Tag: ಮಹಾಮಳೆ

  • ತರಿಕೇರೆಯಲ್ಲಿ ಸ್ಕೂಟಿ ಸಮೇತ ಕೊಚ್ಚಿ ಹೋದ ವ್ಯಕ್ತಿ – 100 ಮೀಟರ್ ದೂರದಲ್ಲಿ ಶವ ಪತ್ತೆ

    ತರಿಕೇರೆಯಲ್ಲಿ ಸ್ಕೂಟಿ ಸಮೇತ ಕೊಚ್ಚಿ ಹೋದ ವ್ಯಕ್ತಿ – 100 ಮೀಟರ್ ದೂರದಲ್ಲಿ ಶವ ಪತ್ತೆ

    ಚಿಕ್ಕಮಗಳೂರು: ಕಿರು ಸೇತುವೆ ಮೇಲೆ ಸಂಚರಿಸುತ್ತಿದ್ದಾಗ ಸ್ಕೂಟಿ ಸಮೇತ ವ್ಯಕ್ತಿಯೊಬ್ಬರು  ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಹುಲಿತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

    ಪೊನ್ನಸ್ವಾಮಿ(45) ಮೃತಪಟ್ಟ ವ್ಯಕ್ತಿ. ಪೊನ್ನಸ್ವಾಮಿ ಲಿಂಗದಹಳ್ಳಿಯಿಂದ ಸಿದ್ದರಹಳ್ಳಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಿರು ಸೇತುವೆ ಮೇಲೆ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.

    ಅಗ್ನಿಶಾಮಕದಳ, ಪೊಲೀಸ್ ಹಾಗೂ ಸ್ಥಳಿಯರ ನಿರಂತರ ಹುಡುಕಾಟದಿಂದ ಕೊಚ್ಚಿ ಹೋದ ಜಾಗದಿಂದ ಸುಮಾರು 100 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ನೀರಗಂಡಿ ಬಳಿ ಭಾರಿ ಮಳೆಗೆ ದಾರಿ ಕಾಣದೇ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಾಲ್ವರು ಯುವಕರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

    ಕಾರು ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಹಾಸನದಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಭರತ್ ಎಂಬುವವರಿಗೆ ಸೇರಿದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

    ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಈ ಅಪಘಾತ ನಡೆದಿದ್ದು, ಇದೇ ಸ್ಥಳದಲ್ಲಿ ಪದೇ-ಪದೇ ಅಪಘಾತಗಳು ಸಂಭವಿಸುತ್ತಿವೆ. ವಾರಕ್ಕೆ ಎರಡರಿಂದ ಮೂರು ಅಪಘಾತಗಳು ಇದೇ ಸ್ಥಳದಲ್ಲಿ ಸಂಭವಿಸಿದರೂ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲವೆಂದು ಜನಸಾಮಾನ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮೃತದೇಹ ಸಿಗದ್ದಕ್ಕೆ ಗೊಂಬೆ ಅಲಂಕರಿಸಿ, ಮದುವೆ ಮಾಡಿಸಿ ಮಗಳ ಅಂತ್ಯಸಂಸ್ಕಾರ ನೆರವೇರಿಸಿದ ಹೆತ್ತವರು!

    ಮೃತದೇಹ ಸಿಗದ್ದಕ್ಕೆ ಗೊಂಬೆ ಅಲಂಕರಿಸಿ, ಮದುವೆ ಮಾಡಿಸಿ ಮಗಳ ಅಂತ್ಯಸಂಸ್ಕಾರ ನೆರವೇರಿಸಿದ ಹೆತ್ತವರು!

    ಮಡಿಕೇರಿ: ಮಹಾಮಳೆಗೆ ಕೊಚ್ಚಿ ಹೋಗಿದ್ದ ಮಗಳ ಮೃತದೇಹ ಪತ್ತೆಗಾಗಿ ಪೋಷಕರು ಹುಡುಕಾಡಿದರೂ ಶವ ಮಾತ್ರ ಪತ್ತೆಯಾಗಲೇ ಇಲ್ಲ. ಕೊನೆಗೆ ಮಗಳ ಆತ್ಮಕ್ಕೆ ಶಾಂತಿ ದೊರಕಲು ಗೊಂಬೆಯನ್ನು ಅಲಂಕರಿಸಿ, ಮದುವೆ ಮಾಡಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಮನಕಲಕುವ ಘಟನೆ ಕೊಡಗಿನ ಮದೆನಾಡಿನಲ್ಲಿ ನಡೆದಿದೆ.

