Tag: ಮಸೂದೆ

  • 17ನೇ ಲೋಕಸಭೆಯಲ್ಲಿ 221 ಮಸೂದೆ ಅಂಗೀಕಾರ: ಪ್ರಹ್ಲಾದ್ ಜೋಶಿ

    17ನೇ ಲೋಕಸಭೆಯಲ್ಲಿ 221 ಮಸೂದೆ ಅಂಗೀಕಾರ: ಪ್ರಹ್ಲಾದ್ ಜೋಶಿ

    ನವದೆಹಲಿ: 17ನೇ ಲೋಕಸಭೆ (Lok Sabha Election) ಅವಧಿಯಲ್ಲಿ ಉಭಯ ಸದನಗಳಲ್ಲಿ ಐದು ವರ್ಷಗಳ ಕಾಲ ಒಟ್ಟು 221 ಮಸೂದೆಗಳನ್ನು (Bill) ಅಂಗೀಕರಿಸಲಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ತಿಳಿಸಿದ್ದಾರೆ.

    17ನೇ ಲೋಕಸಭೆ ಕೊನೆಯ ಅಧಿವೇಶನದ ಕೊನೆಯ ದಿನವಾದ ಶನಿವಾರ ಸಂಸತ್ ಕಲಾಪದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, 5 ವರ್ಷಗಳಲ್ಲಿ 545 ಸಭೆಗಳಲ್ಲಿ ಸಕ್ರೀಯವಾಗಿ ಭಾಗಿಯಾಗಿದೆ ಹೇಳಿದ್ದಾರೆ. 5 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸಮರ್ಥ ನಾಯಕತ್ವದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುವ ಸುಯೋಗಕ್ಕಾಗಿ ಕೃತಜ್ಞನಾಗಿರುತ್ತೇನೆ ಎಂದರು. ಇದನ್ನೂ ಓದಿ: ಮುಂದಿನ 25 ವರ್ಷಗಳಲ್ಲಿ ‘ವಿಕಸಿತ ಭಾರತ’ ಕನಸು ನನಸಾಗುತ್ತೆ: ಮೋದಿ ಭರವಸೆ

    ಕಳೆದ 5 ವರ್ಷಗಳಲ್ಲಿ ಉಭಯ ಸದನಗಳ ವ್ಯವಹಾರಕ್ಕೆ ಕೊಡುಗೆ ನೀಡಿ, 545 ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಪ್ರತಿಯೊಬ್ಬ ಸದಸ್ಯರು ಮತ್ತು ರಾಜಕೀಯ ಪಕ್ಷಗಳಿಗೆ ಜೋಶಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಉಭಯ ಸದನಗಳಿಂದ ಒಟ್ಟು 221 ಮಸೂದೆಗಳು ಅಂಗೀಕರಿಸಲ್ಪಟ್ಟಿವೆ ಮತ್ತು ಕಾಯ್ದೆಗಳಾಗಿ ಮಾರ್ಪಟ್ಟಿವೆ ಎಂದ ವಿವರಿಸಿದರು. ಇದನ್ನೂ ಓದಿ: ದೇಶಕ್ಕೆ ಒಂದೇ ಸಂವಿಧಾನ ಬೇಕೆಂಬ ಕನಸು ಸಾಕಾರಗೊಂಡಿದೆ – ಮೋದಿ ಬಣ್ಣನೆ

    17ನೇ ಲೋಕಸಭೆಯ ಉತ್ಪಾದಕತೆ 97% ಆಗಿದೆ. ಈ ಸಭೆಯನ್ನು ಮುಕ್ತಾಯಗೊಳಿಸುತ್ತಿದ್ದಂತೆ, 100% ಕ್ಕಿಂತ ಹೆಚ್ಚು ಉತ್ಪಾದಕತೆಯನ್ನು ಸಾಧಿಸುವ ಸಂಕಲ್ಪದೊಂದಿಗೆ ನಾವು 18ನೇ ಲೋಕಸಭೆಗೆ ಪ್ರವೇಶಿಸುತ್ತೇವೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮಮಂದಿರ ಮುಂದಿನ ತಲೆಮಾರಿಗೆ ಹೆಮ್ಮೆಯ ಸಂಕೇತ: ಮೋದಿ

  • ಸಲಿಂಗ ವಿವಾಹಕ್ಕೆ ರಕ್ಷಣೆ – ಮಸೂದೆ ಅಂಗೀಕರಿಸಿದ ಯುಎಸ್‌ ಹೌಸ್‌

    ಸಲಿಂಗ ವಿವಾಹಕ್ಕೆ ರಕ್ಷಣೆ – ಮಸೂದೆ ಅಂಗೀಕರಿಸಿದ ಯುಎಸ್‌ ಹೌಸ್‌

    ವಾಷಿಂಗ್ಟನ್: ಸಲಿಂಗ ವಿವಾಹ ಮಾನ್ಯತೆಯನ್ನು ರಕ್ಷಿಸುವ ಮಸೂದೆಯನ್ನು ಯುಎಸ್‌ ಹೌಸ್‌ ರೆಪ್ರೆಸೆಂಟೇಟಿವ್ಸ್‌ ಅಂಗೀಕರಿಸಿದೆ.

    ರೆಸ್ಪೆಕ್ಟ್‌ ಫಾರ್‌ ಮ್ಯಾರೇಜ್‌ ಆ್ಯಕ್ಟ್ (ವಿವಾಹ‌ ಕಾಯ್ದೆಗೆ ಗೌರವ) ಶೀರ್ಷಿಕೆಯಡಿ ಪ್ರಸ್ತಾಪಿಸಲಾಗಿದೆ ಮಸೂದೆಗೆ ಯುಎಸ್‌ ಹೌಸ್‌ ಬಹುಮತದೊಂದಿಗೆ ಅಂಗೀಕಾರ ನೀಡಿದೆ. ಮಸೂದೆಗೆ 47 ರಿಪಬ್ಲಿಕನ್ನರು ಸಹ ಡೆಮಾಕ್ಟ್ರಾಟ್ಸ್‌ ಜೊತೆಗೆ ಒಪ್ಪಿಗೆ ಸೂಚಿಸಿದರು. ಇದನ್ನೂ ಓದಿ: ಬ್ರಿಟಿಷ್ ಪ್ರಧಾನಿ ಹುದ್ದೆಗೆ ಸುನಾಕ್ ಇನ್ನೂ ಹತ್ತಿರ – 4 ನೇ ಸುತ್ತಿನ ಮತದಾನದಲ್ಲೂ ಜಯ

    ಮಸೂದೆಯು ಈಗ ಮತಕ್ಕಾಗಿ ಸೆನೆಟ್‌ಗೆ ಹೋಗುತ್ತದೆ. 100 ಸದಸ್ಯರ ಸೆನೆಟ್‌ನಲ್ಲಿ ಡೆಮಾಕ್ರಾಟ್‌ಗಳು 50 ಸ್ಥಾನಗಳನ್ನು ಹೊಂದಿದ್ದಾರೆ. ಈ ಕಾನೂನು ಜಾರಿಗೆ 10 ರಿಪಬ್ಲಿಕನ್ ಮತಗಳು ಬೇಕಾಗುತ್ತದೆ.

