Tag: ಮಹಾಕುಂಭ ಮೇಳ

  • ವಿಶ್ವ ದಾಖಲೆಯೊಂದಿಗೆ ಅತಿದೊಡ್ಡ ಅಧ್ಯಾತ್ಮಿಕ ಮೇಳಕ್ಕೆ ವಿದ್ಯುಕ್ತ ತೆರೆ – 45 ದಿನದಲ್ಲಿ 65 ಕೋಟಿ ಭಕ್ತರ ಪುಣ್ಯಸ್ನಾನ

    ವಿಶ್ವ ದಾಖಲೆಯೊಂದಿಗೆ ಅತಿದೊಡ್ಡ ಅಧ್ಯಾತ್ಮಿಕ ಮೇಳಕ್ಕೆ ವಿದ್ಯುಕ್ತ ತೆರೆ – 45 ದಿನದಲ್ಲಿ 65 ಕೋಟಿ ಭಕ್ತರ ಪುಣ್ಯಸ್ನಾನ

    ಪ್ರಯಾಗ್‌ರಾಜ್‌: 45 ದಿನ ಇಡೀ ಜಗತ್ತೇ ನಿಬ್ಬೆರಗಾಗುವ ರೀತಿಯಲ್ಲಿ ನಡೆದ ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ ರಾಜ್‌ನಲ್ಲಿ (Prayagraj) ನಡೆದ ಮಹಾಕುಂಭ ಮೇಳಕ್ಕೆ (Maha Kumbh Mela) ಇಂದು ವಿದ್ಯುಕ್ತ ತೆರೆ ಬಿದ್ದಿದೆ. ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವದಲ್ಲಿ 65 ಕೋಟಿಗೂ ಹೆಚ್ಚು ಭಕ್ತರು ಪುಣ್ಯ ಸ್ನಾನ ಮಾಡಿ ವಿಶ್ವ ದಾಖಲೆ ಬರೆದಿದ್ದಾರೆ.

    ಶಿವರಾತ್ರಿಯ (Maha Shivaratri ) ಹಿನ್ನೆಲೆಯಲ್ಲಿ ಇಂದು ನಡೆದ ಕೊನೆಯ ಅಮೃತಸ್ನಾನದಲ್ಲಿ ಒಂದು ಕೋಟಿಗೂ ಅಧಿಕ ಜನರು ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾದರು. ಎಲ್ಲೆಡೆ ಹರ್ ಹರ್ ಮಹಾದೇವ್ ಎಂಬ ಕೂಗು ಮಾರ್ದನಿಸಿತು.

    ರಾತ್ರಿಯಿಂದಲೇ ತ್ರಿವೇಣಿ ಸಂಗಮದಲ್ಲಿ ಬೀಡುಬಿಟ್ಟಿದ್ದ ಕೋಟ್ಯಂತರ ಭಕ್ತರು ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಪುಣ್ಯಸ್ನಾನ ಮಾಡಿದರು. ಬೆಳಗ್ಗೆ ಎಂಟು ಗಂಟೆಗೆ ಸುಮಾರು 40 ಲಕ್ಷ ಭಕ್ತರು ಅಮೃತ ಸ್ನಾನ ಮಾಡಿದರು. ಸಂಜೆ ಹೊತ್ತಿಗೆಲ್ಲಾ ಈ ಸಂಖ್ಯೆ ಕೋಟಿ ದಾಟಿತು.

    ಅಮೃತಸ್ನಾನ (Amrutha snanam) ಮಾಡಲು ಬಂದಿದ್ದ ಭಕ್ತರ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಲಾಯ್ತು. ಮುಂಜಾಗ್ರತಾ ಕ್ರಮಗಿ ಸಾಕಷ್ಟು ಕ್ರಮಗಳನ್ನು ಯುಪಿ ಸರ್ಕಾರ ತೆಗೆದುಕೊಂಡಿತ್ತು. ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಗೋರಖ್‌ಪುರದ ವಾರ್ ರೂಂನಲ್ಲಿ ಕುಳಿತು ಇಡೀ ದಿನ ಮಹಾಕುಂಭಮೇಳವನ್ನು ವೀಕ್ಷಿಸುತ್ತಿದ್ದರು.

    ವಿಪಕ್ಷಗಳ ರಾಜಕೀಯ, ಕೆಲ ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಕುಂಭಮೇಳ ಸುಸೂತ್ರವಾಗಿ ಮುಗಿದಿದೆ . 144 ವರ್ಷಕ್ಕೊಮ್ಮೆ ಬರುವ ಮಹಾ ಕುಂಭಮೇಳ ಹಲವು ದಾಖಲೆ ಬರೆದಿದೆ.

