Tag: ಮಹಾಲಯ ಅಮಾವಾಸ್ಯೆ

  • ಮಹಾಲಯ ಅಮಾವಾಸ್ಯೆ; ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು

    ಮಹಾಲಯ ಅಮಾವಾಸ್ಯೆ; ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು

    ಚಾಮರಾಜನಗರ: ಮಹಾಲಯ ಅಮಾವಾಸ್ಯೆ (Mahalaya Amavasya) ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ (Male Mahadeshwara Temple) ಬೆಟ್ಟಕ್ಕೆ ಭಕ್ತರ ದಂಡು ಆಗಮಿಸುತ್ತಿದೆ.

    ಭಾನುವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದೆ. ರಾತ್ರಿಯಿಂದಲೇ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರು ಬೀಡುಬಿಟ್ಟಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದ್ವೆ – ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಎಫ್‌ಐಆರ್

    ಮಹದೇಶ್ವರ ಬೆಟ್ಟದಲ್ಲಿ ಸಕಲ ತಯಾರಿ ನಡೆದಿದೆ. ಪ್ರಾಧಿಕಾರದಿಂದ ಭಕ್ತರಿಗಾಗಿ 2 ಲಕ್ಷ ಲಾಡು ತಯಾರಿಸಲಾಗಿದೆ. ಭಕ್ತರೆಲ್ಲರಿಗೂ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಲೈಟಿಂಗ್‌ನಿಂದ ಮಾದಪ್ಪನ ಸನ್ನಿಧಿ ಮತ್ತಷ್ಟು ಕಂಗೊಳಿಸುತ್ತಿದೆ.

  • ಮಹಾಲಯ ಅಮಾವಾಸ್ಯೆ ಮುನ್ನ ವೀರಾಂಜನೇಯನಿಗೆ ಶ್ರೀ ನಿರ್ಮಲಾನಂದನಾಥ ಶ್ರೀಗಳಿಂದ ವಿಶೇಷ ಪೂಜೆ

    ಮಹಾಲಯ ಅಮಾವಾಸ್ಯೆ ಮುನ್ನ ವೀರಾಂಜನೇಯನಿಗೆ ಶ್ರೀ ನಿರ್ಮಲಾನಂದನಾಥ ಶ್ರೀಗಳಿಂದ ವಿಶೇಷ ಪೂಜೆ

    -ಮಹಾಲಯ ಅಮಾವಾಸ್ಯೆ ಮುನ್ನ ಹೋಮ ಹವನ
    -ಚುಂಚಶ್ರೀಗಳ ಭಕ್ತಿ ಗಾಯನ ಕೇಳಿ ಮಂತ್ರ ಮುಗ್ದರಾದ ಭಕ್ತರು

    ಚಿಕ್ಕಬಳ್ಳಾಪುರ: ಮಹಾಲಯ ಅಮಾವಾಸ್ಯೆ ಹಿಂದಿನ ದಿನವಾದ ಇಂದು ಚಿಕ್ಕಬಳ್ಳಾಪುರ ನಗರ ಹೊರವಲಯದ ಸೂಲಾಲಪ್ಪನದಿನ್ನೆ ಬಳಿಯ ಶ್ರೀ ವೀರಾಂಜನೇಯ ಸ್ವಾಮಿಗೆ ಆದಿಚುಂಚನಗಿರಿ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು.

    nirmalananda swamiji

    ವೀರಾಂಜನೇಯ ಸ್ವಾಮಿಗೆ ಜಲಾಭಿಷೇಕ, ಹಾಲು, ಮೊಸರು, ತುಪ್ಪ, ಪಂಚಾಮೃತ ಅಭಿಷೇಕ ನೇರವೇರಿಸಿದ ಶ್ರೀಗಳು ಮಹಾಮಂಗಳಾರಾತಿ ಮಾಡಿದರು. ತದನಂದರ ದೇವಾಲಯದ ಆವರಣದಲ್ಲಿ ಗಣಪತಿ ಹೋಮ, ನವಗ್ರಹ ಶಾಂತಿ ಪೂಜೆ, ಪವಮಾನ ಹೋಮ. ಹನುಮಂತ ಹೋಮ, ಶೋಡೋಪಚಾರ ಹೋಮ, ಪೂರ್ಣಾಹುತಿ ಹೋಮ ನಡೆಸಲಾಯಿತು. ಇದನ್ನೂ ಓದಿ: ಉದಯಪುರಕ್ಕೆ ಸಾರಾ ಅಲಿಖಾನ್ ಭೇಟಿ – ಪ್ರಕೃತಿ ಮಧ್ಯೆ ಫೋಟೋ ಕ್ಲಿಕ್ಕಿಸಿಕೊಂಡ ಸೈಫ್ ಪುತ್ರಿ

