Tag: ಮಹಾದಾಯಿ

  • ತಮ್ಮನ್ನು ನರಕದಲ್ಲಿಟ್ಟಿದ್ದಕ್ಕೆ ಕಾಂಗ್ರೆಸ್‍ನ್ನು ಜನ ಮನೆಗೆ ಕಳಿಸಿದ್ರು: ಬೊಮ್ಮಾಯಿ ಕಿಡಿ

    ತಮ್ಮನ್ನು ನರಕದಲ್ಲಿಟ್ಟಿದ್ದಕ್ಕೆ ಕಾಂಗ್ರೆಸ್‍ನ್ನು ಜನ ಮನೆಗೆ ಕಳಿಸಿದ್ರು: ಬೊಮ್ಮಾಯಿ ಕಿಡಿ

    ಹುಬ್ಬಳ್ಳಿ: ಕಾಂಗ್ರೆಸ್ ಜನರನ್ನು ಇಷ್ಟು ವರ್ಷ ನರಕದಲ್ಲಿ ಇಟ್ಟಿತ್ತು. ಅದಕ್ಕೆ ಜನ ಅದನ್ನು ತಿರಸ್ಕರಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದರು.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ (Congress) ರಾಜ್ಯಸಭಾ ಸದಸ್ಯ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಅವರ ಬಿಜೆಪಿ (BJP) ವಿರುದ್ಧದ ಹೇಳಿಕೆಗೆ ತಿರುಗೇಟು ಕೊಟ್ಟರು. ಕಾಂಗ್ರೆಸ್ ಬೇಜವಾಬ್ದಾರಿ ವಿರೋಧ ಪಕ್ಷವಾಗಿದೆ. ಜನರಿಗೆ ಸರ್ಕಾರದ ವೈಫಲ್ಯ ಹಾಗೂ ತಮ್ಮ ಪಕ್ಷದ ಸಾಧನೆ ತೋರಿಸುವ ಬದಲು, ಸುರ್ಜೇವಾಲ ಈ ರೀತಿ ಮಾತನಾಡುವುದು ಸರಿಯಲ್ಲ. ಅವನಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.

    ಮೊದಲು ಕಾಂಗ್ರೆಸ್ ತನ್ನ ಒಳ ಜಗಳವನ್ನು ಸರಿಮಾಡಿಕೊಳ್ಳಲಿ. ಆಮೇಲೆ ಕರ್ನಾಟಕದ ಬಗ್ಗೆ ಮಾತಾಡಲಿ. ಜನರಿಗೆ ಯಾರು ರಾಕ್ಷಸರು ಹಾಗೂ ಯಾರು ದೇವತೆಗಳು ಎಂದು ತಿಳಿದಿದೆ. ಕಾಂಗ್ರೆಸ್‍ನಲ್ಲಿ ಅಸುರರ ಪಟ್ಟಿ ಬಹಳ ದೊಡ್ಡದಿದೆ ಎಂದು ಕುಟುಕಿದರು. ಇದನ್ನೂ ಓದಿ: RCB ನಾಯಕಿಯಾಗಿ ಸ್ಮೃತಿ ಮಂದಾನ ಆಯ್ಕೆ – ಕೊಹ್ಲಿ ವಿಶೇಷ ಸಂದೇಶ ಏನು?

    ಎಪ್ಪತ್ತು ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್‍ನ್ನು ಜನ ಕಿತ್ತು ಒಗೆದಿದ್ದಾರೆ. ಈಗ ಚುನಾವಣೆಗೋಸ್ಕರ ಜನರನ್ನು ಮರಳುಮಾಡುವ ತಂತ್ರ ಬಳಸುತ್ತಿದೆ ಎಂದರು.

    ಬಜೆಟ್ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಮಹಾದಾಯಿ (Mahadayi) ವಿಚಾರ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.

    ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ನಿರಂತರವಾಗಿ ಬಣ್ಣ ಬದಲಿಸುವುದು ಜನರಿಗೆ ತಿಳಿದಿದೆ ಎಂದರು. ಇದನ್ನೂ ಓದಿ: ಭಿನ್ನಮತ ಸ್ಫೋಟ – ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್‌ಬೈ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೀವು ಜನರನ್ನು ಒಮ್ಮೆ ಮೂರ್ಖರನ್ನಾಗಿ ಮಾಡಬಹುದು ಯಾವಾಗಲೂ ಸಾಧ್ಯವಿಲ್ಲ: ಎಚ್.ಕೆ ಪಾಟೀಲ್

    ನೀವು ಜನರನ್ನು ಒಮ್ಮೆ ಮೂರ್ಖರನ್ನಾಗಿ ಮಾಡಬಹುದು ಯಾವಾಗಲೂ ಸಾಧ್ಯವಿಲ್ಲ: ಎಚ್.ಕೆ ಪಾಟೀಲ್

    ಹುಬ್ಬಳ್ಳಿ: ಮಹಾದಾಯಿ (Mahadayi) ವಿಚಾರದಲ್ಲಿ ಬಿಜೆಪಿ (BJP) ಸುಳ್ಳು ಹೇಳುತ್ತಲೇ ಬಂದಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದಿನಾಂಕವಿಲ್ಲದ, ಸಂಖ್ಯೆ ಇಲ್ಲದ ಕಡತ ಟ್ವೀಟ್ ಮಾಡಿದ್ದರು. ನೀವು ಜನರನ್ನು ಒಮ್ಮೆ ಮೂರ್ಖರನ್ನಾಗಿ ಮಾಡಬಹುದು ಯಾವಾಗಲೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ (H K Patil) ವಾಗ್ದಾಳಿ ನಡೆಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಬಿಜೆಪಿ ಅಧ್ಯಕ್ಷ, ಕೇಂದ್ರ ಸಚಿವರು ಸುಳ್ಳು ಹೇಳಿದ್ದಾರೆ. ಬಿಜೆಪಿಯ ಸುಳ್ಳುಗಳನ್ನು ಕಾಂಗ್ರೆಸ್ (Congress) ಬಹಿರಂಗಪಡಿಸುತ್ತಲೇ ಬಂದಿದೆ. ಅರ್ಜಿ ಕೊಟ್ಟ ಕೂಡಲೇ ಅನುಮತಿ ಸಿಗುತ್ತದೆ ಎಂದು ಪ್ರಹ್ಲಾದ್ ಜೋಶಿ (Pralhad Joshi), ಸಿಎಂ ಬೊಮ್ಮಾಯಿ (Basavaraj Bommai) ಹೇಳಿದ್ದರು. ಹದಿನೈದು ದಿನದೊಳಗೆ ಕಾಮಗಾರಿ ಆರಂಭಿಸುವುದಾಗಿ ಪ್ರಚಾರ ಮಾಡಿದ್ದರು. ಪ್ರಹ್ಲಾದ್ ಜೋಶಿಯವರು ನನಗೆ ಮತ್ತು ಸಿದ್ದರಾಮಯ್ಯ (Siddaramaiah) ನವರಿಗೆ ಕಣ್ಣು ಕಾಣಿಸುವುದಿಲ್ಲ ಎಂದು ಹೇಳಿದ್ದರು. ನಮ್ಮ ರಾಜಕೀಯ ಸಂಸ್ಕೃತಿಗೆ ಅಪಹಾಸ್ಯ ಮಾಡಿ ಅವಮಾನ ಮಾಡಿದರು ಎಂದರು.

