ನಾಯಕ ಟೀಕೆ
ದೇವಸ್ಥಾನದ ಅರ್ಚಕರು ನಿಂಬೆಹಣ್ಣನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿ, ನೂರಾರು ಭಕ್ತರ ಸಮ್ಮುಖದಲ್ಲಿ ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಮಾಡಿದ ವ್ಯಕ್ತಿಗೆ ನೀಡಿದ್ದಾರೆ.
ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ‘ಕಣ್ಣಪ್ಪ (Kannappa); ದಿ ಗ್ರೇಟ್ ಎಪಿಕ್ ಇಂಡಿಯನ್ ಟೇಲ್’ ಸಿನಿಮಾ ಘೋಷಣೆ ಆದಾಗಿನಿಂದ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಲೇ ಇದೆ. ವಿಷ್ಣು ಮಂಚು ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಬಹುತಾರಾಗಣವೂ ಚಿತ್ರದ ಹೈಲೈಟ್. ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ‘ಕಣ್ಣಪ್ಪ’ ಸಿನಿಮಾದ ಫಸ್ಟ್ ಲುಕ್ (First Look) ಈಗಾಗಲೇ ಕುತೂಹಲ ಮೂಡಿಸಿತ್ತು. ಈಗ ಮಹಾಶಿವರಾತ್ರಿ (Mahashivaratri) ಹಬ್ಬದ ಪ್ರಯುಕ್ತ ಮತ್ತೊಂದು ಹೊಸ ಲುಕ್ ಹೊರತಂದಿದೆ ಚಿತ್ರತಂಡ.
ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ತಮ್ಮ ಲುಕ್ ಮೂಲಕವೇ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ಮಿಂಚು ಹರಿಸಿದ್ದಾರೆ. ಬೆರಗುಗೊಳಿಸುವ ದೃಶ್ಯದಲ್ಲಿ, ಬಿಲ್ಲು ಮತ್ತು ಬಾಣದೊಂದಿಗೆ ಕಣ್ಣಪ್ಪನಾಗಿ ವಿಷ್ಣು ಮಂಚು (Vishnu Manchu)ಎದುರಾಗಿದ್ದಾರೆ. ಜಲಪಾತದಿಂದ ಹೊರಹೊಮ್ಮುತ್ತ, ಇಟ್ಟ ಗುರಿಯತ್ತ ಬಾಣ ನೆಟ್ಟಿದ್ದಾನೆ ಕಣ್ಣಪ್ಪ. ಭಕ್ತಿಪ್ರಧಾನದ ಜತೆಗೆ ಆಕ್ಷನ್- ಪ್ಯಾಕ್ಡ್ ಸೀಕ್ವೆನ್ಸ್‌ಗಳೂ ಚಿತ್ರದಲ್ಲಿ ಭರ್ಜರಿಯಾಗಿ ಇರಲಿದೆ ಎಂಬುದನ್ನು ಸದ್ಯದ ಕಿರು ಝಲಕ್‌ನಲ್ಲಿ ಕಾಣಬಹುದಾಗಿದೆ.
24 ಫ್ರೇಮ್ಸ್ ಫ್ಯಾಕ್ಟರಿ ಮತ್ತು AVA ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿವೆ. ಬಿಗ್ ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಬಹುತೇಕ ವಿದೇಶದಲ್ಲಿಯೇ ಶೂಟಿಂಗ್ ಮಾಡಿಕೊಳ್ಳುತ್ತಿದೆ. ನ್ಯೂಜಿಲೆಂಡ್‌ನ ಸುಂದರ ವಾತಾವರಣದಲ್ಲಿ ಭರ್ಜರಿಯಾಗಿಯೇ ಈ ಚಿತ್ರದ ಎರಡನೇ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ. ಈ ಶೂಟಿಂಗ್‌ಲ್ಲಿ 600 ಮಂದಿ ಭಾಗವಹಿಸಿದ್ದು ವಿಶೇಷ. ಈಗ ಇದೇ ಕಣ್ಣಪ್ಪ ತಂಡದಿಂದ ಶಿವರಾತ್ರಿಗೆ ಬಿಗ್ ಸರ್ಪ್ರೈಸ್ ಹೊರಬಂದಿದೆ.
