Tag: ಮಹಾತ್ಮ ಗಾಂಧಿ

  • Gandhi Jayanti: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ ಗೌರವ ನಮನ ಸಲ್ಲಿಸಿದ ಮೋದಿ

    Gandhi Jayanti: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ ಗೌರವ ನಮನ ಸಲ್ಲಿಸಿದ ಮೋದಿ

    ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ (Mahatma Gandhi) ಅವರ 156ನೇ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಗುರುವಾರ ರಾಜ್‌ಘಾಟ್‌ಗೆ ತೆರಳಿ ಗಾಂಧಿಗೆ ಗೌರವ ನಮನ ಸಲ್ಲಿಸಿದರು.

    ನಾಡಹಬ್ಬ ದಸರಾ ಜೊತೆಗೆ ಗಾಂಧಿ ಜಯಂತಿ (Gandhi Jayanti) ಬಂದಿದೆ. ಇಂದು (ಅ.2) ಮಹಾತ್ಮ ಗಾಂಧೀಜಿ ಅವರ 156ನೇ ವರ್ಷದ ಜನ್ಮ ದಿನ. ಇದನ್ನೂ ಓದಿ: ವಿಜಯದಶಮಿಗೂ ರಾಮಾಯಣಕ್ಕೂ ಇದೆ ನಂಟು- ಪಾಂಡವರಿಗೆ ಏನು ಸಂಬಂಧ?

    ಗಾಂಧಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ಗಾಂಧಿ ಜಯಂತಿಯು ಪ್ರೀತಿಯ ಬಾಪು ಅವರ ಅಸಾಧಾರಣ ಜೀವನಕ್ಕೆ ಗೌರವ ಸಲ್ಲಿಸುವ ಬಗ್ಗೆ, ಅವರ ಆದರ್ಶಗಳು ಮಾನವ ಇತಿಹಾಸದ ಹಾದಿಯನ್ನು ಪರಿವರ್ತಿಸಿದವು. ಧೈರ್ಯ ಮತ್ತು ಸರಳತೆ ಹೇಗೆ ದೊಡ್ಡ ಬದಲಾವಣೆಯ ಸಾಧನಗಳಾಗಬಹುದು ಎಂಬುದನ್ನು ಅವರು ಪ್ರದರ್ಶಿಸಿದರು ಎಂದು ಸ್ಮರಿಸಿದ್ದಾರೆ.

    ಜನರನ್ನು ಸಬಲೀಕರಣಗೊಳಿಸುವ ಅಗತ್ಯ ಸಾಧನವಾಗಿ ಸೇವೆ ಮತ್ತು ಕರುಣೆಯ ಶಕ್ತಿಯನ್ನು ಅವರು ನಂಬಿದ್ದರು. ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಅನ್ವೇಷಣೆಯಲ್ಲಿ ನಾವು ಅವರ ಮಾರ್ಗವನ್ನು ಅನುಸರಿಸುತ್ತೇವೆ ಎಂದು ಮೋದಿ ತಿಳಿಸಿದ್ದಾರೆ.

    ಇದೇ ದಿನ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನ ಕೂಡ. ಪ್ರಧಾನಿ ನರೇಂದ್ರ ಮೋದಿ ಅವರು ವಿಜಯ್ ಘಾಟ್‌ನಲ್ಲಿ ಶಾಸ್ತ್ರಿ ಅವರಿಗೆ ಗೌರವ ಸಲ್ಲಿಸಿದರು. ಇದನ್ನೂ ಓದಿ: ಅರಮನೆ ನಗರಿಯಲ್ಲಿ ದಸರಾ ವೈಭವ – ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ

    ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಸಾಧಾರಣ ರಾಜಕಾರಣಿಯಾಗಿದ್ದು, ಅವರ ಸಮಗ್ರತೆ, ನಮ್ರತೆ ಮತ್ತು ದೃಢಸಂಕಲ್ಪವು ಸವಾಲಿನ ಸಮಯದಲ್ಲೂ ಭಾರತವನ್ನು ಬಲಪಡಿಸಿತು. ಅವರು ಅನುಕರಣೀಯ ನಾಯಕತ್ವ, ಶಕ್ತಿ ಮತ್ತು ನಿರ್ಣಾಯಕ ಕ್ರಿಯೆಯ ವ್ಯಕ್ತಿತ್ವವನ್ನು ಹೊಂದಿದ್ದರು. ‘ಜೈ ಜವಾನ್ ಜೈ ಕಿಸಾನ್’ ಎಂಬ ಅವರ ಸ್ಪಷ್ಟ ಕರೆ ನಮ್ಮ ಜನರಲ್ಲಿ ದೇಶಭಕ್ತಿಯ ಮನೋಭಾವವನ್ನು ಹುಟ್ಟುಹಾಕಿತು. ಬಲಿಷ್ಠ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಪ್ರಯತ್ನದಲ್ಲಿ ಅವರು ನಮ್ಮನ್ನು ಪ್ರೇರೇಪಿಸುತ್ತಲೇ ಇದ್ದಾರೆ ಎಂದು ಮೋದಿ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

  • ಲಂಡನ್‌ನಲ್ಲಿನ ಮಹಾತ್ಮ ಗಾಂಧಿ ಪ್ರತಿಮೆಗೆ ಅಪಚಾರ – ಧ್ವಂಸಗೊಳಿಸಿ, ಭಾರತ ವಿರೋಧಿ ಬರಹದಿಂದ ವಿಕೃತಿ

    ಲಂಡನ್‌ನಲ್ಲಿನ ಮಹಾತ್ಮ ಗಾಂಧಿ ಪ್ರತಿಮೆಗೆ ಅಪಚಾರ – ಧ್ವಂಸಗೊಳಿಸಿ, ಭಾರತ ವಿರೋಧಿ ಬರಹದಿಂದ ವಿಕೃತಿ

    – ಗಾಂಧಿ ಜಯಂತಿಗೂ ಮುನ್ನವೇ ಖಂಡನೀಯ ಕೃತ್ಯ

    ಲಂಡನ್: ಗಾಂಧಿ ಜಯಂತಿಗೂ ಮುನ್ನವೇ ಲಂಡನ್‌ನಲ್ಲಿ (London) ಕೃತ್ಯವೊಂದು ನಡೆದಿದೆ. ಮಹಾತ್ಮ ಗಾಂಧಿ (Mahatma Gandhi) ಅವರ ಪ್ರತಿಮೆಯನ್ನು ಧ್ವಂಸಗೊಳಿಸಿ, ಅದರ ಸ್ತಂಭದ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆದು ವಿಕೃತಿ ಮರೆದಿದ್ದಾರೆ.

    ಸೋಮವಾರ (ಸೆ.29) ಲಂಡನ್ ವಿಶ್ವವಿದ್ಯಾಲಯದ ಟ್ಯಾವಿಸ್ಟಾಕ್ ಸ್ಕ್ವೇರ್‌ನಲ್ಲಿ ಧ್ಯಾನಸ್ಥ ಭಂಗಿಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮೇಲೆ ವಿಕೃತಿ ಮರೆದಿದ್ದಾರೆ. ಪ್ರತಿಮೆಯ ಸ್ತಂಭದ ಮೇಲೆ ಭಾರತ ವಿರೋಧಿ ಬರಹಗಳು ಕಂಡುಬಂದಿದೆ. ಈ ಕೃತ್ಯವನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ತೀವ್ರವಾಗಿ ಖಂಡಿಸಿದ್ದು, ಪ್ರತಿಮೆಯ ಮೂಲ ಘನತೆಗಾಗಿ ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದೆ. ಈ ಕುರಿತು ಈಗಾಗಲೇ ಸ್ಥಳೀಯ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಪತ್ನಿ ಕೊಲೆ ಮಾಡಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಈ ಕುರಿತು ಭಾರತೀಯ ಹೈಕಮಿಷನ್ (Indian High Commission) ಹೇಳಿಕೆ ಬಿಡುಗಡೆ ಮಾಡಿದ್ದು, ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು, ನಾಚಿಕೆಗೇಡಿನ ಸಂಗತಿ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಅಹಿಂಸಾ ದಿನವೆಂದು ಗೊತ್ತುಪಡಿಸಲಾದ ಮೂರು ದಿನಗಳ ಮೊದಲು ನಡೆದ ಹಿಂಸಾತ್ಮಕ ದಾಳಿಯಿದು ಎಂದು ತಿಳಿಸಿದೆ.

