Tag: ಮಳೆ

  • ಬೆಳ್ಳಂದೂರು, ವರ್ತೂರು ಕೆರೆಯಲ್ಲಿ ಮತ್ತೆ ನೊರೆ

    ಬೆಳ್ಳಂದೂರು, ವರ್ತೂರು ಕೆರೆಯಲ್ಲಿ ಮತ್ತೆ ನೊರೆ

    ಬೆಂಗಳೂರು: ತಿಂಗಳ ಹಿಂದೆ ಬೆಂಕಿ ಉಗುಳಿದ್ದ ಬೆಳ್ಳಂದೂರು ಕೆರೆ ಈಗ ನೊರೆ ಉಗುಳುತ್ತಿದೆ. ಬೆಂಗಳೂರು ಸೇರಿದಂತೆ ನಗರದ ಸುತ್ತಮುತ್ತ ಕಳೆದೆರೆಡು ದಿನಗಳಿಂದ ಧಾರಾಕಾರ ಮಳೆ ಆಗ್ತಿದ್ದು, ಪರಿಣಾಮ ಬೆಳ್ಳಂದೂರು ಕೆರೆಯಲ್ಲಿ ಆಳೆತ್ತರಕ್ಕೆ ನೊರೆ ಏರಿದೆ.

    ಇದರಿಂದ ಕೆರೆಯ ಸುತ್ತ ದುರ್ವಾಸನೆ ಹಬ್ಬಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಮಳೆಯಿಂದಾಗಿ ರಭಸವಾಗಿ ನೀರು ಹರಿಯುತ್ತಿರೋದ್ರಿಂದ ಇಂದು ಮತ್ತಷ್ಟು ನೊರೆ ಹೆಚ್ಚಾಗುವ ಸಾಧ್ಯತೆ ಇದೆ. ಇತ್ತ ವರ್ತೂರು ಕೆರೆಯಲ್ಲೂ ಕೂಡ ಇದೇ ಪರಿಸ್ಥಿತಿ ಇದೆ.

    ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ, ಬಿಡಿಎ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ನೋಟಿಸ್ ನೀಡಿತ್ತು. ಎರಡು ವಾರಗಳಲ್ಲಿ ಉತ್ತರಿಸುವಂತೆ ತಾಕೀತು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಆರು ಜನರ ತಂಡದ ಕಮಿಟಿ ರಚನೆ ಮಾಡಿದೆ. ಕಮಿಟಿಯಲ್ಲಿ ಸೀನಿಯರ್ ಸೈಂಟಿಫಿಕ್ ಆಫೀಸರ್‍ಗಳಿದ್ದು, ಮುಂದಿನ ವಾರ ವರದಿ ನೀಡಲಿದ್ದಾರೆ. ಮತ್ತೆ ಮಾರ್ಚ್ 20 ರಂದು ವಿಚಾರಣೆ ನಡೆಯಲಿದ್ದು ಎನ್‍ಜಿಟಿ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದು ನೋಡಬೇಕು.

    ಕಳೆದ ಬಾರಿ ಬೆಂಕಿ, ನೊರೆ ಕಾಣಿಸಿಕೊಂಡಾಗ ಬಿಬಿಎಂಪಿ ಮೇಯರ್ ಪದ್ಮಾವತಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ರು. ಆದ್ರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗೆ ಬೇಸಿಗೆಯಲ್ಲಿ ಬೆಂಕಿ, ಮಳೆಗಾಲದಲ್ಲಿ ನೊರೆ ಮತ್ತೆ ಮತ್ತೆ ಕಾಣಿಸ್ತಿರೋದು ಸ್ಥಳೀಯರನ್ನು ತೀವ್ರ ಆತಂಕಕ್ಕೀಡು ಮಾಡಿದೆ.

