ಸಮಾವೇಶದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಯಿತು. 2024ರ ಲೋಕಸಭಾ ಚುನಾವಣೆಯಲ್ಲಿ ಮಹಾದೇವಪುರದಲ್ಲಿ ಮತಗಳ್ಳತನ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು: ವಕ್ಫ್ ವಿರೋಧಿ ಹೋರಾಟ ಬಳಿಕ ಅಕ್ರಮ ಬಾಂಗ್ಲಾ ನಿವಾಸಿಗಳ (Illegal Bangladeshi Residents) ವಿರುದ್ಧ ಹೋರಾಟಕ್ಕೆ ಬಿಜೆಪಿ (BJP) ಭಿನ್ನಮತೀಯ ನಾಯಕರು ಮುಂದಾಗಿದ್ದಾರೆ.
ಮಹಾದೇವಪುರ (Mahadevapura) ವಿಧಾನಸಭೆ ಕ್ಷೇತ್ರದಲ್ಲಿಂದು ಬಿಜೆಪಿ ರೆಬೆಲ್‌ಗಳ ಟೀಮ್ ಅಕ್ರಮ ವಲಸಿಗರ ವಿರುದ್ಧ ಬೃಹತ್ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ ಎಂ ಸಿದ್ದೇಶ್ವರ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕಿ ಮಂಜುಳಾ ಲಿಂಬಾವಳಿ, ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಸಂಸದರಾದ ಬಿ ವಿ ನಾಯಕ್, ಪ್ರತಾಪ್ ಸಿಂಹ, ಶಾಸಕ ಬಿ ಪಿ ಹರೀಶ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರು ಸಂಬಂಧ ರಾಜ್ಯ ಸರ್ಕಾರ (Karnataka Government) ನಿರ್ಲಕ್ಷ್ಯ ವಹಿಸಿದೆ. ಅಪರಾಧ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಅಕ್ರಮ ವಲಸಿಗರು ಭಾಗವಹಿಸಿ ದೇಶದ ಭದ್ರತೆಗೆ ಸವಾಲಾಗಿದ್ದಾರೆ. ಗುಜರಾತ್ ಮಾದರಿಯಲ್ಲಿ ರಾಜ್ಯ ಸರ್ಕಾರವು ಅಕ್ರಮ ವಲಸಿಗರ ಗಡೀಪಾರಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಇದನ್ನೂಓದಿ: ಅಕ್ರಮ ಮುಸ್ಲಿಂ ವಲಸಿಗರುಭಯೋತ್ಪಾದನೆ, ಜನೋತ್ಪಾದನೆಯಲ್ಲಿತೊಡಗಿದ್ದಾರೆ: ಪ್ರತಾಪ್ ಸಿಂಹ
ಇನ್ನು ಇದೇವೇಳೆ ಮಹಾದೇವಪುರ ಕ್ಷೇತ್ರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನಿವಾಸಿಗಳ ಕುರಿತು ಕುರು ಸಾಕ್ಷ್ಯಚಿತ್ರ ಪ್ರದರ್ಶನ ಪ್ರಸಾರ ಮಾಡಿದ್ದಲ್ಲದೇ ಕಿರು ಪುಸ್ತಕ ಬಿಡುಗಡೆಗೊಳಿಸಲಾಯ್ತು. ಅಲ್ರಮ ವಲಸಿಗರ ವಿರುದ್ಧದ ಈ ಜನಜಾಗೃತಿ ಅಭಿಯಾಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಬಿಜೆಪಿ ಭಿನ್ನ ನಾಯಕರು ನಿರ್ಧಾರ ಪ್ರಕಟಿಸಿದರು.
ಇದೇವೇಳೆ ಕಾರ್ಯಕ್ರಮದಲ್ಲಿ ಮಾತಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ (Aravind Limbavali), ಅಕ್ರಮ ವಲಸಿಗರ ವಿಚಾರದಲ್ಲಿ ಗುಜರಾತ್ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಎದೆಗಾರಿಕೆ ತೋರಬೇಕು ಎಂದು ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಆಗ್ರಹಿಸಿದರು.