ಟಾಲಿವುಡ್‌ನಲ್ಲಿ ನಟ ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ; ದಿ ಗ್ರೇಟ್ ಎಪಿಕ್ ಇಂಡಿಯನ್ ಟೇಲ್’ ಕುರಿತು ಈಗಾಗಲೇ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ ತಾರಾಗಣದ ವಿಚಾರವಾಗಿಯೂ ಈ ಸಿನಿಮಾ ಸದ್ದು ಮಾಡುತ್ತಿದೆ. ಸದ್ಯ ಟಾಲಿವುಡ್‌ನ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಮೋಹನ್ ಲಾಲ್ ಮತ್ತು ಸ್ಯಾಂಡಲ್‌ವುಡ್‌ನ ಶಿವರಾಜಕುಮಾರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ಮೋಹನ್ ಬಾಬು, ಶರತ್ ಕುಮಾರ್, ಬ್ರಹ್ಮಾನಂದಂ ಸಹ ಈ ಸಿನಿಮಾದಲ್ಲಿರಲಿದ್ದಾರೆ.
ಈ ಸಿನಿಮಾ ಮೂಡಿಬರುತ್ತಿರುವ ರೀತಿಗೆ ಸ್ವತಃ ವಿಷ್ಣು ಮಂಚು ಥ್ರಿಲ್ ಆಗಿದ್ದಾರೆ. “ಕಣ್ಣಪ್ಪ ಸಿನಿಮಾ ಚಿತ್ರೀಕರಣ ಕೆಲಸಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ. ಒಳ್ಳೆಯ ತಂಡದ ಜತೆಗೆ ನಿರೀಕ್ಷೆಗೂ ಮೀರಿ ಚಿತ್ರ ಮೂಡಿಬರುತ್ತಿರುವುದು ಖುಷಿ ನೀಡಿದೆ. ಕಣ್ಣಪ್ಪ ಇಲ್ಲಿ ಒಬ್ಬ ಶಿವನ ಭಕ್ತನಾಗಿ ಮಾತ್ರವಲ್ಲ, ಒಬ್ಬ ಯೋಧನಂತೆಯೂ ಕಾಣಿಸಲಿದ್ದಾನೆ. ಈ ಚಿತ್ರದ ಝಲಕ್ ಹೇಗಿರಲಿದೆ ಎಂಬುದನ್ನು ನಿಮ್ಮ ಮುಂದಿಡಲು ತುಂಬ ಉತ್ಸುಕನಾಗಿದ್ದೇನೆ” ಎಂದಿದ್ದಾರೆ ವಿಷ್ಣು ಮಂಚು.
ಹಬ್ಬಗಳು ಬಂದರೆ ಸಾಕು ಮನೆಯಲ್ಲಿ ಸಿಹಿಯಾದ ಅಡುಗೆ, ದೇವರಿಗೆ ನೈವೇದ್ಯ ಮಾಡಬೇಕಾಗುತ್ತದೆ. ಇಂದು ಮಹಾಶಿವರಾತ್ರಿ (Maha Shivaratri), ಈ ದಿನ ರಾತ್ರಿಯಿಡೀ ಶಿವನಾಮ ಸ್ಮರಣೆ ಮಾಡಿ ಜಾಗರಣೆ ಮಾಡುತ್ತೀರಿ. ಶಿವನಿಗೆ ಪ್ರಿಯವಾದ ನೈವೇದ್ಯ ಎಂದರೆ ಅದು ತಂಬಿಟ್ಟು. ದೇವರಿಗೆ ನೈವೇದ್ಯ ಮಾಡಿಲ್ಲ ಅಂದರೆ ಶಿವರಾತ್ರಿ ಪೂರ್ಣವೇ ಆಗಲ್ಲ. ಹೀಗಾಗಿ ಮನೆಯಲ್ಲೆ ಸುಲಭ ರೀತಿಯಲ್ಲಿ ತಂಬಿಟ್ಟು (Tambittu) ಮಾಡುವ ವಿಧಾನ ನಿಮಗಾಗಿ.