    ಕಳಸಾ- ಬಂಡೂರಿ ಯೋಜನೆ (Kalasa-Banduri Nala project) ಜಾರಿಗೆ ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕಾಗಿದೆ. ಕ್ಲಿಯರೆನ್ಸ್ ಇಲ್ಲದೆ ಕಾಮಗಾರಿ ಪ್ರಾರಂಭಿಸದಂತೆ ಕೋರ್ಟ್ ಆದೇಶ ನೀಡಿದೆ. ಕ್ರಮ ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ಇದುವರೆಗೆ ಮಲಗಿದೆ. ಎಲ್ಲಿದೆ ನಿಮ್ಮ ಪೌರುಷ. ನಿಮ್ಮ ಹಸಿಸುಳ್ಳು ಬಹಿರಂಗಗೊಂಡಿದೆ ಎಂದು ಹೇಳಿದರು.

    ಮಹಾದಾಯಿ ಆಗಿಯೇ ಬಿಟ್ಟಿತು ಎಂದು ವಿಜಯೋತ್ಸವ ಆಚರಿಸಿದ್ದರು. ಪಟಾಕಿ ಹಚ್ಚಿ ಸಂಭ್ರಮಿಸಿದರು. ಈಗ ಎಲ್ಲಿ ಹೋಯಿತು ನಿಮ್ಮ ಪೌರುಷ? ಸುಳ್ಳಿನ ಮೇಲೆ ಬಿಜೆಪಿ ಸವಾರಿ ಮಾಡುತ್ತಿದೆ ಎಂದರು. ಇದನ್ನೂ ಓದಿ: ಟ್ರಾಫಿಕ್ ದಂಡ 50% ರಿಯಾಯ್ತಿ 5 ತಿಂಗಳು ಅವಧಿ ವಿಸ್ತರಣೆ ಮಾಡಿ – ಜೆಡಿಎಸ್ ಸದಸ್ಯ ಮಂಜೇಗೌಡ ಒತ್ತಾಯ

    ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah), ಮಹಾದಾಯಿ ನಮ್ಮ ಬಿಜೆಪಿಯ ಕೊಡುಗೆ ಎಂದು ಹೇಳುತ್ತಾರೆ. ಈಗ ಅಮಿತ್ ಶಾ ಎಲ್ಲಿದ್ದಾರೆ? ನಿಮಗೆ ಮಹಾದಾಯಿ ಹೆಸರಲ್ಲಿ ಮತ ಕೇಳುವ ನೈತಿಕತೆಯಿಲ್ಲ. ಸುಪ್ರೀಂ (Supreme Court) ತೀರ್ಪು ಬಂದು ನೂರು ತಾಸುಗಳಾಯಿತು. ಆದರೆ ರಾಜ್ಯಸರ್ಕಾರ ಮಾತ್ರ ನಿದ್ರೆ ಮಾಡುತ್ತಿದೆ. ಎಲ್ಲಾ ಅನುಮತಿ ಪಡೆದಿರುವುದಾಗಿ ಹೇಳಿದ್ದರು. ಆದರೆ ಈಗ ಗೋವಾ ವೈಲ್ಡ್ ಲೈಫ್ ಅನುಮತಿ ಬೇಕು ಎಂದು ಕೋರ್ಟ್ ಹೇಳಿದೆ. ಬಿಜೆಪಿಯ ಹಸಿಸುಳ್ಳು ಬಹಿರಂಗಗೊಂಡಿದೆ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೇಕೆದಾಟು, ಮಹದಾಯಿ ಯೋಜನೆ ಪ್ರಾರಂಭಿಸುತ್ತೇವೆ: ಸಿಎಂ ಬೊಮ್ಮಾಯಿ

    ಮೇಕೆದಾಟು, ಮಹದಾಯಿ ಯೋಜನೆ ಪ್ರಾರಂಭಿಸುತ್ತೇವೆ: ಸಿಎಂ ಬೊಮ್ಮಾಯಿ

    ಬೆಂಗಳೂರು: ಮೇಕೆದಾಟು, ಮಹಾದಾಯಿ ಯೋಜನೆ ಪ್ರಾರಂಭಿಸಿ ಪೂರ್ಣಗೊಳಿಸಬೇಕಿದೆ. ಕಾನೂನಿನ ಚೌಕಟ್ಟಿನಲ್ಲಿ ಪರಾವನಿಗೆ ಪಡೆದು ಯೋಜನೆ ಆರಂಭಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    75ನೇ ಸ್ವಾತಂತ್ರ್ಯ ದಿನದಂದು ಮಾಣಿಕ್ ಷಾ ಪೆರೆಡ್ ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡಿದರು. ನಂತರ ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಮೇಕೆದಾಟು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಆಗಿದ್ದು, ಶೀಘ್ರದಲ್ಲೇ ಕೇಂದ್ರದ ಜೊತೆ ಅನುಮತಿ ಪಡೆದ ಯೋಜನೆ ಆರಂಭಿಸುತ್ತೇವೆ ಎಂದು ತಿಳಿಸಿದರು.

