Tag: ಮಸ್ಕಿ

  • ಸೋನು ಶ್ರೀನಿವಾಸ ಗೌಡ ಯಾವುದೇ ಹಣದ ಸಹಾಯ ಮಾಡಿಲ್ಲ- ಪೊಲೀಸರಿಂದ ಸ್ಥಳ ಮಹಜರು

    ಸೋನು ಶ್ರೀನಿವಾಸ ಗೌಡ ಯಾವುದೇ ಹಣದ ಸಹಾಯ ಮಾಡಿಲ್ಲ- ಪೊಲೀಸರಿಂದ ಸ್ಥಳ ಮಹಜರು

    ರಾಯಚೂರು: ಕಾನೂನುಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸೋನು ಶ್ರೀನಿವಾಸ ಗೌಡಗೆ (Sonu Srinivas Gowda) ಮತ್ತಷ್ಟು ಸಂಕಷ್ಟ ಎದುರಾಗಿದೆ.‌

    ರಾಯಚೂರಿನ ಮಸ್ಕಿ (Maski) ತಾಲೂಕಿನ ಕಾಚಾಪುರದಲ್ಲಿ ಪೊಲೀಸರು (Police) ಸ್ಥಳ ಮಹಜರು ನಡೆಸಿದ್ದಾರೆ. ಸೋನು ಗೌಡಳನ್ನ ಸಹ ಬಾಡರಳ್ಳಿ ಪೊಲೀಸರು ರಾಯಚೂರು (Raichuru) ಜಿಲ್ಲೆಗೆ ಈಗಾಗಲೇ ಕರೆದುಕೊಂಡು ಬಂದಿದ್ದಾರೆ. ಕಾಚಾಪುರ ಗ್ರಾಮಕ್ಕೆ ಸೋನುಗೌಡಳನ್ನ ಕರೆದುಕೊಂಡು ಬಂದು ಮಗುವಿನ ಮನೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕಲಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ

     ಈ ಮಧ್ಯೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಮಗುವಿನ ಚಿಕ್ಕಪ್ಪ ಸೋನುಗೌಡ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವನ್ನ ನಾವು ದತ್ತು ನೀಡಿಲ್ಲ, ಆಕೆ ನಮಗೆ ಯಾವುದೇ ಹಣದ‌ ಸಹಾಯ ಮಾಡಿಲ್ಲ. ನಮ್ಮ ಮಗಳನ್ನು ಓದಿಸುತ್ತೇನೆ. ಚೆನ್ನಾಗಿ ಸಾಕುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಈಗ ದತ್ತು ತೆಗೆದುಕೊಂಡಿದ್ದೇನೆ ಅಂತ ಹೇಳಿರುವುದು ಸರಿಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ – ಕಾಂಗ್ರೆಸ್‌ನ ನಾಲ್ಕನೇ ಪಟ್ಟಿ ರಿಲೀಸ್

  • ಬೂದಿ ಮುಚ್ಚಿದ ಕೆಂಡದಂತಾದ ಮಸ್ಕಿ ಕ್ಷೇತ್ರ – ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

    ಬೂದಿ ಮುಚ್ಚಿದ ಕೆಂಡದಂತಾದ ಮಸ್ಕಿ ಕ್ಷೇತ್ರ – ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

    ರಾಯಚೂರು: ಮೇ 10 ರಂದು ಸಂಜೆ ಮತದಾನದ ಬಳಿಕ ಜಿಲ್ಲೆಯ ಮಸ್ಕಿ (Maski) ಪಟ್ಟಣದಲ್ಲಿ ನಡೆದ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಕಾರ್ಯಕರ್ತರ ಗಲಾಟೆ ಹಿನ್ನೆಲೆ 12 ಜನರ ವಿರುದ್ಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ನೀಡಲು ಯಾರೂ ಮುಂದೆ ಬಾರದ ಹಿನ್ನೆಲೆ ಪೊಲೀಸರೇ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಕೊಂಡಿದ್ದಾರೆ.

    ಗಲಾಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಸಹೋದರ ಸಿದ್ದನಗೌಡ ಸೇರಿ ಹಲವರಿಗೆ ಗಾಯಗಳಾಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಕಡೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್‌ಗೆ ಕೊಲೆ ಬೆದರಿಕೆ ಕರೆಗಳು ಬಂದಿದ್ದು, ಈ ಹಿನ್ನೆಲೆ ಪೊಲೀಸರಿಗೆ ಪ್ರತಾಪ್ ಗೌಡ ಪಾಟೀಲ್ ದೂರು ನೀಡಿದ್ದಾರೆ. ಹೀಗಾಗಿ ಗಲಾಟೆ ಹಿನ್ನೆಲೆ ಇಡೀ ಮಸ್ಕಿ ಕ್ಷೇತ್ರ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇದನ್ನೂ ಓದಿ: ಮತ್ತೆ ಕರ್ನಾಟಕದಲ್ಲಿ ರೆಸಾರ್ಟ್‌ ರಾಜಕೀಯ? – ಶಾಸಕರು, ಪಕ್ಷೇತರರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್‌ ತಂತ್ರ

    ಮತ ಎಣಿಕೆ ಹಿನ್ನೆಲೆ ಮಸ್ಕಿ ಸೇರಿ ಜಿಲ್ಲೆಯಾದ್ಯಂತ ಮೇ 13 ರ ಬೆಳಗ್ಗೆ 6 ಗಂಟೆಯಿಂದ ಮೇ 14 ರಾತ್ರಿ 10 ಗಂಟೆಯವರೆಗೆ ಕಲಂ 144 ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸ್ವಗ್ರಾಮ ತುರವಿಹಾಳ ಹಾಗೂ ಮಸ್ಕಿ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳೀಯ ಪೊಲೀಸ್ ಸಿಬ್ಬಂದಿ ಜೊತೆಗೆ ಕೆಎಸ್‌ಆರ್‌ಪಿ ಹಾಗೂ ಕೇಂದ್ರ ಸಶಸ್ತ್ರ ಮೀಸಲು ಪಡೆ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ಮುಖಂಡರ ಮಧ್ಯೆ ಗಲಾಟೆ – ಕೈ ಮುಖಂಡನಿಗೆ ಚಾಕು

  • ಬಿಜೆಪಿ ಅಭ್ಯರ್ಥಿಯ ತದ್ರೂಪಿ ಪಕ್ಷೇತರವಾಗಿ ಸ್ಪರ್ಧೆ – ಮತದಾರರಲ್ಲಿ ಗೊಂದಲ ಸೃಷ್ಟಿ ಯತ್ನದ ಆರೋಪ

    ಬಿಜೆಪಿ ಅಭ್ಯರ್ಥಿಯ ತದ್ರೂಪಿ ಪಕ್ಷೇತರವಾಗಿ ಸ್ಪರ್ಧೆ – ಮತದಾರರಲ್ಲಿ ಗೊಂದಲ ಸೃಷ್ಟಿ ಯತ್ನದ ಆರೋಪ

    ರಾಯಚೂರು: ಜಿಲ್ಲೆಯ ಮಸ್ಕಿ (Maski) ಕ್ಷೇತ್ರದಲ್ಲಿ ಈ ಬಾರಿ ಅವಳಿ, ಜವಳಿ ಅನ್ನುವಷ್ಟರ ಮಟ್ಟಿಗೆ ಒಂದೇ ಹೋಲಿಕೆಯ ಇಬ್ಬರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್‌ರನ್ನೇ (Pratap Gowda Patil) ಹೋಲುವ ರೀತಿಯ ಫೋಟೋವನ್ನು ನೀಡಿ ಪಕ್ಷೇತರ ಅಭ್ಯರ್ಥಿ ಮತದಾರರಲ್ಲಿ ಗೊಂದಲ ಸೃಷ್ಟಿಸಿದ್ದಾರೆ.

    35 ವರ್ಷದ ಪಕ್ಷೇತರ ಅಭ್ಯರ್ಥಿ ಈಶಪ್ಪ, 68 ವರ್ಷದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಹೋಲಿಕೆ ಹೊಂದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈಶಪ್ಪ ಅಂತಲೇ ಹೆಸರು ಇದೆ. ಆದರೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾತ್ರ ಈಶಪ್ಪ ಗೌಡ ಪಾಟೀಲ್ ಎಂದು ಹಾಕಿಸಿಕೊಂಡಿದ್ದಾನೆ. ಹೆಸರು ಮಾತ್ರ ಬದಲಾವಣೆಯಾಗಿಲ್ಲ, ರೂಪ ಕೂಡ ಸಂಪೂರ್ಣ ಬದಲಾಗಿದೆ. ಮತದಾನ ವೇಳೆ ಮತದಾರರನ್ನು ಗೊಂದಲಕ್ಕೀಡು ಮಾಡಿ ಬಿಜೆಪಿ (BJP) ಮತಗಳನ್ನು ಅಡ್ಡದಾರಿಯಲ್ಲಿ ಸೆಳೆಯಲು ಕಾಂಗ್ರೆಸ್ ಮಾಡಿರುವ ತಂತ್ರ ಅಂತ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