ಬೇಕಾಗುವ ಸಾಮಾಗ್ರಿಗಳು
ಅಕ್ಕಿ – ಅರ್ಧ ಕೆಜಿ
ಎಳ್ಳು – 5-6 ಚಮಚ
ಕಡ್ಲೆಕಾಯಿ ಬೀಜ – 50 ಗ್ರಾಂ
ಹುರಿಗಡಲೆ – 50 ಗ್ರಾಂ
ಬೆಲ್ಲ – 1 ಅಚ್ಚು
ಕೊಬ್ಬರಿ ತುರಿ – 1 ಬಟ್ಟಲು
ಏಲಕ್ಕಿ – 2 ಇದನ್ನೂ ಓದಿ: ವಿಶೇಷ ದಿನಗಳಿಗಾಗಿ ಸಿಹಿ ಸಿಹಿ ಮಲಾಯಿ ಲಡ್ಡು ರೆಸಿಪಿ
ಮಾಡುವ ವಿಧಾನ
* ಒಂದು ಪ್ಯಾನ್‍ಗೆ ಅಕ್ಕಿ ಹಾಕಿ ಹುರಿದುಕೊಳ್ಳಿ. ತಣ್ಣಗಾದ ಮೇಲೆ ಬಳಿಕ ಮಿಕ್ಸರ್ ಜಾರ್ ಗೆ ಹಾಕಿ ಪುಡಿ ಮಾಡಿಕೊಳ್ಳಿ.
* ಅದೇ ಪ್ಯಾನ್‍ಗೆ ಕಡ್ಲೆಕಾಯಿ ಬೀಜ ಹಾಕಿ ಹುರಿದು ಸಿಪ್ಪೆ ತೆಗೆದು ಇಟ್ಟುಕೊಳ್ಳಿ.
* ಪ್ಯಾನ್‍ಗೆ ಎಳ್ಳು ಹಾಕಿ ಬೆಚ್ಚಗೆ ಮಾಡಿ.
* ಈಗ ಒಂದು ಮಿಕ್ಸರ್ ಜಾರ್ ಗೆ ಹುರಿಗಡಲೆ, ಕಡ್ಲೆಕಾಯಿ ಬೀಜ, ಏಲಕ್ಕಿ ಹಾಕಿ ತರಿತರಿ ರುಬ್ಬಿಕೊಳ್ಳಿ.
* ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಬೆಲ್ಲ ಹಾಕಿ ಒಂದೆಳೆ ಪಾಕ ಮಾಡಿಕೊಳ್ಳಿ.
* ಈ ಕಡೆ ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದಕ್ಕೆ ಪುಡಿ ಮಾಡಿದ ಅಕ್ಕಿ, ಹುರಿದ ಎಳ್ಳು, ಕೊಬ್ಬರಿ ತುರಿ, ಪುಡಿ ಮಾಡಿದ ಹುರಿಗಡಲೆ, ಕಡ್ಲೆಕಾಯಿಬೀಜ, ಏಲಕ್ಕಿ ಹಾಕಿ.
* ಇದಕ್ಕೆ ಒಂದೆಳೆ ಪಾಕವನ್ನು ಬಿಸಿಯಾಗಿರುವಾಗಲೇ ಸೇರಿಸಿ ಕಲಸಿ ಉಂಡೆ ಕಟ್ಟಿ.
* ಪಾಕ ಬಿಸಿ ಇರುವಾಗಲೇ ಉಂಡೆ ಕಟ್ಟಬೇಕು. ಇಲ್ಲವಾದಲ್ಲಿ ಉಂಡೆ ಒಡೆದು ಹೋಗುತ್ತದೆ. ಇದನ್ನೂ ಓದಿ: ಗೋಕಾಕ್‌ನ ಫೇಮಸ್ ಕರದಂಟು ಸವಿದಿದ್ದೀರಾ?
ಶಿವರಾತ್ರಿ (Shivratri) ದಿನ ಹೂವುಗಳಿಗೆ ಬಹಳ ಬೇಡಿಕೆ ಇರುತ್ತದೆ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಹೂವಿನಿಂದ (Flowers) ಶಿವನನ್ನು (Shiva) ಅಲಂಕರಿಸಲಾಗುತ್ತದೆ. ಆದರೆ ಹೂವಿನ ಅಲಂಕಾರ ಸೇವೆಯಲ್ಲಿ ಕೇದಗೆ ಹೂವಿಗೆ (Kedige Flower) ಅವಕಾಶವಿಲ್ಲ
ಹೌದು. ಶಿವರಾತ್ರಿ ದಿನ ಕೇದಗೆ ಹೂವಿನ ಬಳಕೆಗೆ ನಿಷೇಧವಿದೆ. ನಿಷೇಧ ಯಾಕೆಂದರೆ ಅದಕ್ಕೂ ಒಂದು ಪುರಾಣ ಕಥೆಯಿದೆ.
ಕಥೆ ಏನು?
