Tag: ಮಹಜರು

  • ರಾಮೇಶ್ವರಂ ಕೆಫೆ ಸ್ಫೋಟ – ಎನ್‌ಐಎಯಿಂದ ಸ್ಪಾಟ್‌ ಮಹಜರು

    ರಾಮೇಶ್ವರಂ ಕೆಫೆ ಸ್ಫೋಟ – ಎನ್‌ಐಎಯಿಂದ ಸ್ಪಾಟ್‌ ಮಹಜರು

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (The Rameshwaram Cafe Bomb Blast Case) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಇಂದು ಆರೋಪಿಗಳನ್ನು ಕರೆ ತಂದು ಸ್ಪಾಟ್‌ ಮಹಜರು ನಡೆಸುತ್ತಿದೆ.

    ಮುಂಜಾನೆ 5:30ಕ್ಕೆ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಗೆ ಆರೋಪಿಗಳಾದ ಮಸ್ಸಾವೀರ್, ಅಬ್ಧುಲ್ ಮತೀನ್ ತಹಾ ಅವರನ್ನು ಕರೆದುಕೊಂಡ ಬಂದ ಎನ್‌ಐಎ ಸ್ಥಳ ಮಹಜರು ಪ್ರಕ್ರಿಯೆ ನಡೆಸುತ್ತಿದೆ. ಇದನ್ನೂ ಓದಿ: ತಮಿಳುನಾಡಿಗೂ ಕಾವೇರಿ ಹರಿದರೂ ರೈತರಿಗೆ ತಪ್ಪದ ಕಂಟಕ!

     

    ಮಾರ್ಚ್‌ 1 ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ನಡೆದಿತ್ತು. ಹಲವು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ ಬಳಿಕ ಎನ್‌ಐಎ ಕೋಲ್ಕತ್ತಾದಲ್ಲಿ ಏಪ್ರಿಲ್‌ 12 ರಂದು ಮಸ್ಸಾವೀರ್, ಅಬ್ಧುಲ್ ಮತೀನ್ ತಹಾ ಅವರನ್ನು ಬಂಧಿಸಿತ್ತು.

    ಸ್ಥಳೀಯ ಪೊಲೀಸರ ಭದ್ರತೆಯ ನಡುವೆ ಈಗ ಎನ್‌ಐಎ ಮಹಜರು ಪ್ರಕ್ರಿಯೆ ನಡೆಸುತ್ತಿದೆ.

     

  • ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಹಾಲಶ್ರೀ ಮಠದಲ್ಲಿ ಮಹಜರು

    ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಹಾಲಶ್ರೀ ಮಠದಲ್ಲಿ ಮಹಜರು

    ವಿಜಯನಗರ: ರಾಜ್ಯದಲ್ಲಿ ಚೈತ್ರಾ ಕುಂದಾಪುರ (Chaitra Kundapur) 5 ಕೋಟಿ ರೂ. ವಂಚನೆ ಪ್ರಕರಣ ಹೆಚ್ಚು ಸದ್ದು ಮಾಡುತ್ತಿದೆ. ಪ್ರಕರಣದ ಎ3 ಆರೋಪಿ ಹಾಲಶ್ರೀ ಸ್ವಾಮೀಜಿಯನ್ನು (Halashree Swamiji) ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು (CCB Police) ಬುಧವಾರ ರಾತ್ರಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಗಡಗಲಿ ಮಠದಲ್ಲಿ ಮಹಜರು ನಡೆಸಿದ್ದಾರೆ.

    ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಮಹಾಸಂಸ್ಥಾನ ಮಠದಲ್ಲಿ 2 ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿದರು. ಮಠಕ್ಕೆ ಎಂಟ್ರಿಯಾಗುತ್ತಿದ್ದಂತೆ ತೆಂಗಿನಕಾಯಿ ಒಡೆದು ಸ್ವಾಗತ ಮಾಡಿದರು. ಮಠದ ಒಳಗೆ ಹೋಗುತ್ತಿದ್ದಂತೆ ಅಭಿನವ ಹಾಲಶ್ರೀ ಸ್ವಾಮೀಜಿಯನ್ನೊಬ್ಬರನ್ನೇ ರೂಂ ನೊಳಗೆ ಕರೆದುಕೊಂಡು ಹೋಗಿ ಮಹಜರು ಮಾಡಿದ್ದಾರೆ.

