Tag: ಮಹಾದೇವಪ್ಪ

  • 5 ವರ್ಷ ಅಧಿಕಾರ ಗಟ್ಟಿ – ತವರಿನಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಸಿಎಂ

    5 ವರ್ಷ ಅಧಿಕಾರ ಗಟ್ಟಿ – ತವರಿನಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಸಿಎಂ

    – ಜುಲೈ 19 ರಂದು ಮೈಸೂರಲ್ಲಿ ಕಾರ್ಯಕ್ರಮ
    – 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆ

    ಮೈಸೂರು: 5 ವರ್ಷ ಅಧಿಕಾರ ಗಟ್ಟಿಯಾಗುತ್ತಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಮೈಸೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

    ಹೌದು. ತವರು ಜಿಲ್ಲೆಯಲ್ಲಿ ಸಾಧನ ಸಮಾವೇಶ ಹೆಸರಿನಲ್ಲಿ ಜುಲೈ 19 ಶನಿವಾರ ರಂದು ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆದಿದೆ. ಮೂರು ದಿನ ಮೈಸೂರು (Mysuru) ಪ್ರವಾಸ ಕೈಗೊಳ್ಳಲಿರುವ ಸಿಎಂ ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ಆಯೋಜನೆಗೊಂಡಿದೆ.

    ಸರ್ಕಾರದ ಸುಮಾರು 2,600 ಕೋಟಿ ಮೊತ್ತದ ಹಲವು ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಲೋಕಾರ್ಪಣೆ ನಡೆಯಲಿದೆ. ಬೃಹತ್ ಸಮಾವೇಶದ ಮೂಲಕ ಪಕ್ಷದ ಹೈ ಕಮಾಂಡ್‌ ಪರೋಕ್ಷ ಸಂದೇಶ ರವಾನಿಸಲಿದ್ದಾರೆ.

    ಸಾಧನ ಸಮಾವೇಶ ಮೂಲಕ ಹಳೇ ಮೈಸೂರು ಭಾಗದಲ್ಲಿ ತನ್ನ ಶಕ್ತಿ ತೋರಿಸಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದು, ಸಮಾವೇಶದ ಸಂಪೂರ್ಣ ಜವಾಬ್ದಾರಿಯನ್ನು ಸಿಎಂ ಆಪ್ತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ (HC Mahadevappa) ನೋಡಿಕೊಳ್ಳಲಿದ್ದಾರೆ.

    ಈಗಾಗಲೇ ಮೈಸೂರು ಚಾಮರಾಜನಗರ ಜಿಲ್ಲೆಯ ಶಾಸಕರ ಸಭೆ ನಡೆಸಿ ಹೆಚ್ಚಿನ ಜನರನ್ನ ಕರೆತಲು ಪ್ಲಾನ್ ಮಾಡಿದ್ದು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿಸಿ ತನ್ನ ಶಕ್ತಿ ಪ್ರದರ್ಶನ ಮಾಡಲು ಸಿದ್ದತೆ ಜೋರಾಗಿದೆ.

  • ಮೂವರಲ್ಲಿ ಒಬ್ಬರಿಗೆ ಸಿಎಂ ಚಾನ್ಸ್‌ – ಡಿನ್ನರ್ ಮೀಟಿಂಗ್‌ನಲ್ಲಿ ತ್ರಿಮೂರ್ತಿಗಳು ಚರ್ಚಿಸಿದ್ದೇನು?

    ಮೂವರಲ್ಲಿ ಒಬ್ಬರಿಗೆ ಸಿಎಂ ಚಾನ್ಸ್‌ – ಡಿನ್ನರ್ ಮೀಟಿಂಗ್‌ನಲ್ಲಿ ತ್ರಿಮೂರ್ತಿಗಳು ಚರ್ಚಿಸಿದ್ದೇನು?