    ದಾಖಲೆಗಳ ಮಹಾಕುಂಭಮೇಳ
    – ಜನವರಿ 13 ರಿಂದ ಆರಂಭಗೊಂಡ ಕುಂಭಮೇಳದಲ್ಲಿ 65 ಕೋಟಿಗೂ ಅಧಿಕ ಭಕ್ತರಿಂದ ಪುಣ್ಯಸ್ನಾನ
    – ಜನವರಿ 19 ರ ಮೌನಿ ಅಮಾವಾಸ್ಯೆಯಂದು ಒಂದೇ ದಿನ 10 ಕೋಟಿಗೂ ಹೆಚ್ಚ ಜನರಿಂದ ಎರಡನೇ ಅಮೃತ ಸ್ನಾನ
    – 183 ದೇಶಗಳ ಪ್ರತಿನಿಧಿಗಳು, ಲಕ್ಷಾಂತರ ಕೈದಿಗಳಿಂದಲೂ ಅಮೃತಸ್ನಾನ
    – ಆಧ್ಯಾತ್ಮಿಕ ಮೇಳಕ್ಕೆ ಆಧುನಿಕ ತಂತ್ರಜ್ಞಾನದ ಮೆರುಗು. ಎಐ, ವಿಆರ್,ಎಆರ್, ಎಲ್‌ಇಡಿ, ಹೊಲೋಗ್ರಾಮ್ ಬಳಕೆ
    – ಮಹಾಕುಂಭಕ್ಕೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದಿಂದ ಒಟ್ಟು 7,500 ಕೋಟಿ ರೂ. ವೆಚ್ಚ. 3 ಲಕ್ಷ ಕೋಟಿ ರೂ. ಆದಾಯ
    – ಸ್ಥಳೀಯ ಬಡವರಿಗೆ ಆರ್ಥಿಕವಾಗಿ ಲಾಭ, ದೊಡ್ಡ ದೊಡ್ಡ ಉದ್ಯಮಿಗಳಿಗೂ ಲಾಭ

     

     

  • ಪಂಚಾಯತ್ ದುಡ್ಡಲ್ಲಿ ಗ್ರಾ.ಪಂ ಸದಸ್ಯರ ಮಹಾ ಕುಂಭಮೇಳ ಟ್ರಿಪ್ ಆರೋಪ – ಪ್ರವಾಸದ ಮಧ್ಯೆ ಉಪಾಧ್ಯಕ್ಷೆ ಪುತ್ರನ ಸಾವು

    ಪಂಚಾಯತ್ ದುಡ್ಡಲ್ಲಿ ಗ್ರಾ.ಪಂ ಸದಸ್ಯರ ಮಹಾ ಕುಂಭಮೇಳ ಟ್ರಿಪ್ ಆರೋಪ – ಪ್ರವಾಸದ ಮಧ್ಯೆ ಉಪಾಧ್ಯಕ್ಷೆ ಪುತ್ರನ ಸಾವು

    ಗದಗ: ಪ್ರಯಾಗ್‌ರಾಜ್ ಮಹಾ ಕುಂಭಮೇಳಕ್ಕೆ (Maha Kumbh Mela) ತೆರಳಿದ್ದ ಜಿಲ್ಲೆಯ ಗ್ರಾಮ ಪಂಚಾಯತ್‌ ಸದಸ್ಯರ ಕುಟುಂಬಗಳ ಪೈಕಿ ಉಪಾಧ್ಯಕ್ಷೆ ಪುತ್ರ ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರ ಜೊತೆ ಗ್ರಾ.ಪಂ ದುಡ್ಡಲ್ಲಿ ಸದಸ್ಯರು ಕುಂಭಮೇಳಕ್ಕೆ ಹೋಗಿದ್ದಾರೆ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ.

    ರೋಣ ತಾಲೂಕಿನ (Rona taluk) ಮಲ್ಲಾಪೂರ ಗ್ರಾಮ ಪಂಚಾಯತ್ (Mallapur Gram Panchayat) ಉಪಾಧ್ಯಕ್ಷೆ ಕರಿಯಮ್ಮ ಚಲವಾದಿ ಅವರ ಪುತ್ರ 39 ವರ್ಷದ ಹನಮಂತ ಚಲವಾದಿ ಪ್ರವಾಸ ಮುಗಿಸಿ ಬರುವ ವೇಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಇವರು ಬಿಳಿ ಕಾಮಾಲೆ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರಿಂದ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ಮೃತದೇಹವನ್ನು ಆಂಬುಲೆನ್ಸ್‌ ಮೂಲಕ ಸೋಮವಾರ ಮಲ್ಲಾಪೂರ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ.

