Tag: ಮಸೇಜ್

  • ರಾತ್ರಿ ಮೆಸೇಜ್ ಮಾಡಿ, ಮನೆಗೆ ಬಾ ಅಂತಾನೆ : ಜ್ಯೂಲಿ ಲಕ್ಷ್ಮೀ ಮಗಳ ಕಣ್ಣೀರು

    ರಾತ್ರಿ ಮೆಸೇಜ್ ಮಾಡಿ, ಮನೆಗೆ ಬಾ ಅಂತಾನೆ : ಜ್ಯೂಲಿ ಲಕ್ಷ್ಮೀ ಮಗಳ ಕಣ್ಣೀರು

    ನ್ನಡವೂ ಸೇರಿದಂತೆ ದಕ್ಷಿಣದ ಅಷ್ಟೂ ಭಾಷೆಗಳಲ್ಲಿ ನಟಿಸಿರುವ, ಖ್ಯಾತ ನಟಿ ಜ್ಯೂಲಿ ಲಕ್ಷ್ಮಿ (Julie Lakshmi) ಪುತ್ರಿ ಐಶ್ವರ್ಯ ಭಾಸ್ಕರನ್ (Aishwarya Bhaskaran) ಕಷ್ಟದ ದಿನಗಳನ್ನು ದೂಡುತ್ತಿದ್ದಾರೆ. ಆದರೂ, ತಾಯಿ ಹತ್ತಿರ ಸಹಾಯ ಕೇಳದರೆ ಸೋಪು ಮಾರಿಕೊಂಡು ಬದುಕುತ್ತಿದ್ದಾರಂತೆ. ಈ ವಿಷಯವನ್ನು ಅವರೇ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ. ಕೈಯಲ್ಲಿ ಸಿನಿಮಾಗಳು ಇಲ್ಲ, ಕೆಲಸವೂ ಸಿಗುತ್ತಿಲ್ಲ. ಹಾಗಾಗಿ ಸೋಪು ಮಾರಿಕೊಂಡು ಜೀವನ ನಡೆಸುತ್ತಿದ್ದೇನೆ ಎಂದಿದ್ದಾರೆ.

    ಈ ಹಿಂದೆ ಐಶ್ವರ್ಯ ಭಾಸ್ಕರನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ಕೆಲಸ ಮಾಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗುತ್ತಿಲ್ಲವಂತೆ. ಹಾಗಾಗಿ ತಮ್ಮದೇ ಯುಟ್ಯೂಬ್ ಕೂಡ ಮಾಡಿಕೊಂಡಿದ್ದು, ಅಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೊಸ ಹೊಸ ಅಡುಗೆಗಳ ವಿಡಿಯೋ ಕೂಡ ಹಾಕಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರ ವಿರುದ್ಧ ನಟಿ ಗರಂ ಆಗಿದ್ದಾರೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ತಾವು ಸಿಂಗಲ್ ಇರುವ ಕಾರಣದಿಂದಾಗಿಯೇ ಕೆಲವರು ಕೆಟ್ಟ ಕೆಟ್ಟ ಮೆಸೇಜ್ (Massage) ಗಳನ್ನು ಕಳುಹಿಸುತ್ತಾರಂತೆ. ಇನ್ನೂ ನೋಡೋಕೆ ಚೆನ್ನಾಗಿ ಇದ್ದೀಯಾ, ರಾತ್ರಿ ಸಿಗ್ತೀಯಾ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಒಬ್ಬ ವ್ಯಕ್ತಿಯು ಮಧ್ಯೆ ರಾತ್ರಿ ಮೆಸೇಜ್ ಮಾಡಿ, ಇಬ್ಬರೂ ಸೋಪು ಮಾಡೋಣ ಬಾ ಎಂದು ಕರೆದಿದ್ದಾನಂತೆ. ಇಂತಹ ಘಟನೆಗಳ ಬಗ್ಗೆ ಬಹಿರಂಗವಾಗಿ ಅವರು ಹೇಳಿಕೊಂಡರೂ, ಪುಂಡರ ಕಾಟ ನಿಂತಿಲ್ಲ ಎನ್ನುವುದು ಅವರ ಅಳಲು.