    ಸದ್ಯ ಈ ಕೃತ್ಯದ ವರದಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಮೆಟ್ರೋಪಾಲಿಟನ್ ಪೊಲೀಸರು ಮತ್ತು ಸ್ಥಳೀಯ ಕ್ಯಾಮ್ಡೆನ್ ಕೌನ್ಸಿಲ್ ಅಧಿಕಾರಿಗಳು ತಿಳಿಸಿದ್ದಾರೆ.

    ಮಹಾತ್ಮ ಗಾಂಧಿಯವರು ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದ್ದರು. ಅದರ ಗೌರವಾರ್ಥವಾಗಿ 1968ರಲ್ಲಿ ಇಂಡಿಯಾ ಲೀಗ್‌ನ ಬೆಂಬಲದೊಂದಿಗೆ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು.ಇದನ್ನೂ ಓದಿ: ಇನ್ಮುಂದೆ ಮುಂಬೈ ನಗರದಲ್ಲಿ ಪಾಡ್ ಟ್ಯಾಕ್ಸಿ ಸೇವೆ – ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್!

  • ಸತತ ಪ್ರಯತ್ನದಿಂದ ಮಾತ್ರ ಭಾರತವನ್ನು ಸ್ವಚ್ಛಗೊಳಿಸಲು ಸಾಧ್ಯ: ಮೋದಿ

    ಸತತ ಪ್ರಯತ್ನದಿಂದ ಮಾತ್ರ ಭಾರತವನ್ನು ಸ್ವಚ್ಛಗೊಳಿಸಲು ಸಾಧ್ಯ: ಮೋದಿ

    ನವದೆಹಲಿ: ಸತತ ಪ್ರಯತ್ನದಿಂದ ಮಾತ್ರ ಭಾರತವನ್ನು ಸ್ವಚ್ಛಗೊಳಿಸಲು ಸಾಧ್ಯ. ಅದಕ್ಕಾಗಿ ಸ್ವಚ್ಛ ಭಾರತ್ ಮಿಷನ್‍ನ್ನು (Swachh Bharat Campaign) ಬಲಪಡಿಸುವುದನ್ನು ಮುಂದುವರಿಸಿ ಎಂದು ಜನರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ.

    ಮಹಾತ್ಮ ಗಾಂಧಿಯವರ (Mahatma Gandhi) 155ನೇ ಜಯಂತಿಯ (Gandhiji Birth Anniversary) ಅಂಗವಾಗಿ ದೆಹಲಿಯ ಗಾಂಧಿ ಸ್ಮಾರಕಕ್ಕೆ ಅವರು ಗೌರವ ಸಲ್ಲಿಸಿದರು. ಬಳಿಕ ಅವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, 2014 ರಲ್ಲಿ ಪ್ರಾರಂಭಿಸಿದ ರಾಷ್ಟ್ರೀಯ ಸ್ವಚ್ಛತಾ ಅಭಿಯಾನವಾದ ಸ್ವಚ್ಛ ಭಾರತ್ ಮಿಷನ್‍ನ 10 ವರ್ಷಗಳನ್ನ ಪೂರೈಸಿದೆ. ಈ ಮಹತ್ವದ ದಿನವನ್ನು ಆಚರಿಸಲು ಶಾಲಾ ಮಕ್ಕಳೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದೇನೆ. ನಾಗರಿಕರು ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: HMT ಕ್ಯಾಂಪಸ್‌ನಲ್ಲಿ ಪೌರ ಕಾರ್ಮಿಕರೊಂದಿಗೆ ಕಸ ಗುಡಿಸಿದ ಎಚ್‌ಡಿಕೆ

    ಸ್ವಚ್ಛ ಭಾರತವು ಪ್ರಪಂಚದ ಅತ್ಯಂತ ದೊಡ್ಡ ಮತ್ತು ಜನರ ಅತ್ಯಂತ ಯಶಸ್ವಿ ಸಂಕಲ್ಪವಾಗಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಜನರು ವಹಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನವು ಕೇವಲ ಸ್ವಚ್ಛತಾ ಆಂದೋಲನವಲ್ಲ. ಇದು ಈಗ ಸಮೃದ್ಧಿಯ ಹೊಸ ಹಾದಿಯಾಗುತ್ತಿದೆ ಎಂದಿದ್ದಾರೆ.

    ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಖರ್ ರಾಜ್‍ಘಾಟ್‍ನಲ್ಲಿ ಗಾಂಧಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ಫಸ್ಟ್‌ ಟೈಂ ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ ಇರಾನ್‌

  • ನಕಲಿ ನೋಟು ಕೇಸ್‌ನಲ್ಲಿ ಗುಜರಾತ್‌ ಪೊಲೀಸರಿಗೆ ಶಾಕ್‌ – ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಇತ್ತು ಬಾಲಿವುಡ್‌ ನಟನ ಫೋಟೋ

    ನಕಲಿ ನೋಟು ಕೇಸ್‌ನಲ್ಲಿ ಗುಜರಾತ್‌ ಪೊಲೀಸರಿಗೆ ಶಾಕ್‌ – ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಇತ್ತು ಬಾಲಿವುಡ್‌ ನಟನ ಫೋಟೋ

    ಗಾಂಧೀನಗರ: ನಕಲಿ ನೋಟುಗಳ (Fake Notes) ಪ್ರಕರಣ ಬೇಧಿಸಿದ ಗುಜರಾತ್‌ ಪೊಲೀಸರು ಶಾಕ್‌ ಆಗಿದ್ದಾರೆ. 500 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ (Anupam Kher) ಅವರ ಚಿತ್ರ ಬಳಸಿರುವುದು ಕಂಡುಬಂದಿದೆ.

    ಸುಮಾರು 1.6 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೋಟುಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಿಗೆ ‘ರಿಸೋಲ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಪದ ಬಳಕೆ ಮಾಡಲಾಗಿದೆ. ಇದೀಗ ನೋಟಿನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ದೇಶಿ ಹಸುಗಳನ್ನು ‘ರಾಜ್ಯಮಾತಾ’ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ

    ಅಹಮದಾಬಾದ್‌ನ ವ್ಯಾಪಾರಿಯೊಬ್ಬರು ನಕಲಿ ನೋಟುಗನ್ನು ಬಳಸಿ ವಂಚಿಸಿರುವ ಸಂಬಂಧ ವೈರಲ್‌ ಆಗಿರುವ ವೀಡಿಯೋವನ್ನು ಟ್ಯಾಗ್‌ ಮಾಡಿ ಅನುಪಮ್‌ ಖೇರ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. 500 ರೂ. ನೋಟುಗಳಲ್ಲಿ ಗಾಂಧೀಜಿಯವರ ಫೋಟೋ ಬದಲಿಗೆ ನನ್ನ ಫೋಟೋ ಎಂದು ನಟ ಶೀರ್ಷಿಕೆ ನೀಡಿದ್ದಾರೆ.