    ಸಿಎಂ ಭಾಷಣದ ಮುಖ್ಯಾಂಶಗಳು:
    ಮೊದಲಿಗೆ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಭಾರತ ಯಶಸ್ವಿ ಪ್ರಜಾಪ್ರಭುತ್ವ ದೇಶವಾಗಿದೆ. ಪ್ರಜಾಪ್ರಭುತ್ವ ಬಹಳ ಆಳವಾಗಿ ನೆಲೆಯೂರಿದೆ ಡಾ.ಬಿ.ಆರ್ ಅಂಬೇಡ್ಕರ್ ಅವರ ದೂರದೃಷ್ಟಿ, ಸಮಾನತೆ ಹಾಗೂ ಸಂವಿಧಾನ ನಮಗೆ ಭಗವದ್ಗೀತೆಯಾಗಿದೆ.

    ಇಂದು ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಜನ್ಮ ದಿನವಾಗಿದ್ದು, ರಾಜ್ಯ ಸರ್ಕಾರದಿಂದ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆಯನ್ನು ಆಚರಿಸಲು ನಿರ್ಧಾರಿಸಲಾಗಿದೆ. ಸಂಗೊಳ್ಳಿ ರಾಯಣ್ಣನವರ ಬಲಿದಾನ ಮಹತ್ವವಾದದ್ದು, ಅವರನ್ನು ಯಾವಾಗಲೂ ನೆನಪಿಸಿಕೊಳ್ಳಬೇಕು ಎನ್ನುತ್ತಾ ಸ್ವಾತಂತ್ರ್ಯ ಸೇನಾನಿಗಳು ಮನೆ, ಮಠ ಕಳೆದುಕೊಂಡಿದ್ದಾರೆ. ಸ್ವಾತಂತ್ರ್ಯ ಸೇನಾನಿಗಳಿಗೆ ನನ್ನ ನಮನಗಳು.

    ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ವಿವಿಧ ವಲಯಗಳಿಗೆ 7,422 ಕೋಟಿ ವೆಚ್ಚ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 24 ಸಾವಿರಕ್ಕೂ ಹೆಚ್ಚು ಆಕ್ಸಿಜನ್ ಬೆಡ್ 4 ಸಾವಿರಕ್ಕೂ ಹೆಚ್ಚು ವೆಂಟಿಲೇಟರ್ ಒದಗಿಸಲಾಗಿದೆ. ಇದುವರೆಗೆ ರಾಜ್ಯದಲ್ಲಿ 3.5 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. ಮೂರನೇ ಅಲೆ ಎದುರಿಸಲು ತಜ್ಞರ ಕಾರ್ಯಪಡೆಯ ಸಲಹೆ ಅನ್ವಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಯಡಿಯೂರಪ್ಪಗೆ ಈ ವೇದಿಕೆ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಕೋವಿಡ್ ನಿಯಂತ್ರಣಕ್ಕೆ ಅವರು ಕೈಗೊಂಡ ಕ್ರಮಗಳೇ ಇಂದು ಕೋವಿಡ್ ನಿಯಂತ್ರಣಕ್ಕೆ ಬರಲು ಪ್ರಮುಖ ಕಾರಣವಾಗಿದೆ. ಎರಡನೇ ಅಲೆ ನಿಯಂತ್ರಣದಲ್ಲಿದ್ದರೂ ಮೂರನೇ ಅಲೆಯ ಭೀತಿಯಲ್ಲಿದ್ದೇವೆ. ಸರ್ಕಾರ ಬಂದ ಕೂಡಲೇ ಕೋವಿಡ್‍ಗೆ ಹೆಚ್ಚಿನ ಮಹತ್ವ ಕೈಗೊಂಡಿದ್ದೇವೆ. ಕೇರಳ, ಮಹಾರಾಷ್ಟ ಗಡಿ ಜಿಲ್ಲೆಗಳನ್ನ ರಕ್ಷಿಸಬೇಕಿದೆ. ಈ ಬಗ್ಗೆ ನಾನೇ ಖುದ್ದು ತೆರಳಿ ಮೇಲ್ವಿಚಾರಣೆ ಮಾಡಿದ್ದೇನೆ. ಇದಕ್ಕೆ ಜನರು ಸಹ ಸಹಕಾರ ನೀಡಬೇಕು ಹಾಗೂ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು.

    ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ರಮಿಸಿದ ಅಭಿವೃದ್ಧಿ ಪಥದಲ್ಲಿಯೇ ಮುಂದುವರೆಯುವ ಸಂಕಲ್ಪ ಮಾಡಿದ್ದೇನೆ. ಇವತ್ತಿನಿಂದಲೇ ನವ ಕರ್ನಾಟಕ ನಿರ್ಮಾಣ ಕಾರ್ಯ ಆರಂಭ ಎಂದು ಘೋಷಣೆ ಮಾಡುತ್ತೇನೆ. ಹೊಸತಂತ್ರಜ್ಞಾನ, ಮಾನವಸಂಪನ್ಮೂಲ, ಕೃಷಿ, ಉತ್ಪಾದನ ಕೇಂದ್ರದಲ್ಲಿ ವೈಜ್ಞಾನಿಕ ಅಭಿವೃದ್ಧಿ ಸಾಗಿಸಲು ಪಣ ತೊಟ್ಟಿದ್ದೇನೆ. ರೈತರ ಬದುಕಿನಲ್ಲಿ ಕ್ರಾಂತಿ ತರುವ ಕೆಲಸ, ರೈತರ ಕೇಂದ್ರೀಕೃತವಾದ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡುತ್ತೇನೆ.

