ಬಾಲಿವುಡ್‌ನಲ್ಲಿ ವಿಚಿತ್ರ ಉಡುಪಿನ ಮೂಲಕ ಗಮನ ಸೆಳೆದಿರುವ ನಟಿ ಉರ್ಫಿ ಜಾವೇದ್ ಬಟ್ಟೆಯ ಆಯ್ಕೆಗೆ ಫ್ಯಾಷನ್ ಡಿಸೈನರ್ ಮಸಾಬ ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫ್ಯಾಷನ್ ಡಿಸೈನರ್ ಆಗಿ ಬಿಟೌನ್‌ನಲ್ಲಿ ಗುರುತಿಸಿಕೊಂಡಿರುವ ಮಸಾಬ ಗುಪ್ತಾ ಸದ್ಯ ವೆಬ್ ಸಿರೀಸ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. `ಮಸಾಬ ಮಸಾಬ ಸಿರೀಸ್ 2’ಗೆ ಭರ್ಜರಿ ಪ್ರಚಾರ ನೀಡ್ತಿದ್ದಾರೆ ನಟಿ ಮಸಾಬ ಗುಪ್ತಾ. ಈ ಕುರಿತು ಸಂಬಂಧಿಸಿದ ಸಂದರ್ಶನವೊಂದರಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿರುವ ಮಸಾಬ ಉರ್ಫಿ ಡ್ರೆಸ್ ಸೆನ್ಸ್ ಬಗ್ಗೆ ಕೂಡ ಮಾತನಾಡಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಸಿನಿಮಾ ರಿಲೀಸ್ ಡೇಟ್ ಫಿಕ್ಸ್
ನಿಜಕ್ಕೂ ಫ್ಯಾಷನ್ ಕುರಿತು ನಾನು ಕೂಡ ಉರ್ಫಿ ಅವರಿಂದ ಕಲಿಯುವುದು ಸಾಕಷ್ಟಿದೆ. ಉರ್ಫಿ ಅವರ ಫ್ಯಾಷನ್ ಕುರಿತು ಬಹಳಷ್ಟು ತಿಳಿದುಕೊಂಡಿದ್ದಾರೆ. ಯಾವುದೇ ಡಿಸೈನರ್, ಬ್ರ್ಯಾಂಡ್‌ಗಿಂತ ಹೆಚ್ಚಾಗಿ ಉರ್ಫಿ ಕೆಲಸ ಮಾಡ್ತಿದ್ದಾರೆ. ನಿಜಕ್ಕೂ ಉರ್ಫಿ ಅವರ ಶ್ರಮ ಬಹಳಷ್ಟಿದೆ. ಉರ್ಫಿ ಬಟ್ಟೆಯ ಆಯ್ಕೆಗೆ ನಾನು 10/10 ರೇಟ್ ಮಾಡುತ್ತೇನೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.


ಚಿತ್ರರಂಗದಲ್ಲಿ ನಟಿಯಾಗಿ ಮತ್ತು ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಮಸಾಬ ಗುಪ್ತಾ ಟ್ರೋಲಿಗರ ವಿರುದ್ಧ ಫುಲ್ ಗರಂ ಆಗಿದ್ದಾರೆ. ಬಾಡಿ ಶೇಮಿಂಗ್ ಕುರಿತು ಮಾತನಾಡುವವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ. ತನ್ನ ದೇಹದ ಔಟ್ ಲುಕ್ ಬಗ್ಗೆ ಮಾತನಾಡಿದವರಿಗೆ ಸಾಮಾಜಿಕ ಜಾಲತಾಣದಲ್ಲಿ ನಟಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:
ನೆಟ್ಟಿಗರೊಬ್ಬರು ನಟಿಯನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ನೀವು ನೋಡಲು ತುಂಬಾ ಕೆಟ್ಟದಾಗಿ ಕಾಣುತ್ತೀರಿ. ನೀವು ಫ್ಯಾಶನ್ ಮತ್ತು ಮನರಂಜನಾ ಕ್ಷೇತ್ರದಲ್ಲಿರುವುದು ಒಂದು ವಿಪರ್ಯಾಸ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ನಟಿ ರಿಯಾಕ್ಟ್ ಮಾಡಿದ್ದು, ಯಾವುದೇ ಕ್ಷೇತ್ರದಲ್ಲಿರುವುದು ಅದು ಪ್ರತಿಭೆಗೆ ಸಂಬಂಧಿಸಿದ ವಿಚಾರ, ಕೆಲಸದ ಶ್ರಮ, ಶಿಸ್ತುನಲ್ಲಿ ಒಂದಾಗಿದೆ. ಇದು ನನ್ನ ಮುಖಕ್ಕೆ ಸಂಬಂಧಿಸಿದ ವಿಚಾರವಲ್ಲ. ಜತೆಗೆ ನನ್ನ ಮನಸ್ಸು ಚಾಕುವಿನಷ್ಟೇ ಹರಿತ ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.