Tag: ಮಸಾಲೆ ಜಯರಾಮ್

  • ಮಾಜಿ ಶಾಸಕನ ಕಿಸೆಯಿಂದ ಹಣ ಎಗರಿಸಲು ಮುಂದಾದವನಿಗೆ ಧರ್ಮದೇಟು

    ಮಾಜಿ ಶಾಸಕನ ಕಿಸೆಯಿಂದ ಹಣ ಎಗರಿಸಲು ಮುಂದಾದವನಿಗೆ ಧರ್ಮದೇಟು

    ತುಮಕೂರು: ಮಾಜಿ ಶಾಸಕ ಮಸಾಲೆ ಜಯರಾಮ್ (Masale Jayaram) ಅವರ ಕಿಸೆಯಿಂದ ಪಿಕ್ ಪಾಕೆಟ್ ಮಾಡಲು ಮುಂದಾವನನ್ನು ಹಿಡಿದು ಗೂಸಾ ಕೊಟ್ಟು ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ಬಿಜೆಪಿ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಬಿ.ವೈ ವಿಜಯೇಂದ್ರ (bY Vijayendra) ಅವರು ಟೆಂಪಲ್ ರನ್ ಮಾಡುತ್ತಿದ್ದಾರೆ. ಅಂತೆಯೇ ಇಂದು ಬೆಳಗ್ಗೆ ಅವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ವಿಜಯೇಂದ್ರ ಅವರು ಮಠಕ್ಕೆ ಹೋಗುತ್ತಿದ್ದಂತೆಯೇ ನೂಕುನುಗ್ಗಲು ಉಂಟಾಯಿತು. ಈ ವೇಳೆ ಕಳ್ಳನೊಬ್ಬ ಪಿಕ್ ಪಾಕೆಟ್ ಮಾಡಲು ಯತ್ನಿಸಿದ್ದಾರೆ.

    ವಿಜಯೇಂದ್ರ ಅವರನ್ನು ಬರ ಮಾಡಿಕೊಳ್ಳಲು ಮಸಾಲೆ ಜಯರಾಮ್ ಅವರು ಬಂದಿದ್ದರು. ಈ ನೂಕುನುಗ್ಗಲು ನಡುವೆ ಮಸಾಲೆ ಜಯರಾಮ್ ಕಿಸೆಗೆ ಕಳ್ಳರು ಕತ್ತರಿ ಹಾಕಲು ಹೊರಟಿದ್ದ. ಪಿಕ್ ಪಾಕೆಟ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಟವರ್ ಏರಿದ ಯುವತಿಯನ್ನು ‘ಮಗಳೇ ಕೆಳಗಿಳಿ’ ಎಂದ ಪ್ರಧಾನಿ ಮೋದಿ!

    ವಿಜಯೇಂದ್ರ ಮಠಕ್ಕೆ ಭೇಟಿ ನೀಡಿ ವಾಪಸ್ ಹೋಗುತ್ತಿರುವಾಗ ಜೇಬಿಗೆ ಕೈ ಹಾಕಿ ಕಂತೆ ಹಣ ಎತ್ತುತ್ತಿರುವುದನ್ನು ಗಮನಿಸಿದ ಹಿಂಬಾಲಕರು ಕಳ್ಳನಿಗೆ ಗೂಸಾ ನೀಡಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಶಾಸಕ ಮಸಾಲೆ ಜಯರಾಮ್ ಪುತ್ರನ ಮೇಲೆ ಹಲ್ಲೆ

    ಶಾಸಕ ಮಸಾಲೆ ಜಯರಾಮ್ ಪುತ್ರನ ಮೇಲೆ ಹಲ್ಲೆ

    ತುಮಕೂರು: ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಪುತ್ರ ತೇಜು ಮೇಲೆ ಹಲ್ಲೆ ನಡೆದಿದೆ. ಬೆಂಗಳೂರಿನಿಂದ ತುರುವೇಕೆರೆಯ ಅಂಕಲಕೊಪ್ಪ ಗ್ರಾಮಕ್ಕೆ ಬರುತ್ತಿದ್ದ ವೇಳೆ ಗುಬ್ಬಿ ತಾಲೂಕಿನ ನೆಟ್ಟೆಕೆರೆ ಕ್ರಾಸ್ ಬಳಿ ಶಾಸಕರ ಪುತ್ರನ ಮೇಲೆ ಹಲ್ಲೆ ನಡೆದಿದೆ.