    ಮೈಸೂರು/ಬೆಂಗಳೂರು: ಡಿನ್ನರ್‌ ನೆಪದಲ್ಲಿ ಚಾಮರಾಜನಗರದಲ್ಲಿರುವ ಸುನಿಲ್‌ ಬೋಸ್‌ ನಿವಾಸದಲ್ಲಿ ಸಿದ್ದರಾಮಯ್ಯ (Siddaramaiah) ಸರ್ಕಾರದ ಪ್ರಭಾವಿ ಸಚಿವರಾದ ಸತೀಶ್‌ ಜಾರಕಿಹೊಳಿ (Satish Jarkiholi), ಪರಮೇಶ್ವರ್‌ (Parmeshwar) ಮತ್ತು ಮಹಾದೇವಪ್ಪ (Mahadevappa) ಮಂಗಳವಾರ ರಾತ್ರಿ ರಹಸ್ಯ ಸಭೆ ನಡೆಸಿದ್ದಾರೆ.

    ಮೂವರು ಅಹಿಂದ ನಾಯಕರು ಸಿಎಂ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೂ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆಯೇ ಸಭೆ ನಡೆಸಿದ್ದಾರೆ ಎನ್ನುವುದು ಮೂಲಗಳಿಂದ ಪಬ್ಲಿಕ್‌ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: 5 ಸ್ಟಾರ್‌ ಹೋಟೆಲ್‌ಗಳಲ್ಲೇ ಇರುವವರು ಜಾತಿ ಆಧಾರದಲ್ಲಿ ಬಡವರನ್ನ ಒಡೆಯುತ್ತಿದ್ದಾರೆ: ರಾಗಾಗೆ ಮೋದಿ ಚಾಟಿ

    ಸಭೆಯಲ್ಲಿ ಏನು ಚರ್ಚೆ ನಡೆದಿದೆ?
    ಹೈಕಮಾಂಡ್‌ (Congress High Command) ಸಿದ್ದರಾಮಯ್ಯ ಅವರನ್ನು ಪಟ್ಟದಿಂದ ಇಳಿಸಿದರೆ ಮೂವರಲ್ಲಿ ಒಬ್ಬರಿಗೆ ಮುಖ್ಯಮಂತ್ರಿಯಾಗುವ ಒಳ್ಳೆಯ ಅವಕಾಶ ಇದೆ. ಯಾರಿಗೆ ಅವಕಾಶ ಸಿಕ್ಕಿದರೂ ಒಗ್ಗಟ್ಟಾಗಿಯೇ ಇರೋಣ.

    ಸಿದ್ದರಾಮಯ್ಯ ಇಳಿಸುವ ಪ್ರಯತ್ನಕ್ಕೆ ಯಾರೇ ಕೈ ಹಾಕಿದರೂ ನಾವು ಮೂವರು ತಡೆಯಬೇಕು. ಅನಿವಾರ್ಯವಾಗಿ ಸಿದ್ದರಾಮಯ್ಯ ಇಳಿಯುವ ಸಂದರ್ಭ ಬಂದರೇ ನಾವು ಒಟ್ಟಾಗಿ ಸಿಎಂ ಸ್ಥಾನಕ್ಕಾಗಿ ಪ್ರಯತ್ನಿಸಬೇಕು. ಈ ಬಾರಿ ನಾವೇ ಕಚ್ಚಾಡಿಕೊಂಡು ಇನ್ನೊಬ್ಬರಿಗೆ ಅವಕಾಶ ಸಿಗಬಾರದು.  ಇದನ್ನೂ ಓದಿ: ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆ ನಡೆದಿಲ್ಲ: ಪರಮೇಶ್ವರ್

    2023ರ ಚುನಾವಣೆಯಲ್ಲಿ ಅಹಿಂದ ಮತಗಳಿಂದ ಕಾಂಗ್ರೆಸ್ ಸಾಕಷ್ಟು ಸ್ಥಾನ ಗೆದ್ದುಕೊಂಡಿದೆ. ಇದೇ ಕಾರ್ಡ್ ಹೈಕಮಾಂಡ್ ಮುಂದೆ ಪ್ಲೇ ಮಾಡಬೇಕು. ಬಹಿರಂಗವಾಗಿ ಯಾರ ಪರವಾಗಿ ಮತ್ತು ಯಾರ ವಿರುದ್ಧವೂ ಹೇಳಿಕೆ ನೀಡುವುದು ಬೇಡ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂಬ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

     

  • ಶಾಸಕರ ಬೆಂಬಲ ಪಡೆದೇ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಮಹಾದೇವಪ್ಪ

    ಶಾಸಕರ ಬೆಂಬಲ ಪಡೆದೇ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಮಹಾದೇವಪ್ಪ

    – ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಬೆಲೆ ಜಾಸ್ತಿ
    – ಡಿಕೆಶಿ ಎಚ್ಚರಿಕೆ ಮರುದಿನವೇ ಸಿಎಂ ಪರ ಆಪ್ತನ ಬ್ಯಾಟಿಂಗ್‌

    ಬೆಂಗಳೂರು: ಅವರಿಗೆ ಕೊಡಿ ಇವರಿಗೆ ಕೊಡಿ ಎನ್ನುವುದಕ್ಕೆ ಸಿಎಂ ಹುದ್ದೆ (Chief Minister) ಅದೇನು ಕಡಲೆಪುರಿನಾ? ಅದು ನನ್ನ ಕೈಯ್ಯಲ್ಲೂ ಇಲ್ಲ, ಧರ್ಮಗುರುಗಳ ಕೈಯ್ಯಲ್ಲೂ ಇಲ್ಲ. ಶಾಸಕರ ಬೆಂಬಲ ಕ್ರೋಢಿಕರಿಸಿಯೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್‌ಸಿ ಮಹಾದೇವಪ್ಪ (HC Mahadevappa) ಹೇಳಿದ್ದಾರೆ.

    ಸಿಎಂ, ಡಿಸಿಎಂ, ಅಧ್ಯಕ್ಷ ಹುದ್ದೆಯ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡಬಾರದು. ಈ ರೀತಿ ಹೇಳಿಕೆ ನೀಡಿದವರಿಗೆ ನೋಟಿಸ್‌ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಎಚ್ಚರಿಕೆ ನೀಡಿದ ಮರು ದಿನವೇ ಸಿಎಂ ಆಪ್ತ ಮಹಾದೇವಪ್ಪ ಈಗ ಬಹಿರಂಗವಾಗಿಯೇ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದಾರೆ.

     

    ವಿಶೇಷ ಏನೆಂದರೆ ಈ ಮೊದಲು ಮಳವಳ್ಳಿಯ ಶಾಸಕ ನರೇಂದ್ರಸ್ವಾಮಿ (Narendraswamy) ಅವರು ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದ್ದು ಶಾಸಕರು ಎಂದು ಹೇಳಿಕೆ ನೀಡಿ ಸಿಎಂ ಪರ ಬ್ಯಾಟಿಂಗ್‌ ಮಾಡಿದ್ದರು. ಈಗ ಮಹಾದೇವಪ್ಪನವರು ಸಿಎಂ ವಿಚಾರ ಪ್ರಸ್ತಾಪಿಸುವ ಮೂಲಕ ಡಿಕೆ ಶಿವಕುಮಾರ್‌ ಆದೇಶಕ್ಕೂ ಡೋಂಟ್‌ ಕೇರ್‌ ಅಂದಿದ್ದಾರೆ. ಇದನ್ನೂ ಓದಿ: ಸ್ಪೀಕರ್‌ಗೆ ಪತ್ರ ಬರೆದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

    2023 ರಲ್ಲಿ ವಿಧಾನಸಭೆ ಚುನಾವಣೆ ನಡೆದು ರಾಜ್ಯದ ಮತದಾರರು ಕಾಂಗ್ರೆಸ್‌ಗೆ (Congress) 135 ಶಾಸಕರನ್ನು ಆಯ್ಕೆ ಮಾಡಿದರು. ಪಕ್ಷದ ಹೈಕಮಾಂಡ್ ವೀಕ್ಷಕರನ್ನು ಕಳಿಸಿ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಿತು. ಶಾಸಕಾಂಗ ಪಕ್ಷದ ನಾಯಕರ ಸ್ಪರ್ಧೆಯಲ್ಲಿ ಒಬ್ಬೊಬ್ಬ ಶಾಸಕರು ಯಾರು ಆಯ್ಕೆ ಆಗಬೇಕು ಎಂಬುದನ್ನು ಚೀಟಿಯಲ್ಲಿ ಹೆಸರು ಬರೆದುಕೊಟ್ಟಿದ್ದರು. ಇದನ್ನು ಲೆಕ್ಕ ಹಾಕಿದಾಗ ಸಿದ್ದರಾಮಯ್ಯ ಅವರು ಹೆಚ್ಚು ಶಾಸಕರ ಬೆಂಬಲ ಪಡೆದು ಆಯ್ಕೆ ಆಗಿದ್ದಾರೆ ಎಂದರು.