    ಪ್ರವಾಹ ಸಂತಸ್ತರಿಗೆ ತಕ್ಷಣದ ಪರಿಹಾರ 10,000 ರೂ, ಅಲ್ಪ ಹಾನಿಯಾದ ಮನೆಗಳಿಗೆ 50 ಸಾವಿರ, ಭಾಗಶಃ ಹಾನಿಯಾದ ಮನೆಗಳಿಗೆ 3ಲಕ್ಷ ರೂ, ಪೂರ್ಣ ಹಾನಿ ಪ್ರಕೆಣಗಳಿಗೆ 5 ಲಕ್ಷ ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ತಾಲೂಕು, ಸಬ್‍ರಿಜಿಸ್ಟರ್ ಆಫೀಸ್ ಗೆ ಜನ ಓಡಾಡುವುದನ್ನ ನಿಲ್ಲಿಸಬೇಕು. ಇದನ್ನೂ ಓದಿ:ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ: ಶ್ರೀರಾಮುಲು

    ಸರ್ಕಾರ ಬಂದ ಕೂಡಲೇ ಪ್ರವಾಹ ಬಂತು. ಅದಕ್ಕೆ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ. ರೈತರ ಮಕ್ಕಳಿಗೆ ಸ್ಕಾಲರ್‍ಶಿಪ್ ಕೊಟ್ಟಿದ್ದೇವೆ. ಕರ್ನಾಟಕ ಕೈಗಾರಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ. ಹಲವು ಕಾರ್ಖನೆಗಳು ಬಂದು ಬುನಾದಿ ಹಾಕಿದವು. ಕರಾವಳಿಯ ಬ್ಯಾಂಕಿಂಗ್ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿದೆ. ಕೈಗಾರಿಕೆಗೆ ಹೊಸ ನೀತಿ ಮಾಡಿದ್ದೇವೆ. ಅಲ್ಲದೇ ಕರ್ನಾಟಕ ಪೊಲೀಸ್ ಇಡೀ ದೇಶದಲ್ಲೇ ನಂಬರ್ 1 ಆಗಿದೆ. ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಯಶಸ್ವಿಯಾಗಿಸಿದೆ.

    ಅಮೃತ ಗ್ರಾಮ ಪಂಚಾಯ್ತಿ ಯೋಜನೆ ಘೋಷಿಸಿದ್ದು, 750 ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೊಳಿಸಲಿದ್ದು, ಆಯ್ದ 75 ನಗರಗಳಲ್ಲಿ 75 ಕೋಟಿ ವೆಚ್ಚದಲ್ಲಿ ಅಮೃತ ನಿರ್ಮಲ ನಗರ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಮಹಿಳೆಯರಿಗೆ ಪ್ರೋತ್ಸಹ ನೀಡಲು ಅಮೃತ ಪ್ರೋತ್ಸಾಹ ಕಿರು ಉದ್ಯಮವನ್ನು ಆರಂಭಿಸಲಾಗುತ್ತದೆ. ಇದನ್ನೂ ಓದಿ:54 ಕೋಟಿ ಜನರಿಗೆ ಲಸಿಕೆ, ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ: ಮೋದಿ

  • ಕಾಂಗ್ರೆಸ್‍ನಿಂದ ಯಾರು ಹೊರ ಹೋಗ್ತಾರೆ? ಮುಂದೆ ಪಶ್ಚಾತ್ತಾಪ ಪಡುತ್ತಾರೆ: ಎಚ್ ಕೆ ಪಾಟೀಲ್

    ಕಾಂಗ್ರೆಸ್‍ನಿಂದ ಯಾರು ಹೊರ ಹೋಗ್ತಾರೆ? ಮುಂದೆ ಪಶ್ಚಾತ್ತಾಪ ಪಡುತ್ತಾರೆ: ಎಚ್ ಕೆ ಪಾಟೀಲ್

    ಧಾರವಾಡ: ಕಾಂಗ್ರೆಸ್ ಬಿಟ್ಟು ಹೋದವರೆಲ್ಲಾ ಮುಂದೆ ಪಶ್ಚಾತಾಪ ಪಡುತ್ತಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

    ಇಂದು ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಿಂದ ಹೋದ ಎಚ್. ವಿಶ್ವನಾಥ್ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಎಚ್. ವಿಶ್ವನಾಥ್ ಕಾಂಗ್ರೆಸ್ ಬಿಟ್ಟು ಹೋಗಿದ್ದೇ ತಪ್ಪು ಹೆಜ್ಜೆ. ಕಾಂಗ್ರೆಸ್‍ನಿಂದ ಯಾರು ಹೊರಗೆ ಹೋಗುತ್ತಾರೋ ಅವರು ಮುಂಬರುವ ದಿನಗಳಲ್ಲಿ ಪಶ್ಚಾತ್ತಾಪ ಪಡುತ್ತಾರೆ ಎಂದು ಹೇಳಿದರು.

    ಮಹದಾಯಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದ ಮಾತು ಕೇಳುವುದಿಲ್ಲ, ಅವರ ಮಾತು ಕೇಳುವುದಿಲ್ಲ, ಇವರ ಮಾತು ಕೇಳುವುದಿಲ್ಲ ಅಂತಾರೆ, ಯಾರ ಮಾತನ್ನು ಕೇಳಬೇಕಾಗಿಲ್ಲ, ಸುಪ್ರಿಂ ಕೋರ್ಟ್ ಮಾತನ್ನಾದರೂ ಕೇಳುತ್ತಿರೋ, ಇಲ್ಲವೋ? ಎಂದು ಗೋವಾ ಸಿಎಂ ವಿರುದ್ಧ ಕಿಡಿಕಾರಿದರು.

    ಮಹದಾಯಿ ವಿಚಾರದಲ್ಲಿ ಈಗಾಗಲೇ ತೀರ್ಪು ಬಂದಿದೆ. ಅದು ಈಗ ಮುಗಿದ ಅಧ್ಯಾಯ. ಈಗ ಅನುಷ್ಠಾನದತ್ತ ಗಂಭೀರ ಹೆಜ್ಜೆ ಹಾಕಬೇಕಿದೆ. ಮಹದಾಯಿ ಕೆಲಸ ಪೂರ್ಣಗೊಳಿಸುವತ್ತಾ ಸರ್ಕಾರ ಲಕ್ಷ್ಯ ವಹಿಸಬೇಕು. ಬರೇ ಮಾತುಕತೆ, ಹೇಳಿಕೆಗಳು ಯಾವುದಕ್ಕೆ? ಗೋವಾ ಸಿಎಂ ಈ ರೀತಿ ಹೇಳಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹದ್ದು, ಇದು ಬೇಜವಾಬ್ದಾರಿ ಹೇಳಿಕೆ ಎಂದು ವಾಗ್ದಾಳಿ ನಡೆಸಿದರು.

