Tag: ಮಸಾಜ್ ಪಾರ್ಲರ್

  • ಮಸಾಜ್‌ ಪಾರ್ಲರ್‌ ಮೇಲೆ ದಾಳಿ – ರಾಮ್ ಸೇನಾ ಸಂಸ್ಥಾಪಕ ಪೊಲೀಸ್‌ ವಶಕ್ಕೆ

    ಮಸಾಜ್‌ ಪಾರ್ಲರ್‌ ಮೇಲೆ ದಾಳಿ – ರಾಮ್ ಸೇನಾ ಸಂಸ್ಥಾಪಕ ಪೊಲೀಸ್‌ ವಶಕ್ಕೆ

    ಮಂಗಳೂರು: ಮಸಾಜ್ ಪಾರ್ಲರ್ (Massage Parlor) ಮೇಲೆ ದಾಳಿ ನಡೆಸಿದ್ದ ರಾಮ್ ಸೇನಾ (Ram Sena) ಸಂಸ್ಥಾಪಕ ಪ್ರಸಾದ್ ಅತ್ತಾವರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮಂಗಳೂರು (Mangaluru) ಹೊರವಲಯದ ಕುಡುಪು ಮನೆಯಲ್ಲಿದ್ದ ಅವರನ್ನು, ಅಲ್ಲಿಂದಲೇ ಪೊಲೀಸರು ಅವರನ್ನು ಎಳೆದೊಯ್ದಿದ್ದಾರೆ. ಇದಕ್ಕೂ ಮುನ್ನ ಮಸಾಜ್ ಪಾರ್ಲರ್‌ಗೆ ಕಾನೂನು ಸುವ್ಯವಸ್ಥೆ ಡಿಸಿಪಿ ಸಿದ್ದಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಪ್ರಸಾದ್ ಅತ್ತಾವರ ನೇತೃತ್ವದ ಸಂಘಟನೆಯ ಹತ್ತು ಜನ ಕಾರ್ಯಕರ್ತರು ಬಿಜೈ ಕೆಎಸ್‍ಆರ್‌ಟಿಸಿ ಬಳಿಯ ಕಲರ್ಸ್ ಯೂನಿಸೆಕ್ಸ್ ಸೆಲೂನ್ ಮೇಲೆ ದಾಳಿ ನಡೆಸಿದ್ದರು. ಸೆಲೂನ್‍ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದರು.

    ದಾಳಿ ವೇಳೆ, ನಾಲ್ಕು ಜನ ಯುವತಿಯರು ಹಾಗೂ ಓರ್ವ ವ್ಯಕ್ತಿ ಸೆಲೂನ್‍ನಲ್ಲಿ ಇದ್ದರು. ಈ ವೇಳೆ ವ್ಯಕ್ತಿಯ ಮೇಲೆ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಅಲ್ಲದೇ ಪೀಠೋಪಕರಣ ಧ್ವಂಸ ಮಾಡಿದ್ದರು.

    ಇದೇ ಮಸಾಜ್ ಪಾರ್ಲರ್‌ಗೆ ಈ ಹಿಂದೆ ಅಂದಿನ ಮೇಯರ್ ಕವಿತಾ ಸನಿಲ್ ಸಹ ದಾಳಿ ನಡೆಸಿದ್ದರು. ಈ ವೇಳೆ ಅನೈತಿಕ ಚಟುವಟಿಕೆ ಬಯಲಿಗೆ ಬಂದಿತ್ತು.

