Tag: ಮಹಾರಾಷ್ಟ್ರ ಸಿಎಂ

  • ಮಹಾರಾಷ್ಟ್ರ ಸಿಎಂ ಫಡ್ನವಿಸ್ ಕಚೇರಿ ಮೇಲೆ ದಾಳಿ ನಡೆಸುವ ಬೆದರಿಕೆ – ಪಾಕ್‌ ಮೂಲದ ಸಂಖ್ಯೆಯಿಂದ ಕರೆ

    ಮಹಾರಾಷ್ಟ್ರ ಸಿಎಂ ಫಡ್ನವಿಸ್ ಕಚೇರಿ ಮೇಲೆ ದಾಳಿ ನಡೆಸುವ ಬೆದರಿಕೆ – ಪಾಕ್‌ ಮೂಲದ ಸಂಖ್ಯೆಯಿಂದ ಕರೆ

    ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಕಚೇರಿ ಮೇಲೆ ದಾಳಿ ನಡೆಸುವುದಾಗಿ ವಾಟ್ಸಾಪ್‌ನಲ್ಲಿ ಬೆದರಿಕೆ ಸಂದೇಶ ಬಂದಿದೆ.

    ಪಾಕಿಸ್ತಾನದ ಫೋನ್ ಸಂಖ್ಯೆಯಿಂದ ವರ್ಲಿ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಈ ಸಂದೇಶ ಕಳುಹಿಸಲಾಗಿದ್ದು, ಇದು ಗಂಭೀರ ಭದ್ರತಾ ಕಳವಳ ಹುಟ್ಟುಹಾಕಿದೆ.

    ಬೆದರಿಕೆ ಬಂದ ನಂತರ ಮುಂಬೈ ಪೊಲೀಸರು ತ್ವರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಸಂದೇಶದ ಮೂಲವನ್ನು ಪತ್ತೆಹಚ್ಚಲು ಮತ್ತು ಅದರ ವಿಶ್ವಾಸಾರ್ಹತೆಯನ್ನು ನಿರ್ಧರಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.

    ಮುನ್ನೆಚ್ಚರಿಕೆ ಕ್ರಮವಾಗಿ ಸಿಎಂಒ ಮತ್ತು ಇತರ ಪ್ರಮುಖ ಸರ್ಕಾರಿ ಕಟ್ಟಡಗಳ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ತನಿಖೆ ಮುಂದುವರೆದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

  • ದೇವೇಂದ್ರ ಫಡ್ನವೀಸ್ `ಮಹಾ’ ಸಿಎಂ – ಫಡ್ನವಿಸ್‌ ರಾಜಕೀಯ ಪಥ ಹೇಗಿದೆ?

    ದೇವೇಂದ್ರ ಫಡ್ನವೀಸ್ `ಮಹಾ’ ಸಿಎಂ – ಫಡ್ನವಿಸ್‌ ರಾಜಕೀಯ ಪಥ ಹೇಗಿದೆ?

    – ಗುರುವಾರ ಸಂಜೆ ಪ್ರಮಾಣವಚನ ಸ್ವೀಕಾರ
    – ‘ಏಕ್ ಹೈ, ಸೇಫ್ ಹೈ’ ಪುನರುಚ್ಚರಿಸಿದ ಫಡ್ನವಿಸ್‌

    ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಚಾರವಾಗಿ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿದಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ದೇವೇಂದ್ರ ಫಡ್ನವಿಸ್‌ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಗುರುವಾರ ಸಂಜೆ 5 ಗಂಟೆಗೆ ಮುಂಬೈನ ಆಜಾದ್ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಫಡ್ನವಿಸ್‌ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

    ಹಿರಿಯ ನಾಯಕರ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಫಡ್ನವಿಸ್‌ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಶಾಸಕಾಂಗ ಪಕ್ಷದ ನಾಯಕರಾಗಿಯೂ ಫಡ್ನವಿಸ್‌ ಆಯ್ಕೆಯಾದ್ರು. ಈ ಬೆನ್ನಲ್ಲೇ ಹಾಲಿ ಸಿಎಂ ಏಕನಾಥ್‌ ಶಿಂಧೆ, ಎನ್‌ಸಿಪಿ ಅಜಿತ್ ಪವಾರ್ ಜೊತೆಗೂಡಿ ರಾಜ್ಯಪಾಲರನ್ನು ಭೇಟಿ ಮಾಡಿದ ಫಡ್ನವಿಸ್‌, ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.

    ಏಕನಾಥ್ ಶಿಂಧೆ-ಅಜಿತ್ ಪವಾರ್‌ಗೆ ಡಿಸಿಎಂ ಹುದ್ದೆಯ ಆಫರ್ ಅನ್ನು ಬಿಜೆಪಿ ನೀಡಿದೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ, ಗುರುವಾರ ಸಂಜೆ 5 ಗಂಟೆಗೆ ನಡೆಯಲಿರುವ ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮುಂಬೈನ ಆಜಾದ್ ಮೈದಾನದಲ್ಲಿ ಸಕಲ ಸಿದ್ಧತೆ ನಡೆದಿವೆ. ಪ್ರಧಾನಿ ಮೋದಿ ಸೇರಿ ಎರಡು ಸಾವಿರ ಗಣ್ಯರು, 40,000 ಸಾವಿರ ಕಾರ್ಯಕರ್ತರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ:  ತಟಸ್ಥ ನಿಲುವಿನ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ: ಯತ್ನಾಳ್

    ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ನಂತರ ಪಕ್ಷದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಫಡ್ನವಿಸ್‌, ಪ್ರಧಾನಿ ಮೋದಿಯವರ ‘ಏಕ್ ಹೈ, ಸೇಫ್ ಹೈ’ ಘೋಷಣೆಯನ್ನು ಪುನರುಚ್ಚರಿಸಿದರು. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್‌ಗೆ ‘ಮಹಾ’ ಸಿಎಂ ಪಟ್ಟ – ನಾಳೆ ಪ್ರಮಾಣವಚನ ಸ್ವೀಕಾರ