    ಈಶಪ್ಪ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ (Congress) ಅಭ್ಯರ್ಥಿ ಹಾಲಿ ಶಾಸಕ ಬಸನಗೌಡ ತುರವಿಹಾಳ ಸಹೋದರ ಸಿದ್ದನಗೌಡ ಸೂಚಕರಾಗಿರುವುದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ. ಈಶಪ್ಪ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಂತ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಪರ ಅಖಾಡಕ್ಕಿಳಿದ ಪತ್ನಿ – ಕನಕಪುರದ ಹಲವೆಡೆ ಪ್ರಚಾರ

    2021ರ ಉಪಚುನಾವಣೆಯಲ್ಲಿ ಬಸನಗೌಡ ತುರವಿಹಾಳ ವಿರುದ್ಧ ಪ್ರತಾಪ್ ಗೌಡ ಪಾಟೀಲ್ ಸೋತಿದ್ದರು. ಈಗಲೂ ಈ ಇಬ್ಬರು ಅಭ್ಯರ್ಥಿಗಳ ನಡುವೆಯೇ ಜಿದ್ದಾಜಿದ್ದಿನ ಫೈಟ್ ಇದೆ. ಉಪಚುನಾವಣೆ ಸೋಲಿನಿಂದ ಪಾಠ ಕಲಿತಂತೆ ಕಾಣುವ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ 4ನೇ ಬಾರಿಗೆ ಶಾಸಕರಾಗುವ ಹೆಬ್ಬಯಕೆಯೊಂದಿಗೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

    ಉಪಚುನಾವಣೆ ಗೆಲುವಿನ ಬಳಿಕ ಅಲ್ಪಾವಧಿಗೆ ಶಾಸಕರಾದ ಬಸನಗೌಡ ತುರವಿಹಾಳ ಮತ್ತೊಂದು ಅವಧಿಗೆ ಶಾಸಕರಾಗಲು ಕ್ಷೇತ್ರದಲ್ಲಿ ಭರ್ಜರಿ ಓಡಾಟ ನಡೆಸಿದ್ದಾರೆ. ಇದರ ಮಧ್ಯೆ ಪಕ್ಷೇತರ ಅಭ್ಯರ್ಥಿ ಈಶಪ್ಪ ತನ್ನ ಹೆಸರು, ರೂಪ ಬದಲಿಸಿಕೊಂಡು ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ಮುಂದಿನ ಸಿಎಂ ಸಿ.ಟಿ.ರವಿ ಆಗಲಿ: ಈಶ್ವರಪ್ಪ ಘೋಷಣೆ

  • ಮಸ್ಕಿ ಬಿಜೆಪಿ ಕಚೇರಿ ಮುಂದೆ ವಾಮಾಚಾರದ ಶಂಕೆ: ಕಾರ್ಯಕರ್ತರ ಆಕ್ರೋಶ

    ಮಸ್ಕಿ ಬಿಜೆಪಿ ಕಚೇರಿ ಮುಂದೆ ವಾಮಾಚಾರದ ಶಂಕೆ: ಕಾರ್ಯಕರ್ತರ ಆಕ್ರೋಶ

    ರಾಯಚೂರು: ಮಸ್ಕಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಬಿಜೆಪಿ ಕಚೇರಿ ಎದುರು ವಾಮಚಾರದ (Witchcraft) ಶಂಕೆ ವ್ಯಕ್ತವಾಗಿದೆ. ಕಚೇರಿ ಮುಂಭಾಗದ ಮೂರು ರಸ್ತೆಗಳು ಸೇರುವ ಜಾಗದಲ್ಲಿ ರಾತ್ರಿ ವೇಳೆ ಅಪರಿಚಿತರು ಪೂಜೆ ನಡೆಸಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

    ಬಿಂದಿಗೆಯಲ್ಲಿ ಎಕ್ಕದ ಎಲೆ, ರಸ್ತೆಯಲ್ಲಿ ಐದು ಸಣ್ಣ ಕಲ್ಲುಗಳನ್ನ ಇಟ್ಟು ಪೂಜಿಸಲಾಗಿದೆ. ಬಿಜೆಪಿ (BJP) ಕಚೇರಿ ಮುಂಭಾಗದಲ್ಲೇ ಪೂಜೆ ನಡೆದಿರುವುದರಿಂದ ಇದು ವಿರೋಧ ಪಕ್ಷದವರ ಕೃತ್ಯ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಕಾನ್ಸ್‌ಟೇಬಲ್ ಆಯ್ಕೆ

