ಬೆಂಗಳೂರು: ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಮತೀಯ ಅಂಧ ಭಾವನೆಗಳಿಂದ ಹೊರಗೆ ಬಂದು ಭಾರತೀಯ ನಾಗರಿಕರಾಗಿ ನಡೆದುಕೊಳ್ಳಲಿ ಎಂದು ಸಚಿವ ಮಹದೇವಪ್ಪ (Mahadevappa) ಕಿಡಿಕಾರಿದ್ದಾರೆ.
ದಸರಾ (Dasara) ಉದ್ಘಾಟನೆ ಬಾನು ಮುಷ್ತಾಕ್ (Banu Mushtaq) ಮಾಡಬಾರದು ಎಂದು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆ. ಚುನಾಯಿತ ಸರ್ಕಾರದಲ್ಲಿ ಸಂವಿಧಾನಾತ್ಮಕವಾಗಿ ನಮ್ಮ ನಡೆ ನಿರ್ಧಾರ ಆಗಬೇಕು. ದಸರಾ ಉದ್ಘಾಟನೆ ವಿಚಾರದಲ್ಲಿ ನಾವು ಅದಕ್ಕೆ ಪೂರಕವಾದ ನಿರ್ಧಾರ ಮಾಡಿದ್ವಿ. ಅನವಶ್ಯಕವಾಗಿ ಅಂಕಣಕಾರರ ಆಗಿದ್ದವರು, ಎಂಪಿ ಆದವರು, ಸಂವಿಧಾನ ಹಾಗೂ ಅದರ ಹಕ್ಕುಗಳನ್ನ ತಿಳಿದುಕೊಂಡ ಪ್ರತಾಪ್ ಸಿಂಹ ಅವರು ಹೀಗೆ ಮಾತಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪ್ರತಾಪ್ ಸಿಂಹ, ಬಿಜೆಪಿ ನಾಯಕರು ಮೊದಲು ಸಂವಿಧಾನ ಓದಿಕೊಳ್ಳಲಿ: ಡಿಕೆಶಿ
ನ್ಯಾಯಾಲಯ ಸಂವಿಧಾನದ ಕಸ್ಟೋಡಿಯನ್. ಸಂವಿಧಾನದ ಪ್ರಕಾರ ಏನು ಮಾಡಬೇಕು ಅಂತ ಕೋರ್ಟ್ ಹೇಳಿದೆ. ಇನ್ನಾದ್ರು ಅವರು ಬುದ್ಧಿ ಕಲಿಯಲಿ. ಅವರಲ್ಲಿ ತುಂಬಿರೋ ಮತೀಯ ಅಂಧ ಭಾವನೆಗಳು ಹೊರಗೆ ಬಂದು ಭಾರತೀಯ ನಾಗರಿಕರಾಗಿ ನಡೆದುಕೊಳ್ಳಲಿ ಎಂದಿದ್ದಾರೆ.
ಬೆಂಗಳೂರು: ಧರ್ಮಸ್ಥಳ ಕೇಸ್‌ನಲ್ಲಿ ಸರ್ಕಾರ ಎಸ್‌ಐಟಿ (SIT) ರಚನೆ ಮಾಡಿದೆ. ತನಿಖೆ ಬಳಿಕ ಸತ್ಯ ಹೊರಗೆ ಬರಲಿದೆ ಎಂದು ಸಚಿವ ಮಹದೇವಪ್ಪ (Mahadevappa) ತಿಳಿಸಿದ್ದಾರೆ.ಇದನ್ನೂ ಓದಿ: ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು
ಧರ್ಮಸ್ಥಳ ಕೇಸ್ ಎಸ್‌ಐಟಿಗೆ (SIT) ವಹಿಸಬೇಕು ಎಂಬ ಸತೀಶ್ ಜಾರಕಿಹೋಳಿ (Satish Jarkiholi) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಸವಣ್ಣ ನಮ್ಮ ಮಾನ ಅಪಮಾನ ನಿಮ್ಮದಯ್ಯ ಅಂತ ಹೇಳಿದ್ದಾರೆ. ಅದೆಲ್ಲವನ್ನು ತಿಳಿಯೋಕೆ ಈಗ ಎಸ್‌ಐಟಿ ರಚನೆ ಮಾಡಲಾಗಿದೆ. ಎಸ್‌ಐಟಿ ತನಿಖೆಯಲ್ಲಿ ಎಲ್ಲವೂ ಹೊರಗೆ ಬರುತ್ತದೆ ಎಂದು ತಿಳಿಸಿದರು.