    ಕಳೆದ ವಾರ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಗರ್ಭಪಾತ ಕ್ರಮವನ್ನು ರಕ್ಷಿಸಲು ಸದನವು ಎರಡು ಮಸೂದೆಗಳನ್ನು ಅಂಗೀಕರಿಸಿತು. ಇದನ್ನೂ ಓದಿ: ರೂಪಾಯಿ ಮೌಲ್ಯ ಪಾತಾಳಕ್ಕೆ – 1 ಡಾಲರ್ = 80.13 ರೂ.

    ತಮ್ಮ ಇಷ್ಟದಂತೆ ಬದುಕನ್ನು ರೂಪಿಸಿಕೊಳ್ಳಲು ವಿವಾಹವಾಗುವವರಿಗೆ ಸರ್ಕಾರ ಗೌರವ ಕೊಡುತ್ತದೆ. ಅವರ ವಿವಾಹವನ್ನೂ ಪರಿಗಣಿಸುತ್ತದೆ ಎಂದು ಮಸೂದೆ ಅಂಗೀಕಾರಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ರೆಪ್. ಜೆರ್ರಿ ನಾಡ್ಲರ್ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮುಂದಾದ ಸರ್ಕಾರ – ಮಸೂದೆಯಲ್ಲಿ ಏನಿದೆ?

    ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮುಂದಾದ ಸರ್ಕಾರ – ಮಸೂದೆಯಲ್ಲಿ ಏನಿದೆ?

    ಬೆಂಗಳೂರು: ದೇಗುಲ ತೆರವು ಮಾಡಿ ಹಿಂದೂ ಸಂಘಟನೆ ಮತ್ತು ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ಸರ್ಕಾರ ಈಗ ಎಚ್ಚೆತ್ತಿದೆ. ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ಮಾಡದಿರಲು ತೀರ್ಮಾನಿಸಿದೆ.

    ಸುಪ್ರೀಂಕೋರ್ಟ್ ಆದೇಶ ಪಾಲನೆಯಿಂದ ಬಚಾವ್ ಆಗಲು ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಮಸೂದೆ -2021 ಮಂಡಿಸಿದೆ.

    ಕಾನೂನು ತೊಡಕು ಹಿನ್ನೆಲೆಯಲ್ಲಿ ಹುಚ್ಚಗಣಿ ಮಹಾದೇವಮ್ಮ ದೇಗುಲದ ಮರು ನಿರ್ಮಾಣದ ಹೊಣೆಯನ್ನು ಸರ್ಕಾರದ ಬದಲು ಪಕ್ಷದ ಹೆಗಲಿಗೆ ವಹಿಸಲು ಸಂಪುಟ ಸಭೆಯಲ್ಲಿ ಸಿಎಂ ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೇರಲ್ಲ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮ: ಬೆಲ್ಲದ್ 

    ಇದೇ ವೇಳೆ, ಮುದ್ರಾಂಕ ಶುಲ್ಕ ಕಡಿತಕ್ಕೆ ತಿದ್ದುಪಡಿ ವಿಧೇಯಕ, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕವನ್ನು ಸರ್ಕಾರ ಮಂಡಿಸಿದೆ. ಮುದ್ರಾಂಕ ಶುಲ್ಕವನ್ನು ಶೇ.5ರಿಂದ ಶೇ.3ಕ್ಕೆ ಇಳಿಸಲು ಸರ್ಕಾರ ಉದ್ದೇಶಿಸಿದೆ.

    45 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಮನೆಗಳಿಗೆ ಇನ್ನು ಮುಂದೆ ಶೇ.3ರಷ್ಟು ಮುದ್ರಾಂಕ ಶುಲ್ಕ ಅನ್ವಯವಾಗಲಿದೆ. ಆದ್ರೆ, ಸೈಟ್‍ಗಳಿಗೂ ರಿಯಾಯ್ತಿ ನೀಡಿ ಅಂತ ಕಾಂಗ್ರೆಸ್ ಒತ್ತಾಯಿಸಿದೆ. ಇದನ್ನೂ ಓದಿ: ನಾನು ಒಬ್ಬ ಜನಪ್ರತಿನಿಧಿ – ಹೆಚ್‍ಡಿಕೆಗೆ ಡಿಕೆ ಸುರೇಶ್ ತಿರುಗೇಟು

    ಮಸೂದೆಯಲ್ಲಿ ಏನಿದೆ?
    – ಈ ಅಧಿನಿಯಮ ಜಾರಿಯಾದ ದಿನದಂದು ಅಸ್ತಿತ್ವದಲ್ಲಿರುವ ಎಲ್ಲಾ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ
    – ಯಾವುದೇ ತೀರ್ಪು, ಆದೇಶ ಇದ್ರೂ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಧಾರ್ಮಿಕ ಕೇಂದ್ರಗಳ ಸಂರಕ್ಷಣೆ
    – ಸಾರ್ವಜನಿಕ ಸ್ಥಳಗಳಲ್ಲಿ ಇನ್ಮುಂದೆ ಯಾವುದೇ ಧಾರ್ಮಿಕ ಕಟ್ಟಡ ಕಟ್ಟಲು ಅವಕಾಶ ನೀಡಬಾರದು
    – ಸಂರಕ್ಷಿತ ಕಟ್ಟಡಗಳಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆ ನಡೆಸಲು ಅವಕಾಶ ನೀಡುವುದು
    – ಸದ್ಬಾವನೆಯಿಂದ ಹೋರಾಟ ನಡೆಸಿದವರ ವಿರುದ್ಧ ಯಾವುದೇ ದಾವೆ ಹೂಡುವಂತಿಲ್ಲ (ಧಾರ್ಮಿಕ ಕೇಂದ್ರದ ವ್ಯಾಪ್ತಿಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ, ಬೌದ್ಧ ವಿಹಾರ, ಮಜರ್ ಗಳು ಸೇರಿದಂತೆ ಯಾವುದೇ ಧಾರ್ಮಿಕ ಕಟ್ಟಡಗಳು)

     

  • ಎಸ್‍ಸಿ, ಎಸ್‍ಟಿ ಮೀಸಲಾತಿ – 10 ವರ್ಷ ವಿಸ್ತರಿಸಲು ಕೇಂದ್ರ ಸಂಪುಟ ಒಪ್ಪಿಗೆ

    ಎಸ್‍ಸಿ, ಎಸ್‍ಟಿ ಮೀಸಲಾತಿ – 10 ವರ್ಷ ವಿಸ್ತರಿಸಲು ಕೇಂದ್ರ ಸಂಪುಟ ಒಪ್ಪಿಗೆ

    ನವದೆಹಲಿ: ಕೇಂದ್ರ ಕ್ಯಾಬಿನೆಟ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನೀಡಲಾಗಿದ್ದ ಮೀಸಲಾತಿ ಅವಧಿಯನ್ನು 10 ವರ್ಷ ವಿಸ್ತರಿಸಲು ಅನುಮೋದನೆ ನೀಡಿದೆ.