ಅಕ್ರಮ ವಲಸಿಗರ ವಿಚಾರದಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡಬಾರದು. ವಲಸಿಗರ ವಿಚಾರದಲ್ಲಿ ರಾಜ್ಯ ಸರ್ಕಾರ ಸಾಫ್ಟ್ ಆಗಿದೆ. ಗುಜರಾತ್‌ನಲ್ಲಿ ಇತ್ತೀಚೆಗೆ ಎರಡು ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರ ಗಡೀಪಾರು ಮಾಡಲಾಯ್ತು. ರಾಜ್ಯ ಸರ್ಕಾರವೂ ಆ ಕೆಲಸ ಮಾಡಲಿ. ಅಕ್ರಮ ವಲಸಿಗರಿಗೆ ಯಾವುದೋ ಒತ್ತಡದ ಕಾರಣಕ್ಕೆ ಅವಕಾಶ ಕೊಟ್ರೆ ಕರ್ನಾಟಕ ಪಶ್ಚಿಮ ಬಂಗಾಳ ಆಗುತ್ತೆ. ಯಾರ್ಯಾರು ಅಕ್ರಮವಾಗಿ ಬಂದಿದ್ದಾರೋ ಅವರನ್ನು ವಾಪಸ್ ಕಳಿಸಿ ಎಂದು ಒತ್ತಾಯಿಸಿದರು.
ಇನ್ನು ಇದೇವೇಳೆ ಪೊಲೀಸ್ ಒಬ್ಬರು ಮೊಬೈಲ್‌ನಲ್ಲಿ ತಮ್ಮ ಭಾಷಣ ರೆಕಾರ್ಡ್ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿ ಗರಂ ಆದ ಲಿಂಬಾವಳಿ,ಇಲ್ಲಿ ಬಂದು ರೆಕಾರ್ಡ್ ಮಾಡೋದೇಕೆ? ನಾವು ದೇಶಭಕ್ತರು. ಅಕ್ರಮ ವಲಸಿಗರನ್ನು ಹೋಗಿ ರೆಕಾರ್ಡ್ ಮಾಡಲು ತಾಕತ್ ಇದೆಯಾ ಕಿಡಿಕಾರಿದರು.
ಇದು ಬಿಜೆಪಿ ಅಸಮಧಾನಿತರ ಹೋರಾಟ ಅಂತ ಮಾಧ್ಯಮಗಳು ಬರೆಯುತ್ತವೆ. ನಾವು ಅಸಮಾಧಾನಿತ ಹೋರಾಟವಲ್ಲ. ನಮ್ಮದು ದೇಶ ಉಳಿಸುವ ಹೋರಾಟ ಎಂದು ಲಿಂಬಾವಳಿ ಸ್ಪಷ್ಟಪಡಿಸಿದರು.
ಕಟ್ಟಡ ತೆರವು ಮಾಡದಿದ್ದರೆ ಕ್ರಿಮಿನಲ್ ಕೇಸ್ ಹಾಕುವ ಎಚ್ಚರಿಕೆಯನ್ನು ಪಾಲಿಕೆ ನೀಡಿತ್ತು. ಈ ಬೆನ್ನಲ್ಲೇ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಮಾಲೀಕರೇ ಈ ಕಟ್ಟಡವನ್ನು ತೆರವು ಮಾಡಲು ಮುಂದಾಗಿದ್ದಾರೆ.
ಅಕ್ಕಪಕ್ಕದಲ್ಲಿ ಮನೆಗಳು ಇರುವ ಕಾರಣ ಈಗ ಕೆಲಸಗಾರರು ಸುತ್ತಿಗೆಯಿಂದ ಬಡಿದು ಕಟ್ಟಡವನ್ನು ಒಡೆಯುತ್ತಿದ್ದಾರೆ. ಮೇಲ್ಭಾಗ ಕಟ್ಟಡ ತೆರವು ಮುಗಿದ ಬಳಿಕ ಜೆಸಿಬಿ ಮೂಲಕ ಕಾರ್ಯಾಚರಣೆ ಮಾಡಲಾಗುತ್ತದೆ.
