ಕಲಬುರಗಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಲ್ಲಿನ ಶಾಲೆಗಳಿಗೆ 2 ದಿನಗಳ ಕಾಲ ರಜೆ (Schools Holiday) ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಹವಾಮಾನ ಇಲಾಖೆಯು ಮುಂದಿನ 48 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಹಾಗಾಗಿ ಮಕ್ಕಳ ಹಿತದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಎರಡು ದಿನಗಳ ಕಾಲ (ಸೆ.27,28) ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು (Kalaburagi DC) ಆದೇಶಿಸಿದ್ದಾರೆ. ಅದರಂತೆ ಡಿಡಿಪಿಐ (DDPI) ಸೂರ್ಯಕಾಂತ ಮದಾನೆ ಸುತ್ತೋಲೆ ಹೊರಡಿಸಿದ್ದಾರೆ. ಇದನ್ನೂ ಓದಿ: ಹೊಸಪೇಟೆ | ಅಡುಗೆ ಸಿಲಿಂಡರ್ ಸ್ಫೋಟ, ಒಂದೇ ಕುಟುಂಬದ 8 ಮಂದಿಗೆ ಗಾಯ
ಕಲಬುರಗಿ ಜಿಲ್ಲೆಯಾದ್ಯಂತ ಈಗಾಗಲೇ ಭಾರಿ ಮಳೆಯಾಗುತ್ತಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಶಾಲೆಗಳಿಗೆ ಈಗಾಗಲೇ ದಸರಾ ರಜೆಯಿದ್ದು, ಜಿಲ್ಲೆಯ ಕೆಲವು ಶಾಲೆಗಳ ಆಡಳಿತ ಮಂಡಳಿ ದಸರಾ ರಜೆಯಿಂದ ವಿನಾಯಿತಿ ಪಡೆದುಕೊಂಡು ಶಾಲೆಗಳನ್ನು ನಡೆಸುತ್ತಿವೆ. ಅಂತಹ ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಸೆ.27 ಹಾಗೂ 28ರಂದು ಎರಡು ದಿನ ಕಾಲ ರಜೆ ಘೋಷಿಸಿ ಆದೇಶ ಹೊರಡಿಸಿದ್ದು, ಈ ರಜಾ ಅವಧಿಯ ಪಾಠ ಬೋಧನೆಯನ್ನು ಮುಂದಿನ ರಜಾ ದಿನಗಳಲ್ಲಿ ಸರಿದೂಗಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ದಾವಣಗೆರೆ | `ಐ ಲವ್ ಮಹಮ್ಮದ್’ ಬ್ಯಾನರ್ ಗಲಾಟೆ – 8 ಮಂದಿ ಅರೆಸ್ಟ್
– ಕಳೆದ 100 ವರ್ಷಗಳಲ್ಲಿ ಬೆಂಗಳೂರಿಗೆ 3ನೇ ಅತಿ ದೊಡ್ಡ ಮಳೆ
ಬೆಂಗಳೂರು: ರಾಜ್ಯದಲ್ಲಿ ಈ ತಿಂಗಳ ಮೊದಲ 25 ದಿನ ವಾಡಿಕೆಗಿಂತ ಶೇ.58ರಷ್ಟು ಹೆಚ್ಚು ಮಳೆಯಾಗಿದೆ. 116 ಎಂಎಂ ಮಳೆ ಆಗಬೇಕಿದ್ದ ಕಡೆ 181 ಮಿಲಿಮೀಟರ್ ಮಳೆ ಬಿದ್ದಿದೆ. ಬೆಂಗಳೂರಲ್ಲಿ 275 ಮಿಲಿಮೀಟರ್ ಮಳೆ (Bengaluru Rains) ಆಗಿದೆ. ಇದು ಶತಮಾನದಲ್ಲೇ 3ನೇ ಗರಿಷ್ಠ ಮಳೆಯಾಗಿದೆ.
ಇನ್ನೂ ರಾಜ್ಯದಲ್ಲಿ ಮಳೆಯಿಂದಾಗಿ 25 ಮಂದಿ ಸಾವನ್ನಪ್ಪಿದ್ದಾರೆ. 2,077 ಮನೆ ಹಾನಿಗೀಡಾಗಿವೆ. 1 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಸಂಭವಿಸಿದೆ. ಶೀಘ್ರ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ. ಇದೇ ವೇಳೆ, ಬೆಂಗಳೂರಿನ ರಾಜಕಾಲುವೆಗಳ ಅಭಿವೃದ್ಧಿಗೆ 2,000 ಕೋಟಿ ಮತ್ತು ರಸ್ತೆಗಳ ಅಭಿವೃದ್ಧಿಗೆ 5,000 ಕೋಟಿ ನೆರವು ನೀಡಲು ವಿಶ್ವಬ್ಯಾಂಕ್ ಒಪ್ಪಿದೆ. ಮತ್ತೆ ಗುಂಡಿ ಮುಚ್ತೇವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ. ಅಂದ ಹಾಗೇ, ನವೆಂಬರ್, ಡಿಸೆಂಬರ್‌ನಲ್ಲಿಯೂ ಹೆಚ್ಚು ಮಳೆ ಆಗುವ ನಿರೀಕ್ಷೆ ಇದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಡಿಸಿಗಳಿಗೆ ಸಿಎಂ ಸೂಚಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವರಿಗೆ ಕಾಂಗ್ರೆಸ್ ನಾಯಕಿ ಹನಿಟ್ರ್ಯಾಪ್; 20 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮಹಿಳೆ ಪೊಲೀಸರಿಗೆ ಲಾಕ್
ಬೆಂಗಳೂರಿನಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ (Siddaramaiah), ಬೆಂಗಳೂರು ನಗರದ ಮಳೆಹಾನಿ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಬೆಂಗಳೂರಲ್ಲಿ ಅತಿ ಹೆಚ್ಚು ಮಳೆ ಆಗಿದೆ. ಸುಮಾರು 275 ಮಿಲಿ ಮೀಟರ್ ಮಳೆ, ನೂರು ವರ್ಷಗಳಲ್ಲಿ 3ನೇ ಅತಿ ಹೆಚ್ಚು ಮಳೆಯಾಗಿದೆ. ಪ್ರತಿ ಸಲ ಹೆಚ್ಚು ಮಳೆ ಬಂದಾಗ, ಪ್ರವಾಹ ಬಂದಾಗ ಹಾನಿ ಆಗುತ್ತಿದೆ. ಹಿಂದೆ ಸಿಎಂ ಆಗಿದ್ದಾಗ ರಾಜಕಾಲುವೆಗಳನ್ನ ಒತ್ತುವರಿ ತೆರವಿಗೆ ಸೂಚಿಸಿದ್ದೆ. 450 ಕಿಮೀ ರಾಜಕಾಲುವೆ ಅಭಿವೃದ್ಧಿ ಆಗಿತ್ತು, 173 ಕಿಮೀ ಉಳಿದುಕೊಂಡಿದೆ, ಅಲ್ಲದೇ 80 ಕಿಮೀ ಉಳಿದ ಕಾಲುವೆಗಳನ್ನ ಸರಿಪಡಿಸಬೇಕಿದೆ. ವಿಶ್ವಬ್ಯಾಂಕ್ 7,000 ಕೋಟಿ ರೂ. ಸಾಲ ನೀಡಲು ಒಪ್ಪಿದೆ. 3-4 ತಿಂಗಳಲ್ಲಿ ಅಂತಿಮವಾಗುತ್ತೆ ಎಂದು ಸಿಎಂ ಹೇಳಿದ್ದಾರೆ.
ಮುಂದುವರಿದು, ಕೆರೆಗಳ ಒತ್ತುವರಿ ತೆರವುಗೊಳಿಸಲು ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗಡುವು ವಿಧಿಸಲಾಗಿತ್ತು. ಕೆರೆಗಳ ಒತ್ತುವರಿ ತೆರವುಗೊಳಿಸುವುದು, ಬಳಿಕ ಕೆರೆಗಳ ಹೂಳೆತ್ತುವುದು ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಸಹ ಇದಕ್ಕೆ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಸೂಚನೆ ನೀಡಿದ್ದೇವೆ. ಹೆಚ್ಚುವರಿ ಬಿತ್ತನೆಗೆ ರೈತರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದರೆ ಅದನ್ನು ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಯಾರನ್ನೂ ರಾಜಕೀಯವಾಗಿ ಬೆಳೆಸಿಲ್ಲ – ಸಿಪಿವೈ
ರೈತರಿಗೆ ಪರ್ಯಾಯ ಬೆಳೆ ಬೆಳೆಸಲು ಬಿತ್ತನೆ ಬೀಜ ಲಭ್ಯವಿದೆ. ಬಿತ್ತನೆ ಬೀಜ ಮತ್ತು ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು ಸೂಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಪತ್ರ ಬರೆದಿದ್ದೇನೆ, ಪ್ರವಾಹ ಸ್ಥಳ, ಮಳೆಹಾನಿ ಸ್ಥಳಕ್ಕೆ ಭೇಟಿ ನೀಡಬೇಕು ಅಂತಾ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದೀಪಾವಳಿಗೆ ಪಟಾಕಿ ಸಿಡಿಸಲು ಸಮಯ ನಿಗದಿ – ಹಸಿರು ಪಟಾಕಿಗೆ ಮಾತ್ರ ಅವಕಾಶ ಎಂದ ಸಿಎಂ
ಟ್ರಿಪೋಲಿ: ಪೂರ್ವ ಲಿಬಿಯಾದ (Eastern Libyan) ನಗರ ಡರ್ನಾದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ (Libya Floods) 2 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಇಲ್ಲಿನ ಸಚಿವರು ತಿಳಿಸಿದ್ದಾರೆ.
ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹ ಉಂಟಾಗಿದ್ದು, ಮೃತದೇಹಗಳು ಎಲ್ಲೆಂದರಲ್ಲಿ ಬಿದ್ದಿವೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ, ಕಟ್ಟಗಳು ಧ್ವಂಸವಾಗಿವೆ. ಸಮುದ್ರ ತೀರದಲ್ಲಿ ಕಟ್ಟಡ ಅವಶೇಷಗಳ ಅಡಿಯಲ್ಲಿ ಮೃತದೇಹಗಳು ಸಿಲುಕಿಕೊಂಡಿವೆ. ನಗರದ 25% ನಷ್ಟು ಜನ ಕಣ್ಮರೆಯಾಗಿದ್ದಾರೆ. ಕೆಲವರು ಸಾವಿನ ಸಂಖ್ಯೆ 2 ಸಾವಿರಕ್ಕಿಂತಲೂ ಹೆಚ್ಚಿದೆ. ಒಂದು ಸಾವಿರಕ್ಕೂ ಹೆಚ್ಚು ಮೃತದೇಹಗಳನ್ನ ಪತ್ತೆಮಾಡಲಾಗಿದೆ ಎಂದು ಸ್ಥಳೀಯ ಸಚಿವರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಲಿಬಿಯಾ ರಾಷ್ಟ್ರೀಯ ಸೇನಾ ಅಧಿಕಾರಿ ಅಹ್ಮದ್ ವಿಸ್ಮರಿ, ಡರ್ನಾ ನಗರದಲ್ಲಿರುವ ಅಣೆಕಟ್ಟೆಗಳು ಕುಸಿದ ನಂತರ ಡರ್ನಾನಗರ (Derna City) ನೆರೆಗೆ ತುತ್ತಾಗಿದೆ. ಇನ್ನೂ ಕಾಣೆಯಾದವರ ಸಂಖ್ಯೆ 5-6 ಸಾವಿರ ದಾಟಿರಬಹುದು ಎಂದು ಹೇಳಿದ್ದಾರೆ. ಈ ನಡುವೆ ರಕ್ಷಣಾ ತಂಡಗಳು ಕಾರ್ಯಾಚರಣೆಗಿಳಿಸಿವೆ. ಪ್ರವಾಹ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಲಿಬಿಯಾ, ನೆರೆಯ ರಾಷ್ಟ್ರಗಳ ಸಹಾಯ ಕೋರಿದೆ. ಇದನ್ನೂ ಓದಿ: ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ರಷ್ಯಾ ಚುನಾವಣೆ ನಡೆಸುತ್ತಿದೆ: ಅಮೆರಿಕ ರಾಜ್ಯ ಕಾರ್ಯದರ್ಶಿ ಆರೋಪ
ಬೆಂಗಳೂರು: ಅನೇಕ ಬಡಾವಣೆಗಳಲ್ಲಿ ನೀರು ತುಂಬಿಕೊಂಡು ಬೋಟ್ (Boat) ನಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಬೋಟ್‍ನಲ್ಲಿ ತಿರುಗಾಡುವ ಪರಿಸ್ಥಿತಿ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಇಂದು ಬೆಂಗಳೂರಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸೋಮವಾರ ಹಾಗೂ ಮಂಗಳವಾರ ಜಾಸ್ತಿ ಮಳೆ ಬಿದ್ದಿದೆ. ರಸ್ತೆಗಳಲ್ಲಿ, ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಸುಮಾರು 12 ಅಡಿ ನೀರು ಇತ್ತು. ಈಗ 4 ಅಡಿ ನೀರು ಇದೆ. ಮನೆಯೆಲ್ಲಾ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದರು. ಇದನ್ನೂ ಓದಿ: ವಾಸಕ್ಕೆ ಯೋಗ್ಯವಲ್ಲ ಎನ್ನುವವರು ಬೆಂಗಳೂರಿಗೆ ಬರಬೇಡಿ: ಮುನಿರತ್ನ
ನಮ್ಮ ಸರ್ಕಾರದಲ್ಲಿ ಇರುವಾಗ ರಾಜಕಾಲುವೆಗಳನ್ನು ತೆರವುಗೊಳಿಸುವ ಕ್ರಮ ಕೈಗೊಂಡಿದ್ದೇವೆ. ಈಗಿನ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ನಮ್ಮ ಸರ್ಕಾರದಲ್ಲಿ 1953 ಒತ್ತುವರಿ ಜಾಗವನ್ನು ನಾವು ಐಡೆಂಟಿಟಿ ಮಾಡಿದ್ದೇವೆ. 1,300 ಒತ್ತುವರಿ ಜಾಗವನ್ನು ತೆರವು ಮಾಡಿದ್ದೀವಿ. 653 ಒತ್ತವರಿ ಜಾಗವನ್ನು ಇನ್ನೂ ಉಳ್ಕೊಂಡಿವೆ. ನಮ್ಮ ಸರ್ಕಾರ (Government) ಬಿದ್ಹೋಯ್ತು. ನಾವು ಮುಂದುವರಿಸಲಿಲ್ಲ. ಈ ಬಿಜೆಪಿ (BJP) ಸರ್ಕಾರ ಇದನ್ನು ಮುಂದುವರಿಸಿದರೆ ಈ ಪರಿಸ್ಥಿತಿ ಆಗ್ತಿರಲಿಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ (Siddaramaiah) ಕಿಡಿಕಾರಿದರು. ಇದನ್ನೂ ಓದಿ: ಉಗ್ರ ಯಾಕೂಬ್ ಮೆಮನ್ ಸಮಾಧಿ ಸೌಂದರ್ಯೀಕರಣ – ಉದ್ಧವ್ ವಿರುದ್ಧ ಬಿಜೆಪಿ ಕಿಡಿ