    ಶಿಂಧೆ ಅವರು ಈ ಸರ್ಕಾರದಲ್ಲಿ ನಮ್ಮೊಂದಿಗೆ ಇರಬೇಕು ಎಂಬುದು ಮಹಾಯುತಿ ಕಾರ್ಯಕರ್ತರ ಆಶಯವಾಗಿದೆ. ಅವರು ನಮ್ಮೊಂದಿಗಿರುತ್ತಾರೆ ಅನ್ನೋ ಭರವಸೆ ನನಗಿದೆ, ಅವರು ನೀಡಿದ ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ. ಜನರಿಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಮಹಾರಾಷ್ಟ್ರಕ್ಕೆ ಉತ್ತಮ ಆಡಳಿತ ನೀಡಲು ಎಲ್ಲಾ ಅಗತ್ಯ ನಿರ್ಧಾರಗಳನ್ನು ಸಾಮೂಹಿಕವಾಗಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಮಾಜಿ ಡಿಸಿಎಂ ಮೇಲೆ ಗುಂಡಿನ ದಾಳಿ; ಆರೋಪಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ

    ಫಡ್ನವಿಸ್‌ ರಾಜಕೀಯ ಪಥ
    * 1970ರ ಜುಲೈ 22ರಂದು ನಾಗ್ಪುರದಲ್ಲಿ ಫಡ್ನವಿಸ್ ಜನನ
    * ಜನಸಂಘದಲ್ಲಿ ಕೆಲಸ ಮಾಡಿದ್ದ ತಂದೆ ಗಂಗಾಧರ‌ ಫಡ್ನವಿಸ್
    * 1989ರಲ್ಲಿ ಎಬಿವಿಪಿಗೆ ಸೇರ್ಪಡೆ.. ನಾಗ್ಪುರ ಪಾಲಿಕೆ ಸದಸ್ಯರಾಗಿ ಆಯ್ಕೆ
    * 1997ರಲ್ಲಿ ನಾಗ್ಪುರ ಪಾಲಿಕೆಯ ಮೇಯರ್ ಆಗಿ ಆಯ್ಕೆ.. ಆಗ ಅವರ ವಯಸ್ಸು 27 ವರ್ಷ
    * 1999ರಿಂದ ಈವರೆಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ
    * 2014ರಲ್ಲಿ ಮೊದಲ ಬಾರಿಗೆ ಸಿಎಂ… ಆಗ ಅವರ ವಯಸ್ಸು 44 ವರ್ಷ
    * 2019ರಲ್ಲಿ 2ನೇ ಬಾರಿ ಸಿಎಂ… ಬರೀ ಐದು ದಿನದಲ್ಲೇ ಸರ್ಕಾರ ಪತನ
    * ಶಿಂಧೆ ಸರ್ಕಾರದಲ್ಲಿ ಡಿಸಿಎಂ ಆಗಿ ಸೇವೆ..
    * 2024… ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆ

  • ಮಹರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು – ಇಂದು ಮುಂಬೈನಲ್ಲಿ ಬಿಜೆಪಿಯಿಂದ ಮಹತ್ವದ ಸಭೆ

    ಮಹರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು – ಇಂದು ಮುಂಬೈನಲ್ಲಿ ಬಿಜೆಪಿಯಿಂದ ಮಹತ್ವದ ಸಭೆ

    – ಫಡ್ನವೀಸ್‌ ಸಿಎಂ, ಶಿಂಧೆ ಡಿಸಿಎಂ?

    ಮುಂಬೈ: ಮಹರಾಷ್ಟ್ರದಲ್ಲಿ (Maharashtra) ಸರ್ಕಾರ ರಚನೆ ಕಸರತ್ತು ಇನ್ನೂ ನಡೆಯುತ್ತಿದೆ. ಇಂದು ಮುಂಬೈನಲ್ಲಿ ಬಿಜೆಪಿಯಿಂದ ಮಹತ್ವದ ಸಭೆ ನಡೆಯಲಿದೆ.

    ವೀಕ್ಷಕರು ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ. ಮಾಜಿ ಸಿಎಂ ವಿಜಯ್ ರೂಪಾಣಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಸಿಎಂ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಜಾರಿಗೊಳಿಸಿದ್ದ ಸೇನಾಡಳಿತ ವಾಪಸ್‌

    ಅಭಿಪ್ರಾಯ ಸಂಗ್ರಹದ ಬಳಿಕ ಸಿಎಂ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ. ನಾಳೆ ಸಿಎಂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ.

    ಏಕನಾಥ್ ಶಿಂಧೆ ಮನವೊಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಡಿಸಿಎಂ ಹುದ್ದೆಗೆ ಬಿಜೆಪಿ ನಾಯಕರು ಮನವೊಲಿಸಿದ್ದಾರೆ. ದೇವೇಂದ್ರ ಪಡ್ನವೀಸ್ ಸೇರಿದಂತೆ ಹಲವು ಪ್ರಮುಖರಿಂದ ಮನವೊಲಿಕೆ ಕಾರ್ಯ ಯಶಸ್ವಿಯಾಗಿದೆ. ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಸುದೀರ್ಘ ಸಭೆಗಳ ಬಳಿಕ ಡಿಸಿಎಂ ಸ್ಥಾನಕ್ಕೆ ಏಕನಾಥ್‌ ಶಿಂಧೆ ಒಪ್ಪಿಕೊಂಡಿದ್ದಾರೆ. ಹೀಗಾಗಿ, ದೇವೇಂದ್ರ ಪಡ್ನವೀಸ್ ಸಿಎಂ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ.

