Tag: ಮಸ್ತಕಾಭಿಷೇಕ

  • ಹುಣಸೂರಿನ ಬಾಹುಬಲಿಗೆ ವೈಭವದ ಮಜ್ಜನ

    ಹುಣಸೂರಿನ ಬಾಹುಬಲಿಗೆ ವೈಭವದ ಮಜ್ಜನ

    ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೊಮ್ಮಟಗಿರಿಯಲ್ಲಿರುವ ಬಾಹುಬಲಿಗೆ 69ನೇ ಮಸ್ತಕಾಭಿಷೇಕ ಭಾನುವಾರ ವಿಜೃಂಭಣೆಯಿಂದ ನಡೆಯಿತು.

    ಮಸ್ತಕಾಭಿಷೇಕಕ್ಕೆ ದೇವೇಂದ್ರ ಭಟ್ಟಾಚಾರ್ಯ ಸ್ವಾಮೀಜಿ ಚಾಲನೆ ನೀಡಿದ್ದು, ವೈರಾಗ್ಯ ಮೂರ್ತಿ ಮಹಾ ಮಜ್ಜನದಲ್ಲಿ ಮಿಂದೆದ್ದಿದೆ. ನೀರು, ಶ್ರೀಗಂಧ, ಅರಿಶಿಣ, ಕ್ಷೀರ, ಕಬ್ಬಿನ ಹಾಲು, ಕೇಸರಿ, ಅಷ್ಠಗಂಧ, ಚಂದನ, ಕುಂಕುಮ ಸೇರಿದಂತೆ ವಿವಿಧ ದ್ರವ್ಯಗಳಿಂದ ಬಾಹುಬಲಿ ಪ್ರತಿಮೆಗೆ ಅಭಿಷೇಕ ಮಾಡಲಾಯಿತು.

    1949ರಲ್ಲಿ ಮೊದಲ ಮಸ್ತಕಾಭಿಷೇಕ ನಡೆದಿತ್ತು. ಮೊದಲ ಮಸ್ತಕಾಭಿಷೇಕಕ್ಕೆ ಜಯಚಾಮರಾಜ ಒಡೆಯರ್ ಸಾಕ್ಷಿಯಾಗಿದ್ದರು. ಬಾಹುಬಲಿ ಸ್ಥಳದಲ್ಲಿ 80 ಮೆಟ್ಟಿಲನ್ನು ಒಡೆಯರ್ ನಿರ್ಮಿಸಿದ್ದರು. ಭಾನುವಾರ ನಡೆದ ಮಸ್ತಕಾಭಿಷೇಕ ಕಾರ್ಯಕ್ಕೆ ಎಲ್ಲಾ ಜನಪ್ರತಿನಿಧಿಗಳು ಗೈರಾಗಿದ್ದರು.

    ಬಾಹುಬಲಿ ಮೂರ್ತಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡುವಾಗ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ಅಭಿಷೇಕವನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಸ್ತಕಾಭಿಷೇಕ ಕಾಮಗಾರಿಯಲ್ಲಿ ಕಮಿಷನ್ ಪಡೆದ ಆರೋಪ- ಎಚ್‍ಡಿಡಿಗೆ ಸಚಿವ ಮಂಜು ತಿರುಗೇಟು

    ಮಸ್ತಕಾಭಿಷೇಕ ಕಾಮಗಾರಿಯಲ್ಲಿ ಕಮಿಷನ್ ಪಡೆದ ಆರೋಪ- ಎಚ್‍ಡಿಡಿಗೆ ಸಚಿವ ಮಂಜು ತಿರುಗೇಟು

    ಹಾಸನ: ಮಸ್ತಕಾಭಿಷೇಕ ಕಾಮಗಾರಿಯಲ್ಲಿ ಕಮೀಷನ್ ಪಡೆದಿರುವುದಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಆರೋಪಕ್ಕೆ ಸಚಿವ ಎ ಮಂಜು ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸ್ತಕಾಭಿಷೇಕ ಕಾಮಗಾರಿಯಲ್ಲಿ ನಾನು ಕಮೀಷನ್ ಪಡೆದಿರುವುದಾಗಿ ಮಾಜಿ ಪ್ರಧಾನಿಯವರು ಹೇಳಿದ್ದಾರೆ. ಮಾಜಿ ಪ್ರಧಾನಿ ಆರೋಪ ನನಗೆ ಅತೀವ ನೋವು ತಂದಿದೆ. 2006 ಮಸ್ತಕಾಭಿಷೇಕ ಕಾಮಗಾರಿ ದಾಖಲೆಯನ್ನು ಅವರು ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದ ಮಂಜು, ಈ ಕುರಿತು ನಾನು ಬೆಂಗಳೂರಿನಲ್ಲೇ ಸುದ್ದಿಗೋಷ್ಠಿ ನಡೆಸಿ ಕಾಮಗಾರಿಯ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಅಂತ ಸಚಿವರು ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ನಾನು ನಡೆದು ಬಂದ ದಾರಿ, ಹಿನ್ನೆಲೆ ಎಲ್ಲಾ ಹೇಳುವೆ. ಚುನಾವಣೆ ಸಂದರ್ಭದಲ್ಲಿ ಸಣ್ಣ ವಿಷಯಕ್ಕೆ ಖ್ಯಾತೆ ತೆಗೆಯುತ್ತಿದ್ದಾರೆ. ನಾನು ರಾಜಕೀಯದಲ್ಲಿದ್ದಾಗ ಕುಮಾರಸ್ವಾಮಿ ರಾಜಕೀಯದಲ್ಲಿ ಇರಲಿಲ್ಲ. ಅನಾಗರಿಕನಾಗಿ ನಾನು ಮಾತನಾಡಿಲ್ಲ, ಅವರಂತೆ ಛಿ, ಥೂ ಅಂತ ಮಾತನಾಡಿಲ್ಲ. ಇದು ದೇಶಕ್ಕೆ, ಮತದಾರರಿಗೆ ನಾಚಿಗೇಡಿನ ವಿಷಯವಾಗಿದೆ. ದೇವೇಗೌಡರು ಬಾರದೇ ಹೋದ್ರೆ ಮಸ್ತಕಾಭಿಷೇಕ ನಿಂತು ಹೋಗುತ್ತಾ? ಇಂಥ ಮಾತಾಡುವುದನ್ನು ನಿಲ್ಲಿಸಬೇಕು. ಇಲ್ಲವಾದ್ರೆ ನನಗೂ ಮಾತನಾಡುವುದು ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

    ಡಿಸಿ ವರ್ಗ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಯಾವುದೇ ಅಧಿಕಾರಿ ಸರಕಾರದ ಸೇವಕರು, ಹುದ್ದೆ ಮುಖ್ಯವಲ್ಲ, ಕಾರ್ಯ ನಿರ್ವಹಣೆ ಮುಖ್ಯ ಅಂತ ಅವರು ತಿಳಿಸಿದ್ರು.