Tag: ಮಳೆ

  • ಮಳೆಗಾಗಿ ಹೂತಿಟ್ಟ ಶವ ತೆಗೆದು ಸುಡ್ತಾರೆ ಈ ಗ್ರಾಮದ ಜನ!

    ಮಳೆಗಾಗಿ ಹೂತಿಟ್ಟ ಶವ ತೆಗೆದು ಸುಡ್ತಾರೆ ಈ ಗ್ರಾಮದ ಜನ!

    ಚಿಕ್ಕಮಗಳೂರು: ವರುಣ ದೇವ ಮುನಿಸಿಕೊಂಡ್ರೆ ಕಪ್ಪೆ, ಕತ್ತೆಗಳ ಮದುವೆ ಮಾಡೋದು ಎಲ್ಲಾ ಕಡೆ ನಡೆಯುತ್ತದೆ. ಆದರೆ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿ ಜನ ಹೂತಿಟ್ಟ ಶವವನ್ನು ಹೊರಗೆ ತೆಗೆದು ಸುಡುವ ವಿಶಿಷ್ಟ ಆಚರಣೆ ನಡೆಸುತ್ತಾರೆ.

    ಈ ಗ್ರಾಮದ ಜನ ಮಳೆಗಾಗಿ ನಾಲ್ಕು ಹಳ್ಳಿಯ ವ್ಯಾಪ್ತಿಯಲ್ಲಿ ಕಳೆದ ಒಂದೆರೆಡು ತಿಂಗಳಲ್ಲಿ ಹೂತು ಹಾಕಿದ್ದ ಮೃತದೇಹಗಳ ತಲೆಯನ್ನ ತೆಗೆದು ಹಲ್ಲು ಹಾಗೂ ಕೂದಲಿನ ಭಾಗವನ್ನ ಕಿತ್ತು ಮೃತದೇಹದ ತಲೆಯೊಂದಿಗೆ ಕಿತ್ತ ಭಾಗವನ್ನೆಲ್ಲಾ ಬೆಂಕಿ ಹಾಕಿ ಸುಡ್ತಾರೆ. ಹೀಗೆ ಮಾಡಿದ್ರೆ ಒಂದೆರಡು ತಿಂಗಳಲ್ಲಿ ಮಳೆ ಬಂದು ಬರಗಾಲ ನಿವಾರಣೆಯಾಗುತ್ತೆ ಅನ್ನೋದು ಈ ಗ್ರಾಮದವರ ನಂಬಿಕೆಯಾಗಿದೆ. ಈ ಆಚರಣೆಯಲ್ಲಿ ಸುತ್ತಮುತ್ತಲಿನ ನಾಲ್ಕು ಹಳ್ಳಿಯ ಜನ ಭಾಗವಹಿಸ್ತಾರೆ. ಎಲ್ಲರೂ ಒಂದುಗೂಡಿ ಆಚರಣೆ ಮಾಡುವುದರಿಂದ ಯಾರೊಬ್ಬರೂ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಲ್ಲ.

    ಡಂಗೂರ ಸಾರ್ತಾರೆ : ಈ ಆಚರಣೆಗೆ ಸುತ್ತಮುತ್ತಲಿನ ನಾಲ್ಕು ಹಳ್ಳಿಯ ಜನ ಬರುವಂತೆ ಹಿಂದಿನ ದಿನ ಡಂಗೂರವನ್ನೂ ಸಾರ್ತಾರೆ. ಎಲ್ಲರೂ ಒಂದೆಡೆ ಸೇರಿ ತೀರ್ಮಾನಿಸಿದ ನಂತರವಷ್ಟೆ ಆಚರಣೆಗೆ ಸಿದ್ಧತೆ ನಡೆಯೋದು. ಕಳೆದೆರಡು ತಿಂಗಳಲ್ಲಿ ಗ್ರಾಮದಲ್ಲಿ ಯಾರ್ಯಾರು ಮೃತಪಟ್ಟಿದ್ದಾರೆ, ಅವರನ್ನ ಎಲ್ಲೆಲ್ಲಿ ಹೂತಿದ್ದಾರೆ ಎಂಬ ಮಾಹಿತಿ ಕಲೆ ಹಾಕ್ತಾರೆ. ಬಳಿಕ ಎಲ್ಲರೂ ಸಮಾಧಿ ಬಳಿ ಹೋಗಿ ಶವದ ತಲೆಯನ್ನ ತೆಗೆದು ಬೆಂಕಿಗೆ ಹಾಕುತ್ತಾರೆ. ಮೃತ ದೇಹದ ತಲೆ ಬೆಂಕಿಯಲ್ಲಿ ಬೇಯುವಾಗ ಕುಣಿದು ಕುಪ್ಪಳಿಸುತ್ತಾರೆ.