    ಮಹರಾಷ್ಟ್ರದಲ್ಲಿ ಸರ್ಕಾರ ರಚನೆ ಸೂತ್ರ ಹೇಗಿದೆ?
    * ಗೃಹ, ಕಂದಾಯ ಸೇರಿ 21-22 ಸಚಿವಾಲಯಗಳು ಬಿಜೆಪಿ ಪಾಲಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಜತೆಗೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಅಧ್ಯಕ್ಷ ಸ್ಥಾನಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.
    * ಶಿವಸೇನೆಯು ಸಂಪುಟದಲ್ಲಿ 16 ಸಚಿವಾಲಯಗಳನ್ನು ನೀಡುವಂತೆ ಬೇಡಿಕೆಯಿಟ್ಟಿದೆ. ಆದರೆ, ನಗರಾಭಿವೃದ್ಧಿ ಸೇರಿ 12 ಖಾತೆಗಳಷ್ಟೇ ಶಿವಸೇನೆಗೆ ಸಿಗುವ ಸಾಧ್ಯತೆಯಿದೆ.
    * ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಶಿವಸೇನೆ ಪೈಪೋಟಿ ನಡೆಸುತ್ತಿದ್ದು, ಈಗಾಗಲೇ ಉಪ ಸಭಾಪತಿ ಸ್ಥಾನವನ್ನು ಅಲಂಕರಿಸಿದೆ.
    * ಹಣಕಾಸು, ಡೆಪ್ಯುಟಿ ಸ್ಪೀಕರ್ ಸೇರಿ 9-10 ಸಚಿವಾಲಯಗಳು ಎನ್‌ಸಿಪಿಗೆ ಲಭಿಸುವ ಸಾಧ್ಯತೆಯಿದೆ.

  • ಈಗಾಗಲೇ ನನ್ನ ಬೇಷರತ್ ಬೆಂಬಲ ನೀಡಿದ್ದೇನೆ: ‘ಮಹಾ’ ಸಿಎಂ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗೆ ಶಿಂಧೆ ಬೆಂಬಲ

    ಈಗಾಗಲೇ ನನ್ನ ಬೇಷರತ್ ಬೆಂಬಲ ನೀಡಿದ್ದೇನೆ: ‘ಮಹಾ’ ಸಿಎಂ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗೆ ಶಿಂಧೆ ಬೆಂಬಲ

    ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಅಭ್ಯರ್ಥಿಗೆ ತಮ್ಮ ಬೇಷರತ್‌ ಬೆಂಬಲ ಇದೆ ಎಂದು ನಿಯೋಜಿತ ಸಿಎಂ ಮತ್ತು ಶಿವಸೇನೆ ಮುಖ್ಯಸ್ಥ ಏಕನಾಥ್‌ ಶಿಂಧೆ ಪುನರುಚ್ಚರಿಸಿದ್ದಾರೆ. ಆ ಮೂಲಕ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗೆ ತಮ್ಮ ಬೆಂಬಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

    ಮಹಾರಾಷ್ಟ್ರ ಚುನಾವಣೆ ಬಳಿಕ ವಿರಾಮ ತೆಗೆದುಕೊಳ್ಳಲು ಶಿಂಧೆ ಅವರು ಸತಾರಾ ಜಿಲ್ಲೆಯ ತಮ್ಮ ಹುಟ್ಟೂರಿಗೆ ಹೋಗಿದ್ದಾರೆ. ಸದ್ಯ ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದು, ಆರಾಮಾಗಿದ್ದೇನೆಂದು ತಿಳಿಸಿದ್ದಾರೆ.

    ನಾನು ಈಗ ಚೇತರಿಸಿಕೊಂಡಿದ್ದೇನೆ. ಬಿಡುವಿಲ್ಲದ ಚುನಾವಣಾ ಕೆಲಸಗಳ ನಂತರ ನಾನು ವಿಶ್ರಾಂತಿ ಪಡೆಯಲು ಇಲ್ಲಿಗೆ ಬಂದಿದ್ದೇನೆ. 2.5 ವರ್ಷಗಳು ಮುಖ್ಯಮಂತ್ರಿಯಾಗಿ ನಾನು ಯಾವುದೇ ರಜೆ ತೆಗೆದುಕೊಂಡಿಲ್ಲ. ಜನರು ನನ್ನನ್ನು ಇಲ್ಲಿ ಭೇಟಿಯಾಗುತ್ತಿದ್ದಾರೆ. ನಾನು ಈಗಾಗಲೇ ಪಕ್ಷದ ನಾಯಕತ್ವಕ್ಕೆ ನನ್ನ ಬೇಷರತ್ ಬೆಂಬಲವನ್ನು ನೀಡಿದ್ದೇನೆ. ಅವರ ನಿರ್ಧಾರವನ್ನು ಬೆಂಬಲಿಸುತ್ತೇನೆಂದು ಹೇಳಿದ್ದಾರೆ.

    ಕಳೆದ 2.5 ವರ್ಷಗಳ ನಮ್ಮ ಸರ್ಕಾರದ ಕೆಲಸಗಳು ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತವೆ. ಅದಕ್ಕಾಗಿಯೇ ಜನರು ನಮಗೆ ಐತಿಹಾಸಿಕ ಜನಾದೇಶವನ್ನು ನೀಡಿದರು. ವಿರೋಧ ಪಕ್ಷದ ನಾಯಕನ ಆಯ್ಕೆಗೂ ಅವರಿಗೆ ಅವಕಾಶ ಇಲ್ಲದಂತೆ ಮಾಡಿದ್ದಾರೆ. ಮಹಾಯುತಿಯ ಎಲ್ಲಾ ಮೂರು ಪಕ್ಷಗಳು ನಾಳೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುತ್ತವೆ ಎಂದು ಮಾಹಿತಿ ನೀಡಿದ್ದಾರೆ.

    ಇದೇ ನ.23 ರಂದು ಪ್ರಕಟವಾದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಭರ್ಜರಿ ಜಯ ಸಾಧಿಸಿತು. ಆದರೆ ಮೈತ್ರಿಕೂಟವು ಇನ್ನೂ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.