ಇಂದಿನ ಸ್ಥಿತಿಗೆ ಹಿಂದಿನ ಸರ್ಕಾರ ಕಾರಣ ಅಂತಾ ಸಿಎಂ ಹೇಳ್ತಾರೆ. ಅವರು ಬಂದು ಮೂರು ವರ್ಷ ಆಯ್ತಲ್ಲ ಏನು ಮಾಡಿದ್ದಾರೆ ಹೇಳಲಿ. ಎಷ್ಟು ಒತ್ತುವರಿ ತೆರವು ಮಾಡಿದ್ದೀವಿ ಅನ್ನೋದನ್ನ ಹೇಳಲಿ. ಎಟಿ ರಾಮಸ್ವಾಮಿ (AT Ramaswamy) ವರದಿ ಮೇಲೆ ಒತ್ತುವರಿ ತೆರವು ಮಾಡಿದ್ವಿ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಹಿಂದಿನ ಸರ್ಕಾರದ ಬಗ್ಗೆ ಹೇಳ್ತಾರೆ. ಬೆಂಗಳೂರನ್ನು ಅನಗತ್ಯವಾಗಿ ಹೆಚ್ಚು ಮಾಡಿಬಿಟ್ರು. 110 ಹಳ್ಳಿಗಳನ್ನು ಸೇರಿಸಿಬಿಟ್ರು. ಒಂದೂವರೆ ಕೋಟಿ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ. ಒಬ್ಬರೇ ಕಮಿಷನರ್ ಹೇಗೆ ನಿರ್ವಹಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಒತ್ತುವರಿ ತೆರವಿಗೆ ಕೂಡ ಬಿಜೆಪಿ ವಿರೋಧ ಮಾಡಿದ್ರು. ಶಾಸಕ ಸುರೇಶ್ ಕುಮಾರ್ (Suresh Kumar) ನೇತೃತ್ವದಲ್ಲಿ ವಿರೋಧ ಮಾಡಿದ್ರು. ಇವತ್ತು ನಾಗರೀಕರಿಗೆ ಸಾಕಷ್ಟು ತೊಂದರೆಯಾಗಿದೆ. ಅವರು ಅಳಲು ತೋಡಿಕೊಂಡಿದ್ದಾರೆ. ಇಲ್ಲಿನ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಏನು ಮಾಡ್ತಿದ್ದಾರೆ. ಬೈರತಿ ಬಸವರಾಜು, ಸತೀಶ್ ರೆಡ್ಡಿ ಏನು ಮಾಡ್ತಿದ್ದಾರೆ. 17 ವರ್ಷದಲ್ಲಿ ಐದು ವರ್ಷ ನಾವಿದ್ವಿ ಉಳಿದ ಕಾಲ ಅವರೇ ಇದ್ದದ್ದು ಅಲ್ವಾ. ಜನರ ದಿಕ್ಕು ತಪ್ಪಿಸಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಒತ್ತುವರಿ ಆಗಲು ಯಾರು ಕಾರಣ..? ಶಾಸಕರೇ ಅಲ್ವಾ. ವಿಧಾನಸಭೆಯಲ್ಲಿ ಇದನ್ನು ನಾನು ಪ್ರಸ್ತಾಪ ಮಾಡುತ್ತೇನೆ. ಬ್ರಾಂಡ್ ಬೆಂಗಳೂರು ಹೆಸರಿಗೆ ಧಕ್ಕೆಯಾಗ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಒಂದು ಖ್ಯಾತಿ ಇದೆ. ಅದನ್ನು ಉಳಿಸಿಕೊಳ್ಳೊ ಪ್ರಯತ್ನ ನಾವು ಮಾಡಬೇಕು ಎಂದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಬೆಂಗಳೂರೇನು ಪೂರ್ತಿಯಾಗಿ ಮುಳುಗಿಲ್ಲ, ಪ್ರತಿಪಕ್ಷಗಳು ಆ ರೀತಿ ಬಿಂಬಿಸುತ್ತಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಲಿಕಾನ್ ಸಿಟಿ ಈಗ ಪ್ರವಾಹದೂರಾಗಿದೆ. ಜುಲೈನಿಂದ ಸೆಪ್ಟೆಂಬರ್ 3ರ ವರೆಗೆ ಸಾಮಾನ್ಯವಾಗಿ 300 ಮಿಲಿಮೀಟರ್ ಮಳೆ ಆಗಬೇಕಿತ್ತು. ಆದ್ರೆ ಈ ವರ್ಷ ಬರೋಬ್ಬರಿ 709 ಮಿಲಿಮೀಟರ್ ಮಳೆ ಆಗಿದೆ. ಇದನ್ನೂ ಓದಿ: ಮಳೆ; ನಾಳೆ ಬೆಂಗಳೂರು ಪೂರ್ವ ಭಾಗದ ಶಾಲೆಗಳಿಗೆ ರಜೆ
ಇದು 1971ರ ಬಳಿಕ ಅತಿ ಹೆಚ್ಚಿನ ಮಳೆ. 1971ರಲ್ಲಿ 725 ಮಿಲಿಮೀಟರ್ ಮಳೆ ಆಗಿದ್ದೇ ಈವರೆಗಿನ ದಾಖಲೆ ಆಗಿದೆ. ಕಳೆದ ಮೂರು ದಿನದಲ್ಲಿ ಇನ್ನೂರಕ್ಕೂ ಹೆಚ್ಚು ಮಿಲಿಮೀಟರ್ ಮಳೆ ಆಗಿದೆ. ಪೂರ್ವ ಮತ್ತು ದಕ್ಷಿಣ ಬೆಂಗಳೂರು ತತ್ತರಿಸಿಹೋಗಿದೆ. ಒಂದು ರೀತಿಯಲ್ಲಿ ಆ ಭಾಗದ ಜನ ನರಕಯಾತನೆ ಅನುಭವಿಸ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಜನರ ಕಣ್ಣೀರು ಒರೆಸಲು ಮುಂದಾಗಿಲ್ಲ.