    ಕೆಟ್ಟದ್ದಾಗಿ ಮೆಸೇಜ್ ಮಾಡಿರುವ ವ್ಯಕ್ತಿಗೆ ಉತ್ತರವಾಗಿ, ‘ಸೋಪು ಮಾರಿಕೊಂಡು ಬದುಕುತ್ತೇನೆ ಹೊರತು ನನ್ನನ್ನು ನಾನು ಮಾರಿಕೊಳ್ಳುವುದಿಲ್ಲ’ ಎಂದು ಖಡಕ್ ಸಂದೇಶವನ್ನು ಅವರು ನೀಡಿದ್ದಾರೆ. ಅಂದಹಾಗೆ ಜ್ಯೂಲಿ ಲಕ್ಷ್ಮಿ ಅವರ ಮೊದಲ ಪತಿಯ ಮಗಳು ಇವರಾಗಿದ್ದು, ಡಿವೋರ್ಸ್ ನಂತರ ತಾಯಿಯಿಂದ ದೂರ ಇರುವುದಾಗಿ ತಿಳಿಸಿದ್ದಾರೆ.

  • ಒಬ್ಬರಿಗೆ ಮಾತ್ರ ಶೇರ್ – ವಾಟ್ಸಪ್‍ನಲ್ಲಿ ವೈರಲ್ ಮೆಸೇಜ್‍ಗೆ ಮಿತಿ

    ಒಬ್ಬರಿಗೆ ಮಾತ್ರ ಶೇರ್ – ವಾಟ್ಸಪ್‍ನಲ್ಲಿ ವೈರಲ್ ಮೆಸೇಜ್‍ಗೆ ಮಿತಿ

    ಸ್ಯಾನ್‍ಫ್ರಾನ್ಸಿಸ್ಕೋ: ಕೊರೊನಾ ಕುರಿತ ಸುಳ್ಳು ಸುದ್ದಿಗಳು ಶೇರ್ ಆಗುತ್ತಿರುವ ಹಿನ್ನೆಲೆಯಲ್ಲಿ ವೈರಲ್ ಆಗಿರುವ ಫಾರ್ವರ್ಡ್ ಮೆಸೇಜ್ ಕಳುಹಿಸಲು ವಾಟ್ಸಪ್ ಮಿತಿ ಹೇರಿದೆ.

    ಕೊರೊನಾದಿಂದ ಸಾಮಾಜಿಕ ಜಾಲತಾಣಗಳ ಜೊತೆ ಮೆಸೇಜಿಂಗ್ ಅಪ್ಲಿಕೇಶನ್ ಗಳ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಶ್ವದ ನಂಬರ್ ಒನ್ ಮೆಸೇಜಿಂಗ್ ಆ್ಯಪ್ ವಾಟ್ಸಪ್ ನಲ್ಲಿ ಸಂದೇಶಗಳ ಪ್ರವಾಹವೇ ಆಗುತ್ತಿದೆ.