    ಗ್ರಾ.ಪಂ ಉಪಾಧ್ಯಕ್ಷೆಯ ಮಗ ಸಾವಿನ ಬೆನ್ನಲ್ಲೇ ಗ್ರಾ.ಪಂ ಸದಸ್ಯರ ಕುಟುಂಬಗಳು ಒಟ್ಟಾಗಿ ಪಂಚಾಯತ್‌ ದುಡ್ಡಲ್ಲೇ ಪ್ರಯಾಗರಾಜ್ ಮಹಾ ಕುಂಭಮೇಳಕ್ಕೆ ತೆರಳಿದ್ದರು ಎಂಬ ಬಿಸಿಬಿಸಿ ಚರ್ಚೆ ಈಗ ಆರಂಭವಾಗಿದೆ. ಕಿಡ್ನಿ ವೈಫಲ್ಯ ಹಾಗೂ ಬಿಳಿ ಕಾಮಾಲೆಯಿಂದ ಬಳಲುತ್ತಿದ್ದ ಹನುಮಂತ ಚಲವಾದಿ ಅವರನ್ನು ಯಾಕೆ ಮಹಾಕುಂಭಮೇಳಕ್ಕೆ ಕರೆದೊಯ್ಯಲಾಯಿತು ಎಂದು ಜನರು ಈಗ ಪ್ರಶ್ನಿಸುತ್ತಿದ್ದಾರೆ.

    ಮಲ್ಲಾಪೂರ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸೇರುವ ಸಂದಿಗವಾಡ ಗ್ರಾಮದಲ್ಲಿ ಒಟ್ಟು 13 ಜನ ಸದಸ್ಯರಿದ್ದು, ಆ ಪೈಕಿ ಅಧ್ಯಕ್ಷ ಹನಮಂತಗೌಡ ಹುಲ್ಲೂರ, ಉಪಾಧ್ಯಕ್ಷೆ ಪುತ್ರ ಹನುಮಂತ ಚಲವಾದಿ ಹಾಗೂ 11 ಸದಸ್ಯರು ಸೇರಿ ಒಟ್ಟು 24 ಜನರು ಫೆ‌. 16ರಂದು ಖಾಸಗಿ ವಾಹನ ಬಾಡಿಗೆ ಪಡೆದು ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: ಮಹಾ ಶಿವರಾತ್ರಿಯಂದು ಉಪವಾಸ ಮಾಡುವುದ್ಯಾಕೆ?

    ಹಣ ದುರ್ಬಳಕೆ ಆರೋಪ: ಗ್ರಾ.ಪಂ ಅಧ್ಯಕ್ಷ ಸೇರಿ 11 ಸದಸ್ಯರು ಗ್ರಾಪಂ ದುಡ್ಡನ್ನು ದುರ್ಬಳಕೆ ಮಾಡಿಕೊಂಡು ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಗ್ರಾ.ಪಂ ಅಧ್ಯಕ್ಷ ಹನಮಂತಗೌಡ ಹುಲ್ಲೂರ ಅವರು ಗ್ರಾ.ಪಂ ದುಡ್ಡನ್ನು ಬಳಸಿಕೊಂಡಿಲ್ಲ. ಎಲ್ಲ ಸದಸ್ಯರೂ ಕೂಡಿಕೊಂಡು ಬೇರೆಯವರ ಬಳಿ 3 ಲಕ್ಷ ರೂಪಾಯಿ ಸಾಲ ಪಡೆದು ಮಹಾಕುಂಭಮೇಳಕ್ಕೆ ತೆರಳಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಎಲ್ಲ ಸದಸ್ಯರು ಕೂಡಿಕೊಂಡು ಓರ್ವನ ಬಳಿ ಹಣ ತೆಗೆದುಕೊಂಡು, ಮುಂದೆ ವರ್ಷಾಂತ್ಯದಲ್ಲಿ ಸರಿಮಾಡಿ ಕೊಡುವುದಾಗಿ ಒಟ್ಟಾಗಿ ಮಾತುಕತೆ ಮಾಡಿಕೊಂಡು ಮಹಾಕುಂಭಮೇಳಕ್ಕೆ ತೆರಳಿದ್ದರು ಎಂಬ ಮಾತುಗಳನ್ನು ಜನ ಈಗ ಆಡಿಕೊಳ್ಳುತ್ತಿದ್ದಾರೆ.

