Tag: ಮಹಾರಾಷ್ಡ್ರ

  • ಮುಸ್ಲಿಂ ಸಮುದಾಯಕ್ಕೆ ತಕ್ಕ ಪ್ರಾಶಸ್ತ್ಯ ಸಿಗುತ್ತಿಲ್ಲ: ಶರದ್ ಪವಾರ್ ಬೇಸರ

    ಮುಸ್ಲಿಂ ಸಮುದಾಯಕ್ಕೆ ತಕ್ಕ ಪ್ರಾಶಸ್ತ್ಯ ಸಿಗುತ್ತಿಲ್ಲ: ಶರದ್ ಪವಾರ್ ಬೇಸರ

    ಮುಂಬೈ: ಮುಸ್ಲಿಮರು (Muslims) ಎಲ್ಲಾ ಕ್ಷೇತ್ರಗಳಿಗೂ ಮಹತ್ವದ ಕೊಡುಗೆ ನೀಡಿದ್ದಾರೆ. ಆದರೆ ಮುಸ್ಲಿಂ ಸಮುದಾಯಕ್ಕೆ ತಕ್ಕ ಪ್ರಾಶಸ್ತ್ಯ ಸಿಗುತ್ತಿಲ್ಲ ಎಂದು ಎನ್‌ಸಿಪಿ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಬೇಸರ ವ್ಯಕ್ತಪಡಿಸಿದ್ದಾರೆ.

    ಶನಿವಾರ `ಭಾರತೀಯ ಮುಸ್ಲಿಮರ ಸಮಸ್ಯೆಗಳು’ಶೀರ್ಷಿಕೆ ಅಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ (Muslim Community) ಸೂಕ್ತ ಸೌಲಭ್ಯ ಒದಗಿಸುವ ಬಗ್ಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಕಚ್ಚಾಟ ಬಿಡಿ, ಎಲೆಕ್ಷನ್ ಗೆಲ್ಲಿಸಿ – ಮುಂದಿನ ಸಿಎಂ ಚರ್ಚೆಗೆ ಬ್ರೇಕ್ ಹಾಕಿದ ರಾಗಾ

    ನಿರುದ್ಯೋಗ (Unemployment) ದೇಶದ ಎಲ್ಲಾ ಸಮುದಾಯಗಳ ಸಮಸ್ಯೆಯೂ ಆಗಿದೆ. ಆದಾಗ್ಯೂ ಅಲ್ಪ ಸಂಖ್ಯಾತರ ದೂರುಗಳನ್ನು ಪರಿಶೀಲಿಸುವ ಅಗತ್ಯವಿದೆ. ಮುಸ್ಲಿಂ ಸಮುದಾಯವು ಉರ್ದು ಮೂಲಕ ಕಲೆ, ಕವನ, ಬರವಣಿಗೆ ಕ್ಷೇತ್ರಗಳಲ್ಲಿ ಕೊಡುಗೆ ನೀಡಬಹುದಾಗಿದೆ. ಇದಕ್ಕೆ ಬೆಂಬಲ ಹಾಗೂ ಸಮಾನ ಅವಕಾಶ ಸಿಗಬೇಕಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಿಪ್ಪು ಹೆಸರೇ ಗೊಂದಲದಲ್ಲಿದೆ, ಹಾಗಾಗಿ ಟ್ರೈನ್‌ನ ಹೆಸರು ಬದಲಿಸಿದ್ದೇವೆ: ನಳೀನ್ ಕುಮಾರ್ ಕಟೀಲ್

    ಹಿಂದಿ ಚಲನಚಿತ್ರೋದ್ಯಮವನ್ನು (Hindi Film Industry) ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮುಸ್ಲಿಂ ಸಮುದಾಯ ದೊಡ್ಡ ಕೊಡುಗೆ ನೀಡಿದೆ. ಯಾರೂ ಅದನ್ನು ನಿರ್ಲಕ್ಷಿಸುವಂತಿಲ್ಲ. ಕೇರಳದಲ್ಲಿ ಅಲ್ಪ ಸಂಖ್ಯಾತರು ಮುಖ್ಯಭಾಷೆಗೆ ಹೇಗೆ ಬೆಂಬಲ ನೀಡುತ್ತಿದ್ದಾರೆ? ಅದರಿಂದ ಹೇಗೆ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ? ಎಂಬುದನ್ನು ಅಧ್ಯಯನ ಮಾಡಬೇಕು. ಆ ಮೂಲಕ ಅಭಿವೃದ್ಧಿಯ ಹಾದಿ ಕಾಣಬೇಕು ಎಂದು ಪವಾರ್ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡ್ರಗ್ ಕೇಸ್ – ಮಹಾರಾಷ್ಟ್ರದ ಸಚಿವರ ಸೋದರಳಿಯ ಅರೆಸ್ಟ್