ತನಿಖೆಯಿಂದ ಯಾರು ಏನೇನು ಮಾಡಿದ್ದಾರೆ ಎಂದು ಹೊರಗೆ ಬಂದಾಗ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಸರ್ಕಾರ ಧರ್ಮಸ್ಥಳ ಕೇಸ್‌ನಲ್ಲಿ ಎಡವಿಲ್ಲ. ಅಪಪ್ರಚಾರಕ್ಕೆ ಎಡ ಮಾಡಿಕೊಡೋದಾಗಲಿ ಯಾವ ಪ್ರಶ್ನೆಯೂ ಇಲ್ಲ. ಯಾರು ಸುಳ್ಳು ಸುದ್ದಿ, ಅಪಪ್ರಚಾರ ಮಾಡ್ತಾರೆ ಒಂದು ಸೂಕ್ತ ತನಿಖೆ ಮೂಲಕ ತಾರ್ಕಿಕ ಅಂತ್ಯಕ್ಕೆ ಹೋಗಬೇಕು. ತಾರ್ಕಿಕ ಅಂತ್ಯಕ್ಕೆ ಹೋದ ಮೇಲೆ ಎಲ್ಲದ್ದಕ್ಕೂ ಸ್ಪಷ್ಟತೆ ಸಿಗುತ್ತದೆ. ಇದರಲ್ಲಿ ಸರ್ಕಾರ ಮಾಡುವುದು ಏನು ಇಲ್ಲ. ಪರಿಶುದ್ಧವಾಗಿ ಹೊರಗೆ ಬರಬೇಕು ಅನ್ನೋದು ನಮ್ಮ ಆಸೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ಗೃಹ ಶುದ್ಧಿ ಅಭಿಯಾನಕ್ಕೆ ಚಾಲನೆ – ಮಾನವ ಕಳ್ಳ ಸಾಗಣೆಯನ್ನು ಸರ್ಕಾರ, ಸಮಾಜ ಒಗ್ಗೂಡಿ ಎದುರಿಸಬೇಕು: ಗೆಹ್ಲೋಟ್
ಬೆಂಗಳೂರು: ಕನ್ನಂಬಾಡಿ ಅಣೆಕಟ್ಟೆಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ (Tippu Sultan) ಎಂದಿದ್ದ ಸಚಿವ ಮಹದೇವಪ್ಪ (HC Mahadevappa) ವ್ಯಾಪಕ ಟೀಕೆ ಬಳಿಕ ಯೂಟರ್ನ್ ಹೊಡೆದಿದ್ದಾರೆ. ಕೆಆರ್‌ಎಸ್ ಡ್ಯಾಂ (KRS Dam) ಕಟ್ಟಿದ್ದು ಟಿಪ್ಪು ಅಂತ ನಾನು ಹೇಳಿಲ್ಲ, ಹೇಳೋದಕ್ಕೂ ಬರೋದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
1911ರಲ್ಲಿ ಕೆಆರ್‌ಎಸ್ ಕಟ್ಟೋದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಡಿಗಲ್ಲು ಹಾಕಿದರು. ಅವರು ಡ್ಯಾಂ ಕಟ್ಟಲು ಪ್ರಾರಂಭಿಸಿದಾಗ ಅಲ್ಲೊಂದು ಶಿಲಾ ಶಾಸನ ಸಿಕ್ಕಿದೆ. 1794ರಲ್ಲಿ ಟಿಪ್ಪು ಕಾಲದಲ್ಲಿ ಬರೆದ ಪರ್ಷಿಯನ್ ಭಾಷೆಯ ಶಿಲಾ ಶಾಸನ. ಅದರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಬೇಕು ಎಂಬ ಪ್ರಸ್ತಾಪ ಇದೆ. ಅದನ್ನೂ ಕೂಡ ಕೆಆರ್‌ಎಸ್‌ನಲ್ಲಿಯೇ ಇಡಲಾಗಿದೆ. ನಾನು ಎಲ್ಲಿಯೂ ಕೂಡ ಟಿಪ್ಪು ಡ್ಯಾಂ ಕಟ್ಟಿದ್ದ ಅಂತ ಹೇಳಿಯೇ ಇಲ್ಲ ಎಂದರು. ಇದನ್ನೂ ಓದಿ: ಮಚ್ಚಿನಿಂದ ಕೊಲೆಗೈದ ಕೇಸ್‌ಗೆ ಟ್ವಿಸ್ಟ್ – ಪ್ರಿಯತಮೆಗಾಗಿ ಮಾಜಿ ಲವ್ವರ್‌ನನ್ನೇ ಕೊಂದ ಪ್ರಿಯಕರ
