Tag: ಮಹರಾಷ್ಟ್ರ

  • ಗಡಿ ಭಾಗದ ಕನ್ನಡ ಶಾಲೆಗಳಿಗೆ `ಪಬ್ಲಿಕ್ ಟಿವಿ ಬೆಳಕು’

    ಗಡಿ ಭಾಗದ ಕನ್ನಡ ಶಾಲೆಗಳಿಗೆ `ಪಬ್ಲಿಕ್ ಟಿವಿ ಬೆಳಕು’

    – ಗಡಿ ಭಾಗದ ಕನ್ನಡ ಶಾಲೆಗಳಿಗೆ ರಾಜ್ಯ ಸರ್ಕಾರದಿಂದ ನಲಿ-ಕಲಿ ಪರಿಕರ ವಿತರಣೆ

    ವಿಜಯಪುರ: ರಾಜ್ಯದ ಮಹರಾಷ್ಟ್ರ ಗಡಿಭಾಗದಲ್ಲಿರುವ ಕನ್ನಡ ಶಾಲೆಗೆ (Kannada School) ಮಹರಾಷ್ಟ್ರ (Maharashtra) ಸರ್ಕಾರ ಮರಾಠಿ (Marathi) ಭಾಷೆಯ ನಲಿಕಲಿ ಪರಿಕರಗಳನ್ನು ಒದಗಿಸಿತ್ತು. ಇದರಿಂದಾಗಿ ಕನ್ನಡದ ಕಂದಮ್ಮಗಳು ಪರದಾಡುತ್ತಿದ್ದವು. ಈ ಸಮಸ್ಯೆಯನ್ನು `ಪಬ್ಲಿಕ್ ಟಿವಿ ಬೆಳಕು’ (PUBLiC TV Belaku Program) ಕಾರ್ಯಕ್ರಮ ಸೆ.8 ರಂದು ಬಿತ್ತರಿಸಿತ್ತು.

    ಇದರ ಪರಿಣಾಮ ಇದೇ ಸೆ.30 ರಂದು ಸಿಎಂ ಸಿದ್ದರಾಮಯ್ಯ (CM Siddaramaiah) ಗಡಿ ಭಾಗದ ಕನ್ನಡ ಶಾಲೆಗಳಿಗೆ ಕನ್ನಡ ನಲಿಕಲಿ ಪರಿಕರಗಳನ್ನು ಘೋಷಣೆ ಮಾಡಲಿದ್ದಾರೆ. ನಲಿಕಲಿ ಪರಿಕರ ಒದಗಿಸಿಕೊಡುವ ಮೂಲಕ ಕನ್ನಡ ಕಂದಮ್ಮಗಳಿಗೆ ಪಬ್ಲಿಕ್ ಟಿವಿ ಬೆಳಕನ್ನು ನೀಡಿದೆ.ಇದನ್ನೂ ಓದಿ: ಪಾಕ್‌ನಲ್ಲಿ ಶಿಯಾ, ಸುನ್ನಿ ಮುಸ್ಲಿಮರ ಮಧ್ಯೆ ಘರ್ಷಣೆ – 46 ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

    ರಾಜ್ಯಾದ್ಯಂತ ನೆರೆಯ ರಾಜ್ಯಗಳ ಗಡಿ ಭಾಗದಲ್ಲಿ ಕನ್ನಡ ಶಾಲೆಗಳು ಕೆಲಸ ನಿರ್ವಹಿಸುತ್ತಿವೆ. ಅದೇ ರೀತಿ ವಿಜಯಪುರ ಜಿಲ್ಲೆಯ ಗಡಿ ರಾಜ್ಯವಾದ ಮಹರಾಷ್ಟ್ರದ ಗಡಿ ಭಾಗದಲ್ಲಿ ಕನ್ನಡ ಶಾಲೆಗಳು ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಪಸರಿಸುತ್ತಿವೆ. ಆದರೆ ಮಹಾರಾಷ್ಟ್ರ ಸರ್ಕಾರ ಈ ಶಾಲೆಗಳಿಗೆ ಮರಾಠಿ ಭಾಷೆಯ ನಲಿಕಲಿ ಪರಿಕರಗಳನ್ನು ಒದಗಿಸಿದೆ. ಇದರಿಂದ ಕನ್ನಡದ ಕಂದಮ್ಮಗಳು ಪರದಾಡುತ್ತಿದ್ದವು. ಈ ಸಮಸ್ಯೆಯನ್ನು ಇಟ್ಟುಕೊಂಡು ಗಡಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು.

    ಅನೇಕ ಕನ್ನಡ ಶಾಲೆಗಳು ಅತೀ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿಗಳು ಕೂಡ ಬಹಳ ಉತ್ಸುಕತೆಯಿಂದ ಶಾಲೆಗೆ ಹೋಗುತ್ತಿದ್ದಾರೆ. ಜೊತೆಗೆ ಮಹಾರಾಷ್ಟ್ರ ಸರ್ಕಾರ ಕೂಡ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಿತ್ತು. ಆದರೆ ನಲಿ-ಕಲಿ ಪರಿಕರಗಳನ್ನು ಮರಾಠಿ ಭಾಷೆಯಲ್ಲಿ ಮುದ್ರಿಸಿ ಕನ್ನಡ ಶಾಲೆಗೆ ವಿತರಿಸಿತ್ತು. ಇದರಿಂದ ಪ್ರತಿ ನಿತ್ಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವಂತಾಗಿತ್ತು. ಈ ಸಮಸ್ಯೆಯನ್ನು ಇಟ್ಟುಕೊಂಡು ಮಹರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬಾಲಗಾಂವ ಗ್ರಾಮದ ಜಿಲ್ಲಾ ಪರಿಷದ್ ಪ್ರಾಥಮಿಕ ಕನ್ನಡ ಶಾಲೆಯವರು ಬೆಳಕು ಕಾರ್ಯಕ್ರಮಕ್ಕೆ ಸೆ.8 ರಂದು ಬಂದಿದ್ದರು.

    ಈ ಸಮಸ್ಯೆಯನ್ನು ಪಬ್ಲಿಕ್ ಟಿವಿ ವಾಹಿನಿಯೂ ಯಳಯಳೆಯಾಗಿ ವಿವರಿಸಿತ್ತು. ಬಾಲಗಾಂವ ಶಾಲೆಗೆ ಪಬ್ಲಿಕ್ ಟಿವಿಯಿಂದಲೇ ನಲಿಕಲಿ ಪರಿಕರಗಳನ್ನು ಒದಗಿಸುವುದಾಗಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್. ಆರ್ ರಂಗನಾಥ್ (H R Ranganath) ಸರ್ ಭರವಸೆ ನೀಡಿದ್ದರು. ಜೊತೆಗೆ ಈ ಸಮಸ್ಯೆ ಬಗ್ಗೆ ಸಿಎಂ ಸೇರಿದಂತೆ ಸಂಬಂಧಿಸಿದವರ ಕಡೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು.

    ಹೆಚ್.ಆರ್ ರಂಗನಾಥ್ ಅವರು ನಡೆಸಿಕೊಟ್ಟ ನಲಿಕಲಿಯ ಬೆಳಕು ಕಾರ್ಯಕ್ರಮವನ್ನು ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ (Sommanna Bevinamarad) ವೀಕ್ಷಿಸಿದ್ದಾರೆ. ನಂತರ ಈ ಸಮಸ್ಯೆ ಬಗ್ಗೆ ಸಿಎಂ ಜೊತೆ ಕೂಡ ಚರ್ಚಿಸಿದ್ದಾರೆ. ಇದರ ಫಲವಾಗಿ ಇದೇ ತಿಂಗಳ 30 ರಂದು ಮಹಾರಾಷ್ಟ್ರದ ಸಾಂಗ್ಲಿ (Sangli) ಜಿಲ್ಲೆಯ ಜತ್ತ (Jath) ತಾಲೂಕಿನ ಗುಡ್ಡಾಪುರದಲ್ಲಿ (Guddapura) ಕರ್ನಾಟಕ ಸಂಭ್ರಮ – 50 ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಖುದ್ದು ಸಿಎಂ ಸಿದ್ಧರಾಮಯ್ಯ ಭಾಗಿಯಾಗಲಿದ್ದಾರೆ.

    ಈ ಮೂಲಕ ಎಲ್ಲ ಗಡಿ ರಾಜ್ಯಗಳ ಕನ್ನಡ ಶಾಲೆಗೆ ನಲಿಕಲಿ ಪರಿಕರಗಳನ್ನು ಒದಗಿಸುವುದಾಗಿ ಘೋಷಣೆ ಮಾಡಲಿದ್ದಾರೆ. ಅಲ್ಲದೆ ಎರಡು ದಿನದಲ್ಲಿ ರಾಜ್ಯದ ಎಲ್ಲಾ ಗಡಿ ಭಾಗದ ಕನ್ನಡ ಶಾಲೆಗೆ ನಲಿಕಲಿ ಪರಿಕರಗಳನ್ನ ಒದಗಿಸುವುದಾಗಿ ಬೇವಿನಮರದ ಸ್ಪಷ್ಟಪಡಿಸಿದ್ದಾರೆ. ಇಂತಹ ಸಮಸ್ಯೆಯನ್ನು ಬಿತ್ತರಿಸಿದಕ್ಕೆ ಪಬ್ಲಿಕ್ ಟಿವಿಗೆ ಹಾಗೂ ರಂಗನಾಥ್ ಸರ್‌ಗೆ ಅಭಿನಂದನೆ ಸಲ್ಲಿದ್ದಾರೆ. ಇನ್ನೂ ಈ ಸುದ್ದಿಯನ್ನು ತಿಳಿದು ಗಡಿ ಭಾಗದ ಕನ್ನಡ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಐಎಎಸ್ ಅಧಿಕಾರಿ ಪತ್ನಿ ರೇಪ್ ಕೇಸ್; ತನಿಖೆಯಲ್ಲಿ ಲೋಪವೆಸಗಿದ ಪೊಲೀಸರ ವಿರುದ್ಧ ಕ್ರಮಕ್ಕೆ ಕೋಲ್ಕತ್ತಾ ಹೈಕೋರ್ಟ್ ಸೂಚನೆ

  • 40ನೇ ಫ್ಲೋರ್‌ನಿಂದ ನೆಲಕ್ಕೆ ಕುಸಿದ ಲಿಫ್ಟ್ – 7 ಜನರ ದುರ್ಮರಣ

    40ನೇ ಫ್ಲೋರ್‌ನಿಂದ ನೆಲಕ್ಕೆ ಕುಸಿದ ಲಿಫ್ಟ್ – 7 ಜನರ ದುರ್ಮರಣ

    ಮುಂಬೈ: 40ನೇ ಮಹಡಿಯಿಂದ ಒಮ್ಮೆಲೆ ನೆಲ ಮಾಳಿಗೆಗೆ ಲಿಫ್ಟ್ (Lift) ಕುಸಿದ ಪರಿಣಾಮ 7 ಜನ ಮೃತಪಟ್ಟ ಘಟನೆ ಮಹಾರಾಷ್ಟ್ರದ (Maharashtra) ಥಾಣೆಯಲ್ಲಿ (Thane) ನಡೆದಿದೆ.

    ಮೃತರನ್ನು ಮಹೇಂದ್ರ ಚೌಪಾಲ್ (32), ರೂಪೇಶ್ ಕುಮಾರ್ ದಾಸ್ (21), ಹರೂನ್ ಶೇಖ್ (47), ಮಿಥ್ಲೇಶ್ (35), ಕರಿದಾಸ್ (38) ಮತ್ತು ಸುನೀಲ್ ಕುಮಾರ್ ದಾಸ್ (21) ಎಂದು ಗುರುತಿಸಲಾಗಿದೆ. ಮತ್ತೋರ್ವನ ಗುರುತು ಪತ್ತೆಯಾಗಿಲ್ಲ. ಇವರೆಲ್ಲ ಕಟ್ಟಡ ಕಾರ್ಮಿಕರಾಗಿದ್ದು ಲಿಫ್ಟ್‌ನಲ್ಲಿ ಇಳಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಲಿಫ್ಟ್‌ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿರಿಯೂರು ಬಳಿ ಬಸ್, ಲಾರಿ ಮಧ್ಯೆ ಭೀಕರ ಅಪಘಾತ – ಐವರ ದುರ್ಮರಣ

    ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ಲಿಫ್ಟ್ ಅಪಘಾತ ಬಹು ದೊಡ್ಡ ದುರಂತವಾಗಿದೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

    ಪ್ರಾಥಮಿಕ ತನಿಖೆಯ ಪ್ರಕಾರ ಲಿಫ್ಟ್‌ನ ಕೇಬಲ್ ತುಂಡಾಗಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಕುರಿಬಲಿ ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕರಿಬ್ಬರ ಮೇಲೆ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂಬೈ-ಪುಣೆ ಹೆದ್ದಾರಿಯಲ್ಲಿ ಪ್ರಪಾತಕ್ಕೆ ಉರುಳಿದ ಬಸ್; 12 ಸಾವು

    ಮುಂಬೈ-ಪುಣೆ ಹೆದ್ದಾರಿಯಲ್ಲಿ ಪ್ರಪಾತಕ್ಕೆ ಉರುಳಿದ ಬಸ್; 12 ಸಾವು

    ಮುಂಬೈ: ಸಂಗೀತ ತಂಡವೊಂದರ ಸದಸ್ಯರನ್ನು ಕರೆದೊಯ್ಯುತ್ತಿದ್ದ ಬಸ್ ಪ್ರಪಾತಕ್ಕೆ (Gorge) ಉರುಳಿದ ಪರಿಣಾಮ 12 ಜನರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ (Maharashtra) ರಾಯಗಢ ಜಿಲ್ಲೆಯ ಮುಂಬೈ-ಪುಣೆ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.

    ಪುಣೆಯಿಂದ (Pune) ಮುಂಬೈಗೆ (Mumbai) ಹೋಗುತ್ತಿದ್ದಾಗ ಹೆದ್ದಾರಿಯ ಶಿಂಗ್ರೋಬಾ (Shingroba temple) ದೇವಸ್ಥಾನದ ಬಳಿ ಮುಂಜಾನೆ 4.50ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 27 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧೆ – ಇಂದು ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

    ಬಾಜಿ ಪ್ರಭು ವಾಡಕ್ ಗ್ರೂಪ್‍ನ ಸದಸ್ಯರು ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‍ವಾಡ್‍ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮುಂಬೈನ ಗೋರೆಗಾಂವ್‍ಗೆ (Goregaon) ಹಿಂತಿರುಗುತ್ತಿದ್ದರು. ಶನಿವಾರ ನಡುರಾತ್ರಿ 1 ಗಂಟೆ ಸುಮಾರಿಗೆ ಬಸ್ ಸ್ಥಳದಿಂದ ನಿರ್ಗಮಿಸಿತ್ತು. ಪ್ರಯಾಣಿಕರು ಮುಂಬೈನ ಸಿಯಾನ್ ಮತ್ತು ಗೋರೆಗಾಂವ್‍ನ ನೆರೆಯ ಪಾಲ್ಘರ್ ಜಿಲ್ಲೆಯ ವಿರಾರ್‌ಗೆ ಸೇರಿದವರು ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ತಿಳಿಸಿದ್ದಾರೆ.

    ಸ್ಥಳೀಯ ಪೊಲೀಸರ ತಂಡ ಮತ್ತು ಚಾರಣಿಗರ ತಂಡ ಸದ್ಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಗಾಯಾಳುಗಳನ್ನು ಖೋಪೋಲಿ (Khopoli) ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ ಕಾರು ಅಪಘಾತ – ಮಾಜಿ ಸಚಿವ ಆಸ್ಪತ್ರೆಗೆ ದಾಖಲು

  • ಮಹಾರಾಷ್ಟ್ರದಲ್ಲಿ ಶಾಸಕರುಗಳೇ ಹತಾಶರಾಗಿ ಸರ್ಕಾರ ತೊಲಗಿ ಎಂದು ಬಯಸಿದ್ದಾರೆ: ಸಿ.ಟಿ ರವಿ

    ಮಹಾರಾಷ್ಟ್ರದಲ್ಲಿ ಶಾಸಕರುಗಳೇ ಹತಾಶರಾಗಿ ಸರ್ಕಾರ ತೊಲಗಿ ಎಂದು ಬಯಸಿದ್ದಾರೆ: ಸಿ.ಟಿ ರವಿ

    ಚಿಕ್ಕಮಗಳೂರು: ಜನ ಮಾತ್ರವಲ್ಲ, ಮಹಾರಾಷ್ಟ್ರ ಸರ್ಕಾರದ ಬಗ್ಗೆ 3 ಪಕ್ಷದ ಶಾಸಕರು ಭ್ರಮನಿರಸರಾಗಿದ್ದಾರೆ. ಹೀಗಾಗಿ ಶಾಸಕರುಗಳೇ ಹತಾಶರಾಗಿ ಸರ್ಕಾರ ತೊಲಗಿ ಎಂದು ಬಯಸಿದ್ದಾರೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಯಾವ ತಾಳಮೇಳವೂ ಇಲ್ಲದ ಅಪವಿತ್ರ ಮೈತ್ರಿ ಸರ್ಕಾರ. ಸೈದ್ಧಾಂತಿಕವಾಗಿಯೂ ಮಿಸ್ ಮ್ಯಾಚ್ ಡಿಎನ್‍ಎ ಸರ್ಕಾರ. ಬಿಜೆಪಿ ಗೆಲುವಿಗೆ ಸಹಕರಿಸಿದ ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಕ್ಯಾಂಪಿಂಗ್ ಮಾಡುತ್ತಿರುವಾಗ ನನ್ನ ಪತಿ ಕಾಣೆಯಾಗಿದ್ದಾರೆ – ದೂರು ಕೊಟ್ಟ ಶಿವಸೇನಾ MLA ಪತ್ನಿ

    ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಬರಬೇಕೆಂದು ಚುನಾವಣೆ ಸಂದರ್ಭದಲ್ಲೇ ಅಪೇಕ್ಷೆ ಇತ್ತು. 2019ರಲ್ಲಿ ಜನ ಮತ ಹಾಕಿದ್ದು ಮೋದಿ, ಫಡ್ನವಿಸ್ ನೇತೃತ್ವದ ಸರ್ಕಾರಕ್ಕೆ. ಮಹಾರಾಷ್ಟ್ರ ಸರ್ಕಾರ ತತ್ವಹೀನ ಸರ್ಕಾರ. ಸಿದ್ಧಾಂತ, ಅಭಿವೃದ್ಧಿ ಯೋಜನೆಗಳು ಇಲ್ಲವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಈ ಸರ್ಕಾರ ಬೀಳಲಿ ಅಂತ ಜನ, ಶಾಸಕರು ಬಯಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮಹಾರಾಷ್ಟ್ರದ ಪ್ರಭಾರಿಯಾಗಿ ನಮ್ಮ ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿದ್ದೇನೆ. ಜನ ಮತ ನೀಡಿದ್ದೇ ಬಿಜೆಪಿ ಮೈತ್ರಿಕೂಟದ ಸರ್ಕಾರಕ್ಕೆ, ಮೋದಿ, ಫಡ್ನವೀಸ್ ನೇತೃತ್ವಕ್ಕೆ ಎಂದು ಹೇಳಿದರು.

    Live Tv

  • ಅಕ್ರಮ ಹಣ ವರ್ಗಾವಣೆ ಪ್ರಕರಣ – ನವಾಬ್ ಮಲಿಕ್ ವಿರುದ್ಧ 5 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ಅಕ್ರಮ ಹಣ ವರ್ಗಾವಣೆ ಪ್ರಕರಣ – ನವಾಬ್ ಮಲಿಕ್ ವಿರುದ್ಧ 5 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) 5,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಇಡಿ ಅಧಿಕಾರಿಗಳು ನವಾಬ್ ಮಲಿಕ್ ವಿರುದ್ಧ ಸುಮಾರು 5,000 ಪುಟಗಳ ಚಾರ್ಜ್ ಶೀಟ್ ಅನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಪ್ರಕರಣಗಳ ವಿಶೇಷ ನ್ಯಾಯಾಲಯವು ದಾಖಲೆಗಳ ಪರಿಶೀಲನೆಯ ನಂತರ ಈ ಚಾರ್ಜ್‍ಶೀಟ್ ಅನ್ನು ಪರಿಶೀಲನೆಗೆ ತೆಗೆದುಕೊಳ್ಳುತ್ತದೆ ಎಂದು ಇಡಿ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇಡಿಯಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅರೆಸ್ಟ್

    20 ವರ್ಷಗಳ ಹಿಂದೆ ಮುಂಬೈನ ಕುರ್ಲಾದಲ್ಲಿ 2.75 ಎಕರೆ ಜಾಗಕ್ಕಾಗಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪರ್ಕರ್‌ಗೆ ನವಾಬ್ ಮಲಿಕ್ 55 ಲಕ್ಷ ರೂ. ನಗದು ನೀಡಿದ್ದರು ಎಂದು ಇಡಿ ಮಾಹಿತಿ ಕಲೆಹಾಕಿದ್ದು, ಈ ಸಂಬಂಧ ಇಡಿ ಫೆ.23 ರಂದು ಮಲಿಕ್‍ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಇದನ್ನೂ ಓದಿ: ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಪ್ರಾಚೀನ ಕಾಲದ ದೇವಸ್ಥಾನ ಪತ್ತೆ

    ಇಡಿ ಫೆ.23 ರಂದು ಬಂಧಿಸಿದ ಬಳಿಕ ಫೆ.25 ರಂದು ಆನಾರೋಗ್ಯ ಕಾರಣದಿಂದ ನವಾಬ್ ಮಲಿಕ್ ಆಸ್ಪತ್ರೆ ದಾಖಲಾಗಿದ್ದರು. ನಂತರ ಇದೀಗ ನ್ಯಾಯಾಂಗ ಬಂಧನದಲ್ಲಿರುವ ಮಲಿಕ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೂ ಜಾಮೀನು ಅರ್ಜಿ ವಜಾಗೊಂಡಿದೆ.

  • ಮಹಾರಾಷ್ಟ್ರ ಧನ್ನೆಗಾಂವ್ ಜಲಾಶಯದಿಂದ ನೀರು ಬಿಡುಗಡೆ ಮಾಂಜ್ರಾ ನದಿ ದಡದಲ್ಲಿ ಪ್ರವಾಹ ಭೀತಿ

    ಮಹಾರಾಷ್ಟ್ರ ಧನ್ನೆಗಾಂವ್ ಜಲಾಶಯದಿಂದ ನೀರು ಬಿಡುಗಡೆ ಮಾಂಜ್ರಾ ನದಿ ದಡದಲ್ಲಿ ಪ್ರವಾಹ ಭೀತಿ

    ಬೀದರ್: ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಸತತ ಮಳೆ ಹಿನ್ನೆಲೆಯಲ್ಲಿ ಮಾಂಜ್ರಾ ನದಿ ದಡದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ನಾಲ್ಕು ಗೇಟ್ ಮೂಲಕ ಬಾರಿ ಪ್ರಮಾಣದ ನೀರು ಮಾಂಜ್ರಾನದಿಗೆ ನೀರು ಬಿಡಲಾಗುತ್ತಿದೆ.

    ಧನ್ನೆಗಾಂವ್ ಜಲಾಶಯದ ಜೊತೆಗೆ ಕಾರಂಜಾ ಜಲಾಶಯದಿಂದಲ್ಲೂ 5,050 ಕ್ಯೂಸೆಕ್ ನೀರು ಬಿಡುಗಡೆಯಾದ ಪರಿಣಾಮ ಮಾಂಜ್ರಾನದಿ ದಡದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಭಾಲ್ಕಿ ತಾಲೂಕಿನ ಮಾಂಜ್ರಾನದಿ ದಡದಲ್ಲಿ ಸಾಯಿಗಾಂವ್, ಜೀರಗ್ಯಾಳ, ಕಾಸರ್ತೂಗಾಂವ್, ಲಖನ್ ಗಾಂವ್, ಸಂಗಮ್ ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಆತಂಕ ಮನೆಮಾಡಿದ್ದು, ಎರಡು ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆಯಾದ ಪರಿಣಾಮ ಸಾಯಿಗಾಂವ್ ಗ್ರಾಮದ ಸೇತುವೆ ಮೇಲಿಂದ ನೀರು ಹರಿಯುತ್ತಿದ್ದು ಮಾಂಜ್ರಾನದಿ ದಡದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಸೋಯಾ, ಉದ್ದು, ಹೆಸರು, ತೊಗರಿ ಬೆಳೆಗಳು ಹಾನಿಯಾಗಿದೆ. ಇದನ್ನೂ ಓದಿ: ನಾಳೆಯ ಭಾರತ್ ಬಂದ್‍ಗೆ ಸ್ತಬ್ದವಾಗುತ್ತಾ ಕರುನಾಡು? – ಎಂದಿನಂತೆ ಇರಲಿದೆ KSRTC ಸೇವೆ

    ಜಲಾಶಯದಿಂದ ಹೆಚ್ಚಿನ ಪ್ರಮಾಣದಿಂದ ಮಾಂಜ್ರಾನದಿಗೆ ನೀರು ಹರಿದು ಬರುತ್ತಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೂಡಾ ಸತತವಾಗಿ ಮಳೆಯಾಗುತ್ತಿದೆ. ಹೀಗಾಗಿ ನಾವು ಬೆಳೆದ ವಿವಿಧ ಬೆಳೆಗಳು ಹಾನಿಯಾಗಿದೆ. ನಮ್ಮ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಅಧಿಕಾರಿಗಳು, ಜನಪ್ರತಿನಿಧಿಗಳು ಯಾರು ಸ್ಥಳಕ್ಕೆ ಭೇಟಿ ನೀಡುವ ಕಲಸ ಮಾಡುತ್ತಿಲ್ಲ, ಆದಷ್ಟು ಬೇಗ ಭೇಟಿ ನೀಡಿ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತ್ ಬಂದ್ ದಿನ ಕರ್ನಾಟಕ ಬಂದ್‍ಗೆ ಕರೆ ಕೊಟ್ಟ ರೈತರು- ಯಾರ ಬೆಂಬಲವಿದೆ, ಯಾರದ್ದು ಇಲ್ಲ..?

  • ಮಹಾರಾಷ್ಟ್ರದ ಶಾಲಾ ಶುಲ್ಕದಲ್ಲಿ ಶೇ.15ರಷ್ಟು ಕಡಿತ

    ಮಹಾರಾಷ್ಟ್ರದ ಶಾಲಾ ಶುಲ್ಕದಲ್ಲಿ ಶೇ.15ರಷ್ಟು ಕಡಿತ

    ಮುಂಬೈ: ಕೊರೊನಾದಿಂದಾಗಿ ಮುಚ್ಚಿದ್ದ ಶಾಲಾ ಕಾಲೇಜುಗಳು ಮತ್ತೆ ಪುನರಾರಂಭವಾಗುತ್ತಿದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಶಾಲಾ, ಕಾಲೇಜುಗಳಲ್ಲಿ ಕಲಿಯುತ್ತಿರುವ ಮಕ್ಕಳ ಶುಲ್ಕದಲ್ಲಿ ಶೇ.15 ಕಡಿತಗೊಳಿಸುವಂತೆ ಆದೇಶ ಹೊರಡಿಸಿದೆ.

    ಈಗಾಗಲೇ ಶಾಲಾ, ಕಾಲೇಜುಗಳು ವಿದ್ಯಾರ್ಥಿಗಳಿಂದ ಶುಲ್ಕವನ್ನು ಪಾವತಿ ಮಾಡಿಸಿಕೊಂಡಿದ್ದರೆ, ಅದರಲ್ಲಿ ಶೇ.15 ಶುಲ್ಕವನ್ನು ಮರುಪಾವತಿ ಮಾಡುವಂತೆ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದನ್ನೂ ಓದಿ: ಗುಜರಾತ ರಾಜಕಾರಣದಲ್ಲಿ ಸೆಕ್ಸ್ ಸಿಡಿ ಸದ್ದು – ಬಿಜೆಪಿ ಸಂಸದನ ಪುತ್ರರಿಂದ ದೂರು ದಾಖಲು

    ಶಾಲೆಗಳಲ್ಲಿ ಕಟ್ಟಿಸಿಕೊಂಡಿರುವ ಶುಲ್ಕವನ್ನು ಶೇ.15 ಕಡಿತಗೊಳಿಸಿದ್ದು, ಖಾಸಗಿ ಶಾಲೆಗಳು ಮತ್ತು ಸರ್ಕಾರದ ಅನುದಾನ ರಹಿತ ಶಾಲೆಗಳು ಕೂಡ ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿ ತಿಳಿಸಿದ್ದು, ಈ ಆದೇಶದಿಂದಾಗಿ ಹಲವಾರು ಮಕ್ಕಳ ಪೋಷಕರಿಗೆ ವರದಾನವಾಗಿದೆ. ಕೊರೊನಾ ಕಷ್ಟಕಾಲದಲ್ಲಿ ಶಾಲಾ ಶುಲ್ಕ ಕಟ್ಟಲು ಪರದಾಡುತ್ತಿದ್ದ ಮಕ್ಕಳ ಪೋಷಕರು ಈ ಆದೇಶವನ್ನು ಸ್ವಾಗತಿಸಿದ್ದಾರೆ.

  • ಮಹಾರಾಷ್ಟ್ರದ ಸಿಎಂನ ಹುಚ್ಚುತನದ ಮಾತನ್ನು ಕಡೆಗಣಿಸಿ: ಟಿ.ಎಸ್ ನಾಗಾಭರಣ

    ಮಹಾರಾಷ್ಟ್ರದ ಸಿಎಂನ ಹುಚ್ಚುತನದ ಮಾತನ್ನು ಕಡೆಗಣಿಸಿ: ಟಿ.ಎಸ್ ನಾಗಾಭರಣ

    ಮಡಿಕೇರಿ: ಬೆಳಗಾವಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಮರಾಠಿಗರೇ ಇರುವುದರಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎಂಬ ಮಹಾರಾಷ್ಟ್ರ ಸಿಎಂ ಉದ್ಭವ್ ಠಾಕ್ರೆ ಹುಚ್ಚುತನದ ಮಾತನ್ನು ನೆಗ್ಲೇಟ್ ಮಾಡೋದು ಒಳ್ಳೇಯದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ತಿರುಗೇಟು ನೀಡಿದ್ದಾರೆ.

    ಮಡಿಕೇರಿಯಲ್ಲಿ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಸಿಎಂ ಮಾತು ಸಾಂದರ್ಭಿಕವಾಗಿಯೂ ಇರಲ್ಲ, ತಾತ್ವಿಕವಾಗಿಯೂ ಇರಲ್ಲ. ಅದಕ್ಕೆ ಉತ್ತರ ನೀಡದೇ ಇದ್ದರೆ ಒಳ್ಳೆಯದು ಎಂದು ಹೇಳಿದ್ದಾರೆ.

    ಬೆಳಗಾವಿಯಲ್ಲಿರುವ ಯಾವುದೇ ಭಾಷಿಕನಾದರೂ ಅವರು ಕನ್ನಡಿಗರೆ ಆಗಿರುತ್ತಾರೆ. ಕರ್ನಾಟಕದ ಒಂದಿಂಚು ಜಾಗವನ್ನೂ ಬಿಡಲು ಸಾಧ್ಯವಿಲ್ಲ. ಸುಮ್ಮನೆ ಈ ರೀತಿಯಲ್ಲಿ ಅವರು ಪುಂಡಾಟಿಕೆಯನ್ನು ನಡೆಸುತ್ತಿದ್ದಾರೆ. ಗಡಿ ವಿವಾದ ಈಗಾಗಲೇ ನ್ಯಾಯಲಯದಲ್ಲಿ ಇದೆ. ಹಾಗೆ ಇದ್ದರೂ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

  • ಸಚಿವರ ಹೆಸರಿನಲ್ಲಿ ನಕಲಿ ಖಾತೆ ತೆರೆದ ಆರೋಪಿ ಅರೆಸ್ಟ್!

    ಸಚಿವರ ಹೆಸರಿನಲ್ಲಿ ನಕಲಿ ಖಾತೆ ತೆರೆದ ಆರೋಪಿ ಅರೆಸ್ಟ್!

    ಮುಂಬೈ: ಸಚಿವರೊಬ್ಬರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

    ಸಚಿವರ ಹೆಸರಿನಲ್ಲಿ ನಕಲಿ ಜಾತೆ ತೆರೆದು ಬಂಧಿತನಾಗಿರವ 28 ವರ್ಷದ ಆರೋಪಿಯನ್ನು ಔರಾಂಗಬಾದ್ ಜಿಲ್ಲೆಯಲ್ಲಿ ವಾಲುಜ್‍ನಲ್ಲಿ ಬಂಧಿಸಲಾಗಿದೆ. ಈತ ಗುತ್ತಿಯ ಮೇಲ್ವೀಚಾರಕನಾಗಿ ಕೆಲಸ ಮಾಡುತ್ತಿದ್ದನು.

    ನಕಲಿ ಫೇಸ್‍ಬುಕ್ ಖಾತೆ ತೆರೆದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದೇವೆ. ನಕಲಿ ಫೇಸ್‍ಬುಕ್ ಖಾತೆ ಸೃಷ್ಟಿಸಲು ಬಳಸಲಾಗಿದ್ದ ಫೋನ್ ವಶಪಡಿಸಿಕೊಂಡಿದ್ದೇವೆ. ತನಿಖೆಯನ್ನು ನಡೆಸುತ್ತೇವೆ ಎಂದು ಸೈಬರ್ ವಿಭಾಗದ ಇನ್‍ಸ್ಪೆಕ್ಟರ್ ಬಾಲಕೃಷ್ಣ ವಾಘ್ ತಿಳಿಸಿದ್ದಾರೆ.

    ಮಹರಾಷ್ಟ್ರದ ಸಚಿವರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ರಚಿಸಿ, ಅದರಿಂದ ಕೆಲವು ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ಏಪ್ರಿಲ್ 8ರಂದು ಪ್ರಕರಣ ದಾಖಲಿಸಿದ್ದರು.

  • ಗೆಳತಿಯ ಅಜ್ಜಿ ಸಹೋದರನನ್ನು ಕೊಂದು ಪ್ರಿಯತಮ ಆತ್ಮಹತ್ಯೆ

    ಗೆಳತಿಯ ಅಜ್ಜಿ ಸಹೋದರನನ್ನು ಕೊಂದು ಪ್ರಿಯತಮ ಆತ್ಮಹತ್ಯೆ

    – ಗೆಳತಿಯ ಫೋನ್ ಕಿತ್ಕೊಂಡಿದ್ದೇ ಕೃತ್ಯಕ್ಕೆ ಕಾರಣವಾಯ್ತಾ?

    ಮುಂಬೈ: ಗೆಳತಿಯ ಅಜ್ಜಿ ಮತ್ತು ಸಹೋದರನನ್ನು ಕೊಂದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

    ಆರೋಪಿಯನ್ನು ಮೊಯಿನ್ ಖಾನ್(22) ಎಂದು ಗುರುತಿಸಲಾಗಿದ್ದು, ಈತ ಮೊಮಿನ್‍ಪುರದ ನಿವಾಸಿ. ಗೆಳತಿಯ ಅಜ್ಜಿ ಮರೋತಿ ಧುರ್ವೆ(70) ಮತ್ತು ಆಕೆಯ ಕಿರಿಯ ಸಹೋದರನನ್ನು ಇರಿದು ಕ್ರೂರವಾಗಿ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ವೃದ್ಧೆ ಮತ್ತು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಯುವಕ ತನ್ನ ಗೆಳತಿಯ ಸಹೋದರ ಮತ್ತು ಅಜ್ಜಿಯನ್ನು ಕೊಂದಿದ್ದಾನೆ. ಅಂದು ರಾತ್ರಿಯ ನಂತರ ಮಂಕಾಪುರ ಪ್ರದೇಶದ ರೈಲ್ವೆ ಹಳಿಯಲ್ಲಿ ಖಾನ್ ಶವ ಪತ್ತೆಯಾಗಿದೆ. ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸ್ ರು ಶಂಕಿಸಿದ್ದಾರೆ.

    ಕಳೆದ ವರ್ಷ ಯುವತಿ ಇನ್‍ಸ್ಟಾಗ್ರಾಮ್‍ನಲ್ಲಿ ಖಾನ್‍ನನ್ನು ಭೇಟಿಯಾಗಿದ್ದಳು. ಈಕೆ ತನ್ನ ಪೋಷಕರಿಗೆ ತನ್ನ ಸ್ನೇಹಿತ ಎಂದು ಪರಿಚಯ ಮಾಡಿಕೊಟ್ಟಿದ್ದಳು. ನಂತರ ಕುಟುಂಬದವರಿಗೆ ಇವರಿಬ್ಬರು ಸಂಬಂಧದಲ್ಲಿದ್ದಾರೆ ಎಂದು ತಿಳಿದಿದೆ. ಇಬ್ಬರು ಸ್ನೇಹವನ್ನು ಬೀಡಲು ಕೇಳಿಕೊಂಡರು ಮತ್ತು ಆಕೆಯ ಫೋನ್ನನ್ನು ಅವಳಿಂದ ಕಿತ್ತುಕೊಂಡಿದ್ದರು. ಆಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

    ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಅಪರಾಧವನ್ನು ಗಿಟ್ಟಿಖಾಡನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.