Tag: ಮಹಾರಾಷ್ಟ್ರ ಗಡಿ ವಿವಾದ

  • `ಮಹಾ’ ಕ್ಯಾತೆಗೆ ವಿಧಾನಸಭೆಯಲ್ಲಿ ಸರ್ವಾನುಮತದ ಖಂಡನಾ ನಿರ್ಣಯ ಅಂಗೀಕಾರ

    `ಮಹಾ’ ಕ್ಯಾತೆಗೆ ವಿಧಾನಸಭೆಯಲ್ಲಿ ಸರ್ವಾನುಮತದ ಖಂಡನಾ ನಿರ್ಣಯ ಅಂಗೀಕಾರ

    ಬೆಳಗಾವಿ: ಮಹಾರಾಷ್ಟ್ರದ ಗಡಿ ವಿವಾದ (Maharashtra Border Controversy) ಕ್ಯಾತೆ, ಪುಂಡಾಟಿಕೆ ಖಂಡಿಸಿ ರಾಜ್ಯ ವಿಧಾನಸಭೆಯಲ್ಲಿ (Assembly) ಸರ್ವಾನುಮತದಿಂದ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ.

    ಮಹಾರಾಷ್ಟ್ರದ (Maharashtra) ಕ್ಯಾತೆ, ಸಚಿವ ಸಂಸದನ ಪುಂಡಾಟದ ಹೇಳಿಕೆಯ ವಿರುದ್ಧ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತವಾಯ್ತು. ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮಂಡಿಸಿದ ಖಂಡನಾ ನಿರ್ಣಯ ಸರ್ವಾನುಮತದಿಂದ ಅಂಗೀಕಾರವಾಯಿತು. ಕರ್ನಾಟಕ ಜನರ ಆಶಯದಂತೆ ಒಂದಿಂಚು ನೆಲ ಬಿಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರ ಕ್ಯಾತೆ, ಸಚಿವರು, ಸಂಸದನ ಹೇಳಿಕೆ ಖಂಡನೀಯ ಎಂದು ಖಂಡನಾ ನಿರ್ಣಯ ಕೈಗೊಳ್ಳಲಾಯ್ತು. ಇದನ್ನೂ ಓದಿ: ಮಗಳ ಹುಟ್ಟುಹಬ್ಬಕ್ಕೆ ಸುವರ್ಣಸೌಧ ಬಾಡಿಗೆ ಕೊಡಿ – ಸಭಾಪತಿ, ಡಿಸಿಗೆ ಪತ್ರ ಬರೆದ ತಂದೆ

    ಇದೇ ವೇಳೆ ನಮ್ಮ ರಾಜ್ಯದ ಸಿಎಂ ಬಗ್ಗೆ ಮಾತನಾಡಿದ್ದ ಮಹಾರಾಷ್ಟ್ರದ ಸಚಿವರು ಹಾಗೂ ಸಂಸದ ಸಂಜಯ್ ರಾವತ್ ವಿರುದ್ಧ ಸಿದ್ದರಾಮಯ್ಯ (Siddaramaiah) ಕಿಡಿಕಾರಿದರು. ಮಾನ ಮರ್ಯಾದೆ ಇಲ್ಲ, ನಾವು ನಾಗರಿಕ ಭಾಷೆಯಲ್ಲೇ ಉತ್ತರ ಕೊಡಬೇಕು ಅಂತಾ ಆಕ್ರೋಶ ಹೊರ ಹಾಕಿದ್ರು. ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಂಜಯ್ ರಾವತ್ (Sanjay Raut) ಒಬ್ಬ ದೇಶದ್ರೋಹಿ, ಚೀನಾದ (China) ಏಜೆಂಟ್. ಹೀಗೆ ಮಾತನಾಡಿದ್ರೆ ಕಾನೂನು ಕ್ರಮ ಜರುಗಿಸುತ್ತೇವೆ. ಒಂದಿಂಚು ನೆಲ ಬಿಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರದ ಗಡಿ ಕ್ಯಾತೆ ಖಂಡನೀಯ ಅಂತಾ ಗುಡುಗಿದ್ರು. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ – ಇನ್ನೂ ಸ್ಪಷ್ಟ ನಿಲುವು ಪ್ರಕಟಿಸದ ಕಾಂಗ್ರೆಸ್