ಕಳೆದ ವಾರ ಮೋದಿ ಬೆಂಗಳೂರಿಗೆ ಬರೋದಕ್ಕೆ ಎರಡು ದಿನ ಮೊದಲು, ಉದ್ಯಮಿ ಮೋಹನ್ ದಾಸ್ ಪೈ ಪ್ರಧಾನಿಗೆ ಟ್ವೀಟ್ ಮಾಡಿದರೆಂಬ ಕಾರಣಕ್ಕೆ ಸಿಎಂ ಬೊಮ್ಮಾಯಿ ದಿಢೀರ್ ಎಂದು ಆಕ್ಟೀವ್ ಆಗಿದ್ರು. ಮೋದಿ ಬರುವ ಮುನ್ನಾದಿನ ಸಂಜೆ ನೆಪಮಾತ್ರಕ್ಕೆ ಸಿಟಿರೌಂಡ್ಸ್ ಮಾಡಿದ್ರು. ಎಲ್ಲಾ ಸಮಸ್ಯೆ ಬಗೆಹರಿಸ್ತೀವಿ ಎಂದು ಆಶ್ವಾಸನೆ ನೀಡಿದ್ದರು. ನಿನ್ನೆ ಬೆಳಗ್ಗೆ ಮತ್ತು ಸಂಜೆ ಎರಡು ಮೀಟಿಂಗ್ ಮಾಡಿದ್ರು. ಬೆಂಗಳೂರಿಗೆಂದು ಮತ್ತೆ 300 ಕೋಟಿ ರಿಲೀಸ್ ಮಾಡೋದಾಗಿ ಘೋಷಣೆ ಮಾಡಿದ್ರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಹಾವಳಿ: ನಾಳೆ ಸಾಫ್ಟ್‌ವೇರ್ ಕಂಪನಿಗಳ ಜತೆ ಸಭೆ
ಸರ್ಕಾರದ ಮೇಲೆ ನಂಬಿಕೆಯಿಡಿ. ಎಲ್ಲಾ ಸಮಸ್ಯೆ ಬಗೆಹರಿಸ್ತೇವೆ ಎಂದೂ ಆಶ್ವಾಸನೆ ನೀಡಿದ್ರು. ಇದೀಗ ಬೆಂಗಳೂರಿನ ಇಂದಿನ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ಸಿಎಂ ದೂಷಿಸಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರೇನು ಪೂರ್ತಿಯಾಗಿ ಮುಳುಗಡೆ ಆಗಿಲ್ಲ. ಆ ರೀತಿ ಬಿಂಬಿಸ್ತಿದ್ದಾರೆ ಅಷ್ಟೇ ಎಂದು ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಸರ್ಕಾರದ ಕಾರ್ಯವೈಖರಿಗೆ ಎಲ್ಲೆಡೆ ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಮೇಲೆ ಆರೋಪ ಮಾಡಿದ ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಸದ್ಯ ಮೈಸೂರಿನಲ್ಲಿರುವ ಸಿಎಂ ಬೊಮ್ಮಾಯಿ ಇಂದು ರಾತ್ರಿ ಬೆಂಗಳೂರು ರೌಂಡ್ಸ್ ಮಾಡೋದಾಗಿ ಘೋಷಣೆ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ತಡವಾಗಿದ್ದಕ್ಕೆ ಆರೋಗ್ಯನೂ ಮುಖ್ಯವಲ್ಲವೇ. ನನಗೆ ಆರೋಗ್ಯ ಸರಿಯಿಲ್ಲದೆ, ಒದ್ದಾಡುತ್ತಿದ್ದೇನೆ. 4-5 ದಿನ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಎರಡು ದಿನ ತಡವಾಗಿದೆ ಎಂದು ಸಚಿವ ವಿ. ಸೋಮಣ್ಣ ಸಮಜಾಯಿಷಿ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆ ಹಾನಿಯಾಗಿದ್ದು, ಇದೀಗ ಐದು ದಿನಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದಾರೆ. ಈ ವೇಳೆ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಹಾನಿ ಗಾಂಭೀರ್ಯತೆ ಅರ್ಥವಾಗಿದೆ ಎಂದರು. ಇದನ್ನೂ ಓದಿ: ಇಂದು ಸಂಜೆಯೊಳಗೆ ಮುದ್ದಹನುಮೇ ಗೌಡ ಕಾಂಗ್ರೆಸ್‍ಗೆ ಗುಡ್‍ಬೈ
ಬೆಂಗಳೂರು ಮಳೆ ಬಗ್ಗೆ ಮಾತನಾಡಿದ ಸಚಿವರು, ಮಳೆಯಿಂದ ಆಗಿರುವ ಅನಾಹುತ ಅಪಾರ. 486 ಮಿಲಿಮೀಟರ್ ಮಳೆಯಾಗಿದೆ. ಈಗ ಆಗಿರುವ ಮಳೆ ಹಿಂದೆಂದೂ ಆಗಿಲ್ಲ. ನಾನು ಬೆಂಗಳೂರನ್ನು 45 ವರ್ಷಗಳಿಂದ ಪ್ರತಿನಿಧಿಸುತ್ತಿದ್ದೇನೆ. ಮಹದೇವಪುರ ಸೇರಿದಂತೆ ಇತರ ಹೊಸ ಬಡಾವಣೆಗಳಲ್ಲಿ ಅನಾಹುತ ಆಗಿದೆ. ಹಳೇ ಬೆಂಗಳೂರಿಗೆ ಏನೂ ಆಗಿಲ್ಲ. ಅಂಡರ್ ಪಾಸ್ ಬಳಿ ಮಳೆ ಬಂದಾಗ ದ್ವಿಚಕ್ರ ವಾಹನ ಸವಾರರು ನಿಲ್ಲುತ್ತಾರೆ. ಆಗ ಬೇರೆ ವಾಹನಗಳು ಸಂಚರಿಸಲು ಆಗಲ್ಲ. ಈ ವೇಳೆ ಅಪಘಾತ ಆಗುತ್ತವೆ. ಇದೆಲ್ಲಾ ಆಗಬಾರದು ಅಂತಾ 45 ಕಡೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಮೊದಲಿನ 197 ವಾರ್ಡ್‍ಗಳು ಇವತ್ತಿಗೂ ಹೈ ಕ್ಲಾಸ್ ಆಗಿವೆ. ಮುಖ್ಯಮಂತ್ರಿಗಳು ಆಸಕ್ತಿ ವಹಿಸಿ ಕೆಲಸ ಮಾಡ್ತಿದ್ದಾರೆ. 