    ಪ್ರಸ್ತುತ ಈಗ ಇರುವ ಮೀಸಲಾತಿ ಅವಧಿ 2020ರ ಜನವರಿ 25ಕ್ಕೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಸರ್ಕಾರ 10 ವರ್ಷ ವಿಸ್ತರಿಸಲು ರಚನೆಯಾಗಿದ್ದ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ಸರ್ಕಾರ ಈ ಚಳಿಗಾಲದ ಅಧಿವೇಶನದಲ್ಲಿ ಅವಧಿ ವಿಸ್ತರಿಸುವ ಸಂಬಂಧ ಮಸೂದೆಯನ್ನು ಮಂಡಿಸಲಿದೆ. ಈ ವೇಳೆ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಮೀಸಲಾತಿ ನೀಡುವುದು ಬೇಡ ಎನ್ನುವ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎಂದು ಮೂಲಗಳು ತಿಳಿಸಿವೆ.

    ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಸೂದೆ ಮಂಡನೆಯಾದಾಗ ಸಂಪೂರ್ಣ ವಿವರ ಲಭ್ಯವಾಗಲಿದೆ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಸಂಸತ್ತಿನಲ್ಲಿ 84 ಪರಿಶಿಷ್ಟ ಜಾತಿ ಮತ್ತು 47 ಮಂದಿ ಪರಿಶಿಷ್ಟ ಪಂಗಡದ ಸದಸ್ಯರಿದ್ದಾರೆ. ರಾಜ್ಯಗಳಲ್ಲಿರುವ ಶಾಸನ ಸಭೆಯಲ್ಲಿ ಒಟ್ಟು 614 ಪರಿಶಿಷ್ಟ ಜಾತಿಯವರಿದ್ದರೆ 554 ಪರಿಶಿಷ್ಟ ಪಂಗಡದ ಸದಸ್ಯರಿದ್ದಾರೆ.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಸಾಂವಿಧಾನಿಕ ತಿದ್ದುಪಡಿ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಮೀಸಲಾತಿಯನ್ನು ತರಲಾಗಿದೆ. ಈ ಸಮುದಾಯದ ಜನರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎನ್ನುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.

  • ಡಿಸ್‍ಕನೆಕ್ಟ್ ಕಾಯ್ದೆ ಜಾರಿಯಾದ್ರೆ ಬಾಸ್‍ಗೆ ನೀವು ಹೆದರುವ ಅಗತ್ಯವೇ ಇಲ್ಲ!

    ಡಿಸ್‍ಕನೆಕ್ಟ್ ಕಾಯ್ದೆ ಜಾರಿಯಾದ್ರೆ ಬಾಸ್‍ಗೆ ನೀವು ಹೆದರುವ ಅಗತ್ಯವೇ ಇಲ್ಲ!

    ನವದೆಹಲಿ: “ಕಾಲ್ ರಿಸೀವ್ ಮಾಡಿಲ್ಲ ಯಾಕೆ? ಮೇಲ್ ಕಳುಹಿಸಿದ್ರು ರಿಪ್ಲೈ ಮಾಡಿಲ್ಲ ಯಾಕೆ?” ಈ ರೀತಿಯ ಪ್ರಶ್ನೆಗಳನ್ನು ಆಫೀಸ್ ಕೆಲಸ ಮುಗಿಸಿ ಮನೆಗೆ ಬಂದರೂ ಉದ್ಯೋಗಿಗಳಿಗೆ ಬಾಸ್ ಸಾಮಾನ್ಯವಾಗಿ ಕೇಳುತ್ತಿರುತ್ತಾರೆ. ಆದರೆ ಈ ಬಾರಿ ಮಂಡನೆಯಾಗಿರುವ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಈ ರೀತಿಯಾಗಿ ಬಾಸ್ ಕೇಳುವ ಪ್ರಶ್ನೆಗಳಿಗೆ ಫುಲ್ ಸ್ಟಾಪ್ ಬೀಳಲಿದೆ.

    ಹೌದು. ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ‘ರೈಟ್ ಟು ಡಿಸ್‍ಕನೆಕ್ಟ್’ ಮಸೂದೆ ಮಂಡನೆಯಾಗಿದೆ. ಮನೆಗೆ ತೆರಳಿದ ಬಳಿಕವೂ ಉದ್ಯೋಗಿಯ ಖಾಸಗಿ ಬದುಕನ್ನು ರಕ್ಷಿಸುವ ಸಲುವಾಗಿ ಎನ್‍ಸಿಪಿ ನಾಯಕಿ ಸುಪ್ರಿಯಾ ಸುಳೆ ಈ ಮಸೂದೆಯನ್ನು ಮಂಡಿಸಿದ್ದಾರೆ.

     

    ಮಸೂದೆಯಲ್ಲಿ ಏನಿದೆ?
    ಆಫೀಸ್ ಅವಧಿ ಮುಗಿದ ಬಳಿಕವೂ ಮನೆಯಲ್ಲಿ ಬಾಸ್ ಕರೆ, ಇ ಮೇಲ್‍ಗೆ ಉತ್ತರಿಸದೇ ಇರುವ ಸಂಪೂರ್ಣ ಸ್ವಾತಂತ್ರ್ಯ ನೀಡುವ ಅಂಶ ಈ ಮಸೂದೆಯಲ್ಲಿದೆ. ಉದ್ಯೋಗಿಯ ವೃತ್ತಿಜೀವನ ಮತ್ತು ಖಾಸಗಿ ಜೀವನದ ನಡುವೆ ಅಂತರ ಕಾಯ್ದುಕೊಳ್ಳಲು ಮತ್ತು ವೃತ್ತಿಜೀವನದ ಒತ್ತಡವನ್ನು ಕಡಿಮೆ ಮಾಡಲು ಈ ಮಸೂದೆಯನ್ನು ಮಂಡಿಸಲಾಗಿದೆ.