    ವೀರಣ್ಣಗುಡಿ ಗ್ರಾಮದ ರಾಮ, ಅವ್ವೇರಹಳ್ಳಿ ಗ್ರಾಮದ ಕೃಷ್ಣ ಮತ್ತು ಧನಂಜಯ್ಯ ಸೇರಿದಂತೆ ಹಲವರಿಂದ ಹಲ್ಲೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಲ್ಲೆ ಬಳಿಕ ಆರೋಪಿಗಳು ಕಾರ್ ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಕಾರಿನಲ್ಲಿ ಮಚ್ಚು, ಲಾಂಗ್ ಮತ್ತು ಖಾರದ ಪುಡಿ ಸಿಕ್ಕಿದೆ ಎಂದು ತಿಳಿದು ಬಂದಿದೆ.

    ಹಲ್ಲೆ ನಡೆಸಿದವರು ಜೆಡಿಎಸ್ ಮಾಜಿ ಶಾಸಕ ಎಂ.ಟಿ ಕೃಷ್ಣಪ್ಪ ಬೆಂಬಲಿಗರು ಎಂಬ ಗಂಭೀರವಾದ ಆರೋಪ ಕೇಳಿ ಬಂದಿವೆ. ಈಗಾಗಲೇ ಘಟನೆ ಸಂಬಂಧ ಸಿ.ಎಸ್ ಪುರ ಪೊಲೀಸರಿಂದ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

  • ಮಸಾಲೆ ಜಯರಾಂ ಹುಟ್ಟುಹಬ್ಬ ಆಚರಣೆ – ಮೂವರ ವಿರುದ್ಧ ಎಫ್‍ಐಆರ್

    ಮಸಾಲೆ ಜಯರಾಂ ಹುಟ್ಟುಹಬ್ಬ ಆಚರಣೆ – ಮೂವರ ವಿರುದ್ಧ ಎಫ್‍ಐಆರ್

    ತುಮಕೂರು: ಲಾಕ್‍ಡೌನ್ ನಡುವೆಯೂ ಶುಕ್ರವಾರ ತುರುವೇಕೆರೆ ಶಾಸಕ ಮಸಾಲಾ ಜಯರಾಂ ಅವರ ಹುಟ್ಟು ಹಬ್ಬವನ್ನು ಆಚರಿಸಿದ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮಸಾಲೆ ಜಯರಾಂ ಅವರ ಬೆಂಬಲಿಗರಾದ ಗುಬ್ಬಿ ತಾಲೂಕು ಇಡಗೂರಿನ ರವಿ, ರಾಜೇನಹಳ್ಳಿಯ ವಸಂತಕುಮಾರ್ ಹಾಗೂ ಹೊನ್ನೇಗೌಡರ ಮೇಲೆ ಎಫ್‍ಐಆರ್ ದಾಖಲಾಗಿದೆ. ಲಾಕ್‍ಡೌನ್ ನಡುವೆ ಜನರನ್ನು ಸೇರಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಗುಂಪು ಸೇರಿದ್ದ ಹಿನ್ನೆಲೆಯಲ್ಲಿ ಸಿಎಸ್ ಪುರ ಠಾಣೆಯ ಮುಖ್ಯ ಪೇದೆ ನವೀನ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.

    ಶುಕ್ರವಾರ ಇಡಗೂರಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿದ್ದ ಈ ಮೂವರು ವ್ಯಕ್ತಿಗಳು, ಹುಟ್ಟುಹಬ್ಬ ಆಚರಣೆ ವೇಳೆ ಸಾಮಾಜಿಕ ಅಂತರ ಕಾಪಾಡದೇ ನಿಯಮ ಉಲ್ಲಂಘಸಿ ಜನರ ಗುಂಪು ಸೇರಿಸಿದ್ದರು. ಶಾಸಕ ಮಸಾಲೆ ಜಯರಾಂ ಸಾಮಾಜಿಕ ಅಂತರ ಮರೆತು, ಮಾಸ್ಕ್ ಸಹ ಹಾಕಿಕೊಳ್ಳದೇ ಬೇಜವಾಬ್ದಾರಿತನ ಮೆರೆದಿದ್ದರು. ಅಷ್ಟೇ ಅಲ್ಲದೆ ಹುಟ್ಟುಹಬ್ಬ ನಿಮಿತ್ತ ಜನರಿಗೆ ಬಿರಿಯಾನಿ ಊಟ ಹಾಕಿಸಿದ್ದರು. ಹೀಗಾಗಿ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಜನರು ಸೇರಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು.