    nirmalananda swamiji

    ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದು, ಹೋಮ ಹವನದ ನಂತರ ಚುಂಚಶ್ರೀಗಳು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಗೂ ಗಿಳಿಯು ಪಂಜರದೊಳಿಲ್ಲ ಶ್ರೀರಾಮ ರಾಮ ಎಂಬ ಭಕ್ತಿಪೂರ್ವಕ ಗಾಯನ ಹಾಡಿ, ನೂರಾರು ಭಕ್ತರನ್ನು ಮಂತ್ರ ಮುಗ್ದಗೊಳಿಸಿದರು. ಶ್ರೀಗಳ ಗಾಯನದಿಂದ ಭಕ್ತಿ ಪರವಶರಾದ ಭಕ್ತರು ವೀಳ್ಯದೆಲೆಯಲ್ಲಿ ಅಂಲಕೃತಗೊಂಡಿದ್ದ ಶ್ರೀ ವೀರಾಂಜನೇಯ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಇದನ್ನೂ ಓದಿ: ನಿರ್ಭೀತ, ನೈಜ ಕಾಂಗ್ರೆಸ್ಸಿಗಳು ಪ್ರಿಯಾಂಕಾ ಗಾಂಧಿ: ರಾಗಾ

  • ಹಾಲು ಕುಡಿದ ಕಲ್ಲಿನ ಮೂರ್ತಿ – ಅಂಗಾಳ ಪರಮೇಶ್ವರಿ ದೇವಿಯ ಪವಾಡ

    ಹಾಲು ಕುಡಿದ ಕಲ್ಲಿನ ಮೂರ್ತಿ – ಅಂಗಾಳ ಪರಮೇಶ್ವರಿ ದೇವಿಯ ಪವಾಡ

    ಬೆಂಗಳೂರು: ಅಂಗಾಳ ಪರಮೇಶ್ವರಿ ದೇವಿಯ ವಿಗ್ರಹವೊಂದು ಹಾಲು ಕುಡಿದಿದೆ ಎನ್ನುವ ಸುದ್ದಿ ತಿಳಿದ ಜನ ತಂಡೋಪತಂಡವಾಗಿ ಎಚ್‍ಎಎಲ್ ಬಳಿ ಇರುವ ಸುಧಾಮನಗರದ ದೇವಾಲಯಕ್ಕೆ ಆಗಮಿಸುತ್ತಿದ್ದಾರೆ.

    ಇಂದು ಮಹಾಲಯ ಅಮಾವಾಸ್ಯೆ ಇರುವ ಕಾರಣ ನಿನ್ನೆ ಸ್ವಲ್ಪ ವಿಭಿನ್ನವಾಗಿಯೇ ತಾಯಿಗೆ ಅಲಂಕಾರ ಮಾಡಿ ಪೂಜಾ ಕೈಂಕರ್ಯ ಮಾಡೋಕೆ ಅರ್ಚಕಿ ಧನಲಕ್ಷ್ಮಿ ಮುಂದಾಗಿದ್ದಾರೆ. ಈ ವೇಳೆ ಧನಲಕ್ಷ್ಮಿಗೆ, ತಾಯಿ ಅಂಗಾಳ ಪರಮೇಶ್ವರಿ ಹಾಲು ಕೊಡಮ್ಮ ಎಂದು ಕರೆದಂತೆ ಭಾಸವಾಗಿದೆ. ತಕ್ಷಣ ಅವರು ಪಾತ್ರೆಯಲ್ಲಿ ಹಾಲಿಡಿದು ತಾಯಿಗೆ ಕುಡಿಸೋಕೆ ಮುಂದಾಗುತ್ತಿದ್ದಂತೆಯೇ ಅಂಗಾಳಪರಮೇಶ್ವರಿ ಮೂರ್ತಿ ಹಾಲುಕುಡಿಯೋಕೆ ಶುರುಮಾಡಿದ್ದಾಳಂತೆ.

    ಈ ಪವಾಡವನ್ನು ಧನಲಕ್ಷ್ಮಿ ಅವರು ತಿಳಿಸಿದ್ದೆ ತಡ ಜನ ತಂಡೋಪತಂಡವಾಗಿ ದೇವಾಲಯಕ್ಕೆ ಬರ ತೊಡಗಿದ್ದಾರೆ. ಈ ಸುದ್ದಿ ಹರಿದಾಡೋಕೆ ಶುರುವಾಗುತ್ತಿದ್ದಂತೆಯೇ ಸಂಜೆ 6 ಗಂಟೆಯಿಂದ ಭಕ್ತರ ದಂಡೇ ಇಲ್ಲಿ ಹರಿದು ಬರುವುದಕ್ಕೆ ಶುರುವಾಯ್ತು. ಸುಧಾಮನಗರದ ಹಲವು ಪ್ರದೇಶಗಳಿಂದ ಬಂದ ಜನರು ದೇವಿಗೆ ಹಾಲು ಕುಡಿಸಿದ್ದಾರೆ. ಅಲ್ಲದೆ ಕಲ್ಲಿನಮೂರ್ತಿ ಹಾಲು ಕುಡಿಯುತ್ತಿರುವ ದೃಶ್ಯವನ್ನು ಭಕ್ತರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ರಾತ್ರಿ 10 ಗಂಟೆಯ ನಂತರ ಹಾಲು ಕುಡಿಯೋದು ನಿಲ್ಲಿಸಿರುವುದಾಗಿ ಅರ್ಚಕಿ ತಿಳಿಸಿದ್ದಾರೆ.