    ಹೇಗೆ ಕೆಲಸ ಮಾಡುತ್ತೆ?
    ಒಂದು ಕಂಪನಿಯಲ್ಲಿ 10ಕ್ಕೂ ಅಧಿಕ ಉದ್ಯೋಗಿಗಳಿದ್ದು, ಅವರು ಉದ್ಯೋಗಿಗಳ ಕಲ್ಯಾಣ ಸಮಿತಿ ರಚಿಸಿಕೊಂಡಿದ್ದರೆ ಇದು ಸಹಾಯವಾಗಲಿದೆ. ಆಫೀಸಿನಿಂದ ಮನೆಗೆ ತೆರಳಿದ ಬಳಿಕ ಬಾಸ್ ಕರೆಯನ್ನು ನಿರ್ಲಕ್ಷ್ಯಿಸಬಹುದು. ಇಮೇಲ್ ನೋಡಿದರೂ ರಿಪ್ಲೈ ಮಾಡುವ ಅಗತ್ಯ ಇರುವುದಿಲ್ಲ. ಬಾಸ್ ಕರೆಯನ್ನು ನಿರ್ಲಕ್ಷ್ಯ ಮಾಡಿದರೂ ಉದ್ಯೋಗಿಗಳನ್ನು ಪ್ರಶ್ನಿಸಬಾರದು ಮತ್ತು ಯಾವುದೇ ಶಿಸ್ತು ಕ್ರಮ ಕೈಗೊಳ್ಳುವಂತಿಲ್ಲ ಎನ್ನುವ ವಿಶೇಷ ಅಂಶ ಈ ಮಸೂದೆಯಲ್ಲಿದೆ. ಕೇವಲ ಕೆಲಸದ ಅವಧಿ ಅಲ್ಲದೇ ರಾಜಾ ದಿನಕ್ಕೂ ಈ ನಿಯಮ ಅನ್ವಯವಾಗುತ್ತದೆ.

    ಬೇರೆ ಕಡೆ ಜಾರಿಯಲ್ಲಿದೆ:
    ಫ್ರಾನ್ಸ್ ದೇಶದಲ್ಲಿ 2017ರಲ್ಲಿ ಮೊದಲ ಬಾರಿಗೆ ಈ ಕಾಯ್ದೆ ಜಾರಿಗೆ ಬಂದಿದ್ದು, ನಂತರ ಸ್ಪೇನ್, ಜರ್ಮನಿ ಮತ್ತು ಅಮೆರಿಕದ ಕೆಲ ಕಂಪನಿಗಳು ಈ ನಿಯಮವನ್ನು ಅಳವಡಿಸಿಕೊಂಡಿದೆ. ಆಫೀಸ್ ಸಮಯದ ನಂತರವೂ ಇಮೇಲ್ ಚೆಕ್, ಫೋನ್ ಕಾಲ್ ರಿಸೀವ್ ಮಾಡಿದ್ದರಿಂದ ಒತ್ತಡ ಹೆಚ್ಚಾಗಿ ಮನೆಯ ವಾತಾವರಣ ಹಾಳಾಗಿ ಸಾಂಸಾರಿಕ ಜೀವನದ ಮೇಲೂ ಪೆಟ್ಟು ಬೀಳುತ್ತದೆ. ಇದರಿಂದಾಗಿ ಉದ್ಯೋಗಿಯ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತದೆ ಎನ್ನುವ ವಿಚಾರದ ಬಗ್ಗೆ ಸಾಕಷ್ಟು ಅಧ್ಯಯನಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ವಿದೇಶದಲ್ಲಿ ಈ ಕಾಯ್ದೆ ಜಾರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗಳವಾರ ಸಾರಿಗೆ ಬಂದ್: ಏನಿರುತ್ತೆ? ಏನಿರಲ್ಲ?

    ಮಂಗಳವಾರ ಸಾರಿಗೆ ಬಂದ್: ಏನಿರುತ್ತೆ? ಏನಿರಲ್ಲ?

    ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ನೂತನ ಮೋಟಾರು ವಾಹನ ತಿದ್ದುಪಡಿ ಮಸೂದೆಯನ್ನು ಹಿಂಪಡೆದುಕೊಳ್ಳುವಂತೆ ದೇಶಾದ್ಯಂತ ವಿವಿಧ ಸಾರಿಗೆ  ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟಿವೆ.

    ಸಂಘಟನೆಗಳು ಕರೆ ನೀಡಿದ್ದರೂ ಮಂಗಳವಾರ ಸಾರಿಗೆ ಬಂದ್ ಠುಸ್ ಪಠಾಕಿಯಾಗುವ ಸಾಧ್ಯತೆಯಿದೆ. ಬಿಎಂಟಿಸಿ ಸೇರಿದಂತೆ ಕೆಎಸ್​ಆರ್​ಟಿಸಿ, ವಾಯುವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿಲ್ಲ. ನಮ್ಮ ಮೆಟ್ರೋ ಮತ್ತು ಶಾಲಾ ವಾಹನಗಳ ಮಾಲೀಕರು ಬೆಂಬಲ ನೀಡಿಲ್ಲ.

    ಬಂದ್ ಗೆ ನಮ್ಮ ಮೆಟ್ರೋ ನೌಕರರು ನೈತಿಕ ಬೆಂಬಲ ನೀಡಿದ್ದಾರೆ. ನೌಕರರು ತಮ್ಮ ಪಾಳಿ ಮುಗಿದ ಬಳಿಕ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೆಟ್ರೋ ನೌಕರರ ಸಂಘ ಹೇಳಿದೆ. ಲಾರಿಗಳು ಎಂದಿನಂತೆ ರಸ್ತೆಗಿಳಿಯಲಿವೆ. ಬಂದ್‍ಗೆ ನಮ್ಮ ನೈತಿಕ ಬೆಂಬಲ ಇದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿಕೆ ನೀಡಿದ್ದಾರೆ.

    ಆಟೋ ಚಾಲಕರ ಸಂಘ ಮತ್ತು ಟ್ಯಾಕ್ಸಿ ಮಾಲೀಕರ ಸಂಘ ಬಂದ್‍ಗೆ ಬೆಂಬಲ ನೀಡಿದೆ. ಹೀಗಾಗಿ ಮಂಗಳವಾರ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಾ ಓಲಾ-ಊಬರ್ ಹಾಗೂ ಇತರೆ ಟ್ಯಾಕ್ಸಿಗಳು ಸೇವೆಯಲ್ಲಿ ವ್ಯತ್ಯಯ ಉಂಟಾತ್ತದೆ. ಬಂದ್ ಗೆ ಬೆಂಬಲ ನೀಡಿರುವುದಾಗಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳರವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ನೌಕರರ ಒಕ್ಕೂಟವಾದ ಸಿಐಟಿಯು ದೇಶಾದ್ಯಂತ ನಡೆಯುತ್ತಿರುವ ಬಂದ್ ಗೆ ಎಲ್ಲಾ ವಾಹನ ಸವಾರರು ಸಹಕರಿಸುವಂತೆ ನಗರದ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಕರಪತ್ರ ಹಂಚುತ್ತಿದ್ದಾರೆ.