ಟಿಪ್ಪು ಕಟ್ಟಿದ್ದು ಅಲ್ಲವೇ ಅಲ್ಲ, ಆದರೆ ಟಿಪ್ಪುಗೂ ಕೂಡ ಅದೇ ಥರದ ಕನಸು ಇತ್ತು ಎಂಬುದಷ್ಟೇ ಹೇಳಿದ್ದು. ಇದರ ನೈಜತೆಯ ಬಗ್ಗೆ ಇತಿಹಾಸಕಾರರು ಹೇಳಬೇಕು. ಕೆಆರ್‌ಎಸ್ ಡ್ಯಾಂ ಕಟ್ಟಿದ್ದು ನಮ್ಮ ಇಂಜಿನಿಯರ್‌ಗಳು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಡ್ಯಾಂನ ಎಸ್ಟಿಮೇಟ್ ಹಾಕಿ ಎಷ್ಟು ಜಮೀನು ಬೇಕು ಎಂದು ತೀರ್ಮಾನಿಸಿ ಕಟ್ಟಿದ್ದು. ಆದರೆ ನಾನು ಅಲ್ಲಿ ಇಟ್ಟಿರುವ ಶಿಲಾ ಶಾಸನದ ಬಗ್ಗೆ ಮಾತ್ರ ಹೇಳಿದ್ದೇನೆ. ಬಿಜೆಪಿಯವರು ಏನು ಬೇಕಾದರೂ ಟೀಕೆ ಮಾಡಿಕೊಳ್ಳಲಿ. ನಾನು ಅನಗತ್ಯ ಗೊಂದಲ ಇರಬಾರದು ಎಂದು ಮಾತ್ರ ಹೇಳಿದ್ದೇನೆ. ಯಾರನ್ನೋ ಓಲೈಸಲು ಸಮಾಧಾನಪಡಿಸಲು ಹೇಳಿಲ್ಲ ಎಂದು ಬಿಜೆಪಿಗರು, ರಾಜವಂಶಸ್ಥ ಯದುವೀರ್‌ಗೆ ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದು ಪಾಕಿಸ್ತಾನ ಉಗ್ರರು: ಭದ್ರತಾ ಸಂಸ್ಥೆ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರ (Central Government) ರಾಜ್ಯಗಳ ಜೊತೆ ಫೈಟ್ ಮಾಡದೇ ಶಿಷ್ಟಾಚಾರ ಪಾಲನೆ ಮಾಡಬೇಕು ಎಂದು ಕೇಂದ್ರದ ವಿರುದ್ಧ ಸಚಿವ ಮಹದೇವಪ್ಪ (HC Mahadevappa) ವಾಗ್ದಾಳಿ ನಡೆಸಿದರು.
ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ ಹಿನ್ನೆಲೆ ಪ್ರಧಾನಿ ಮೋದಿಗೆ ಸಿಎಂ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಶಿಷ್ಟಾಚಾರ ಪಾಲನೆ ಮಾಡಬೇಕು. ಸಿಗಂದೂರು ಸೇತುವೆ ಮಾಡಿರುವುದು ಐತಿಹಾಸಿಕ ಕೆಲಸ. ಇದನ್ನು ಸ್ವಾಗತ ಮಾಡಬೇಕು. 2013-18ವರೆಗೆ ನಾನು ಲೋಕೋಪಯೋಗಿ ಇಲಾಖೆಯ ಸಚಿವನಾಗಿದ್ದೆ. ಆಗ ಯಡಿಯೂರಪ್ಪ ನನಗೆ ಸೇತುವೆ ಮಾಡಿಕೊಡಿ ಅಂತ ಕೇಳಿದ್ದರು. ಕಾಗೋಡು ತಿಮ್ಮಪ್ಪ ಕೂಡ ಮನವಿ ಮಾಡಿದ್ದರು. 2013-18ರ ನಡುವೆ ಕರ್ನಾಟಕ ರೋಡ್ ಡೆವಲಪ್ಮೆಂಟ್ ಕಾರ್ಪೋರೇಷನ್‌ನಿಂದ ಡಿಪಿಆರ್‌ನ್ನು (ಯೋಜನೆಯ ವಿವರವಾದ ವರದಿ) ತಯಾರಿ ಮಾಡಿದ್ದೆವು. ಬಳಿಕ ಗಡ್ಕರಿ ಅವರನ್ನು ಭೇಟಿ ಮಾಡಿ, ನ್ಯಾಷನಲ್ ಹೈವೆ ಅಥವಾ ಸಾಗರಮಾಲ ಯೋಜನೆ ಮಾಡಿ ಕೊಡಿ ಎಂದು ಕೇಳಿದ್ದೆ ಎಂದು ಇತಿಹಾಸ ತಿಳಿಸಿದರು.ಇದನ್ನೂ ಓದಿ: ವಿದ್ಯಾರ್ಥಿನಿ ಮೇಲೆ ರೇಪ್,ಬ್ಲ್ಯಾಕ್‌ಮೇಲ್ – ಮೂಡುಬಿದಿರೆ ಕಾಲೇಜಿನ ಇಬ್ಬರು ಉಪನ್ಯಾಸಕರು, ಸ್ನೇಹಿತ ಅರೆಸ್ಟ್
ರಾಜ್ಯ ಸರ್ಕಾರವೇ ನಿರ್ಧಾರ ಮಾಡಿ, ಸೇತುವೆ ಆಗಬೇಕು ಎಂದಿದ್ದರು. ನಮ್ಮ ಮನವಿ ಮೇಲೆ ಕೇಂದ್ರ ಕೆಲಸ ಮಾಡಲು ಒಪ್ಪಿಗೆ ನೀಡಿತ್ತು. ಸೇತುವೆ ಆಗಬೇಕು ಅಂತ ನಿರ್ಧಾರ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಅಭಿವೃದ್ಧಿ ವಿಷಯದಲ್ಲಿ ಫೈಟ್ ಮಾಡೋ ಅವಶ್ಯಕತೆ ಇಲ್ಲ. ನಾವೇ ಕ್ರೆಡಿಟ್ ತಗೋಬೇಕು ಅಂತ ಮಾಡಬಾರದು ಎಂದು ಕಿಡಿಕಾರಿದರು.