  • ಡಿ.24ರಂದು ಮಹದಾಯಿ ಹೋರಾಟ- ಶಂಕರ್ ಅಂಬಲಿ

    ಡಿ.24ರಂದು ಮಹದಾಯಿ ಹೋರಾಟ- ಶಂಕರ್ ಅಂಬಲಿ

    ಧಾರವಾಡ: ಮಹಾದಾಯಿ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಡಿಸೆಂಬರ್ 24ರಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಹದಾಯಿಗಾಗಿ ಮಹಾವೇದಿಕೆ ರಾಜ್ಯ ಸಂಚಾಲಕ ಶಂಕರ ಅಂಬಲಿ ತಿಳಿಸಿದರು.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಪರಿಸರ ಇಲಾಖೆಯಿಂದ ಕಳಸಾ ಬಂಡೂರಿ ಅನುಮತಿಯನ್ನು ಹಿಂಪಡೆಯಲಾಗಿದೆ. ಈ ಕ್ರಮವನ್ನು ಖಂಡಿಸಿ ಡಿಸೆಂಬರ್ 24ರಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುವುದು. ರೈತರು, ವ್ಯಾಪಾರಿಗಳು, ಸಂಘ ಸಂಸ್ಥೆಗಳವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

    ಧಾರವಾಡ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ಮಾಡುತ್ತೇವೆ. ಕಳಸಾ ಬಂಡೂರಿಗೆ ಅನುಮತಿ ನೀಡಿ ನಂತರ ವಾಪಸ್ ಪಡೆಯಲು ನೀಡಿರುವ ಕಾರಣ ಸೂಕ್ತವಾಗಿಲ್ಲ. ಏಕೆಂದರೆ ಅನುಮತಿ ಕೊಡುವಾಗ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿರುವ ಕುರಿತು ಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದರು.

    ಈಗ ಅನುಮತಿ ಹಿಂಪಡೆಯಲು ನೀಡಿದ ಕಾರಣ ನೋಡಿದರೆ ನಮಗೆ ಮೋಸವಾಗುತ್ತಿದೆ ಎಂದು ಅನ್ನಿಸುತ್ತಿದೆ. 2002ರಲ್ಲಿ ವಾಜಪೇಯಿ ಕಾಲದಲ್ಲಿಯೂ ಹೀಗೆ ಮಾಡಿದ್ದರು. ಅನುಮತಿ ಕೊಟ್ಟ ನಾಲ್ಕು ತಿಂಗಳ ಬಳಿಕ ಗೋವಾ ಸರ್ಕಾರದ ಕಾರಣ ನೀಡಿ ವಾಪಸ್ ಪಡೆದಿದ್ದರು. ಇದರಿಂದಾಗಿ 17 ವರ್ಷ ತಡವಾಗಿದೆ, ಈಗ ಮತ್ತೆ ಅನುಮತಿ ಕೊಟ್ಟು ವಾಪಸ್ ಪಡೆದಿದ್ದೀರಿ. ಹಾಗಾದರೆ ಇದಕ್ಕೆ ಇನ್ನು ಎಷ್ಟು ವರ್ಷ ಬೇಕಾಗುತ್ತದೆ ಎಂದು ಪ್ರಶ್ನಿಸಿದರು.

  • ಮಹಾದಾಯಿ ಇತ್ಯರ್ಥವಾಗ್ಬೇಕಾದ್ರೆ ಗೋವಾ ಕಾಂಗ್ರೆಸ್ ಸುಮ್ಮನಿರಬೇಕು – ಶೆಟ್ಟರ್

    ಮಹಾದಾಯಿ ಇತ್ಯರ್ಥವಾಗ್ಬೇಕಾದ್ರೆ ಗೋವಾ ಕಾಂಗ್ರೆಸ್ ಸುಮ್ಮನಿರಬೇಕು – ಶೆಟ್ಟರ್

    ಧಾರವಾಡ: ಮಹದಾಯಿ ಇತ್ಯರ್ಥ ಆಗಬೇಕಾದಲ್ಲಿ ಗೋವಾ ಕಾಂಗ್ರೆಸ್ ಸುಮ್ಮನೆ ಕುಳಿತುಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ಕಾಂಗ್ರೆಸ್ ಸುಮ್ಮನೆ ಕುಳಿತರೆ ಐದೇ ನಿಮಿಷದಲ್ಲಿ ಮಹದಾಯಿ ಸಮಸ್ಯೆ ಬಗೆ ಹರಿಯುತ್ತದೆ. ಅಲ್ಲಿನ ನಮ್ಮ ಸಿಎಂ ಮಾತುಕತೆಗೆ ಒಪ್ಪಿದ್ದಾರೆ. ಆದರೆ ಕಾಂಗ್ರೆಸ್ ಧರಣಿ ಮಾಡುತ್ತಿದೆ ಇದು ನಿಲ್ಲಬೇಕು. ಮಹದಾಯಿಯಲ್ಲಿ ಸರ್ಕಾರದ ಪ್ರಶ್ನೆ ಬರುವುದಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಪ್ರಶ್ನೆ ಬರುತ್ತದೆ. ಗೋವಾ ಕಾಂಗ್ರೆಸಿನ ನಿಲುವೇನು ಎಂದು ತಿಳಿಸಬೇಕು. ಬಿಜೆಪಿಯದ್ದು ಒಂದೇ ನಿಲುವಿದೆ. ಆದರೆ ಕಾಂಗ್ರೆಸ್ ವಿರೋಧ ಮಾಡಿಕೊಂಡೇ ಬಂದಿದೆ ಎಂದರು.