  • ಮಸಾಜ್ ಪಾರ್ಲರ್‌ನಲ್ಲಿ ಮಾಂಸ ದಂಧೆ – ಮನೆಯಲ್ಲಿತ್ತು ಕಾರ್ಡ್ ಸ್ವೈಪಿಂಗ್ ಮೆಷಿನ್

    ಮಸಾಜ್ ಪಾರ್ಲರ್‌ನಲ್ಲಿ ಮಾಂಸ ದಂಧೆ – ಮನೆಯಲ್ಲಿತ್ತು ಕಾರ್ಡ್ ಸ್ವೈಪಿಂಗ್ ಮೆಷಿನ್

    ಬೆಂಗಳೂರು: ಮಸಾಜ್ ಪಾರ್ಲರ್ ಹೆಸರಿನಲ್ಲಿ ಮಾಂಸದಂಧೆ ನಡೆಸುತ್ತಿದ್ದ ಸ್ಪಾಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಎಚ್‍ಎಎಲ್‍ನ ಈಸ್ಟರ್ನ್ ಸಲೂನ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರು ದಲ್ಲಾಳಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಮೂವರು ಯವತಿಯರನ್ನು ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಸಾಜ್ & ಸ್ಪಾ ಹೆಸರಿನಲ್ಲಿ ಹೈಟೆಕ್ ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.

    ಸ್ಪಾ ಹೆಸರಿನಲ್ಲಿ ನಡೆಸಲಾಗುತ್ತಿದ್ದ ವೈಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದರು. ಜೀವನ ಭೀಮಾನಗರ ಮತ್ತಿತರ ಕಡೆಯಲ್ಲಿ ದಾಳಿ ನಡೆಸಿದ್ದಾರೆ. ಮತ್ತೊಂದು ವಿಚಾರ ಏನೆಂದರೆ ದಾಳಿ ನಡೆಸಿದಾಗ ವೈಶ್ಯಾವಾಟಿಕೆ ನಡೆಸುತ್ತಿದ್ದ ಮನೆಯಲ್ಲಿ ಕಾರ್ಡ್ ಸೈಪಿಂಗ್ ಮೆಷಿನ್ ಸಿಕ್ಕಿದ್ದು, ಮನೆಗೆ ಬರುತ್ತಿದ್ದ ಗಿರಾಕಿಗಳ ಬಳಿ ಹಣ ಇಲ್ಲದೆ ಹೋದರೆ ಅವರು ಕಾರ್ಡ್ ಅನ್ನು ಸೈಪ್ ಮಾಡಬಹುದಿತ್ತು.

    ಈ ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಂ ಮತ್ತು ನಾಗಾಲ್ಯಾಂಡ್‍ನ ಯುವತಿಯರನ್ನು ಬಳಸಿಕೊಂಡಿದ್ದು ಬೆಳಕಿಗೆ ಬಂದಿದೆ. ಗಿರಾಕಿಗಳನ್ನು ಆನ್‍ಲೈನ್ ಅಲ್ಲಿ ಸೆಳೆದುಕೊಳ್ಳುತ್ತಾ ಇದ್ದಿದ್ದು ಅಲ್ಲದೇ, ಫೋಟೋಗಳನ್ನು ಖಾಸಗಿಯಾಗಿ ಮೊಬೈಲ್‍ಗೆ ಕಳುಹಿಸಿ ವ್ಯವಹಾರ ಕುದುರಿಸುತ್ತಿದ್ದದ್ದೂ ಕೂಡ ತನಿಖೆಯಲ್ಲಿ ತಿಳಿದು ಬಂದಿದೆ.

  • ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ: ನಾಲ್ವರ ಬಂಧನ

    ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ: ನಾಲ್ವರ ಬಂಧನ

    ಬೆಂಗಳೂರು: ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಸಿಸಿಬಿ ಪೊಲೀಸರ ದಾಳಿಗೆ ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ.

    ಇಂದಿರಾನಗರದ ಆರುಹ್ ಸ್ಪಾ ಮತ್ತು ಸಲೂನ್ ಸೆಂಟರ್ ಹೆಸರಲ್ಲಿ ಈ ದಂಧೆ ನಡೆಸುತ್ತಿದ್ದರು. ಚಂದ್ರಪ್ರಕಾಶ್ (42), ಫಯಾಜ್ (38) ವಿನ್ಸೆಂಟ್ (30) ಹಾಗೂ ವಿಕ್ಟರ್ (28) ಬಂಧಿತ ಆರೋಪಿಗಳು. ಇವರು ಬಾಡಿ ಟು ಬಾಡಿ ಮಸಾಜ್, ಸ್ಯಾಂಡ್ ವಿಚ್, ಹ್ಯಾಪಿ ಎಂಡಿಂಗ್ ಎಂಬ ಹೆಸರಲ್ಲಿ ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದರು.