ಕಾರ್ಯಕ್ರಮಗಳನ್ನ ಶಿಷ್ಟಾಚಾರದ ಪ್ರಕಾರ ಮಾಡಬೇಕು. ಸಿಎಸ್‌ಗೆ ಪತ್ರ ಬರೆದು ಸಿಎಂ ಸಮಯ ಪಡೆದು ಕಾರ್ಯಕ್ರಮ ಮಾಡಬೇಕಿತ್ತು. ಸಿಎಂ ಬೇಡ ನಾವೇ ಕಾರ್ಯಕ್ರಮ ಮಾಡ್ತೀವಿ ಅಂದ್ರೆ ಅದು ಗಣತಂತ್ರ ವ್ಯವಸ್ಥೆಗೆ ಕಪ್ಪು ಚುಕ್ಕಿ. ಸಿಎಂ ಸಮಯ ನೋಡಿಕೊಂಡು ಸಮನ್ವಯದಿಂದ ಕೆಲಸ ಮಾಡಬೇಕು. ಫೈಟ್ ಮಾಡೋದ್ರಿಂದ ಏನು ಪ್ರಯೋಜನ ಇಲ್ಲ. ಇದು ಪ್ರಜಾಪ್ರಭುತ್ವ ಅಲ್ಲ ಎಂದು ಆಕ್ರೋಶ ಹೊರಹಾಕಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿನ ಬ್ಯಾಗ್ ಲಾಗ್ ಹುದ್ದೆ ಮುಂಬಡ್ತಿ ನೀಡಲು ನಿಯಮಗಳು ಪಾಲನೆ ಆಗ್ತಿಲ್ಲ ಅಂತ ಎಐಸಿಸಿ ಅಧ್ಯಕ್ಷರು ಸಿಎಂಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಐಸಿಸಿ ಅಧ್ಯಕ್ಷರು ಸಿಎಂಗೆ ಪತ್ರ ಬರೆದಿರೋದು ನನಗೆ ಗೊತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಂದು ವಿಜಿಲೆನ್ಸ್ ವಿಂಗ್ ಇದೆ. ಏನೇ ದೂರು ಬಂದರು ಈ ವಿಂಗ್ ಪರಿಶೀಲನೆ ಮಾಡಲಿದೆ. ಅದನ್ನ ಪರಿಶೀಲನೆ ಮಾಡಿ ಕಮೀಷನರ್ ಅವರು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುತ್ತಾರೆ ಅಂತ ಸ್ಪಷ್ಟಪಡಿಸಿದರು.
ನಮಗೆ ಪ್ರಾಂಶುಪಾಲರು, ಪೊಲೀಸ್ ಇಲಾಖೆ, ಡಿಹೆಚ್‌ಓಗಳ ಪ್ರಮೋಷನ್ ಸಂಬಂಧ ನನ್ನ ಗಮನಕ್ಕೆ ಬಂದಿತ್ತು. ನಾನು ಸಿಎಂ ಗಮನಕ್ಕೆ ತಂದು. ಸಮಸ್ಯೆ ಪರಿಹಾರಕ್ಕೆ ಸಿಎಂ ಸೂಚನೆ ನೀಡಿದ್ದಾರೆ. ನಾನೂ ಕೂಡಾ ಸಿಎಸ್ ಮತ್ತು ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.ಇದನ್ನೂ ಓದಿ: ದೇವನಹಳ್ಳಿಯ ಭೂಸ್ವಾಧೀನ ಅಧಿಸೂಚನೆ ರದ್ದು – ಸಿಎಂ ಘೋಷಣೆ
ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಜೊತೆ ಮೂವರು ಸಚಿವರು ಮುನಿಸು ಮುಂದುರಿಸಿದ್ದಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಡಿಕೆಶಿ ಆಯೋಜಿಸಿದ್ದ ಭೋಜನ ಕೂಟದಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಸಿ (KPCC) ಅಧ್ಯಕ್ಷರಾಗಿ 5 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಹೋಟೆಲಿನಲ್ಲಿ ಗುರುವಾರ ರಾತ್ರಿ ಭೋಜನ ಕೂಟ (Dinner) ಆಯೋಜಿಸಿದ್ದರು.