    ಗೋವಾ ಮುಖ್ಯಮಂತ್ರಿಗಳು ಮಾತುಕತೆಗೆ ರೆಡಿ ಇದ್ದಾರೆ. ಇವತ್ತಿಲ್ಲ ನಾಳೆ ಕೆಲವೇ ದಿನಗಳಲ್ಲಿ ಮಹದಾಯಿ ನೋಟಿಫಿಕೇಷನ್ ಆಗಿಯೇ ಆಗುತ್ತದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

    ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಹತ್ತು ವರ್ಷ ಯುಪಿಎ ಸರ್ಕಾರ ಇದ್ದಾಗ ಇವರೆಲ್ಲ ಮಲಗಿದ್ದರಾ? ತುಮಕೂರು ಶ್ರೀಗಳಿಗೆ ಭಾರತರತ್ನ ನೀಡುವುದು ಯುಪಿಎ ಸರ್ಕಾರ ಇದ್ದಾಗ ಏಕೆ ನೆನಪಾಗಲಿಲ್ಲ. ಶ್ರೀಗಳಿಗೆ ಭಾರತ ರತ್ನ ಕೊಡುವ ಕುರಿತು ನಮ್ಮ ಒತ್ತಾಯ ಇದೆ. ಆದರೆ ಅದು ಯಾವುದೋ ಕಾರಣಕ್ಕೆ ಆಗಿಲ್ಲ. ಅವರಿಗೆ ಭಾರತ ರತ್ನ ಸಿಗಲೇಬೇಕಿತ್ತು. ಇಂದೂ ಸಹ ಈ ಕುರಿತು ನಾವು ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು.

    ಸಿದ್ದರಾಮಯ್ಯನವರಿಗೆ ತಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ಅವರು ಕಾಂಗ್ರೆಸ್‍ಗೆ ಇತ್ತೀಚೆಗೆ ಬಂದವರು. ತುರ್ತು ಪರಿಸ್ಥಿತಿ ಸಮಯದಲ್ಲಿ ಇದೇ ಸಿದ್ದರಾಮಯ್ಯ ಇಂದಿರಾ ಗಾಂಧಿ ಅವರನ್ನು ಸರ್ವಾಧಿಕಾರಿ ಎಂದು ಕರೆದಿದ್ದರು. ಈಗ ಅದೇ ಕಾಂಗ್ರೆಸ್‍ನಲ್ಲಿ ಇದ್ದರಲ್ಲ. ದೇಶಕ್ಕೆ ರಾಜೀವ್ ಗಾಂಧಿ ಕೊಡುಗೆ ಏನಿದೆ? ಭೋಫೋರ್ಸ್ ಹಗರಣವೇ ರಾಜೀವ್ ಗಾಂಧಿ ಕೊಡುಗೆ ಇರಬೇಕು ಎಂದು ವಾಗ್ದಾಳಿ ನಡೆಸಿದರು.

    ಪ್ರಧಾನಿ ಮೋದಿಯವರು ಉತ್ತಮ ಆಡಳಿತ ಕೊಟ್ಟಿದ್ದಾರೆ. ದೇಶ ಆಧೋಗತಿಗೆ ಹೋಗಲು ಕಾಂಗ್ರೆಸ್ 60 ವರ್ಷ ಲೂಟಿ ಮಾಡಿದ್ದೇ ಕಾರಣ. ಸಿದ್ದರಾಮಯ್ಯ ಕಾಂಗ್ರೆಸ್ ವಿರುದ್ಧ ಮಾತನಾಡಿದ ದಾಖಲೆಗಳನ್ನು ಸ್ವಲ್ಪ ನೋಡಲಿ. ತಮ್ಮ ಹಿಂದಿನ ಹೇಳಿಕೆ ಅವಲೋಕನ ಮಾಡಿದರೆ ಯಾರು ಸರ್ವಾಧಿಕಾರಿ ಎಂದು ಗೊತ್ತಾಗುತ್ತದೆ. ಆರ್ಥಿಕವಾಗಿ ಬಹಳ ತೊಂದರೆಯಲ್ಲಿರುವ ರಾಷ್ಟ್ರ ನಮ್ಮದು. ಯುಪಿಎ ಸರ್ಕಾರ ಹಿಂದೆ ಎಷ್ಟು ಸಾಲ ಮಾಡಿತ್ತು ಗೊತ್ತಾ? ಚಿನ್ನ ಒತ್ತೆ ಇಟ್ಟು ಇವರ ಸಾಲ ತೀರಿಸುವ ಸ್ಥಿತಿ ಬಂದಿತ್ತು. ಕಾಂಗ್ರೆಸ್‍ನವರಿದ್ದಾಗ ಅಷ್ಟೊಂದು ಅಧೋಗತಿಗೆ ಹೋಗಿತ್ತು. ಇಡೀ ವಿಶ್ವಾದ್ಯಂತ ಆರ್ಥಿಕ ಹಿಂಜರಿತ ಇದೆ ಅದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ ಎಂದರು.

  • ಸಿದ್ದರಾಮಯ್ಯನವರಿಗೆ ಗಟ್ಸ್ ಇದ್ರೆ ಅಂಬೇಡ್ಕರ್‌ಗೆ ಮೊದಲೇ ಭಾರತರತ್ನ ಕೊಡಿ ಎನ್ನಬೇಕಿತ್ತು-ಜೋಶಿ

    ಸಿದ್ದರಾಮಯ್ಯನವರಿಗೆ ಗಟ್ಸ್ ಇದ್ರೆ ಅಂಬೇಡ್ಕರ್‌ಗೆ ಮೊದಲೇ ಭಾರತರತ್ನ ಕೊಡಿ ಎನ್ನಬೇಕಿತ್ತು-ಜೋಶಿ

    ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯನವರು ವೀರಸಾರ್ವಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರಿಗೆ ಗಟ್ಸ್ ಇದ್ದರೆ ಅಂಬೇಡ್ಕರ್‌ಗೆ ಮೊದಲೇ ಭಾರತರತ್ನ ಕೊಡಿ ಎಂದು ಕೇಳಬೇಕಿತ್ತು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗೆ ಮೊದಲು ಭಾರತರತ್ನ ನೀಡದೇ ರಾಜೀವಗಾಂಧಿಯವರಿಗೆ ಕೊಡಲಾಯಿತು. ಅವರ ರಾಹುಲ್ ಗಾಂಧಿಯವರ ತಾತ, ತಾಯಿ ಪ್ರಧಾನಿಯಾಗಿದ್ದಕ್ಕೆ ಅವರಿಗೆ ಪ್ರಧಾನಿ ಸ್ಥಾನ ಬಳುವಳಿಯಾಗಿ ಕೊಡಲಾಯಿತು. ಆದರೆ ಸಂವಿಧಾನ ಬರೆದಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಲಿಲ್ಲ ಎಂದು ಹರಿಹಾಯ್ದರು.