– ಬಳಗೆರೆಯಿಂದ ಕುಂದಹಳ್ಳಿ ರಸ್ತೆ ಸಂಪೂರ್ಣ ಜಲಾವೃತ – ವಾಹನ ಸವಾರರ ಪರದಾಟ
ಬೆಂಗಳೂರು: ಶನಿವಾರ ಸುರಿದ ಭಾರೀ ಮಳೆಯಿಂದಾಗಿ ನಗರದ ಕೆಲವು ಕಡೆ ಅವಾಂತರಗಳು ಸೃಷ್ಟಿಯಾಗಿದ್ದು, ಮಹಾದೇವಪುರ (Mahadevapura) ಕ್ಷೇತ್ರದಲ್ಲಿ ರಸ್ತೆ ಸಂಪೂರ್ಣ ಜಲಾವೃತಗೊಂಡಿವೆ. ಗುಂಡಿ ಬಿದ್ದ ರಸ್ತೆಯಲ್ಲಿ ಹೋಗುತ್ತಿದ್ದಾಗ ಕೆಸರು ನೀರಲ್ಲಿ ಬೈಕ್ ಸವಾರ ಮತ್ತು ಯುವತಿ ಬಿದ್ದ ಘಟನೆ ನಡೆಯಿತು.
ನಗರದ ಬಳಗೆರೆಯಿಂದ (Balagere) ಕುಂದಲಹಳ್ಳಿ (Kudalahalli) ರಸ್ತೆ ಕಡೆ ಹೋಗುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಅಪಾರ ಪ್ರಮಾಣದ ಹಾನಿಯುಂಟು ಮಾಡಿದ್ದು, ರಸ್ತೆಗಳು ಕೆರೆಯ ರೂಪವನ್ನು ತಾಳಿವೆ. ಇದರಿಂದಾಗಿ ರಸ್ತೆಯ ಮೇಲಿದ್ದ ಡಾಂಬರು ಕಿತ್ತು ಬರುತ್ತಿದೆ.ಇದನ್ನೂ ಓದಿ: ಪಂಜಾಬ್ ಎಎಪಿ ನಾಯಕನ ಮೇಲೆ ಗುಂಡಿನ ದಾಳಿ
ಕೇವಲ ಒಂದೇ ಒಂದು ಮಳೆಗೆ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಹೆಜ್ಜೆ ಹೆಜ್ಜೆಗೂ ಗುಂಡಿಗಳು ಬಿದ್ದು ಸಂಚಾರಕ್ಕೆ ಅನಾನುಕೂಲ ಉಂಟಾಗಿದೆ. ಮೊಣಕಾಲುದ್ದ ಬಿದ್ದ ಗುಂಡಿಗಳಿಂದ ವಾಹನ ಸವಾರರಿಗೆ ನಿಯಂತ್ರಣ ತಪ್ಪುತ್ತಿದೆ. ಹೀಗಾಗಿ ಗುಂಡಿಗಳಲ್ಲಿ ವಾಹನಗಳು ಸಿಕ್ಕಿಕೊಂಡು ವಾಹನ ಸವಾರರು ಪರದಾಡುವಂತಾಗಿದೆ. ಜೊತೆಗೆ ತಗ್ಗು ಪ್ರದೇಶಗಳು ಮುಳುಗಿ ಹೋಗಿವೆ.
ದಾವಣಗೆರೆ: ಸಾಕು ನಾಯಿ ಮತ್ತು ಬೀದಿ ನಾಯಿ (Dog) ಕಚ್ಚಾಟದಿಂದ 2 ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ದಾವಣಗೆರೆ (Davanagere) ತಾಲೂಕಿನ ಮಹಾದೇವಪುರ (Mahadevpur) ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಬಸವರಾಜ್ ಎಂಬ ಯುವಕ 10 ಸಾವಿರ ರೂ. ಕೊಟ್ಟು ರೊಟ್‌ವೀಲರ್ ನಾಯಿಯನ್ನು ತಂದು ಸಾಕಿದ್ದ. ಅದೇ ಬೀದಿಯ ಹನುಮಂತಪ್ಪ ಎಂಬುವವರು ಬೀದಿ ನಾಯಿಗಳನ್ನು ಸಾಕುತ್ತಿದ್ದರು. ಬೀದಿ ಶ್ವಾನಗಳು ರೊಟ್‌ವೀಲರ್ ನಾಯಿ ಮೇಲೆ ದಾಳಿ ನಡೆಸಿ ಕೊಂದಿದ್ದವು.
