Tag: ಮಹಾಕಾಳೇಶ್ವರ ದೇವಸ್ಥಾನ

  • ಹಿಂದೂ ದೇವಾಲಯಕ್ಕೆ ಸಾರಾ ಪೂಜೆ : ಟ್ರೋಲಿಗೆ ಕೇರ್ ಮಾಡಲ್ಲ ಎಂದ ನಟಿ

    ಹಿಂದೂ ದೇವಾಲಯಕ್ಕೆ ಸಾರಾ ಪೂಜೆ : ಟ್ರೋಲಿಗೆ ಕೇರ್ ಮಾಡಲ್ಲ ಎಂದ ನಟಿ

    ಮುಸ್ಲಿಂ ಅನ್ನುವ ಕಾರಣಕ್ಕಾಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಪುತ್ರಿ ಸಾರಾ ಅಲಿ ಖಾನ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದು ಸಖತ್ ಟ್ರೋಲ್ (Troll) ಆಗಿತ್ತು. ಮುಸ್ಲಿಂ ನಟಿಯು ಹಿಂದೂ ದೇವಾಲಯಕ್ಕೆ ಹೋಗುವುದು, ಪೂಜೆ ಸಲ್ಲಿಸುವುದು, ಹಿಂದೂ ಸಂಪ್ರದಾಯ ಆಚರಿಸುವುದು ಎಲ್ಲವೂ ಗಿಮಿಕ್ ಎಂದು ಕೆಲವರು ಕಾಮೆಂಟ್ ಕೂಡ ಮಾಡಿದ್ದರು. ಇದಕ್ಕೆ ನಟಿ ಸಾರಾ ಅಲಿ ಖಾನ್ ಉತ್ತರ ನೀಡಿದ್ದಾರೆ.

    ಯಾರು, ಏನೇ ಹೇಳಿದರೂ ದೇವರ ಮೇಲಿನ ನನ್ನ ನಂಬಿಕೆ ಕಡಿಮೆ ಆಗದು. ಇಂತಹ ಅನೇಕ ಟ್ರೋಲ್ ಗಳನ್ನು ನಾನು ಕಂಡಿದ್ದೇನೆ. ಅವೆಕ್ಕೆಲ್ಲ ಹೆದರುವುದಿಲ್ಲ. ನಾನು ದೇವಸ್ಥಾನಕ್ಕೆ ಹೋಗುವುದು, ಪೂಜೆ ಸಲ್ಲಿಸುವುದು ಅದು ನನ್ನ ನಂಬಿಕೆ. ಅದನ್ನು ಯಾರಿಂದಲೂ ತಡೆಯುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ ಸಾರಾ ಅಲಿ ಖಾನ್.

    ಸಾರಾ ಅಲಿ ಖಾನ್ (Sara Ali Khan) ನಿನ್ನೆಯಷ್ಟೇ ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವಿಕ್ಕಿ ಕೌಶಲ್, ಸಾರಾ ನಟನೆಯ ‘ಝರಾ ಹಟ್ಕೆ ಝರಾ ಬಚ್ಕೆ’ ರಿಲೀಸ್ ಆದ ಬೆನ್ನಲ್ಲೇ ನಟಿ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ಫೋಟೋಗಳು ಸಖತ್ ವೈರಲ್ ಆಗಿದ್ದವು. ಇದನ್ನೂ ಓದಿ:ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್