    280 ಸದಸ್ಯ ಬಲದ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಬಿಜೆಪಿ 132 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದರ ಮಿತ್ರಪಕ್ಷಗಳಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಗೆದ್ದವು.

  • ಲೋಕಸಭಾ ಚುನಾವಣೆ: ಶಿವಸಂಕಲ್ಪ ಅಭಿಯಾನ ಘೋಷಿಸಿದ ಸಿಎಂ ಏಕನಾಥ್‌ ಶಿಂಧೆ

    ಲೋಕಸಭಾ ಚುನಾವಣೆ: ಶಿವಸಂಕಲ್ಪ ಅಭಿಯಾನ ಘೋಷಿಸಿದ ಸಿಎಂ ಏಕನಾಥ್‌ ಶಿಂಧೆ

    ಮುಂಬೈ: ಮುಂಬರುವ ಲೋಕಸಬಾ ಚುನಾವಣೆಯ (Loksabha Election) ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆಯವರು (Eknath Shinde) ಶಿವಸಂಕಲ್ಪ ಅಭಿಯಾನವನ್ನು ಘೋಷಿಸಿದ್ದಾರೆ.

    ಗುರುವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, 2024ರ ಮೊದಲಾರ್ಧದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುವಂತೆ ಕೇಳಿಕೊಂಡರು. ಅಲ್ಲದೆ ʼಶಿವಸಂಕಲ್ಪ ಅಭಿಯಾನʼದ (Shivsankalp Abhiyaan) ಭಾಗವಾಗಿ ರಾಜ್ಯದ ಎಲ್ಲಾ 48 ಕ್ಷೇತ್ರಗಳಲ್ಲಿ ಪ್ರವಾಸ ಮಾಡುವುದಾಗಿ ಘೋಷಿಸುವ ಮೂಲಕ ಶಿವಸೇನೆಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

    ಬಿಜೆಪಿ (BJP) ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (NCP) ಅಜಿತ್ ಪವಾರ್ ಬಣವನ್ನೂ ಒಳಗೊಂಡಿರುವ ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತೆ ಇದೇ ವೇಳೆ ಶಿಂಧೆ ಕರೆಕೊಟ್ಟರು. ಇನ್ನು ಶಿವಸಂಕಲ್ಪ ಅಭಿಯಾನ ಜನವರಿ 6 ರಿಂದ ಯವತ್ಮಾಲ್-ವಾಶಿಮ್ ಕ್ಷೇತ್ರದಿಂದ ಪ್ರಾರಂಭವಾಗಲಿದೆ. ಮುಂದಿನ ತಿಂಗಳಲ್ಲಿ ಶಿಂಧೆ ಅವರು ರಾಜ್ಯದ ವಿವಿಧ ಪ್ರದೇಶಗಳನ್ನು ಒಳಗೊಂಡ 15 ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಸಿಎಂ ಪಕ್ಷ ತಿಳಿಸಿದೆ.

    2019 ರ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ 48 ಸ್ಥಾನಗಳ ಪೈಕಿ ಬಿಜೆಪಿ 23 ಸ್ಥಾನಗಳನ್ನು ಪಡೆದುಕೊಂಡರೆ, ಶಿವಸೇನೆ 18 ಸ್ಥಾನಗಳನ್ನು ಮತ್ತು ಎನ್‌ಸಿಪಿ 4 ಸ್ಥಾನಗಳನ್ನು ಗಳಿಸಿತು. ಕಾಂಗ್ರೆಸ್ ಮತ್ತು ಎಐಎಂಐಎಂ ತಲಾ ಒಂದೊಂದು ಸ್ಥಾನ ಗೆದ್ದರೆ, ಇನ್ನೊಂದು ಕ್ಷೇತ್ರ ಸ್ವತಂತ್ರ ಅಭ್ಯರ್ಥಿಯ ಪಾಲಾಯಿತು.

  • ಬಿಜೆಪಿ ನೇಷನ್ ಫಸ್ಟ್ ಅಂದ್ರೆ, ಕಾಂಗ್ರೆಸ್ ಕರಪ್ಷನ್ ಫಸ್ಟ್ ಎನ್ನುತ್ತೆ – ಏಕನಾಥ್ ಶಿಂಧೆ

    ಬಿಜೆಪಿ ನೇಷನ್ ಫಸ್ಟ್ ಅಂದ್ರೆ, ಕಾಂಗ್ರೆಸ್ ಕರಪ್ಷನ್ ಫಸ್ಟ್ ಎನ್ನುತ್ತೆ – ಏಕನಾಥ್ ಶಿಂಧೆ

    – ಉಡುಪಿ, ಕಾಪುನಲ್ಲಿ ಬಿಜೆಪಿ ಪರ ಮಹಾರಾಷ್ಟ್ರ ಸಿಎಂ ಪ್ರಚಾರ

    ಉಡುಪಿ: ನೇಷನ್ ಫಸ್ಟ್ ಎನ್ನುವ ಪಕ್ಷ ಬಿಜೆಪಿ (BJP). ಕರಪ್ಷನ್ ಫಸ್ಟ್ ಅನ್ನೋ ಪಕ್ಷ ಕಾಂಗ್ರೆಸ್ (Congress) ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಉಡುಪಿಯಲ್ಲಿ (Udupi) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾನು ಓಡಾಟ ಮಾಡುತ್ತಿದ್ದೇನೆ. ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತದೆ. ಜನ ಡಬಲ್ ಎಂಜಿನ್ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಅಭಿವೃದ್ಧಿ, ಕಾಂಗ್ರೆಸ್‌ನ ಒಡೆದು ಆಳುವ ನೀತಿ ನಡುವೆ ಚುನಾವಣೆ ನಡೆಯುತ್ತಿದೆ: ಬೊಮ್ಮಾಯಿ