ಒಂದು ದಿನ ಕ್ಷೀರಸಾಗರದಲ್ಲಿ ಲಕ್ಷ್ಮಿಯಿಂದ ವಿಷ್ಣು (Vishnu) ಕಾಲನ್ನು ಒತ್ತಿಸಿಕೊಳ್ಳುತ್ತಿದ್ದ. ಈ ಸಮಯದಲ್ಲಿ ಬ್ರಹ್ಮ (Brahma) ಆಕಸ್ಮಿಕವಾಗಿ ಅಲ್ಲಿಗೆ ಆಗಮಿಸಿದ. ಸೃಷ್ಟಿಕರ್ತನಾದ ನಾನು ಬಂದರೂ ಸ್ವಾಗತ, ಗೌರವ ನೀಡದ್ದಕ್ಕೆ ಬ್ರಹ್ಮನಿಗೆ ಸಿಟ್ಟು ಬಂದು ಆಕ್ಷೇಪಿಸಿದ. ಇದಕ್ಕೆ ವಿಷ್ಣು ನನ್ನ ಹೊಕ್ಕುಳದಿಂದಲೇ ಹುಟ್ಟಿದ ನಿನಗೆ ಯಾಕೆ ನಾನು ಗೌರವ ಕೊಡಬೇಕು ಎಂದು ಮರು ಪ್ರಶ್ನೆಹಾಕಿದ.
ಆರಂಭದಲ್ಲಿ ತೆಗಳಿಕೆಯಿಂದ ಆರಂಭವಾದ ಮಾತು ನಂತರ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎಂಬ ವಿಚಾರಕ್ಕೆ ತಿರುಗಿತು. ಸೃಷ್ಟಿ ಮತ್ತು ಸ್ಥಿತಿಯ ಜವಾಬ್ದಾರಿ ಹೊತ್ತ ಇಬ್ಬರು ನಿರಂತರವಾಗಿ ವಾದ ಮಾಡುತ್ತಿದ್ದರೆ ವ್ಯವಸ್ಥೆ ಅಸ್ತವ್ಯಸ್ತವಾಗಬಹುದು ಎಂಬದುನ್ನು ಅರಿತ ದೇವತೆಗಳು ಇಬ್ಬರನ್ನೂ ಸಮಾಧಾನ ಮಾಡಲು ಮುಂದಾಗುತ್ತಾರೆ. ಇದನ್ನೂ ಓದಿ: Shivaratri Speical: ಶಿವಭಕ್ತಿಗೆ ಒಲಿದ ಆಸ್ಟ್ರೇಲಿಯಾ – ಮುಕ್ತಿ ಗುಹೇಶ್ವರ ದೇವಾಲಯದಲ್ಲಿ ಹಲವು ವಿಶೇಷ!
ದೇವತೆಗಳ ಸಮಾಧಾನಕ್ಕೆ ಇಬ್ಬರು ಬಗ್ಗದೇ ವಾಗ್ವಾದ ಮುಂದುವರಿಸುತ್ತಲೇ ಇದ್ದರು. ಕೊನೆಗೆ ಇವರಿಬ್ಬರ ಮಧ್ಯೆ ನಡೆಯುತ್ತಿರುವ ವಾದವನ್ನು ನಿಲ್ಲಿಸುವ ಏಕೈಕ ಶಕ್ತಿ ಇರುವುದು ಶಿವನಿಗೆ ಮಾತ್ರ ಎಂದು ಭಾವಿಸಿ ದೇವತೆಗಳು ಲಯ ಕರ್ತೃನ ಮುಂದೆ ಹೋಗಿ ಮೊರೆ ಇಡುತ್ತಾರೆ.