    ಬಂಧಿತರ ಬಳಿಯಿದ್ದ 4 ಮೊಬೈಲ್ ಫೋನ್, 22 ಸಾವಿರ ರೂ. ನಗದು, 3 ಕಾಂಡೋಮ್ ಹಾಗೂ ಒಂದು ಸ್ವೈಪ್ ಮಾಡುವ ಯಂತ್ರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

  • ಸ್ಪಾ, ಯುನಿಸೆಕ್ಸ್ ಸಲೂನ್ ಮೇಲೆ ಮಂಗ್ಳೂರು ಮೇಯರ್ ದಾಳಿ- ಅರೆಬೆತ್ತಲಾಗಿ ಓಟಕಿತ್ತ ಗ್ರಾಹಕರು

    ಸ್ಪಾ, ಯುನಿಸೆಕ್ಸ್ ಸಲೂನ್ ಮೇಲೆ ಮಂಗ್ಳೂರು ಮೇಯರ್ ದಾಳಿ- ಅರೆಬೆತ್ತಲಾಗಿ ಓಟಕಿತ್ತ ಗ್ರಾಹಕರು

    ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ತಮ್ಮ ಖದರ್ ತೋರಿಸಿದ್ದಾರೆ. ಸ್ಪಾ, ಯುನಿ ಸೆಕ್ಸ್ ಸಲೂನ್, ಆರ್ಯುವೇದಿಕ್ ಸೆಂಟರ್, ಸ್ಕಿಲ್ ಗೇಮ್ ಸೆಂಟರ್‍ಗಳ ಅಸಲಿ ಬಣ್ಣ ಬಯಲು ಮಾಡಿದ್ದಾರೆ. ಗಂಡಸರಿಗೆ ಹೆಣ್ಮಕ್ಕಳಿಂದ ಮಸಾಜ್ ಮಾಡಿಸುವ ದಂಧೆಯನ್ನು ಬಯಲು ಮಾಡಿದ್ದಾರೆ.

    ಮೇಯರ್ ದಾಳಿ ಮಾಡಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಅರೆಬೆತ್ತಲಾಗಿದ್ದ ಕೆಲ ಗ್ರಾಹಕರು ತಮ್ಮ ಕೈಗೆ ಸಿಕ್ಕ ಬಟ್ಟೆಯಿಂದ ಮಾನ ಮುಚ್ಚಿಕೊಂಡು ಓಟ ಕಿತ್ತಿದ್ದಾರೆ.

    ಕಳೆದ ವಾರವಷ್ಟೇ ಬಡ ಮಹಿಳೆಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸಿ, ಸ್ಕಿಲ್ ಗೇಮ್ ಅಡ್ಡೆ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಿದ್ದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಇದೀಗ ಮತ್ತೆ ಮುಂದುವರೆದು ನಗರದಲ್ಲಿ ನಡೆಯುತ್ತಿರೋ ಅಡ್ಡ ಕಸುಬಿದಾರರ ಬೆವರಿಳಿಸಿದ್ದಾರೆ. ಮಹಾನಗರದ ಜ್ಯೋತಿ, ಬಿಜೈ ಹಾಗೂ ಬಲ್ಮಠದಲ್ಲಿ ನಡೆಯುತ್ತಿರೋ ನಾಲ್ಕು ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿ ಬೀಗ ಜಡೆದಿದ್ದಾರೆ. ಅದ್ಯಾವುದೋ ಊರಿಂದ ಬಂದು ತೀಟೆ ತೀರಿಸಿಕೊಳ್ಳೋದಕ್ಕಾಗಿ ಬೆತ್ತಲಾಗೋ ಮಂದಿಯ ಕಚ್ಡಾತನ ಮೇಯರ್ ದಾಳಿ ವೇಳೆ ಬಟಾಬಯಲಾಗಿದೆ.