    ಈ ಆಚರಣೆ ಇವರಿಗೆ ಹಬ್ಬ: ಗ್ರಾಮದವರು ಈ ಆಚರಣೆಯನ್ನ ಹಬ್ಬವಾಗಿ ಆಚರಿಸ್ತಾರೆ. ಈ ಆಚರಣೆಗೆ ಇವರು ಇಟ್ಟ ಹೆಸರು ಗಿಡ ಸವರೋ ಹಬ್ಬ. ಈ ಹಬ್ಬ ಮಾಡಿದ್ರೆ ನಾಡಿನ ಬರಗಾಲ ಹೋಗಿ ಸಮೃದ್ಧ ಮಳೆಯಾಗಿ ನಾಡು ಸುಭಿಕ್ಷವಾಗಿರುತ್ತೆ ಅನ್ನೋದು ಇವ್ರ ನಂಬಿಕೆ. ಈ ಹಿಂದೆ ಬರಗಾಲ ಬಂದಾಗ ಈ ಆಚರಣೆಯ ಬಳಿಕ ಮಳೆ ಬಂದಿತ್ತು. ಈ ಬಾರಿಯೂ ಮಳೆ ಬರುತ್ತೆ ಎಂದು ಸ್ಥಳೀಯರು ಹೇಳುತ್ತಾರೆ.

    ತೊನ್ನು ಹಾಗೂ ಇತರೆ ಕಾಯಿಲೆಯಿಂದ ಬಳಲಿ ಮೃತಪಟ್ಟವರ ಹಲ್ಲು, ಕೂದಲು ಬೆಳೆಯುತ್ತೆ. ಇದರಿಂದ ಮಳೆಯಾಗಲ್ಲ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ. ಹಾಗಾಗಿ ಊರಿನಲ್ಲಿ ಸತ್ತವರ ಸಮಾಧಿಗೆ ಹೋಗಿ ಶವ ತಂದು ಬೆಂಕಿಗೆ ಹಾಕಿ ಸುಡುತ್ತಾರೆ.

     

  • ಮಂಡ್ಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ದೇವಸ್ಥಾನದ ಮೇಲೆ ಉರುಳಿದ ಅರಳಿಮರ

    ಮಂಡ್ಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ದೇವಸ್ಥಾನದ ಮೇಲೆ ಉರುಳಿದ ಅರಳಿಮರ

    ಮಂಡ್ಯ: ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಮಂಡ್ಯ ಜಿಲ್ಲೆಯ ವಿವಿಧೆಡೆ ಮರಗಳು ಧರೆಗುರುಳಿದ್ದು, ಭಾರೀ ಗಾಳಿಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ.

    ಮಂಡ್ಯ ತಾಲ್ಲೂಕಿನ ಬಂಕನಹಳ್ಳಿಯಲ್ಲಿ ಐತಿಹಾಸಿಕ ಈಶ್ವರ ದೇವಾಲಯದ ಮೇಲೆ ಸುಮಾರು ನೂರು ವರ್ಷದ ಬೃಹತ್ ಅರಳಿಮರ ಉರುಳಿ ಬಿದ್ದು, ದೇವಾಲಯ ಜಖಂಗೊಂಡಿದೆ.

