– ಭಾರತ, ಅಮೆರಿಕಾ, ಕೆನಡಾ ದೇಶದ 20 ಸಂಶೋಧಕರ ತಂಡದಿಂದ ಉತ್ಖನನ
ರಾಯಚೂರು: ಚಕ್ರವರ್ತಿ ಅಶೋಕನ ಶಿಲಾಶಾಸನದಿಂದ ವಿಶ್ವ ಪ್ರಸಿದ್ಧಿ ಪಡೆದಿರುವ ರಾಯಚೂರಿನ (Raichuru) ಮಸ್ಕಿ (Maski) ಮತ್ತೊಂದು ಐತಿಹಾಸಿಕ ಕುರುಹಿಗೆ ಸಾಕ್ಷಿಯಾಗಿದೆ. 4 ಸಾವಿರ ವರ್ಷಗಳ ಹಿಂದೆ ಇಲ್ಲಿ ಜನವಸತಿ ಇದ್ದ ಬಗ್ಗೆ ಹಲವು ವಿಷಯಗಳು ಉತ್ಖನನದಲ್ಲಿ ಬೆಳಕಿಗೆ ಬಂದಿದೆ. ಮೂರು ದೇಶಗಳ ಸಂಶೋಧಕರ ತಂಡ ಹೊಸ ವಿಚಾರಗಳನ್ನ ಹೊರತಂದಿದೆ.
ಅಶೋಕನ ಪೂರ್ವದಲ್ಲಿ ಸಾಕಷ್ಟು ವರ್ಷಗಳ ಹಿಂದೆಯೇ ಜನವಸತಿ ಇದ್ದ ಬಗ್ಗೆ ಸಂಶೋಧಕರು ಬೆಳಕು ಚೆಲ್ಲಿದ್ದಾರೆ. ಅಮೆರಿಕಾ, ಕೆನಡಾ ಹಾಗೂ ಭಾರತದ 20 ಜನ ಸಂಶೋಧಕರ ತಂಡ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ, ಬಯಲು ಆಂಜನೇಯ ದೇವಸ್ಥಾನ ಸೇರಿ ತಾಲೂಕಿನ ಹಲವೆಡೆ ಉತ್ಖನನ ನಡೆಸಿದೆ. ಉತ್ಖನನ ವೇಳೆ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರಾಚ್ಯ ಪಳಿಯುಳಿಕೆಗಳ ಸಂಗ್ರಹ ಮಾಡಲಾಗಿದೆ.ಇದನ್ನೂ ಓದಿ: ಪಹಲ್ಗಾಮ್ ದಾಳಿ ಹೊಣೆಯನ್ನ ಟಿಆರ್‌ಎಫ್ 2 ಬಾರಿ ಹೊತ್ತುಕೊಂಡಿದೆ: ವಿಶ್ವಸಂಸ್ಥೆ
ಮೂರು ದೇಶಗಳ ಜಂಟಿ ಸಂಶೋಧನೆ:
ನೊಯಿಡಾ ವಿವಿ ಪ್ರಾಧ್ಯಾಪಕ ಹೇಮಂತ್ ಕಡಾಂಬಿ, ಅಮೆರಿಕದ ಸ್ಕ್ಯಾನ್ ಪೋರ್ಡ್ ವಿವಿ ಪ್ರಾಧ್ಯಾಪಕ ಆ್ಯಂಡ್ರಿಮ್ ಎಂ. ಬವೆರ್, ಕೆನಡಾದ ಮ್ಯಾಕ್ ಗಿಲ್ ವಿವಿಯ ಪೀಟರ್ ಜಿ. ಜೋಹಾನ್ಸನ್, ಸಂಶೋಧನಾ ವಿದ್ಯಾರ್ಥಿಗಳು ಸೇರಿ 20 ಸಂಶೋಧಕರ ತಂಡ ಉತ್ಖನನ ಮಾಡಿದೆ. ಅಶೋಕ ಚಕ್ರವರ್ತಿ ಕಾಲಕ್ಕೂ ಮೊದಲೇ ಸಮೃದ್ದವಾಗಿದ್ದ ಮಸ್ಕಿ ಬಗ್ಗೆ ತಂಡ ಸುಮಾರು ಮೂರು ತಿಂಗಳ ಕಾಲ ಅಧ್ಯಯನ ಮಾಡಿದೆ. ಈ ಉತ್ಖನನ ಈಗ ಸ್ಥಳೀಯ ಸಂಶೋಧಕರು, ಇತಿಹಾಸ ತಜ್ಞರಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.
ಉತ್ಖನನ ಹಾಗೂ ಸಂಶೋಧನೆಗಾಗಿ 271 ಸ್ಥಳಗಳನ್ನು ಗುರುತಿಸಿಕೊಂಡಿದ್ದ ತಂಡ 11 ರಿಂದ 14ನೇ ಶತಮಾನದಲ್ಲಿ ಜನವಸತಿ ಇರುವ ಬಗ್ಗೆ ಸಂಶೋಧನೆ ಮಾಡಿದೆ. ಬೇರೆ ಬೇರೆ ಆಕಾರದ ಮನೆಗಳ ರಚನೆ, ಅವರು ಬಳಸುತ್ತಿದ್ದ ಮಣ್ಣಿನ ಮಡಿಕೆ, ಚಿನ್ನದ ಲೇಪನದ ವಸ್ತುಗಳು, ಮೂಳೆ ಸೇರಿ ಹಲವು ವಸ್ತುಗಳು ಪತ್ತೆಯಾಗಿವೆ. ಆಗಿನ ಜನರ ಜೀವನ ಮಟ್ಟ, ಆಹಾರ ಪದ್ಧತಿಗಳ ಬಗ್ಗೆ ಸಂಶೋಧನೆ ನಡೆದಿದೆ. ಇದರಿಂದ ಮಸ್ಕಿಯ ಚಾರಿತ್ರಿಕ ಹಿನ್ನೆಲೆ, ಚಾರಿತ್ರಿಕ ಬೆಳವಣಿಗೆಯ ಹೊಸ ಸಾಕ್ಷಿಗಳು ಸಿಕ್ಕಂತಾಗಿದೆ. 4000 ವರ್ಷಗಳ ಹಿಂದೆ ಇತಿಹಾಸ ಹೇಗಿತ್ತು ಅನ್ನೋದು ತಿಳಿದು ಬರುತ್ತಿದೆ. ಮಧ್ಯಕಾಲೀನ ಸಮಯದ ಬಗ್ಗೆ ಸಂಶೋಧನೆ ಮಾಡುತ್ತಿದ್ದೇವೆ ಎಂದು ಸಂಶೋಧನಾ ತಂಡದ ಮುಖ್ಯಸ್ಥ ನೊಯಿಡಾ ವಿವಿ ಪ್ರಾಧ್ಯಾಪಕ ಹೇಮಂತ್ ಕಡಾಂಬಿ ತಿಳಿಸಿದ್ದಾರೆ.
ಈ ಹಿಂದೆಯೂ ನಡೆದಿತ್ತು ಉತ್ಖನನ:
ಈ ಹಿಂದೆ ಸಂಶೋಧಕ ಬಿ.ಕೆ.ಥಾಫರ್, 1870ರಲ್ಲಿ ಸಂಶೋಧಕ ಬ್ರೂಸ್ ಫೂಟ್, ನಂತರ ಹೈದ್ರಾಬಾದ್‌ನ ಪುರಾತತ್ವ ಇಲಾಖೆಯಿಂದ, ಸ್ವಾತಂತ್ರ‍್ಯ ನಂತರ 1954ರಲ್ಲೂ ಮಸ್ಕಿಯಲ್ಲಿ ಉತ್ಖನನ ನಡೆದಿತ್ತು. ಆಗಾಗ ಸಂಶೋಧಕರು ಮಸ್ಕಿಯ ಹಲವಾರು ಪ್ರದೇಶಗಳಲ್ಲಿ ಸಂಶೋಧನೆ ನಡೆಸುತ್ತಲೇ ಇದ್ದಾರೆ. ಈಗ ಅಮೇರಿಕಾ, ಕೆನಡಾ ಹಾಗೂ ಭಾರತದ ಸಂಶೋಧಕರ ತಂಡದಿಂದ ಉತ್ಖನನ ನಡೆದು ಸಾಕಷ್ಟು ಅಂಶಗಳನ್ನ ಕಲೆ ಹಾಕಿದ್ದಾರೆ.
ಅಶೋಕನ ಕಾಲದ ದಕ್ಷಿಣ ಪ್ರಾಂತ್ಯದ ಮೌರ್ಯರ ರಾಜಧಾನಿ ಸುವರ್ಣಗಿರಿ ಎಂಬುದು ಈ ಹಿಂದೆಯೆ ತಿಳಿದು ಬಂದಿದೆ. ಆದ್ರೆ ಸಂಶೋಧಕರಲ್ಲಿ ಇನ್ನೂ ಸ್ಥಳದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಮಸ್ಕಿಯಲ್ಲಿ ಬೃಹತ್ ಶಿಲಾಯುಗ, ಬೃಹತ್ ಶಿಲಾ ಗೋರಿಗಳು, ಚಿನ್ನದಿಂದ ಮಾಡಿದ ಅನೇಕ ವಸ್ತುಗಳು ಲಭ್ಯವಾಗಿರುವುದರಿಂದ ಮಸ್ಕಿಯೇ ಸುವರ್ಣಗಿರಿ ಇರಬಹುದು ಅನ್ನೋ ಬಗ್ಗೆಯೂ ಸಂಶೋಧನೆ ನಡೆದಿದೆ. ಈ ಉತ್ಕನನದಿಂದ ಊಹೆಗೆ ಈಗ ಪುಷ್ಟಿ ಸಿಗುತ್ತಿದೆ, ಆದ್ರೆ ಖಚಿತ ಮಾಹಿತಿಗಳೊಂದಿಗೆ ದಾಖಲಾಗಬೇಕಿದೆ ಅಂತ ಸ್ಥಳೀಯ ಇತಿಹಾಸ ತಜ್ಞ ಚನ್ನಬಸವ ಹಿರೇಮಠ ಹೇಳಿದ್ದಾರೆ.
ಇತಿಹಾಸದಲ್ಲಿ ಅಡಗಿರುವ ಅನೇಕ ವಿಷಯಗಳನ್ನ ಹೊರತೆಗೆಯಲು ಹಿಂದಿನಿಂದಲೂ ಅನೇಕ ಸಂಶೋಧಕರು ಮಸ್ಕಿಯಲ್ಲಿ ಉತ್ಖನನ, ಸಂಶೋಧನೆ ನಡೆಸಿದ್ದಾರೆ. ಅನೇಕ ಪ್ರಾಚ್ಯ ಅವಶೇಷಗಳು ಲಭ್ಯವಾಗಿರುವುದರಿಂದ ಸಾಕಷ್ಟು ರಹಸ್ಯಗಳನ್ನು ಮಸ್ಕಿ ತನ್ನ ಮಡಿಲಲ್ಲಿ ಉಳಿಸಿಕೊಂಡಿದೆ. ಈಗ 20 ಜನ ಸಂಶೋಧಕರ ತಂಡ ನಡೆಸಿದ ಉತ್ಖನನದಿಂದ ಇನ್ನೂ ಯಾವೆಲ್ಲ ಹೊಸ ವಿಷಯಗಳು ಹೊರಬರುತ್ತವೆ ಅನ್ನೋ ಕುತೂಹಲ ಎಲ್ಲೆಡೆ ಮನೆಮಾಡಿದೆ.ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ | ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳುಕು
ರಾಯಚೂರು: ಜಿಲ್ಲೆಯ ಮಸ್ಕಿಯಲ್ಲಿ (Maski) ನಾಲ್ಕು ಸಾವಿರ ವರ್ಷಗಳ ಹಿಂದೆ ಜನವಸತಿ ಇದ್ದ ಬಗ್ಗೆ ಸಂಶೋಧಕರ ಉತ್ಖನನದಿಂದ ಬೆಳಕಿಗೆ ಬಂದಿದೆ.
ಸಾಮ್ರಾಟ್ ಅಶೋಕನ ಶಿಲಾಶಾಸನದಿಂದ ವಿಶ್ವ ಪ್ರಸಿದ್ಧಿ ಪಡೆದ ಮಸ್ಕಿಯ ಬಗ್ಗೆ ಈಗ ಹೊಸ ವಿಷಯ ಹೊರಬಂದಿದೆ. ಅಮೆರಿಕಾ, ಕೆನಡಾ ಹಾಗೂ ಭಾರತದ 20 ಜನ ಸಂಶೋಧಕರ ತಂಡದಿಂದ ಉತ್ಕನನ ನಡೆದಿದೆ. ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ, ಬಯಲು ಆಂಜನೇಯ ದೇವಸ್ಥಾನ ಸೇರಿ ತಾಲೂಕಿನ ಹಲವೆಡೆ ಉತ್ಖನನ ಮಾಡಲಾಗುತ್ತಿದೆ. ಉತ್ಖನನ ವೇಳೆ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಪಳೆಯುಳಿಕೆಗಳ ಸಂಗ್ರಹ ಮಾಡಲಾಗಿದೆ.ಇದನ್ನೂ ಓದಿ: ದೆಹಲಿಯ 50, ಬೆಂಗ್ಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ
ಉತ್ಖನನ ಹಾಗೂ ಸಂಶೋಧನೆಗಾಗಿ 271 ಸ್ಥಳಗಳನ್ನು ಗುರುತಿಸಿಕೊಂಡಿರುವ ತಂಡ 11 ರಿಂದ 14ನೇ ಶತಮಾನದಲ್ಲಿ ಜನವಸತಿ ಇರುವ ಬಗ್ಗೆ ಸಂಶೋಧನೆ ನಡೆಸಿದೆ. ಅವರು ಬಳಸುತ್ತಿದ್ದ ಮನೆಗಳ ಆಕಾರ, ಮಣ್ಣಿನ ಮಡಿಕೆ ಸೇರಿ ಹಲವು ವಸ್ತುಗಳು ಪತ್ತೆಯಾಗಿವೆ. ಆಗಿನ ಜನರ ಜೀವನ ಮಟ್ಟ, ಆಹಾರ ಪದ್ದತಿಗಳ ಬಗ್ಗೆ ಸಂಶೋಧನೆ ನಡೆದಿದೆ.
ಕೇಂದ್ರದ ಪುರಾತತ್ವ ಇಲಾಖೆಯ ಅನುಮತಿ ಪಡೆದು ಉತ್ಖನನ ನಡೆಸಲಾಗುತ್ತಿದ್ದು, ನೊಯಿಡಾ ವಿವಿ ಪ್ರಾಧ್ಯಾಪಕ ಹೇಮಂತ್ ಕಡಾಂಬಿ, ಅಮೆರಿಕದ ಸ್ಕ್ಯಾನ್ ಪೋರ್ಡ್ ವಿವಿ ಪ್ರಾಧ್ಯಾಪಕ ಆ್ಯಂಡ್ರಿಮ್ ಎಂ. ಬವೆರ್, ಕೆನಡಾದ ಮ್ಯಾಕ್ ಗಿಲ್ ವಿವಿಯ ಪೀಟರ್ ಜಿ. ಜೋಹಾನ್ಸನ್ ಸೇರಿ 20 ಸಂಶೋಧಕರ ತಂಡದಿಂದ ಉತ್ಖನನ ನಡೆದಿದೆ.ಇದನ್ನೂ ಓದಿ: ಬೆಂಗಳೂರು| ಕೆಲಸಕ್ಕೆ ಹೋಗುತ್ತಿದ್ದ ಯುವತಿ ಅಪಘಾತಕ್ಕೆ ಬಲಿ
ರಾಯಚೂರು: ಜಿಲ್ಲೆಯ ಮಸ್ಕಿ (Maski) ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಆರ್‌ಸಿಬಿ (RCB) ಗೆಲುವಿನ ಸಂಭ್ರಮಾಚರಣೆ ವೇಳೆ ಹುಚ್ಚಾಟ ಮೆರೆದಿದ್ದ ಎಂಟು ಜನ ಆರ್‌ಸಿಬಿ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಟಾಕಿ ಹೊಡೆಯುವ ವೇಳೆ ಪೆಟ್ರೋಲ್ ಬಳಸಿ ಭಾರೀ ಸ್ಫೋಟ ಸೃಷ್ಟಿಸಿ ಯುವಕರು ಹುಚ್ಚಾಟ ಮೆರೆದಿದ್ದರು. ಈ ಹಿನ್ನೆಲೆ ಗುರುರಾಜ, ಹಜರತ್, ರಮೇಶ್, ದೇವಯ್ಯ ಸೇರಿ 8 ಜನರನ್ನು ಬಂಧಿಸಲಾಗಿದೆ. ಆರ್‌ಸಿಬಿ ಫೈನಲ್‌ಗೆ ಹೋಗಿದ್ದಕ್ಕೆ ಹಸಮಕಲ್ ಗ್ರಾಮದ ಮುಖ್ಯ ರಸ್ತೆಯಲ್ಲಿ ಯುವಕರು ಸಂಭ್ರಮಾಚರಣೆ ಮಾಡಿದ್ದರು. ಇದನ್ನೂ ಓದಿ: ಹೇಮಾವತಿ ಲಿಂಕ್ ಕೆನಾಲ್ ಕದನ – ಇಬ್ಬರು ಸ್ವಾಮೀಜಿಗಳು ಸೇರಿ ನೂರಾರು ರೈತರ ವಿರುದ್ಧ FIR
ಈ ವೇಳೆ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಪಟಾಕಿ ಇಟ್ಟು, ಪೆಟ್ರೋಲ್ ತುಂಬಿ, ಮೈದಾ ಹಿಟ್ಟು ಬಳಸಿ ಸ್ಫೋಟಿಸಿದ್ದರು. ಯುವಕರ ಹುಚ್ಚಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಸಿಂಧನೂರಿನ ಬಳಗಾನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಂಟು ಜನರನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ – `ಈ ಸಲ ಕಪ್ ನಮ್ದೇʼ ಎಂದ ಡಿಂಪಲ್ ಕ್ವೀನ್
ರಾಯಚೂರು: ಜಿಲ್ಲೆಯ ಮಸ್ಕಿ (Maski) ತಾಲೂಕಿನಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ (Heavy Rain) ಭತ್ತದ ಬೆಳೆ ಹಾನಿಯಾಗಿದೆ. ಕಟಾವಿಗೆ ಬಂದಿದ್ದ ಭತ್ತದ ಬೆಳೆ ಮಕಾಡೆ ಮಲಗಿದ್ದು ರೈತರಿಗೆ ಸಂಕಷ್ಟ ಎದುರಾಗಿದೆ.
ಕೆಲವೆಡೆ ಗದ್ದೆಯಲ್ಲಿ ನೀರು ನಿಂತು ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಆಲಿಕಲ್ಲು ಮಳೆಗೆ ಗೌಡನಬಾವಿ, ಸಾಗರ ಕ್ಯಾಂಪ್, ಬೆಳ್ಳಿಗನೂರು ಗ್ರಾಮದಲ್ಲಿ ಬೆಳೆ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಅಂತ ರೈತರು ಅಳಲು ತೋಡಿಕೊಂಡಿದ್ದಾರೆ. ಒಣಗಿರುವ ಭತ್ತದ (Paddy) ಕಾಳು ನೆಲಕ್ಕೆ ಬಿದ್ದು ಮೊಳಕೆ ಒಡೆಯುವ ಆತಂಕ ಎದುರಾಗಿದೆ. ಇದನ್ನೂ ಓದಿ: ವಾಟ್ಸಪ್ ಫೋಟೋ ಡೌನ್‌ಲೋಡ್ ಮಾಡೋ ಮುನ್ನ ಎಚ್ಚರವಾಗಿರಿ – ನಿಮ್ಮ ಫೋನ್ ಹ್ಯಾಕ್ ಆಗಬಹುದು!
ರಾಜ್ಯದಲ್ಲಿ ಇಂದಿನಿಂದ 5 ದಿನ ಮಳೆ
ಇನ್ನೂ ರಾಜ್ಯದ ಹಲವೆಡೆ ಇಂದಿನಿಂದ ಏ.16ರ ವರೆಗೆ ಭಾರೀ ಗಾಳಿ, ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ಗಾಳಿ ಪ್ರತಿ ಗಂಟೆಗೆ 40-50 ಕಿಮಿ ವೇಗದಲ್ಲಿ ಬೀಸಲಿದೆ. ಬೆಂಗಳೂರಿನಲ್ಲಿ ಇಂದು (ಏ.12), ನಾಳೆ ಹಗುರ ಮಳೆಯಾಗಲಿದೆ. ನಗರದ ಕೆಲವೆಡೆ ಮೋಡಕವಿದ ವಾತಾವರಣ ಇದ್ದು, ಸಂಜೆಯ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: APMCಯಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ ಆರೋಪ; ʻಕೈʼ ಸರ್ಕಾರದ ವಿರುದ್ಧ ಮತ್ತೊಂದು ಕಮೀಷನ್ ಬಾಂಬ್!
ರಾಯಚೂರು: ಮಸ್ಕಿ ಕಾಂಗ್ರೆಸ್ ಶಾಸಕ ಬಸನಗೌಡ ತುರವಿಹಾಳ (Basanagouda Turvihal) ಪುತ್ರ ಹಾಗೂ ಸಹೋದರ ಮೊಲ ಬೇಟೆ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಮೆರವಣಿಗೆ ಮಾಡಿದ್ದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ (Wildlife Protection Act) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊಲಗಳ ಬೇಟೆ ಹಾಗೂ ಬೇಟೆ ಮಾಡಿದ ಉಪಕರಣಗಳ ಪ್ರದರ್ಶನ ಆರೋಪ ಹಿನ್ನೆಲೆ ವನ್ಯಜೀವಿ ಸಂರಕ್ಷಣಾ ಕಾಯಿದೆ 1972, 51, ಸೆಕ್ಷನ್ 9 ಅಡಿಯಲ್ಲಿ ಎ1 ಶಾಸಕರ ಸಹೋದರ ಸಿದ್ದನಗೌಡ, ಎ2 ಶಾಸಕರ ಪುತ್ರ ಸತೀಶ್ ಗೌಡ, ಸ್ಥಳೀಯ ದುರ್ಗೇಶ ಹಾಗೂ ಇತರರ ವಿರುದ್ದ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:ಬುಧವಾರ ವಕ್ಫ್ ಬಿಲ್ ಮಂಡನೆ – ಬಿಲ್ ಪಾಸ್ ಆಗುತ್ತಾ? ಲೋಕಸಭೆಯಲ್ಲಿ ಬಲಾಬಲ ಹೇಗಿದೆ?
ಸಿಂಧನೂರು ತಾಲೂಕಿನ ತುರವಿಹಾಳ ಗ್ರಾಮದಲ್ಲಿ ಯುಗಾದಿ ಹಾಗೂ ಶಂಕರಲಿಂಗೇಶ್ವರ ಜಾತ್ರೆ ಹಿನ್ನೆಲೆ ರಾಯಚೂರಿನ ಮಸ್ಕಿ ಶಾಸಕ ಬಸನಗೌಡ ತುರವಿಹಾಳ ಪುತ್ರ ಹಾಗೂ ಸಹೋದರ ಮೊಲಗಳ ಬೇಟೆಯಾಡಿ, ಬಳಿಕ ಮಾರಕಾಸ್ತ್ರಗಳನ್ನ ಹಿಡಿದು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದರು. ಪ್ರಾಣಿಗಳನ್ನ ಕೊಂದು ಕಟ್ಟಿಗೆಗೆ ನೇತು ಹಾಕಿ ಮಾರಕಾಸ್ತ್ರ ಹಿಡಿದು ಸಂಭ್ರಮಾಚರಿಸಿದ್ದರು. ಅಲ್ಲದೆ ಯಾವುದೇ ಪಶ್ಚಾತ್ತಾಪವಿಲ್ಲದೆ ಅಟ್ಟಹಾಸದ ವಿಡಿಯೋ, ಫೋಟೋಗಳನ್ನು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡು ಸಂಭ್ರಮಿಸಿದ್ದಾರೆ.