    ಸೆ.24 ರಂದು ನವರಂಗಪುರ ಪೊಲೀಸ್ ಠಾಣೆಯಲ್ಲಿ ಬುಲಿಯನ್ ವ್ಯಾಪಾರಿ ಮೆಹುಲ್ ಠಕ್ಕರ್ ದೂರು ದಾಖಲಿಸಿದ್ದರು. 1.6 ಕೋಟಿ ರೂ. ಮೌಲ್ಯದ 2,100 ಗ್ರಾಂ ಚಿನ್ನವನ್ನು ಒಳಗೊಂಡ ಡೀಲ್‌ಗಾಗಿ ಶಂಕಿತರು ತಮ್ಮ ಉದ್ಯೋಗಿಯೊಬ್ಬರನ್ನು ಸಂಪರ್ಕಿಸಿದ್ದರು. ಉಳಿದ 30 ಲಕ್ಷವನ್ನು ಮರುದಿನ ಪಾವತಿಸುವುದಾಗಿ ಭರವಸೆ ನೀಡಿ, 1.3 ಕೋಟಿ ನಗದು ನೀಡಿದ್ದಾರೆ. ಆದರೆ, ಚಿನ್ನವನ್ನು ಹಸ್ತಾಂತರಿಸಿದ ನಂತರ ಅವರು ಎಸ್ಕೇಪ್‌ ಆದರು. ಎಲ್ಲಾ ನೋಟುಗಳನ್ನು ಗಮನಿಸಿದಾಗ ನಕಲಿ ಎಂದು ತಿಳಿಯಿತು.

    ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: MUDA Scam Case: ಸಿಎಂ ಸಿದ್ದರಾಮಯ್ಯ ವಿರುದ್ಧ ಇಸಿಐಆರ್ ದಾಖಲಿಸಿದ ED

  • ಬಲಪಂಥೀಯರೇ ಗಾಂಧಿಯನ್ನ ಕೊಂದು ಹಾಕಿರೋದು: ಸಿಎಂ ಸಿದ್ದರಾಮಯ್ಯ

    ಬಲಪಂಥೀಯರೇ ಗಾಂಧಿಯನ್ನ ಕೊಂದು ಹಾಕಿರೋದು: ಸಿಎಂ ಸಿದ್ದರಾಮಯ್ಯ

    – ಮನುಷ್ಯನ ದುರಾಸೆಯಿಂದ ಪ್ರಕೃತಿ ಹಾಳಾಗುತ್ತಿದೆ

    ಬೆಂಗಳೂರು: ಬಲಪಂಥೀಯರೇ ಗಾಂಧಿಯನ್ನು (Mahatma Gandhi) ಕೊಂದು ಹಾಕಿರೋದು. ಗಾಂಧಿ ಕೊಂದ ಗೋಡ್ಸೆಯನ್ನು ಪೂಜೆ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬೇಸರ ವ್ಯಕ್ತಪಡಿಸಿದರು.

    ’21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ’ ವಿಚಾರ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ ವಿಚಾರಗಳು, ಸಮಾಜಕ್ಕೆ ನೀಡಿದ ಮಾರ್ಗದರ್ಶನಗಳು ಪ್ರಸ್ತುತತೆ 19-20ನೇ ಶತಮಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇಂದಿಗೂ ಅದು ಪ್ರಸ್ತುತ. ಗಾಂಧಿಯನ್ನ ಮರೆತರೆ ಇಡೀ ಸಮಾಜವನ್ನೇ ಮರೆತ ಹಾಗೆ, ವಿಶ್ವವನ್ನ ಮರೆತ ಹಾಗೆ. ಗಾಂಧಿ ವಿಚಾರ ಮೆಲುಕು ಹಾಕಬೇಕು. ಆ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುವುದು ಅವಶ್ಯಕ ಎಂದು ತಿಳಿಸಿದರು. ಇದನ್ನೂ ಓದಿ: MUDA Scam | ಪ್ರಾಸಿಕ್ಯೂಷನ್ ಸಮರದಲ್ಲಿ ಸೈಲೆಂಟ್ ಅಸ್ತ್ರ ಪ್ರಯೋಗಿಸಿದ ರಾಹುಲ್‌ ಗಾಂಧಿ!

    ಕೋಮು ಸಂಘರ್ಷ ಶುರು ಆಗಿದೆ, ಇದು ಇರಬಾರದು. ಹುಟ್ಟುವಾಗ ಎಲ್ಲ ವಿಶ್ವಮಾನವ, ಬೆಳೆಯುತ್ತ ಅಲ್ಪ ಮಾನವರಾಗುತ್ತಾರೆ ಅಂತಾ ಕುವೆಂಪು ಹೇಳಿದ್ದಾರೆ. ವಿಶ್ವ ಮಾನವ ಆಗೋದು ಕಷ್ಟ. ಆ ದಾರಿಯಲ್ಲಿ ಬೆಳೆಯೋದು ಕಷ್ಟ ಆಗಲ್ಲ. ಅಸಹನೆ ಬೆಳೆಸಿಕೊಳ್ಳುವುದು ಇರಬಾರದು. ಹೊಂದಾಣಿಕೆ, ಸೌಹಾರ್ದತೆಯಿಂದ ಬಾಳಬೇಕು ಎಂದರು.

    ಮನುಷ್ಯನ ಸ್ವಯಂಕೃತ ಅಪಮಾನದಿಂದ ಜಾಗತಿಕ ತಾಪಮಾನ ಜಾಸ್ತಿ ಆಗ್ತಿದೆ. ನಮ್ಮ ಅವಶ್ಯಕತೆಗಳನ್ನು ಪ್ರಕೃತಿ ಈಡೇರಿಸುತ್ತದೆ. ನಮ್ಮ ದುರಾಸೆಗಳನ್ನ ಪೂರೈಸಲು‌ ಸಾಧ್ಯವಿಲ್ಲ. ಮನುಷ್ಯನ ದುರಾಸೆಯಿಂದ ಪ್ರಕೃತಿ ಹಾಳಾಗುತ್ತಿದೆ ಎಂದು ಈ ವೇಳೆ ಕೇರಳ, ಶಿರೂರು ಘಟನೆಯನ್ನೂ ಮೆಲುಕು ಹಾಕಿದರು. ಇದನ್ನೂ ಓದಿ: Karkala | ಮದ್ಯದಲ್ಲಿ ಮಾದಕ ವಸ್ತು ನೀಡಿ ಅತ್ಯಾಚಾರ – ಗ್ಯಾಂಗ್‌ರೇಪ್‌ ಶಂಕೆ?