    ಪಿಡಿಒ ದೇವರಡ್ಡಿ ಹಂಚಿನಾಳ ಪ್ರತಿಕ್ರಿಯಿಸಿ, ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ಸದಸ್ಯರು ತೆರಳಿದ್ದ ಬಗ್ಗೆ ತಮಗೆ ಮಾಹಿತಿ ಇಲ್ಲ. ಮುಂದೆ ಪಂಚಾಯತ್ ಹಣ ಬಳಕೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

     

  • ಮತ್ತೆ ಕಿನ್ನರ ಅಖಾಡ ಸೇರಿದ ನಟಿ ಮಮತಾ ಕುಲಕರ್ಣಿ

    ಮತ್ತೆ ಕಿನ್ನರ ಅಖಾಡ ಸೇರಿದ ನಟಿ ಮಮತಾ ಕುಲಕರ್ಣಿ

    ಪ್ರಯಾಗ್‌ರಾಜ್‌: ಸನ್ಯಾಸಿನಿ ಮಮತಾ ಕುಲಕರ್ಣಿ (Mamta Kulkarni)  ಅವರು ಮತ್ತೆ ಕಿನ್ನರ ಅಖಾಡವನ್ನು (Kinnar Akhada) ಸೇರಿಕೊಂಡಿದ್ದಾರೆ.

    ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರು ತನ್ನ ರಾಜೀನಾಮೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಸನಾತನ ಧರ್ಮದ ಸೇವೆಯನ್ನು ಮುಂದುವರಿಸಲು ನಾನು ಮತ್ತೆ ಅಖಾಡ ಸೇರಲು ನಿರ್ಧರಿಸಿದ್ದೇನೆ ಎಂದು ಮಮತಾ ಕುಲಕರ್ಣಿ ವಿಡಿಯೋದಲ್ಲಿ ತಿಳಿಸಿದ್ದಾರೆ.

    ಎರಡು ದಿನಗಳ ಹಿಂದೆ, ಕೆಲವರು ನನ್ನ ಗುರು ಡಾ. ಆಚಾರ್ಯ ಲಕ್ಷ್ಮಿ ನಾರಾಯಣ ತ್ರಿಪಾಠಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ನಾನು ಭಾವೋದ್ವೇಗದಿಂದ ರಾಜೀನಾಮೆ ನೀಡಿದ್ದೆ. ಹೀಗಿದ್ದರೂ ನನ್ನ ಗುರುಗಳು ನನ್ನ ರಾಜೀನಾಮೆಯನ್ನು ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ.

    ರಾಜಮನೆತನದ ಛತ್ರಿ, ಕೋಲು ಮತ್ತು ಇತರ ಪವಿತ್ರ ವಸ್ತುಗಳನ್ನು ಒಳಗೊಂಡಂತೆ ಮಹಾಮಂಡಲೇಶ್ವರನಾದ (Mahamandaleshwar) ನಂತರ ನಾನು ಅರ್ಪಿಸಿದ ಕಾಣಿಕೆಗಳು ಅಖಾಡಕ್ಕೆ ಸಮರ್ಪಿತವಾಗಿರುತ್ತವೆ. ನನ್ನನ್ನು ಮರುಸ್ಥಾಪಿಸಿದ್ದಕ್ಕಾಗಿ ನನ್ನ ಗುರುಗಳಿಗೆ ನಾನು ಕೃತಜ್ಞನಾಗಿದ್ದೇನೆ. ಮುಂದೆ, ನಾನು ನನ್ನ ಜೀವನವನ್ನು ಕಿನ್ನಾರ ಅಖಾಡ ಮತ್ತು ಸನಾತನ ಧರ್ಮಕ್ಕೆ ಅರ್ಪಿಸುತ್ತೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

     

     

    ಫೆಬ್ರವರಿ 10 ರಂದು ಅಖಾಡದ ಮಹಾಮಂಡಲೇಶ್ವರ ಸ್ಥಾನಕ್ಕೆ ಮಮತಾ ಕುಲಕರ್ಣಿ ರಾಜೀನಾಮೆ ನೀಡಿದ್ದರು ಎಂದು ವರದಿಯಾಗಿತ್ತು. ಮಹಾಮಂಡಲೇಶ್ವರರಾಗಲು ಮಮತಾ ಹಣವನ್ನು ಪಾವತಿಸಿದ್ದಾರ ಎಂಬ ಆರೋಪಗಳು ಕೇಳಿ ಬಂದಿತ್ತು. ಇದನ್ನೂ ಓದಿ: Prayagraj Kumbh Mela | 1500 ಕೋಟಿ ರೂ. ಖರ್ಚು ಮಾಡಿದ್ದಕ್ಕೆ UP ಆರ್ಥಿಕತೆಗೆ 3 ಲಕ್ಷ ಕೋಟಿ ಲಾಭ: ಯೋಗಿ

    90ರ ದಶಕದಲ್ಲಿ ಬಾಲಿವುಡ್ ಸೇರಿದಂತೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಮಮತಾ ಕಿನ್ನರ ಅಖಾಡಕ್ಕೆ ಸೇರುವ ಮೂಲಕ ಮಹಾಮಂಡಲೇಶ್ವರಿಯಾಗಿದ್ದರು. ಮಮತಾ ಕುಲಕರ್ಣಿ ಹೆಸರನ್ನು ಬದಲಿಸಿಕೊಂಡು `ಮಾಯಿ ಮಮತಾ ನಂದಗಿರಿ’ ಎಂದು ನಾಮಕರಣ ಮಾಡಿಕೊಂಡಿದ್ದರು.