    ಮಸ್ಕಿ (Maski) ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕಾದಾಟವಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ (Congress) ಮಧ್ಯೆ ತೀವ್ರ ಪೈಪೋಟಿಯಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಎರಡೂ ಪಕ್ಷದ ಮುಖಂಡರು ಪ್ರಚಾರದಲ್ಲಿ ತೊಡಗಿದ್ದಾರೆ. ಕಚೇರಿ ಮುಂದಿನ ಬೆಳವಣಿಗೆಗೆ ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: 4 ಚುನಾವಣೆಯಲ್ಲೂ ಜಾತಿ ದಂಡ, ಸಿಟಿ ರವಿ ಗೆಲುವಿಗೆ ಹಿಂದುತ್ವ – ಅಭಿವೃದ್ಧಿಯೇ ಮಾನದಂಡ

  • ಏನಯ್ಯ ಸತೀಶಾ  ಟೆನ್ಷನ್ ಕೊಡ್ತಿದಿಯಲ್ಲಪ್ಪ: ಸಿದ್ದರಾಮಯ್ಯ

    ಏನಯ್ಯ ಸತೀಶಾ ಟೆನ್ಷನ್ ಕೊಡ್ತಿದಿಯಲ್ಲಪ್ಪ: ಸಿದ್ದರಾಮಯ್ಯ

    ಬೆಂಗಳೂರು: ಏನಯ್ಯ ಸತೀಶಾ ಟೆನ್ಷನ್ ಕೊಡ್ತಿದಿಯಲ್ಲಪ್ಪ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದಾರೆ.

    ಉಪಚುನಾವಣೆಯಲ್ಲಿ ಇಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಗೆಲುವಿನ ನಗೆಬೀರಿರುವ ಕಾಂಗ್ರೆಸ್ ಬೆಳಗಾವಿ ಕ್ಷೇತ್ರದ ರಿಸಲ್ಟ್‍ಗಾಗಿ ಕಾಯುತ್ತಿದೆ. ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ. ಇಲ್ಲಾ ಸಾರ್ 30 ಸಾವಿರ ಓಟ್‍ನಲ್ಲಿ ಗೆಲ್ಲುತ್ತೇನೆ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಒಳ್ಳೆದಾಗಲಿ ಗೆದ್ದು ಬಾ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.

    ಉಪಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ಗೆಲವು ಸಾಧಿಸಿದ ಬಸವನಗೌಡ ತುರವಿಹಾಳ್‍ಗೆ ಶುಭ ಹಾರೈಸಿದ ಸಿದ್ದರಾಮಯ್ಯ. ಅಭಿನಂದನೆ ಕಣಯ್ಯ ನಿನಗೆ. 2 ವರ್ಷ ಟೈಮಿದೆ ಚೆನ್ನಾಗಿ ಕೆಲಸ ಮಾಡಿ ಮತ್ತೆ ನೀನೆ ಗೆಲ್ಲಬೇಕು. ನಾಳೆ ಎಂಎಲ್‍ಗಳ ವಚ್ರ್ಯೂವಲ್ ಮೀಟಿಂಗ್ ಕರೆದಿದ್ದೇನೆ ನೀನು ಭಾಗವಹಿಸು. ಲಾಕ್‍ಡೌನ್ ಎಲ್ಲಾ ಮುಗಿದ ಮೇಲೆ ಬಂದು ಭೇಟಿ ಅಗಯ್ಯ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.

    ಮಸ್ಕಿಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದೇವೆ. ಮಸ್ಕಿ ಕ್ಷೇತ್ರದ ಅಭ್ಯರ್ಥಿ ತುರುವಿಹಾಳ್‍ಗೆ ಕರೆ ಮಾಡಿ ಅಭಿನಂದನೆ ಹೇಳಿದ್ದೇನೆ. ಯಾರೂ ಸಂಭ್ರಮ ಮಾಡದಂತೆ ಸೂಚನೆ ನೀಡಿದ್ದೇನೆ. ಲಾಕ್‍ಡೌನ್ ಮುಗಿದ ನಂತರ ಬಂದು ಭೇಟಿ ಆಗುವಂತೆ ಸೂಚನೆ ಕೊಡಲಾಗಿದೆ. ಕಾರ್ಯಕರ್ತರು ಯಾರೂ ಸಂಭ್ರಮ ಮಾಡಬಾರದು ಕೋವಿಡ್ ನಿಯಮ ಪಾಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