    ಕರ್ನಾಟಕದಲ್ಲಿ ಬಿಜೆಪಿಗೆ ಅನುಕೂಲಕರ ಸ್ಥಿತಿಯಿದೆ. ಮೋದಿಜಿ ಅವರ ರೋಡ್ ಶೋ ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದೆ. ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರಣ ಸಂಪೂರ್ಣ ಬದಲಾಗಿದೆ. ಬಿಜೆಪಿಗೆ ಪೂರ್ಣ ಬಹುಮತ ಸಿಗುತ್ತೆ ಎಂಬ ವಿಶ್ವಾಸವಿದೆ. ಇದು ಕೇವಲ ಕರ್ನಾಟಕ ಚುನಾವಣೆ ಅಲ್ಲ ದೇಶದ ಚುನಾವಣೆ. ಇದು ಒಂದು ರಾಜ್ಯಕ್ಕೆ ಸೀಮಿತವಾದ ಚುನಾವಣೆ ಅಲ್ಲ, ಮೋದಿಜಿ ಅವರ ಚುನಾವಣೆ ಎಂದು ತಿಳಿಸಿದರು.

    ದೇಶದ ಆರ್ಥಿಕ ವ್ಯವಸ್ಥೆ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಬಂದಿದೆ. ಪ್ರಪಂಚದ ಬೇರೆ ದೇಶಗಳ ಆರ್ಥಿಕ ಸ್ಥಿತಿ ಹದಗಟ್ಟಿದೆ. ಭಾರತದ ಆರ್ಥಿಕ ಸ್ಥಿತಿ ಸದೃಢವಾಗಿದ್ದು, ಹೆಮ್ಮೆಯಿಂದ ಭಾರತದ ಹೆಸರು ಹೇಳುತ್ತಿದ್ದಾರೆ. ಜಿ20 ಅಧ್ಯಕ್ಷತೆ ನಮ್ಮ ದೇಶಕ್ಕೆ ಸಿಕ್ಕಿರುವುದು ಗೌರವದ ವಿಚಾರ ಎಂದರು. ಇದನ್ನೂ ಓದಿ: ಮೇ 13ಕ್ಕೆ ಹನುಮಾನ್ ಗದಾ ಕಾಂಗ್ರೆಸ್ ಮೇಲೆ ಹೇಗೆ ಪ್ರಹಾರ ಮಾಡುತ್ತೆ ನೋಡಿ: ಭಗವಂತ್ ಖೂಬಾ

    ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದಾಗ ಜನರಿಗೆ ಅನುಕೂಲವಾಗುತ್ತೆ. ನಮ್ಮ ಸರ್ಕಾರ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ನಮ್ಮ ಸರ್ಕಾರ ಬಂದ ಬಳಿಕ ಮಹಾರಾಷ್ಟ್ರದ ಅಭಿವೃದ್ಧಿ ಮತ್ತೆ ಸಹಜವಾಗಿದೆ. ಕರ್ನಾಟಕಕ್ಕೂ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಅನುದಾನ ನೀಡಿದೆ. ಕರಾವಳಿಗರಲ್ಲಿ ಅನೇಕರ ಕರ್ಮಭೂಮಿ ಮಹಾರಾಷ್ಟ್ರವಾಗಿದೆ. ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಾಜ್ಯ ಮತ್ತು ಕೇಂದ್ರದಲ್ಲಿ ಪ್ರತ್ಯೇಕ ಸರ್ಕಾರಗಳಿದ್ದರೆ ವಿಕಾಸಕ್ಕೆ ಹಿನ್ನಡೆಯಾಗುತ್ತೆ. ಬಿಜೆಪಿ ಜೊತೆ ನಮ್ಮ ಸಹಭಾಗಿತ್ವ ಇರುವ ಕಾರಣ ಬಂದಿದ್ದೇನೆ. ನಾವು ಸ್ನೇಹ ಮಾಡುತ್ತೇವೆ ಮತ್ತು ಅದನ್ನು ನಿಭಾಯಿಸುತ್ತೇವೆ. ಅಭಿವೃದ್ಧಿ ಈ ಚುನಾವಣೆಯ ಪ್ರಮುಖ ವಿಷಯ. ಕಾಂಗ್ರೆಸಿಗರು ಮೋದಿಜಿ ಅವರ ಬಗ್ಗೆ ಅಪಶಬ್ದ ಮಾತನಾಡುತ್ತಿದ್ದಾರೆ. ವಿಷ ಸರ್ಪ ಎಂದು ಕರೆದಿದ್ದಾರೆ. ಗುಜರಾತ್ ಚುನಾವಣೆ ಕಾಲದಲ್ಲೂ ಮೌತ್ ಕ ಸೌದಾಗರ್, ಚೌಕಿದಾರ್ ಎಂದು ಹೇಳಿದರು. ಮೋದಿ ಯಾವುದಕ್ಕೂ ಸೇಡು ತೀರಿಸಿಕೊಂಡಿಲ್ಲ. ಜನರು ಸೇಡು ತೀರಿಸಿಕೊಂಡು ತಕ್ಕ ಪಾಠ ಕಲಿಸಿದ್ದಾರೆ. ಕರ್ನಾಟಕದ ಜನರು ಮೋದಿಜಿಗೆ ಮಾಡಿದ ಅವಮಾನ ಸಹಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಇದು ನನ್ನ ಕೊನೆಯ ಚುನಾವಣೆ, ಆದರೆ ಸಕ್ರಿಯ ರಾಜಕೀಯದಲ್ಲಿರುತ್ತೇನೆ: ಜಗದೀಶ್ ಶೆಟ್ಟರ್

    ಬಜರಂಗದಳ ಒಂದು ದೇಶಭಕ್ತ ಸಂಘಟನೆ. ಆರ್‌ಎಸ್‌ಎಸ್ ಒಂದು ದೇಶಭಕ್ತ ಸಂಘಟನೆ. ರಾಷ್ಟ್ರಕ್ಕೆ ಸಂಕಟ ಬಂದಾಗ ತಮ್ಮ ಪ್ರಾಣ ಒತ್ತೆಗಿಟ್ಟು ಕೆಲಸ ಮಾಡುತ್ತಾರೆ. ಬಜರಂಗದಳ ಸಂಘಟನೆಯ ಬ್ಯಾನ್ ಹೇಗೆ ಮಾಡುತ್ತೀರಿ? ಭಜರಂಗಿಯ ಅವಮಾನ ಮತ್ತು ಮೋದಿಜಿಯ ಅವಮಾನಕೆ ತಕ್ಕ ಉತ್ತರ ಸಿಗುತ್ತದೆ ಎಂದು ಕಾಂಗ್ರೆಸ್‌ಗೆ ಎಚ್ಚರಿಸಿದರು.