    ಕೆ.ಆರ್.ಪೇಟೆ ತಾಲೂಕಿನ ಮತ್ತಿಘಟ್ಟ ಗ್ರಾಮದಲ್ಲಿ ಗಾಳಿ ಮಳೆಗೆ ರೈತ ಬಸವರಾಜು ಎಂಬುವರಿಗೆ ಸೇರಿದ ಮನೆಯ ಮೇಲ್ಛಾವಣಿ ಹಾರಿ ಹೋಗಿವೆ. ಇದ್ರಿಂದಾಗಿ ಬಸವರಾಜು ಕುಟುಂಬದವರು ರಾತ್ರಿಯಲ್ಲೇ ಕಷ್ಟಪಡುವಂತಾಯಿತು.

  • ಮಂಡ್ಯ: ಮಳೆ-ಗಾಳಿ ರಭಸಕ್ಕೆ ನೆಲಕಚ್ಚಿದ ಬಾಳೆ

    ಮಂಡ್ಯ: ಮಳೆ-ಗಾಳಿ ರಭಸಕ್ಕೆ ನೆಲಕಚ್ಚಿದ ಬಾಳೆ

    ಮಂಡ್ಯ: ಇಷ್ಟು ದಿನ ಭೀಕರ ಬರಗಾಲದಿಂದ ತತ್ತರಿಸಿದ್ದ ಮಂಡ್ಯ ರೈತರು, ಇದೀಗ ಮಳೆಗಾಳಿಯ ರಭಸಕ್ಕೆ ಬೆಳೆ ನಾಶವಾಗಿ ಕಂಗಾಲಾಗಿದ್ದಾರೆ.

    ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹಡೇನಹಳ್ಳಿ ಗ್ರಾಮದಲ್ಲಿ ಬಾಳೆ ತೋಟ ಬಹುತೇಕ ನಾಶವಾಗಿದೆ. ಗ್ರಾಮದ ಮಾಯಣ್ಣಗೌಡ ಎಂಬುವರಿಗೆ ಸೇರಿದ 8.5 ಎಕರೆ ತೋಟದಲ್ಲಿ ಬಾಳೆ ಬೆಳೆದಿದ್ದರು.

    ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದ ಬಾಳೆ ನೆಲ ಕಚ್ಚಿರೋದ್ರಿಂದ ರೈತ ಮಾಯಣ್ಣಗೌಡರಿಗೆ ದಿಕ್ಕು ತೋಚದಂತಾಗಿದೆ. ಸರ್ಕಾರ ಸೂಕ್ತ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಮಾಯಣ್ಣಗೌಡ ಮನವಿ ಮಾಡಿಕೊಂಡಿದ್ದಾರೆ.

     

  • ರಾಜ್ಯದ ಈ ಭಾಗಗಳಲ್ಲಿ ಇಂದು, ನಾಳೆ ಮಳೆ ಸಾಧ್ಯತೆ

    ರಾಜ್ಯದ ಈ ಭಾಗಗಳಲ್ಲಿ ಇಂದು, ನಾಳೆ ಮಳೆ ಸಾಧ್ಯತೆ

    ಬೆಂಗಳೂರು: ಕಾದು ಕೆಂಡವಾಗಿದ್ದ ರಾಜ್ಯದಲ್ಲಿ ಸೋಮವಾರ ಸಂಜೆ ವೇಳೆ ಮಳೆರಾಯ ತಂಪೆರೆದಿದ್ದ. ಈ ಮೂಲಕ ಹಾಟ್ ಸಿಟಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳು ತಣ್ಣಗಾಗಿದ್ದವು.

    ಇದು ಮುಂಗಾರು ಪೂರ್ವ ಮಳೆಯಾಗಿದ್ದು, ಇಂದು ಮತ್ತು ನಾಳೆ ಕೂಡ ಕೆಲ ಪ್ರದೇಶಗಳಲ್ಲಿ ಮಳೆಯಾಗಲಿದೆ.

    ಬೆಂಗಳೂರು ನಗರ, ಗ್ರಾಮಾಂತರ, ಕೊಡಗು, ಮಡಿಕೇರಿ, ಹಾಸನ, ರಾಮನಗರದಲ್ಲಿ ಇಂದು ಮಳೆಯಾಗಲಿದೆ. ದಕ್ಷಿಣ ಒಳನಾಡು ಹಾಗೂ ಮಲೆನಾಡು ಪ್ರದೇಶದಲ್ಲಿ ಕೂಡ ಮಳೆಯಾಗಲಿದೆ. ಬಿಸಿಲ ನಾಡು ಬಳ್ಳಾರಿ ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಯಾವುದೇ ಮಳೆಯ ಮುನ್ಸೂಚನೆ ಇರುವುದು ಕಂಡುಬಂದಿಲ್ಲ.