    ಹಾಲಶ್ರೀ ಇರುತ್ತಿದ್ದ ರೂಂನೊಳಗೆ ಸಿಸಿಬಿ ಪೊಲೀಸರು ಕುಟುಂಬಸ್ಥರನ್ನು ಒಳಗಡೆ ಬಿಡದೆ ಹಾಲಶ್ರೀ ಜೊತೆಗೆ ಮಹಜರು ನಡೆಸಿದರು. ಹಾಲಶ್ರೀ ಜೊತೆಗೆ ಕುಟುಂಬಸ್ಥರು ಮಾತನಾಡಲು ಅವಕಾಶ ಕೇಳಿದರು. ಒಳಗಡೆ ಅವಕಾಶ ಇಲ್ಲ, ಹೊರಗಡೆ ಬಂದಾಗಲೇ ಮಾತನಾಡಲು ಹೇಳಿದರು. ಆದರೆ ಕುಟುಂಬಸ್ಥರ ಜೊತೆಗೆ ಮಾತನಾಡಲು ಹಾಲಶ್ರೀ ಮುಜುಗರಗೊಂಡು, ಕುಟುಂಬಸ್ಥರು ಏನೇ ಕೇಳಿದರೂ ಉತ್ತರಿಸಲಿಲ್ಲ. ಇದನ್ನೂ ಓದಿ: ಬಟ್ಟೆ ಅಂಗಡಿ ಹೆಸ್ರಲ್ಲಿ ವಂಚನೆ ಆರೋಪ- ಚೈತ್ರಾ ವಿಚಾರಣೆಗೆ ಒಪ್ಪಿಸುವಂತೆ ಕೋಟ ಪೊಲೀಸರ ಮನವಿ

    ಊಟ ಮಾಡಿ ಹೋಗಿ ಎಂದು ಮನವಿ ಮಾಡಿದಾಗ, ಇಲ್ಲ ಅವರ ಊಟ ಆಗಿದೆ. ನಾವು ಯಾರೂ ಊಟ ಮಾಡಲ್ಲ ನಮ್ಮ ಊಟ ಆಗಿದೆ ಎಂದು ಹೇಳಿ ಹಾಲಶ್ರೀ ಯನ್ನು ಮಹಜರು ಮಾಡಿ ಕರೆದುಕೊಂಡು ಹೋದರು. ಮಹಜರು ವೇಳೆ ಏನೆಲ್ಲಾ ಮಾಡಿದರು ಎಂಬುವುದರ ಬಗ್ಗೆ ಕುಟುಂಬಸ್ಥರಿಗೆ ಸುಳಿವು ಸಹ ಸಿಸಿಬಿ ಪೊಲೀಸರು ಬಿಟ್ಟುಕೊಟ್ಟಿಲ್ಲ. ಪತ್ನಿ, ತಂದೆ ಹಾಗೂ ಚಿಕ್ಕಪ್ಪಂದಿರು ಏನೇ ಕೇಳಿದರೂ, ಹಾಲಶ್ರೀ ಉತ್ತರಿಸದೆ ಕೈ ಸನ್ನೆ ಮಾಡಿದರೆ ಹೊರತು, ಮಾತನಾಡಿಲ್ಲ. ಹಾಕಿಕೊಂಡಿದ್ದ ಮಾಸ್ಕ್ ಸಹ ಕುಟುಂಬಸ್ಥರ ಮುಂದೆ ತೆಗೆಯದೆ ಹಾಗೆಯೇ ಸಿಸಿಬಿ ಪೊಲೀಸರ ಜೊತೆಗೆ ತೆರಳಿದರು. ಇದನ್ನೂ ಓದಿ: ಮಗಳ ಅಪಹರಣ ಕೇಸನ್ನು ಹಿಂಪಡೆಯುವಂತೆ ಹಲ್ಲೆಗೈದು ಮಹಿಳೆಗೆ ಒತ್ತಡ ಹೇರಿದ ಪೊಲೀಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]