Tag: ಮಸ್ತಾನಮ್ಮ

  • ಹಳ್ಳಿ ಅಡುಗೆ ಮೂಲಕ ವಿಶ್ವ ವಿಖ್ಯಾತಿಗಳಿಸಿದ್ದ ಶೆಫ್ ಮಸ್ತಾನಮ್ಮ ಇನ್ನಿಲ್ಲ

    ಹಳ್ಳಿ ಅಡುಗೆ ಮೂಲಕ ವಿಶ್ವ ವಿಖ್ಯಾತಿಗಳಿಸಿದ್ದ ಶೆಫ್ ಮಸ್ತಾನಮ್ಮ ಇನ್ನಿಲ್ಲ

    ಹೈದರಾಬಾದ್: ತಮ್ಮ ಹಳ್ಳಿ ಅಡುಗೆ ಮೂಲಕವೇ ವಿಶ್ವವ್ಯಾಪಿ ಫೇಮಸ್ ಆಗಿದ್ದ ಮಸ್ತ್ ಮಸ್ತಾನಮ್ಮ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ.

    ಬರೋಬ್ಬರಿ 107 ವರ್ಷದ ಶೆಫ್ ಆಗಿ ಯೂಟ್ಯೂಬ್ ಸ್ಟಾರ್ ಆಗಿದ್ದ ಮಸ್ತಾನಮ್ಮ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಿಧನರಾಗಿದ್ದಾರೆ.

    ಮಸ್ತಾನಮ್ಮ ಅವರ ಅಂತಿಮಮಾತ್ರೆಯನ್ನು ಯಾವುದೇ ಸೆಲೆಬ್ರಿಟಿಗೂ ಕಡಿಮೆ ಇಲ್ಲದಂತೆ ನಡೆಸಲಾಯಿತು. ದಾರಿಯುದ್ದಕ್ಕೂ ರಾಶಿ ರಾಶಿ ಹೂಗಳನ್ನು ಚೆಲ್ಲಿ ಮಸ್ತಾನಮ್ಮನಿಗೆ ಅಂತಿಮ ವಿದಾಯ ಹೇಳಿದರು. ಮಸ್ತಾನಮ್ಮ ಅಡುಗೆ ನೋಡಲು ಯೂಟ್ಯೂಬ್‍ನಲ್ಲಿ ಜನ ಕಾಯುತ್ತಿದ್ದರು. ಇವರು ಸಾಂಪ್ರದಾಯಿಕ ಶೈಲಿಯಲ್ಲಿ ತರಹೇವಾರಿ ಅಡುಗೆ ಮಾಡಿ ಖ್ಯಾತಿ ಪಡೆದಿದ್ದು, ಅವರ ವಿಡಿಯೋಗಳು ಯೂಟ್ಯೂಬ್ ನಲ್ಲಿ ಲಕ್ಷ ಲಕ್ಷ ವ್ಯೂ ಕಂಡಿದೆ.

    ಅಂದಹಾಗೇ ಮಸ್ತಾನಮ್ಮ ಅವರಿಗೆ 11ನೇ ವರ್ಷದಲ್ಲಿ ಮದುವೆಯಾಗಿತ್ತು. ಆದರೆ ತಮ್ಮ 22ನೇ ವಯಸ್ಸಿಗೆ ಪತಿಯನ್ನು ಕಳೆದುಕೊಂಡಿದ್ದರು. ಆ ಬಳಿಕ ದಿನಗೂಲಿ ಕಾರ್ಮಿಕರಾಗಿ ದುಡಿದು ತಮ್ಮ ಮಕ್ಕಳನ್ನು ಸಲುಹಿದ್ದರು. ಇವರ ಖ್ಯಾತಿ ಯೂಟ್ಯೂಬ್ ಮೂಲಕ ವಿಶ್ವ ಖ್ಯಾತಿ ಪಡೆಯಿತು.  ಕೇವಲ 2 ವರ್ಷದಲ್ಲಿ ದೇಶದ ಅತಿ ಹಿರಿಯ ಯೂಟ್ಯೂಬ್ ಸ್ಟಾರ್ ಎನಿಸಿಕೊಂಡ ಅವರ ಹೆಸರಿನ `ಮಾಸ್ತಾನಮ್ಮ ಚಾನೆಲ್ 12 ಲಕ್ಷ ಜನ ಚಂದಾದಾರರಿದ್ದಾರೆ. ಅಲ್ಲದೇ ಖ್ಯಾತ ಬಿಬಿಸಿ ವಾಹಿನಿ ಕೂಡ ವಿಶೇಷ ಕಾರ್ಯಕ್ರಮ ಮಾಡಿ ಪ್ರಸಾರ ಮಾಡಿತ್ತು.

    https://www.youtube.com/watch?v=3wAYJEBNrE8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಯೂಟ್ಯೂಬ್ ಸ್ಟಾರ್ ಆದ 106ರ ಅಜ್ಜಿ

    ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಯೂಟ್ಯೂಬ್ ಸ್ಟಾರ್ ಆದ 106ರ ಅಜ್ಜಿ

    – ಇವರು ಈಗ ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್

    ಹೈದರಾಬಾದ್: ಯೂಟ್ಯೂಬ್‍ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್‍ಗಳಿವೆ. ಚೆಫ್‍ಗಳಿಂದ ಹಿಡಿದು ಗೃಹಿಣಿಯರೂ ಕೂಡ ಯೂಟ್ಯೂಬ್‍ನಲ್ಲಿ ಅಡುಗೆ ವಿಡಿಯೋಗಳನ್ನ ಹಾಕ್ತಿರ್ತಾರೆ. ಇವರೆಲ್ಲರ ಮಧ್ಯೆ ತನ್ನ ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ 106 ವರ್ಷದ ವದ್ಧೆಯೊಬ್ಬರು ಈಗ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.