     

    ಪ್ರಜಾಪ್ರಭುತ್ವದ ಅಡಿಯಲ್ಲಿ ಹೆಚ್ಚು ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಬಹುಮತವೇ ಮುಖ್ಯ. ಬೊಗಸೆ.. ಬೊಗಸೆ. ಅಂತ ಎತ್ತಿ ಕೊಡುವುದಕ್ಕೆ ಸಿಎಂ ಸ್ಥಾನವೇನೂ ಕಡಲೆಪುರಿನಾ ಎಂದು ಪ್ರಶ್ನೆ ಮಾಡಿದ್ದಾರೆ.

    ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಒನ್ ಮ್ಯಾನ್ ಒನ್ ಪೋಸ್ಟ್ ಪಾಲಿಸಿಯನ್ನು ನಮ್ಮ ಹೈಕಮಾಂಡ್ ನಾಯಕರು ಇಟ್ಟುಕೊಂಡಿದ್ದಾರೆ. ತೀರ್ಮಾನ ನೋಡಿಕೊಂಡು ಮಾಡುತ್ತಾರೆ ಎಂದರು.

     

  • ಲೋಕ ಅಖಾಡಕ್ಕಿಳಿಯಲು ಹಿಂದೇಟು – ಹೆಚ್.ಸಿ ಮಹದೇವಪ್ಪಗೆ ಡಬಲ್‌ ಒತ್ತಡ

    ಲೋಕ ಅಖಾಡಕ್ಕಿಳಿಯಲು ಹಿಂದೇಟು – ಹೆಚ್.ಸಿ ಮಹದೇವಪ್ಪಗೆ ಡಬಲ್‌ ಒತ್ತಡ

    ಮೈಸೂರು: ಚಾಮರಾಜನಗರ (Chamarajanagar) ಲೋಕಸಭಾ (Lok Sabha Election) ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ವಿಚಾರದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ (Mahadevappa) ಅವರಿಗೆ ಡಬಲ್ ಒತ್ತಡವಿದೆ. ಕೌಟುಂಬಿಕ ಒತ್ತಡದ ಜೊತೆಗೆ ಪಕ್ಷದ ಒತ್ತಡ. ಎರಡೂ ಒತ್ತಡಗಳ ನಡುವೆ ಸಚಿವರು ಒದ್ದಾಡುತ್ತಿದ್ದಾರೆ.

    ಲೋಕಸಭಾ ಚುನಾವಣೆಗೆ ಕೆಲ ಸಚಿವರು ಕಣಕ್ಕೆ ಇಳಿಯಬೇಕು. ಪಕ್ಷಕ್ಕಾಗಿ ತ್ಯಾಗಕ್ಕೆ ಸಿದ್ಧರಾಗಿ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳುತ್ತಿದ್ದಂತೆ ಬಹುತೇಕ ಸಚಿವರು ಬೆಚ್ಚಿದ್ದಾರೆ. ನಮಗಂತೂ ಈ ಲೋಕಸಭಾ ಚುನಾವಣೆ ಉಸಾಬರಿ ಬೇಡ ಎಂದು ಕೆಲ ಸಚಿವರು ಅದರಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿದ್ದಾರೆ. ಆದರೆ ಇದರಲ್ಲಿ ಸಚಿವ ಮಹದೇವಪ್ಪ ಅವರ ಸ್ಥಿತಿ ಮಾತ್ರ ಬಹಳ ವಿಭಿನ್ನ. ಸಚಿವರ ಮನೆ ಬಾಗಿಲಲ್ಲೇ ಟಿಕೆಟ್ ಇದ್ದರೂ ಸ್ಪರ್ಧೆಗೆ ಇಷ್ಟವೂ ಇಲ್ಲ. ಹಾಗಂತ ಟಿಕೆಟ್ ಅನ್ನು ಬೇರೆ ಮನೆ ಹೊಸ್ತಿಲಿಗೆ ಹಾಕುವ ಸ್ಥಿತಿಯಲ್ಲೂ ಸಚಿವರಿಲ್ಲ. ಇದನ್ನೂ ಓದಿ: ಮೋದಿ ಕೆಲಸಗಳಿಂದ ಪ್ರೇರಣೆ- ಆಪ್‌ನ ಮೂವರು ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ

    ಎಚ್.ಸಿ. ಮಹದೇವಪ್ಪಗೆ ಲೋಕಸಭೆಗೆ ಸ್ಪರ್ಧಿಸಲು ಸುತರಾಂ ಇಷ್ಟವಿಲ್ಲ. ಬೇರೆಯವರಿಗೆ ಕೊಡಿ ಎಂದೂ ಇಷ್ಟವಿಲ್ಲದೇ ನನಗೆ ಬೇಡ ಆದರೆ ನನ್ನ ಮಗನಿಗೆ ಟಿಕೆಟ್ ಕೊಡಿ ಎನ್ನುತ್ತಿದ್ದಾರೆ. ಮೂರು ವಿಧಾನಸಭಾ ಟಿಕೆಟ್ ತಪ್ಪಿದೆ. ಮಗ ಸುನೀಲ್ ಬೋಸ್‌ಗೆ (Sunil Bose) ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿ ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಸುನೀಲ್ ಬೋಸ್‌ಗೆ ಟಿಕೆಟ್ ಕೊಡಲು ಮನಸ್ಸು ಮಾಡದೇ ಮಹದೇವಪ್ಪಗೇ ಸ್ಪರ್ಧಿಸಲು ಸೂಚಿಸುತ್ತಿದೆ. ಇದರಿಂದ ಮಹದೇವಪ್ಪ ಸಿಟ್ಟಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ. ನನಗಿಂತಾ ಸಿಎಂ ಹಾಗೂ ಡಿಸಿಎಂ ಸ್ಟ್ರಾಂಗ್ ಕ್ಯಾಂಡಿಡೇಟ್ ಇದ್ದಾರೆ. ಅವರಿಗೂ ಒಂದೊಂದು ಕ್ಷೇತ್ರ ಹುಡುಕಿ ಅಂತಾ ಬಹಿರಂಗವಾಗಿ ಹೇಳುವ ಮೂಲಕ ತಮಗೆ ಸ್ಪರ್ಧೆಗೆ ಒತ್ತಡ ಹಾಕುತ್ತಿರುವ ಬಗ್ಗೆ ನೇರವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ಪರೀಕ್ಷೆಯ ವೇಳೆ ಉಗ್ರರು ನುಂಗುವ ಮಾತ್ರೆಯ ಮೊರೆ ಹೋಗುತ್ತಿದ್ದಾರೆ ಮಕ್ಕಳು

    ಒಟ್ಟಾರೆ ಲೋಕಸಭೆ ಟಿಕೆಟ್ ವಿಚಾರ ಮಹದೇವಪ್ಪಗೆ ಉಗುಳಲೂ ಆಗದ ನುಂಗಲೂ ಆಗದ ಬಿಸಿತುಪ್ಪವಾಗಿ ಪರಿಣಮಿಸಿದೆ. ಕೊಟ್ಟರೆ ಮಗನಿಗೆ ಟಿಕೆಟ್ ಕೊಡಿ ಅಂತ ಪಟ್ಟಿಗೆ ಬಿದ್ದಿದ್ದಾರೆ. ಹೈಕಮಾಂಡ್ ನಿರ್ಧಾರದ ಮೇಲೆ ಚಾಮರಾಜನಗರ ಕ್ಷೇತ್ರದ ಅಖಾಡ ರಂಗೇರಲಿದೆ.

