Tag: ಮಹಾಂತೇಶ್‌ ಪಾಟೀಲ್‌

  • ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ – ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರೆಸ್ಟ್‌

    ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ – ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರೆಸ್ಟ್‌

    ಕಲಬುರಗಿ: ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌(ಪಿಎಸ್‌ಐ) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕನೊಬ್ಬನನ್ನು ಸಿಐಡಿ ಬಂಧಿಸಿದೆ.

    ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಬಂಧಿತ ಆರೋಪಿ. ಈ ಮೂಲಕ ಈ ಅಕ್ರಮ ಪ್ರಕರಣ ಕಾಂಗ್ರೆಸ್‌ ಬುಡಕ್ಕೂ ಬಂದಿದೆ. ಬ್ಲೂಟೂತ್ ಡಿವೈಸ್ ಬಳಕೆ ಮಾಡಿ ಪರೀಕ್ಷೆ ಬರೆಸುವಲ್ಲಿ ಅಕ್ರಮ ಎಸಗಿದ್ದ ಈತನನ್ನು ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ಬಂಧಿಸಲಾಗಿದೆ.  ಇದನ್ನೂ ಓದಿ: 35 ಲಕ್ಷ ಪಾವತಿ ಮಾಡಿ 5 ಲಕ್ಷ ಸಿಗದೇ ಪೇಚಾಡಿದ – ಆಪ್ತ ಸ್ನೇಹಿತನಿಂದಲೇ ಪಿಎಸ್‌ಐ ಅಕ್ರಮ ಲೀಕ್‌ ಆಗಿದ್ದು ಹೇಗೆ?

    ಮಹಾಂತೇಶ್‌ ಪಾಟೀಲ್ ಕಾಂಗ್ರೆಸ್ ಅವಧಿಯಲ್ಲಿ ಹಲವು ಉನ್ನತ ಸ್ಥಾನ ಪಡೆದಿದ್ದ. ಈ ಹಿಂದೆ ಸಿದ್ದರಾಯ್ಯ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಗಳ ಶಾಶ್ವತ ಆಯೋಗದ ಸದಸ್ಯನಾಗಿದ್ದ.

    ಶನಿವಾರ ಮಹಾಂತೇಶ್‌ ಪಾಟೀಲ್ ಹಾಗೂ ಆತನ ಸಹೋದರ ಆರ್.ಡಿ.ಪಾಟೀಲ್ 101 ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದನ್ನೂ ಓದಿ: PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್

    ಮಹಾಂತೇಶ್‌ ಪಾಟೀಲ್ ಬಂಧನ ಮಾಡುವ ವೇಳೆ ಹೈಡ್ರಾಮಾ ಮಾಡಿದ್ದಾನೆ. ನಮ್ಮ ಹಿಂದೆ ಕಾಂಗ್ರೆಸ್‌ ನಾಯಕರಿದ್ದಾರೆ. ಅರೆಸ್ಟ್‌ ಮಾಡುವ ಮುನ್ನ ಎಚ್ಚರ ಎಂದು ಸಿಐಡಿ ಪೊಲೀಸರಿಗೆ ಅವಾಜ್‌ ಹಾಕಿದ್ದಾನೆ.

    ಇದರಿಂದ ಆಕ್ರೋಶಗೊಂಡ ಡಿವೈಎಸ್‌ಪಿ ಶಂಕರಗೌಡ, ಆರೋಪಿ ಮಹಾಂತೇಶ್‌ ಪಾಟೀಲ್ ಕೊರಳ ಪಟ್ಟಿ ಹಿಡಿದು ಎಳೆದುಕೊಂಡು ಹೋಗಿದ್ದಾರೆ. ಕಲಬುರಗಿ ನಗರದ ಐವಾನ್ ಏ ಶಾಹಿ ಅತಿಥಿ ಗೃಹದಲ್ಲಿರುವ ಸಿಐಡಿ ಕಚೇರಿಗೆ ಮಹಾಂತೇಶ್‌ ಪಾಟೀಲ್‌ನನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.