    ಮಹಾರಾಷ್ಟ್ರ ವಿರುದ್ಧ ಖಂಡನಾ ನಿರ್ಣಯದ ಸಾರಾಂಶ:
    ಕರ್ನಾಟಕದ (Karnataka) ನೆಲ, ಜಲದ ಹಿತ ಕಾಪಾಡಲು ಮತ್ತು ಕಾನೂನಿನ ಹೋರಾಟದ ಸಮರ್ಥನೆ ಮಾಡಲು, ಈ ಮೂಲಕ ರಾಜ್ಯ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಇತ್ತೀಚಿಗೆ ಈ ವಿಷಯದ ಬಗ್ಗೆ ಮಹಾರಾಷ್ಟ್ರದ ನಾಯಕರು ಕೊಡುತ್ತಿರುವ ಎಲ್ಲ ಹೇಳಿಕೆಗಳು ಅತ್ಯಂತ ಖಂಡನೀಯ. ಮಹಾರಾಷ್ಟ್ರದ ಸಚಿವರು ಕಾನೂನು ಸುವ್ಯವಸ್ಥೆ ಸೂಕ್ಮವಿದ್ದಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ಆಗಮಿಸಿ ಪ್ರಚೋದಿಸಲು ಯತ್ನಿಸುವ ಕಾರ್ಯವೂ ಖಂಡನೀಯ. ಕೇಂದ್ರ ಗೃಹ ಸಚಿವರು, ಎರಡು ರಾಜ್ಯಗಳ ಮಧ್ಯೆ, ಶಾಂತಿ ಸುವ್ಯವಸ್ಥೆ ಮತ್ತು ಸೌಹಾರ್ದತೆ ಕಾಪಾಡಲು ನೀಡಿರುವ ಸೂಚನೆಯನ್ನು ಸಹ ಮಹಾರಾಷ್ಟ್ರ ಉಲ್ಲಂಘಿಸುತ್ತಿದೆ.

    ಎರಡು ರಾಜ್ಯಗಳ ಸಂಬಂಧಕ್ಕೆ ಧಕ್ಕೆ ತರುವಂತಾಗಿದೆ. ಇದನ್ನು ನಿಯಂತ್ರಿಸಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸುತ್ತಾ, ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ರಾಜ್ಯ ಸರ್ಕಾರ ತರುತ್ತದೆ. ಕರ್ನಾಟಕ ನೆಲ, ಜಲ, ಭಾಷೆ ಹಾಗೂ ಕನ್ನಡಿಹರ ಹಿತಾಸಕ್ತಿಯ ವಿಷಯದಲ್ಲಿ, ಯಾವುದೇ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಕರ್ನಾಟಕದ ಜನರ ಮತ್ತು ಸದಸ್ಯರೆಲ್ಲರ ಭಾವನೆಯೂ ಒಂದೇ ಆಗಿದ್ದು, ಇದಕ್ಕೆ ಧಕ್ಕೆ ಆದಾಗ ಎಲ್ಲರೂ ಒಗ್ಗಟಿನಿಂದ ರಾಜ್ಯದ ಹಿತಾಸಕ್ತಿ ಹಾಗೂ ರಕ್ಷಣೆಗೆ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ.