ಈ ಕುರಿತು ಶಾಸಕ ಬಸನಗೌಡ ತುರವಿಹಾಳ ಮಾತನಾಡಿ, ಈ ಘಟನೆಯ ಹೊಣೆಯನ್ನು ಸಾರ್ವಜನಿಕರ ಮೇಲೆ ಹಾಕಿದ್ದಾರೆ. ಮೆರವಣಿಗೆಗೆ ಹೋದಾಗ ಸಾರ್ವಜನಿಕರು ನಮ್ಮ ಸಹೋದರ ಮತ್ತು ಮಗನನ್ನ ಎತ್ತಿಕೊಂಡು ಮೆರವಣಿಗೆ ಮಾಡಿದ್ದಾರೆ. ಅದು ಆಯುಧಗಳಿಗೆ ಪೂಜೆ ಮಾಡುವ ಕಾರ್ಯಕ್ರಮ. ಆಯುಧಗಳನ್ನು ಯಾವುದೇ ಕೆಟ್ಟ ಕಾರ್ಯಕ್ಕೆ ಬಳಸುವಂತದ್ದು ಅಲ್ಲ. ಯಾವ ರೀತಿಯಾಗಿ ಮೊಲಗಳ ಬೇಟೆಯಾಡಿದ್ದಾರೆ ನನಗೆ ಗೊತ್ತಿಲ್ಲ ಎಂದಿದ್ದಾರೆ.
ರಾಯಚೂರು: ಮಸ್ಕಿ(Maski) ಕ್ಷೇತ್ರದ ಶಾಸಕ ಬಸನಗೌಡ ತುರವಿಹಾಳ ಪುತ್ರ ಹಾಗೂ ಸಹೋದರ ಮೊಲಗಳ(Rabbit) ಬೇಟೆಯಾಡಿ ವಿಜೃಂಭಿಸಿದ ಘಟನೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಗ್ರಾಮದಲ್ಲಿ ನಡೆದ ಶಂಕರಲಿಂಗೇಶ್ವರ ಜಾತ್ರೆ ಹಿನ್ನೆಲೆ ಶಾಸಕನ ಕುಟುಂಬದ ಸದಸ್ಯರು ಮೊಲಗಳ ಬೇಟೆಯಾಡಿ ಮಾರಕಾಸ್ತ್ರಗಳನ್ನು ಹಿಡಿದು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಶಾಸಕ ಬಸನಗೌಡ ತುರವಿಹಾಳ ಸಹೋದರ ಸಿದ್ದನಗೌಡ ಹಾಗೂ ಪುತ್ರ ಸತೀಶ್ ಗೌಡ ಮೊಲಗಳನ್ನ ಕೊಂದು ಕಟ್ಟಿಗೆಗೆ ನೇತು ಹಾಕಿ ಮಾರಕಾಸ್ತ್ರ ಹಿಡಿದು ಸಂಭ್ರಮಾಚರಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ – ಮೂವರು ಮಕ್ಕಳು ಸೇರಿ 6 ಮಂದಿ ಸಜೀವ ದಹನ
ಇನ್ನೂ ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನ ಹಿಡಿದು ಮೆರವಣಿಗೆ ಮಾಡಿದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಸಾಮಾನ್ಯ ಜನರಿಗೆ ಒಂದು ನ್ಯಾಯ ಶಾಸಕನ ಕುಟುಂಬಕ್ಕೆ ಒಂದು ನ್ಯಾಯಾನಾ ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ.
ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದ (Maski City) ಸ್ಲಂ ನಿವಾಸಿಗಳಿಗೆ (Slum People) ವಕ್ಫ್ ಬಿಸಿ ತಟ್ಟಿದ್ದು, ಇಲ್ಲಿನ ಕುಟುಂಬಗಳಿಗೆ ಸೇರಬೇಕಾದ ಹಕ್ಕುಪತ್ರಗಳು ಇನ್ನೂ ಅವರ ಕೈ ಸೇರುತ್ತಿಲ್ಲ.
ವಸತಿ ಇಲಾಖೆ ಹಾಗು ಸ್ಲಂ ಬೋರ್ಡ್ (Karnataka Slum Development Board) ನಿಗದಿಪಡಿಸಿದ್ದ 263 ಕುಟುಂಬಗಳ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಸಚಿವ ಜಮೀರ್ ಅಹ್ಮದ್ (Zameer Ahmed) ಮೌಖಿಕ ಸೂಚನೆಯಿಂದ ರದ್ದಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: Mandya | ರೈತರ ಜಮೀನು, ಹಿಂದೂ ದೇಗುಲ ಮಾತ್ರವಲ್ಲ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ!