    ಜಾಗತಿಕ ತಾಪಮಾನ ಹೆಚ್ಚಾಗುತ್ತದೆ. ಭೂಮಿ ವೇಗವಾಗಿ ಬಿಸಿಯಾಗುತ್ತದೆ. ಆಗ ಬರ, ಪ್ರವಾಹ ಜಾಸ್ತಿಯಾಗುತ್ತದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಬರಗಾಲ ಅಂತಾ ಕೆಲವರು ಮೌಢ್ಯವನ್ನ ನಂಬುವವರು ಟೀಕೆ ಮಾಡಿದರು. ಮೌಢ್ಯವನ್ನ ಬಿತ್ತುವ ಪ್ರಯತ್ನ ಮಾಡ್ತಿದ್ದಾರೆ. ಸಿದ್ದರಾಮಯ್ಯ ಕಾಲು ಗುಣದಿಂದ ಬರ ಅಂದ್ರು. ಸಾರ್ವಜನಿಕ ಜೀವನದಲ್ಲಿದ್ದವರು ಹೇಳುವ ಮಾತಿದು. ಪ್ರಕೃತಿ ವಿಕೋಪ ಆದ್ರೆ ಯಾರೋ ವ್ಯಕ್ತಿ ಜವಾಬ್ದಾರರು ಅನ್ನೋದು ಕುಟಿಲ ಪ್ರಯತ್ನ. ವೈಜ್ಞಾನಿಕ, ವೈಚಾರಿತೆಯಿಂದ ಯೋಚನೆ ಮಾಡ್ಬೇಕು. ವಿದ್ಯಾವಂತರೇ ಮೌಢ್ಯಗಳನ್ನ ಆಚರಣೆ ಮಾಡುವವರಿದ್ದಾರೆ. ಬುದ್ಧನ ಕಾಲದಲ್ಲೇ ಕರ್ಮ ಸಿದ್ಧಾಂತವನ್ನು ತಿರಸ್ಕಾರ ಮಾಡಿದ್ರು ಎಂದು ಬೇಸರಿಸಿದರು.

  • Independence Day | ಇತಿಹಾಸ, ಮಹತ್ವ, ನೀವು ತಿಳಿದಿರಲೇಬೇಕಾದ ಸಂಗತಿಗಳಿವು

    Independence Day | ಇತಿಹಾಸ, ಮಹತ್ವ, ನೀವು ತಿಳಿದಿರಲೇಬೇಕಾದ ಸಂಗತಿಗಳಿವು

    ಸಾಂಸ್ಕೃತಿಕ, ಸಾಹಿತ್ಯಿಕ, ಆರ್ಥಿಕವಾಗಿ ಸಂಪದ್ಭರಿತವಾಗಿದ್ದ ಭರತಖಂಡ ಜಗತ್ತಿನಲ್ಲೇ ವಿಶೇಷ ಸ್ಥಾನ ಪಡೆದಿತ್ತು. ವೇದೋಪನಿಷತ್, ರಾಮಾಯಣ-ಮಹಾಭಾರತದಂತಹ ಉತ್ಕೃಷ್ಟ ಜ್ಞಾನ ಭಂಡಾರಗಳ ಸೃಷ್ಟಿ. ಚಿನ್ನ, ಬೆಳ್ಳಿ, ವಜ್ರ ವೈಡೂರ್ಯ, ಕಲೆ-ಸಾಹಿತ್ಯ-ವಾಸ್ತುಶಿಲ್ಪ ಶ್ರೀಮಂತಿಕೆಯಿಂದ ಕೂಡಿದ ರಾಜರ ಆಡಳಿತ. ಹಿಮಾಲಯ, ಅರಣ್ಯ ಸಂಪತ್ತು, ಫಲವತ್ತಾದ ಮಣ್ಣಿನಲ್ಲಿ ಬಿತ್ತಿದ್ದೆಲ್ಲವೂ ಚಿನ್ನ. ಹೆಜ್ಜೆ ಹೆಜ್ಜೆಗೂ ಸಿಗುವ ನಾನಾ ಭಾಷೆಯ, ಭಿನ್ನ ಸಂಸ್ಕೃತಿಯ ಜಯ. ಏನುಂಟು ಏನಿಲ್ಲ.. ಇಂತಹ ಸಕಲ ಶ್ರೀಮಂತಿಕೆಯ ದೇಶ ಪರಕೀಯರ ಕಣ್ಣು ಕುಕ್ಕಿದ್ದು ಇತಿಹಾಸ ಸತ್ಯ.

    ಭರತಖಂಡದ ಸಕಲ ಸಂಪತ್ತನ್ನು ದೋಚಲು ಇತಿಹಾಸದುದ್ದಕ್ಕೂ ಪರಕೀಯರು ನಡೆಸಿದ ದಾಳಿಗಳಿಗೆ ಲೆಕ್ಕವಿಲ್ಲ. ಮೊಘಲರು, ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟಿಷರು.. ಹೀಗೆ ಒಬ್ಬೊಬ್ಬರಾಗಿ ದಾಳಿ ನಡೆಸಿ ಭಾರತದ ಸಂಪತ್ತನ್ನು ಲೂಟಿ ಮಾಡಿದರು. ಆದರೆ ಬ್ರಿಟಿಷರು ಮಾತ್ರ ದಶಕಗಳ ಕಾಲ ಉಳಿದು ಸಂಪತ್ತನ್ನು ದೋಚಿದರು. ಬಿಳಿಯರ ದಬ್ಬಾಳಿಕೆ, ದೌರ್ಜನ್ಯದಿಂದ ಬೇಸತ್ತಿದ್ದ ಕೋಟ್ಯಂತರ ಭಾರತೀಯರ ಸಹನೆ ಕಟ್ಟೆ ಒಮ್ಮೆಲೆ ಒಡೆದು ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿತು. ಸುಮಾರು 90 ವರ್ಷಗಳ ಬ್ರಿಟಿಷ್ (British) ಆಳ್ವಿಕೆಯ ನಂತರ ಭಾರತವು ಅಂತಿಮವಾಗಿ ಸ್ವಾತಂತ್ರ್ಯವನ್ನು ಪಡೆದಾಗ 1947, ಆಗಸ್ಟ್ 15 ಆಗಿತ್ತು. ಅಂದು ಮಧ್ಯರಾತ್ರಿ ಭಾರತ ಪರಿಪೂರ್ಣವಾಗಿ ದಾಸ್ಯದ ಸಂಕೋಲೆಯಿಂದ ಹೊರಬಂದು ಸ್ವತಂತ್ರವಾಯಿತು.

    ಭಾರತೀಯರಿಗೆ (India) ಸ್ವಾತಂತ್ರ್ಯ ಸುಲಭವಾಗಿ ದಕ್ಕಿದ್ದಲ್ಲ. ಹೋರಾಟಗಾರರು, ಕ್ರಾಂತಿಕಾರಿಗಳ ತ್ಯಾಗ-ಬಲಿದಾನದಿಂದ ನಾವಿಂದು ಭಾರತದ ಪ್ರಜೆಗಳಾಗಿದ್ದೇವೆ. ಭಾರತ ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ದೇಶವಾಗಿದೆ. ಆಗಸ್ಟ್ 15 ನಮಗೆ ಸ್ವಾತಂತ್ರ್ಯ ಸಿಕ್ಕ ದಿನ. ಪ್ರತಿ ವರ್ಷ ಆ ದಿನವನ್ನು ದೇಶದೆಲ್ಲೆಡೆ ಆಚರಿಸುತ್ತೇವೆ. ಈ ದಿನ, ದೇಶಕ್ಕಾಗಿ ಹೋರಾಡಿ ಮಡಿದ ಹೋರಾಟಗಾರರು, ವೀರ ಯೋಧರನ್ನು ಸ್ಮರಿಸುತ್ತೇವೆ. ನಮ್ಮ ದೇಶ, ನಮ್ಮ ತನ, ನಮ್ಮ ಸಂಸ್ಕೃತಿ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಆ ದಿನ ಮತ್ತೆ ಬಂದಿದೆ. ಸ್ವತಂತ್ರ್ಯ ಸಂಭ್ರಮದ ಹೊತ್ತಲ್ಲಿ ಸಂಗ್ರಾಮದ ಇತಿಹಾಸವನ್ನೊಮ್ಮೆ ಮೆಲುಕು ಹಾಕೋಣ. ಇದನ್ನೂ ಓದಿ: ಆ.20 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ

    ಭಾರತದ ಸ್ವಾತಂತ್ರ್ಯ ಇತಿಹಾಸವೇನು?
    ಭಾರತದ ಸ್ವಾತಂತ್ರ‍್ಯ ಹೋರಾಟವು ಒಂದು ಶತಮಾನಕ್ಕೂ ಹೆಚ್ಚು ಕಾಲ ನಡೆದ ಸುದೀರ್ಘ ಪ್ರಯಾಣವಾಗಿತ್ತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 17 ನೇ ಶತಮಾನದ ಆರಂಭದಲ್ಲಿ ಕೇವಲ ವ್ಯಾಪಾರಿಗಳಾಗಿ ಭಾರತಕ್ಕೆ ಬಂದು, ನಿಧಾನವಾಗಿ ಭೂಮಿಗೆ ದಾರಿ ಮಾಡಿಕೊಂಡರು. ಭಾರತಕ್ಕೆ ಸೇರಿದ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಂಡರು. ರಾಷ್ಟ್ರವನ್ನು ವಸಾಹತುವನ್ನಾಗಿ ಮಾಡಿದರು. ತದನಂತರ 19 ನೇ ಶತಮಾನದ ವೇಳೆಗೆ, ಬ್ರಿಟಿಷ್ ಕ್ರೌನ್ ಭಾರತದ ನಿಯಂತ್ರಣವನ್ನು ತೆಗೆದುಕೊಂಡಿತು. ಅದನ್ನು ನೇರ ವಸಾಹತುವನ್ನಾಗಿ ಮಾಡಿತು. ಬ್ರಿಟಿಷರ ನಿರಂತರ ದಬ್ಬಾಳಿಕೆ, ಗುಲಾಮಗಿರಿಯಿಂದ ನೊಂದಿದ್ದ ಜನ ತಿರುಗಿಬಿದ್ದರು. ಬ್ರಿಟಿಷರ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹುಟ್ಟುಕೊಂಡಿತು.

    ಮಹಾತ್ಮ ಗಾಂಧಿ (Mahatma Gandhi) ಭಾರತಕ್ಕೆ ಬಂದಾಗ ಚಳವಳಿಗೆ ನಿಜವಾದ ಪುಶ್ ಬಂದಿತು. ಅವರ ನಾಯಕತ್ವದಲ್ಲಿ ಅಹಿಂಸಾತ್ಮಕ ಪ್ರತಿರೋಧ ಅಥವಾ ಸತ್ಯಾಗ್ರಹದ ಪರಿಕಲ್ಪನೆಗಳು ತಿಳಿದುಬಂದವು. ಶಾಂತಿಯುತ ಪ್ರತಿಭಟನೆ ಪರಿಕಲ್ಪನೆಯ ಮೂಲಕ ಗಾಂಧಿಯವರು ಭಾರತಕ್ಕೆ ಅಸಹಕಾರ ಚಳವಳಿ, ನಾಗರಿಕ ಅಸಹಕಾರ ಚಳವಳಿ ಮತ್ತು ಕ್ವಿಟ್ ಇಂಡಿಯಾ ಚಳವಳಿಯನ್ನು ನೀಡಿದರು. ವಿಶ್ವ ಸಮರ-2 ನಿಂದ ಬ್ರಿಟಿಷರ ನಿಯಂತ್ರಣ ಭಾರತದಲ್ಲಿ ದುರ್ಬಲಗೊಂಡಿತು. ಸ್ವಾತಂತ್ರ‍್ಯದ ಬೇಡಿಕೆ ಎದುರಿಸಲಾಗದಂತಾಯಿತು. ಬ್ರಿಟಿಷರು ಅಂತಿಮವಾಗಿ ಸ್ವಾತಂತ್ರ್ಯ ನೀಡಲು ಒಪ್ಪಿಕೊಳ್ಳಲು ಕಾರಣವಾಯಿತು. ಆಗಸ್ಟ್ 15, 1947 ರಂದು, ಭಾರತವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಲಾಯಿತು. ಇದು 200 ವರ್ಷಗಳ ವಸಾಹತುಶಾಹಿ ಆಳ್ವಿಕೆಯನ್ನು ಕೊನೆಗೊಳಿಸಿತು.

    ಸ್ವಾತಂತ್ರ್ಯ ದಿನದ ಮಹತ್ವವೇನು?
    ಹೋರಾಟ, ತ್ಯಾಗ, ಬಲಿದಾನದ ಫಲ ಈ ಸ್ವಾತಂತ್ರ್ಯ. ಬ್ರಿಟಿಷರ ದಬ್ಬಾಳಿಕೆಯ ಅಂತ್ಯ ಮತ್ತು ಸಾರ್ವಭೌಮ ರಾಷ್ಟ್ರದ ಉದಯವನ್ನು ಸೂಚಿಸುವ ದಿನ. ಸ್ವಾತಂತ್ರ‍್ಯ ದಿನವು (Independence day) ನ್ಯಾಯ, ಸಮಾನತೆ ಮತ್ತು ಸ್ವ-ನಿರ್ಣಯದ ಹಕ್ಕನ್ನು ಪ್ರತಿನಿಧಿಸುತ್ತದೆ.

    ಆಚರಣೆ ಹೇಗೆ?
    ಸ್ವಾತಂತ್ರ್ಯ ದಿನವನ್ನು ವಿವಿಧ ವಯಸ್ಸಿನ ಜನರು ವಿಭಿನ್ನವಾಗಿ ಆಚರಿಸುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಸಮಾರಂಭದೊಂದಿಗೆ ಪ್ರಾರಂಭವಾಗುತ್ತದೆ. ಪ್ರತಿ ವರ್ಷ, ಭಾರತದ ಪ್ರಧಾನ ಮಂತ್ರಿ ತಿರಂಗಾವನ್ನು ಹಾರಿಸುತ್ತಾರೆ. ನಂತರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಭಾಷಣದಲ್ಲಿ ಕಳೆದ ವರ್ಷದಲ್ಲಿ ದೇಶದ ಸಾಧನೆಗಳು, ಮುಂದಿರುವ ಸವಾಲುಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ.

    ಶಾಲಾ-ಕಾಲೇಜುಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಧ್ವಜಾರೋಹಣ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಸ್ವಾತಂತ್ರ‍್ಯ ಚಳವಳಿಯ ವೀರರನ್ನು ಸ್ಮರಿಸಲು, ಯುವ ಪೀಳಿಗೆಯಲ್ಲಿ ಹೆಮ್ಮೆ ಮತ್ತು ದೇಶಭಕ್ತಿಯ ಭಾವವನ್ನು ಮೂಡಿಸಲು ದೇಶಭಕ್ತಿ ಗೀತೆಗಳು, ನೃತ್ಯಗಳು ಮತ್ತು ಕಿರುನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಎನ್‌ಸಿಸಿ ಕೆಡೆಟ್‌ಗಳು ಪರೇಡ್‌ಗಳನ್ನು ನಡೆಸುತ್ತಾರೆ. ಮಕ್ಕಳಿಗೆ ಸಿಹಿ ಹಂಚಲಾಗುತ್ತದೆ.

    ಸ್ವಾತಂತ್ರ್ಯದ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು.
    ಸ್ವಾತಂತ್ರ್ಯ ಮತ್ತು ವಿಭಜನೆ: ಭಾರತದ ಸ್ವಾತಂತ್ರ‍್ಯದ ಜೊತೆಗೆ ಭಾರತ (India) ಮತ್ತು ಪಾಕಿಸ್ತಾನದ (Pakistan) ವಿಭಜನೆಯ ದಿನವೂ ಆಗಿದೆ. ವಿಭಜನೆಯು ಜನರ ಸ್ಥಳಾಂತರ ಮತ್ತು ಕೋಮುಗಲಭೆಗೆ ಕಾರಣವಾಯಿತು. ಇದು ಇತಿಹಾಸದಲ್ಲಿ ದುಃಖದ ಸಂದರ್ಭವಾಗಿದೆ.