    ಮಂಗಳವಾರದ ಸಾರಿಗೆ ಬಂದ್ ಗೆ ಎಐಟಿಯುಸಿ ಬೆಂಬಲ ನೀಡಿಲ್ಲ. ಸಿಐಟಿಯು ಕರೆ ಕೊಟ್ಟ ಬಂದ್ ಗೆ ಸಾರಿಗೆ ನಿಗಮದ ನೌಕರರ ಸಂಘದಲ್ಲಿಯೇ ಅಪಸ್ವರ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎಐಟಿಯುಸಿಯು ಮಸೂದೆಗೆ ವಿರೋಧವಿದ್ದರೂ ಮಂಗಳವಾರದ ಬಂದ್ ಗೆ ಪಾಲ್ಗೊಳ್ಳದಂತೆ ತನ್ನ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ.

    ಈ ತಿದ್ದುಪಡಿ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಸಾರಿಗೆ ಉದ್ದಿಮೆ ಕಾರ್ಪೋರೇಟ್ ಕಂಪನಿಗಳ ವಶವಾಗಲಿದೆ. ಅಲ್ಲದೇ ದಂಡ ವಸೂಲಿ ಅವೈಜ್ಞಾನಿಕವಾಗಿದೆ ಎಂದು ನೌಕರರು ಆರೋಪಿಸಿದ್ದಾರೆ. ಕೂಡಲೇ ಮಸೂದೆಯನ್ನು ಹಿಂಪಡೆಯುವಂತೆ ಸಾರಿಗೆ ನೌಕರರು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಟೌನ್ ಹಾಲ್ ನಿಂದ ರ‍್ಯಾಲಿ ಪ್ರಾರಂಭವಾಗಿ ಫ್ರೀಡಂ ಪಾರ್ಕ್ ನಲ್ಲಿ ಅಂತಿಮಗೊಳ್ಳುತ್ತದೆ. ನೌಕರರು ಫ್ರೀಡಂ ಪಾಕ್‍ನಲ್ಲಿ ಬೃಹತ್ ಸಭೆಯನ್ನು ನಡೆಸಲಿದ್ದಾರೆ ಸಿದ್ಧತೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಾರಿಗೆ ನೌಕರರ ಮುಷ್ಕರಕ್ಕೆ ಕಾರಣವಾಗಿರುವ ಮಸೂದೆಯಲ್ಲಿ ಏನಿದೆ? ಎಷ್ಟಿದ್ದ ದಂಡ ಎಷ್ಟು ಏರಿಕೆ ಆಗುತ್ತೆ?

    ಸಾರಿಗೆ ನೌಕರರ ಮುಷ್ಕರಕ್ಕೆ ಕಾರಣವಾಗಿರುವ ಮಸೂದೆಯಲ್ಲಿ ಏನಿದೆ? ಎಷ್ಟಿದ್ದ ದಂಡ ಎಷ್ಟು ಏರಿಕೆ ಆಗುತ್ತೆ?

    ನವದೆಹಲಿ: ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ನೂತನ ಮೋಟಾರು ವಾಹನ ತಿದ್ದುಪಡಿ ಮಸೂದೆಯ ವಿರುದ್ಧ ದೇಶಾದ್ಯಂತ ಸಾರಿಗೆ ಸಂಘಟನೆಗಳು ಆಗಸ್ಟ್ 7 ರಂದು ಮುಷ್ಕರಕ್ಕೆ ಕರೆ ನೀಡಿವೆ. ಈ ಶಾಸನ ಕಾಯ್ದೆಯಾಗಿ ಜಾರಿಯಾದರೆ ಮರಣಶಾಸನ ಎಂದು ಸಂಘಟನೆಗಳು ಆರೋಪಿಸಿವೆ. ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿರುವ ತಿದ್ದುಪಡಿ ಮಸೂದೆಯಲ್ಲಿ ಏನಿದೆ ಎನ್ನುವುದಕ್ಕೆ ಇಲ್ಲಿ 18 ಪ್ರಮುಖ ವಿಚಾರಗಳನ್ನು ನೀಡಲಾಗಿದೆ.

    ಮಸೂದೆಯಲ್ಲಿರುವ ಪ್ರಮುಖ ಅಂಶಗಳು:
    1. ಚಾಲನಾ ಪರವಾನಿಗೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ.

    2. ಹಿಟ್-ಅಂಡ್-ರನ್ ಪ್ರಕರಣಗಳಲ್ಲಿ ಸಾವನ್ನಪ್ಪಿದ ಕುಟುಂಬದವರಿಗೆ ಈಗ ಸರ್ಕಾರದಿಂದ ಸಿಗುವ ಪರಿಹಾರ ಧನದ ಮೊತ್ತ 25 ಸಾವಿರ ರೂ ನೀಡುವ ಬದಲು 2 ಲಕ್ಷ ರೂಪಾಯಿಗೆ ಹೆಚ್ಚಳ.

    3. ಅಪ್ರಾಪ್ತರು ವಾಹನ ಚಾಲನೆ ನಡೆಸಿ ಅಪಘಾತ ನಡೆಸಿದರೆ ವಾಹನ ಮಾಲೀಕರು ಅಥವಾ ಪೋಷಕರ ಮೇಲೆ ಕೇಸ್ ದಾಖಲಿಸುವುದು. ಒಂದು ವೇಳೆ ಪೋಷಕರಿಗೆ ತಿಳಿಯದೇ ಕೃತ್ಯ ಎಸಗಿದರೆ ಕೇಸ್ ದಾಖಲಿಸದೇ ಇರುವುದು. ಬಾಲನ್ಯಾಯ ಕಾಯ್ದೆಯ ಅಡಿಯಲ್ಲಿ ಈ ಪ್ರಕರಣಗಳನ್ನು ವಿಚಾರಣೆ ನಡೆಸುವುದು.

    4. ಅಪಘಾತಗಳಲ್ಲಿ ಗಾಯಗೊಂಡವರ ರಕ್ಷಣೆಗೆ ಧಾವಿಸುವವರ ಮೇಲೆ ಯಾವುದೇ ಕೇಸುಗಳನ್ನು ದಾಖಲಿಸಬಾರದು, ಪೊಲೀಸರು ಮತ್ತು ಆಸ್ಪತ್ರೆಗಳು ರಕ್ಷಿಸಿದವರ ಮಾಹಿತಿಯನ್ನು ಕೇಳಬಾರದು.