    ಕಳೆದ 2 ವರ್ಷಗಳಿಂದ ಜೂನಾ ಅಖಾಡದೊಂದಿಗೆ ಸಂಪರ್ಕದಲ್ಲಿದ್ದ ಮಮತಾ, 2-3 ತಿಂಗಳಿಂದ ಕಿನ್ನರ ಅಖಾಡದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದರು. ಇದೀಗ ಅದೇ ಅಖಾಡದ ಭಾಗವಾಗಲು ನಿರ್ಧರಿಸಿ ಲೌಕಿಕ ಜಗತ್ತನ್ನು ತೊರೆದು ಆಧ್ಯಾತ್ಮಿಕ ಜಗತ್ತಿಗೆ ಇಳಿದಿದ್ದರು.

    ಮಮತಾ ಕುಲಕರ್ಣಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಬಳಿಕ ತಮ್ಮ ಸ್ವಂತ ಪಿಂಡ ಪ್ರದಾನಮಾಡುವ ಮೂಲಕ ಕಿನ್ನರ ಅಖಾಡಕ್ಕೆ ಸೇರ್ಪಡೆಯಾಗಿ ಮಹಾಮಂಡಲೇಶ್ವರರಾಗಿದ್ದರು. ಇವರಿಗೆ ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ದೀಕ್ಷೆ ನೀಡಿದ್ದರು.

    ನಟಿ ಕನ್ನಡದ ವಿಷ್ಣು ವಿಜಯ ಸಿನಿಮಾದಲ್ಲಿ ನಟಿಸಿದ್ದು, ವಕ್ತ ಹಮಾರಾ ಹೈ, ಕ್ರಾಂತಿವೀರ, ಸಬ್ಸೆ ಬಡಾ ಕಿಲಾಡಿ ಇನ್ನಿತರ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

  • ಕುಂಭಮೇಳದಿಂದ ಅಯೋಧ್ಯೆಗೆ ತೆರಳುತ್ತಿದ್ದ ಕೊಪ್ಪಳದ ಯುವಕ ದುರಂತ ಸಾವು

    ಕುಂಭಮೇಳದಿಂದ ಅಯೋಧ್ಯೆಗೆ ತೆರಳುತ್ತಿದ್ದ ಕೊಪ್ಪಳದ ಯುವಕ ದುರಂತ ಸಾವು

    ನವದೆಹಲಿ: ಪ್ರಯಾಗ್‌ರಾಜ್ (Prayagraj) ಹೋಗಿ, ಅಲ್ಲಿಂದ ಅಯೋಧ್ಯೆಗೆ (Ayodhye) ತೆರಳುವಾಗ ರೈಲಿನಲ್ಲಿ ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ಗೋರಖಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಮೃತ ಯುವಕನನ್ನು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ನಿವಾಸಿ ಪ್ರವೀಣ್ ಹೊಸಮನಿ (27) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: 8 ವರ್ಷದಲ್ಲಿ 46 ಮಂದಿ ಜಲಸಮಾಧಿ: ಸಾವಿನ ಕೂಪವಾದ ವಿಸಿ ನಾಲೆ

    ಹದಿನೈದು ದಿನಗಳ ಹಿಂದೆ ಪ್ರವೀಣ್ ಪ್ರಯಾಗರಾಜ್‌ಗೆ ಹೋಗಿದ್ದರು. ಪ್ರಯಾಗ್‌ರಾಜ್‌ಗೆ ತೆರಳಿ ಬಳಿಕ ಅಲ್ಲಿಂದ ಅಯೋಧ್ಯೆಗೆ ರೈಲಿನಲ್ಲಿ ಹೋಗುತ್ತಿದ್ದರು. ಈ ವೇಳೆ ಗೋರಖಪುರ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ತಗುಲಿ ತೀವ್ರ ಗಾಯಗೊಂಡಿದ್ದರು. ಸ್ಥಳದಲ್ಲಿದ್ದ ರೈಲ್ವೆ ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಗೋರಖ್‌ಪುರ ಬಿಆರ್‌ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಮಂಗಳವಾರ ಅಸುನೀಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸ್ಥಳೀಯ ಪೊಲೀಸರು ಕುಟುಂಬದವರಿಗೆ ಮಾಹಿತಿ ನೀಡಿದ್ದು, ಸದ್ಯ ಮೃತ ಪ್ರವೀಣ್ ಶವ ತರಲು ಕುಟುಂಬಸ್ಥರು ವ್ಯವಸ್ಥೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಡವರ ಮನೆಯಲ್ಲಿ ಫೋಟೋಶೂಟ್‌ ಮಾಡಿಸಿ ಮನರಂಜನೆ ತೆಗೆದುಕೊಳ್ತಾರೆ: ರಾಹುಲ್‌ಗೆ ಮೋದಿ ಕುಟುಕು

