Tag: ಮಸಾಲೆ

  • ಅಧಿಕಾರಿಗಳ ವಿರುದ್ಧ ವಿಭಿನ್ನ ಆಕ್ರೋಶ- ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬಿಕೊಳ್ಳುವ ರೈತ

    ಅಧಿಕಾರಿಗಳ ವಿರುದ್ಧ ವಿಭಿನ್ನ ಆಕ್ರೋಶ- ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬಿಕೊಳ್ಳುವ ರೈತ

    ಶಿವಮೊಗ್ಗ: ರೈತರೊಬ್ಬರು ತನ್ನ ತೋಟದ ಮನೆಗೆ ನಿರಂತರ ವಿದ್ಯುತ್ ಸಂಪರ್ಕ ನೀಡದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.

    ಹನುಮಂತಪ್ಪ ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬುತ್ತಿದ್ದ ರೈತ. ಅವರು ಪ್ರತಿನಿತ್ಯ ಮನೆಯಿಂದ ಮಿಕ್ಸಿ ತಂದು ಮೆಸ್ಕಾಂ ಕಚೇರಿಯಲ್ಲಿ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದರು. ಹಲವು ವರ್ಷಗಳಿಂದ ಅವರು ತೋಟದ ಮನೆಯಲ್ಲಿಯೇ ವಾಸವಿದ್ದರು. ಅವರ ತೋಟದಲ್ಲಿರುವ ಕೊಳವೆ ಬಾವಿಯ ಐಪಿ ಸೆಟ್‍ಗೆ ವಿದ್ಯುತ್ ಸಂಪರ್ಕ ಇದೆ. ಆದರೆ ಐಪಿ ಸೆಟ್‍ನ ವಿದ್ಯುತ್‍ಗೆ ಸಮಯ ನಿಗದಿ ಇಲ್ಲ. ಹೀಗಾಗಿ ಮನೆಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅವರು ಮೆಸ್ಕಾಂಗೆ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಮೆಂಟಲ್ ಗಿರಾಕಿಯ ರೀತಿ ಆಡಬಾರದು, ಪ್ರಬುದ್ಧವಾಗಿ ಮಾತನಾಡಬೇಕು: ಸಿ.ಟಿ.ರವಿ ವ್ಯಂಗ್ಯ

    ರೈತ ಕಳೆದ 6 ತಿಂಗಳಿನಿಂದ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸದ ಹಿನ್ನೆಲೆಯಲ್ಲಿ ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ: ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

  • 100ಕ್ಕೂ ಹೆಚ್ಚು ದೇಶಗಳಿಗೆ ಮಸಾಲೆ ಘಮ ಪಸರಿಸಿದ ಎಂಡಿಎಚ್ ಮಾಲೀಕ ಧರ್ಮಪಾಲ್ ಇನ್ನಿಲ್ಲ

    100ಕ್ಕೂ ಹೆಚ್ಚು ದೇಶಗಳಿಗೆ ಮಸಾಲೆ ಘಮ ಪಸರಿಸಿದ ಎಂಡಿಎಚ್ ಮಾಲೀಕ ಧರ್ಮಪಾಲ್ ಇನ್ನಿಲ್ಲ

    ನವದೆಹಲಿ: ನೂರಕ್ಕೂ ಹೆಚ್ಚು ದೇಶಗಳಿಗೆ ಮಸಾಲೆ ಘಮ ಪಸರಿಸಿದ ಮಹಾಶಯ ಧರ್ಮಪಾಲ್ ಗುಲಾಟಿ(98) ಅವರು ನಿಧನರಾಗಿದ್ದಾರೆ.