    ಕೊರೊನಾ ಭೀತಿಯಿಂದ ಲಾಕ್‍ಡೌನ್ ಘೋಷಣೆ ಆಗಿರುವ ಹೊತ್ತಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡು ಬಂಡತನ ಪ್ರದರ್ಶನ ತೋರಿಸದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

  • ಅಂಗನವಾಡಿ ಆಹಾರದಲ್ಲಿ ಹುಳಗಳನ್ನ ಕಂಡು ಶಾಸಕರು ಕಂಗಾಲು

    ಅಂಗನವಾಡಿ ಆಹಾರದಲ್ಲಿ ಹುಳಗಳನ್ನ ಕಂಡು ಶಾಸಕರು ಕಂಗಾಲು

    ತುಮಕೂರು: ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ದಾಸ್ತಾನಿನಲ್ಲಿ ಹುಳಗಳನ್ನ ಕಂಡು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಕಂಗಾಲಾಗಿದ್ದಾರೆ.

    ತುರುವೇಕೆ ಪಟ್ಟಣಕ್ಕೆ ಹೊಂದಿಕೊಂಡಿರುವ ಹಾವಾಳ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಆಹಾರ ಸರಬರಾಜು ದಾಸ್ತಾನು ಮಳಿಗೆಗೆ ಶಾಸಕ ಮಸಾಲೆ ಜಯರಾಮ್ ಧಿಡೀರ್ ಭೇಟಿ ಕೊಟ್ಟಾಗ ಈ ಅವ್ಯವಸ್ಥೆ ಬೆಳಕಿಗೆ ಬಂದಿದೆ.

    ಅಕ್ಕಿ ಮತ್ತು ರಾಗಿ ದಾಸ್ತಾನಿನಲ್ಲಿ ಬರೀ ಹುಳಗಳೇ ತುಂಬಿಕೊಂಡಿತ್ತು. ಹೀಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸುತ್ತಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದ ಶಾಸಕರು, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆಹಾರ ಪೂರೈಕೆ ಗುತ್ತಿಗೆದಾರನ ವಿರುದ್ಧ ಹರಿಹಾಯ್ದರು. ಅಲ್ಲದೆ ಗುತ್ತಿಗೆಯನ್ನು ರದ್ದುಗೊಳಿಸುವಂತೆ ಸ್ಥಳದಲ್ಲಿಯೇ ಸಚಿವ ಮಾಧುಸ್ವಾಮಿ ಅವರಿಗೆ ಕರೆಮಾಡಿ ಒತ್ತಾಯಸಿದರು.

  • ಗಣಪತಿ ವಿಸರ್ಜನೆ ವೇಳೆ ಹಾಡಿ ರಂಜಿಸಿದ ಮಸಾಲೆ ಜಯರಾಮ್, ಜಗ್ಗೇಶ್

    ಗಣಪತಿ ವಿಸರ್ಜನೆ ವೇಳೆ ಹಾಡಿ ರಂಜಿಸಿದ ಮಸಾಲೆ ಜಯರಾಮ್, ಜಗ್ಗೇಶ್

    ತುಮಕೂರು: ಗಣೇಶ ವಿಸರ್ಜನೆ ಕಾರ್ಯಕ್ರಮವೊಂದರಲ್ಲಿ ನಟ ಜಗ್ಗೇಶ್ ಹಾಗೂ ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಹಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಇಬ್ಬರು ಗಣ್ಯರು ತಮ್ಮ ಕಂಠಸಿರಿ ಮೂಲಕ ಹಾಡಿ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ. ಜಗ್ಗೇಶ್ ಅವರು ಕನ್ನಡ ಸಿನಿಮಾದ ‘ಬಾರೇ ಬಾರೇ’ ಎಂಬ ಹಾಡನ್ನು ಹಾಡಿದರೆ, ಮಸಾಲೆ ಜಯರಾಮ್ ರಾಮನ ಅವತಾರ ಹಾಡನ್ನ ಹಾಡಿ ನೆರೆದವರು ತಲೆದೂಗುವಂತೆ ಮಾಡಿದ್ದಾರೆ.