    ದೇಶಕಂಡ ಅಪ್ರತಿಮ ವೀರಸಾರ್ವಕರ್ ಅವರ ಬಗ್ಗೆ ಅಪಮಾನ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಈ ನಡೆಯನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರು ಮೊದಲು ಇತಿಹಾಸವನ್ನು ಸರಿಯಾಗಿ ಓದಿಕೊಂಡು ಮಾತನಾಡಲಿ. ಇನ್ನು ಮುಂದೆ ದಾವುದ್ ಇಬ್ರಾಹಿಂಗೂ ಕಾಂಗ್ರೆಸ್ ನವರು ಭಾರತ ರತ್ನ ಕೊಡಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯಮಾಡಿದರು.

    ಬೆಂಗಳೂರಿನಲ್ಲಿ ಮಹದಾಯಿ ಹೋರಾಟಗಾರರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜೋಶಿ, ಪ್ರತಿಭಟನೆಗೆ ಕುಳಿತಿರುವುದು ಗಮನಕ್ಕೆ ಇಲ್ಲ. ಮಹದಾಯಿ ಇತ್ಯರ್ಥಕ್ಕೆ ನಮ್ಮ ಕಡೆಯಿಂದ ನಾವು ಪ್ರಯತ್ನ ಮಾಡುತ್ತಿದ್ದೇವೆ. ಆದಷ್ಟು ಶೀಘ್ರ ಈ ವಿಚಾರ ಇತ್ಯರ್ಥಗೊಳ್ಳಲಿದೆ ಎಂದರು.

  • ರಾಜ್ಯದ ಒಂದೇ ಒಂದು ಹನಿನೀರೂ ಸಮುದ್ರ ಸೇರಲು ಬಿಡಲ್ಲ: ಡಿಕೆಶಿ

    ರಾಜ್ಯದ ಒಂದೇ ಒಂದು ಹನಿನೀರೂ ಸಮುದ್ರ ಸೇರಲು ಬಿಡಲ್ಲ: ಡಿಕೆಶಿ

    ಹುಬ್ಬಳ್ಳಿ: ರಾಜ್ಯದ ಒಂದೇ ಒಂದು ಹನಿ ನೀರು ಸಹ ಸಮುದ್ರ ಸೇರಲು ಬಿಡುವುದಿಲ್ಲವೆಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಹಾದಾಯಿ ಉಗಮ ಸ್ಥಾನ ಕಣಕುಂಬಿಗೆ ಭೇಟಿ ನೀಡುತ್ತಿದ್ದೇನೆ. ಮಹಾದಾಯಿ ವಿಚಾರವಾಗಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ. ನಮ್ಮ ಪಾಲಿನ ನೀರು ಪಡೆಯಲು ಕಾನೂನಾತ್ಮಕ ಅಭಿಪ್ರಾಯ ಕೇಳಿದ್ದೇನೆ. ಮಹಾದಾಯಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.

    ನ್ಯಾಯಾಧೀಕರಣದ ತೀರ್ಪನ್ನು ಕೇಳಿ ಸುಮ್ಮನೆ ಕುಳಿತಿಲ್ಲ. ಕಾನೂನು ತಜ್ಞರು ಹಾಗೂ ತಾಂತ್ರಿಕ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಕಾವೇರಿಯ ಬಗ್ಗೆ ಇರುವ ಕಾಳಜಿ ಮಹಾದಾಯಿಗೆ ಇಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ನಮಗೆ ಮಹಾದಾಯಿ ವಿಚಾರದಲ್ಲಿ ಸರಿಯಾದ ನ್ಯಾಯ ಸಿಕ್ಕಿಲ್ಲ. ಇಂದಿನ ಭೇಟಿ ಬಳಿಕ ಸರ್ವ ಪಕ್ಷಗಳ ಸಭೆ ಕರೆಯಲಾಗುವುದು. ಅಲ್ಲದೇ ರಾಜ್ಯದ ಒಂದೇ ಒಂದು ಹನಿ ನೀರು ಸಮುದ್ರ ಸೇರಲು ಬಿಡುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ. ನಮ್ಮ ಶಾಸಕರು ಆಲ್ ಇಜ್ ವೆಲ್ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಳಸಾ ಬಂಡೂರಿ ವಿವಾದ – ಚರ್ಚೆಗೆ ಪ್ರಧಾನಮಂತ್ರಿಗಳಿಂದ ರೈತರಿಗೆ ಬುಲಾವ್

    ಕಳಸಾ ಬಂಡೂರಿ ವಿವಾದ – ಚರ್ಚೆಗೆ ಪ್ರಧಾನಮಂತ್ರಿಗಳಿಂದ ರೈತರಿಗೆ ಬುಲಾವ್

    ಬೆಂಗಳೂರು: ಕಳಸಾ ಬಂಡೂರಿ ವಿವಾದ ಪರಿಹಾರದ ಚರ್ಚೆಗೆ ಪ್ರಧಾನಮಂತ್ರಿ ಗಳಿಂದ ಕಳಸಾ ಬಂಡೂರಿ ರೈತರ ಭೇಟಿಗೆ ದಿನ ನಿಗದಿಯಾಗಿದೆ.

    ಇದೇ ತಿಂಗಳು 14 ಅಥವಾ 15 ರಂದು ಪ್ರಧಾನಿ ನರೇಂದ್ರ ಮೋದಿಯವರನ್ನ ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ಕಳಸಾ ಬಂಡೂರಿ ರೈತರು ಭೇಟಿಯಾಗಲಿದ್ದಾರೆ.ಇದನ್ನೂ ಓದಿ:ಮಹದಾಯಿ ನ್ಯಾಯಾಧಿಕರಣದ ಮುಂದೆ ವಾದ ಅಂತ್ಯ: ಮೂರು ರಾಜ್ಯಗಳ ವಾದ ಏನಿತ್ತು? ಜುಲೈನಲ್ಲಿ ಬರುತ್ತಾ ತೀರ್ಪು?