    ಮಹಾರಾಷ್ಟ್ರದ ಜನತೆಯೂ, ಅನಾವಶ್ಯಕವಾಗಿ ಸೃಷ್ಟಿಸಿರುವ ಗಡಿ ವಿವಾವದ ಖಂಡಿಸಿ ರಾಜ್ಯದ ಹಿತರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ಈ ಸದನವೂ ಸರ್ವಾನುಮತದಿಂದ ನಿರ್ಣಯಿಸುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಗಡಿ ವಿವಾದ ಜೀವಂತವಾಗಿಡಲು ಮಹಾರಾಷ್ಟ್ರ ಪುಂಡಾಟಿಕೆ ಮಾಡುತ್ತಿದೆ: ಸಿದ್ದರಾಮಯ್ಯ

    ಗಡಿ ವಿವಾದ ಜೀವಂತವಾಗಿಡಲು ಮಹಾರಾಷ್ಟ್ರ ಪುಂಡಾಟಿಕೆ ಮಾಡುತ್ತಿದೆ: ಸಿದ್ದರಾಮಯ್ಯ

    ಬೆಂಗಳೂರು: ಗಡಿ ವಿವಾದವನ್ನು ಜೀವಂತವಾಗಿ ಇಡಲು ಮಹಾರಾಷ್ಟ್ರ (Maharashtra) ಗಡಿ ಕ್ಯಾತೆ ತೆಗೆಯುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆಕ್ರೋಶ ಹೊರ ಹಾಕಿದ್ದಾರೆ.

    ಬೆಳಗಾವಿ (Belagavi) ಗಡಿ ವಿವಾದದ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಡಿ ಭಾಗದ ವಿವಾದವನ್ನು ಜೀವಂತವಾಗಿಡಲು ಮಹಾರಾಷ್ಟ್ರದವರು ಹೀಗೆ ಮಾಡ್ತಿದ್ದಾರೆ. ಗಡಿ ವಿವಾದದಲ್ಲಿ ಮಹಾಜನ್ ವರದಿಯೇ ಅಂತಿಮ. ಈಗಾಗಲೇ ವರದಿ ಬಂದಿದೆ. ಅದನ್ನು ಮಹಾರಾಷ್ಟ್ರದವರು ಒಪ್ಪಲ್ಲ ಅಂದರೆ ಹೇಗೆ? ಮಹಾಜನ್ ಮಹಾರಾಷ್ಟ್ರದವರು. ಅವರು ಕೊಟ್ಟ ವರದಿ ಒಪ್ಪಿಲ್ಲ ಅಂದ್ರೆ ಹೇಗೆ ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಧರ್ಮದಂಗಲ್: ದೇವಸ್ಥಾನದ ಉತ್ಸವ, ಕಂಬಳ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

    ಮಹಾಜನ್ ವರದಿ ಒಪ್ಪಿಲ್ಲ. ಅಂದ್ರೆ ಅದು ಮಹಾರಾಷ್ಟ್ರದವರ ಪುಂಡಾಟಿಕೆ. ನಾವು ಪುಂಡಾಟಿಕೆಗೆ ಹೆದರಬಾರದು. ಸರ್ವ ಪಕ್ಷಗಳ ಸಭೆ ಕರೆಯುತ್ತೇನೆ ಅಂತ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ರು. ಆದರೆ ಇನ್ನು ಸಭೆ ಕರೆದಿಲ್ಲ ಅಂತ ಸಿಎಂ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿ, ಸರ್ಕಾರ ಉತ್ತಮ ಲಾಯರ್‌ಗಳನ್ನು ಇಟ್ಟು ವಾದ ಮಾಡಬೇಕು ಅಂತ ಸಲಹೆ ಕೊಟ್ಟರು. ಇದನ್ನೂ ಓದಿ: ಪೊಲೀಸ್ ಇಲಾಖೆಯಿಂದ ಕನ್ನಡಿಗರ ಹೋರಾಟ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡ್ತಿದೆ: ಕರವೇ ಜಿಲ್ಲಾಧ್ಯಕ್ಷ

    Live Tv
    [brid partner=56869869 player=32851 video=960834 autoplay=true]