1500 ಕೋಟಿ ರೂಪಾಯಿ ರಸ್ತೆ ರಿಪೇರಿಗೆ ಕೊಟ್ಟಿದ್ದಾರೆ. ಇಂತಹ ಮಳೆ ಯಾವತ್ತೂ ಆಗಿಲ್ಲ. ಇದನ್ನು ಎದುರಿಸುವುದು ನಮ್ಮ ಕರ್ತವ್ಯ. ಇನ್ನು ರಸ್ತೆ ಗುಂಡಿ ಮುಚ್ಚಲು 210 ಕೋಟಿ ಖರ್ಚು ಮಾಡಿರುವ ವಿಚಾರದ ಬಗ್ಗೆ ಮಾತನಾಡಿ, ಇಷ್ಟು ಮಳೆಯಾದಾಗ ಗುಂಡಿ ಬೀಳುವುದು ಸ್ವಾಭಾವಿಕ. ಎಷ್ಟು ಕೋಟಿ ಖರ್ಚಾಗಿದೆ ಎಂಬ ಮಾಹಿತಿ ನನಗಿಲ್ಲ. ಆದ್ರೆ ಅಧಿಕಾರಿಗಳು ಮೊದಲಿಗಿಂತ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮುರುಘಾ ಶ್ರೀ ಪೋಕ್ಸೋ ಕಾಯ್ದೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಕೆಲವಾರು ವಿಚಾರಗಳಲ್ಲಿ ಏನಾಗಿದೆ, ಎತ್ತ ಆಗಿದೆ ಎಂಬುದರ ಕುರಿತು ಮಾಹಿತಿ ಇದೆ. ಎಲ್ಲವೂ ದುರಂತ, ಸತ್ಯಾಸತ್ಯತೆ ಹೊರಬರಲು ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಕೋರ್ಟ್ ನಲ್ಲಿ ಸ್ಟೆಟಮೆಂಟ್ ಆಗಿದೆ. ಕೋರ್ಟ್ ಅಂಗಳದಲ್ಲಿರುವಾಗ ನಾನು ನೀವು ಮಾತಾಡೊದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಾನೂನು ಎಲ್ಲರಿಗೂ ಒಂದೇ ಅದಕ್ಕೆ ತಲೆ ಬಾಗೋಣ, ನಾವು ಮಧ್ಯಸ್ಥಿಕೆ ವಹಿಸಬಾರದು. ಸಮಾಜ ನಿಜ, ಸಮಾಜದಲ್ಲಿ ಎಲ್ಲವೂ ಸರಿ ಇದೆ, ಸರಿ ಇಲ್ಲ ಎಂದು ಹೇಳುವಷ್ಟು ನೀಚ ನಾನಲ್ಲ. ಬಂಧನ ವಿಚಾರವಾಗಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ. ನ್ಯಾಯಾಧೀಶರು ಸ್ಟೇಟಮೆಂಟ್ ಪಡೆದಿದ್ದಾರೆ. ಸರ್ಕಾರದ ಹಸ್ತಕ್ಷೇಪ ಇಲ್ಲವೇ ಇಲ್ಲ ಎಂದರು.
Live Tv
[brid partner=56869869 player=32851 video=960834 autoplay=true]
ರಾಮನಗದ: ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಕೆರೆಕಟ್ಟೆಗಳು ತುಂಬಿ ರಸ್ತೆಗೆ ಕೋಡಿ ಹರಿದಿದ್ದು, ಮೈಸೂರು-ಬೆಂಗಳೂರಿಗೆ ಸಂಚರಿಸುವ ವಾಹನಗಳಿಗೆ ಬದಲಿ ರಸ್ತೆ ಮಾರ್ಗಗಳನ್ನು ಸೂಚಿಸಲಾಗಿದೆ.
ಇಂದಿನಿಂದ ಮೂರು ದಿನಗಳವರೆಗೆ ಬೆಂಗಳೂರು – ಮೈಸೂರು ಮಾರ್ಗವಾಗಿ ಪ್ರಯಾಣಿಸುವ ಬಸ್ ಹಾಗೂ ಇತರೇ ಪ್ರಯಾಣಿಕರು ಬೆಂಗಳೂರು-ಕನಕಪುರ-ಮೈಸೂರು ಮಾರ್ಗವಾಗಿ ಅಥವಾ ಬೆಂಗಳೂರು- ಕುಣಿಗಲ್- ಮೈಸೂರು ಮಾರ್ಗವಾಗಿ ಪ್ರಯಾಣಿಸುವಂತೆ ರಾಮನಗರ ಜಿಲ್ಲಾ ಪೊಲೀಸರು ಸೂಚಿಸಿದ್ದಾರೆ. ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗಗಳನ್ನು ಅನುಸರಿಸುವಂತೆ ಮನವಿ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ವಿದ್ಯುತ್ ಕಂಬ
11,796 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಹಾಗೂ 759 ಟ್ರಾನ್ಸ್ ಫಾರ್ಮರ್ಗಳು ಹಾನಿಗೊಳಪಟ್ಟಿವೆ.
ಸಿಎಂ ಸೂಚನೆ ಏನು?
ಸತತ ಮಳೆಯಿಂದ ಎಲ್ಲಾ ಕೆರೆಗಳು ತುಂಬಿವೆ. ಕೆರೆಗಳ ಕಟ್ಟೆಗಳು ಮತ್ತು ಕೋಡಿಗಳು ದುರ್ಬಲಗೊಂಡಿರುತ್ತವೆ. ಸಂಗ್ರಹ ಸಾಮರ್ಥ್ಯ ಹೆಚ್ಚಿರುವ ಕೆರೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಕೆರೆಗಳು ವಡ್ಡು ಬಿರುಕು ಬಿಡದಂತೆ ಎಚ್ಚರ ವಹಿಸಬೇಕು. ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯತ್ ಈ ಬಗ್ಗೆ ಜಂಟಿಯಾಗಿ ಕಾರ್ಯನಿರ್ವಹಿಸುವುದು.