    ಸೈಫ್ ಪುತ್ರಿ ಸಾರಾ ಅವರು ಆಗಾಗ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಸುದ್ದಿ ಆಗುತ್ತಾರೆ. ಕೆಲವೇ ದಿನಗಳ ಹಿಂದೆ ಅವರು ಕೇದಾರನಾಥಕ್ಕೆ ಹೋಗಿದ್ದರು. ಈಗ ಅವರು ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ (Mahakaleshwara Temple) ಭೇಟಿ ಕೊಟ್ಟಿದ್ದಾರೆ. ಗುಲಾಬಿ ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿ ಕಾಣಿಸಿಕೊಂಡ ಅವರು ಅಲ್ಲಿನ ಪುರೋಹಿತರ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಸಾರಾ, ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿರುವುದಕ್ಕೆ ಕೆಲವರು ತಕರಾರು ತೆಗೆದಿದ್ದಾರೆ. ಇದೆಲ್ಲ ಪ್ರಚಾರದ ಗಿಮಿಕ್ ಎಂದು ವ್ಯಂಗ್ಯವಾಡಿದ್ದಾರೆ. ಸಾರಾ ಅಲಿ ಖಾನ್ ಹಿಂದೂ ಧರ್ಮಕ್ಕೆ ಬಂದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

    ಸಾರಾ, ವಿಕ್ಕಿ ಕೌಶಲ್ ನಟನೆಯ ‘ಝರಾ ಹಟ್ಕೆ ಝರಾ ಬಚ್ಕೆ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರ ಜೊತೆಯಾಗಿ ಸಾರಾ ನಟಿಸಿದ್ದಾರೆ. ಜೂನ್ 2ರಂದು ಈ ಚಿತ್ರ ಬಿಡುಗಡೆ ಆಗಲಿದೆ.

     

    ಇತ್ತೀಚೆಗೆ ಸಾರಾ ಅಲಿ ಖಾನ್ ಅವರು ಕಾನ್ ಚಿತ್ರೋತ್ಸವಕ್ಕೆ (Cannes Festival) ಹಾಜರಿ ಹಾಕಿದ್ದರು. ಅಲ್ಲಿ ಅವರು ಟಸ್ಸೆಲ್ ಗೌನ್ ತೊಟ್ಟು ಮಿರಿ-ಮಿರಿ ಮಿಂಚಿದ್ದರು. ಟಸ್ಸೆಲ್ ಗೌನ್ ಪುರಾತನ ಈಜಿಪ್ಟ್ ಕಾಲದ ಉಡುಗೆಯಾಗಿದೆ. ನಟಿ ಸಾರಾ ಅವರು ಕಾನ್ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಭಾಗಿಯಾಗಿದ್ದು, ಅಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದರು.

  • ರಣ್ಬೀರ್ ಬೀಫ್ ತಿಂದ ಹೇಳಿಕೆ: ಮಹಾಕಾಳೇಶ್ವರ ದೇವಸ್ಥಾನ ಪ್ರವೇಶಿಸದಂತೆ ತಡೆದ ಭಜರಂಗದಳ ಕಾರ್ಯಕರ್ತರು

    ರಣ್ಬೀರ್ ಬೀಫ್ ತಿಂದ ಹೇಳಿಕೆ: ಮಹಾಕಾಳೇಶ್ವರ ದೇವಸ್ಥಾನ ಪ್ರವೇಶಿಸದಂತೆ ತಡೆದ ಭಜರಂಗದಳ ಕಾರ್ಯಕರ್ತರು

    ಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿಯ ಬ್ರಹ್ಮಾಸ್ತ್ರ ಸಿನಿಮಾ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಹಾಗಾಗಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಊರೂರು ತಿರುಗುತ್ತಿದ್ದಾರೆ. ಪ್ರಚಾರದಲ್ಲಿ ತೊಡಗಿದ್ದಾರೆ. ಸದ್ಯ ಮಧ್ಯ ಪ್ರದೇಶದಲ್ಲಿರುವ  ಈ ಜೋಡಿ ಅಲ್ಲಿನ ಸುಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲು ಬಂದ ಸಂದರ್ಭದಲ್ಲಿ ದೇವಸ್ಥಾನ ಪ್ರವೇಶಿಸದಂತೆ ಅಲ್ಲಿನ ಭಜರಂಗ ದಳದ ಕಾರ್ಯಕರ್ತರು ತಡೆದಿದ್ದಾರೆ.