    ಮಂಗಳೂರು ಹುಡುಗಿಯರನ್ನು ನಾನು ಇರೋ ತನಕ ದಂಧೆಗೆ ಇಳಿಸಲಾರೆ. ಇದು ಮುಂಬೈಯಲ್ಲ ಮಂಗಳೂರು ಅಂತಾ ಮೇಯರ್ ಕವಿತಾ ಸನಿಲ್ ಅಕ್ರಮ ದಂಧೆಕೋರರ ವಿರುದ್ಧ ಗುಡುಗಿದ್ದಾರೆ. ಅಕ್ರಮಗಳಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಜಾಗಕೊಡಲ್ಲ ಅಂತ ಹೇಳಿದ್ದಾರೆ.

    ಫಳ್ನೀರ್ ರಸ್ತೆಯಲ್ಲಿರೋ ಮೆಂಬರ್ಸ್ ಲಾಂಜ್ ಅನ್ನೋ ಸ್ಕಿಲ್ ಗೇಮ್‍ವೊಂದಕ್ಕೆ ದಾಳಿ ಮಾಡಿದಾಗ ಒಂದೊಮ್ಮೆ ಸ್ಕಿಲ್‍ಗೇಮ್ ಮಾಲಕಿ ಮೇಯರ್ ವಿರುದ್ಧ ಅಬ್ಬರಿಸೋದಕ್ಕೆ ಶುರುವಿಟ್ಟಿದ್ದಾಳೆ. ನಾವು ಪೊಲೀಸರಿಗೆ ಮಾಮೂಲು ಕೊಡ್ತೀವಿ ಅಂತ ಆರೊಪ ಬೇರೆ ಮಾಡ್ತಾಳೆ. ಇಷ್ಟೆಲ್ಲ ಕೇಳ್ತದ್ದಂತೆಯೇ ಮೇಯರ್ ನೇರ ಪೊಲೀಸ್ ಕಮೀಷನರ್ ರವರಿಗೆ ಕರೆ ಮಾಡಿ ವಿಷಯ ಮುಟ್ಟಿಸುತ್ತಾರೆ. ಡಿಸಿಪಿ ಶಾಂತರಾಜು ನೇತೃತ್ವದಲ್ಲಿ ಪೊಲೀಸ್ರು ಬಂದ್ರು ನಾನು ಬೀಗ ಹಾಕಲ್ಲ ಅಂತ ಸ್ಕಿಲ್ ಗೇಮ್ ಮಾಲಕಿ ಹಠಹಿಡಿದಿದ್ದಾಳೆ. ತದನಂತರ ಮಹಿಳಾ ಪೊಲೀಸರನ್ನು ಕರೆಸಿ ಆಕೆಯನ್ನು ವಶಪಡಿಸಿಕೊಂಡ ಘಟನೆಯೂ ನಡೆಯಿತು. ಈ ಹಿಂದೆ ಇದೇ ಸ್ಕಿಲ್ ಗೇಮ್ ಅಡ್ಡೆಗೆ ದಾಳಿ ನಡೆಸಿದಾಗ ಪೊಲೀಸ್ ದಾಳಿ ವಿರುದ್ಧ ಹೈಕೋರ್ಟ್ ನೀಡಿರೋ ತಡೆಯಾಜ್ಞೆಯ ಅಸ್ತ್ರ ಪ್ರಯೋಗಿಸಿದ್ದಳು. ಆ ಕಾರಣಕ್ಕಾಗಿ ನನಗೆ ನಿಮ್ ಟ್ರೇಡ್ ಲೈಸೆನ್ಸ್ ಅಗತ್ಯನೇ ಇಲ್ಲ ಅಂತ ಪಾಲಿಕೆ ಅಧಿಕಾರಿಗಳಿಗೆ ಸ್ಕಿಲ್ ಗೇಮ್ ಮಾಲಕಿ ಸುಜಿತಾ ರೈ ಸವಾಲು ಹಾಕಿದ್ಲು.