  • ಏಕನಾಥ್‌ ಶಿಂಧೆ ಸಿಎಂ – ನಾನು ಸರ್ಕಾರದಲ್ಲಿ ಇರಲ್ಲ ಎಂದ ಫಡ್ನವೀಸ್‌

    ಏಕನಾಥ್‌ ಶಿಂಧೆ ಸಿಎಂ – ನಾನು ಸರ್ಕಾರದಲ್ಲಿ ಇರಲ್ಲ ಎಂದ ಫಡ್ನವೀಸ್‌

    ಮುಂಬೈ: ಮಹಾರಾಷ್ಟ್ರ ಮೈತ್ರಿಕೂಟದ ವಿರುದ್ಧ ಬಂಡಾಯ ಎದ್ದು ಸರ್ಕಾರ ಬೀಳಲು ಕಾರಣರಾದ ಏಕನಾಥ್‌ ಶಿಂಧೆಗೆ ಬಿಜೆಪಿ ಮುಖ್ಯಮಂತ್ರಿ ಪಟ್ಟ ಕಟ್ಟಿದೆ. ಶಿಂಧೆ ಅವರನ್ನೇ ಸಿಎಂ ಎಂದು ಘೋಷಿಸುವ ಮೂಲಕ ಉದ್ಧವ್‌ ಠಾಕ್ರೆಗೆ ಬಿಜೆಪಿ ಮತ್ತೊಂದು ಶಾಕ್‌ ನೀಡಿದೆ.

    ಇಂದು ರಾತ್ರಿ 7:30ಕ್ಕೆ ಏಕನಾಥ್‌ ಶಿಂಧೆ ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ಹಾಗೂ ಶಿವಸೇನಾ ಶಿಂಧೆ ಬಣ ನೇತೃತ್ವದಲ್ಲಿ ಸರ್ಕಾರ ಆಡಳಿತ ನಡೆಸಲಿದೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್, ಏಕನಾಥ್‌ ಶಿಂಧೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾನು ಸರ್ಕಾರದಲ್ಲಿ ಇರಲ್ಲ ಎಂದು ತಿಳಿಸಿದ್ದಾರೆ.

    ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಏಕನಾಥ್‌ ಶಿಂಧೆ ಅವರನ್ನೇ ಮುಖ್ಯಮಂತ್ರಿ ಎಂದು ಘೋಷಿಸಿ ಬಿಜೆಪಿ ಅಚ್ಚರಿ ಮೂಡಿಸಿದೆ.

    ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟದ ವಿರುದ್ಧ ಬಂಡಾಯ ಎದ್ದು ಶಿವಸೇನಾದ ಶಾಸಕರ ತಂಡವೊಂದು ಗುವಾಹಟಿಯ ಹೋಟೆಲ್‌ನಲ್ಲಿ ಬೀಡುಬಿಟ್ಟಿತ್ತು. ಈ ತಂಡದ ನೇತೃತ್ವವನ್ನು ಏಕನಾಥ್‌ ಶಿಂಧೆ ವಹಿಸಿದ್ದರು. ಈ ವೇಳೆ ಶಿಂಧೆ ಬಣದೊಂದಿಗೆ ಬಿಜೆಪಿ ಮೈತ್ರಿ ಮಾತುಕತೆ ನಡೆಸಿತ್ತು. ಉದ್ಧವ್‌ ಠಾಕ್ರೆ ನೇತೃತ್ವದ ಸರ್ಕಾರ ಉರುಳಲು ಪ್ರಮುಖ ಕಾರಣರಾದ ಶಿಂಧೆ ಅವರನ್ನೇ ರಾಜ್ಯದ ಸಿಎಂ ಆಗಿ ಬಿಜೆಪಿ ಘೋಷಿಸಿದೆ.

    Live Tv

  • ರಾಜ್ಯಕ್ಕೆ ಮತ್ತೆ ಡಬಲ್ ಕ್ಯಾತೆ..!

    ರಾಜ್ಯಕ್ಕೆ ಮತ್ತೆ ಡಬಲ್ ಕ್ಯಾತೆ..!

    ಬೆಂಗಳೂರು: ಒಂದೆಡೆ ಮಹಾರಾಷ್ಟ್ರ ಸಿಎಂ ವೀಡಿಯೋ ಬಿಡುಗಡೆಯಾದರೆ ಮತ್ತೊಂದೆಡೆ ಗೋವಾ ಸಿಎಂ ನೀರು ಕ್ಯಾತೆ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ. ನಿತ್ಯ ಹತ್ತಾರು ಬಗೆಯ ಕ್ಯಾತೆಗಳನ್ನ ನೆರೆಯ ರಾಜ್ಯಗಳು ತೆಗೆಯುತ್ತಿವೆ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

    ನಗರದಲ್ಲಿ ಹೋರಾಟ ಸ್ವರೂಪ ತೀವ್ರವಾಗಿಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳ ಲೆಕ್ಕಚಾರ ಇದೆ. ಹೌದು, ಮಹಾರಾಷ್ಟ್ರ ಸಿಎಂ 50 ವರ್ಷದ ಹಿಂದಿನ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕಾರವಾರ ಸಹಕಾರ ಬ್ಯಾಂಕ್ ಮರಾಠಿ ಭಾಷೆ ಬಳಕೆ ಮಾಡಿರುವುದು, ಬೆಳಗಾವಿ ಬ್ರಿಡ್ಜ್ ಗಳ ಬಳಿ ಮರಾಠಿ ಭಾಷೆ ಬಳಕೆಯ ಸಾಕ್ಷ್ಯಗಳ ಬಿಡುಗಡೆ ಮಾಡಿದ್ದಾರೆ.

