Tag: ಮಶ್ರೂಮ್ ಸೂಪ್

  • ತುಂಬಾ ರುಚಿಯಾದ ಮಶ್ರೂಮ್ ಸೂಪ್ ಮಾಡುವ ಸರಳ ವಿಧಾನ

    ತುಂಬಾ ರುಚಿಯಾದ ಮಶ್ರೂಮ್ ಸೂಪ್ ಮಾಡುವ ಸರಳ ವಿಧಾನ

    ಸೂಪ್ ಒಂದು ಆರೋಗ್ಯಕರ ಅಡುಗೆ. ಈ ಹಿಂದೆ ಟೊಮೆಟೊ ಸೂಪ್, ಚಿಕನ್ ಸೂಪ್ ಸೇರಿದಂತೆ ಹಲವು ವಿಧದ ಸೂಪ್‌ಗಳನ್ನು ಮಾಡುವುದು ಹೇಗೆ ಎಂದು ನಾವು ನಿಮಗೆ ಹೇಳಿಕೊಟ್ಟಿದ್ದೇವೆ. ಇಂದಿನ ರೆಸಿಪಿ ಮಶ್ರೂಮ್ ಪ್ರಿಯರಿಗಾಗಿ. ರುಚಿಕರವಾದ ಮಶ್ರೂಮ್ ಸೂಪ್ (Mushroom Soup) ರೆಸಿಪಿಯನ್ನು ನೀವೊಮ್ಮೆ ಟ್ರೈ ಮಾಡಿದರೆ ಮತ್ತೆ ಮತ್ತೆ ನೀವು ಖಂಡಿತಾ ಇದನ್ನು ಸವಿಯಲು ಬಯಸುತ್ತೀರಿ. ಹಾಗಿದ್ದರೆ ಮಶ್ರೂಮ್ ಸೂಪ್ ಮಾಡುವ ಸಿಂಪಲ್ ವಿಧಾನ ನೋಡೋಣ.

    ಬೇಕಾಗುವ ಪದಾರ್ಥಗಳು:
    ಬೆಣ್ಣೆ – 3 ಟೀಸ್ಪೂನ್
    ತುರಿದ ಬೆಳ್ಳುಳ್ಳಿ – 2
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ಕತ್ತರಿಸಿದ ಮಶ್ರೂಮ್ – 2 ಕಪ್
    ಮೈದಾ ಹಿಟ್ಟು – 2 ಟೀಸ್ಪೂನ್
    ಚಿಕನ್ ಸ್ಟಾಕ್ – 3 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಕರಿ ಮೆಣಸಿನಪುಡಿ – ಕಾಲು ಟೀಸ್ಪೂನ್
    ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಏರ್ ಫ್ರೈಯರ್‌ನಲ್ಲಿ ರೋಸ್ಟೆಡ್ ಟೊಮೆಟೊ ಸೂಪ್ ಮಾಡುವ ವಿಧಾನ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆಯಲ್ಲಿ 2 ಟೀಸ್ಪೂನ್ ಬೆಣ್ಣೆಯನ್ನು ಬಿಸಿ ಮಾಡಿ, ಕರಗಿದ ಬಳಿಕ ಬೆಳ್ಳುಳ್ಳಿ, ಈರುಳ್ಳಿ ಹಾಕಿ 1 ನಿಮಿಷ ಹುರಿದುಕೊಳ್ಳಿ.
    * ಮಶ್ರೂಮ್ ಸೇರಿಸಿ, ಮೆತ್ತಗಾಗುವವರೆಗೆ ಹಾಗೂ ಕಂದು ಬಣ್ಣ ಬರುವವರೆಗೆ ಸುಮಾರು 3 ನಿಮಿಷಗಳ ಕಾಲ ಫ್ರೈ ಮಾಡಿ. ಬಳಿಕ ಈ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿ ಪಕ್ಕಕ್ಕಿಡಿ.
    * ಈಗ ಉರಿಯನ್ನು ಕಡಿಮೆ ಮಾಡಿಕೊಂಡು ಬಾಣಲೆಯಲ್ಲಿ ಉಳಿದಿರುವ 1 ಟೀಸ್ಪೂನ್ ಬೆಣ್ಣೆಯನ್ನು ಬಿಸಿ ಮಾಡಿ. ಕರಗಿದ ಬಳಿಕ ಮೈದಾ ಹಿಟ್ಟನ್ನು ಹಾಕಿ ಪೇಸ್ಟ್ ರೀತಿ ಆಗುವಂತೆ ಮಿಶ್ರಣ ಮಾಡಿ.
    * ಈಗ ಉರಿಯನ್ನು ಮಧ್ಯಮದಲ್ಲಿಟ್ಟು ಚಿಕನ್ ಸ್ಟಾಕ್, ಉಪ್ಪು ಹಾಗೂ ಕರಿ ಮೆಣಸಿನಪುಡಿ ಸೇರಿಸಿ ಮಿಶ್ರಣ ಮಾಡಿ. ಇದನ್ನು ಸುಮಾರು 3 ನಿಮಿಷ ಚೆನ್ನಾಗಿ ಕುದಿಯಲು ಬಿಡಿ.
    * ಬಳಿಕ ಹುರಿದಿಟ್ಟುಕೊಂಡಿದ್ದ ಮಶ್ರೂಮ್‌ಗಳನ್ನು ಹಾಕಿ ಮತ್ತೆ 2 ನಿಮಿಷ ಬೇಯಿಸಿಕೊಳ್ಳಿ. ಈಗ ಮಿಶ್ರಣ ದಪ್ಪವಾಗಲಾರಂಭಿಸುತ್ತದೆ.
    * ಇದೀಗ ರುಚಿಕರ ಮಶ್ರೂಮ್ ಸೂಪ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಸಖತ್ ರುಚಿಯಾದ ಸ್ಟಾರ್ಟರ್ ರೆಸಿಪಿ – ಬೇಬಿ ಕಾರ್ನ್ ಪೆಪ್ಪರ್ ಫ್ರೈ ಮಾಡಿ