    ಮಹಾಶಿಯಾನ್ ಡಿ ಹಟ್ಟಿ(ಎಂಡಿಎಚ್) ಮಾಲೀಕರಾಗಿದ್ದ ಧರ್ಮಪಾಲ್ ಗುಲಾಟಿ ಅವರು, ತಮ್ಮದೇಯಾ ಮಸಾಲೆ ಬ್ರಾಂಡ್ ಸೃಷ್ಟಿಸಿ ವಿಶ್ವಾದ್ಯಂತ 100ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದ್ದರು. ಇವರನ್ನು ‘ಮಸಾಲೆಗಳ ರಾಜ (ಕಿಂಗ್ ಆಫ್ ಸ್ಪೈಸಸ್)’ ಎಂದೇ ಕರೆಯುತ್ತಿದ್ದರು. ಗುಲಾಟಿ ಅವರು ಕಳೆದ ಮೂರು ವಾರಗಳಿಂದ ನವದೆಹಲಿ ಮಾತಾ ಚನನ್ ದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬುಧವಾರ ರಾತ್ರಿ ಅವರ ಸ್ಥಿತಿ ಗಂಭೀರವಾಯಿತು. ಹೃದಯಾಘಾತದಿಂದ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

    ಮಹಾಶಯ ಎಂದೇ ಜನಪ್ರಿಯರಾಗಿದ್ದ ಗುಲಾಟಿ ಅವರು, 1919ರಲ್ಲಿ ಪಾಕಿಸ್ತಾನದ ಸಿಯಾಲ್ಕೋಟ್ ನಲ್ಲಿ ಜನಿಸಿದ್ದರು. ಇವರ ತಂದೆ ಚಿಕ್ಕ ಅಂಗಡಿಯನ್ನು ಇಟ್ಟುಕೊಂಡಿದ್ದರು. 1947ರಲ್ಲಿ ದೇಶ ಇಬ್ಭಾಗವಾದ ಬಳಿಕ ಇವರ ಕುಟುಂಬ ದೆಹಲಿಗೆ ಆಗಮಿಸಿತು. ಬಳಿಕ 1953ರಲ್ಲಿ ಗುಲಾಟಿ ಅವರು ದೆಹಲಿ ಚಾಂದನಿ ಚೌಕ್ ಬಳಿ ಬಾಡಿಗೆ ಮಳಿಗೆ ಪಡೆದು ಮಹಾಶಿಯಾನ್ ಡಿ ಹಟ್ಟಿ(ಎಂಡಿಎಚ್) ಹೆಸರಲ್ಲಿ ಅಂಗಡಿ ಆರಂಭಿಸಿದರು.

    ಕರೋಲ್ ಭಾಗ್‍ನಲ್ಲಿ ಸಣ್ಣ ಅಂಗಡಿ ಹೊಂದಿದ್ದ ಗುಲಾಟಿ ಅವರು, ತಮ್ಮ ಎಂಡಿಎಚ್‍ಯನ್ನು ಭಾರತದಲ್ಲೇ ನಂ.ಮಸಾಲೆ ಬ್ರಾಂಡ್ ಬೆಳೆಸಿದರು. ಇವರು 1959ರಲ್ಲಿ ಅಧೀಕೃತವಾಗಿ ಕಂಪನಿಯನ್ನು ಆರಂಬಿಸಿದರು. ಕೀರ್ತಿ ನಗರದಲ್ಲಿ ತುಂಡು ಭೂಮಿ ಖರಿದಿಸಿ ಉತ್ಪಾದನಾ ಘಟಕ ಆರಂಭಿಸಿದರು. ಇದೀಗ ಎಂಡಿಎಚ್ ಬರೋಬ್ಬರಿ 50 ವಿಧದ ಮಸಾಲೆಗಳನ್ನು ಉತ್ಪಾದಿಸುತ್ತದೆ. ದೇಶಾದ್ಯಂತ 15 ಕಾರ್ಖಾನೆಗಳನ್ನು ಸಂಸ್ಥೆ ಹೊಂದಿದೆ. ಮಾತ್ರವಲ್ಲದೆ ವಿಶ್ವಾದ್ಯಂತ ಮಸಾಲೆ ಪದಾರ್ಥಗಳನ್ನು ರಫ್ತು ಮಾಡುತ್ತದೆ. ಅಲ್ಲದೆ ಗುಲಾಟಿ ಅವರು ಎಫ್‍ಎಂಸಿಜಿ(ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್) ಕಂಪನಿಗಳ ಪೈಕಿ 2017ರಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ ಸಿಇಒ ಆಗಿದ್ದರು. ಆದರೆ ಇವರು ಓದಿದ್ದು 5ನೇ ತರಗತಿ ಮಾತ್ರ.