ಡಿಕೆಶಿ ಜೊತೆ ದೊಡ್ಡ ಮಟ್ಟದ ಬಂಡಾಯದ ಬಾವುಟ ಹಾರಿಸಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಡಿನ್ನರ್‌ನಲ್ಲಿ ಭಾಗಿಯಾಗಿದ್ದರು. ಸತೀಶ್ ಜಾರಕಿಹೋಳಿ ಜೊತೆ ಡಿಕೆಶಿ ವಿರುದ್ದ ಬಂಡಾಯ ಸಾರಿದ್ದ ಗೃಹ ಸಚಿವ ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಸಹಕಾರಿ ಸಚಿವ ಕೆಎನ್ ರಾಜಣ್ಣ ಆಗಮಿಸರಲಿಲ್ಲ. ಇದನ್ನೂ ಓದಿ: ನಡು ರಸ್ತೆಯಲ್ಲೇ ಹೊತ್ತಿ ಉರಿದ ಮಹೀಂದ್ರಾ ಥಾರ್
ಈ ಮೂಲಕ ಭೋಜನ ಕೂಟದಲ್ಲೂ ಡಿಕೆಶಿಯಿಂದ ಮೂವರು ಸಚಿವರು ಅಂತರ ಕಾಯ್ದುಕೊಂಡಿದ್ದಾರೆ. ಕಳೆದ ವಾರ ಡಿಕೆ ಶಿವಕುಮಾರ್ ಅವರು ಕೆಎನ್ ರಾಜಣ್ಣ ಅವರ ಭೇಟಿಗಾಗಿ ಕಚೇರಿಗೆ ಬಂದಿದ್ದರು. ಆದರೆ ಡಿಕೆಶಿ ಬರುತ್ತಿರುವ ವಿಷಯ ತಿಳಿದಿದ್ದರೂ ರಾಜಣ್ಣ ಅವರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಕಚೇರಿಯಿಂದ ಬೇಗನೇ ಹೊರ ನಡೆದಿದ್ದರು.
– ಡಿನ್ನರ್ ಸಭೆಗೆ ಬ್ರೇಕ್ ಬೆನ್ನಲ್ಲೇ ಇಬ್ಬರು ನಾಯಕರ ಮಾತುಕತೆ
ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಅಧ್ಯಕ್ಷ, ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಮತ್ತಷ್ಟು ಬೆಳವಣಿಗೆ ನಡೆಯುತ್ತಿದ್ದು ಇಂದು ಗೃಹ ಸಚಿವ ಪರಮೇಶ್ವರ್ (Parameshwar) ಅವರನ್ನು ಸಮಾಜ ಕಲ್ಯಾಣ ಸಚಿವ ಮಹದೇವಪ್ಪ (Mhadevappa) ಭೇಟಿಯಾಗಿ ಚರ್ಚೆ ನಡೆಸಿದರು.
ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ಪರಮೇಶ್ವರ್ ನಿವಾಸಕ್ಕೆ ಆಗಮಿಸಿದ ಮಹದೇಪ್ಪ ಸುಮಾರು 40 ನಿಮಿಷ ಮಾತುಕತೆ ನಡೆಸಿದರು. ಮನೆಯಿಂದ ತೆರಳುವ ವೇಳೆ ಯಾವುದೇ ವಿಚಾರ ಚರ್ಚೆ ನಡೆಸಿಲ್ಲ ಎಂದು ಎಂದು ಮಾಧ್ಯಮಗಳಿಗೆ ಹೇಳಿ ತೆರಳಿದರು. ಇದನ್ನೂ ಓದಿ: ಯಾರಿಗೂ ನೋಟಿಸ್ ಕೊಡಲ್ಲ: ಸುರ್ಜೇವಾಲ ಸ್ಪಷ್ಟನೆ
ಮಹದೇವಪ್ಪ ಭೇಟಿ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ವಿಶೇಷ ಏನು ಇಲ್ಲ. ವೈಯಕ್ತಿಕ ಕೆಲಸಕ್ಕೆ ಬಂದು ಮಾತನಾಡಿದ್ದಾರೆ. ಯಾಕೆ ಮಾತನಾಡಬಾರದಾ? ಅನೇಕ ಸಮಯದಲ್ಲಿ ಅವರು ಬರ್ತಾರೆ. ನಾವು ಹೋಗುತ್ತೇವೆ. ನಾನು ಅನೇಕ ಸಾರಿ ಸಚಿವರ ಮನೆಗೆ ಹೋಗಿದ್ದೇನೆ. ತಿಂಡಿಗೂ-ಊಟಕ್ಕೆ ಹೋಗಬಾರದಾ? ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.