    ಬೆಂಗಳೂರಿನ ಸಹ್ಯಾದ್ರಿ ಜನ-ಜಲ ಸೊಸೈಟಿ ಹಾಗೂ ಮಹದಾಯಿ ಮಹಾವೇದಿಕೆ ಸಹಯೋಗ ದಲ್ಲಿ ಪ್ರಧಾನಿಗಳನ್ನ ಭೇಟಿ ಮಾಡಲಿದ್ದು ಹುಬ್ಬಳ್ಳಿ, ಧಾರವಾಡ, ರಾಮದುರ್ಗ, ನರಗುಂದ ಸೇರಿದಂತೆ 23 ಜನ ರೈತರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

    ಇಂದು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳಸಲಿರುವ ರೈತರು ನಾಳೆ ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.ಇದನ್ನೂ ಓದಿ:2 ವರ್ಷವಾದ್ರೂ ರೈತರ ಹೋರಾಟಕ್ಕೆ ಬೆಲೆಯಿಲ್ಲ: ಕಳಸಾ ಬಂಡೂರಿ, ಮಹದಾಯಿ ನೀರಿಗಾಗಿ `ಮಾಡು ಇಲ್ಲವೇ ಮಡಿ’ ಹೋರಾಟ

  • ದಕ್ಷ, ಪ್ರಾಮಾಣಿಕ ಸರ್ಕಾರ ನೀಡುತ್ತೆನೆಂದು ರಕ್ತದಲ್ಲಿ ಬರೆದುಕೊಡ್ತೇನೆ: ಬಿಎಸ್‍ವೈ

    ದಕ್ಷ, ಪ್ರಾಮಾಣಿಕ ಸರ್ಕಾರ ನೀಡುತ್ತೆನೆಂದು ರಕ್ತದಲ್ಲಿ ಬರೆದುಕೊಡ್ತೇನೆ: ಬಿಎಸ್‍ವೈ

    ಧಾರವಾಡ: ಮುಂದಿನ ಚುನಾವಣೆಯಲ್ಲಿ ನಮ್ಮನ್ನ ಗೆಲ್ಲಿಸಿ ಆಡಳಿತಕ್ಕೆ ತಂದರೆ. ದಕ್ಷ ಹಾಗೂ ಪ್ರಾಮಾಣಿಕ ಸರ್ಕಾರ ನೀಡುತ್ತೇನೆ. ಇದನ್ನ ರಕ್ತದಲ್ಲಿ ಬರೆದುಕೊಡ್ತೆನೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದರು.

    ಧಾರವಾಡ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಣ್ಣಿದ್ದರೂ ಕುರುಡರಂತೆ ಮಾಡುತ್ತಿದೆ. ಮಹದಾಯಿ ನದಿ ಜೋಡಣೆಗಾಗಿ 15 ದಿನಗಳಲ್ಲಿ ಗೋವಾ ಹಾಗೂ ಪ್ರಧಾನಿ ಮೋದಿಗೆ ಭೇಟಿ ಮಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡುತ್ತೇವೆ. ಪರಿವರ್ತನ ಯಾತ್ರೆಯ ಮೊದಲೇ ಈ ಸಮಸ್ಯೆಯನ್ನು ಇತ್ಯರ್ಥ ಮಾಡಿ ಈ ಭಾಗಕ್ಕೆ ಬರುತ್ತೇನೆಂದು. ಇನ್ನು ಹಿಂದಿನ ಸರ್ಕಾರ ಮಾಡಿದ ತಪ್ಪಿನಿಂದ ಮಹದಾಯಿ ಸಮಸ್ಯೆ ಆಗಿದೆ. ಸದ್ಯ ಟ್ರಿಬ್ಯುನಲ್‍ನಲ್ಲಿ ಸಿಕ್ಕಿಕೊಳ್ಳಲು ಹಿಂದಿನ ಸರ್ಕಾರಗಳೇ ಕಾರಣ ಎಂದು ಕಿಡಿಕಾರಿದರು. ಹೋರಾಟಗಾರರು ತಮ್ಮ ಮಹದಾಯಿ ಹೋರಾಟ ನಿಲ್ಲಿಸಬೇಕು ಎಂದು ಮನವಿ ಮಾಡಿದರು.

    ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಪ್ರಧಾನ ಮಂತ್ರಿ ಫಸಲ ವಿಮಾ ಯೋಜನೆ ತಂದಿದೆ. ಆದರೆ ರಾಜ್ಯ ಸರ್ಕಾರದ ತಪ್ಪಿನಿಂದ ರೈತರಿಗೆ ತೊಂದರೆಯಾಗುತ್ತಿದೆ. ಯಡಿಯೂರಪ್ಪನವರು ಗುಡುಗಿದ ನಂತರ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದೆ. ಹಿಂದೆ ಯಡಿಯೂರಪ್ಪ ಡಿಸಿಎಂ ಹಾಗೂ ನಾನು ಸಿಎಂ ಇದ್ದಾಗ ಕೂಡಾ ಸಾಲ ಮನ್ನಾ ಮಾಡಿದ್ದೇವೆ. ಸರ್ಕಾರ ಇವತ್ತು ಷರತ್ತುಗಳನ್ನ ಹಾಕಿ ಸಾಲ ಮನ್ನಾ ಮಾಡುತ್ತಿದೆ. ಆದರೆ ರೈತರಿಗೆ ಇದೂವರೆಗೆ ಅಕೌಂಟಿಗೆ ಹಣನೇ ಬಂದಿಲ್ಲ ಎಂದು ಗುಡುಗಿದರು.

    ಯುಪಿಯ ಆದಿತ್ಯನಾಥ ಸರ್ಕಾರ ರೈತರ 1 ಲಕ್ಷ ಸಾಲ ಮನ್ನಾ ಮಾಡಿದೆ. ಅವರು ಮಾಡಿದ ಸಾಲ ಮನ್ನಾ ಆರ್ಡರ್ ಕಾಪಿ ತಂದು ನೋಡಿ. ಅವರು ರಾಷ್ಟ್ರೀಕೃತ ಬ್ಯಾಂಕಿನ ಸಾಲ ಕೂಡಾ ಮನ್ನಾ ಮಾಡಿದ್ದಾರೆ. ನಿಮ್ಮಂತೆ ಕೇಂದ್ರದ ಕಡೆ ಅವರು ಬೊಟ್ಟು ಮಾಡಿಲ್ಲ ಎಂದು ಶೆಟ್ಟರ್ ಹೇಳಿದರು.