    ಮೊದಲ ಭಾಷಣ: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಸ್ವಾತಂತ್ರ‍್ಯ ದಿನಾಚರಣೆಯ ಮುನ್ನಾದಿನದಂದು ‘ಟ್ರಿಸ್ಟ್ ವಿತ್ ಡೆಸ್ಟಿನಿ’ ಭಾಷಣ ಮಾಡಿದರು. ಮಧ್ಯರಾತ್ರಿಯ ಗಂಟೆಯ ಸದ್ದಲ್ಲಿ ಜಗತ್ತು ನಿದ್ರಿಸುವಾಗ, ಭಾರತವು ಜೀವನ ಮತ್ತು ಸ್ವಾತಂತ್ರ‍್ಯಕ್ಕೆ ಎಚ್ಚರಗೊಂಡಿದೆ’ ಎಂದು ಭಾಷಣ ಮಾಡಿದ್ದರು.

    ತಿರಂಗಾ: ಪಿಂಗಲಿ ವೆಂಕಯ್ಯ ವಿನ್ಯಾಸಗೊಳಿಸಿದ ಭಾರತದ ರಾಷ್ಟ್ರಧ್ವಜವನ್ನು ಜುಲೈ 22, 1947 ರಂದು ಅಳವಡಿಸಿಕೊಳ್ಳಲಾಯಿತು. ತ್ರಿವರ್ಣವು ಭಾರತದ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಧೈರ್ಯ ಮತ್ತು ತ್ಯಾಗಕ್ಕಾಗಿ ಕೇಸರಿ, ಶಾಂತಿ ಮತ್ತು ಸತ್ಯಕ್ಕಾಗಿ ಬಿಳಿ ಹಾಗೂ ನಂಬಿಕೆಗೆ ಹಸಿರು. ಮಧ್ಯದಲ್ಲಿರುವ ಅಶೋಕ ಚಕ್ರವು ನ್ಯಾಯದ ಸಂಕೇತವಾಗಿದೆ.

    ಎಚ್ಚರಿಕೆ ಮತ್ತು ಭದ್ರತೆ: ಸ್ವಾತಂತ್ರ್ಯ ದಿನದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ದೇಶದಾದ್ಯಂತ ವಿಶೇಷವಾಗಿ ರಾಜಧಾನಿ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ. ಪ್ರಧಾನಮಂತ್ರಿ ಧ್ವಜಾರೋಹಣ ಮಾಡುವ ಕೆಂಪು ಕೋಟೆಗೆ ಬಿಗಿ ಭದ್ರತೆ ಒದಗಿಸಲಾಗುತ್ತದೆ.

    ಹೋರಾಟ: ಆಗಸ್ಟ್ 15, 1947ರಲ್ಲಿ ಬ್ರಿಟಿಷರ ಆಳ್ವಿಕೆ ಅಂತ್ಯಗೊಂಡರೂ, ಏಕೀಕೃತ ಮತ್ತು ಶಾಂತಿಯುತ ರಾಷ್ಟ್ರಕ್ಕಾಗಿ ಹೋರಾಟವು ಹೆಚ್ಚು ಕಾಲ ಮುಂದುವರೆಯಿತು. ಒಂದೆಡೆ ಸ್ವಾತಂತ್ರ್ಯ ಹಾಗೂ ಮತ್ತೊಂದೆಡೆ ವಿಭಜನೆಯಿಂದಾಗಿ ಹಿಂಸಾಚಾರ, ಕೋಮು ಗಲಭೆಗಳು ಮತ್ತು ಜೀವಹಾನಿಗಳು ಸಂಭವಿಸಿದವು. ಒಂದು ಕಾಲದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಜನರು ಕೆಲವೇ ಗಂಟೆಗಳಲ್ಲಿ ಬದ್ಧ ವೈರಿಗಳಾದರು.

    ಸ್ವಾತಂತ್ರ್ಯ ಹೋರಾಟಗಾರರು: ಸ್ವಾತಂತ್ರ‍್ಯ ದಿನಾಚರಣೆಯು ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ಸಂಯೋಜಿತ ಕೊಡುಗೆಯಾಗಿದೆ. ಲಾಲ್ ಲಜಪತ್ ರಾಯ್ ಅವರಿಂದ ಹಿಡಿದು ಮಹಾತ್ಮ ಗಾಂಧಿಯವರೆಗೆ.. ಸುಭಾಷ್ ಚಂದ್ರ ಬೋಸ್‌ರಿಂದ ಹಿಡಿದು ಭಗತ್ ಸಿಂಗ್ ವರೆಗೆ.. ಪ್ರತಿಯೊಬ್ಬರೂ ಭಾರತವನ್ನು ಸೆರೆಯಿಂದ ಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸುಭಾಸ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯಕ್ಕಾಗಿ ಉಗ್ರಗಾಮಿ ಧೋರಣೆ ಅನುಸರಿಸಿದರು. ಮಹಾತ್ಮ ಗಾಂಧಿಯವರು ಅಹಿಂಸಾತ್ಮಕ ಮಾರ್ಗದಿಂದ ಬ್ರಿಟಿಷರಿಗೆ ಪ್ರತಿರೋಧವೊಡ್ಡಿದರು. ಇಬ್ಬರದೂ ಭಿನ್ನ ಹೋರಾಟವಾದರೂ ಅಂತಿಮವಾಗಿ ಭಾರತದ ಸ್ವಾತಂತ್ರ್ಯಕ್ಕೆ ಕಾರಣವಾಯಿತು.

    ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಕೊಡುಗೆಯೂ ಇದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿಯಿಂದ ಸರೋಜಿನಿ ನಾಯ್ಡುವರೆಗೆ ಅಸಂಖ್ಯ ಮಹಿಳೆಯರು ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಮುಂಚೂಣಿಯಲ್ಲಿದ್ದರು ಎಂಬುದನ್ನು ಯಾರೂ ಮರೆಯಬಾರದು.

  • ಮಹಾತ್ಮ ಗಾಂಧಿ ‘ಮಹಾಪುರುಷ’, ಪ್ರಧಾನಿ ಮೋದಿ ‘ಯುಗಪುರುಷ’: ಉಪ ರಾಷ್ಟ್ರಪತಿ ಬಣ್ಣನೆ

    ಮಹಾತ್ಮ ಗಾಂಧಿ ‘ಮಹಾಪುರುಷ’, ಪ್ರಧಾನಿ ಮೋದಿ ‘ಯುಗಪುರುಷ’: ಉಪ ರಾಷ್ಟ್ರಪತಿ ಬಣ್ಣನೆ

    ಮುಂಬೈ: ಕಳೆದ ಶತಮಾನದ ‘ಮಹಾಪುರುಷ’ ಮಹಾತ್ಮ ಗಾಂಧಿ, ಈ ಶತಮಾನದ ‘ಯುಗಪುರುಷ’ ಪ್ರಧಾನಿ ನರೇಂದ್ರ ಮೋದಿ ಎಂದು ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಬಣ್ಣಿಸಿದ್ದಾರೆ.

    ಮಹಾತ್ಮ ಗಾಂಧಿಯವರು ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ನಮ್ಮನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದರು. ಭಾರತದ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ ಅವರು ನಾವು ಯಾವಾಗಲೂ ಇರಬೇಕೆಂದು ಬಯಸಿದ ಹಾದಿಗೆ ನಮ್ಮನ್ನು ಕೊಂಡೊಯ್ದಿದ್ದಾರೆ ಎಂದು ಹೇಳಿದ್ದಾರೆ.