ರಕ್ಷಣೆ, ಪರಿಹಾರ ಮತ್ತು ಪುನಶ್ಚೇತನ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಸೂಚನೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಿದುಹೋದ ರಸ್ತೆ ಸಂಪರ್ಕವನ್ನು ಪುನ:ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಿ.
ಬಿದ್ದುಹೋದ ಮನೆಗಳ ಬಗ್ಗೆ ತುರ್ತಾಗಿ ಜಂಟಿ ಸಮೀಕ್ಷೆ ಕೈಗೊಳ್ಳುವುದು. ಭೂ ಕುಸಿತ ಸಂಭವಿಸುವ ಸಾಧ್ಯತೆ ಇರುವ ಕಡೆಗಳಲ್ಲಿ ಜನರನ್ನು ಮುಂಚಿತವಾಗಿಯೇ ಸ್ಥಳಾಂತರ ಮಾಡುವುದು.
ಭಟ್ಕಳದಲ್ಲಿ ಹಾಗೂ ಸುಳ್ಯದ ಸೇರಿದಂತೆ ಇತರ ಕಡೆಗಳ ವಾಣಿಜ್ಯ ಸಂಕೀರ್ಣಗಳಲ್ಲಿ ನೀರು ನುಗ್ಗಿ ಹಾಳಾಗಿರುವ ಬಗ್ಗೆ ವರದಿ ಸಲ್ಲಿಸುವುದು. ರೆಡ್ ಅಲರ್ಟ್ ಇರುವ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು
ಕೊಡಗು ಜಿಲ್ಲೆಯಲ್ಲಿ ಭೂ ಕುಸಿತವಾಗುವ ಬಗ್ಗೆ ಎಚ್ಚರ ವಹಿಸಬೇಕು. ಪ್ರವಾಹದಂಥ ತುರ್ತು ಸಂದರ್ಭದಲ್ಲಿ ತಕ್ಷಣ ಪರಿಹಾರ ಕ್ರಮಕೈಗೊಂಡು, ಆ ಮೂಲಕ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂಬ ಸಂದೇಶ ರವಾನೆ ಮಾಡಬೇಕಿದೆ.
ಜಿಲ್ಲಾಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಪರಿಹಾರ ವಿತರಣೆಗೆ ವಿಳಂಬ ಧೋರಣೆ ಅನುಸರಿಸದೆ, ಕೂಡಲೇ ಪರಿಹಾರ ವಿತರಿಸಲು ಸೂಚನೆ. ಹಾನಿಯಾಗಿರುವ ಮನೆಗಳ ಬಗ್ಗೆ ಪ್ರಾಥಮಿಕ ವರದಿಯನ್ನು ಪ್ರತಿ ತಾಲೂಕಿನ ಇಓ ಗಳಿಂದ ಪಡೆಯುವುದು.
ಕಾಳಜಿ ಕೇಂದ್ರಗಳಲ್ಲಿ ಎಲ್ಲಾ ವ್ಯವಸ್ಥೆ ಗಳನ್ನು ತಹಶೀಲ್ದಾರ್ ಗಳು ಖಾತರಿ ಪಡಿಸಿಕೊಂಡು ಅದನ್ನು ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು. ಮೈಸೂರು, ದಾವಣಗೆರೆ ಹಾಗೂ ಉಡುಪಿ ಜಿಲ್ಲೆಗಳಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು.
ಹಾನಿಗೊಳಗಾಗಿರುವ ಮೀನುಗಾರರ ದೋಣಿಗಳ ದುರಸ್ತಿಗೆ ತಗಲುವ ವೆಚ್ಚವನ್ನು ಅಂದಾಜು ಮಾಡಲು ಸೂಚನೆ. ಎಲ್ಲಾ ಇಲಾಖೆಗಳು ಸಮನ್ವಯ ಸಾಧಿಸಿ ರಕ್ಷಣೆ, ಪರಿಹಾರ ಮತ್ತು ಪುನಶ್ಚೇತನ ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವುದು.
ಸಭೆಯಲ್ಲಿ ಯಾರಿದ್ದರು?
ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಐ.ಎಸ್.ಎನ್.ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
ಮೈಸೂರು: ಪ್ರವಾಹದಲ್ಲಿ ಸಂಭವಿಸಿದ ನಷ್ಟದ ವರದಿ ಬಂದ ಮೇಲೆ ಕೇಂದ್ರಕ್ಕೆ ಪರಿಹಾರ ಕೇಳುವ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ನೆರೆ ಪ್ರವಾಹ ಪ್ರದೇಶಗಳಿಗೆ ಭೇಟಿ ಕೊಡುತ್ತಿರುವ ಬೊಮ್ಮಾಯಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇಡೀ ರಾಜ್ಯ ಸರ್ಕಾರ ರಸ್ತೆಗಿಳಿದು ಕೆಲಸ ಮಾಡುತ್ತಿದೆ. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ-ತಮ್ಮ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ನೆರೆ ಹಾನಿ ಪ್ರದೇಶಕ್ಕೆ ಹೋಗುತ್ತಿಲ್ಲ ಎಂಬುದು ಸುಳ್ಳು. ನನ್ನ ಹಾದಿಯಾಗಿ ಎಲ್ಲ ಸಚಿವರುಗಳು ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ಕೊಟ್ಟರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಸಂಸದರ ಬೇಡಿಕೆಗೆ ಮಣಿದ್ರಾ ಉದ್ಧವ್?