     

  • ಅಮೆರಿಕದ ವಿರುದ್ಧ ಬೆಂಗಳೂರಿನಲ್ಲಿ ಚೀನಾ ಕಾರ್ಯಕ್ರಮ – ಸಿದ್ದರಾಮಯ್ಯ, ಮಹಾದೇವಪ್ಪ ಮುಖ್ಯ ಅತಿಥಿ

    ಅಮೆರಿಕದ ವಿರುದ್ಧ ಬೆಂಗಳೂರಿನಲ್ಲಿ ಚೀನಾ ಕಾರ್ಯಕ್ರಮ – ಸಿದ್ದರಾಮಯ್ಯ, ಮಹಾದೇವಪ್ಪ ಮುಖ್ಯ ಅತಿಥಿ

    ಬೆಂಗಳೂರು: ಭಾರತ – ಚೀನಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಚೀನಾ ಪರವಾದ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಚೀನಾದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕದ ಹಸ್ತಕ್ಷೇಪ ಖಂಡಿಸಿ ಭಾರತ – ಚೀನಾ ಫ್ರೆಂಡ್ ಶಿಪ್ ಅಸೋಸಿಯೇಷನ್ ಮೂಲಕ ಕಾರ್ಯಕ್ರಮ ಆಯೋಜನೆಗೊಂಡಿದೆ.

    ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ 10 ಗಂಟೆಗೆ “ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಯುಎಸ್‌ ಸಾಮ್ರಾಜ್ಯಶಾಹಿಯ ಹಸ್ತಕ್ಷೇಪ ಖಂಡಿಸಿ ಮತ್ತು ಚೈನೀಸ್‌ ಛಾಯಚಿತ್ರ ಪ್ರದರ್ಶನ” ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

    ಮಾಜಿ ಸಿಎಂ ಸಿದ್ದರಾಮಯ್ಯ, ಭಾರತದಲ್ಲಿರುವ ಚೀನಾ ರಾಯಭಾರಿ ಸನ್‌ ವೀಡಾಂಗ್‌, ಮಾಜಿ ಉಪ ಮುಖ್ಯಮಂತ್ರಿ ಎಚ್‌.ಸಿ ಮಹಾದೇವಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್‌ ಹನುಮಂತಯ್ಯ, ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯಾ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಮಾಜಿ ಸಚಿವ ಕೆ. ಶ್ರೀನಿವಾಸ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಹಾಕಲಾಗಿದೆ.

    ಕಾಂಗ್ರೆಸ್‌ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: 54 ವರ್ಷ, ಮಾಡಿರೋದು 164 + ಕಳ್ಳತನ – ಭೂಪನಿಗಿದ್ದಾರೆ ಮೂವರು ಹೆಂಡ್ತಿರು, 7 ಮಕ್ಳು

    ಸಿದ್ದರಾಮಯ್ಯ ಸ್ಪಷ್ಟನೆ:
    ಭಾನುವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ‌ ಹೆಸರು ಕಂಡು ಆಶ್ಚರ್ಯವಾಯಿತು. ಸೈದ್ದಾಂತಿಕವಾಗಿ ನನ್ನ‌ ಮತ್ತು ನಮ್ಮ ಪಕ್ಷದ ನಿಲುವು ಕಾರ್ಯಕ್ರಮದ ಉದ್ದೇಶಕ್ಕೆ ವಿರುದ್ದವಾಗಿರುವ ಕಾರಣ ಅದರಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ನಾನು ಭಾಗವಹಿಸುತ್ತಿಲ್ಲ:
    ಅನುಮತಿ ಇಲ್ಲದೇ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಲಾಗಿದೆ ಎಂದ ಹೆಚ್ ಸಿ ಮಹಾದೇವಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಐಟಿ ದಾಳಿ ವೇಳೆ ಸಿಎಂ ಆಪ್ತನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ!

    ಐಟಿ ದಾಳಿ ವೇಳೆ ಸಿಎಂ ಆಪ್ತನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವ ಮಹಾದೇವಪ್ಪ ಆಪ್ತ ಗುತ್ತಿಗೆದಾರ ಮರಿಸ್ವಾಮಿ ಮನೆಯಲ್ಲಿ ಕೋಟಿ ಕೋಟಿ ರೂ. ನಗದು ಹಣ ಪತ್ತೆಯಾಗಿದೆ.