ದೇವತೆಗಳ ಪ್ರಾರ್ಥನೆಯನ್ನು ಒಪ್ಪಿಕೊಂಡರೂ ಇಬ್ಬರ ಜಗಳ ನಿಲ್ಲಿಸುವುದು ಹೇಗೆ ಎಂದು ಶಿವ ಆಲೋಚಿಸತೊಡಗಿದ. ಕೊನೆಗೆ ವಿಷ್ಣು ಮತ್ತು ಬ್ರಹ್ಮನ ಮಧ್ಯೆ ಕಣ್ಣುಕೋರೈಸುವ ಜ್ಯೋತಿಸ್ತಂಭವಾಗಿ ನಿಂತುಬಿಟ್ಟ. ನಂತರ ಇಬ್ಬರನ್ನು ಉದ್ದೇಶಿಸಿ, ನೀವಿಬ್ಬರೂ ವಾದ ಮಾಡುತ್ತಲೇ ಇದ್ದರೆ ಯಾರು ಶ್ರೇಷ್ಠ ಎನ್ನುವುದು ತಿಳಿಯಲು ಸಾಧ್ಯವಿಲ್ಲ. ಮೂರನೇ ವ್ಯಕ್ತಿ ಮಾತ್ರ ತೀರ್ಪು ನೀಡಲು ಸಾಧ್ಯ. ಹೀಗಾಗಿ ನಿಮಗೆ ನಾನೊಂದು ಪರೀಕ್ಷೆ ಕೊಡುತ್ತೇನೆ. ಈ ಪರೀಕ್ಷೆಯಲ್ಲಿ ಯಾರು ಯಶಸ್ವಿಯಾಗುತ್ತಾರೋ ಅವರು ಶ್ರೇಷ್ಠ ಎಂದು ಹೇಳುತ್ತಾನೆ. ಈ ಪರೀಕ್ಷೆಯನ್ನು ಸ್ವೀಕರಿಸುವುದಾಗಿ ಇಬ್ಬರು ಒಪ್ಪಿಕೊಳ್ಳುತ್ತಾರೆ. ಇದನ್ನೂ ಓದಿ: ಮಹಾಶಿವರಾತ್ರಿಯಲ್ಲಿ ಜಾಗರಣೆಗಿರುವ ಮಹತ್ವವೇನು?
ಈಗಲೇ ನೀವಿಬ್ಬರೂ ಈ ಕಂಬದ ತುದಿಗಳು ಎಲ್ಲಿದೆ ಎಂದು ಪತ್ತೆ ಹಚ್ಚಿಕೊಂಡು ಬನ್ನಿ. ಯಾರು ಮೊದಲು ಪತ್ತೆ ಮಾಡುತ್ತಾರೋ ಅವರೇ ಶ್ರೇಷ್ಠರು ಎಂದು ಶಿವ ಹೇಳುತ್ತಾನೆ. ಕೂಡಲೇ ಬ್ರಹ್ಮ ಹಂಸರೂಪವನ್ನು ಧರಿಸಿ ಕಂಬದ ಮೇಲ್ತುದಿಯನ್ನು ಹುಡುಕಲು ಹೊರಟರೆ ವಿಷ್ಣು ಹಂದಿಯ ರೂಪ ಧರಿಸಿ ಕೆಳಭಾಗವನ್ನು ತಲುಪಲು ಹೋಗುತ್ತಾನೆ. ಬಹಳ ದೂರದವರೆಗೂ ಹೋದರೂ ತುದಿ ಸಿಗದ ಕಾರಣ ವಿಷ್ಣು ಮರಳಿ ಬರುತ್ತಾನೆ.
ಬ್ರಹ್ಮ ಮೇಲಕ್ಕೆ ಹೋಗುತ್ತಿದ್ದಂತೆ ಗಾಳಿಯಲ್ಲಿ ಹಾರಿಕೊಂಡು ಒಂದು ಕೇದಗೆ ಹೂ ಬರುತ್ತಿರುತ್ತದೆ. ಈ ವೇಳೆ, ನೀನು ಎಲ್ಲಿಂದ ಬಂದೆ ಎಂದು ಬ್ರಹ್ಮ ಕೇಳಿದಾಗ ನಾನು ಶಿವನ ತುತ್ತ ತುದಿಯಿಂದ ಜಾರಿ ಬೀಳುತ್ತಿದ್ದೇನೆ ಎಂದು ಹೇಳಿತು. ಬ್ರಹ್ಮನಿಗೆ ಸಂತೋಷವಾಗಿ ಕೇದಗೆ ಹೂವನ್ನು ಹಿಡಿದುಕೊಂಡು ಶಿವನಿದ್ದಲ್ಲಿಗೆ ಮರಳಿದ. ಗೆಲುವಿನ ಹುಮ್ಮಸ್ಸಿನಲ್ಲಿ ಬ್ರಹ್ಮ, ನಾನು ಮೇಲ್ತುದಿಯನ್ನು ನೋಡಿದ್ದೇನೆ. ಇದಕ್ಕೆ ಈ ಕೇದಗೆ ಹೂವೇ ಸಾಕ್ಷಿ ಎಂದ.