    ranbir alia

    ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಸಾಂಪ್ರದಾಯಿಕ ಬಟ್ಟೆಯಲ್ಲೇ ದೇವಸ್ಥಾನಕ್ಕೆ ಬಂದಿದ್ದಾರೆ. ದೇವಸ್ಥಾನದ ಶಿಷ್ಟಾಚಾರಗಳನ್ನೂ ಪಾಲಿಸಿದ್ದಾರೆ. ತಮಗೆ ಮತ್ತು ಸಿನಿಮಾಗೆ ಒಳ್ಳೆದಾಗಲಿ ಎಂದು ಪ್ರಾರ್ಥಿಸಲು ಬಂದ ಜೋಡಿಯನ್ನು ಭಜರಂಗ ದಳದ ಕಾರ್ಯಕರ್ತರು ತಡೆದಿರುವುದಕ್ಕೆ ಕಾರಣ, ರಣ್ಬೀರ್ ಕಪೂರ್ ಈ ಹಿಂದೆ ಹೇಳಿದ್ದ ಹೇಳಿಕೆ. ಹಲವು ವರ್ಷಗಳ ಹಿಂದೆ ಹೇಳಿದ್ದ ಆ ಹೇಳಿಕೆ ಇವತ್ತು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದನ್ನೂ ಓದಿ:ನಟ ಧನಂಜಯ್ ಮತ್ತು ಅದಿತಿ ಪ್ರಭುದೇವ್ ರಿಯಲ್ ಆಗಿ ಮದುವೆ ಆಗ್ಬೇಕಿತ್ತು: ಆದರೆ ತಪ್ಪಿಸಿದವರು ಯಾರು?

    ರಣ್ಬೀರ್ ಕಪೂರ್ ಈ ಹಿಂದೆ ಸಂದರ್ಶನವೊಂದರಲ್ಲಿ ನಾನ್ ವೆಜ್ ಕುರಿತು ಮಾತನಾಡುತ್ತಾ, ತಮ್ಮದು ಮಾಂಸದೂಟ ಮಾಡುವ ಕುಟುಂಬ. ಅದರಲ್ಲೂ ನಾನಾ ರೀತಿಯ ಮಾಂಸದಡಿಗೆ ತಮ್ಮ ಮನೆಯಲ್ಲಿ ತಯಾರಾಗುತ್ತದೆ. ನನಗೆ ಬೀಫ್ ಅಂದರೆ ತುಂಬಾ ಇಷ್ಟ ಎಂದು ಹೇಳಿದ್ದರು. ಈ ಮಾತಿಗೆ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂಗಳು ದೇವರು ಎಂದು ಪೂಜಿಸುವ ಗೋವಿನ ಮಾಂಸವನ್ನು ತಿನ್ನುವ ರಣ್ಬೀರ್ ನಮ್ಮ ದೇವಸ್ಥಾನಗಳಿಗೆ ಬರುವುದು ಬೇಡವೆಂದು ಭಜರಂಗ ದಳದ ಕಾರ್ಯಕರ್ತರು ತಡೆದಿದ್ದಾರೆ.

    ಸಡನ್ನಾಗಿ ನಡೆದ ಬೆಳವಣಿಗೆಯಿಂದ ಗಲಿಬಿಲಿಗೊಂಡ ರಣ್ಬೀರ್ ಮತ್ತು ಆಲಿಯಾ ಭಟ್, ಅದೆಷ್ಟೇ ಸಮಾಧಾನ ಹೇಳಿದರೂ ಕೇಳದ ಕಾರಣದಿಂದಾಗಿ ದೇವಸ್ಥಾನದಿಂದ ಅವರು ಹೊರಗುಳಿದಿದ್ದಾರೆ. ಕೇವಲ ನಿರ್ದೇಶಕ ಅಯಾನ್ ಮುಖರ್ಜಿ ಒಬ್ಬರೇ ದೇವಸ್ಥಾನದ  ಒಳಗೆ ಪ್ರವೇಶಿಸಿ ದೇವರ ದರ್ಶನ ಪಡೆದಿದ್ದಾರೆ. ಮತ್ತು ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಶೇರ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]