    5. ಕುಡಿದು ವಾಹನ ಚಾಲನೆ ಎಸಗಿದರೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣ 10 ಸಾವಿರ ರೂ.ಗೆ ಏರಿಕೆ. ಈಗ 2 ಸಾವಿರ ರೂ. ವಿಧಿಸಲಾಗುತ್ತಿದೆ.

    6. ನಿರ್ಲಕ್ಷ್ಯ ವಾಹನ ಚಾಲನೆಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತ 1 ಸಾವಿರ ರೂ. ನಿಂದ 5 ಸಾವಿರ ರೂ.ಗೆ ಏರಿಕೆ.

    7. ಚಾಲನಾ ಪರವಾನಿಗೆ ಇಲ್ಲದೆ, ವಾಹನ ಚಲಾಯಿಸಿದರೆ 500 ರೂ. ದಂಡದ ಬದಲು 5 ಸಾವಿರಕ್ಕೆ ಏರಿಕೆ.

    8. ಓವರ್ ಸ್ಪೀಡಿಂಗ್ ಗೆ ವಿಧಿಸಲಾಗುತ್ತಿದ್ದ ದಂಡ 400 ರೂ. ಬದಲು 1 ಸಾವಿರ ರೂ, 2 ಸಾವಿರ ರೂ.ಗೆ ಏರಿಕೆ.

    9. ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ 100 ರೂ. ಇದ್ದ ದಂಡವನ್ನು 1 ಸಾವಿರಕ್ಕೆ ಏರಿಕೆ.

    10. ವಾಹನ ಚಾಲನೆ ವೇಳೆ ಮೊಬೈಲ್ ಬಳಸಿ ಸಿಕ್ಕಿಬಿದ್ದಲ್ಲಿ 1 ಸಾವಿರದಿಂದ 5 ಸಾವಿರ ರೂ.ಗೆ ದಂಡ ಏರಿಕೆ.

    11. ಅಪಘಾತ ಸಂದರ್ಭಗಳಲ್ಲಿ ಎಲ್ಲಾ ಗಾಯಗೊಂಡ, ಸಾವನ್ನಪ್ಪಿದ ವ್ಯಕ್ತಿಗಳಿಗೆ ಕಡ್ಡಾಯ ವಿಮೆ.

    12.ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಅಗತ್ಯಕ್ಕೆ ತಕ್ಕಂತೆ ವಾಹನ ಬದಲಾವಣೆ ಮಾಡಿಕೊಡಲು ಅನುಮತಿ ನೀಡಬೇಕು.

    13. ಕಳಪೆ ಕಾಮಗಾರಿ ಹಾಗೂ ರಸ್ತೆಯನ್ನು ಸರಿಯಾಗಿ ನಿರ್ಮಾಣ ಮಾಡದೇ ಸಂಭವಿಸುವ ಅಪಘಾತಗಳಲ್ಲಿ ಕಾಮಗಾರಿ ನಡೆಸಿದ ಕಂಟ್ರಾಕ್ಟರ್, ಎಂಜಿನಿಯರ್ ಹಾಗೂ ಅಧಿಕಾರಿಗಳನ್ನು ಹೊಣೆಯಾಗಿಸುವುದು.

    14. ಅಪಘಾತ ಸಂಭವಿಸಿದ 6 ತಿಂಗಳ ಒಳಗಡೆ ಸಂತ್ರಸ್ತರಿಗೆ ವಿಮೆ ಮೊತ್ತ ಪಾವತಿ ಮಾಡುವಂತೆ ಅವಧಿ ನಿಗದಿ.

    15. 2016ರ ಮಸೂದೆಯಲ್ಲಿದ್ದ ಮೂರನೇ ವ್ಯಕ್ತಿ ವಿಮಾ ಯೋಜನೆ ರದ್ದು. ಈ ಹಿಂದಿನ ಮಸೂದೆಯಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ 5 ಲಕ್ಷ ರೂ. ಹಾಗೂ ಸಾವನ್ನಪ್ಪಿದ್ದ ವ್ಯಕ್ತಿಗೆ 10 ಲಕ್ಷ ರೂ. ವಿಮೆ ನೀಡಬೇಕಿತ್ತು.

    16. ಚಾಲನಾ ಪರವಾನಗಿ ಅವಧಿ ನವೀಕರಣವನ್ನು ಸುಲಭಗೊಳಿಸಲು ಅವಧಿ ಮುಗಿಯುವ ಒಂದು ತಿಂಗಳ ಮೊದಲು ಅಥವಾ ಅವಧಿ ಮುಗಿದ ಒಂದು ವರ್ಷದವರೆಗೆ ನವೀಕರಣಕ್ಕೆ ಅನುಮತಿ.

    17. ನಿಗದಿಪಡಿಸಿದ ಮಾನದಂಡದ ಪ್ರಕಾರ ಗುಣಮಟ್ಟದ ಭಾಗಗಳು ಅಥವಾ ಎಂಜಿನ್‍ಗಳು ಇಲ್ಲದೇ ಇದ್ದಲ್ಲಿ ಆ ವಾಹನಗಳನ್ನು ಸರ್ಕಾರ ಹಿಂದಕ್ಕೆ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಉತ್ಪಾದಕಾ ಕಂಪೆನಿಗಳಿಗೆ 500 ಕೋಟಿ ರೂ. ದಂಡ ವಿಧಿಸಲು ಅವಕಾಶ.

    18. ವಾಣಿಜ್ಯ ವಾಹನಗಳ ಗರಿಷ್ಠ ಬಳಕೆ ಅವಧಿ 20 ವರ್ಷಕ್ಕೆ ಸೀಮಿತಗೊಳಿಸಿರುವುದು

  • 12 ವರ್ಷ ಕೆಳಗಿನ ಬಾಲಕಿಯರ ಮೇಲೆ ರೇಪ್ ಮಾಡಿದವರಿಗೆ ಮರಣದಂಡನೆ- ರಾಜಸ್ಥಾನದಲ್ಲಿ ಮಸೂದೆ ಅಂಗೀಕಾರ

    12 ವರ್ಷ ಕೆಳಗಿನ ಬಾಲಕಿಯರ ಮೇಲೆ ರೇಪ್ ಮಾಡಿದವರಿಗೆ ಮರಣದಂಡನೆ- ರಾಜಸ್ಥಾನದಲ್ಲಿ ಮಸೂದೆ ಅಂಗೀಕಾರ

    ಜೈಪುರ: ಮಹತ್ವದ ಬೆಳವಣಿಗೆಯೊಂದರಲ್ಲಿ, 12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗುವ ಕಾಮುಕರಿಗೆ ಮರಣ ದಂಡನೆ ಶಿಕ್ಷೆ ನೀಡುವ ತಿದ್ದುಪಡಿ ಮಸೂದೆಯನ್ನು ರಾಜಸ್ಥಾನ ವಿಧಾನಸಭೆ ಶುಕ್ರವಾರದಂದು ಅಂಗೀಕರಿಸಿದೆ.