ಸುಳ್ಳು ಹೇಳಿದ್ದನ್ನು ಕಂಡು ಸಿಟ್ಟಾದ ಶಿವ, ಇನ್ನು ಮುಂದೆ ನಿನ್ನನ್ನು ಯಾರೂ ಪೂಜೆಸಬಾರದು ಎಂದು ಬ್ರಹ್ಮನಿಗೆ ಶಾಪ ನೀಡಿದ. ಜೊತೆಗೆ ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಯಾರದೇ ಪೂಜೆಯಲ್ಲೂ ನಿನ್ನನ್ನು ಸೇರಿಸಬಾರದು ಎಂಬುದಾಗಿ ಶಪಿಸಿದ. ತನ್ನ ತಪ್ಪಿನ ಅರಿವಾದಂತೆ ಕೇದಗೆ ಅಂಗಲಾಚಿ ಬೇಡಿದ್ದರಿಂದ ಶಿವ, ನನ್ನ ಪೂಜೆಗೆ ನೀನು ಅರ್ಹನಲ್ಲ. ಆದರೆ ನನ್ನ ಆಭರಣ ಸರ್ಪರಾಜ ವಾಸುಕಿಯ ಪೂಜೆ ಅಂದರೆ ನಾಗನ ಪೂಜೆ ನೀನು ಅರ್ಹ ಎಂದು ಹೇಳಿ ಶಾಪದ ತೀವ್ರತೆಯನ್ನು ತಗ್ಗಿಸಿದ.
ಈ ಕಥೆಯಂತೆ ದೇಶದೆಲ್ಲೆಡೆ ತ್ರಿಮೂರ್ತಿಗಳ ಪೈಕಿ ಶಿವ ಮತ್ತು ವಿಷ್ಣುವಿಗೆ ದೇವಸ್ಥಾನವಿದೆ ಬ್ರಹ್ಮನಿಗೆ ಇಲ್ಲ. ಇದರೊಂದಿಗೆ ನಾಗರ ಪಂಚಮಿಯಂದು ಕೇದಗೆ ಬಹಳ ಮುಖ್ಯ. ಬಹಳಷ್ಟು ಕಡೆ ಪ್ರಸಾದ ರೂಪದಲ್ಲಿ ಕೇದಗೆಯನ್ನೇ ನೀಡಲಾಗುತ್ತದೆ.
ದೇವಸ್ಥಾನ: ಮುಕ್ತಿ ಗುಹೇಶ್ವರ ದೇವಾಲಯ (ಶಿವದೇವಾಲಯ) ಸ್ಥಳ: ಮಿಂಟೋ, ಆಸ್ಟ್ರೇಲಿಯಾ ಪ್ರವೇಶ: ಉಚಿತ ಪ್ರವೇಶ ಸಮಯ: ಬೆಳಗ್ಗೆ 10 ರಿಂದ 12 ಗಂಟೆ ಸಂಜೆ 5 ರಿಂದ 7 ಗಂಟೆ ವಾರಾಂತ್ಯ & ರಜಾದಿನಗಳಲ್ಲಿ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆ ಭೇಟಿಗೆ ಸೂಕ್ತ ಸಮಯ: ಫೆಬ್ರವರಿಯಿಂದ ಮಾರ್ಚ್ ಮಹಾ ಶಿವ ರಾತ್ರಿ ಅಥವಾ ಮಾರ್ಚ್ ನಿಂದ ಏಪ್ರಿಲ್ ಗಣೇಶ ಚತುರ್ಥಿಯ ಸಮಯ.