  • ದೇಶದಲ್ಲಿ ಬಿಜೆಪಿ ಪರವಾದ ಅಲೆ ಹೆಚ್ಚಾಗಿದ್ದು, ಅಭಿಮಾನ ಜಾಸ್ತಿಯಾಗಿದೆ – ಕಟೀಲ್

    ದೇಶದಲ್ಲಿ ಬಿಜೆಪಿ ಪರವಾದ ಅಲೆ ಹೆಚ್ಚಾಗಿದ್ದು, ಅಭಿಮಾನ ಜಾಸ್ತಿಯಾಗಿದೆ – ಕಟೀಲ್

    ಮಂಗಳೂರು: ದೇಶದಲ್ಲಿ ಬಿಜೆಪಿ ಪರವಾದ ಅಲೆ ಹೆಚ್ಚಾಗಿದೆ. ಜನರ ಅಭಿಮಾನ ಜಾಸ್ತಿಯಾಗಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ಪಂಚರಾಜ್ಯ, ಕರ್ನಾಟಕದ ಉಪಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಪಶ್ಷಿಮ ಬಂಗಾಳ ಫಲಿತಾಂಶವೂ ಬಿಜೆಪಿಯ ದೊಡ್ಡ ಸಾಧನೆಯಾಗಿದ್ದು, ಅಸ್ಸಾಂನಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನದ ಜೊತೆ ಸರ್ಕಾರವೂ ಉಳಿದಿದೆ. ಪುದುಚೇರಿಯಲ್ಲಿ ಶೂನ್ಯದಿಂದ ಹನ್ನೊಂದು ಸ್ಥಾನಕ್ಕೆ ಬಂದಿದ್ದೇವೆ. ಸಂಜೆಯೊಳಗೆ ಸರಿಯಾದ ಚಿತ್ರಣ ತಿಳಿಯುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು.

     ಕಳೆದ ಬಾರಿಗಿಂತ ಬಿಜೆಪಿಯ ವೋಟಿಂಗ್ ಪಸರ್ಂಟೇಜ್ ಹೆಚ್ಚಾಗಿದೆ. ಇದು ನರೇಂದ್ರ ಮೋದಿ ಸರ್ಕಾರದ ಪರ ಒಲವಿದೆ ಎಂಬುದನ್ನು ಸಾಬೀತು ಮಾಡಿದೆ. ಬಸವಕಲ್ಯಾಣ ನಮ್ಮ ಸ್ಥಾನ ಅಲ್ಲದಿದ್ದರೂ ಅಲ್ಲಿ ನಮಗೆ ಗೆಲುವು ಸಿಕ್ಕಿದೆ ಎಂದರು.

    ಬೆಳಗಾವಿಯಲ್ಲಿ ಸಂಜೆಯೊಳಗೆ ನಮ್ಮ ಪರವಾಗಿ ಫಲಿತಾಂಶ ಬರುತ್ತೆ ಎಂಬ ವಿಶ್ವಾಸವಿದೆ. ಮಸ್ಕಿಯಲ್ಲಿ ಸೋಲಾಗಿದೆ ಸೋಲನ್ನು ಒಪ್ಪಿಕೊಳ್ಳಬೇಕು. ಚುನಾವಣೆಯಿಂದ ಚುನಾವಣೆಗೆ ವ್ಯತ್ಯಾಸ ಇದ್ದೇ ಇರುತ್ತದೆ. ಉಪಚುನಾವಣೆಗಳು ನಡೆದಾಗ ಒಂದಷ್ಟು ಗೊಂದಲಗಳು ಇರುತ್ತದೆ.

    ಮಸ್ಕಿಯಲ್ಲಿ ಯಾಕೆ ಸೋಲಾಯಿತು ಎಂದು ಎರಡು ದಿನದಲ್ಲಿ ಅವಲೋಕನ ನಡೆಸುತ್ತೇವೆ. ಯಾವ ಕಾರ್ಯಕರ್ತರು ದೃತಿಗೆಡುವ ಅವಶ್ಯಕತೆ ಇಲ್ಲ. ಕೋವಿಡ್ ಮಧ್ಯೆಯೂ ಮತದಾನ ಮಾಡಿದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

     ಗೆಲುವಿನ ಹಿನ್ನೆಲೆ ಕಾರ್ಯಕರ್ತರು ವಿಜಯೋತ್ಸವ ಮಾಡಬೇಡಿ. ಚುನಾವಣೆ ಬರುತ್ತೆ, ಗೆಲುವು ಮುಂದೆಯೂ ಇರುತ್ತೆ. ಕೋವಿಡ್ ಸಂತ್ರಸ್ತರ ಸೇವಾ ಕಾರ್ಯ ಮಾಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಕಟೀಲ್ ಮನವಿ ಮಾಡಿದರು.