    ಮೇಯರ್ ರೈಡ್ ವೇಳೆ ಮುಕ್ಕಾಲು ನಗ್ನ ಸ್ಥಿತಿಯಲ್ಲಿದ್ದವರು ತುಂಡು ಬಟ್ಟೆ ಸಿಕ್ರೆ ಸಾಕು ಅಂತ ಎದ್ದು ಬಿದ್ದು ಓಡಿದ್ರು. ಚಡ್ಡಿಯಲ್ಲಿ ಮಲಗಿದ್ದವರಿಗೆ, ಎಣ್ಣೆ ಹಾಕಿ ಮಸಾಜ್ ಮಾಡೋ ಬಿಸ್ನೆಸ್ ಮಾಡೋರಿಗೆ ಸರಿಯಾಗಿ ಕವಿತಾ ಮೇಡಮ್ ಬೆವರು ಇಳಿಸಿದ್ರು.

    ಮಂಗಳೂರು ಮಹಾನಗರದೊಳಗೆ ಬೇರುಬಿಟ್ಟಿರೋ ಮಸಾಜ್ ಪಾರ್ಲರ್, ಸ್ಕಿಲ್‍ಗೇಮ್ ಅಡ್ಡೆಗಳಿಗೆ ಅಂಕುಶ ಹಾಕಲು ಲೇಡಿ ಮೇಯರ್ ಟೊಂಕ ಕಟ್ಟಿ ನಿಂತಿದ್ದಾರೆ. ಪೊಲೀಸರು ಮಾಡ್ಬೇಕಾಗಿದ್ದ ಕೆಲಸವನ್ನು ಸಾರ್ವಜನಿಕರ ಮಾಹಿತಿ ಆಧರಿಸಿ ತಾನೇ ಪಾಲಿಕೆ ಅಧಿಕಾರಿಗಳ ಜೊತೆಗೂಡಿ ಮಡೋದಕ್ಕೆ ಶುರುವಿಟ್ಟಿದ್ದಾರೆ. ಈ ಮೂಲಕ ಮೆಯರ್ ಕವಿತಾ ಸನಿಲ್ ಕಡಲತಡಿಯಲ್ಲಿದ್ದು ಕಚ್ಡಾ ದಂಧೆಗೆ ಇಳಿಯೋ ಮಂದಿಗೆ ಸಿಂಹಸ್ವಪ್ನರಾಗ ತೊಡಗಿರುವುದು ಸುಳ್ಳಲ್ಲ.

  • 20 ರೂ. ಪೌಡರ್ ಇಟ್ಕೊಂಡು ಮಸಾಜ್ ಹೆಸ್ರಲ್ಲಿ ಸೆಕ್ಸ್ ದಂಧೆ!

    20 ರೂ. ಪೌಡರ್ ಇಟ್ಕೊಂಡು ಮಸಾಜ್ ಹೆಸ್ರಲ್ಲಿ ಸೆಕ್ಸ್ ದಂಧೆ!

    ಬೆಂಗಳೂರು: ವೃದ್ಧಾಶ್ರಮ ಹೆಸರಲ್ಲಿ ಮಸಾಜ್ ಪಾರ್ಲರ್ ಮಾಡಿಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಾರ್ಲರ್ ಮೇಲೆ ಕೊನೆಗೂ ಇಂದಿರಾನಗರ ಪೊಲೀಸರು ದಾಳಿ ನಡೆಸಿದ್ದಾರೆ.