  • ತುಮಕೂರು: ಸಿಡಿಲು ಬಡಿತಕ್ಕೆ ತಾಯಿ-ಮಗಳು ಬಲಿ

    ತುಮಕೂರು: ಸಿಡಿಲು ಬಡಿತಕ್ಕೆ ತಾಯಿ-ಮಗಳು ಬಲಿ

    ತುಮಕೂರು: ಸಿಡಿಲಿನಿಂದ ಇಬ್ಬರು ಸಾವನ್ನಪ್ಪಿರುವ ಘಟನೆ ಸೋಮವಾರ ಜಿಲ್ಲೆಯ ಗುಬ್ಬಿ ತಾಲೂಕಿನ ಪೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಳೆಯಿಂದ ರಕ್ಷಣೆ ಪಡೆಯಲು ಆಲದ ಮರದ ಕೆಳಗೆ ನಿಂತಾಗ ಸಿಡಲು ಬಡಿದು ಸಾವನ್ನಪ್ಪಿದ್ದಾರೆ.

    40 ವರ್ಷದ ಮಂಜುಳಾ ಹಾಗೂ 13 ವರ್ಷದ ಭಾರತಿ ಸಾವನ್ನಪ್ಪಿರುವ ದುರ್ಧೈವಿಗಳು. ಮಂಜುಳಾ ಅವರ ಇನ್ನಿಬ್ಬರು ಮಕ್ಕಳಾದ ಶಿಲ್ಪಾ ಮತ್ತು ಸಂತೋಷ ಗಾಯಗೊಂಡಿದ್ದಾರೆ. ಗುಬ್ಬಿ ತಾಲೂಕಿನ ಅರಿಶಿಣಕುಂಟೆ ಗ್ರಾಮದಲ್ಲಿ ಗಿರಿಯಮ್ಮ ಎಂಬವರಿಗೆ ಸೇರಿದ 9 ಮೇಕೆಗಳು ಸಿಡಿಲಿಗೆ ಸಾವನ್ನಪ್ಪಿವೆ.

    ಸತತ ಎರಡು ತಿಂಗಳಿನಿಂದ ಬಿಸಿಲಿನಿಂದ ತತ್ತರಿಸಿದ ಜನತೆಗೆ ವರುಣನ ಸಿಂಚನ ಕೆಲವಡೆ ತಂಪು ತಂದಿದ್ದರೆ, ಇನ್ನು ಕೆಲವಡೆ ಸಿಡಿಲಿನ ಅವಘಡದಿಂದ ದುಃಖದ ಛಾಯೆ ಮೂಡಿಸಿದೆ.

     

  • ಈಗ ಬೆಂಗಳೂರಿನಲ್ಲಿ ಮಳೆಯಾಗ್ತಿರೋದು ಯಾಕೆ?

    ಈಗ ಬೆಂಗಳೂರಿನಲ್ಲಿ ಮಳೆಯಾಗ್ತಿರೋದು ಯಾಕೆ?

    ಬೆಂಗಳೂರು: ಸಿಲಿಕಾನ್ ಸಿಟಿಗೆ ಅಂತೂ ಮಳೆರಾಯ ತಂಪೆರೆದಿದ್ದಾನೆ. ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ಕಾಣಿಸಿಕೊಂಡ ವರುಣ ಎಡೆಬಿಡದೆ ಸುರಿದಿದ್ದಾನೆ.

    ಯಶವಂತಪುರ, ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್, ಯಲಹಂಕ, ದೊಡ್ಡಬಳ್ಳಾಪುರ, ಇಸ್ರೋ ಲೇಔಟ್, ಪುಟ್ಟೇನಹಳ್ಳಿಯಲ್ಲೂ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

    ದಿಢೀರ್ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯ್ತು. ತಿಲಕ್‍ನಗರದಲ್ಲಿ ರಸ್ತೆಗೆ ಅಡ್ಡವಾಗಿ ಮರ ಬಿದ್ದಿದೆ. ಅತ್ತ ಮೈಸೂರು, ಚಾಮರಾಜನಗರ ಹಾಗೂ ತುಮಕೂರು, ಮೈಸೂರು ಜಿಲ್ಲೆಯಲ್ಲೂ ಮಳೆಯಾಗಿದೆ.

    ತಮಿಳುನಾಡು ಮತ್ತು ಶ್ರೀಲಂಕಾದ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ರಾಜ್ಯದಲ್ಲಿ ಮೂರು ದಿನಗಳ ಕಾಲ ಸಾಧಾರಣ ಮಳೆ ಬೀಳಲಿದೆ.

     

  • ಎಚ್‍ಡಿ ಕೋಟೆ,  ಮಧುಗಿರಿಯಲ್ಲಿ ಭಾರೀ ಮಳೆ

    ಎಚ್‍ಡಿ ಕೋಟೆ, ಮಧುಗಿರಿಯಲ್ಲಿ ಭಾರೀ ಮಳೆ

    ಮೈಸೂರು: ಬಿಸಿಲ ಧಗೆಯಿಂದ ಬೆಂದು ಹೋಗಿರೋ ಕರುನಾಡಿಗೆ ಮಳೆರಾಯ ತಂಪೆರೆಯುತ್ತಿದ್ದಾನೆ. ಇವತ್ತು ಮೈಸೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ಮಳೆರಾಯ ಪ್ರತ್ಯಕ್ಷಗೊಂಡು ತಂಪೆರೆದಿದ್ದಾನೆ.

    ಮೈಸೂರಿನ ಎಚ್.ಡಿ.ಕೋಟೆಯ ಅರಣ್ಯ ಭಾಗ ಸೇರಿದಂತೆ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಸಂಜೆ 3 ಗಂಟೆಗೆ ಆರಂಭವಾದ ಮಳೆ ಅರ್ಧಗಂಟೆ ಸುರಿದಿದೆ.

    ತುಮಕೂರು ಜಿಲ್ಲೆಯ ಮಧುಗಿರಿಯಲ್ಲೂ ಮಳೆಯಾಗಿದೆ. ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಭಾನುವಾರ ರಾಮನಗರದ ಸುತ್ತಮುತ್ತಾ ತುಂತುರು ಮಳೆಯಾಗಿತ್ತು.

    ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಮಲೆನಾಡಿನಲ್ಲಿ ಮೂರು ದಿನಗಳ ಕಾಲ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೂಡ ನೀಡಿತ್ತು. ಮಳೆ ಬಿದ್ದ ಕಾರಣ ಜನ ಈಗ ಸ್ವಲ್ಪ ನಿಟ್ಟುಸಿರು ಬಿಡುತ್ತಿದ್ದಾರೆ.

    ತುಮಕೂರು, ಮಧುಗಿರಿ
    ತುಮಕೂರು, ಮಧುಗಿರಿ
    ತುಮಕೂರು, ಮಧುಗಿರಿ
    ಎಚ್‍ಡಿ ಕೋಟೆ, ಮೈಸೂರು
    ಎಚ್‍ಡಿ ಕೋಟೆ, ಮೈಸೂರು

     

  • ಬರ, ಬಿಸಿಲಿನ ಮಧ್ಯೆಯೂ ಮಧ್ಯರಾತ್ರಿ ಮಳೆ – ರಾಮನಗರದ ಹಲವೆಡೆ ವರುಣನ ದರ್ಶನ

    ಬರ, ಬಿಸಿಲಿನ ಮಧ್ಯೆಯೂ ಮಧ್ಯರಾತ್ರಿ ಮಳೆ – ರಾಮನಗರದ ಹಲವೆಡೆ ವರುಣನ ದರ್ಶನ

    ರಾಮನಗರ: ಒಂದೆಡೆ ಬೇಸಿಗೆಯ ಬಿಸಿಲಿನ ತಾಪದಿಂದ ಕಾದಿದ್ದ ಬಂಡೆಗಳ ಶಾಕ ಹೊರಬಿದ್ದು ಸೆಕೆಯಿಂದ ಬಳಲಿದ್ದ ರೇಷ್ಮೆನಗರಿ ರಾಮನಗರದ ಜನತೆಗೆ ಶನಿವಾರ ಮಧ್ಯರಾತ್ರಿ ಮಳೆರಾಯ ತಂಪನ್ನೆರೆದಿದ್ದಾನೆ.