    ಈ ಮಸೂದೆ ಅಂಗೀಕರಿಸುವಲ್ಲಿ ಮಧ್ಯಪ್ರದೇಶದ ನಂತರ ರಾಜಸ್ಥಾನ ಎರಡನೇ ರಾಜ್ಯವಾಗಿದೆ. ಮಂಗಳವಾರದಂದು ರಾಜಸ್ಥಾನ ಸರ್ಕಾರ ದಿ ಕ್ರಿಮಿನಲ್ ಲಾಸ್ ರಾಜಸ್ಥಾನ ಅಮೆಂಡ್‍ಮೆಂಟ್ ಬಿಲ್ 2018 ನ್ನು ಮಂಡನೆ ಮಾಡಿದ್ದು, ಭಾರತೀಯ ದಂಡ ಸಂಹಿತೆ(ಐಪಿಸಿ) ಗೆ ಸೆಕ್ಷನ್ 376-ಎಎ ಸೇರಿಸಲು ಕೋರಲಾಗಿದೆ. ಇದರ ಪ್ರಕಾರ 12 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗುವ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು. ಅಥವಾ 14 ವರ್ಷಗಳಿಗಿಂತ ಹೆಚ್ಚಿನ ಕಠಿಣ ಕಾರಾಗೃಹ ಶಿಕ್ಷೆ ನೀಡಬೇಕು. ಇದನ್ನ ಜೀವಾವಧಿ ಶಿಕ್ಷೆಯಾಗಿಯೂ ವಿಸ್ತರಿಸಬಹುದಾಗಿದ್ದು, ವ್ಯಕ್ತಿ ತನ್ನ ಇಡೀ ಜೀವಿತಾವಧಿಯನ್ನ ಜೈಲಿನಲ್ಲಿ ಕಳೆಯಬೇಕು. ಜೊತೆಗೆ ದಂಡವನ್ನೂ ವಿಧಿಸಬಹುದು ಎಂದು ಹೇಳಿದೆ. ಗ್ಯಾಂಗ್‍ರೇಪ್‍ಗೆ ಸಂಬಂಧಿಸಿದಂತೆ ಇದೇ ರೀತಿಯ ಅವಕಾಶ ಕೋರಿ ಸೆಕ್ಷನ್ 376-ಡಿಡಿ ಸೇರಿಸಲಾಗಿದೆ.

    ಮಸೂದೆ ಮಂಡನೆ ಹಿಂದಿನ ಕಾರಣದ ಬಗ್ಗೆ ತಿಳಿಸಿರುವ ರಾಜಸ್ಥಾನ ಸರ್ಕಾರ, ಆಗಾಗ ಮಕ್ಕಳ ಮೇಲೆ ಅತ್ಯಾಚಾರ ಹಾಗೂ ಗ್ಯಾಂಗ್ ರೇಪ್ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಕೃತ್ಯಗಳು ಅತ್ಯಂತ ಘೋರವಾಗಿದ್ದು, ಸಂತ್ರಸ್ತರ ಬಾಳನ್ನೇ ನರಕ ಮಾಡಿಬಿಡುತ್ತವೆ. ಮುಂದಿನ ಜನಾಂಗದ ಮಕ್ಕಳನ್ನ ಈ ರೀತಿಯ ಕೃತ್ಯಗಳಿಂದ ರಕ್ಷಿಸುವುದು ಹಾಗೂ ಅವರ ಮಾನಸಿಕ, ದೈಹಿಕ ಬೆಳವಣಿಗೆಗೆ ಅನುಕೂಲಕರ ವಾತಾವರಣ ನೀಡುವುದು ಸಮಾಜ ಹಾಗೂ ರಾಜ್ಯದ ಆದ್ಯ ಕರ್ತವ್ಯ. ಹೀಗಾಗಿ ಇಂತಹ ಕೃತ್ಯಗಳಲ್ಲಿ ಕಠಿಣವಾದ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ 12 ವರ್ಷ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗುವವರಿಗೆ ಕಠಿಣ ಶಿಕ್ಷೆ ನೀಡಬೇಕು. ಅದನ್ನ ಮರಣದಂಡನೆಗೂ ವಿಸ್ತರಿಸಬಹುದು ಎಂದು ಹೇಳಿದೆ.

    ಫೆಬ್ರವರಿಯಲ್ಲಿ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ವಸುಂಧರಾ ರಾಜೆ, 12 ವರ್ಷ ಕೆಳಗಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗುವವರಿಗೆ ಕಠಿಣ ಶಿಕ್ಷೆ ನೀಡುವ ಕಾನೂನನ್ನು ಸರ್ಕಾರ ಜಾರಿಗೆ ತರಲಿದೆ ಎಂದು ಹೇಳಿದ್ದರು.

    ಕಳೆದ ವರ್ಷ ಡಿಸೆಂಬರ್ ನಲ್ಲಿ ಮಧ್ಯಪ್ರದೇಶ ಸರ್ಕಾರ ಇಂತಹದ್ದೇ ಮಸೂದೆಯನ್ನ ಅಂಗೀಕರಿಸಿತ್ತು. ಕಳೆದ ತಿಂಗಳು ಹರಿಯಾಣ ಸಂಪುಟವೂ ಕೂಡ ಐಪಿಸಿಗೆ ಇದೇ ರೀತಿಯ ತಿದ್ದುಪಡಿ ತರಲು ಸಮ್ಮತಿ ಸೂಚಿಸಿದೆ.

  • ತ್ರಿವಳಿ ತಲಾಖ್ ಕರಡು ಮಸೂದೆ ಸಿದ್ಧ: ಶಿಕ್ಷೆ ಏನು ಗೊತ್ತಾ?

    ತ್ರಿವಳಿ ತಲಾಖ್ ಕರಡು ಮಸೂದೆ ಸಿದ್ಧ: ಶಿಕ್ಷೆ ಏನು ಗೊತ್ತಾ?