    ಇಬ್ಬರೂ ಗಣ್ಯರು ತಲಾ ಎರಡೆರಡು ಹಾಡನ್ನ ಹಾಡಿದ್ದು, ಸುಮಾರು ಅರ್ಧಗಂಟೆಗಳ ಕಾಲ ಅಭಿಮಾನಿಗಳನ್ನು ರಂಜಿಸಿದರು. ಇಬ್ಬರು ನಾಯಕರ ಹಾಡಿಗೆ ತಲೆದೂಗಿದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದು ಒನ್ಸ್ ಮೋರ್ ಒನ್ಸ್ ಮೋರ್ ಎಂದು ಕೂಗಿದರು. ಮಸಾಲೆ ಜಯರಾಮ್ ಮೂಲತಃ ನಾಟಕ ಕಲಾವಿದರಾಗಿದ್ದರಿಂದ ಹಾಡು ಹಾಡಿದ ಅನುಭವ ಇತ್ತು. ಹೀಗಾಗಿ ಜಗ್ಗೇಶ್ ಅವರಿಗೆ ಜಯರಾಮ್ ಅವರು ಖುಷಿಯಿಂದ ಕಾರ್ಯಕ್ರಮದಲ್ಲಿ ಸಾಥ್ ನೀಡಿದರು.

  • ಬಾಗಿನ ಅರ್ಪಿಸಲು ಕುದುರೆ ಏರಿ ಬಂದ ಬಿಜೆಪಿ ಶಾಸಕ

    ಬಾಗಿನ ಅರ್ಪಿಸಲು ಕುದುರೆ ಏರಿ ಬಂದ ಬಿಜೆಪಿ ಶಾಸಕ

    ತುಮಕೂರು: ತುಂಬಿದ ಕೆರೆಗೆ ಬಾಗಿನ ಅರ್ಪಿಸಲು ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಕುದುರೆ ಏರಿ ಬಂದು ಸುದ್ದಿಯಾಗಿದ್ದಾರೆ.

    ತಾಲೂಕಿನ ಸಿಎಸ್ ಪುರ ಹೋಬಳಿಯ ಚೆಂಗಾವಿ ಕೆರೆ ಈ ಬಾರಿ ಪೂರ್ಣಪ್ರಮಾಣದಲ್ಲಿ ತುಂಬಿ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂದು ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಮಸಾಲೆ ಜಯರಾಮ್ ಅವರು ಕುದುರೆ ಏರಿ ಬಂದು ಕೆರೆಗೆ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಶಾಸಕರು ಕುದುರೆ ಏರಿ ಬಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ.

    ಈ ಹೊಸಾ ಗೆಟಪ್ ನೋಡಿದ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಕುದುರೆ ಮೇಲಿದ್ದ ಶಾಸಕರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ಹಾಗೆಯೇ ಕುದುರೆ ಏರಿ ಬಂದು ಪೂಜೆ ಸಲ್ಲಿಸಿದ್ದು ಮಸಾಲೆ ಜಯಾರಾಮ್ ಅವರಿಗೂ ಖುಷಿಕೊಟ್ಟಿದೆ.

    ಈ ಹಿಂದೆ ತುರುವೆಕೆರೆ ತಾಲೂಕಿನ ದೊಡ್ಡಮಲ್ಲಿಗೇರೆಯಲ್ಲಿ ಅ. 6ರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಸಖತ್ ಮನರಂಜನೆ ನೀಡುವ ಮೂಲಕ ದಸರಾ ವೈಭವನ್ನು ಇನ್ನಷ್ಟು ಹೆಚ್ಚಿಸಿದ್ದರು.

    ದಸರಾ ಕಾರ್ಯಕ್ರಮದಲ್ಲಿ ರಂಜಿಸಿದ ಶಾಸಕ ಮಸಾಲೆ ಜಯರಾಮ್ ಹಾಡಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೂಲತಃ ನಾಟಕ ಕಲಾವಿದರಾಗಿರುವ ಶಾಸಕರು ದಸರಾ ಕಾರ್ಯಕ್ರಮದಲ್ಲಿ ಸಖತ್ ಮನರಂಜನೆ ನೀಡಿ ಎಲ್ಲರ ಗಮನ ಸೆಳೆದಿದ್ದರು. ದೊಡ್ಡಮಲ್ಲಿಗೇರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡು ಹೇಳಿ ಶಾಸಕರು ಎಲ್ಲರ ಮನ ಗೆದ್ದಿದ್ದರು.

    ರಾಮನ ಅವತಾರ ರಘುಕುಲ ಸೋಮನ ಅವತಾರ ಸಂಪೂರ್ಣ ಹಾಡು ಹಾಡಿ ಮಿಂಚಿದ್ದರು. ಶಾಸಕರ ಹಾಡಿಗೆ ಕಾರ್ಯಕ್ರಮದಲ್ಲಿ ನೆರೆದ ಪ್ರೇಕ್ಷಕರು ತಲೆದೂಗಿ, ಶಿಳ್ಳೆ, ಚಪ್ಪಾಳೆಗಳ ಸುರಿಮಳೆ ಮೂಲಕ ಮೆಚ್ಚುಗೆ ಸೂಚಿಸಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕರಿಗೆ ಕಾರ್ಯಕರ್ತರು ಒತ್ತಾಯ ಮಾಡಿದ್ದಕ್ಕೆ ಅವರು ಹಾಡು ಹೇಳಿದರು. ಹೀಗಾಗಿ ಶಾಸಕರ ಗಾಯನ ಕೇಳಿ ಕಾರ್ಯಕರ್ತರು ಸಿಕ್ಕಾಪಟ್ಟೆ ಖುಷಿಪಟ್ಟಿದ್ದರು. ಜೊತೆಗೆ ವೇದಿಕೆ ಮೇಲೆ ಮಸಾಲ ಜಯರಾಮ್ ಅವರು ಮೈಕ್ ಹಿಡಿದು ಹಾಡು ಹೇಳುತ್ತಾ ಎಲ್ಲರನ್ನು ರಂಜಿಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಕೂಡ ಮಾಡಿಕೊಂಡಿದ್ದರು.

  • ಮಸಾಲೆ ಜಯರಾಮ್ ಮೇಲೆ ಮುಗಿಬಿದ್ದ ಜೆಡಿಎಸ್ ಕಾರ್ಯಕರ್ತರು

    ಮಸಾಲೆ ಜಯರಾಮ್ ಮೇಲೆ ಮುಗಿಬಿದ್ದ ಜೆಡಿಎಸ್ ಕಾರ್ಯಕರ್ತರು

    ತುಮಕೂರು: ರಸ್ತೆ ಮತ್ತು ಚರಂಡಿ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಫೈಟ್ ನಡೆದಿದೆ. ಬಿಜೆಪಿ ಶಾಸಕರ ಮೇಲೆ ಜೆಡಿಎಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ.

    ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಸಂಪಿಗೆ ಹೊಸಳ್ಳಿಯ ಕುರುಬರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಶಾಸಕ ಮಸಾಲೆ ಜಯರಾಮ್ ಮೇಲೆ ಜೆಡಿಎಸ್ ಕಾರ್ಯಕರ್ತರು ಮುಗಿಬಿದ್ದು ತಳ್ಳಾಟ ನೂಕಾಟ ನಡೆಸಿದ್ದಾರೆ. ಶಾಸಕರ ಮೇಲೆ ಕೈ ಕೈ ಮಿಲಾಯಿಸಲೂ ಮುಂದಾಗಿದ್ದಾರೆ.