    ಬೆಂಗಳೂರಿನ ಇಂದಿರಾನಗರದ ಆರನೇ ಅಡ್ಡರಸ್ತೆಯಲ್ಲಿರುವ ಈ ಮನೆಯಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ಸೆಕ್ಸ್ ದಂಧೆ ನಡೆಯುವುದನ್ನು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ಮೂಲಕ ಬಯಲಿಗೆ ತಂದಿದೆ.

    ಇಂದಿರಾ ನಗರದ ಕೂಗಳತೆಯ ದೂರದಲ್ಲಿ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಈ ಮನೆಯ ಪಕ್ಕ ಕಾಲೇಜಗಳಿವೆ. ಸಂಪ್ರದಾಯಸ್ಥರ ಮನೆಗಳೂ ಇವೆ. ಆದ್ರೂ ರಾಜಾರೋಷವಾಗಿ ಈ ಸೆಕ್ಸ್ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಕಾರ್ಯಾಚರಣೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

    ಈ ದಂಧೆಯ ಓನರ್ ಒಬ್ಬಳು ಖತರ್ನಾಕ್ ಮಹಿಳೆಯೆ ಆಗಿದ್ದಾಳೆ. ಈಕೆಯ ಹೆಸರಿನಲ್ಲಿ ಅನೇಕರು ಕೆಲಸ ಮಾಡಿಕೊಂಡಿದ್ದಾರೆ. ಈ ಮನೆಗೆ ದಿನಕ್ಕೆ ಏನಿಲ್ಲವೆಂದರೂ ನೂರಾರು ಜನರು ಬರ್ತಾರೆ. ಲಕ್ಷ ಲಕ್ಷ ರೂಪಾಯಿಗಳ ವ್ಯವಹಾರ ಕೂಡ ನಡೆಯುತ್ತದೆ.

    ಫಸ್ಟ್ ಹಣ ಕೊಡ್ಬೇಕು: ರೂಂಗೆ ಹೋದ ತಕ್ಷಣ ಗ್ರಾಹಕರ ಬಳಿ ಫಸ್ಟ್ ಟಿಪ್ಸ್ ಕೊಡಿ ಅಂತಾ ದುಡ್ಡು ಕಿತ್ತುಕೊಳ್ತಾರೆ. ಆ ಮೇಲೆ ಬಟ್ಟೆ ಬಿಚ್ಚಿ ಪೌಡರ್ ಮಸಾಜ್ ಶುರು ಹಚ್ಕೊಳ್ತಾರೆ. ಬರೇ ಮಸಾಜ್ ಸಾಕು ಅಂದ್ರೂ ಕೇಳಲ್ಲ, ಟಿಪ್ಸ್ ಕೊಡೋದನ್ನ ತಪ್ಪಿಸೋಕೆ ಹಿಂಗಾಡ್ತೀಯಾ ಅಂತಾ ಗದರಿ ದುಡ್ಡು ಕಿತ್ಕೊಂಡು ಕೆಲ್ಸ ಮುಗಿಸ್ತಾರೆ. ದುರಂತ ಅಂದ್ರೆ ಇಲ್ಲಿ ಚಿಗುರು ಮೀಸೆ ಕಾಲೇಜ್ ಹುಡ್ಗರು ಎಂಟ್ರಿ ಕೊಡುತ್ತಿದ್ದಾರೆ.

     

    https://www.youtube.com/watch?v=P15VRt6N1Gw

    https://www.youtube.com/watch?v=LviKyrP1pKc

    https://www.youtube.com/watch?v=2EsDfbHP9n8

     