  • 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮಸ್ಕಿಯಲ್ಲಿ ಕಾಂಗ್ರೆಸ್ ಗೆಲುವು

    25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮಸ್ಕಿಯಲ್ಲಿ ಕಾಂಗ್ರೆಸ್ ಗೆಲುವು

    ಮಸ್ಕಿ: ಕಾಂಗ್ರೆಸ್‍ನ ಬಸನಗೌಡ ತುರ್ವಿಹಾಳ ಅವರು ಬಿಜೆಪಿಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರನ್ನು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.

     ಆರಂಭದಿಂದಲೂ ಮುನ್ನಡೆ ಉಳಿಸಿಕೊಂಡು ಬಂದಿದ್ದ ಅವರು ವಿಜಯಿಯಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಚುನಾವಣಾ ಮತ ಎಣಿಕೆಯ ಹಲವು ಸುತ್ತುಗಳು ಬಾಕಿ ಇರುವಾಗಲೇ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಸೋಲು ಒಪ್ಪಿಕೊಂಡಿದ್ದರು. ಅದರಂತೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ನಗೆಯನ್ನು ಬೀರಿದ್ದಾರೆ.

     ನಮ್ಮವರೇ ನಮಗೆ ಮೋಸ ಮಾಡಿದರು. ಈ ಪರಿಸ್ಥಿತಿ ಕಾಂಗ್ರೆಸ್ ಗೆ ಅನುಕೂಲವಾಗಿದೆ. ಕ್ಷೇತ್ರದಲ್ಲಿ ನನ್ನ ಮೇಲೆ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂದು ಪ್ರತಾಪ್ ಗೌಡ ಪಾಟೀಲ್ ದೂರಿದ್ದರು.

    2018ರ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಅವರು 60,387 ಮತಗಳನ್ನು ಪಡೆದಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ಅವರಿಗೆ 60,174 ಮತಗಳು ಬಿದ್ದಿತ್ತು. 213 ಮತಗಳ ಅಂತರದಿಂದ ಪ್ರತಾಪ್ ಗೌಡ ಪಾಟೀಲ್ ಗೆದ್ದಿದ್ದರು. ನಂತರ ನಡೆದ ಆಪರೇಷನ್ ಕಮಲದಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿಯನ್ನು ಸೇರಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ಕಾಂಗ್ರೆಸ್ ಸೇರಿದ್ದರು.

     ಕೋವಿಡ್ ಹಿನ್ನಲೆ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇಲ್ಲ. ಆದರೂ ಬಣ್ಣ ಎರಚಿಕೊಂಡ ಕೈ ಕಾರ್ಯಕರ್ತರು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ ಬೆಂಬಲಿಗರಿಂದ ಸಂಭ್ರಮಾಚರಣೆ ಮಾಡಿದ್ದಾರೆ. ರಸ್ತೆಯಲ್ಲಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.

  • ಮಸ್ಕಿ ಫಲಿತಾಂಶಕ್ಕೆ ಮೊದಲೇ ಸೋಲು ಒಪ್ಪಿಕೊಂಡ ಪ್ರತಾಪ್ ಗೌಡ

    ಮಸ್ಕಿ ಫಲಿತಾಂಶಕ್ಕೆ ಮೊದಲೇ ಸೋಲು ಒಪ್ಪಿಕೊಂಡ ಪ್ರತಾಪ್ ಗೌಡ

    ಮಸ್ಕಿ: ಚುನಾವಣಾ ಮತ ಎಣಿಕೆಯ ಹಲಲು ಸುತ್ತುಗಳು ಬಾಕಿ ಇರುವಾಗಲೇ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಸೋಲು ಒಪ್ಪಿಕೊಂಡಿದ್ದಾರೆ.