    ಸಂದೇಶಗಳ ಪೈಕಿ ಸುಳ್ಳು ಮಾಹಿತಿ ಇರುವ ಅತಿ ಹೆಚ್ಚು ಶೇರ್ ಆಗಿರುವ ಪೋಸ್ಟ್ ಗಳನ್ನು ನಿಯಂತ್ರಿಸಲು ಒಬ್ಬರಿಗೆ ಮಾತ್ರ ಕಳುಹಿಸಲು ವಾಟ್ಸಪ್ ಮಿತಿ ಹೇರಿದೆ. ವಾಟ್ಸಪ್ ವಕ್ತಾರರು ಪ್ರತಿಕ್ರಿಯಿಸಿ, ಅನಿರ್ಧಿಷ್ಟವಧಿಯವರೆಗೆ ಹೊಸ ಮಿತಿ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಭಾರತದಲ್ಲಿ ಗುಂಪು ಗಲಾಟೆಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಗರಿಷ್ಟ 20 ಜನರಿಗೆ ಸೆಂಡ್ ಮಾಡುವ ಮೆಸೇಜ್ ಗಳ ಮಿತಿಯನ್ನು 5 ಜನರಿಗೆ ವಾಟ್ಸಪ್ ಇಳಿಸಿತ್ತು. ಇದರಿಂದಾಗಿ ಶೇ.25 ರಷ್ಟು ಸುಳ್ಳು ಸುದ್ದಿಗಳು ಹಂಚಿಕೆಯಾಗುವುದು ಕಡಿಮೆಯಾಗಿತ್ತು.

    ಇದರ ಜೊತೆ ವೈರಲ್ ಆಗಿರುವ ಮತ್ತು ಅತಿ ಹೆಚ್ಚು ಶೇರ್ ಮಾಡಿರುವ ಮೆಸೇಜ್ ಗಳು ಬಳಕೆದಾರರರಿಗೆ ಸುಲಭವಾಗಿ ತಿಳಿಯಲು ಎರಡು ಬಾಣಗಳ(double arrows) ಐಕಾನ್ ಗಳನ್ನು ಪರಿಚಯಿಸಿತ್ತು. ವೈರಲ್ ಮೆಸೇಜ್ ಸೆಂಡ್ ಮಾಡುವ ಸಮಯದಲ್ಲಿ ತೆರೆಯುವ ಪುಟದ ಆರಂಭದಲ್ಲಿ “ಈ ಮೆಸೇಜ್ ಅತಿ ಹೆಚ್ಚು ಸಂಖ್ಯೆಯಲ್ಲಿ ಹಂಚಿಕೆಯಾಗಿದ್ದಕ್ಕೆ ಮಾರ್ಕ್ ಮಾಡಲಾಗಿದೆ” ಎಂದು ಬರೆದಿರುತ್ತದೆ. ಈ ಸಾಲನ್ನು ನೋಡಿಕೊಂಡು ಈ ಸಂದೇಶವನ್ನು ಕಳುಹಿಸಬೇಕೇ? ಬೇಡವೇ ಎಂದು ತೀರ್ಮಾನ ಮಾಡಬಹುದು.

     

  • ನಟಿ ದೀಪ್ತಿ ಕಾಪ್ಸೆಗೆ ಸೆಕ್ಸ್ ವರ್ಕರ್ಸ್ ಬೇಕೆಂದು ಮೆಸೇಜ್ ಹಾಕಿದ ಯುವಕ

    ನಟಿ ದೀಪ್ತಿ ಕಾಪ್ಸೆಗೆ ಸೆಕ್ಸ್ ವರ್ಕರ್ಸ್ ಬೇಕೆಂದು ಮೆಸೇಜ್ ಹಾಕಿದ ಯುವಕ

    ಬೆಂಗಳೂರು: ಇತ್ತೀಚೆಗೆ ಕೆಲವು ದಿನಗಳಿಂದ ಸ್ಯಾಂಡಲ್‍ವುಡ್ ನಟಿಯರು ಸಹ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ನಟಿ ದೀಪ್ತಿ ಕಾಪ್ಸೆ ಅವರಿಗೆ ಅಪರಿಚಿತ ಯುವಕನೋರ್ವ ವಾಟ್ಸಪ್ ನಲ್ಲಿ ಸೆಕ್ಸ್ ವರ್ಕರ್ಸ್ ಬೇಕೆಂದು ಮೆಸೇಜ್ ಹಾಕಿದ್ದಾನೆ.