  • ಎಚ್ಚರ: ಮಹಿಳೆಯರೇ ಮಸಾಜ್ ಪಾರ್ಲರ್ ಗೆ ಹೋಗೋ ಮುನ್ನ ಈ ಸುದ್ದಿ ಓದಿ

    ಎಚ್ಚರ: ಮಹಿಳೆಯರೇ ಮಸಾಜ್ ಪಾರ್ಲರ್ ಗೆ ಹೋಗೋ ಮುನ್ನ ಈ ಸುದ್ದಿ ಓದಿ

    ಬೆಂಗಳೂರು: ಹೋಟೆಲ್ ಹಾಗೂ ಡ್ರೆಸ್ ಚೇಂಜಿಂಗ್ ರೂಮ್ ಗಳಲ್ಲಿ ಹಿಡನ್ ಕ್ಯಾಮೆರಾಗಳನ್ನಿಟ್ಟು ಮಹಿಳೆಯರ ನಗ್ನ, ಅರೆನಗ್ನ ದೃಶ್ಯಗಳನ್ನು ಸೆರೆಹಿಡಿದಿರೋ ಘಟನೆಗಳು ಸಾಕಷ್ಟು ಸುದ್ದಿಯಾಗಿವೆ. ಇದೇ ರೀತಿ ಇದೀಗ ಮಸಾಜ್ ಪಾರ್ಲರ್ ನಲ್ಲೂ ಈ ತರಹ ಹಿಡನ್ ಕ್ಯಾಮೆರಾವನ್ನಿಟ್ಟು ಮಹಿಳೆಯ ಅರೆನಗ್ನ ದೃಶ್ಯಗಳನ್ನು ಸೆರೆಹಿಡಿದಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ನಗರದ ಯಲಹಂಕದ ಮಾರುತಿ ನಗರದ ಶ್ರೀಸಾಯಿ ನಂದೀಶ್ವರ್ ನ್ಯಾಚುರೋಪತಿ ಕ್ಲಿನಿಕ್ ನಲ್ಲಿ ಈ ಘಟನೆ ನಡೆದಿದೆ. ಬಾಡಿ ಪೇನ್ ಎಂದು ಮಸಾಜ್ ಗೆ ಬಂದಿದ್ದ ಮಹಿಳೆಯ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಣ ಮಾಡಲಾಗಿದೆ.

    ಬೆಳಕಿಗೆ ಬಂದಿದ್ದೇಗೆ?: ಪಾರ್ಲರ್ ನ ಕಿಟಕಿಯ ಕರ್ಟನ್ ನಲ್ಲಿ ಸಿಬ್ಬಂದಿ ಕ್ಯಾಮೆರಾ ಫಿಕ್ಸ್ ಮಾಡಿದ್ದರು. ಇದರಿಂದ ಬಾಡಿ ಮಸಾಜ್ ಗೆ ಬಂದಿದ್ದ ಮಹಿಳೆ ಅನುಮಾನಗೊಂಡು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಸಿಬ್ಬಂದಿ ಮಾತ್ರ ಕರ್ಟನ್ ಇರೋದೆ ಹಾಗೆ ಅಂತ ಯಾಮಾರಿಸಿದ್ದರು. ಆದ್ರೆ ಮಹಿಳೆ ಕರ್ಟನ್ ಪರಿಶೀಲನೆ ಮಾಡಿದಾಗ ಕ್ಯಾಮೆರಾ ಫಿಕ್ಸ್ ಮಾಡಿರುವುದು ಬೆಳಕಿಗೆ ಬಂದಿದೆ.

    ಇದರಿಂದ ಆತಂಕಗೊಂಡ ಮಹಿಳೆ ಈ ಬಗ್ಗೆ ಗಲಾಟೆ ಮಾಡಿ, ಬಳಿಕ ಯಲಹಂಕ ಪೊಲೀಸರಿಗೆ ದೂರು ನೀಡಿದ್ದಾರೆ. ಅಂತೆಯೇ ಯಲಹಂಕ ಪೊಲೀಸರು ದಾಳಿ ಮಾಡುತ್ತಿದ್ದಂತೆ ಕ್ಲಿನಿಕ್ ಸಿಬ್ಬಂದಿ ಪರಾರಿಯಾಗಿದ್ದಾರೆ. ಸದ್ಯ ಮಸಾಜ್ ಪಾರ್ಲರ್ ಸೀಜ್ ಮಾಡಿ, ಕ್ಯಾಮೆರಾ, ಫೋಟೊಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.