    ಖಚಿತ ಮಾಹಿತಿಯ ಮೇರೆಗೆ ಆದಾಯ ತೆರಿಗೆಯ ಇಲಾಖೆಯ ಅಧಿಕಾರಿಗಳು ಕೆಲ ದಿನಗಳ ಹಿಂದೆ 10 ಮಂದಿ ಪಿಡಬ್ಲ್ಯೂಡಿ ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮೈಸೂರಿನಲ್ಲಿ ಮರಿಸ್ವಾಮಿ ಮನೆಯ ಮೇಲೆ ನಡೆದ ದಾಳಿಯ ವೇಳೆ 6.76 ಕೋಟಿ ರೂ. ನಗದು ಹಣ ಸಿಕ್ಕಿದೆ.

    ಪತ್ತೆಯಾಗಿರುವ ಎಲ್ಲ ನೋಟುಗಳು 500 ಮತ್ತು 2 ಸಾವಿರ ಮುಖಬೆಲೆಯ ನೋಟುಗಳು ಆಗಿದ್ದು. ಎಲ್ಲವೂ ಬೇನಾಮಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಎಲ್ಲ ಕಡೆ ದಾಳಿ ನಡೆಸಿದಾಗ ಒಟ್ಟು 10.62 ಕೋಟಿ ರೂ. ನಗದು ಸಿಕ್ಕಿದ್ದು, 1.33 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

    ಕೆಲ ದಿನಗಳಿಂದ ರಾಜ್ಯ ಮತ್ತು ರಾಷ್ಟ್ರದ ಹಲವು ಕಡೆ ನಗದಿನ ಕೊರತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಕರ್ನಾಟಕ ರಾಜ್ಯದ ಗುತ್ತಿಗೆದಾರರ ಬಳಿ ಭಾರೀ ಪ್ರಮಾಣದ ಹಣ ಇರುವ ಅಂಶ ದೃಢಪಟ್ಟಿದೆ ಎಂದು ಐಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಹಲವು ಗುತ್ತಿಗೆದಾರರು 500 ಮತ್ತು 2 ಸಾವಿರ ರೂ. ಮೌಲ್ಯದ ಭಾರೀ ಪ್ರಮಾಣದ ಹಣವನ್ನು ಹೊಂದಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ದಾಳಿಯಲ್ಲಿ ಪತ್ತೆಯಾದ ಹಣಕ್ಕೆ ಯಾವುದೇ ದಾಖಲೆಗಳು ಸಿಕ್ಕಿಲ್ಲ, ದಾಳಿ ಮುಂದುವರಿದಿದೆ ಎಂದು ಐಟಿ ತಿಳಿಸಿದೆ.

    ಮರಿಸ್ವಾಮಿ ಸ್ಪಷ್ಟನೆ: ಸಿಎಂ ಜೊತೆಗಿರುವ ಫೋಟೋ ಪ್ರಕಟವಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಮರಿಸ್ವಾಮಿ, ನನ್ನ ಮನೆ ಮೇಲೆ ಐಟಿ ದಾಳಿ ಆಗಿಲ್ಲ. ನಾನು ಬೆಸಿಕಲಿ ಕೃಷಿಕ, ನಾನು ಕಂಟ್ರ್ಯಾಕ್ಟರ್ ಅಲ್ಲ. ಸುಖಸುಮ್ಮನೆ ನನ್ನ ಹೆಸರು ಇಲ್ಲಿಗೆ ತಗಲಿ ಕೊಂಡಿದೆ. ನಾನು ಯಾವ ವ್ಯವಹಾರ ಮಾಡಿಲ್ಲ. ಸಿಎಂ ಜೊತೆಗಿನ ಸಂಬಂಧ ಪವಿತ್ರ ಸ್ನೇಹ ಅಷ್ಟೇ. ಯಾವ ವ್ಯವಹಾರವೂ ಇಲ್ಲ. ಯಾವ ವಿಚಾರಣೆಯನ್ನು ನಾನು ಎದುರಿಸಿಲ್ಲ. ಐಟಿ ಅಧಿಕಾರಿಗಳು ಯಾವ ನೋಟಿಸ್ ಕೊಟ್ಟಿಲ್ಲ. ಐಟಿ ದಾಳಿಯಲ್ಲಿ ಸಿಕ್ಕಿರುವ ಮರಿಸ್ವಾಮಿ ಯಾರು ಅಂತಾ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.