    ಹೌದು. ಮಳೆಗಾಲ ಆರಂಭಕ್ಕೂ ಮುನ್ನವೇ ಬೇಸಿಗೆಯ ಬಿಸಿಲಿನಿಂದ ಬೆಂದು ಹೋಗಿದ್ದ ರಾಮನಗರ ಜನತೆಗೆ ಮಧ್ಯರಾತ್ರಿ ಸುಮಾರು 1 ಗಂಟೆಗೆ ಮಳೆರಾಯ ತಂಪನ್ನೆರೆದಿದ್ದಾನೆ.

    ಸಪ್ತಗಿರಿಗಳ ನಗರ ಅಂತಲೇ ಕರೆಸಿಕೊಳ್ಳುವ ರಾಮನಗರಕ್ಕೆ ರಾತ್ರಿಯಾದ್ರೆ ಸಾಕು ಹಗಲಿನ ಬಿಸಿಲಿನ ತಾಪಕ್ಕಿಂತ ರಾತ್ರಿಯ ಸೆಕೆಯ ತಾಪವೇ ಹೆಚ್ಚು. ಬೆಳಗ್ಗಿನಿಂದ ಕಾದು ಕಾದು ಕೆಂಡದಂತಾಗಿರುವ ಬಂಡೆಗಲ್ಲುಗಳು ರಾತ್ರಿ ವೇಳೆ ತಾಪವನ್ನ ಹೊರ ಸೂಸುತ್ತಿವೆ. ಇದ್ರಿಂದ ಹಗಲಿನ ಸೆಕೆಗಿಂತ ರಾತ್ರಿಯ ಸೆಕೆಯೇ ಹೆಚ್ಚಾಗಿದೆ.

    ಅಂದಹಾಗೇ ಮಧ್ಯರಾತ್ರಿ ಸುರಿದ 10 ನಿಮಿಷಗಳಿಗೂ ಹೆಚ್ಚಿನ ಕಾಲದ ಮಳೆಯಿಂದಾಗಿ ಮಧ್ಯರಾತ್ರಿ ವೇಳೆಯಲ್ಲಿಯೂ ಜನ ನಿದ್ದೆಯಿಂದ ಎದ್ದು ಹೊರಬಂದು ತುಂತುರು ಮಳೆಗೆ ಸಂತೋಷವನ್ನ ವ್ಯಕ್ತಪಡಿಸ್ತಾ ಓಡಾಡ್ತಾ ಇದ್ರು.

    ಸತತ ನಾಲ್ಕು ವರ್ಷಗಳ ಕಾಲ ಭೀಕರ ಬರಗಾಲ ಎದುರಿಸಿರುವ ರಾಮನಗರದ ಜನತೆ ಇದೀಗ ಐದನೇ ವರ್ಷವೂ ಸಹ ಬರಗಾಲಕ್ಕೆ ತುತ್ತಾಗಿದ್ದಾರೆ. ಇದೀಗ ಮಧ್ಯರಾತ್ರಿ ಸ್ವಲ್ಪ ಮಟ್ಟಿಗೆ ತಂಪನ್ನೆರೆದಿರುವ ಮಳೆರಾಯನ ಕೃಪೆ ಈ ಬಾರಿಯಾದ್ರೂ ಜಿಲ್ಲೆಯ ಜನರ ಮೇಲೆ ಬೀಳಲಿ. ಸತತ ಬರಗಾಲದ ಭೀಕರತೆಯನ್ನ ಹೋಗಲಾಡಿಸಲಿ ಎಂದು ಪ್ರಾರ್ಥನೆ ಸಲ್ಲಿಸ್ತಿದ್ದಾರೆ.