    ಯುವಕನ ಮೇಸೇಜ್ ನೋಡಿದ ನಟಿ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ರಿಪ್ಲೈ ಮಾಡಿ, ನಿನ್ನ ಅಮ್ಮ ಅಥವಾ ತಂಗಿ ಬರಬಹುದು ಎಂದು ಖಡಕ್ಕಾಗಿ ದೀಪ್ತಿ ಕಾಪ್ಸೆ ಉತ್ತರಿಸಿದ್ದಾರೆ. ಈ ಬಗ್ಗೆ ದೀಪ್ತಿ ತಮ್ಮ ಫೇಸ್ ಬುಕ್ ಪೇಜಿನಲ್ಲಿ ವಾಟ್ಸಪ್ ಚಾಟ್ ಸ್ಕ್ರೀನ್ ಶಾಟ್ ತೆಗೆದು ಅಪ್ಲೋಡ್ ಮಾಡಿಕೊಂಡು ಆಕ್ರೋಶವನ್ನು ಹೊರಹಾಕಿದ್ದಾರೆ.

    ಹನಿ ಹನಿ ಇಬ್ಬನಿ, ಜ್ವಲಂತಂ, ಮಾಲ್ಗುಡಿ ಡೇಸ್, ಕಿರೀಟ ಮತ್ತು ಉಪೇಂದ್ರ ಮತ್ತೆ ಬಾ ಸಿನಿಮಾಗಳಲ್ಲಿ ದೀಪ್ತಿ ನಟಿಸಿದ್ದಾರೆ. ದೀಪ್ತಿ ಅವರು ತಮ್ಮ ಸಹಜ ನಟನೆ ಮೂಲಕ ವಿಮರ್ಶಕರ ಮೆಚ್ಚುಗೆಯನ್ನು ಸಹ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾದ ನಾಯಕಿ ಸನುಷಾ ಕನ್ಯಾಕುಮಾರಿಯಿಂದ ತಿರುವನಂತಪುರಗೆ ಮಾವೆಲಿ ಎಕ್ಸ್ ಪ್ರೆಸ್ ನಲ್ಲಿ ಬರುತ್ತಿದ್ದಾಗ ಅಪರಿಚಿತನೊಬ್ಬ ಕಿರುಕುಳ ನೀಡಿದ್ದನು. ಹೆಬ್ಬುಲಿ ನಾಯಕಿ ಅಮಲಾ ಪೌಲ್ ಮಲೇಶಿಯಾದಲ್ಲಿ ಡ್ಯಾನ್ಸ್ ಅಭ್ಯಾಸ ಮಾಡುವಾಗ ವ್ಯಕ್ತಿಯೊಬ್ಬ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದನು. ಈ ಬಗ್ಗೆ ಅಮಲಾ ಪೌಲ್ ವ್ಯಕ್ತಿಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ.


     

  • ಇನ್ನು ಮುಂದೆ ವಾಟ್ಸಪ್‍ನಲ್ಲೂ ಹಣ ಸೆಂಡ್ ಮಾಡಬಹುದು!

    ಇನ್ನು ಮುಂದೆ ವಾಟ್ಸಪ್‍ನಲ್ಲೂ ಹಣ ಸೆಂಡ್ ಮಾಡಬಹುದು!

    ನವದೆಹಲಿ: ಮೆಸೇಜ್, ಫೋಟೋ, ವಿಡಿಯೋಗಳನ್ನು ಇಲ್ಲಿಯವೆಗೆ ಸೆಂಡ್ ಮಾಡುತ್ತಿದ್ದ ನೀವು ಇನ್ನು ಮುಂದೆ ವಾಟ್ಸಪ್‍ನಲ್ಲಿ ಹಣವನ್ನು ಕಳುಹಿಸಬಹುದು.

    ಹೌದು. ವಾಟ್ಸಪ್ ಕಂಪೆನಿ ತನ್ನ ಬಳಕೆದಾರರಿಗೆ ಆ್ಯಪ್ ಮೂಲಕವೇ ಹಣವನ್ನು ವರ್ಗಾವಣೆ ಮಾಡುವ ವಿಶೇಷತೆಯನ್ನು ಸೇರಿಸಲು ಮುಂದಾಗುತ್ತಿದೆ.

