Tag: ಮಹಾಲಯ

  • ಮಹಾಲಯ ಚಿತ್ರದ ಮೊದಲ ಚಿತ್ರಕ್ಕೆ ಶ್ರೀಮುರಳಿ ಕ್ಲ್ಯಾಪ್

    ಮಹಾಲಯ ಚಿತ್ರದ ಮೊದಲ ಚಿತ್ರಕ್ಕೆ ಶ್ರೀಮುರಳಿ ಕ್ಲ್ಯಾಪ್

    ತೀಶ್ ವೆಂಕಟೇಶ್ ಹಾಗೂ ಗಣೇಶ್ ಪಾಪಣ್ಣ ಸೇರಿ ನಿರ್ಮಿಸುತ್ತಿರುವ, ಡಾ.ಸೂರಿ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹಾಲಯ (Mahalaya) ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿ ಲೇಔಟ್‌ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೋಹನ್ ಮಾಯಣ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ದೃಶ್ಯಕ್ಕೆ ರೋರಿಂಗ್ ಸ್ಟಾರ್ ಶ್ರೀಮುರುಳಿ (Sri Murali) ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿ, ಚಿತ್ರಕ್ಕೆ ಶುಭ ಕೋರಿದರು.

    ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಗಣೇಶ್ ಪಾಪಣ್ಣ, ಇದು ನಮ್ಮ ಪರ್ಪಲ್ ರಾಕ್ ಸಂಸ್ಥೆಯ ಐದನೇ ಚಿತ್ರ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಅರ್ಥವಾಗುವಂಥ ವಿಭಿನ್ನ ಕಂಟೆಂಟ್ ಈ ಚಿತ್ರದಲ್ಲಿದೆ. ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆಯಿದೆ. ರಷ್ಯಾದ ಅರ್ಮೇನಿಯಾದಲ್ಲಿ 7-10 ದಿನಗಳ ದಿನಗಳ ಕಾಲ ಚಿತ್ರೀಕರಣ, ನಂತರ ಬೆಂಗಳೂರು, ಆನಂತರ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಸೇರಿ 40 ರಿಂದ 50 ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದೇವೆ. ಈ ಚಿತ್ರಕ್ಕೆ ಕಥೆಯೇ ನಾಯಕ. ಆದರೆ, 20 ಕ್ಕೂ ಹೆಚ್ಚು ಪ್ರಮುಖಪಾತ್ರಗಳಿದ್ದು, ಆ ಪಾತ್ರಗಳಲ್ಲಿ ಜನಪ್ರಿಯ ಕಲಾವಿದರು ಅಭಿನಯಿಸಲಿದ್ದಾರೆ. ಆಡಿಷನ್ ಮೂಲಕವೂ ಕಲಾವಿದರ ಆಯ್ಕೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಮಾಹಿತಿ ನೀಡುತ್ತೇವೆ. ವಿಭಿನ್ನ ಶೈಲಿಯ ಹಾರರ್, ಥ್ರಿಲ್ಲರ್ ಕಂಟೆಂಟ್ ಚಿತ್ರದಲ್ಲಿದ್ದು, ಪ್ರತಿಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯತೆಯಿದೆ. ಡಾ.ಸೂರಿ ಅವರು ಕ್ರಿಯೇಟಿವ್ ಹೆಡ್ ಆಗಿ ನಮ್ಮ ಜತೆ ನಿಂತಿದ್ದಾರೆ ಎಂದು ಹೇಳಿದರು.

    ಮತ್ತೊಬ್ಬ ನಿರ್ಮಾಪಕ ಯತೀಶ್ ವೆಂಕಟೇಶ್ ಮಾತನಾಡಿ, ಮೊದಲ ಬಾರಿಗೆ ನಮ್ಮ ಚಿತ್ರಕ್ಕಾಗಿ ಅರ್ಮಾನಿಯಾದಿಂದ ಕಲಾವಿದರನ್ನು ಕರೆತರುತ್ತಿದ್ದೇವೆ. ಮೂರು ಭಾಗಗಳಲ್ಲಿ ಸಿನಿಮಾ ಕಥೆ ಸಾಗುತ್ತದೆ. ಅದರ ಒಂದು ಭಾಗದಲ್ಲಿ ಈ ಕಲಾವಿದರು ಇರುತ್ತಾರೆ. ನಿರ್ದೇಶಕ ಮೋಹನ್ ಮಾಯಣ್ಣ ಅವರ ಹತ್ತಿರ 3-4 ಕಥೆಗಳನ್ನು ಕೇಳಿದ್ದೇನೆ. ಎಲ್ಲವೂ ನಮ್ಮ ಮಣ್ಣಿನ ಕಥೆಗಳೇ ಆಗಿದ್ದವು. ನಮ್ಮ ಟ್ರೆಡಿಷನ್ ಬಗ್ಗೆ ಅವರು ಹೇಳುವ ಶೈಲಿ ನನಗಿಷ್ಟವಾಯಿತು. ಹಾಗಾಗಿ, ಅವರ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿ ಕೊಟ್ಟಿದ್ದೇವೆ ಎಂದು ಹೇಳಿದರು.