  • ಬೆಂಗಳೂರಿನ ಹಲವೆಡೆ ಗಾಳಿ ಸಹಿತ ಮಳೆ -ಧರೆಗುರುಳಿದ ಮರಗಳು

    ಬೆಂಗಳೂರಿನ ಹಲವೆಡೆ ಗಾಳಿ ಸಹಿತ ಮಳೆ -ಧರೆಗುರುಳಿದ ಮರಗಳು

    ಬೆಂಗಳೂರು: ನಗರದ ಇಂದು ಹಲವಡೆ ಗಾಳಿ ಸಮೇತ ಮಳೆಯಾಗಿದ್ದು, ಕೆಲವು ಕಡೆ ಮರಗಳು ಧರೆಗೆ ಉರುಳಿವೆ.

    ನಗರದಲ್ಲಿ ಸಂಜೆ ಸುರಿದ ಮಳೆಗೆ 12 ಮರಗಳು ಧರೆಗುರುಳಿವೆ. ಕೋರಮಂಗಲ ಕ್ಲಬ್ ರಸ್ತೆ, ಇಂದಿರಾನಗರ, ಸಿಎಂಎಚ್ ರಸ್ತೆ, ಎಲ್‍ಐಸಿ ಆಫೀಸ್ ಜೆಬಿ ನಗರ, ಎಚ್‍ಎಎಲ್, ಎಚ್‍ಎಸ್‍ಆರ್ ಲೇಔಟ್, ಜೀವನ್ ಭೀಮಾ ನಗರ, ಕೆಎಂಹೆಚ್ ಕಾಲೋನಿ, ಟ್ರಿನಿಟಿ ಸರ್ಕಲ್, ಮೇಕ್ರಿಸರ್ಕಲ್ ಗಳಲ್ಲಿ ಮರಗಳು ಬಿದ್ದಿವೆ.

    ಇನ್ನು ಮಲ್ಲೇಶ್ವರಂ, ವೈಯಾಲಿಕಾವಲ್, ವಿಧಾನಸೌಧ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆಯಾಗಿದೆ. ದಿಢೀರ್ ಸುರಿದ ಮಳೆಗೆ ಹಲವಡೆ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಯಶವಂತಪುರ, ಶಾಂತಿನಗರ, ಕಾರ್ಪೊರೇಶನ್, ಮೆಜೆಸ್ಟಿಕ್ ಸೇರಿದಂತೆ ಬಹುತೇಕ ನಗರದಲ್ಲೆಡೆ ಮಳೆಯಾಗಿದೆ.

     

     

  • ಬೆಂಗ್ಳೂರನ್ನ ಕೂಲ್ ಮಾಡಿದ ಮಳೆರಾಯ

    ಬೆಂಗ್ಳೂರನ್ನ ಕೂಲ್ ಮಾಡಿದ ಮಳೆರಾಯ

    ಬೆಂಗಳೂರು: ನಗರದ ಹಲವೆಡೆ ಇಂದು ಸಾಧಾರಣ ಮಳೆಯಾಗಿದೆ.

    ಶಿವಾಜಿನಗರ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಇಂದು ಮಧ್ಯಾಹ್ನದ ನಂತರ ಮಳೆಯಾಗಿದ್ದು ಬಿಸಿಲಿನಿಂದ ಬೇಸತ್ತಿದ್ದ ಬೆಂಗಳೂರು ಜನರನ್ನ ಕೂಲ್ ಮಾಡಿದೆ.

    ಇನ್ನು ಐಪಿಎಲ್ ಪಂದ್ಯ ವೀಕ್ಷಣೆಗೆ ಬಂದ ಜನರು ಮಳೆಯಲ್ಲಿ ಸಿಲುಕಿದ್ರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ರಾತ್ರಿ 8 ಗಂಟೆಗೆ ಪಂದ್ಯ ನಡೆಯಲಿದೆ. ಪಂದ್ಯ ವೀಕ್ಷಣೆಗೆ ಸ್ಟೇಡಿಯಂ ಬಳಿ ಕ್ರೀಡಾಭಿಮಾನಿಗಳು ದೌಡಾಯಿಸುತ್ತಿದ್ದಾರೆ.

     

  • ಬೆಳಗಾವಿಯಲ್ಲಿ ಭಾರೀ ಮಳೆ: ಧರೆಗುರಳಿದ ಮರ, ವಿದ್ಯುತ್ ಕಂಬಗಳು

    ಬೆಳಗಾವಿಯಲ್ಲಿ ಭಾರೀ ಮಳೆ: ಧರೆಗುರಳಿದ ಮರ, ವಿದ್ಯುತ್ ಕಂಬಗಳು

    -ಬಳ್ಳಾರಿಯಲ್ಲಿ ಮನೆಯ ಸೀಟ್ ಕುಸಿದು ಎರಡು ಸಾವು

    – ಕಾರವಾರದಲ್ಲಿ ಸಿಡಿಲುಬಡಿದು ಜಾನುವಾರು ಸಾವು

    ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಲವೆಡೆ ಭಾರೀ ಬಿರುಗಾಳಿ ಸಹಿತ ಮಳೆಯಾಗಿದೆ. ಹೊಸೂರು ಗ್ರಾಮದಲ್ಲಿ ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮನೆಗಳ ಛಾವಣಿ ಹಾರಿಹೋಗಿವೆ.

    ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿಯೂ ಮಳೆಯಾಗಿದ್ದು, ಮನೆಯೊಂದರ ಹೆಂಚೊಂದು ಹಾರಿಹೋಗಿ ಮನೆಯಲ್ಲಿದ್ದ ಕಂಪ್ಯೂಟರ್ ಮತ್ತು ದಿನಬಳಕೆಯ ವಸ್ತುಗಳು ನೀರು ಪಾಲಾಗಿವೆ. ಬಳ್ಳಾರಿಯಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಬ್ಬರು ಬಲಿಯಾಗಿದ್ದಾರೆ.

    ಹೊಸಪೇಟೆಯ ಊರಮ್ಮ ದೇವಿ ದೇವಸ್ದಾನದ ಬಳಿಯ ಮನೆಯ ಸೀಟ್ ಕುಸಿದ ಬಿದ್ದ ಪರಿಣಾಮ ಮನೆಯಲ್ಲಿದ್ದ ನಿವಾಸಿ 35 ವರ್ಷದ ಸಣ್ಣ ಮಾರೆಪ್ಪ ಮತ್ತು 25 ವರ್ಷದ ಮಹಿಳೆ ರಾಜವ್ವ ಮೃತಪಟ್ಟಿದ್ದಾರೆ. ಅತ್ತ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಓರಲಗಿಯಲ್ಲಿ ಸಿಡಿಲು ಬಡಿದು ಎರಡು ಹಸುಗಳು ಸಾವನ್ನಪ್ಪಿವೆ.

     

  • ಬಳ್ಳಾರಿ: ಗುಡುಗು ಸಿಡಲು ಸಹಿತ ಸುರಿದ ಮಳೆ- ಐವರಿಗೆ ಗಾಯ

    ಬಳ್ಳಾರಿ: ಗುಡುಗು ಸಿಡಲು ಸಹಿತ ಸುರಿದ ಮಳೆ- ಐವರಿಗೆ ಗಾಯ

    ಬಳ್ಳಾರಿ: ಬಿರುಬಿಸಿಲಿನಿಂದ ಕಾದ ಕಬ್ಬಿಣದಂತಾಗಿದ್ದ ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಿರಗುಪ್ಪ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದೆ.

    ಹೊಸಪೇಟೆ ಪಟ್ಟಣದಲ್ಲಿ ರಾತ್ರಿ ಸುಮಾರು ಗಂಟೆಗಳ ಕಾಲ ಮಳೆ ಸುರಿದ ಪರಿಣಾಮ ಬಿಸಿಲಿನಿಂದ ಸುಸ್ತಾಗಿದ್ದ ಜನರು ಮೊದಲ ಮಳೆಯಿಂದ ಪುಳಕಿತರಾಗಿದ್ದಾರೆ. ಅಲ್ಲದೇ ಹಲವಾರು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗಿದ್ದು, ಜನಜೀವನ ಕೆಲವಡೆ ಅಸ್ತವ್ಯಸ್ಥಗೊಂಡಿದೆ.