    ಈ ಸಂಬಂಧವಾಗಿ ವಾಟ್ಸಪ್ ಕಂಪೆನಿ ಜಾಹಿರಾತು ಪ್ರಕಟಿಸಿದ್ದು, ಯುನಿಫೈಡ್ ಪೇಮೆಂಟ್ ಇಂಟರ್‍ಫೇಸ್(ಯುಪಿಐ) ಭೀಮ್ ಆ್ಯಪ್ ಮತ್ತು ಆಧಾರ್ ನಂಬರ್ ಇವುಗಳಲ್ಲಿ ಪರಿಣಿತಿ ಹೊಂದಿರುವ ಅಭ್ಯರ್ಥಿಗಳನ್ನು ಹುಡುಕುತ್ತಿರುವುದಾಗಿ ತಿಳಿಸಿದೆ. ಅಕ್ಟೋಬರ್ ಒಳಗಡೆ ಈ ವಿಶೇಷತೆ ವಾಟ್ಸಪ್ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

    ನವೆಂಬರ್ 8ರಂದು ಕೇಂದ್ರ ಸರ್ಕಾರ 1 ಸಾವಿರ ಮತ್ತು 500 ರೂ. ನೋಟುಗಳನ್ನು ನಿಷೇಧಗೊಳಿಸಿದ ಬಳಿಕ ಭಾರತದಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಟ್ಸಪ್ ಈಗ ಈ ಕ್ಷೇತ್ರದತ್ತ ಕಣ್ಣುಹಾಕಿದೆ.

    ವಾಟ್ಸಪ್ 8ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆ ವಾಟ್ಸಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮಾತನಾಡಿದ್ದರು. ಈ ವೇಳೆ ಈ ವೇಳೆ ಬುಸಿನೆಸ್ ಕ್ಷೇತ್ರವನ್ನು ಹೇಗೆ ವಿಸ್ತರಿಸುತ್ತೀರಿ ಎನ್ನುವ ಪ್ರಶ್ನೆಗೆ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ವಿಚಾರದ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ, ಭಾರತೀಯ ಬಳಕೆದಾರರಿಗೆ ಕೆಲಸ ಮಾಡುವುದು ಸಂತದ ತಂದಿದೆ ಎಂದು ಅವರು ತಿಳಿಸಿದ್ದರು.

    2009 ಫೆಬ್ರವರಿ 9ರಂದು ಆರಂಭಗೊಂಡ ವಾಟ್ಸಪ್ ಕಂಪೆನಿಯನ್ನು 19 ಶತಕೋಟಿ ಡಾಲರ್ ನೀಡಿ ಫೇಸ್‍ಬುಕ್ 2014ರಲ್ಲಿ ಖರೀದಿಸಿದೆ. ಯಾವುದೇ ಕಾರಣಕ್ಕೂ ಜಾಹೀರಾತುಗಳನ್ನು ತೋರಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಪ್ರಸ್ತುತ ವಿಶ್ವದಲ್ಲಿ ಪ್ರತಿ ತಿಂಗಳು 102 ಕೋಟಿ ಸಕ್ರೀಯ ಬಳಕೆದಾರರಿದ್ದು, ಭಾರತದಲ್ಲೇ 20 ಕೋಟಿ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ.

    ಫೆಬ್ರವರಿ 24ರಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಬ್ರಿಯಾನ್ ಆಕ್ಟನ್ ಭೇಟಿ ಮಾಡಿ ‘ಡಿಜಿಟಲ್ ಇಂಡಿಯಾ’  ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದರು.

    ವಾಟ್ಸಪ್ ಪ್ರಕಟಿಸಿರುವ ಜಾಹಿರಾತು