Tag: ಮಸಾಜ್ ಸೆಂಟರ್

  • ಸುಂದರಿಗಾಗಿ ಸ್ಪಾಗೆ ಹೋದವರು ಹನಿಟ್ರ್ಯಾಪ್ ಖೆಡ್ಡಾಕ್ಕೆ

    ಸುಂದರಿಗಾಗಿ ಸ್ಪಾಗೆ ಹೋದವರು ಹನಿಟ್ರ್ಯಾಪ್ ಖೆಡ್ಡಾಕ್ಕೆ

    – ಶ್ರೀಮಂತರ ಮಕ್ಕಳೇ ಇವರ ಟಾರ್ಗೆಟ್

    ಬೆಳಗಾವಿ: ಹನಿಟ್ರ್ಯಾಪ್ ಗ್ಯಾಂಗ್ ಮೇಲೆ ಸಿಇಎನ್ ಪೊಲೀಸರು ದಾಳಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕುಂದಾನಗರಿಯಲ್ಲಿ ನಡೆದಿದೆ.

    ಗ್ಯಾಂಗ್‍ವೊಂದು ಮಸಾಜ್ ಮತ್ತು ಸ್ಪಾ ಸೆಂಟರ್ ನಡೆಸುವುದಾಗಿ ಅನುಮತಿ ಪಡೆದು ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿದ್ದ ನ್ಯೂ ಗೆಟ್ ವೇ ಯುನಿಸೆಕ್ಸ್ ಸ್ಪಾ ಹೆಸರಿನಲ್ಲಿರುವ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕೇದಾರಿ ಶಿಂಧೆ, ಪ್ರಕಾಶ್ ಯಳ್ಳೂರ್ಕರ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಬಳಿಕ ತನಿಖೆ ವೇಳೆ ಈ ಗ್ಯಾಂಗ್‍ನ ಪ್ರಮುಖ ಟಾರ್ಗೆಟ್ ಶ್ರೀಮಂತ ಯುವಕರು ಎಂದು ತಿಳಿದು ಬಂದಿದೆ. ಆನ್‍ಲೈನ್ ಮೂಲಕ ಬಣ್ಣ ಬಣ್ಣದ ಹುಡುಗಿಯರ ಫೋಟೋ ತೋರಿಸುವ ಮೂಲಕ ಶ್ರೀಮಂತ ಯುವಕರನ್ನು ಬಲೆಗೆ ಹಾಕಿಕೊಂಡು ಹನಿಟ್ರ್ಯಾಪ್ ನಡೆಸುತ್ತಿದ್ದರು ಎಂಬ ಅಸಲಿ ಸತ್ಯ ಬಯಲಾಗಿದೆ.

    ಇನ್ನೂ ಘಟನೆಯಲ್ಲಿ ಪೊಲೀಸರು ಮೂವರು ಯುವತಿಯರನ್ನು ರಕ್ಷಣೆ ಮಾಡಿ ಅವರನ್ನು ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ. ಇದೀಗ ಪ್ರಕರಣ ಕುರಿತಂತೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

  • ಗ್ರಾಹಕನಾಗಿ ಸ್ಪಾಗೆ ಹೋದ ಪೊಲೀಸ್ – ಬಯಲಾಯ್ತು ಸೆಕ್ಸ್ ದಂಧೆಯ ಕರಾಳ ಮುಖ

    ಗ್ರಾಹಕನಾಗಿ ಸ್ಪಾಗೆ ಹೋದ ಪೊಲೀಸ್ – ಬಯಲಾಯ್ತು ಸೆಕ್ಸ್ ದಂಧೆಯ ಕರಾಳ ಮುಖ

    – 9 ಯುವತಿಯರು ಸೇರಿದಂತೆ 12 ಜನ ಅರೆಸ್ಟ್
    – ದೆಹಲಿ, ಅಸ್ಸಾಂ, ಪ.ಬಂಗಾಳ ಮೂಲದ ಯುವತಿಯರಿಂದ ದಂಧೆ