    ನಾನು ಎ.ಹರ್ಷ ಅವರ ಜತೆಗೆ ಸೀತಾರಾಮ ಕಲ್ಯಾಣ, ಭಜರಂಗಿ-2 ಚಿತ್ರಗಳಲ್ಲಿ ಕೆಲಸ ಮಾಡಿದ್ದೆ. ಅಲ್ಲದೇ ನಾಲ್ಕೈದು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಅದನ್ನು ನೋಡಿ ನಿರ್ಮಾಪಕರು ಇಂಥ ದೊಡ್ಡ ಅವಕಾಶ ನೀಡಿದ್ದಾರೆ. 1990ರ ಸಮಯದಲ್ಲಿ ನಡೆಯುವ ಕಥೆಯಿದಾಗಿದ್ದು, ಚಿತ್ರದಲ್ಲಿ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂಥ ಕಂಟೆಂಟ್ ಇದೆ ಎಂದು ನಿರ್ದೇಶಕ ಮೋಹನ್ ಮಾಯಣ್ಣ ಹೇಳಿದರು. ಪವನ್ ಸಾಯಿಕುಮಾರ್ ಛಾಯಾಗ್ರಹಣ, ಭುವನ್ ಚಂದ್ ಸಂಗೀತ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಹಾಗೂ ಅದ್ದೂರಿ ಗಿರೀಶ್ ಅವರ ನಿರ್ಮಾಣ ನಿರ್ವಹಣೆ ‘ಮಹಾಲಯ’ ಚಿತ್ರಕ್ಕಿದೆ.

  • ಮಹಾಲಯ ಆಚರಣೆ – ಬಾಂಗ್ಲಾದೇಶದಲ್ಲಿ ದೋಣಿ ಮುಳುಗಿ 24 ಮಂದಿ ಸಾವು

    ಮಹಾಲಯ ಆಚರಣೆ – ಬಾಂಗ್ಲಾದೇಶದಲ್ಲಿ ದೋಣಿ ಮುಳುಗಿ 24 ಮಂದಿ ಸಾವು

    ಢಾಕಾ: ಬಾಂಗ್ಲಾದೇಶದ (Bangladesh) ಪಂಚಗಢ್‌ನ ಕರಟೋಯಾ ನದಿಯಲ್ಲಿ (Karatoya River) ಭಾನುವಾರ ದೋಣಿ (Boat) ಮುಳುಗಿ 24 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಮಹಾಲಯ ಆಚರಣೆ ಹಿನ್ನೆಲೆ ಔಲಿಯಾ ಘಾಟ್‌ನಿಂದ ಬದ್ಧೇಶ್ವರ ದೇವಸ್ಥಾನದ ಕಡೆ ಹೋಗುತ್ತಿದ್ದ ದೋಣಿ ಮುಳುಗಿದೆ. ದೋಣಿಯಲ್ಲಿ ಬೋಡಾ, ಪಂಚ್‌ಪಿರ್, ಮಾರಿಯಾ ಹಾಗೂ ಬಂಘಾರಿ ಪ್ರದೇಶದ ಹಿಂದೂ ಸಮುದಾಯದ ಜನರು ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ದೋಣಿಯಲ್ಲಿ ಅದರ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಯಾಣಿಕರನ್ನು ಕೂರಿಸಲಾಗಿತ್ತು. ದೋಣಿ ನದಿಯ ಮಧ್ಯ ಭಾಗಕ್ಕೆ ಹೋಗುತ್ತಿದ್ದಂತೆ ಅದು ಮಗುಚಿ ಬಿದ್ದಿದೆ. ಘಟನೆಯಲ್ಲಿ ಕೆಲವರು ಈಜಿ ದಡ ಸೇರಿದ್ದಾರೆ. ಆದರೆ ಹೆಚ್ಚಿನವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 108 ಅಂಬುಲೆನ್ಸ್ ಕರೆ ಸ್ವೀಕಾರ ಸೇವೆ ಪುನರಾರಂಭಗೊಂಡಿದೆ: ಆರೋಗ್ಯ ಇಲಾಖೆ ಸ್ಪಷ್ಟನೆ

    ಘಟನೆಯ ಮಾಹಿತಿ ಸಿಕ್ಕ ತಕ್ಷಣ ಪಂಚಗಢ ಜಿಲ್ಲಾಧಿಕಾರಿ ಮೊಹಮ್ಮದ್ ಜಹುರುಲ್ ಇಸ್ಲಾಂ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆಯ ತನಿಖೆಗೆ 5 ಸದಸ್ಯರ ತಂಡವನ್ನು ರಚಿಸಲಾಗಿದೆ. ನಾಪತ್ತೆಯಾದವರ ಹುಡುಕಾಟಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಬೋಡಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಸುಜೋಯ್ ಕುಮಾರ್ ರಾಯ್ ತಿಳಿಸಿದ್ದಾರೆ.

    ಬಾಂಗ್ಲಾದೇಶದಲ್ಲಿ ಲಕ್ಷಾಂತರ ಜನರು ರಾಜಧಾನಿ ಢಾಕಾ ಅಥವಾ ಪ್ರಮುಖ ನಗರಗಳಿಗೆ ಪ್ರಯಾಣಿಸಲು ದೋಣಿಗಳನ್ನೇ ಅವಲಂಬಿಸಿದ್ದಾರೆ. ದೇಶದಲ್ಲಿ ಬಳಸಲಾಗುವ ಸುಮಾರು ಶೇ.95 ರಷ್ಟು ಮಧ್ಯಮ ಹಾಗೂ ಸಣ್ಣ ಗಾತ್ರದ ದೋಣಿಗಳಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ತೂಕ ಇಳಿಸಿ, 10 ಲಕ್ಷ ಬಹುಮಾನ ಗೆಲ್ಲಿ – ಉದ್ಯೋಗಿಗಳಿಗೆ ಫಿಟ್‌ನೆಸ್ ಚ್ಯಾಲೆಂಜ್ ಹಾಕಿದ ಸಿಇಒ

    Live Tv
    [brid partner=56869869 player=32851 video=960834 autoplay=true]