ಬೆಂಗಳೂರು: ನನ್ನ ವಾದ ಹಾಗಾಗಿರಲಿಲ್ಲ. ಕಳೆದ 8 ವರ್ಷಗಳ ಹಿಂದೆ ನೀರು ಹೋಗಲು ಮೋರಿ ಕಟ್ಟಿದ್ದಾರೆ. ಇದೀಗ ನೀರು ಹೋಗುತ್ತಿರುವ ಜಾಗ ಬಿಟ್ಟು ಬೇರೆ ಜಾಗ ಗುರುತಿಸುತ್ತಿದ್ದಾರೆ. ಅಲ್ಲಿ ಮನೆಗಳಿವೆ ಹಾಗಾಗಿ ಬಡವರು ಕಷ್ಟಪಟ್ಟು ಕಟ್ಟಿರುವ ಮನೆಗಳನ್ನು ಉಳಿಸುವುದಕ್ಕಾಗಿ ಸಲಹೆ ನೀಡಿದ್ದೇನೆ ಅಷ್ಟೇ. ನಾನು ಅಲ್ಲಿ ವಾದಿಸಿದ್ದಲ್ಲ. ನನ್ನ ಅಭಿಪ್ರಾಯ ಹೇಳಿದ್ದು ಎಂದು ತೆರವು ಕಾರ್ಯಕ್ಕೆ ಅಡ್ಡಿಪಡಿಸಿದ ವಿಚಾರವಾಗಿ ಬಿಜೆಪಿ ಮುಖಂಡ ನಂದೀಶ್ ರೆಡ್ಡಿ (Nandish Reddy) ಸ್ಪಷ್ಟನೇ ನೀಡಿದ್ದಾರೆ.
ಮಹದೇವಪುರದಲ್ಲಿ ತೆರವು ವೇಳೆ ಬಿಜೆಪಿ ಮುಖಂಡ ನಂದೀಶ್ ರೆಡ್ಡಿ (Nandish Reddy) ಕಿರಿಕ್ ಮಾಡಿದ್ದರು. ಚಿನ್ನಪ್ಪನಹಳ್ಳಿ (Chinnapana Halli) ಒತ್ತುವರಿ ತೆರವು (Demolition Of Illegal Structures) ಕಾರ್ಯಚರಣೆ ವೇಳೆ ಮಧ್ಯಪ್ರವೇಶ ಮಾಡಿದ ಅವರು, ಪಾಲಿಕೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದರು.