    ಮಳೆ ಗಾಳಿಗೆ ಹೊಸಪೇಟೆ ತಾಲೂಕಿನ ಜಂಭುನಾಥಹಳ್ಳಿಯಲ್ಲಿ ಮನೆಯೊಂದರ ತಗಡಿನ ಶೀಟ್‍ಗಳು ಹಾರಿದ್ದರಿಂದ ಹಲವರಿಗೆ ಗಾಯವಾಗಿದೆ. ತಗಡಿನ ಶೀಟ್ ಬಡಿದ ಪರಿಣಾಮ ಮೂವರು ಬಾಲಕಿಯರು ಸೇರಿದಂತೆ ಐವರಿಗೆ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು. ಮನೆಯ ಮೇಲ್ಛಾವಣಿಯ ತಗಡುಗಳು ಹಾರಿದ್ದರಿಂದ ಮನೆಯ ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ.

    ಸಿರಗುಪ್ಪ ಪಟ್ಟಣದಲ್ಲೂ ಸಹ ಕೆಲ ಕಾಲ ಮಳೆಯಾದ ಪರಿಣಾಮ ಜನರು ಮಳೆರಾಯನ ಆಗಮನದಿಂದ ಸಂತಸಗೊಂಡಿದ್ದಾರೆ. ಒಟ್ಟಾರೆ ಬೇಸಿಗೆಯ ಆರಂಭದ ದಿನಗಳಲ್ಲೇ ಮಳೆರಾಯನ ಆಗಮನದಿಂದ ಸ್ವಲ್ಪ ಮಟ್ಟಿಗೆ ಸೂರ್ಯನ ಪ್ರತಾಪ ಕಡಿಮೆಯಾದಂತಾಗಿದೆ.

     

  • ಮಂಡ್ಯದಲ್ಲಿ ಉಳುಮೆ ಮಾಡುತ್ತಲೇ ಸಾವನ್ನಪ್ಪಿದ ಅನ್ನದಾತ

    ಮಂಡ್ಯದಲ್ಲಿ ಉಳುಮೆ ಮಾಡುತ್ತಲೇ ಸಾವನ್ನಪ್ಪಿದ ಅನ್ನದಾತ

    ಮಂಡ್ಯ: ಜಮೀನಿನಲ್ಲಿ ಉಳುಮೆ ಮಾಡುವಾಗ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

    58 ವರ್ಷದ ಬೋರೆಗೌಡ ಎಂಬವರೇ ಹೃದಯಾಘಾತದಿಂದ ಸಾವನ್ನಪ್ಪಿದ ಕರ್ಮಯೋಗಿ. ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಮಳೆಯಾಗಿತ್ತು. ಹೀಗಾಗಿ ಬೋರೆಗೌಡ ಅವರು ಶುಕ್ರವಾರ ಮಧ್ಯಾಹ್ನ ತಮ್ಮ ಮಗನಿಗೆ ಬಿತ್ತನೆ ಬೀಜ ತರಲು ಹೇಳಿ, ಜಮೀನಲ್ಲಿ ಉಳುಮೆ ಮಾಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಉಳುಮೆ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಕುಸಿದು ಬಿದಿದ್ದಾರೆ.

    ಈ ವೇಳೆ ಅಕ್ಕಪಕ್ಕದ ಜಮೀನಲ್ಲಿ ಕೆಲಸ ಮಾಡ್ತಿದ್ದ ರೈತರು ಬರುವಷ್ಟರಲ್ಲಿ ರೈತ ಬೋರೇಗೌಡ ಸಾವನ್ನಪ್ಪಿದ್ದಾರೆ. ಒಂದು ಕಡೆ ಉಳುಮೆಗೆಂದು ಕಟ್ಟಿದ್ದ ಎತ್ತುಗಳು, ಮತ್ತೊಂದು ಕಡೆ ಹೃದಯಾಘಾತದಿಂದ ಜಮೀನಲ್ಲೇ ಮೃತಪಟ್ಟ ರೈತನ ದೃಶ್ಯ ಎಂತಹವರ ಕಣ್ಣಲ್ಲೂ ಕಣ್ಣೀರು ತರಿಸುವಂತಿತ್ತು.