ರಾಜ್ಯದಲ್ಲಿ ನೆರೆ ಹಾನಿ ವಿಚಾರ, ಇಂದು ಸಂಜೆಯೊಳಗಡೆ ಮೊದಲ ಹಂತದ ನಷ್ಟದ ಅಧಿಕೃತ ಅಂಕಿ ಅಂಶ ಬಿಡುಗಡೆ ಮಾಡಲಾಗುತ್ತೆ. ನಷ್ಟದ ವರದಿ ಬಂದ ಮೇಲೆ ಕೇಂದ್ರಕ್ಕೆ ಪರಿಹಾರ ಕೇಳುವ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ. ಸದ್ಯಕ್ಕೆ 750 ಕೋಟಿ ರೂ. ಎನ್‍ಡಿಆರ್‌ಎಫ್ ಹಣ ನಮ್ಮಲ್ಲಿ ಇದೆ ಎಂದು ತಿಳಿಸಿದರು.
ಅನೇಕ ಕಡೆಗಳಲ್ಲಿ ಭೂ ಕುಸಿತವಾಗಿದೆ. ರಸ್ತೆಗಳು ಹಾಳಾಗಿದೆ, ಮನೆ ಹಾನಿ, ಪ್ರಾಣ ಹಾನಿಯೂ ಉಂಟಾಗಿದೆ. ಎಲ್ಲದರ ಬಗ್ಗೆ ವರದಿ ಸಿದ್ಧವಾಗುತ್ತಿದೆ. ಸಂಜೆಯೊಳಗಡೆ ಅಧಿಕೃತ ಮಾಹಿತಿ ಪ್ರಕಟವಾಗುತ್ತೆ ಎಂದರು.
ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಉತ್ತರಿಸಿದ ಅವರು, ಆರು ತಿಂಗಳ ಹಿಂದೆಯೇ ಅಧ್ಯಕ್ಷರ ಬದಲಾವಣೆಗೆ ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಿದ್ದೇವೆ. ಒಂದುವರೆ ವರ್ಷ ಪೂರೈಸಿರುವ ಅಧ್ಯಕ್ಷರುಗಳು ರಾಜೀನಾಮೆ ಸೂಚನೆ ನೀಡಿದ್ದೇವೆ. ಒಂದುವರೆ ವರ್ಷ ಅಧಿಕಾರ ಪೂರೈಸಿರುವವರ ಪಟ್ಟಿ ತಯಾರಿಸಿದ್ದೇವೆ. ಶೀಘ್ರದಲ್ಲೇ ಅದರ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಉದಯಪುರ ಹತ್ಯೆ ಬಗ್ಗೆ ಪೋಸ್ಟ್ – ಬಾಲಕಿಗೆ ಕೊಲೆ, ಅತ್ಯಾಚಾರ ಬೆದರಿಕೆ ಹಾಕಿದ ಜಮ್ಮು, ಕಾಶ್ಮೀರದ ವ್ಯಕ್ತಿ
ಬೆಂಗಳೂರಿನ ಚಾಮರಾಜಪೇಟೆ ಬಂದ್ ವಿಚಾರವನ್ನು ಸ್ಥಳೀಯ ಅಧಿಕಾರಿಗಳೇ ನೋಡಿಕೊಳ್ಳುತ್ತಾರೆ ಎಂದರು.
Live Tv
[brid partner=56869869 player=32851 video=960834 autoplay=true]
ಕೊಪ್ಪಳ: ಸಂಸದ ಸಂಗಣ್ಣ ಕರಡಿಯವರು ಟ್ರ್ಯಾಕ್ಟರ್ ಏರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಕೊಪ್ಪಳ ತಾಲೂಕಿನ ಮಂಗಳಾಪೂರ, ಕೋಳುರು ಹಾಗೂ ಚಿಕ್ಕಸಿಂಧೋಗಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಿಡ್ಜ್ ಕಂ ಬ್ಯಾರೇಜ್ ಗಳಿಗೆ ಭೇಟಿ ನೀಡಿ ರೈತರೊಂದಿಗೆ ಹಾನಿ ಬಗ್ಗೆ ಸಂಸದರು ಚರ್ಚೆ ನಡೆಸಿದ್ದಾರೆ.
ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆಯದೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಬ್ರಿಡ್ಜ್ ಕಂ ಬ್ಯಾರೇಜ್ ಅಕ್ಕ-ಪಕ್ಕದ ಜಮೀನಿನ ಬೆಳೆ ನಾಶವಾಗಿತ್ತು. ಜಮೀನಿನಲ್ಲಿದ್ದ ಪಂಪಸೆಟ್ ಗಳು ಕೊಚ್ಚಿ ಹೋಗಿದ್ದವು. ಮಳೆಯಿಂದ ಹಾನಿಯಾದ ಈ ಪ್ರದೇಶಕ್ಕೆ ಟ್ರ್ಯಾಕ್ಟರ್ ನಲ್ಲಿ ತೆರಳಿದರು. ಇದನ್ನೂ ಓದಿ: ಜಮ್ಮು ಸುರಂಗ ಕುಸಿತ – 10 ಮೃತದೇಹಗಳು ಪತ್ತೆ
ಇದೇ ವೇಳೆ ಸಂದರು, ರೈತರಿಗೆ ಸೂಕ್ತ ಪರಿಹಾರ ಕೊಡುವ ಭರವಸೆಯನ್ನು ಕೂಡ ನೀಡಿದರು. ಪಂಪ್ ಸೆಟ್ ಗಳಿಗೆ SDRF,NDRF ನಲ್ಲಿ ಪರಿಹಾರ ಕೊಡೋ ಬಗ್ಗೆ ಚರ್ಚೆ ಮಾಡಲಾಗವುದು. ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಅನೇಕ ರೈತರಿಗೆ ತೊಂದರೆಯಾಗಿದೆ ಎಂದು ಅವರು ಹೇಳಿದರು.