ಈ ಬಗ್ಗೆ ಪಬ್ಲಿಕ್ ಟಿವಿ (Public TV) ಜೊತೆ ಮಾತನಾಡಿದ ಅವರು, ಬಸವನಪುರ ವಾರ್ಡ್‍ನಲ್ಲಿ ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದರು. ನಾನು ಶಾಸಕನಾದ ಕೆಲವೇ ತಿಂಗಳಲ್ಲಿ ಅಲ್ಲಿ ನೀರು ನಿಂತು ಸಮಸ್ಯೆ ಆಗಿತ್ತು. ಬಡವರೆಲ್ಲ ಅಲ್ಲಿ ಮನೆ ಕಟ್ಟಿಕೊಂಡಿದ್ದರು. ಅವರಿಗೆ ರಾಜಕಾಲುವೆ ಒತ್ತುವರಿ ಬಗ್ಗೆ ಗೊತ್ತಿರಲಿಲ್ಲ. ಈ ವೇಳೆ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ರಸ್ತೆಯ ಒಳಭಾಗದಲ್ಲಿ ನೀರು ಹೋಗುವ ರೀತಿಯ ಕಾಮಗಾರಿ ಮಾಡಿಸಿದ್ದೇನೆ. ನಿಯಮದ ಪ್ರಕಾರ ಮನೆಗಳನ್ನು ಕೆಡವಬೇಕಾಗಿತ್ತು. ಆದರೆ ಆರೀತಿ ಮಾಡದೆ ಪರಿಹಾರ ಕಂಡುಕೊಂಡಿದ್ದೇವೆ ಎಂದರು. ಇದನ್ನೂ ಓದಿ: ಇಂದು ಬಿಜೆಪಿ ಮುಖಂಡನಿಂದಲೇ ತೆರವು ಕಾರ್ಯಕ್ಕೆ ಅಡ್ಡಿ- ಪಾಲಿಕೆ ಅಧಿಕಾರಿಗಳ ಜೊತೆ ಕಿರಿಕ್
ಹಾಗಾಗಿ ಚಿನ್ನಪ್ಪನಹಳ್ಳಿಯಲ್ಲೂ ಈ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಪರಿಹಾರ ಸೂಚಿಸಿದ್ದೇನೆ. ಇದೀಗ ಇರುವ ಮ್ಯಾಪ್‍ನ್ನು ಗುರುತಿಸಲು ಸಾಧ್ಯವಿಲ್ಲ. ಈ ಹಿಂದಿನ ಸರ್ವೇ ಕಲ್ಲು ಇದೀಗ ಎಲ್ಲೂ ಸಿಗಲ್ಲ. ಕೆರೆ ನೀರು, ರಾಜಕಾಲುವೆ ನೀರು ಹೇಗೆ ಹೋಗಬೇಕೆಂಬುದಕ್ಕೆ ಇದೀಗ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇದೀಗ ಬಂದಿರುವ ತಂತ್ರಜ್ಞಾನಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಕಟ್ಟಿಂಗ್ ಮೆಷಿನ್‍ಗಳ ಮೂಲಕ ಎಷ್ಟು ಜಾಗ ಬೇಕು ಅಷ್ಟನ್ನು ಮಾತ್ರ ತೆರವುಗೊಳಿಸಬಹುದಾಗಿದೆ ಅಂತಹ ಕ್ರಮಗಳನ್ನು ಅಳವಡಿಸಿ ಎಂದು ಸಲಹೆ ನೀಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಆಪರೇಷನ್ ಬುಲ್ಡೋಜರ್‌ಗೆ 3ನೇ ದಿನ- ಇಂದೂ ನಡೆಯಲಿದೆ ನಲಪಾಡ್ ಅಕಾಡೆಮಿ ಒತ್ತುವರಿ ತೆರವು!
ರಾಜಕಾಲುವೆಯನ್ನು ಗೊತ್ತಿದ್ದು ಒತ್ತುವರಿ ಮಾಡಿದ್ದರೆ ಅಂತದ್ದನ್ನು ತೆರವುಗೊಳಿಸಿ. ಪ್ರಭಾವಿಗಳನ್ನು ಬಿಟ್ಟು ಬಡವರ ಮನೆಗಳನ್ನು ಒಡೆಯುವುದಲ್ಲ. ಯಾರೆಲ್ಲ ಒತ್ತುವರಿ ಮಾಡಿದ್ದಾರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕೆಂದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ನಗರದ ಮಹಾದೇವಪುರದಲ್ಲಿ(Mahadevpur) ಇತ್ತೀಚೆಗೆ ಭಾರೀ ಮಳೆಯಿಂದಾಗಿ ಪ್ರವಾಹದ(Flood) ಸ್ಥಿತಿ ಉಂಟಾಗಿತ್ತು. ಈ ಹಿನ್ನೆಲೆ ಬಿಬಿಎಂಪಿ(BBMP) ಅಧಿಕಾರಿಗಳು ಒತ್ತುವರಿ ತೆರವಿಗೆ ಸೋಮವಾರ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.