    ಆಂಧ್ರಪ್ರದೇಶದ ಮಸ್ತಾನಮ್ಮ ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್ ಎನಿಸಿಕೊಂಡಿದ್ದಾರೆ. ಮಸ್ತಾನಮ್ಮ ಅವರು ಕಂಟ್ರಿ ಫುಡ್ಸ್ ಎಂಬ ಸ್ವಂತ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಮಸ್ತಾನಮ್ಮ ಅವರ ಚಾನಲ್‍ಗೆ ಸದ್ಯಕ್ಕೆ 2 ಲಕ್ಷದ 61 ಸಾವಿರಕ್ಕೂ ಹೆಚ್ಚು ಸಬ್ಸ್‍ಸ್ಕ್ರೈಬರ್‍ಗಳಿದ್ದಾರೆ.

    ಹಳ್ಳಿ ವಾತಾವರಣದಲ್ಲಿ, ಸೌದೆ ಒಲೆಯಲ್ಲಿ ಮಸ್ತಾನಮ್ಮ ಅಡುಗೆ ಮಾಡ್ತಾರೆ. ಚಿಕನ್ ಬಿರಿಯಾನಿ, ಮೀನು ಸಾರು, ಮೊಟ್ಟೆಯ ರೆಸಿಪಿಗಳು, ಬದನೆಕಾಯಿ ಮಸಾಲಾ, ಬೆಂಡೇಕಾಯಿ ಫ್ರೈ, ಫ್ರೆಂಚ್ ಫ್ರೈಸ್ ಹೀಗೆ ವಿವಿಧ ಬಗೆಯ ವೆಜ್ ಹಾಗೂ ನಾನ್ ವೆಜ್ ಅಡುಗೆಗಳನ್ನ ಮಾಡೋದು ಹೇಗೆ ಅನ್ನೋದನ್ನ ಮಸ್ತಾನಮ್ಮ ವಿಡಿಯೋಗಳಲ್ಲಿ ತೋರಿಸಿಕೊಡ್ತಾರೆ. ಅಜ್ಜಿಯ ಅಡುಗೆಗಳನ್ನ ತುಂಬಾ ಇಷ್ಟ ಪಡೋ ಮಸ್ತಾನಮ್ಮ ಅವರ ಮರಿಮೊಮ್ಮಗ ಕೆ. ಲಕ್ಷ್ಮಣ್ ಈ ಯೂಟ್ಯೂಬ್ ಚಾನಲ್‍ನ ನಿರ್ವಹಣೆ ಮಾಡ್ತಾರೆ.

    ಒಂದು ರಾತ್ರಿ ತುಂಬಾ ಹಸಿವಾಗಿ ನಾನು ಮತ್ತು ನನ್ನ ಸ್ನೇಹಿತರು ಸೇರಿ ಅಡುಗೆ ಮಾಡಿದೆವು. ಜನರು ಅಡುಗೆ ಮಾಡೋದನ್ನ ಕಲಿಯಲು ಸಹಾಯವಾಗವಂತೆ ಯೂಟ್ಯೂಬ್ ಚಾನಲ್ ಶುರು ಮಾಡಬೇಕು ಅಂದುಕೊಂಡೆವು. ಆಶ್ಚರ್ಯಕರ ರೀತಿಯಲ್ಲಿ ನಮ್ಮ ಮೊದಲ ವಿಡಿಯೋ ವೈರಲ್ ಆಯ್ತು. ಆಗಲೇ ಈ ಚಾನಲ್ ಶುರು ಮಾಡಿದ್ದು. ತಾಜಾ ಸಾಮಗ್ರಿಗಳನ್ನ ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ಹೇಗೆ ಅಡುಗೆ ಮಾಡಬಹುದು ಅನ್ನೋದನ್ನ ಜನರು ಅರ್ಥ ಮಾಡಿಕೊಂಡು ಕಲಿತುಕೊಳ್ಳಲು ನಮ್ಮ ಅಜ್ಜಿಯ ಸಹಾಯ ಪಡೆದು ಚಾನಲ್ ಆರಂಭಿಸಿದೆವು. ಮೊದಲಿಗೆ ನಾವು ವಿಡಿಯೋ ಮಾಡುವಾಗ ಅಜ್ಜಿಗೆ ಏನಾಗುತ್ತಿದೆ ಎಂದು ಗೊತ್ತಾಗುತ್ತಿರಲಿಲ್ಲ. ಆದ್ರೆ ಅವರಿಗೆ ಇದರ ಬಗ್ಗೆ ಅರ್ಥವಾದ ನಂತರ ತುಂಬಾ ಖುಷಿಪಟ್ರು ಅಂತಾರೆ ಲಕ್ಷ್ಮಣ್.

                           

    ಗ್ರಾಮದಲ್ಲಿ ಮಸ್ತಾನಮ್ಮ ಅವರ ಅಡುಗೆ ಅಂದ್ರೆ ಎಲ್ಲರಿಗೂ ಪ್ರಿಯ. ವಿಡಿಯೋಗಳಲ್ಲಿ ಮಸ್ತಾನಮ್ಮ ಅವರು ಅಡುಗೆ ಮಾಡಿ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಬಡಿಸೋದನ್ನ ನೋಡಬಹುದು.

    https://www.youtube.com/watch?v=Y7zFZclLd14