    ಮತ್ತೊಂದೆಡೆ ಮಹಾದಾಯಿ ನೀರು ಹಂಚಿಕೆ ರಾಜಿ ಇಲ್ಲ ಸರ್ವಪಕ್ಷ ನಿಯೋಗ ಪಿಎಂ ಬಳಿ ನಿಯೋಗ ಹೊರಡುವುದಾಗಿ ಗೋವಾ ಸಿಎಂ ಪ್ರಸ್ತಾಪ ಮಾಡಿದ್ದಾರೆ. ಒಂದೇ ಬಾರಿ ಎರಡೆರಡು ಭಾಗದ ಡಬಲ್ ಕ್ಯಾತೆ ಬೆನ್ನತ್ತಿದೆ. ಇದೆಲ್ಲ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಈ ಬಗ್ಗೆ ಹಲವರು ಅಭಿಪ್ರಾಯಿಸಿ, ನಮ್ಮ ಸಂಸದರು 25 ಜನರನ್ನ ಗೆಲ್ಲಿಸಲಾಗಿದೆ. ನೀರಿನ ವಿಚಾರದಲ್ಲಿ ರಾಜಿ ಮಾಡದೇ ನೀವು ಸರ್ವಪಕ್ಷಗಳ ನಿಯೋಗ ಹೋಗಿ ಎಂದು ಆಗ್ರಹಿಸಿದರು. ಇದೇ ವೇಳೆ ಕನ್ನಡ ಹೋರಾಟಗಾರ ಪ್ರವೀಣ್ ಶೆಟ್ಟಿ ಮಾತನಾಡಿ, ತಲೆಕೆಟ್ಟ ಮಹಾರಾಷ್ಟ್ರ ಸಿಎಂ ವೀಡಿಯೋ ಮಾತ್ರ ಸಾಕ್ಷಿ ಆಗಲ್ಲ. ಕರ್ನಾಟಕ ನೆಲದಲ್ಲಿ ಎಲ್ಲ ಭಾಷೆಯ ಶಾಲೆ ತೆರೆಯಲು ಅವಕಾಶ ಇದೆ. ಇದು ಸಾಕ್ಷಿ ಆಗಲ್ಲ ಎಂದು ಆಕ್ರೋಶ ಹೊರಹಾಕಿದರು. ಜೊತೆಗೆ ಕೂಡಲೇ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಕೈ ಬಿಡಿ ಎಂದು ಆಗ್ರಹಿಸಿದರು.

    ಇತ್ತ ಕನ್ನಡ ಚಳವಳಿ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಮಹಾರಾಷ್ಟ್ರ ಸಿಎಂಗೆ ಭಾಷೆ ಮೇಲೆ ಅಧಿಕಾರ ಸಿಕ್ಕಿದೆ. ಅದರ ಪ್ರೇಮ ಗೋವಾ ಸಿಎಂಗೂ ರಾಜ್ಯದ ನೀರಿನ ಆಸಕ್ತಿ ಕ್ಯಾತೆ ತೆಗೆಯುತ್ತಾರೆ. ಇತ್ತ ನೀವು ಸಂಸದರು ನಿಮ್ಮ ಜವಾಬ್ದಾರಿ ಜಾಸ್ತಿ ರಕ್ಷಣೆ ಮಾಡ್ರಿ, ಕನ್ನಡಪರ ಸಂಘಟನೆಗಳು ಮಾತ್ರ ನಮ್ಮ ಜವಾಬ್ದಾರಿಗೆ ಸದಾ ಬದ್ಧವಾಗಿದೆ. ಕೂಡಲೇ ಸಿಎಂ ರಾಜೀನಾಮೆ ಕೊಡಲಿ ಇಲ್ಲ ನ್ಯಾಯ ಕೊಡಲಿ. ನಾಳೆ ಮರಾಠ ಪ್ರಾಧಿಕಾರ ಕೈ ಬಿಡುವಂತೆ ರೈಲು ಬಂದ್ ಚಳವಳಿ ತೀವ್ರ ಸ್ವರೂಪ ಪಡೆಯಲಿದೆ ಎಂದರು.

  • ಕೊರೊನಾದಿಂದ ಗುಣಮುಖರಾಗಿದ್ದ ಮಹಾರಾಷ್ಟ್ರದ ಮಾಜಿ ಸಿಎಂ ನಿಧನ

    ಕೊರೊನಾದಿಂದ ಗುಣಮುಖರಾಗಿದ್ದ ಮಹಾರಾಷ್ಟ್ರದ ಮಾಜಿ ಸಿಎಂ ನಿಧನ

    ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಶಿವಾಜಿರಾವ್ ಪಾಟೀಲ್ ನೀಲಂಗೆಕರ್ (91) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.

    ಶಿವಾಜಿರಾವ್ ಪಾಟೀಲ್ ಅವರು ಇತ್ತೀಚೆಗೆ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಪಾಟೀಲ್ ಅವರು ಕಿಡ್ನಿ ಸಮಸ್ಯೆಗೆ ಸಂಬಂಧಿಸಿದ ತೊಂದರೆಗಳಿಂದಾಗಿ ನಿಧನರಾಗಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

    ಶಿವಾಜಿರಾವ್ ಪಾಟೀಲ್ ಕಳೆದ ತಿಂಗಳು ಕೊರೊನಾ ಟೆಸ್ಟ್ ಮಾಡಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿತ್ತು. ನಂತರ ಅವರು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅಂದರೆ ನಾಲ್ಕು ದಿನಗಳ ಹಿಂದೆ ಮತ್ತೆ ಟೆಸ್ಟ್ ಮಾಡಿದಾಗ ಕೊರೊನಾ ನೆಗೆಟಿವ್ ಬಂದಿದೆ. ಹೀಗಾಗಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

    ಕೊರೊನಾ ವೈರಸ್ ಪತ್ತೆಯಾದ ನಂತರ ಕಾಂಗ್ರೆಸ್ ಮುಖಂಡರು ಲಾತೂರ್ ಜಿಲ್ಲೆಯ ನೀಲಂಗದಲ್ಲಿರುವ ತಮ್ಮ ನಿವಾಸದಿಂದ ಪುಣೆಗೆ ಹೋಗಿದ್ದರು.