    ನವದೆಹಲಿ: ಮುಸ್ಲಿಮ್ ಸಮುದಾಯದಲ್ಲಿ ತ್ರಿವಳಿ ತಲಾಖ್ ಹೇಳಿ ಪತ್ನಿಗೆ ವಿಚ್ಛೇದನ ನೀಡಿದರೆ ಪತಿಗೆ ಮೂರು ವರ್ಷ ಶಿಕ್ಷೆ ನೀಡುವ ಕಾನೂನು ತರಲು ರೂಪಿಸಲಾಗಿರುವ ಮಸೂದೆಗೆ ಕೇಂದ್ರದ ಕ್ಯಾಬಿನೆಟ್ ಶುಕ್ರವಾರ ಒಪ್ಪಿಗೆ ನೀಡಿದೆ.

    ಇದೇ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ರೂಪಿಸುವಂತೆ ಕೇಂದ್ರಕ್ಕೆ ಆದೇಶಿಸಿತ್ತು. ಈ ಆದೇಶದ ಅನ್ವಯ ಕೇಂದ್ರ ಸರ್ಕಾರ ಮುಸ್ಲಿಮ್ ಮಹಿಳೆಯರ ಮದುವೆ, ಹಕ್ಕುಗಳ ರಕ್ಷಣೆಯ ಕರಡು ಮಸೂದೆ 2017ನ್ನು ಸಿದ್ದಪಡಿಸಿದ್ದು, ಈ ಚಳಿಗಾಲದ ಆಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ.

    ಕರಡು ಮಸೂದೆಯಲ್ಲಿ ತ್ರಿವಳಿ ತಲಾಖ್ ನೀಡಿದರೆ ಆ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬೇಕೆಂಬ ಅಂಶವಿದೆ. ತ್ರಿವಳಿ ತಲಾಖ್ ಅಥವಾ ತಲಾಕ್ ಇ ಬಿದ್ದತ್ ಅನ್ನು ಕಾಗ್ನಿಸೆಬಲ್ ಅಪರಾಧ ಎಂದು ಪರಿಗಣಿಸಬೇಕು. ಅಷ್ಟೇ ಅಲ್ಲದೇ ಜಾಮೀನು ನೀಡಬಾರದು. ಅನ್ಯಾಯಕ್ಕೆ ಒಳಗಾದ ಮಹಿಳೆಗೆ ಪರಿಹಾರ ನೀಡಬೇಕು ಎನ್ನುವ ಅಂಶವನ್ನು ಸೇರಿಸಲಾಗಿದೆ.

    ಕರುಡು ಮಸೂದೆಯ ಪ್ರಕಾರ ಬಾಯಿ ಮಾತು, ಬರವಣಿಗೆ ಅಥವಾ ಯಾವುದೇ ಎಲೆಕ್ಟ್ರಾನಿಕ್ ಅಂದರೆ ಇಮೇಲ್, ಎಸ್‍ಎಂಎಸ್, ವಾಟ್ಸಪ್ ಮೂಲಕ ತಲಾಖ್ ಹೇಳಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ.

    ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಹೇಳಿ ಸುಪ್ರೀಂ ಕೋರ್ಟ್ ಸಂಪೂರ್ಣ ರದ್ದುಗೊಳಿಸಿ ತೀರ್ಪು ನೀಡಿದ ಬಳಿಕವೂ ಮುಸ್ಲಿಮ್ ಸಮುದಾಯದಲ್ಲಿ ತ್ರಿವಳಿ ತಲಾಖ್ ನೀಡಿದ ಪ್ರಕರಣಗಳು ಬೆಳಕಿಗೆ ಬಂದಿತ್ತು. ಕೋರ್ಟ್ ಆದೇಶದ ಅನ್ವಯ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಮಸೂದೆ ಸಿದ್ಧಪಡಿಸಲು ಸಚಿವರ ಸಮಿತಿಯನ್ನು ರಚಿಸಿತ್ತು. ಇಂದು ಸಚಿವರ ಸಮಿತಿ ಸಿದ್ಧ ಪಡಿಸಿದ ಕರಡು ಮಸೂದೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆ ಒಪ್ಪಿಗೆ ನೀಡಿದೆ.

     

  • ಮಂತ್ರಿಗಳು, ಸರ್ಕಾರಿ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವುದು ಕಡ್ಡಾಯ!

    ಮಂತ್ರಿಗಳು, ಸರ್ಕಾರಿ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವುದು ಕಡ್ಡಾಯ!

    ಬೆಂಗಳೂರು: ಕನ್ನಡ ಉಳಿಸುವ ನಿಟ್ಟಿನಲ್ಲಿ ಸರ್ಕಾರದ ಮಂತ್ರಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದುವ ಮಸೂದೆಯನ್ನು ಮಂಡಿಸಲು ರಾಜ್ಯಸರ್ಕಾರ ಮುಂದಾಗಿದೆ.

    ಸರ್ಕಾರಿ ನೌಕರರ, ರಾಜ್ಯದ ಮುಖ್ಯಮಂತ್ರಿಗಳ ಮತ್ತು ಕ್ಯಾಬಿನೆಟ್ ಸಚಿವರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದಿಸುವ ಮಸೂದೆಯನ್ನು ಪರಿಷತನ್ ನಲ್ಲಿ ಮಂಡಿಸಲಾಗುವುದು ಎಂದು ಕರ್ನಾಟಕ ಸರ್ಕಾರದ ಕರ್ನಾಟಕ ವಾರ್ತೆ ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ತಿಳಿಸಿದೆ.

    ಕರ್ನಾಟಕ ವಾರ್ತೆ ಮಂಗಳವಾರ ಮಧ್ಯಾಹ್ನ 2.56ಕ್ಕೆ ಟ್ವೀಟ್ ಮಾಡಿ ಈ ವಿಚಾರವನ್ನು ತಿಳಿಸಿದ್ದರೂ ನಂತರ ಈ ಟ್ವೀಟ್ ಡಿಲೀಟ್ ಮಾಡಿದೆ. ಟ್ವೀಟ್ ಡಿಲೀಟ್ ಮಾಡಿದ್ದು ಯಾಕೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

    ಕನ್ನಡ ಉಳಿಯಬೇಕಾದರೆ ಸರ್ಕಾರಿ ಅಧಿಕಾರಿಗಳ ಮಕ್ಕಳು ಮತ್ತು ಸಚಿವರ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಬೇಕು ಎನ್ನುವ ಆಗ್ರಹ ಹಿಂದಿನಿಂದಲೂ ಕೇಳಿ ಬಂದಿದೆ. ಆದರೆ ಇಲ್ಲಿಯವರೆಗೆ ಇದು ಕಾರ್ಯಗತವಾಗಿರಲಿಲ್ಲ. ಈಗ ರಾಜ್ಯ ಸರ್ಕಾರ ಮಸೂದೆಯನ್ನು ಮುಂಡಿಸುತ್ತಾ ಕಾದು ನೋಡಬೇಕಿದೆ.

     

    https://youtu.be/b6b-L07xLUg