ಮಹದೇವಪ್ಪ ವೈಯಕ್ತಿಕ ಕೆಲಸಕ್ಕೆ ಬಂದಿದ್ದರು. ಬೇರೆ ಯಾವುದಕ್ಕೂ ಇದಕ್ಕೂ ಸಂಬಂಧ ಇಲ್ಲ. ಅವರದ್ದೇನೋ ಕೆಲಸ ಇತ್ತು ಬಂದಿದ್ದಾರೆ. ನಾವು ಬೇರೆ ಯವರ ಮನೆಗೆ ತಿಂಡಿಗೋ, ಊಟಕ್ಕೋ ಹೋಗುವುದನ್ನು ಯಾರೂ ನಿಲ್ಲಿಸಲು ಆಗುವುದಿಲ್ಲ. ಅದೆಲ್ಲ ವೈಯಕ್ತಿಕ ಭೇಟಿಗಳು ಎಂದರು.
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಸಭೆಯ ಬಳಿಕ ಪರಮೇಶ್ವರ್ ಅವರು ದಲಿತ ನಾಯಕರ (Dalit Leaders) ಸಭೆ ನಡೆಸಲು ಮುಂದಾಗಿದ್ದರು. ಆದರೆ ಈ ಸಭೆಗೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಈ ಡಿನ್ನರ್ ಸಭೆಯನ್ನು ನಾವು ರದ್ದು ಮಾಡಿಲ್ಲ. ಮುಂದಕ್ಕೆ ಹಾಕಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದರು.
ಬೆಂಗಳೂರು: ಮುಡಾ ಕೇಸ್ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ನಡೆಯುತ್ತಿರುವ ಷಡ್ಯಂತ್ರ. ಯಾರು ಏನೇ ಮಾಡಿದರು ಸಿದ್ದರಾಮಯ್ಯ ಗಟ್ಟಿಯಾಗಿ ಇದ್ದಾರೆ ಎಂದು ಸಚಿವ ಮಹದೇವಪ್ಪ (H C Mahadevappa) ತಿಳಿಸಿದ್ದಾರೆ.
ಮುಡಾ ಕೇಸ್‌ನಲ್ಲಿ (MUDA Case) ತನಿಖೆಗೆ ಬರುವಂತೆ ಲೋಕಾಯುಕ್ತ ಸಿಎಂಗೆ ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರಿಗೆ ಲೋಕಾಯುಕ್ತರು ನೋಟಿಸ್ ನೀಡಿರುವುದು ಪತ್ರಿಕೆಗಳಲ್ಲಿ ನೋಡಿದ್ದೇನೆ. ಸಿಎಂ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ಅವರು ಕೂಡಾ ಕಾನೂನಿನ ಒಳಗೆ ಬರುತ್ತಾರೆ. ಅವರೇ ವಿಚಾರಣೆಗೆ ಹೋಗುವುದಾಗಿ ಹೇಳಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ದಾಟುವಾಗ ಬೆನ್ಜ್ ಕಾರು ಡಿಕ್ಕಿಯಾಗಿ ಟೆಕ್ಕಿ ಸಾವು
ಸಿಎಂ ಮೇಲೆ ಲೋಕಾಯುಕ್ತದಿಂದ ತನಿಖೆ ಸರಿಯಾಗಿ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ತನಿಖೆಗೂ ಅವರ ಸ್ಥಾನಕ್ಕೂ ಸಂಬಂಧವಿಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನು ಯಾವತ್ತು ಬದಲಾವಣೆ ಆಗುವುದಿಲ್ಲ. ಸೆಕ್ಷನ್ ಬದಲಾವಣೆ ಆಗುವುದಿಲ್ಲ. ಸರ್ಕಾರದ ಅಧೀನ ಸಂಸ್ಥೆಗಳು ಸಿಎಂರನ್ನು ಸರಿಯಾಗಿ ತನಿಖೆ ಮಾಡುವುದಿಲ್ಲ ಅನ್ನುವುದು ಕೆಲವರ ಭಾವನೆ. ಅವೆಲ್ಲ ಅಂತೆ-ಕಂತೆಗಳು. ಕಾನೂನಿನ ಮುಂದೆ ಎಲ್ಲರೂ ಒಂದೇ. ಮುಡಾ ಕೇಸ್ ಸಿಎಂ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತವಾದ ಷಡ್ಯಂತ್ರ. 40 ವರ್ಷಗಳಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಸಿದ್ದರಾಮಯ್ಯ ಆಡಳಿತ ಮಾಡಿಕೊಂಡು ಬಂದಿದ್ದರು. ಸಿದ್ದರಾಮಯ್ಯ ಶುದ್ಧ ಹಸ್ತರಾಗಿ ಇದ್ದಾರೆ. ಮುಂದೆಯೂ ಇರುತ್ತಾರೆ ಎಂದರು. ಇದನ್ನೂ ಓದಿ: ಬೆಳಗಾವಿ| ತಹಶೀಲ್ದಾರ್ ಕಚೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ
ಬೆಂಗಳೂರು: ಚುನಾವಣೆ (Election) ಸಮಯದಲ್ಲಿ ಪದೇ ಪದೇ ಕಣ್ಣೀರು (Tears) ಹಾಕೋದು ಸರಿಯಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಮತ್ತು ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಸಚಿವ ಮಹದೇವಪ್ಪ (Mahadevappa) ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಎಲ್ಲಾ ಮತಗಳ ಮೇಲೆ ಕಣ್ಣು ಇಟ್ಟಿರುತ್ತಾರೆ.ಆದರೆ ಜನ ಎಲ್ಲವನ್ನೂ ತೀರ್ಮಾನ ಮಾಡ್ತಾರೆ. ಏನು ಕೆಲಸ ಮಾಡುತ್ತಾರೆ ಏನು ಅಭಿವೃದ್ಧಿ ಮಾಡುತ್ತಾರೆ ಎಂದು ಜನ ನೋಡಿ ಮತ ಹಾಕುತ್ತಾರೆ. ಚನ್ನಪಟ್ಟಣ ಕಾಂಗ್ರೆಸ್ ಪರ ಇದೆ. ಈಗ ವಾತಾವರಣ ಶುರುವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಭುಗಿಲೆದ್ದ ವಕ್ಫ್ ಆಸ್ತಿ ವಿವಾದ – ರಾಜ್ಯಾದ್ಯಂತ ಕೇಸರಿ ಪಡೆಯ ಪ್ರತಿಭಟನೆ ಜೋರು
ಕುಮಾರಸ್ವಾಮಿ ಮತ್ತು ನಿಖಿಲ್ ಕಣ್ಣೀರು ಹಾಕಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಣ್ಣೀರು ಹಾಕಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಭಾರ ಕಡಿಮೆ ಆಗುತ್ತೆ. ಮನಸು ಹಗರು ಆಗುತ್ತೆ. ಡಿಕೆ ಸುರೇಶ್ ಸೋತಿದ್ದಕ್ಕೆ ಅವರು ಅತ್ತರು. ಅಭಿವೃದ್ಧಿ ಮಾಡಿ ಸೋತ್ರು ಎಂದು ಅತ್ತರು. ಆದರೆ ಚುನಾವಣೆ ಬಂದಾಗ ಅಳೋದು ಸರಿಯಲ್ಲ. ಅವರೆಲ್ಲ ಲೀಡರ್‌ಗಳು. ಹೀಗೆ ಅಳೋದು ಸರಿಯಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಜಮೀರ್ ಇಸ್ಲಾಂ ಧರ್ಮ, ವಕ್ಫ್ ಬೋರ್ಡ್‌ಗೆ ನ್ಯಾಯ ಒದಗಿಸೋ ಪ್ರಯತ್ನದಲ್ಲಿದ್ದಾರೆ: ಮಾದಾರ ಚನ್ನಯ್ಯ ಶ್ರೀ
ದೇವೇಗೌಡರು ಅಂಬ್ಯುಲೆನ್ಸ್ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂಬ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ಎಲ್ಲರ ಆರೋಗ್ಯ ಚೆನ್ನಾಗಿ ಇರಲಿ. ಕಣ್ಣೀರು, ರಾಜಕೀಯ, ಕ್ಷೇತ್ರದ ಅಭಿವೃದ್ಧಿಗೆ ಎಲ್ಲಿ ಸಂಬಂಧ ಇದೆ. ಜನರು ಕ್ಷೇತ್ರದ ಅಭಿವೃದ್ಧಿಯನ್ನು ಚುನಾವಣೆಯಲ್ಲಿ ನೋಡುತ್ತಾರೆ. ಕಣ್ಣೀರಿಗೂ ಚುನಾವಣೆಗೂ ಸಂಬಂಧವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಮರಿಗೆ ಉರುಳಿದ ಬಸ್ – ಕನಿಷ್ಠ 20 ಮಂದಿ ದಾರುಣ ಸಾವು
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) 94 ಕೋಟಿ ರೂ ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವ ನಾಗೇಂದ್ರ (Nagendra) ರಾಜೀನಾಮೆ (Resignation) ನೀಡುವ ಅವಶ್ಯಕತೆ ಇಲ್ಲ ಎಂದು ಸಚಿವ ಮಹದೇವಪ್ಪ (Mahadevappa) ಹೇಳುವ ಮೂಲಕ ನಾಗೇಂದ್ರ ಬೆನ್ನಿಗೆ ನಿಂತಿದ್ದಾರೆ.