ಇಂದು ಮುನೇನಕೊಳಲು, ಚಿನ್ನಪ್ಪನಹಳ್ಳಿ, ಚಳ್ಳಗಟ್ಟ, ಬಸವಣನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿದೆ. 4 ಪ್ರಮುಖ ಭಾಗಗಳಲ್ಲಿ ಮೊದಲ ಹಂತದ ಆಪರೇಷನ್ ಪ್ರಾರಂಭವಾಗಿದ್ದು, ಈ ಭಾಗದ ರಾಜಕಾಲುವೆ ಒತ್ತುವರಿದಾರರಿಗೆ ಬುಲ್ಡೋಜರ್ ಶಾಕ್ ನೀಡಲು ಬಿಬಿಎಂಪಿ ಮುಂದಾಗಿದೆ. ಇದನ್ನೂ ಓದಿ: ಪಾರ್ಸೆಲ್ ಮಾಡಿರೋ 10 ದೋಸೆ ನನಗೆ ಬಂದಿಲ್ಲ, ಇದರಲ್ಲೂ ಮೋಸ: ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ
ಕಂದಾಯ ಇಲಾಖೆಯ ಸರ್ವೆ ವರದಿಯಲ್ಲಿ ಮಳೆ ಹಾನಿಗೆ ಈ ಅಪಾರ್ಟ್ಮೆಂಟ್‌ಗಳೇ ಕಾರಣ ಎಂಬುದು ತಿಳಿದುಬಂದಿತ್ತು. 145 ಅಪಾರ್ಟ್ಮೆಂಟ್‌ಗಳಿಂದ ರಾಜಕಾಲುವೆ ಹಾಗೂ ಸಬ್ ಕಾಲುವೆಗಳ ಒತ್ತುವರಿಯಾಗಿತ್ತು. ಹಲವೆಡೆ ಕಾಂಪೌಂಡ್, ರಸ್ತೆ, ಮನೆ, ಪಾರ್ಟ್ಮೆಂಟ್‌ಗಳ ನಿರ್ಮಾಣ ಮಾಡಿಕೊಂಡು ಒತ್ತುವರಿ ಮಾಡಲಾಗಿದೆ. ಇಂದು 8ಕ್ಕೂ ಹೆಚ್ಚು ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿದೆ. ಇದನ್ನೂ ಓದಿ: ವಿಧಾನಸಭೆ ಕಲಾಪ: ಉಮೇಶ್ ಕತ್ತಿ ಕ್ರಿಯಾಶೀಲ, ವರ್ಣರಂಜಿತ ರಾಜಕಾರಣಿ- ಸಿಎಂ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಊರಿಗೆಲ್ಲಾ ಬುದ್ಧಿ ಹೇಳೋ ಪೊಲೀಸರೇ ಕೈ-ಕೈ ಮಿಲಾಯಿಸಿಕೊಂಡು ಠಾಣೆಯಲ್ಲಿ ಕಚ್ಚಾಡಿಕೊಂಡ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಜೂಜು ಅಡ್ಡೆ ಮೇಲೆ ನಡೆದ ದಾಳಿ ಸಂಬಂಧಪಟ್ಟಂತೆ ಮಹದೇವಪುರ ಠಾಣೆಯ ಎಎಸ್‍ಐ ಅಮೃತೇಶ್, ಹೆಡ್ ಕಾನ್ಸ್ ಟೆಬಲ್ ಜಯಕಿರಣ್ ಮತ್ತು ಸಬ್ ಇನ್ಸ್ ಪೆಕ್ಟರ್ ಅಶ್ವಥ್ ನಡುವೆ ಗಲಾಟೆ ನಡೆದಿದೆ.
ಏನಿದು ಘಟನೆ?