    ನಮ್ಮವರೇ ನಮಗೆ ಮೋಸ ಮಾಡಿದರು. ಈ ಪರಿಸ್ಥಿತಿ ಕಾಂಗ್ರೆಸ್ ಗೆ ಅನುಕೂಲವಾಗಿದೆ. ಕ್ಷೇತ್ರದಲ್ಲಿ ನನ್ನ ಮೇಲೆ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂದು ಪ್ರತಾಪ್ ಗೌಡ ಪಾಟೀಲ್ ದೂರಿದ್ದಾರೆ.

    9ನೇ ಸುತ್ತಿನ ಮತ ಏಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ಪಾಟೀಲ್ ತುರ್ವಿಹಾಳ 10,311 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಬಸನಗೌಡ ಪಾಟೀಲ್ 29,366 ಮತಗಳನ್ನು ಪಡೆದರೆ ಬಿಜೆಪಿಯ ಪ್ರತಾಪ ಗೌಡ ಪಾಟೀಲ್ 19,942 ಮತಗಳನ್ನು ಪಡೆದಿದ್ದಾರೆ.

    2018ರ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಅವರು 60,387 ಮತಗಳನ್ನು ಪಡೆದಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ಅವರಿಗೆ 60,174 ಮತಗಳು ಬಿದ್ದಿತ್ತು. 213 ಮತಗಳ ಅಂತರದಿಂದ ಪ್ರತಾಪ್ ಗೌಡ ಪಾಟೀಲ್ ಗೆದ್ದಿದ್ದರು. ನಂತರ ನಡೆದ ಆಪರೇಷನ್ ಕಮಲದಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿಯನ್ನು ಸೇರಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ಕಾಂಗ್ರೆಸ್ ಸೇರಿದ್ದರು.

  • ಇಂದೇ ಪಂಚ ರಾಜ್ಯಗಳ ಭವಿಷ್ಯ – ಬಂಗಾಳ ಫಲಿತಾಂಶವೇ ಕುತೂಹಲ

    ಇಂದೇ ಪಂಚ ರಾಜ್ಯಗಳ ಭವಿಷ್ಯ – ಬಂಗಾಳ ಫಲಿತಾಂಶವೇ ಕುತೂಹಲ

    – ತಮಿಳಿನಾಡಿನಲ್ಲಿ ಮತ್ತೆ ಉದಯಿಸ್ತಾನಾ ಸೂರ್ಯ..?

    ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಫಲಿತಾಂಶ, ರಾಜ್ಯದ 2 ವಿಧಾನಸಭೆ ಮತ್ತು ಬೆಳಗಾವಿ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ.

    ಬೆಳಗ್ಗೆ 8 ಗಂಟೆಯಿಂದ ಕೊರೊನಾ ನಿಯಮಗಳ ಅನುಸಾರ ಮತ ಎಣಿಕೆ ನಡೆಯಲಿದೆ. ಎಕ್ಸಿಟ್ ಪೋಲ್‍ಗಳ ಪ್ರಕಾರ, ಪಶ್ಚಿಮ ಬಂಗಾಳ ಗೆಲ್ಲಲು ಬಿಜೆಪಿ ಮತ್ತು ಟಿಎಂಸಿಗೆ ಸಮಾನ ಅವಕಾಶಗಳಿವೆ. ಕೇರಳದಲ್ಲಿ ಎಲ್‍ಡಿಎಫ್, ತಮಿಳುನಾಡಲ್ಲಿ ಡಿಎಂಕೆ, ಅಸ್ಸಾಂ ಮತ್ತು ಪುದುಚೆರಿಯಲ್ಲಿ ಬಿಜೆಪಿ ಗೆಲ್ಲಬಹುದು.

    ರಾಜ್ಯದ ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭೆ ಉಪ ಚುನಾವಣೆ ಫಲಿತಾಂಶವೂ ಹೊರಬೀಳಲಿದೆ. ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲೋ ಸಾಧ್ಯತೆ ಹೆಚ್ಚಿದೆ. ಮಸ್ಕಿ, ಬಸವಕಲ್ಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಫಿಫ್ಟಿ ಚಾನ್ಸ್ ಇದೆ. ಹಾಗೇ ನೋಡಿದ್ರೆ, ರಾಜ್ಯದಲ್ಲಿ ಕೊರೋನಾ ಅಬ್ಬರದಿಂದ ಈ 3 ಉಪ ಚುನಾವಣೆಗಳ ಫಲಿತಾಂಶ ಮಹತ್ವ ಕಳೆದುಕೊಂಡಿದೆ.