    ಡ್ರಗ್ ಕೇಸ್ – ಮಹಾರಾಷ್ಟ್ರದ ಸಚಿವರ ಸೋದರಳಿಯ ಅರೆಸ್ಟ್

    – ಡ್ರಗ್ಸ್ ಡೀಲರ್ ಜೊತೆ ವ್ಯವಹಾರ

    ಮುಂಬೈ: ಮಹಾರಾಷ್ಟ್ರದ ಸಚಿವ ನವಾಬ್ ಮಲ್ಲಿಕ್ ಸೋದರಳಿಯ ಸಮೀರ್ ಖಾನ್‍ರನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬುಧವಾರ ಬೆಳಗ್ಗೆ ವಿಚಾರಣೆಗೆಂದು ಕರೆಸಿದ್ದ ಅವರನ್ನು ಹಲವು ವಿಚಾರಣೆಗಳ ಬಳಿಕ ಇದೀಗ ಬಂಧಿಸಿದ್ದಾರೆ.

    ಬ್ರಿಟಿಷ್ ಮೂಲದ ಕರಣ್ ಸಜ್ನಾನಿ ಎಂಬಾತನ ಜೊತೆ ಸಮೀರ್ ಖಾನ್ 20 ಸಾವಿರ ರೂ.ಯಷ್ಟು ವ್ಯವಹಾರ ನಡೆಸಿದ ಹಿನ್ನೆಲೆ ವಿಚಾರಣೆಗೆ ಕರೆಸಲಾಗಿತ್ತು. ಕಳೆದ ವಾರ ಕರಣ್ ಮತ್ತು ಇಬ್ಬರು ಮಹಿಳೆಯರನ್ನ ಪೊಲೀಸರು ಬಂಧಿಸಿ, ಮೂವರ ಬಳಿಯಲ್ಲಿದ್ದ 200 ಕೆಜಿ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದರು.

    ಕಳೆದ ವಾರ ಬಾಂದ್ರಾ ವೆಸ್ಟ್‍ಗೆ ಕೊರಿಯರ್ ಮೂಲಕ ಬಂದ ಗಾಂಜಾವನ್ನ ಅಧಿಕಾರಿಗಳು ವಶಪಡಿಕೊಂಡು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಕರಣ್ ಗಾಂಜಾ ಆಮದು ಮಾಡಿಕೊಳ್ಳುತ್ತಿರುವ ವಿಷಯ ಬೆಳಕಿಗೆ ಬಂದಿತ್ತು. ಎನ್‍ಡಿಪಿಎಸ್ ಕಾಯ್ದೆ ಅಡಿ ಎನ್‍ಸಿಬಿ ಅಧಿಕಾರಿಗಳು ರಹಿಲ್ ಫರ್ನಿಚರ್ ವಾಲಾ, ಸಹಿಸ್ತಾ ಫರ್ನಿಚರ್ ವಾಲಾ ಮತ್ತು ರಾಮ್ ಕುಮಾರ್ ಅಲಿಯಾಸ್ ಪಾನ್‍ವಾಲಾನನ್ನು ಬಂಧಿಸಿದ್ದರು.

    ಕರಣ್ ವಿಚಾರಣೆ ವೇಳೆ ಡ್ರಗ್ಸ್ ವ್ಯವಹಾರದಲ್ಲಿ ಸಮೀರ್ ಖಾನ್ ಪಾತ್ರವೂ ಕಂಡು ಬಂದ ಹಿನ್ನೆಲೆ ಎನ್‍ಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಸುದೀರ್ಘ ವಿಚಾರಣೆ ಬಳಿಕ ಸಮೀರ್ ಖಾನ್ ನನ್ನ ಬಂಧಿಸಲಾಗಿದೆ.