    ಜೈಪುರ: ಸ್ಪಾ, ಮಸಾಜ್ ಹೆಸರಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ, 12 ಜನರನ್ನ ಬಂಧಿಸಿದ್ದಾರೆ. ರಾಜಸ್ಥಾನದ ಅಲ್ವಾರ ಜಿಲ್ಲೆಯ ಬಿವಢಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ದಾಳಿ ವೇಳೆ ಬಂಧಿಸಿರುವ 9 ಯುವತಿಯರು ಸೇರಿದಂತೆ 12 ಜನರನ್ನ ಫೂಲ್‍ಬಾಗ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ನಡೆಸಲಾಗುತ್ತಿದೆ. 12 ಜನರಿಂದ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಯಾರ ಜೊತೆ ಸಂಪರ್ಕದಲ್ಲಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗ್ತಿದೆ. ದೆಹಲಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ಯುವತಿಯರನ್ನ ದಂಧೆಗೆ ಕರೆಸಿಕೊಳ್ಳಲಾಗುತ್ತಿತ್ತು. ಇದನ್ನೂ ಓದಿ: ‘ನಾನು ದಂಧೆ ಮಾಡೋಳು ಏನ್ ಮಾಡ್ಕೋತ್ತೀರಿ’- ಆಂಟಿಯ ಹೈಟೆಕ್ ಸೆಕ್ಸ್ ದಂಧೆ

    ಸ್ಪಾ ಹೆಸರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮೌಖಿಕ ದೂರುಗಳು ಬಂದಿದ್ದವು. ಈ ಹಿನ್ನೆಲೆ ಪೊಲೀಸರೊಬ್ಬರು ಗ್ರಾಹಕರಾಗಿ ಹೋದಾಗ ಒಳಗಿನ ರಹಸ್ಯ ಬಯಲಾಗಿದೆ. ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ಶನಿವಾರ ದಾಳಿ ನಡೆಸಿ 12 ಜನರನ್ನ ಬಂಧಿಸಲಾಗಿದೆ. ಇದನ್ನೂ ಓದಿ:ಹೈ ಪ್ರೊಫೈಲ್ ಸೆಕ್ಸ್ ದಂಧೆ – ಒಬ್ಬಳು ಅರೆಸ್ಟ್, ಮೂವರು ನಟಿಮಣಿಯರ ರಕ್ಷಣೆ

    ದೇಶದ ರಾಜಧಾನಿಯ ತಿಲಕ್ ನಗರದಲ್ಲಿ ಸ್ಪಾ ಹೆಸರಲ್ಲಿ ನಡೆಯುತ್ತಿದ್ದ ಸೆಕ್ಸ್ ದಂಧೆಯ ಮೇಲೆ ದೆಹಲಿಯ ಮಹಿಳಾ ಆಯೋಗ ಸೆಪ್ಟೆಂಬರ್ ನಲ್ಲಿ ದಾಳಿ ನಡೆಸಿತ್ತು. ದೆಹಲಿ ಮಹಿಳಾ ಆಯೋಗದ ಹೆಲ್ಪ್ ಲೈನ್ 181 ಸಂಖ್ಯೆಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿ ತಿಲಕ್ ನಗರದ ಸ್ಪಾದಲ್ಲಿ ನಡೆಯುತ್ತಿರೋ ಸೆಕ್ಸ್ ದಂಧೆಯ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಮಹಿಳಾ ಅಯೋಗದವರು ದೆಹಲಿ ಪೊಲೀಸರ ಜೊತೆ ಮಾಂಸದಂಧೆಯ ಅಡ್ಡೆಯ ಮೇಲೆ ದಾಳಿ ನಡೆಸಿದ್ದರು. ಇದನ್ನೂ ಓದಿ:20 ರೂ. ಪೌಡರ್ ಇಟ್ಕೊಂಡು ಮಸಾಜ್ ಹೆಸ್ರಲ್ಲಿ ಸೆಕ್ಸ್ ದಂಧೆ!- ವೃದ್ಧಾಶ್ರಮ ಹೆಸರಲ್ಲಿ ಮಸಾಜ್ ಪಾರ್ಲರ್