    ಹಾಲು ಕುಡಿದಿದ್ದಾಳೋ ಇಲ್ಲವೋ ಎನ್ನುವುದು ಭಕ್ತರ ನಂಬಿಕೆಗೆ ಬಿಟ್ಟ ವಿಚಾರವಾಗಿದೆ. ಆದರೆ ಹಾಲು ಕುಡಿಯುತ್ತಿರುವ ವಿಡಿಯೋ ವಾಟ್ಸಪ್ ಮೂಲಕ ಶೇರ್ ಆಗುತ್ತಿರುವ ಕಾರಣ ಈಗಲೂ ಜನ ದೇವಾಲಯಕ್ಕೆ ಬರುತ್ತಿದ್ದಾರೆ.

  • ನವರಾತ್ರಿ ಮಹಿಮೆ – ಕಣ್ಣು ಬಿಟ್ಟ ದೇವಿ: ವಿಡಿಯೋ ವೈರಲ್

    ನವರಾತ್ರಿ ಮಹಿಮೆ – ಕಣ್ಣು ಬಿಟ್ಟ ದೇವಿ: ವಿಡಿಯೋ ವೈರಲ್

    ಹಾಸನ: ಜಿಲ್ಲೆಯ ಅರಸೀಕರೆ ತಾಲೂಕಿನ ಬೆಂಡೆಕೆರೆ ಗ್ರಾಮದ ಭದ್ರಕಾಳಿ ಮೂರ್ತಿ ಕಣ್ಣುಬಿಟ್ಟಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬೆಂಡೆಕೆರೆ ಗ್ರಾಮದ ವೀರಭದ್ರೇಶ್ವರ ದೇವಾಲಯದಲ್ಲಿ ಈ ಭದ್ರಕಾಳಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಕಳೆದ ಮಹಾಲಯ ಅಮಾವಾಸ್ಯೆ ದಿನದಂದು ದೇವಸ್ಥಾನದ ಪೂಜೆ ಸಂದರ್ಭದಲ್ಲಿ ಭದ್ರಕಾಳಿ ಮೂರ್ತಿಯು ಕಣ್ಣು ಬಿಟ್ಟಂತೆ ಗೋಚರಿಸಿದೆ. ತಕ್ಷಣ ಭಕ್ತಾದಿಯೊಬ್ಬರು ಅದನ್ನು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ತಂಡೋಪತಂಡವಾಗಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

    ಬೆಂಡೆಕೆರೆ ಗ್ರಾಮದ ಹೊರಭಾಗದಲ್ಲಿ ಈ ದೇವಾಲಯ ಇದ್ದು, ಅಮವಾಸ್ಯೆಗಳಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಮಹಾಲಯ ಅಮಾವಾಸ್ಯೆಯ ದಿನದಂದು ಭದ್ರಕಾಳಿ ಕಣ್ಣು ತೆರೆದಿದ್ದು, ಆ ವಿಡಿಯೋ ತಡವಾಗಿ ವೈರಲ್ ಆಗಿದೆ. ಈ ಹಿಂದೆಯೂ ಕೂಡ ಅಮವಾಸ್ಯೆ ದಿನ ಈ ರೀತಿಯ ಪವಾಡ ನಡದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ವೀರಭದ್ರೇಶ್ವರ ದೇವಾಲಯದಲ್ಲಿ ಈ ಭದ್ರಕಾಳಿ ಮೂರ್ತಿ ಇದೆ. ಈ ಹಿಂದೆ ದೇವಿ ಮೂರ್ತಿ ಕಣ್ಣು ಬಿಟ್ಟಾಗ ಫೋಟೋವನ್ನು ತೆಗೆದಿದ್ದೆ. ಈಗ ಮಹಾಲಯ ಅಮಾವಾಸ್ಯೆ ದಿನ ಸಂಜೆ ಕುಂಕುಮ ತೆಗೆದುಕೊಂಡು ಬರೋಣ ಎಂದು ದೇವಾಲಯದ ಬಳಿ ಹೋಗಿದ್ದೆ. ಆಗ ದೇವಿ ಕಣ್ಣು ಬಿಟ್ಟು ಗೋಚರಿಸುತ್ತಿತ್ತು. ಅದನ್ನು ವಿಡಿಯೋ ಮಾಡಿದ್ದೇವೆ. ನಾನು ಮಾತ್ರವಲ್ಲ ಅಲ್ಲಿದ್ದ ಹತ್ತಾರು ಜನರು ಅದನ್ನು ನೋಡಿದ್ದಾರೆ ಎಂದು ಸ್ಥಳೀಯ ಚಂದ್ರು ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=M2rIA8MjG90