  • ಕುಂಭ ಮೇಳ ಕಾಲ್ತುಳಿತದ ಹಿಂದೆ ಇದ್ಯಾ ಪಿತೂರಿ? – ಸಕ್ರಿಯವಾಗಿದ್ದ 16 ಸಾವಿರ ಮೊಬೈಲ್‌ಗಳ ಪೈಕಿ ಬಹುತೇಕ ಸ್ವಿಚ್‌ ಆಫ್‌!

    ಕುಂಭ ಮೇಳ ಕಾಲ್ತುಳಿತದ ಹಿಂದೆ ಇದ್ಯಾ ಪಿತೂರಿ? – ಸಕ್ರಿಯವಾಗಿದ್ದ 16 ಸಾವಿರ ಮೊಬೈಲ್‌ಗಳ ಪೈಕಿ ಬಹುತೇಕ ಸ್ವಿಚ್‌ ಆಫ್‌!

    ಪ್ರಯಾಗ್‌ರಾಜ್‌: ಮೌನಿ ಅಮಾವಾಸ್ಯೆಯಂದು ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ (Kumbh Stampede) ಪ್ರಕರಣದ ಹಿಂದೆ ದೊಡ್ಡ ಸಂಚು ಇದ್ಯಾ ಹೀಗೊಂದು ಶಂಕೆ ಈಗ ಎದ್ದಿದೆ.

    ಹೌದು. ಜನವರಿ 29 ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಈಗ ತನಿಖೆ ಆರಂಭವಾಗಿದೆ. ತನಿಖೆಯ ಭಾಗವಾಗಿ ಕಾಲ್ತುಳಿತ ಸಂಭವಿಸಿದ ಸ್ಥಳದಲ್ಲಿ ಸಕ್ರಿಯವಾಗಿದ್ದ ಸುಮಾರು 16 ಸಾವಿರ ಮೊಬೈಲ್‌ ಫೋನ್‌ಗಳನ್ನು (Mobile Phone) ದತ್ತಾಂಶಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದೆ.

    ವಿಶ್ಲೇಷಣೆಯ ಸಂದರ್ಭದಲ್ಲಿ ಬಹುತೇಕ ಮೊಬೈಲ್‌ ಫೋನ್‌ಗಳು ಸ್ವಿಚ್‌ ಆಫ್‌ ಆಗಿರುವ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಈಗ ತನಿಖಾಧಿಕಾರಿಗಳು ಸ್ವಿಚ್‌ ಆಫ್‌ ಆಗಿರುವ ಮೊಬೈಲ್‌ ಸಂಖ್ಯೆಗಳ ಗ್ರಾಹಕರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಬಸಂತ ಪಂಚಮಿ – ಪ್ರಯಾಗ್‌ರಾಜ್‌ನಲ್ಲಿ ಸೋಮವಾರ 3 ಕೋಟಿ ಭಕ್ತರಿಂದ ಪವಿತ್ರ ಸ್ನಾನ

    ಈಗ ಪೊಲೀಸ್‌ ಕಂಟ್ರೋಲ್‌ ರೂಮ್‌ನಲ್ಲಿ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಗಳಿಂದ ಮುಖ ಗುರುತಿಸುವಿಕೆ ಅಪ್ಲಿಕೇಶನ್ ಮೂಲಕ ಶಂಕಿತರನ್ನು ಗುರುತಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಮೌನಿ ಅಮಾವಾಸ್ಯೆಯಂದು ಸ್ನಾನ ಮಾಡಲು ನೂಕು ನುಗ್ಗಲು ಉಂಟಾಗಿ ಸುಮಾರು 30 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಜನಸಮೂಹವು ಬ್ಯಾರಿಕೇಡ್‌ಗಳನ್ನು ಹಾರಿ ಮುನ್ನುಗ್ಗಿದ್ದರಿಂದ ಈ ದುರಂತ ಸಂಭವಿಸಿತ್ತು.

    ಯೋಗಿ ಅದಿತ್ಯನಾಥ್‌ ಸರ್ಕಾರ ಈ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮೂವರು ಸದಸ್ಯರ ನ್ಯಾಯಾಂಗ ಆಯೋಗವು ಶುಕ್ರವಾರ ಘಟನೆಯ ಸ್ಥಳಕ್ಕೆ ಭೇಟಿ ನೀಡಿತ್ತು. ಸಮಿತಿಯು ತನ್ನ ತನಿಖೆಯನ್ನು ಮುಗಿಸಿ ವರದಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವಿದೆ.