    3 ಉಪ ಚುನಾವಣೆಗಳ ಮಧ್ಯೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚ್ಚೇರಿ ಹಾಗೂ ಅಸ್ಸಾಂ ರಾಜ್ಯಗಳ ಮತ ಎಣಿಕೆಯೂ ನಡೆಯುತ್ತಿದೆ. ಪಂಚ ರಾಜ್ಯಗಳ ಪೈಕಿ, ಪಶ್ಚಿಮ ಬಂಗಾಳದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

  • ಮಸ್ಕಿ, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ – ಬೆಳಗಾವಿಯಲ್ಲಿ ಮತ್ತೆ ಬಿಜೆಪಿ

    ಮಸ್ಕಿ, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ – ಬೆಳಗಾವಿಯಲ್ಲಿ ಮತ್ತೆ ಬಿಜೆಪಿ

    ಬೆಂಗಳೂರು: ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಯ ಪಬ್ಲಿಕ್ ಲೆಕ್ಕ ಬಯಲಾಗಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭೆ ನಡೆದ ಉಚಪ ಚುನಾವಣೆಯಲ್ಲಿ ಮತ್ತೆ ಕಮಲ ಅರಳಲಿದೆ ಎಂದು ಪಬ್ಲಿಕ್ ಟಿವಿಯ ಮತಗಟ್ಟೆ ಸಮೀಕ್ಷೆ ಹೇಳುತ್ತಿದೆ.

    ಕಾಂಗ್ರೆಸ್ ಸತೀಶ್ ಜಾರಕಿಹೊಳಿ ನೀಡಿದ ಟಫ್ ಫೈಟ್ , ರೇಪ್ ಆರೋಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೈರಿನ ಹೊರತಾಗಿಯೂ ಸುರೇಶ್ ಅಂಗಡಿ ಪತ್ನಿ ಮಂಗಲಾ ಅಂಗಡಿ ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ.

    ಆಪರೇಷನ್ ಕಮಲದಿಂದ ತೆರವಾಗಿದ್ದ ಮಸ್ಕಿ ವಿಧಾನಸಭೆಗೆ ನಡೆದ ಬೈ ಎಲೆಕ್ಷನ್‍ನಲ್ಲಿ ಬಿಜೆಪಿಯ ಪ್ರತಾಪ್ ಗೌಡ ಪಾಟೀಲ ಮತ್ತು ಕಾಂಗ್ರೆಸ್‍ನ ಬಸನಗೌಡ ತುರ್ವೀಹಾಳ್ ನಡುವೆ  ನಿಕಟ ಫೈಟ್ ನಡೆದಿದೆ. ಇಬ್ಬರು ಗೆಲ್ಲಲು ಇಲ್ಲಿ ಸಮಾನ ಅವಕಾಶಗಳಿವೆ

    ಕಾಂಗ್ರೆಸ್ ಶಾಸಕ ನಾರಾಯಣರಾವ್ ನಿಧನದಿಂದ ತೆರವಾಗಿದ್ದ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಮಲ್ಲಮ್ಮ ಮತ್ತು ಬಿಜೆಪಿಯ ಶರಣು ಸಲಗಾರ ನಡುವೆ ಟಫ್ ಫೈಟ್ ನಡೆದಿದೆ. ಇಲ್ಲಿಯೂ ಫೋಟೋ ಫಿನಿಷ್ ಫಲಿತಾಂಶ ಹೊರಬೀಳುವ ಸಂಭವ ಹೆಚ್ಚಿದೆ. ಮೇ 2 ರಂದು ನಿಖರ ಫಲಿತಾಂಶ ತಿಳಿದುಬರಲಿದೆ.

    ಮಸ್ಕಿ `ಪಬ್ಲಿಕ್’ ಎಕ್ಸಿಟ್ ಫೋಲ್
    * ಬಿಜೆಪಿ- 49% ಕಾಂಗ್ರೆಸ್- 51%
    * ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲ್ಲಬಹುದು

    ಬಸವಕಲ್ಯಾಣ `ಪಬ್ಲಿಕ್’ ಎಕ್ಸಿಟ್ ಫೋಲ್
    * ಬಿಜೆಪಿ- 49% ಕಾಂಗ್ರೆಸ್- 51%
    * ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲ್ಲಬಹುದು

    ಬೆಳಗಾವಿ `ಪಬ್ಲಿಕ್’ ಎಕ್ಸಿಟ್ ಫೋಲ್
    * ಬಿಜೆಪಿ- ಮುನ್ನಡೆ * ಕಾಂಗ್ರೆಸ್- ಹಿನ್ನಡೆ
    * ಕಡಿಮೆ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲಬಹುದು