Tag: ಮಹಡಿ

  • ಅಮ್ಮನಿಂದ ಹೊಡೆತ ತಪ್ಪಿಸಿಕೊಳ್ಳಲು 5ನೇ ಮಹಡಿಯಿಂದ ಜಿಗಿದ ಬಾಲಕ!

    ಅಮ್ಮನಿಂದ ಹೊಡೆತ ತಪ್ಪಿಸಿಕೊಳ್ಳಲು 5ನೇ ಮಹಡಿಯಿಂದ ಜಿಗಿದ ಬಾಲಕ!

    ಬೀಜಿಂಗ್: ಬಾಲಕನೊಬ್ಬ ಅಮ್ಮನ ಹೊಡೆತವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಕಟ್ಟಡದ 5ನೇ ಮಹಡಿಯಿಂದ ಹಾರಿದ ಘಟನೆ ಚೀನಾದಲ್ಲಿ (China Boy Jumping) ನಡೆದಿದೆ.

    ಈ ಘಟನೆ ಪೂರ್ವ ಚೀನಾದ ಅನ್ಹುಯಿ ಪ್ರಾಂತ್ಯದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಬಾಲಕನನ್ನು ಯಾನ್ (6) ಎಂದು ಗುರುತಿಸಲಾಗಿದೆ. ಈತನ ತಂದೆ ಇನನೊಂದು ನಗರದಲ್ಲಿ ಉದ್ಯೋಗದಲ್ಲಿದ್ದು, ಹೀಗಾಗಿ ಯಾನ್ ತನ್ನ ತಾಯಿ ಜೊತೆ ವಾಸವಾಗಿದ್ದಾನೆ.

    ಘಟನೆಯ ವೀಡಿಯೋವನ್ನು ನರೆಮನೆಯ ವ್ಯಕ್ತಿ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ವೀಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಮತ್ತು ನೆರೆಹೊರೆಯ ಇತರ ಜನರು ಬಾಲಕನನ್ನು ಹೊಡೆಯಬೇಡಿ ಎಂದು ಪರಿಪರಿಯಾಗಿ ಮನವಿ ಮಾಡಿದರೂ ಆಕೆ ಕೇಳಲಿಲ್ಲ. ಪರಿಣಾಮ ಬಾಲಕ ನೋವು ತಡೆದುಕೊಳ್ಳಲು ಸಾಧ್ಯವಾಗದೇ ಏಕಾಏಕಿ ಕಟ್ಟಡದಿಂದ ಜಿಗಿದಿದ್ದಾನೆ. ಇದನ್ನೂ ಓದಿ: ಅಕ್ರಮ ಸಂಬಂಧ ಇಟ್ಟುಕೊಂಡು ಚಿತ್ರಹಿಂಸೆ ಕೊಟ್ಟ: ಪವಿತ್ರಾ ಬರೆದ ಡೆತ್‍ನೋಟ್‍ನಲ್ಲೇನಿದೆ?

    ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಾಲಕನ ದೇಹದ ಮೂಳೆಗಳು ಮುರಿದಿದ್ದು, ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಬಾಲಕನ ವೀಡಿಯೋಗೆ ಸಾಕಷ್ಟು ಕಾಮೆಂಟ್ ಗಳು ಬರುತ್ತಿದ್ದು, ತಾಯಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀನು ಸುಳ್ಳುಗಾರ್ತಿ ಎಂದ ಶಿಕ್ಷಕಿ- ಮನನೊಂದು ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ

    ನೀನು ಸುಳ್ಳುಗಾರ್ತಿ ಎಂದ ಶಿಕ್ಷಕಿ- ಮನನೊಂದು ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ

    ಚೆನ್ನೈ: ಶಿಕ್ಷಕರೊಬ್ಬರು (Teacher) ವಿದ್ಯಾರ್ಥಿನಿಯನ್ನು (Student) ಸುಳ್ಳುಗಾರ್ತಿ ಎಂದಿದ್ದಕ್ಕೆ ಮನನೊಂದು ಆಕೆ ಸರ್ಕಾರಿ ಶಾಲೆಯ (Government School) ಮೊದಲ ಮಹಡಿಯಿಂದ ಜಿಗಿದ ಘಟನೆ ತಮಿಳುನಾಡಿನ (Tamil Nadu) ಕರೂರ್‌ನಲ್ಲಿ ನಡೆದಿದೆ.

    ಘಟನೆಯ ನಂತರ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ವಿದ್ಯಾರ್ಥಿನಿ ಎಡವಿ ಬಿದ್ದಿದ್ದಾಳೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಸಿದ್ದಾರೆ. ಈ ವೇಳೆ ಆ ವಿದ್ಯಾರ್ಥಿನಿ ಏನಾಯಿತು ಎಂದು ವಿವರಿಸಿದ ವೀಡಿಯೋ ವೈರಲ್ ಆಗಿದೆ.

    ವೀಡಿಯೋದಲ್ಲಿ ಏನಿದೆ?: ನಮ್ಮ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಓರ್ವ ಹುಡುಗಿ ಬಂದು ಆಕೆಯ ಮೊಬೈಲ್‍ನಲ್ಲಿ ಕಾರ್ಯಕ್ರಮದ ವೀಡಿಯೋವನ್ನು ತೆಗೆದುಕೊಡಲು ಹೇಳಿದಳು. ಮೊದಲು ನಾನು ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆ ಮೊಬೈಲ್‍ನ್ನು ಬೇರೆಯವರಿಗೆ ರವಾನಿಸಲು ತಿಳಿಸಿದಳು. ಆದರೆ ಆ ವ್ಯಕ್ತಿ ದೂರದ್ದಲ್ಲಿದ್ದ ಕಾರಣ ನಾನೇ ಕಾರ್ಯಕ್ರಮದ ವೀಡಿಯೋವನ್ನು ಮಾಡುವ ಪರಿಸ್ಥಿತಿ ಬಂತು. ಹಾಗೆ ಮಾಡಿದ್ದಕ್ಕೆ ಟೀಚರ್ ನನ್ನನ್ನು ಗದರಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ ನಗರಸಭಾ ಸದಸ್ಯನ ಬರ್ತ್‌ಡೇಯಲ್ಲಿ ನಂಗನಾಚ್ – ಯುವಕನಿಗೆ ಚಾಕು ಇರಿತ

    ಆಗ ನಾನು ನಡೆದ ವಿಷಯ ತಿಳಿಸಿದರೂ ಅವರು ನನ್ನ ಮಾತನ್ನು ನಂಬಲಿಲ್ಲ. ಅಷ್ಟೇ ಅಲ್ಲದೇ ಎಲ್ಲರ ಮುಂದೆ ನನ್ನನ್ನು ಸುಳ್ಳುಗಾರ್ತಿ ಎಂದು ಕರೆದರು. ಇದರಿಂದಾಗಿ ಬೇರೆ ವಿದ್ಯಾರ್ಥಿಗಳು ನನ್ನನ್ನು ಅದೇ ಭಾವನೆಯಿಂದ ನೋಡಿದರು. ಈ ಹಿನ್ನೆಲೆಯಲ್ಲಿ ಮನನೊಂದು ಮಹಡಿಯಿಂದ ಜಿಗಿದೆ ಎಂದು ತಿಳಿಸಿದಳು. ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರುತ್ತೆ.. ಧೈರ್ಯವಿದ್ರೆ ನಿಲ್ಲಿಸಿ – ದೀದಿಗೆ ಬಿಜೆಪಿ ಸವಾಲು

    Live Tv
    [brid partner=56869869 player=32851 video=960834 autoplay=true]

  • ಊಟ ಮಾಡಿಸಿ ಕೈ ತೊಳೆಯಲು ಹೋದ ಅಮ್ಮ – ಮಹಡಿಯಿಂದ ಬಿದ್ದು ಮಗು ಸಾವು

    ಊಟ ಮಾಡಿಸಿ ಕೈ ತೊಳೆಯಲು ಹೋದ ಅಮ್ಮ – ಮಹಡಿಯಿಂದ ಬಿದ್ದು ಮಗು ಸಾವು

    ಮಂಡ್ಯ: ತಾಯಿ ಮಗುವಿಗೆ ಊಟ ಮಾಡಿಸಿ ಕೈ ತೊಳೆಯಲು ಹೋದ ವೇಳೆ ಮೂರು ವರ್ಷದ ಕಂದಮ್ಮ ಮಹಡಿಯ ಮೇಲಿಂದ ಬಿದ್ದು ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮಂಡ್ಯ ನಗರದ ರಾಜಕುಮಾರ್ ಬಡಾವಣೆಯ ನಿವಾಸಿ ಸತೀಶ್ ಹಾಗೂ ಶೃತಿ ದಂಪತಿಯ ಮಗಳು ಧನುಶ್ರೀ (3) ಮೃತ ದುರ್ದೈವಿ. ರಾಜಕುಮಾರ್ ಬಡಾವಣೆಯಲ್ಲಿ ಸತೀಶ್ ಅವರದ್ದು ಮಹಡಿಯ ಮನೆಯಾಗಿದೆ. ಎಂದಿನಂತೆ ಶೃತಿ ತಮ್ಮ ಮಗಳು ಧನುಶ್ರೀಯನ್ನು ಆಟವಾಡಿಸಿಕೊಂಡು ಮನೆಯ ಮುಂಭಾಗ ಊಟ ಮಾಡಿಸಿದ್ದಾರೆ. ನಂತರ ಮಗುವನ್ನು ಬಿಟ್ಟು ಒಳಗೆ ಕೈ ತೊಳೆಯಲು ಹೋಗಿದ್ದಾರೆ.

    ಈ ವೇಳೆ ಮಹಡಿಯ ಮೇಲಿನ ಸಂದಿಯಲ್ಲಿ ಮಗು ಇಣುಕಿ ನೋಡಲು ಹೋಗಿದೆ. ಆಗ ಮಗು ಮುಗ್ಗರಿಸಿ ಕೆಳಗೆ ಬಿದ್ದಿದೆ. ಮೇಲಿಂದ ಬಿದ್ದ ರಭಸಕ್ಕೆ ಮಗುವಿನ ತಲೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ತಕ್ಷಣ ಪೋಷಕರು ಮಗುವನ್ನು ಕರೆದುಕೊಂಡು ಮೂರು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ಮಗು ಸಾವನ್ನಪ್ಪಿದೆ.

    ಮಗುವನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • 4ನೇ ಮಹಡಿಯಿಂದ ಜಿಗಿದ ಟಿವಿ ಆ್ಯಂಕರ್

    4ನೇ ಮಹಡಿಯಿಂದ ಜಿಗಿದ ಟಿವಿ ಆ್ಯಂಕರ್

    ಲಕ್ನೋ: ಅಪಾರ್ಟ್ ಮೆಂಟಿನ 4ನೇ ಮಹಡಿಯಿಂದ ಟಿವಿ ಆ್ಯಂಕರ್ ಒಬ್ಬರು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ರಾಧಿಕಾ ಕೌಶಿಕ್ ಮೃತಪಟ್ಟ ಟಿವಿ ಆ್ಯಂಕರ್. ಈಕೆ ಗುರುವಾರ ರಾತ್ರಿಯೇ ಮಹಡಿಯಿಂದ ಬಿದ್ದಿದ್ದು, ಇಂದು ನಸುಕಿನ ಜಾವ ಸುಮಾರು 3:30ಕ್ಕೆ ಮೃತಪಟ್ಟಿದ್ದಾರೆ.

    ಮೃತ ಕೌಶಿಕ್ ನೋಯ್ಡಾದ ಅಂಟಾರ್ಶ್ ಅಪಾರ್ಟ್ ಮೆಂಟ್ ಸೆಕ್ಟರ್ 77ರಲ್ಲಿ ವಾಸಿಸುತ್ತಿದ್ದರು. ಇವರ ಜೊತೆ ಸಹೋದ್ಯೋಗಿ ಕೂಡ ಇದ್ದು, ಇಬ್ಬರು ಒಂದೇ ಪ್ಲಾಟ್ ನಲ್ಲಿ ವಾಸಿಸುತ್ತಿದ್ದರು. ಗುರುವಾರ ರಾತ್ರಿ ಮಹಡಿಯ ಮೇಲೆ ನಿಂತು ಮಾತನಾಡುತ್ತಿದ್ದರು. ಬಳಿಕ ಸಹೋದ್ಯೋಗಿ ಶೌಚಾಲಯಕ್ಕೆ ಹೋದಾಗ ರಾಧಿಕಾ ಕೌಶಿಕ್ 4ನೇ ಮಹಡಿಯಿಂದ ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಸುಕಿನ ಜಾವ 3.30ಕ್ಕೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಮೃತ ಆಂಕರ್ ತಾನೇ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಮೃತ ಸಹೋದ್ಯೋಗಿಯನ್ನು ವಶಕ್ಕೆ ಪಡೆದು, ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಬಿದ್ದಿದ್ದಾರೋ ಎನ್ನುವುದನ್ನು ವಿಚಾರಣೆ ಮಾಡುತ್ತಿದ್ದಾರೆ.

    ಮೃತ ನಿರೂಪಕಿ ಮೂಲತಃ ರಾಜಸ್ಥಾನದವರಾಗಿದ್ದು, ಪೊಲೀಸ್ ಅಧಿಕಾರಿಗಳು ಕುಟುಂಬದ ಸದಸ್ಯರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ಇತ್ತ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾಮುಕರಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಹಾರಿದ್ಳು- ಹೈ ವೋಲ್ಟೆಜ್ ತಂತಿಯಲ್ಲಿ ಸಿಲುಕಿಕೊಂಡ ಬಾಲಕಿ!

    ಕಾಮುಕರಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಹಾರಿದ್ಳು- ಹೈ ವೋಲ್ಟೆಜ್ ತಂತಿಯಲ್ಲಿ ಸಿಲುಕಿಕೊಂಡ ಬಾಲಕಿ!

    ಪಾಟ್ನಾ: ಒಂಬತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಸಾಮಾಹಿಕ ಅತ್ಯಾಚಾರ ನಡೆದಿದ್ದು, ಈ ವೇಳೆ ಕಾಮುಕರಿಂದ ತಪ್ಪಿಸಿಕೊಳ್ಳಲು ಬಾಲಕಿ ಕಟ್ಟಡದಿಂದ ಜಿಗಿದ್ದಾಳೆ. ಪರಿಣಾಮ ಹೈ ವೋಲ್ಟೇಜ್ ವಿದ್ಯುತ್ ತಂತಿಗಳಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದಾಳೆ.

    ಈ ಘಟನೆ ಬಿಹಾರದ ಲಖಿಸರಯಿ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಚಿತ್ರಂಜನ್ ಎಂಬಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಬಳಿಕ ಆಕೆ ಕಾಮುಕರಿಂದ ತಪ್ಪಿಸಿಕೊಳ್ಳಲು ಮೂರು ಅಂತಸ್ತಿನ ಕಟ್ಟಡದಿಂದ ಜಿಗಿದಿದ್ದಾಳೆ. ಪರಿಣಾಮ ಹೈ ವೋಲ್ಟೇಜ್ ತಂತಿ ಮೇಲೆ ಬಿದ್ದಿದ್ದು, ಸದ್ಯ ಬಾಲಕಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ ಅಂತ ಪೊಲೀಸ್ ಆಯುಕ್ತ ಕಾರ್ತಿಕ್ ಶರ್ಮಾ ತಿಳಿಸಿದ್ದಾರೆ.

    ಗುರುವಾರ ಬಾಲಕಿ ತನ್ನ ಸಹಪಾಠಿ ಜೊತೆ ದುರ್ಗಾ ನವಮಿ ಹಬ್ಬಕ್ಕೆ ತೆರಳಿದ್ದಾಳೆ. ಆದ್ರೆ ಆಕೆಗೆ ಕಟ್ಟಡದ 3ನೇ ಮಹಡಿಗೆ ಹೇಗೆ ಹೋಗಿರುವುದಾಗಿ ತಿಳಿದಿಲ್ಲ ಅಂತ ಶರ್ಮಾ ಹೇಳಿದ್ದಾರೆ.

    ಕಾಮುಕರು ಬಾಲಕಿಗೆ ಒತ್ತಾಯಪೂರ್ವಕವಾಗಿ ಮತ್ತು ಬರುವ ಪಾನೀಯವನ್ನು ಕುಡಿಸಿದ್ದಾರೆ. ಪರಿಣಾಮ ಆಕೆ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದಾಳೆ. ಈ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ಸ್ವಲ್ಪ ಸಮಯದ ಬಳಿಕ ಆಕೆಗೆ ಪ್ರಜ್ಞೆ ಬಂದಿದ್ದು, ಆಕೆ ಅರೆ ನಗ್ನವಾಗಿದ್ದಳು. ಇದರಿಂದ ಗಾಬರಿಗೊಂಡು ಮೂರನೇ ಮಹಡಿಯಿಂದ ಜಿಗಿದಿದ್ದಾಳೆ ಅಂತ ಅವರು ತಿಳಿಸಿದ್ದಾರೆ.

    ಘಟನೆಯಿಂದ ಬಾಲಕಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಬಾಲಕಿ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನಲ್ಲಿ ಸುಧಾರಣೆಯಾದ ಬಳಿಕ ಆಕೆಯ ಬಳಿಯಿಂದ ಹೇಳಿಕೆ ಪಡೆದುಕೊಳ್ಳಲಾಗುವುದು ಅಂತ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಗೆಳತಿ, ಕಟ್ಟಡದ ಮಾಲೀಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ ಕಟ್ಟಡದಲ್ಲಿದ್ದ ಬಾಲಕಿಯ ಬಟ್ಟೆ, ಆಲ್ಕೋಹಾಲ್ ಬಾಟಲಿ ಹಾಗೂ ಗ್ಲಾಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.

    ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನೆಗಳು ನಡೆದವು. 100ಕ್ಕೂ ಹೆಚ್ಚು ಮಂದಿ ರಸ್ತೆ ತಡೆದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೆಲ್ಫಿ ಕ್ಲಿಕ್ಕಿಸೋ ವೇಳೆ 27ನೇ ಮಹಡಿಯಿಂದ ಬಿದ್ದ 2 ಮಕ್ಕಳ ತಾಯಿ

    ಸೆಲ್ಫಿ ಕ್ಲಿಕ್ಕಿಸೋ ವೇಳೆ 27ನೇ ಮಹಡಿಯಿಂದ ಬಿದ್ದ 2 ಮಕ್ಕಳ ತಾಯಿ

    ಪನಾಮಾ: ಸೆಲ್ಫಿ ತೆಗೆಯುವಾಗ ಮಹಿಳೆಯೊಬ್ಬಳು 27ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆಯೊಂದು ದಕ್ಷಿಣ ಅಮೆರಿಕದ ಪನಾಮದಲ್ಲಿ ನಡೆದಿದೆ.

    ಸಂದ್ರಾ ಮನ್ಯೂಲಾ ಡಾಕೋಸ್ಟಾ ಮೆಕೆಡೋ(27) ಸೆಲ್ಫಿ ತೆಗೆಯುವಾಗ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾಳೆ. ಸಂದ್ರಾ ಬಾಲ್ಕನಿಯ ಕಂಬಿಗೆ ಒರಗಿಕೊಂಡು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಈ ವೇಳೆ ಕಾಲು ಜಾರಿ 27ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ.

    ಮಹಿಳೆ ಮಹಡಿಯಿಂದ ಬಿಳುತ್ತಿರುವುದನ್ನು ಅಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುವಾಗ ಅವಳಿಗೆ ಹುಚ್ಚು ಹಿಡಿದಿದೆ ಅನಿಸುತ್ತದೆ. ಆಕೆಯನ್ನು ನೋಡು. ಅವಳು ಕೆಳಗೆ ಬೀಳುತ್ತಿದ್ದಾಳೆ ಎಂದು ಅಲ್ಲಿದ್ದ ಜನರು ಹೇಳುತ್ತಾ ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ.

    ಸಂದ್ರಾ 27ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ನಂತರ ಈ ವಿಷಯವನ್ನು ಆಕೆಯ ಗೆಳೆತಿಗೆ ಮಾಹಿತಿ ನೀಡಲಾಯಿತು. ಆಗ ಆಕೆಯ ಸ್ನೇಹಿತರೊಬ್ಬರು ಸಂದ್ರಾ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಸಂದ್ರಾ ಇಬ್ಬರು ಮಕ್ಕಳ ತಾಯಿಯಾಗಿದ್ದು, ಆಕೆ ಪನಾಮದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಸದ್ಯ ಪೊಲೀಸರು ಈ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಮಹಿಳೆ ಗಾಳಿಯ ರಭಸಕ್ಕೆ ಆಯತಪ್ಪಿ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಲೈಡರ್ ಕಿಟಕಿ ಮೂಲಕ 8ನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ದುರ್ಮರಣ

    ಸ್ಲೈಡರ್ ಕಿಟಕಿ ಮೂಲಕ 8ನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ದುರ್ಮರಣ

    ಮಂಗಳೂರು: ಎಂಟನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ.

    ಶಾನೆಲ್ ಜೆನಿಶೀಯಾ ಡಿಸೋಜಾ (5) ಮೃತ ದುರ್ದೈವಿ. ವಿಲ್ಸನ್ ಮತ್ತು ಆಲಿತಾ ದಂಪತಿಯ ಮಗು ಶಾನೆಲ್. ಇವರು ಶಕ್ತಿನಗರದ ಫ್ಲಾಟ್ ನ ಎಂಟನೇ ಮಹಡಿಯಲ್ಲಿ ವಾಸವಿದ್ದರು. ಇಂದು ಬಾಲಕಿ ಡಿಸೋಜಾ ಸ್ಲೈಡರ್ ಕಿಟಕಿ ಮೂಲಕ ಕೆಳಗೆ ಇಣುಕಿದ್ದಾಳೆ. ಆಗ ಆಯತಪ್ಪಿ ಎಂಟನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

    ಈ ಘಟನೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಟಕಿಗೆ ರಾಡ್ ಅಳವಡಿಸದೇ ಇರುವುದರಿಂದ ಈ ಅನಾಹುತ ಸಂಭವಿಸಿದೆ.