    12 ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭ ಮೇಳವು ಜನವರಿ 13 ರಂದು ಪ್ರಾರಂಭವಾಗಿದ್ದು ಫೆಬ್ರವರಿ 26 ರವರೆಗೆ ನಡೆಯಲಿದೆ. ಸುಮಾರು 40 ಕೋಟಿ ಭಕ್ತರು ಈ ಕುಂಭಮೇಳದಲ್ಲಿ ಭಾಗಿಯಾಗಬಹುದು ಎಂದು ಉತ್ತರಪ್ರದೇಶ ಸರ್ಕಾರ ಆಂದಾಜಿಸಿದೆ.

     

  • ಮಹಾ ಕುಂಭಮೇಳದಲ್ಲಿ ಕಾಲ್ತುಳಿತ | ಕನ್ನಡಿಗರ ಸಾವಿನ ಬಗ್ಗೆ ಯುಪಿ ಸರ್ಕಾರದಿಂದ ಅಧಿಕೃತ ಮಾಹಿತಿ ಇಲ್ಲ: ಕೃಷ್ಣ ಬೈರೇಗೌಡ

    ಮಹಾ ಕುಂಭಮೇಳದಲ್ಲಿ ಕಾಲ್ತುಳಿತ | ಕನ್ನಡಿಗರ ಸಾವಿನ ಬಗ್ಗೆ ಯುಪಿ ಸರ್ಕಾರದಿಂದ ಅಧಿಕೃತ ಮಾಹಿತಿ ಇಲ್ಲ: ಕೃಷ್ಣ ಬೈರೇಗೌಡ

    ಬೆಂಗಳೂರು: ಪ್ರಯಾಗ್‌ರಾಜ್ (Prayagraj) ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ದುರಂತದಲ್ಲಿ (Maha Kumbh Stampede) ಕರ್ನಾಟಕದವರಿಗೆ ಏನಾದರೂ ಪ್ರಾಣಾಪಾಯ ಆಗಿದೆಯೇ ಎಂದು ಉತ್ತರ ಪ್ರದೇಶ (Uttar Pradesh) ಸರ್ಕಾರದ ಮಾಹಿತಿ ಕೇಳಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದ್ದಾರೆ.

    ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಉತ್ತರ ಪ್ರದೇಶದ ಸರ್ಕಾರದ ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗದ ಜೊತೆ ಸಂಪರ್ಕದಲ್ಲಿ ಇದ್ದೇವೆ. ಕಂದಾಯ ಇಲಾಖೆಯ ಎಸಿಎಸ್ ರಶ್ಮಿಯವರು ಈಗಾಗಲೇ ಯುಪಿ ಸರ್ಕಾರದ ಜೊತೆ ಮಾತನಾಡಿದ್ದಾರೆ. ಒಂದಿಬ್ಬರಿಗೆ ಗಾಯ ಆಗಿದೆ ಎಂಬ ಮಾಹಿತಿ ಇದೆ. ಯುಪಿ ಸರ್ಕಾರದಿಂದ ಇಲ್ಲಿಯ ತನಕ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಯುಪಿ ಸರ್ಕಾರದಿಂದ ಅಧಿಕೃತ ಮಾಹಿತಿಗೆ ಎದುರು ನೋಡುತ್ತಿದ್ದೇವೆ. ಕನ್ನಡಿಗರಿಗೆ ಏನಾದರೂ ತೊಂದರೆ ಆಗಿರುವ ಮಾಹಿತಿ ಬಂದರೆ, ಅವಶ್ಯಕತೆ ಇದ್ದರೆ ಅಧಿಕಾರಿಗಳ ತಂಡವನ್ನ ಪ್ರಯಾಗ್‌ರಾಜ್‌ಗೆ ಕಳುಹಿಸುತ್ತೇವೆ. ನಮ್ಮಲ್ಲೂ ವಿಪತ್ತು ‌ನಿರ್ವಹಣಾ ಸೆಲ್ ಇದೆ. ಮಾನಿಟರ್ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

  • ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ, ವದಂತಿ ನಂಬಬೇಡಿ: ಯೋಗಿ ಅದಿತ್ಯನಾಥ್‌

    ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ, ವದಂತಿ ನಂಬಬೇಡಿ: ಯೋಗಿ ಅದಿತ್ಯನಾಥ್‌

    ಪ್ರಯಾಗ್‌ರಾಜ್‌: ಸಂಗಮದ ಎಲ್ಲಾ ಘಾಟ್‌ಗಳಲ್ಲಿ ಜನರು ಶಾಂತಿಯುತವಾಗಿ ಸ್ನಾನ ಮಾಡುತ್ತಿದ್ದಾರೆ. ಯಾವುದೇ ವದಂತಿಗೆ ಕಿವಿಗೊಡಬೇಡಿ ಎಂದು ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ (Yogi Adityanath) ಜನರಲ್ಲಿ ಮನವಿ ಮಾಡಿದ್ದಾರೆ.