ಶನಿವಾರ ಸಂಜೆ 6 ಗಂಟೆ ವೇಳೆಗೆ ಇಸ್ಪಿಟ್ ಅಡ್ಡೆ ಮೇಲೆ ದಾಳಿ ನಡೆಸಿ ಪೊಲೀಸರು ಈ ವೇಳೆ 10 ಜನರನ್ನು ಬಂಧಿಸಿ, 42 ಸಾವಿರ ರೂ. ಹಣವನ್ನು ವಶಕ್ಕೆ ಪಡೆದಿದ್ದರು. ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆತಂದ ಈ ಇಬ್ಬರು ಪೊಲೀಸರು 8 ಗಂಟೆ ವೇಳೆಗೆ ಅವರನ್ನು ಬಿಟ್ಟು ಕಳುಹಿಸಿದ್ದರು. ಯಾವುದೇ ಕಾನೂನು ಪಾಲನೆ ಮಾಡದೇ ಆರೋಪಿಗಳನ್ನು ಬಿಟ್ಟಿದ್ದು, ಯಾಕೆ ಎಂದು ಸಬ್ ಇನ್ಸ್ ಪೆಕ್ಟರ್ ಅಶ್ವಥ್ ಇಬ್ಬರನ್ನು ಪ್ರಶ್ನೆ ಮಾಡಿದ್ದಾರೆ.
ಅಶ್ವಥ್ ಪ್ರಶ್ನೆಗೆ ಅಮೃತೇಶ್ ಮತ್ತು ಜಯಕಿರಣ್ ಕೆಂಡಮಂಡಲವಾಗಿ ನಾವು ಬಿಟ್ಟಿದ್ದೇವೆ. ಅದನ್ನು ಪ್ರಶ್ನಿಸಲು ನೀವು ಯಾರು? ನಿನ್ನಂಥ ಎಸ್‍ಐಗಳನ್ನ ನೂರಾರು ಜನ ನೋಡಿದ್ದೇನೆ ಎಂದು ಹೇಳಿದ್ದಾರೆ. ಈ ವೇಳೆ ಅಶ್ವಥ್ ಕೇಸ್ ದಾಖಲಿಸದೇ ಬಿಡಬಾರದು ಎಂಬ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿ ತರಾಟಗೆ ತೆಗೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಈ ವೇಳೆ ಮೂವರ ನಡುವೆ ಮಾತಿನ ಚಕಾಮಕಿ ನಡೆದಿದ್ದು, ಏಕವಚನದಲ್ಲಿ ಬೈದಾಡಿಕೊಂಡು ಠಾಣೆಯ ಸಿಬ್ಬಂದಿ ಸಮ್ಮುಖದಲ್ಲೇ ಕೈ-ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿದೆ. ನಂತರ ಸ್ಟೇಷನ್ ಡೈರಿಯಲ್ಲಿ ಎಂಟ್ರಿ ಮಾಡಿ ಗಲಾಟೆ ಬಗ್ಗೆ ಡಿಸಿಪಿಗೆ ಎಸ್‍ಐ ಅಶ್ವಥ್ ಮಾಹಿತಿ ನೀಡಿದ್ದಾರೆ.
ಈ ವಿಚಾರದ ಬಗ್ಗೆ ಡಿಸಿಪಿ ಅಬ್ದುಲ್ ಅಹ್ಮದ್ ಪ್ರತಿಕ್ರಿಯಿಸಿ, ಪೊಲೀಸರು ಠಾಣೆಯಲ್ಲೇ ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಸ್ಟೇಷನ್ ಡೈರಿಯಲ್ಲಿ ಎಂಟ್ರಿ ಮಾಡಿ ಗಲಾಟೆ ಬಗ್ಗೆ ಎಸ್‍ಐ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಎಎಸ್‍ಐ ಮತ್ತು ಹೆಡ್ ಕಾನ್ಸ್ ಟೆಬಲ್ ಕರ್ತವ್ಯ ಲೋಪ ಕಂಡು ಬಂದಿದ್ದು ಈಗ ಇವರಿಬ್ಬರನ್ನು ಅಮಾನತು ಮಾಡಲಾಗಿದ್ದು ಮಾರತ್ತಹಳ್ಳಿ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಅದೇಶ ನೀಡಲಾಗಿದೆ ಎಂದು ತಿಳಿಸಿದರು.