    ಲಾತೂರ್‌ನ ಪ್ರಬಲ ನಾಯಕರಾದ ಪಾಟೀಲ್ ನೀಲಂಗೆಕರ್ ಅವರು 1985 ರಿಂದ 1986 ರ ಮಾರ್ಚ್ ವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಇದಕ್ಕೂ ಮೊದಲು ನೀಲಂಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

    1985 ರಲ್ಲಿ ಎಂಡಿ ಪರೀಕ್ಷೆಯ ಫಲಿತಾಂಶದಲ್ಲಿ ವಂಚನೆ ಆರೋಪದ ಮೇಲೆ ಬಾಂಬೆ ಹೈಕೋರ್ಟ್ ಪಾಟೀಲ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

  • ಬೆಳಗಾವಿ ಗಡಿ ವಿವಾದವನ್ನು ಕಾಶ್ಮೀರದ ಪಿಓಕೆಗೆ ಹೋಲಿಸಿದ ಮಹಾ ಸಿಎಂ

    ಬೆಳಗಾವಿ ಗಡಿ ವಿವಾದವನ್ನು ಕಾಶ್ಮೀರದ ಪಿಓಕೆಗೆ ಹೋಲಿಸಿದ ಮಹಾ ಸಿಎಂ

    ಬೆಳಗಾವಿ: ಜಿಲ್ಲೆಯ ಗಡಿ ವಿವಾದ ಈಗಾಗಲೇ ಸರ್ವೋಚ್ಛ ನ್ಯಾಯಾಲಯದಲ್ಲಿದೆ. ಆದರೆ ನ್ಯಾಯಾಲಯದ ತೀರ್ಪು ಬರುವವರೆಗೆ ಸುಮ್ಮನಿರದೆ ಮಹಾರಾಷ್ಟ್ರದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರ ಹಿಡಿದ ಶೀವಸೇನೆಯ ಸಿಎಂ ಬೆಳಗಾವಿ ಗಡಿ ವಿಚಾರವಾಗಿ ಲಘುವಾಗಿ ಮಾತನಾಡಿದ್ದಾರೆ.

    ಬೆಳಗಾವಿ, ನಿಪ್ಪಾಣಿ, ಕಾರವಾರ ಪ್ರದೇಶದ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಪ್ರದೇಶವಾಗಿದೆ. ಅಲ್ಲಿರುವ ಮರಾಠಿಗರು ಹಿಂದೂಗಳಲ್ಲವೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದ ನಾಗಪೂರದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡುವಾಗ ಬೆಳಗಾವಿ ಗಡಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಬೆಳಗಾವಿ, ಕಾರವಾರ ಪಾಕಿಸ್ತಾನದಲ್ಲಿದೆಯೋ, ಬ್ರಹ್ಮದೇಶದಲ್ಲಿದೆಯೋ? ಅಥವಾ ಭಾರತದಲ್ಲಿದೆಯೋ? ಎಂದು ಉದ್ಧವ್ ಪ್ರಶ್ನೆ ಮಾಡಿದ್ದಾರೆ.

    ರಾಜ್ಯದ ಗಡಿಯಲ್ಲಿರುವ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ಹಲವಾರು ವರ್ಷಗಳಿಂದ ಭಾಷಾ ಅತ್ಯಾಚಾರವೆಸಗುತ್ತಿದೆ. ನ್ಯಾಯಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ ಕೇಂದ್ರ ಸರ್ಕಾರ ಮರಾಠಿ ಭಾಷಿಕ ಹಿಂದೂಗಳ ಪರವಾಗಿ ನಿಲ್ಲದೆ ಕರ್ನಾಟಕ ಸರ್ಕಾರದ ಪರವಾಗಿ ನಿಂತಿದೆ ಎಂದು ಮಹಾರಾಷ್ಟ್ರದ ಸಿಎಂ ಗಂಭೀರ ಆರೋಪ ಮಾಡಿದ್ದಾರೆ.

    ಬೆಳಗಾವಿ, ಕಾರವಾರ, ನಿಪ್ಪಾಣಿಯಲ್ಲಿ ಮರಾಠಿ ಭಾಷಿಕ ಹಿಂದೂಗಳಿಗೆ ಕೇಂದ್ರ ಸರ್ಕಾರ ಮೊದಲು ನ್ಯಾಯ ಕೊಡಿ ಎಂದು ಪರೋಕ್ಷವಾಗಿ ಹೇಳಿ ಪ್ರಧಾನಿ ಹಾಗೂ ಗ್ರಹ ಸಚಿವರನ್ನು ಕುಟುಕಿದ್ದಾರೆ. ಈ ಭಾಗದಲ್ಲಿರುವ ಕನ್ನಡಿಗಳು ಹಿಂದೂಗಳಲ್ಲವೆ? ಭಾಷಾ ವಿವಾದಕ್ಕೆ ತುಪ್ಪ ಸುರಿಯುವಂತೆ ಮಾತನಾಡುವ ಮಹಾರಾಷ್ಟ್ರ ಸಿಎಂ ಭಾರತದ ಒಕ್ಕೂಟದ ವ್ಯವಸ್ಥೆಯನ್ನೇ ಪ್ರಶ್ನೆ ಮಾಡಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.