    ಮಹಾಕುಂಭ ಮೇಳದಲ್ಲಿ (MahaKumba Mela) ಕಾಲ್ತುಳಿತ (Stampede) ಸಂಭವಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಯೋಗಿ ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ ತ್ರಿವೇಣಿ ಸಂಗಮಕ್ಕೆ ಹೋಗಲು ಪ್ರಯತ್ನ ಮಾಡಬೇಡಿ ಎಂದು ವಿನಂತಿ ಮಾಡಿದ್ದಾರೆ.

    ನಾನು ಸಾಧು ಸಂತರ ಜೊತೆಗೆ ಮಾತನಾಡಿದ್ದೇವೆ. ಮೊದಲು ಭಕ್ತಾಧಿಗಳು ಪುಣ್ಯಸ್ನಾನ ಮಾಡಲಿ. ಆಮೇಲೆ ನಾವು ಸ್ನಾನ ಮಾಡುವುದಾಗಿ ಸಾಧು ಸಂತರು, ಅಖಾಡಗಳ ಮುಖ್ಯಸ್ಥರು ಹೇಳಿದ್ದಾರೆ. ಆರೋಗ್ಯ ಸಮಸ್ಯೆ ಇರುವವರು ದೂರು ನಡೆಯಬೇಡಿ. ಯಾವುದೇ ಘಾಟ್‌ನಲ್ಲಿ ಸ್ನಾನ ಮಾಡಿದರು ಅದು ಗಂಗಾ ನದಿಯ ನೀರು. ಮೌನಿ ಅಮವಾಸ್ಯೆ ಗಂಗಾ ಸ್ನಾನ ಪುಣ್ಯ ಪ್ರಾಪ್ತಿ ಮಾಡಲಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ, ಜನಸ್ತೋಮ ಇರುವ ಹಿನ್ನಲೆ ಜನರು ಸಂಯಮದಿಂದ ವರ್ತಿಸಿ ಎಂದು ಮನವಿ ಮಾಡಿದರು.

    ಆಡಳಿತದ ಸೂಚನೆಗಳನ್ನು ಅನುಸರಿಸಿ ಮತ್ತು ಅವರೊಂದಿಗೆ ಸಹಕರಿಸಬೇಕು. ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: GSLV ರಾಕೆಟ್‌ ಹಾರಿಸಿ ಶತಕ ಹೊಡೆದ ಇಸ್ರೋ! – ಏನಿದು ನಾವಿಕ್‌? ಲಾಭ ಏನು?

    ಇಂದು ಮೌನಿ ಅಮಾವಾಸ್ಯೆ (Mauni Amavasya) ಇರುವ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸ್ನಾನ ಮಾಡಲು ತ್ರೀವೇಣಿ ಸಂಗಮಕ್ಕೆ ಆಗಮಿಸಿದ್ದರು. ಈ ವೇಳೆ ಕೆಲವರು ಬ್ಯಾರಿಕೇಡ್‌ ಹಾರಿ ಪವಿತ್ರ ಸ್ನಾನಕ್ಕೆ ಮುನ್ನುಗಿದ್ದರಿಂದ ಪ್ರಯಾಗ್‌ರಾಜ್‌ನಲ್ಲಿ ಕಾಲ್ತುಳಿತ ಸಂಭವಿಸಿತ್ತು.

    ಕಾಲ್ತುಳಿತ ಸುದ್ದಿ ಪ್ರಕಟವಾಗುತ್ತಿದ್ದಂತೆ ಪ್ರಧಾನಿ ಮೋದಿ ಅವರು ಇಂದು ಮೂರು ಬಾರಿ ಕರೆ ಮಾಡಿ ಯೋಗಿ ಅದಿತ್ಯನಾಥ್‌ ಅವರಲ್ಲಿ ಮಾತನಾಡಿದ್ದಾರೆ.

    ಕುಂಭಮೇಳದಲ್ಲಿ ಕಾಲ್ತುಳಿತ ವರದಿಯಾದ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಅಖಾಡಗಳು ಅಮೃತ ಸ್ನಾನವನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದವು. ಈಗ ಪರಿಸ್ಥಿತಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ಪವಿತ್ರ ಸ್ನಾನ ಮತ್ತೆ ಆರಂಭಗೊಂಡಿದೆ.