    ಈ ವೇಳೆ ಶಾಸಕರ ರಕ್ಷಣೆ ನೀಡಿ ಬಿಜೆಪಿ ಮುಖಂಡರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಕುರುಬರಹಳ್ಳಿಯಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮೊದಲು ಚರಂಡಿಮಾಡಿ ಎಂದು ಜೆಡಿಎಸ್ ಕಾರ್ಯಕರ್ತರ ಬೇಡಿಕೆ ಇಟ್ಟಿದ್ದಾರೆ. ಚರಂಡಿ ಮಾಡುತ್ತೇವೆ ಎಂದು ಶಾಸಕರು ಭರವಸೆ ಕೊಟ್ಟರೂ ಸುಮ್ಮನಾಗದ ಜೆಡಿಎಸ್ ಕಾರ್ಯಕರ್ತರು ಶಾಸಕರೊಂದಿಗೆ ವಾಗ್ವಾದ ಮಾಡಿದ್ದಾರೆ. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಈ ಗಲಾಟೆಯಲ್ಲಿ ಮೊದಲು ಜೆಡಿಎಸ್ ಕಾರ್ಯಕರ್ತರು ರಾಜಕಾರಣ ಮಾಡಬೇಡಿ. ಮೊದಲು ಊರು ಸರಿ ಮಾಡಿ ಎಂದು ಕೇಳಿದ್ದಾರೆ. ಇದಕ್ಕೆ ಜಯರಮ್ ನನಗೆ ರಾಜಕಾರಣ ಮಾಡೋದು ಗೊತ್ತು. ಊರು ಅಭಿವೃದ್ಧಿ ಮಾಡೋದು ಗೊತ್ತು ಎಂದು ಹೇಳಿದ್ದಾರೆ. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ಏನ್ ಮಾಡಿದ್ದೀರಾ ನೀವು ಎಂದು ಜಗಳ ತೆಗೆದಿದ್ದಾರೆ. ಇದಕ್ಕೆ ಕೋಪಗೊಂಡ ಜಯರಾಮ್ ಏನ್ ನೀವು ಮೈಮೇಲೆ ಬಂದರೆ ನಾನು ಓಡಿಹೋಗ್ತಿನಾ ಎಂದು ಕೇಳಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಕಾರ್ಯಕರ್ತರು ನಾವು 12 ಜನ ಶಾಸಕರನ್ನು ನೋಡಿದ್ದೇವೆ ನೀವ್ ಅದರಲ್ಲಿ ಒಬ್ಬರು ಎಂದು ಅವಾಜ್ ಹಾಕಿದ್ದಾರೆ.

  • ಮಾಧುಸ್ವಾಮಿ ಸಾಮರ್ಥ್ಯಕ್ಕೆ ತಕ್ಕಂತೆ ಖಾತೆ ದೊರೆತಿಲ್ಲ- ಮಸಾಲೆ ಜಯರಾಮ್

    ಮಾಧುಸ್ವಾಮಿ ಸಾಮರ್ಥ್ಯಕ್ಕೆ ತಕ್ಕಂತೆ ಖಾತೆ ದೊರೆತಿಲ್ಲ- ಮಸಾಲೆ ಜಯರಾಮ್

    ತುಮಕೂರು: ಬಿಜೆಪಿಯಲ್ಲಿ ಖಾತೆ ಕ್ಯಾತೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸಚಿವ ಮಾಧುಸ್ವಾಮಿ ಸಾಮರ್ಥ್ಯಕ್ಕೆ ತಕ್ಕಂತೆ ಖಾತೆ ದೊರೆತಿಲ್ಲ ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಅಸಮಾಧಾನ ಹೊರಹಾಕಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧುಸ್ವಾಮಿ ಅವರ ಸಾಮರ್ಥ್ಯಕ್ಕೆ ಲೋಕೋಪಯೋಗಿ, ಇಂಧನ ಖಾತೆ ಕೊಡಬೇಕಿತ್ತು. ಆದರೆ ಕಾನೂನು ಮತ್ತು ಸಣ್ಣ ನೀರಾವರಿ ಖಾತೆ ಮಾತ್ರ ಕೊಟ್ಟಿರೋದು ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಉಂಟು ಮಾಡಿದೆ ಎಂದು ಹೇಳಿದರು.

    ಖಾತೆ ಕುರಿತು ಮಾಧುಸ್ವಾಮಿಯವರಿಗೂ ಅಸಮಾಧಾನ ಇದೆ. ಆದರೆ ಅವರು ಎಲ್ಲೂ ಹೇಳಿಕೊಳ್ಳುತ್ತಿಲ್ಲ. ನಾವು ಅವರ ಅಭಿಮಾನಿಯಾಗಿ ವರಿಷ್ಠರ ಬಳಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

    ತಮ್ಮ ಬಿಜೆಪಿ ಸರ್ಕಾರ ಇನ್ನೂ ನಾಲ್ಕು ವರ್ಷ ಮೂರು ತಿಂಗಳು ಅಧಿಕಾರದಲ್ಲಿ ಇರಲಿದೆ. ಯಾಕೆಂದರೆ ಒಂದು ದೇಶ ಒಂದು ಚುನಾವಣೆ ಜಾರಿಯಾಗುವುದರಿಂದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ಹೆಚ್ಚಿಗೆ ಅಧಿಕಾರ ನಡೆಸಲು ಅವಕಾಶ ದೊರಕಲಿದೆ ಎಂದು ಮಸಾಲೆ ಜಯರಾಮ್ ವಿಶ್ವಾಸ ವ್ಯಕ್ತಪಡಿಸಿದರು.