`ಜಟೆಯಲ್ಲಿ ಕಟ್ಟಿದ ನದಿಯ, ತಲೆಯಲ್ಲಿ ಮುಡಿದ ಶಶಿಯ, ಕಣ್ಣೊಳಗೆ ಉರಿವಾ ಬೆಂಕಿಯಾ, ಬಚ್ಚಿಟ್ಟುಕೊಂಡು ನಗುವಾ ನಮ್ಮ ಶಿವನಾ ಕಂಡೆಯಾ, ಅಮ್ಮಮ್ಮ ಅವನಾ ಮಹಿಮೆಯನು ನೀನೂ ಬಲ್ಲೆಯಾ…’ 982ರಲ್ಲಿ ತೆರೆಕಂಡ ಚೆಲ್ಲಿದರಕ್ತ ಸಿನಿಮಾದ ಈ ಗೀತೆಯಲ್ಲಿ ಶಿವನ ಮಹಿಮೆಯನ್ನು ಹಾಡಿಹೊಗಳಿದ್ದಾರೆ. ಭಾರತದಲ್ಲಿ ಶಿವನಿಲ್ಲದ (Lord Shiva) ಊರೇ ಇಲ್ಲ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಿರ್ಮಾಣಗೊಂಡಿರುವ ದೇವಾಲಯಗಳು ಒಂದಕ್ಕಿಂದ ಒಂದು ಮೀರಿಸಿದಂತಿವೆ. ಭಾರತದಲ್ಲಿ ಮಾತ್ರವಲ್ಲದೇ ಪಾಕಿಸ್ತಾನನದ ಪಂಜಾಬ್, ಆಸ್ಟ್ರೇಲಿಯಾದ ಮಿಂಟೋ, ನೇಪಾಳದ ಕಠ್ಮಂಡು, ಶ್ರೀಲಂಕಾದಲ್ಲಿಯೂ, ಮಾರಿಶಸ್‌ಗಳಲ್ಲು ಶಿವನ ಅದ್ಧೂರಿ ದೇವಾಲಗಳು ನೆಲೆಯೂರಿದ್ದು, ಇಂದಿಗೂ ಅವರು ಶಿವನ ಭಕ್ತಿಯನ್ನು ಜನರಿಗೆ ಸಾರುತ್ತಿವೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ನಿರ್ಮಾಣಗೊಂಡಿರುವ ಮುಕ್ತಿ ಗುಹೇಶ್ವರ ದೇವಾಲಯ (Mukti Gupteshwar Mandir) ಜನಮನ ಸೆಳೆದಿದೆ.
ಸಿಡ್ನಿಯ ಹೊರವಲಯದಲ್ಲಿರುವ ಮಿಂಟೋ ಎಂಬ ನಗರದಲ್ಲಿ (Minto City) 1999ರಲ್ಲಿ ಈ ದೇವಾಲಯದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಸುಮಾರು 15 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಗುಹಾದೇವಾಲಯ ನಿರ್ಮಾಣಗೊಂಡಿದೆ. ಹೆಸರೇ ಹೇಳುವಂತೆ ಈ ದೇವಾಲಯ ಗುಹೆಯಲ್ಲಿ ಇದೆ. ಈ ಅಪೂರ್ವ ದೇವಾಲಯದ ನೆಲದ ಮೇಲೆ ಇರುವುದು ಗಣೇಶನ ಒಂದು ಗುಡಿ ಮಾತ್ರ. ಉಳಿದವು ಮೆಟ್ಟಿಲುಗಳನ್ನು ಇಳಿದು ಭೂಗತ ಶಿವದೇವಾಲಯಕ್ಕೆ ಹೋಗಬೇಕಾಗುತ್ತದೆ.
65,000 ಘನ ಮೀಟರ್‌ನಷ್ಟು ಮಣ್ಣನ್ನು ಕೊರೆದು, ನೆಲದಡಿಯಲ್ಲಿ ಗುಹೆಗಳನ್ನು ರೂಪಿಸಿ, ಅದರೊಳಗೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇಂದಿಗೂ ಜಗತ್ತಿನ ಏಕಮಾತ್ರ ಮಾನವ ನಿರ್ಮಿತ ಗುಹಾ ದೇವಾಲಯ ಎಂಬುದು ಇದರ ಖ್ಯಾತಿ. ಇದನ್ನೂ ಓದಿ: ಅಯೋಧ್ಯೆ ಮಾದರಿ ಮಹಾಶಿವರಾತ್ರಿಗೆ ಶಿವಶರಣರ ನಾಡು ಅಣಿ
ನೇಪಾಳದ (Nepal) ರಾಜಮನೆತನದ ಬಳಿ ಒಂದು ಪ್ರಾಚೀನ ಶಿವಲಿಂಗವಿತ್ತು. ಈ ಶಿವಲಿಂಗವು ಭಾರತದ 12 ಜ್ಯೋತಿರ್ಲಿಂಗಗಳ ಜೊತೆಗೆ 13ನೇ ಮತ್ತು ಕೊನೆಯ ಜ್ಯೋತಿರ್ಲಿಂಗ ಎಂದು ಹೇಳಲಾಗಿದೆ. ಜ್ಯೋತಿರ್ಲಿಂಗದ ಜೊತೆಗೆ 7996 ಶ್ಲೋಕಗಳ 8 ಸಂಪುಟಗಳ ವಿಶೇಷ ಗ್ರಂಥವನ್ನೂ ಇಲ್ಲಿ ಇರಿಸಲಾಗಿದೆ. ಈ ಶಿವಲಿಂಗವನ್ನು ದಕ್ಷಿಣ ಗೋಳಾರ್ಧದಲ್ಲಿ ಹೆಬ್ಬಾವಿನ ಮುಖದ ಬಳಿ ಸ್ಥಾಪಿಸಬೇಕೆಂದು ಈ ಶ್ಲೋಕಗಳು ನಿಗದಿಸಿದ್ದವು. ಇದರಲ್ಲಿ ವಿವರಿಸಿದ ಲಕ್ಷಣಗಳ ಆಧಾರದಲ್ಲಿ ಆಸ್ಟ್ರೇಲಿಯಾದಲ್ಲಿ ಜಾಗ ಹುಡುಕಿ ಅದರಂತೆಯೇ ಲಿಂಗವನ್ನು ನಿರ್ಮಿಸಲಾಯಿತು.