  • ಚಿಕ್ಕಬಳ್ಳಾಪುರದಲ್ಲಿ ಗುಡುಗು ಸಿಡಿಲಿನ ಮಳೆಗೆ ಎರಡು ಬಲಿ: ಹೊತ್ತಿ ಉರಿಯಿತು ತೆಂಗಿನ ಮರ

    ಚಿಕ್ಕಬಳ್ಳಾಪುರದಲ್ಲಿ ಗುಡುಗು ಸಿಡಿಲಿನ ಮಳೆಗೆ ಎರಡು ಬಲಿ: ಹೊತ್ತಿ ಉರಿಯಿತು ತೆಂಗಿನ ಮರ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಅಕಾಲಿಕ ಮಳೆಗೆ ರೈತರ ತೋಟಗಾರಿಕೆ ಬೆಳೆ ಹನಿಯಾಗಿದೆ.

    ಗುಡಿಬಂಡೆ ತಾಲೂಕಿನ ಕಂಬಾಲಹಳ್ಳಿ ಗ್ರಾಮದಲ್ಲಿ 15 ವರ್ಷದ ಬಾಲಕ ನಾಗರಾಜು ಮತ್ತು ಗೌರಿಬಿದನೂರು ತಾಲೂಕಿನ ಭಾದಮಳ್ಳೂರು ಗ್ರಾಮದಲ್ಲಿ ಕುರಿಗಾಹಿ ಭೀಮಪ್ಪ (55) ಎಂಬವರು ಸಿಡಿಲ ಬಡಿತಕ್ಕೆ ಸಾವನ್ನಪ್ಪಿದ್ದಾರೆ.

    ನಾಗರಾಜು ತೋಟದಿಂದ ಮನೆಗೆ ಬರುವ ವೇಳೆ ರಸ್ತೆಯಲ್ಲಿ ಸಿಡಿಲು ಬಡಿತಕ್ಕೆ ತಗುಲಿ ಸಾವನ್ನಪ್ಪಿದ್ದಾನೆ. ನಿನ್ನೆ ಕುರಿ ಕಾಯಲು ಹೋಗಿದ್ದ ಭೀಮಪ್ಪ ಅವರು ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇಂದು ಬೆಳಗ್ಗೆ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಜಾಲಮರದ ಕೆಳಗೆ ಭೀಮಪ್ಪರ ಮೃತ ದೇಹ ಪತ್ತೆಯಾಗಿದೆ.

    ಅಕಾಲಿಕ ಮಳೆಯಿಂದಾಗಿ ಗೌರಿಬಿದನೂರು ತಾಲೂಕಿನ ವಿಳಪಿ ಗ್ರಾಮದ ನಾಗರಾಜು ಎಂಬುವವರ ಬಾಳೆತೋಟ ಸಂಪೂರ್ಣ ನೆಲಕಚ್ಚಿದೆ. ಹಲವೆಡೆ ತೋಟಗಾರಿಕಾ ಬೆಳೆಗಳಾದ ಮಾವು, ದ್ರಾಕ್ಷಿ ಬೆಳೆಗಳು ಸಹ ಹಾನಿಯಾಗಿ ಒಳಪಟ್ಟಿವೆ. ಇನ್ನು ಶಿಡ್ಲಘಟ್ಟ ತಾಲೂಕಿನ ಅಂಗತಟ್ಟಿ ಗ್ರಾಮದ ಬಳಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದ್ದು ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ ಜಿಲ್ಲೆಯ ಜನತೆಗೆ ಮಳೆರಾಯ ತಂಪು ಎರೆದಿದ್ದು, ಕೆಲವು ಕಡೆ ಬೆಳೆ ಹಾನಿ ಕೂಡ ಸಂಭವಿಸಿದೆ.

    .

     

    https://youtu.be/Edfpkczu9zs