    ಜೈನ ಧರ್ಮಗುರು ಹಾಗೂ ತತ್ವಜ್ಞಾನಿ ಶ್ರೀಮದ್ ರಾಜಚಂದ್ರಜೀ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಕಳೆದ ಶತಮಾನದ ಮಹಾಪುರುಷ ಮಹಾತ್ಮಾ ಗಾಂಧಿ. ನರೇಂದ್ರ ಮೋದಿ ಈ ಶತಮಾನದ ಯುಗಪುರುಷ ಎಂದು ಹಾಡಿ ಹೊಗಳಿದ್ದಾರೆ.

    1867 ರಲ್ಲಿ ಗುಜರಾತ್‌ನಲ್ಲಿ ರಾಜ್‌ಚಂದ್ರಜಿ ಜನಿಸಿದರು. 1901 ರಲ್ಲಿ ನಿಧನರಾದರು. ಜೈನ ಧರ್ಮದ ಬೋಧನೆಗಳು ಮತ್ತು ಮಹಾತ್ಮ ಗಾಂಧಿಯವರಿಗೆ ಅವರ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಹೆಸರುವಾಸಿಯಾಗಿದ್ದಾರೆ ಎಂದು ಧನಕರ್‌ ಸ್ಮರಿಸಿದ್ದಾರೆ.

    ಇಬ್ಬರು ಮಹಾನ್ ವ್ಯಕ್ತಿಗಳಾದ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವೆ ಒಂದು ವಿಷಯ ಸಾಮಾನ್ಯವಾಗಿದೆ. ಅವರು ಶ್ರೀಮದ್ ರಾಜ್‌ಚಂದ್ರಜಿ ಅವರನ್ನು ಗೌರವದಿಂದ ಪ್ರತಿಬಿಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಈ ರಾಷ್ಟ್ರದ ಬೆಳವಣಿಗೆಯನ್ನು ವಿರೋಧಿಸುವ ಶಕ್ತಿಗಳು, ಈ ದೇಶದ ಉದಯವನ್ನು ಅರಗಿಸಿಕೊಳ್ಳದ ಶಕ್ತಿಗಳು ಒಂದಾಗುತ್ತಿವೆ. ದೇಶದಲ್ಲಿ ಏನಾದರೂ ಒಳ್ಳೆಯ ಘಟನೆಗಳು ನಡೆದಾಗ, ಅವರು ವಿಭಿನ್ನ ಕ್ರಮಕ್ಕೆ ಬರುತ್ತಾರೆ. ಇದು ಸಂಭವಿಸಬಾರದು ಎಂದು ಹೇಳಿಕೆ ನೀಡಿದ್ದಾರೆ.

    ಅಪಾಯ ತುಂಬಾ ದೊಡ್ಡದು. ನೀವು (ನಮ್ಮ) ಸುತ್ತಲೂ ನೋಡುವ ದೇಶಗಳು, ಅವರ ಇತಿಹಾಸಗಳು 300-500 ಅಥವಾ 700 ವರ್ಷಗಳಷ್ಟು ಹಳೆಯವು. (ಆದರೆ) ನಮ್ಮ ಇತಿಹಾಸವು 5,000 ವರ್ಷಗಳಷ್ಟು ಹಳೆಯದು ಎಂದಿದ್ದಾರೆ.

  • ಗಾಂಧಿ ಜಯಂತಿ ವಿಶೇಷ – ಸ್ವಚ್ಛಾಂಜಲಿ ಅರ್ಪಿಸಿದ ಮೋದಿ

    ಗಾಂಧಿ ಜಯಂತಿ ವಿಶೇಷ – ಸ್ವಚ್ಛಾಂಜಲಿ ಅರ್ಪಿಸಿದ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಗಾಂಧಿ ಜಯಂತಿಯ (Gandhi Jayanti) ಪೂರ್ವ ದಿನವಾದ ಇಂದು ಕಸ ಗುಡಿಸಿ ಸ್ವಚ್ಛಗೊಳಿಸಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ಗಾಂಧಿಜಿಯವರಿಗೆ ಸ್ವಚ್ಛಾಂಜಲಿ ಅರ್ಪಿಸಿದ್ದಾರೆ.

    ಈ ವೇಳೆ ಮೋದಿಯವರು ಫಿಟ್‍ನೆಸ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅಂಕಿತ್ ಬೈಯನ್‍ಪುರಿಯಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಅಭಿಯಾನಕ್ಕೆ ಮೋದಿ ಹಾಗೂ ಅಂಕಿತ್ ಇಬ್ಬರು ಕಸ ಗುಡಿಸುವ ಮೂಲಕ ವಿಶೇಷವಾಗಿ ಚಾಲನೆ ನೀಡಿದ್ದಾರೆ. ಬಳಿಕ ಮೋದಿಯವರು ಫಿಟ್‍ನೆಸ್ ಮತ್ತು ಆರೋಗ್ಯದ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಈ ವೀಡಿಯೋವನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಚೀನಾ, ಪಾಕ್ ತಂಟೆಗೆ ಬ್ರೇಕ್ ಹಾಕಲು ಸೇನೆಗೆ `ಪ್ರಚಂಡ’ ಬಲ

    ರಾಷ್ಟ್ರದ ಸ್ವಚ್ಛತೆಗೆ ಆದ್ಯತೆ ನೀಡಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಸ್ವಚ್ಛತೆಯ ಹೊರತಾಗಿ ಫಿಟ್‍ನೆಸ್ ಮತ್ತು ಆರೋಗ್ಯದ ಬಗ್ಗೆಯೂ ಚರ್ಚಿಸಿದ್ದೇವೆ. ಈ ಮೂಲಕ ಸ್ವಚ್ಛ ಮತ್ತು ಸ್ವಸ್ತ್ ಭಾರತ ಎಂಬ ಪರಿಕಲ್ಪನೆಯನ್ನು ಬಿತ್ತಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

    ಇತ್ತೀಚಿನ `ಮನ್ ಕಿ ಬಾತ್’ನಲ್ಲಿ ಮೋದಿಯವರು ಅ.1 ರಂದು ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ ಎಂಬ ಘೋಷಣೆಯೊಂದಿಗೆ ಕಾರ್ಯಪ್ರವೃತ್ತರಾಗುವಂತೆ ಕರೆಕೊಟ್ಟಿದ್ದರು. ಇದು ಮಹಾತ್ಮ ಗಾಂಧಿಯವರಿಗೆ `ಸ್ವಚ್ಛಾಂಜಲಿ’ ಎಂದು ಅವರು ಹೇಳಿದ್ದರು. ಇದನ್ನೂ ಓದಿ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಉಗ್ರ ಕರಾಚಿಯಲ್ಲಿ ಗುಂಡೇಟಿಗೆ ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ

    G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ

    ನವದೆಹಲಿ: ಜಿ20 (G20) ಶೃಂಗಸಭೆಯ ಎರಡನೇ ದಿನವಾದ ಇಂದು (ಭಾನುವಾರ) ಜಾಗತಿಕ ನಾಯಕರು ನವದೆಹಲಿಯ ರಾಜ್‌ಘಾಟ್‌ನಲ್ಲಿರುವ (Rajghat) ಮಹಾತ್ಮ ಗಾಂಧಿ (Mahatma Gandhi) ಸ್ಮಾರಕಕ್ಕೆ ಗೌರವ ಸಲ್ಲಿಸಿದ್ದಾರೆ.

    ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಮತ್ತು ಇತರ ನಾಯಕರು ಮತ್ತು ಪ್ರತಿನಿಧಿಗಳು ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: G20 Summit: ಮೊದಲ ದಿನದ ಅಧಿವೇಶನಗಳು ಯಶಸ್ವಿ – ಇಂದಿನ ಕಾರ್ಯಕ್ರಮಗಳೇನು?

    ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಜಿ20 ನಾಯಕರನ್ನು ಬರಮಾಡಿಕೊಂಡರು. ಬಳಿಕ ಬಾಪು ಕುಟಿಯ ಬಗ್ಗೆ ಪ್ರಧಾನಿ ಮಾಹಿತಿ ಹಂಚಿಕೊಂಡಿದ್ದಾರೆ. ಬಾಪು ಕುಟಿಯು ಮಹಾರಾಷ್ಟ್ರದ ವಾರ್ಧಾ ಬಳಿ ಇದೆ. ಇದು 1936 ರಿಂದ 1948ರ ಅವರ ಮರಣದವರೆಗೂ ಮಹಾತ್ಮ ಗಾಂಧಿಯವರ ನಿವಾಸವಾಗಿತ್ತು ಎಂದು ತಿಳಿಸಿದ್ದಾರೆ.

    ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ ನಾಯಕರು ಲೀಡರ್ಸ್ ಲಾಂಜ್‌ನಲ್ಲಿ ಶಾಂತಿ ಗೋಡೆಗೆ ಸಹಿ ಹಾಕಿದ್ದಾರೆ.

    ಈ ಬಗ್ಗೆ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ, ಜಿ20 ಕುಟುಂಬ ಶಾಂತಿ, ಸೇವೆ, ಸಹಾನುಭೂತಿ ಮತ್ತು ಅಹಿಂಸೆಯ ದಾರಿದೀಪವಾದ ಗಾಂಧಿಗೆ ನಮನ ಸಲ್ಲಿಸಿತು. ಗಾಂಧೀಜಿಯವರ ಕಾಲಾತೀತ ಆದರ್ಶಗಳು, ಸಾಮರಸ್ಯ, ಅಂತರ್ಗತ ಮತ್ತು ಸಮೃದ್ಧ ಜಾಗತಿಕ ಭವಿಷ್ಯಕ್ಕಾಗಿ ನಮ್ಮ ಸಾಮೂಹಿಕ ದೃಷ್ಟಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತ-ಮಧ್ಯಪ್ರಾಚ್ಯ-ಯುರೋಪ್ ನಡುವೆ ಮೆಗಾ ಕಾರಿಡಾರ್; ಜಿ20 ಶೃಂಗಸಭೆಯಲ್ಲಿ ಬಿಗ್ ಡೀಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಳೆಹೊನ್ನೂರು ಗಾಂಧಿ ಸರ್ಕಲ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ- ಸ್ಥಳೀಯರ ಪ್ರತಿಭಟನೆ

    ಹೊಳೆಹೊನ್ನೂರು ಗಾಂಧಿ ಸರ್ಕಲ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ- ಸ್ಥಳೀಯರ ಪ್ರತಿಭಟನೆ

    ಶಿವಮೊಗ್ಗ: ಮಹಾತ್ಮ ಗಾಂಧಿ (Mahatma Gandhi) ಪ್ರತಿಮೆಯನ್ನು (Statue) ಕೆಡವಿ ಕಿಡಿಗೇಡಿಗಳು ಧ್ವಂಸ ಮಾಡಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ (Bhadravathi) ತಾಲೂಕಿನ ಹೊಳೆಹೊನ್ನೂರಿನಲ್ಲಿ (Holehonnur) ನಡೆದಿದೆ.

    ಹೊಳೆಹೊನ್ನೂರಿನ ಸರ್ಕಲ್‌ನಲ್ಲಿ ಸುಮಾರು 18 ವರ್ಷಗಳ ಹಿಂದೆ ಈ ಗಾಂಧಿ ಪ್ರತಿಮೆ ನಿರ್ಮಿಸಲಾಗಿತ್ತು. ಪ್ರತಿಮೆ ಸುತ್ತ ಮಂಟಪ ನಿರ್ಮಿಸಿ, ವಿಶೇಷವಾದ ಗೌರವವನ್ನು ನೀಡಲಾಗುತ್ತಿತ್ತು. ಮಧ್ಯರಾತ್ರಿ ಬೈಕ್‌ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಗಾಂಧೀಜಿಯವರ ಪ್ರತಿಮೆಯನ್ನು ಕೆಡವಿದ್ದಾರೆ. ಮೂರ್ತಿಯನ್ನು ಧ್ವಂಸಗೊಳಿಸಿದ್ದಷ್ಟೇ ಅಲ್ಲದೆ, ಅದನ್ನು ಬೀಳಿಸಿ ಪುಡಿ ಮಾಡಿದ್ದಾರೆ. ಇದನ್ನೂ ಓದಿ: ಗೊಲ್ಲರದೊಡ್ಡಿ ಅಪಘಾತ ಪ್ರಕರಣ – ರಸ್ತೆಗೆ ಹಂಪ್ ಹಾಕುವಂತೆ ಮಗು ಶವ ಇಟ್ಟು ಪ್ರತಿಭಟನೆ

    ದುಷ್ಕರ್ಮಿಗಳ ಈ ದುಷ್ಕೃತ್ಯ ಸಿಸಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಲೇ ಪ್ರತಿಮೆ ಬಳಿಯಲ್ಲಿ ನೂರಾರು ಮಂದಿ ಜಮಾಯಿಸಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗು ಹೊಳೆಹೊನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಓವರ್‌ಟೇಕ್ ಅವಾಂತರದಿಂದ ಬೈಕ್‍ಗೆ ಟ್ರಕ್ ಡಿಕ್ಕಿ – ಇಬ್ಬರ ದುರ್ಮರಣ

    ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಟ್ವೀಟ್ ಮಾಡಿದ್ದು, ಘಟನೆಯನ್ನು ಖಂಡಿಸಿದ್ದಾರೆ. ಗಾಂಧಿ ಪ್ರತಿಮೆ ಧ್ವಂಸಗೊಳಿಸಿರುವ ದೇಶ ವಿರೋಧಿ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ನೆಲದ ಸ್ವಾತಂತ್ರ‍್ಯ ಚಳುವಳಿಯ ಹಿನ್ನೆಲೆ, ಸಂವಿಧಾನ ಮತ್ತು ಕಾನೂನಿನ ಬಗ್ಗೆ ಗೌರವ ಇಲ್ಲದವರು ಮಾತ್ರ ಇಂತಹ ಹೀನ ಕೃತ್ಯ ಎಸಗಲು ಸಾಧ್ಯ. ಈ ಕೃತ್ಯದ ಹಿಂದೆ ಯಾರೇ ಇರಲಿ, ಅವರನ್ನು ಹಿಡಿದು ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ. ಯಾರೊಬ್ಬರೂ ಈ ಬಗ್ಗೆ ಉದ್ವೇಗಕ್ಕೆ ಒಳಗಾಗಬಾರದು. ಕಾನೂನು ಕೈಗೆತ್ತಿಕೊಳ್ಳದೇ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಸಿಎಂ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಲ್ಲು, ಚೂರಿ ಹಿಡಿದು ನಡುರಸ್ತೆಯಲ್ಲಿ ದಾಂಧಲೆ – ಸಿನಿಮೀಯ ಶೈಲಿಯಲ್ಲಿ ಲಾಕ್ ಮಾಡಿದ ಪೊಲೀಸರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]