1999ರಲ್ಲಿ ನೇಪಾಳದ ಆಗಿನ ರಾಜ ಬೀರೇಂದ್ರ ಬೀರ್ ಬಿಕ್ರಮ್ ಶಾ ದೇವ್ (Birendra Bir Bikram Shah Dev) ಅವರು ಆಸ್ಟ್ರೇಲಿಯಾದ ಹಿಂದೂ ಭಕ್ತರಿಗೆ ಈ ಶಿವಲಿಂಗವನ್ನು ಕಾಣಿಕೆಯಾಗಿ ನೀಡಿದರು. ಅಲ್ಲಿ ಈ ಶಿವಲಿಂಗಕ್ಕಾಗಿ ಒಂದು ಬೃಹತ್ ಗುಹಾ ದೇವಾಲಯ ನಿರ್ಮಾಣದ ಯೋಜನೆ ತಯಾರಿಸಲಾಗಿತ್ತು. ಸುಮಾರು 15 ಸಾವಿರ ಚದರಡಿ ವ್ಯಾಪ್ತಿಯ ಈ ಗುಹಾದೇವಾಲಯದಲ್ಲಿ 13ನೇ ಜ್ಯೋತಿರ್ಲಿಂಗದ ಜೊತೆಗೆ ಉಳಿದ 12 ಜ್ಯೋತಿರ್ಲಿಂಗಗಳ ಪ್ರತಿಕೃತಿಗಳಿವೆ, ಕೃಷ್ಣಶಿಲೆಯಲ್ಲಿ ರಚಿಸಿದ 108 ಶಿವಲಿಂಗಗಳಿವೆ.
ಗರ್ಭಗುಡಿಯಲ್ಲಿ ಶಿವಲಿಂಗದ ಸಮೀಪ 10 ಮೀಟರ್ ಆಳದ ಪೆಟಾರಿಯನ್ನು (ಮರದಲ್ಲಿ ತಯಾರಿಸಲಾದ ಪೆಟ್ಟಿ) ನೆಲದೊಳಗೆ ಹೂಳಲಾಗಿದೆ. ಇದರೊಳಗೆ ಆಸ್ಟ್ರೇಲಿಯಾದ ಭಕ್ತಸಮುದಾಯ 21 ಲಕ್ಷ ಬಾರಿ ಕೈಯಲ್ಲೇ ಬರೆದ `ಓಂ ನಮಃ ಶಿವಾಯ’ ಮಂತ್ರದ ಪುಟಗಳಿವೆ. ಇಂದಿಗೂ ಕೋಟ್ಯಂತರ ಹಿಂದೂ ಭಕ್ತರು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ವಿದೇಶಿಗರೂ ಸಹ ಇಲ್ಲಿಗೆ ಭೇಟಿ ನೀಡಿ ಪೂಜೆ, ಹರಕೆ ತೀರಿಸುತ್ತಾರೆ ಎಂಬುದು ವಿಶೇಷ.
ಶಿವದೇವಾಲಯದಲ್ಲಿ ಆಚರಿಸಲಾಗುವ ಹಬ್ಬಗಳು: ಆಸ್ಟ್ರೇಲಿಯಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಶಿವದೇವಾಲಯದಲ್ಲಿ ಮಹಾಶಿವರಾತ್ರಿ, ಗಣೇಶ ಚತುರ್ಥಿ, ರಾಮನವಮಿ, ಶ್ರಾವಣಮಾಸದಂದು ಅದ್ಧೂರಿ ಪೂಜಾ ಕೈಂಕರ್ಯಗಳು ನೆರವೇರುತ್ತವೆ.