    ಮಡಿಕೇರಿ ತಾಲೂಕಿನ ಮದೆನಾಡು ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜೋಡುಪಾಲ ನಿವಾಸಿ ಮಂಜುಳಾ ಭಾರೀ ಮಳೆಯಿಂದ ಉಂಟಾದ ನೆರೆಗೆ ಕೊಚ್ಚಿ ಹೋಗಿದ್ದಳು. ಕೊಚ್ಚಿ ಹೋದ ಬಳಿಕ ಆಕೆಯ ಮೃತದೇಹಕ್ಕಾಗಿ ಪೋಷಕರು, ಊರವರು ಸಾಕಷ್ಟು ಹುಡುಕಾಟ ನಡೆಸಿದ್ದರು. ಎಷ್ಟು ಹುಡುಕಾಡಿದರೂ ಶವ ಸಿಗದ ಹಿನ್ನೆಲೆಯಲ್ಲಿ ಮಗಳ ಆತ್ಮಕ್ಕೆ ಶಾಂತಿ ಸಿಗಲು ಮಂಜುಳಾ ಪೋಷಕರು ಇದು ಗೊಂಬೆಯನ್ನು ಮದುವೆ ಮಾಡಿಸಿ ಅಂತ್ಯಸಂಸ್ಕಾರ ನಡೆಸಿದರು.

    ಹೀಗಿತ್ತು ಕಾರ್ಯಕ್ರಮ:
    ಮನೆ ಕೊಚ್ಚಿಹೋದ ಸ್ಥಳದಲ್ಲೇ ಮಂಜುಳಾ ಪ್ರತಿಕೃತಿ ತಯಾರು ಮಾಡಿ ಶೃಂಗಾರ ಮಾಡಲಾಗಿತ್ತು. ಅನೇಕ ಮಹಿಳೆಯರು ಸೇರಿ ಗೊಂಬೆಗೆ ಸೀರೆ ಉಡಿಸಿ, ಮಾರುದ್ದ ಜಡೆಗೆ ಮಲ್ಲಿಗೆ ಹೂವನ್ನ ಮುಡಿಸಿದರು. ಜೀವ ಇಲ್ಲದ ಗೊಂಬೆಗೆ ಮಾನಸಿಕವಾಗಿ ಜೀವ ನೀಡಿ, ಮದುವೆಯೂ ಮಾಡಿ ಅಂತ್ಯಸಂಸ್ಕಾರಕ್ಕೆ ಸಿದ್ಧಗೊಳಿಸಲಾಯಿತು. ಸಕಲ ಪೂಜೆಗಳನ್ನು ನೆರವೇರಿಸಿ ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಪೋಷಕರು ಪ್ರಾರ್ಥನೆ ಸಲ್ಲಿಸಿದರು.

    ಮಗಳ ಮೃತದೇಹ ದೊರೆಯುತ್ತಿದ್ದರೆ, ಆಕೆಗೆ ಮುಕ್ತಿ ಕೊಡಿಸುತ್ತಿದ್ದೇವು ಎಂದು ಅಂತಾ ಮಂಜುಳಾ ತಾಯಿ ಅಳಲು ತೊಡಿಕೊಂಡರು. ಅಂತ್ಯಸಂಸ್ಕಾರ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದ ಮದೆನಾಡು ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮೌನಾಚಾರಣೆ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು. ಸಹೋದರ ಕೂಡ ತಂಗಿಯನ್ನು ನೆನಪಿಸಿಕೊಂಡು ಕಣ್ಣೀರು ಸುರಿಸಿದ್ದಾನೆ. ಮಂಜುಳಾ ಉತ್ತಮ ಥ್ರೋ ಬಾಲ್ ಆಟಗಾರ್ತಿಯಾಗಿದ್ದಳು.

    ಸೋಮಯ್ಯ ಅವರು ತಮ್ಮ ಪುತ್ರಿ ಮಂಜುಳಾನ್ನು ವ್ಯಾಸಂಗಕ್ಕಾಗಿ ತಂಗಿಯ ಮನೆಯಲ್ಲಿ ಬಿಟ್ಟಿದ್ದರು. ಮದೆನಾಡು ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಜುಳಾ, ಬಸಪ್ಪ-ಗೌರಮ್ಮ ದಂಪತಿ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಆದರೆ ಆಗಸ್ಟ್ 17ರಂದು ಸುರಿದ ಮಹಾಮಳೆಗೆ ಬಸಪ್ಪ-ಗೌರಮ್ಮ ಅವರ ಪುತ್ರಿ ಮೋನಿಷಾ ಹಾಗೂ ಮಂಜುಳಾ ಕೊಚ್ಚಿ ಹೋಗಿದ್ದರು. ಮೃತ ದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದಾಗ ಮಂಜುಳಾ ಶವ ಹೊರತುಪಡಿಸಿ, ಮೂವರ ದೇಹವೂ ದೊರೆತಿವೆ. ದಿನಗಳು ಕಳೆದರೂ ಮಂಜುಳಾ ಮೃತದೇಹ ಪತ್ತೆಯಾಗಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 87 ವರ್ಷದ ದಾಖಲೆ ಮುರಿದ ಕೊಡಗು ಮಳೆ: ಮೂರೇ ದಿನದಲ್ಲಿ ಬಿದ್ದಿದ್ದು ಎಷ್ಟು ಗೊತ್ತೆ?

    87 ವರ್ಷದ ದಾಖಲೆ ಮುರಿದ ಕೊಡಗು ಮಳೆ: ಮೂರೇ ದಿನದಲ್ಲಿ ಬಿದ್ದಿದ್ದು ಎಷ್ಟು ಗೊತ್ತೆ?

    ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆ 87 ವರ್ಷದ ಹಿಂದಿನ ದಾಖಲೆಯನ್ನು ಅಳಿಸಿಹಾಕಿದೆ.

    1931ರಲ್ಲಿ ಆಗಸ್ಟ್ ತಿಂಗಳಿನಲ್ಲಿ ಒಟ್ಟು 1,559 ಮಿ.ಮೀ ಮಳೆಯಾಗಿತ್ತು. ಆದರೆ ಈ ಆಗಸ್ಟ್ ನಲ್ಲಿ 1,675 ಮಿ.ಮೀ(ಆಗಸ್ಟ್ 21ರ ಅಂತ್ಯಕ್ಕೆ) ಮಳೆಯಾಗಿದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ. ಇದನ್ನೂ ಓದಿ: ಅನ್ನಾಹಾರವಿಲ್ಲದೇ ಕುಸಿದ ಮನೆಯನ್ನೇ ಕಾವಲು ಕಾಯುತ್ತಿದೆ ಶ್ವಾನ!

    ಇದರಲ್ಲಿ 768 ಮಿ.ಮೀ(45%) ರಷ್ಟು ಮಳೆ ಆಗಸ್ಟ್ 15, 16, 17ರ ಮೂರೇ ದಿನದಲ್ಲಿ ಸುರಿದಿದೆ. ಕೊಡಗಿನಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಲು ಮಹಾಮಳೆಯೇ ಕಾರಣವಾಗಿದೆ. ಒಂದು ದಿನದಲ್ಲೇ 200 ಮಿ.ಮೀಗಿಂತಲೂ ಜಾಸ್ತಿ ಮಳೆಯಾಗಿದೆ. ಅಷ್ಟೇ ಅಲ್ಲದೇ ನಿರಂತರ ಮೂರು ದಿನ ಮಳೆಯಾದ ಕಾರಣ ಕೊಡಗಿನಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ ಎಂದು ಐಎಂಡಿ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ತಿಳಿಸಿದ್ದಾರೆ.

    ಆಗಸ್ಟ್ 17 ಶುಕ್ರವಾರ ಒಂದೇ ದಿನ 300 ಮಿ.ಮೀ ಮಳೆಯಾಗಿತ್ತು. ಈ ದಿನವೇ ಸಂಪಾಜೆ ಘಾಟಿ ಪ್ರದೇಶಗಳಾದ ಮದೆನಾಡು, ಜೋಡುಪಾಲದಲ್ಲಿ ಭಾರೀ ಕುಸಿತವಾಗಿ ನದಿಯಂತೆ ನೀರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದಿತ್ತು. ಇದನ್ನೂ ಓದಿ: ಭಾರೀ ಶಬ್ಧದಿಂದ ಹೆದರಿ ಬಾಣಂತಿ, 2 ತಿಂಗ್ಳ ಮಗುವನ್ನು ಎತ್ತಿಕೊಂಡು ಓಡಿದ್ವಿ- ಜೋಡುಪಾಲದ ಮಹಿಳೆ ಕಣ್ಣೀರು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಧಾನಸೌಧದ ಮುಂಭಾಗ, ಮೆಟ್ರೋ ಅಂಡರ್‍ಪಾಸ್ ಮೇಲಿರುವ ರಸ್ತೆಯಲ್ಲಿ ಭಾರೀ ಬಿರುಕು

    ವಿಧಾನಸೌಧದ ಮುಂಭಾಗ, ಮೆಟ್ರೋ ಅಂಡರ್‍ಪಾಸ್ ಮೇಲಿರುವ ರಸ್ತೆಯಲ್ಲಿ ಭಾರೀ ಬಿರುಕು

    ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ವಿಧಾನಸೌಧದ ಮುಂಭಾಗದಲ್ಲಿರುವ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿದೆ.

    ವಿಧಾನ ಸೌಧದ ಮುಂಭಾಗ ಮತ್ತು ಅಂಬೇಡ್ಕರ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ಸಿಮೆಂಟ್ ರಸ್ತೆ ಬಿರುಕು ಬಿಟ್ಟಿದ್ದು ವಾಹನಗಳು ಚಲಿಸಿದಾಗ ಗಢ ಗಢ ಎನ್ನುತ್ತಿದೆ. ಘನವಾಹನಗಳಾದ ಬಸ್, ಲಾರಿ ಬಂದರೆ ರಸ್ತೆ ಸಂಪೂರ್ಣ ಕುಸಿದುಬಿದ್ದಂತೆ ಆಗುತ್ತಿದೆ.

    ರಸ್ತೆ ಕೆಳಭಾಗದಲ್ಲಿ ಮೆಟ್ರೋ ರೈಲಿನ ಅಂಡರಪಾಸ್ ಸಹ ಇದೆ. ಕೂಡಲೇ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಮುಂದೆ ದೊಡ್ಡ ಅನಾಹುತವಾಗುವ ಸಾಧ್ಯತೆಯಿದೆ.

     

    https://youtu.be/7geiwdyVck0