ಜುಲೈ 29 ರಂದು ಹಕ್ಕು ಪತ್ರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಈ ಕಾರ್ಯಕ್ರಮ ಹಕ್ಕುಪತ್ರ ಹಂಚಿಕೆಯಾಗಿಲ್ಲ. ಸರ್ವೆ ನಂ 7/1 ರ 7 ಎಕರೆ ಪ್ರದೇಶದಲ್ಲಿ 300ಕ್ಕೂ ಅಧಿಕ ಬಡ ಕುಟುಂಬಗಳು ವಾಸವಾಗಿವೆ. ಈ ಭೂಮಿಯನ್ನು ಭೂ ಮಾಲೀಕ ಸಾಜೀದ್ ಸಾಬ್ ಖಾಜಿ ಮಾರಾಟ ಮಾಡಿದ್ದ. ಈಗ 7 ಎಕರೆಯ ಈ ಭೂಮಿ ಸ್ಲಂಬೋರ್ಡ್ ಹೆಸರಿನಲ್ಲಿ ನೋಂದಣಿಯಾಗಿದೆ.
ವಕ್ಫ್‌ಗೆ ಸೇರಿದ ಆಸ್ತಿ ಅಂತ ಸಚಿವ ಜಮೀರ್ ಅಹ್ಮದ್ ಕಾರ್ಯಕ್ರಮ ರದ್ದು ಮಾಡಿಸಿದ್ದಾರೆ. ಕೂಡಲೇ ನಮಗೆ ಹಕ್ಕು ಪತ್ರ ನೀಡಬೇಕು ಎಂದು 30 ವರ್ಷದಿಂದ ವಾಸವಿರುವ ನಿವಾಸಿಗಳು ಒತ್ತಾಯಿಸಿದ್ದಾರೆ.
ರಾಯಚೂರು: ಜಿಲ್ಲೆಯ ಮಸ್ಕಿ (Maski) ತಾಲೂಕಿನ ಗುಡದೂರು ಬಳಿ ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದಾನೆ. ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ.
ಡಿಕ್ಕಿ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಬಸ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನಲ್ಲಿದ್ದ ಇನ್ನೋರ್ವ ಗಾಯಾಳು ಶಿವರಾಜ್ ಸ್ಥಿತಿ ಗಂಭೀರವಾಗಿದ್ದು, ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.
ರಾಯಚೂರು: ಬಿಸಿಲಿನ ತಾಪಕ್ಕೆ (Heatstroke) ಬಿಎಂಟಿಸಿ ಬಸ್ ಕಂಡಕ್ಟರ್ (BMTC Conductor) ಒಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ.
ಹಸಮಕಲ್ ಮೂಲದ ಮಲ್ಲಯ್ಯ (45) ಬಿಸಿಲಿನ ತಾಪಕ್ಕೆ ಬಲಿಯಾದವರು ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ (Bengaluru) ಕಾರ್ಯನಿರ್ವಹಿಸುತ್ತಿದ್ದ ಅವರು, ರಜೆಯ ಮೇಲೆ ಊರಿಗೆ ತೆರಳಿದ್ದರು. ಈ ವೇಳೆ ಮನೆಗೆ ಬೇಕಾದ ಕಿರಾಣಿ ಸಾಮಾಗ್ರಿಗಳನ್ನು ತರಲು ತೆರಳಿದ್ದಾಗ ಬಿಸಿಲಿನ ತಾಪಕ್ಕೆ ಅವರು ಕುಸಿದು ಬಿದ್ದಿದ್ದಾರೆ. ಸಾರ್ವಜನಿಕರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ದುರಾದೃಷ್ಟವಶಾತ್ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಗರ್ಭಿಣಿ – ದೂರು ನೀಡಿದ್ರೆ ಕೊಲೆ ಬೆದರಿಕೆ ಹಾಕಿದ್ದ ಯುವಕ
ಜಿಲ್ಲೆಯ ಜಾಲಿಬೆಂಚಿ ಗ್ರಾಮದ ರೈತರೊಬ್ಬರು ಗುರುವಾರ ಬಿಸಿಲಿನ ತಾಪಕ್ಕೆ ಬಲಿಯಾಗಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ಬಲಿಯಾದವರ ಸಂಖ್ಯೆ ಎರಡಕ್ಕೇರಿದೆ.