ಚಂದ್ರಶೇಖರನ್ ಒಬ್ಬ ಒಳ್ಳೆಯ ಅಧಿಕಾರಿ. ಅವರ ಆತ್ಮಹತ್ಯೆಯಿಂದ ತುಂಬ ದು:ಖವಾಗಿದೆ. ಡೆತ್‌ನೋಟ್‌ನಲ್ಲಿ ಕೆಲ ಆರೋಪಗಳನ್ನು ಮಾಡಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತು ತನಿಖೆ ಶುರು ಮಾಡಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು ತನಿಖೆಯ ಬಳಿಕ ಸತ್ಯಾಸತ್ಯ ಹೊರಗಡೆ ಬರಲಿದೆ ಎಂದರು. ಇದನ್ನೂ ಓದಿ: ಎನ್‌ಡಿಎ ಅಧಿಕಾರಕ್ಕೆ ಬಂದ್ರೆ ಜೂನ್ 9 ರಂದು ಮೋದಿ ಪ್ರಮಾಣ ವಚನ!
ಇಲ್ಲಿ ದಲಿತರು, ದಲಿತೇತರ ಹಣ ಅಂತಲ್ಲ.ಅದು ಸರ್ಕಾರದ ಹಣ. ಅಂತೆ ಕಂತೆಗಳ ಮೇಲೆ ಮಾತನಾಡಲು ಆಗುವುದಿಲ್ಲ. ರಾಜಕೀಯಕರಣಗೊಳಿಸಿದ ತಕ್ಷಣ ಮಾತಾಡಲು ಆಗುವುದಿಲ್ಲ. ಈಶ್ವರಪ್ಪ ಪ್ರಕರಣವೇ ಬೇರೆ, ನಿಗಮದ ಹಣ ವರ್ಗಾವಣೆ ಪ್ರಕರಣವೇ ಬೇರೆ. ಅದಕ್ಕೂ ಇದಕ್ಕೂ ಹೋಲಿಕೆ ಸರಿಯಲ್ಲ. ವಿರೋಧ ಪಕ್ಷ ಆಗಿರುವರಿಂದ ರಾಜೀನಾಮೆ ಕೇಳುತ್ತಾರೆ. ಸತ್ಯಾಸತತೆ ಹೊರಗಡೆ ಬಾರದೇ ಯಾವ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಸಚಿವ ನಾಗೇಂದ್ರ ಬೆನ್ನಿಗೆ ಸಚಿವ ಮಹಾದೇವಪ್ಪ ನಿಂತರು. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್ – ಯೂನಿಯನ್ ಬ್ಯಾಂಕ್‌ನಿಂದಲೇ ವಂಚನೆ, ಕೇಸ್ ದಾಖಲು
ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಹಂಚಿದ್ದ ಹಣ ವಾಲ್ಮೀಕಿ ನಿಗಮದ್ದು ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ವಿರೋಧ ಪಕ್ಷ ಏನು ಬೇಕಾದರೂ ಹೇಳಬಹುದು. ಪ್ರಕರಣ ಬೆಳಕಿಗೆ ಬಂದ ಕೂಡಲೇ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಈಗಾಗಲೇ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದರು.
ಬೆಂಗಳೂರು: ಅನ್ನಭಾಗ್ಯ ಯೋಜನೆಗೆ (Anna Bhagya Scheme) ಅಕ್ಕಿ ನೀಡದ ಕೇಂದ್ರ ಸರ್ಕಾರ ಧರ್ಮದ ಹೆಸರಲ್ಲಿ ಅಕ್ಷತೆಯ (Mantrakshate) ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ (Mahadevappa) ಕಿಡಿಕಾರಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಹಸಿವು ಮುಕ್ತ ಕರ್ನಾಟಕದ (Karnataka) ಉದ್ದೇಶದಿಂದ ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಕೊಂಡುಕೊಳ್ಳುತ್ತೇವೆ ಎಂದಾಗಲೂ ಕೇಂದ್ರದಿಂದ ಅಕ್ಕಿ ನೀಡದವರು ಈ ದಿನ ಧರ್ಮದ ಹೆಸರಲ್ಲಿ ಅಕ್ಷತೆಯ ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ. ಬಡವರ ಹಸಿವಿಗೆ ಅನ್ನ ನೀಡುವುದಕ್ಕಿಂತಲೂ ದೊಡ್ಡ ಧರ್ಮ ಇದೆಯೇ?