Tag: ಮಳೆಗಾಲ

  • ಯಾದಗಿರಿಯಲ್ಲಿ ಕುಡಿಯೋ ನೀರಿಗೂ ಹಾಹಾಕಾರ- ಕಿ.ಮೀಟರ್‌ಗಟ್ಟಲೇ ಹೋಗಿ ನೀರು ತರೋ ಪರಿಸ್ಥಿತಿ

    ಯಾದಗಿರಿಯಲ್ಲಿ ಕುಡಿಯೋ ನೀರಿಗೂ ಹಾಹಾಕಾರ- ಕಿ.ಮೀಟರ್‌ಗಟ್ಟಲೇ ಹೋಗಿ ನೀರು ತರೋ ಪರಿಸ್ಥಿತಿ

    – ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

    ಯಾದಗಿರಿ: ಬೇಸಿಗೆ ಮುಗಿದು, ಮಳೆಗಾಲ ಆರಂಭವಾಗಿದ್ರೂ ಬಿಸಿಲೂರು ಯಾದಗಿರಿ (Yadagiri) ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೀರಿನ ಹಾಹಾಕಾರ ಶುರುವಾಗಿರೋದ್ರ ನಡುವೆಯೇ ಜಿಲ್ಲೆಯ ತಾಲೂಕು ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ (Drinking Water Problem) ತಲೆದೂರಿದೆ. ತಾಲೂಕು ಕೇಂದ್ರದ ಜನ ಕಿಲೋಮೀಟರ್ ಗಟ್ಟಲೇ ನಡೆದು ನೀರು ತರಬೇಕಾದ ದುಸ್ಥಿತಿ ಎದುರಾಗಿದೆ.

    ಹೌದು. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ಕೇಂದ್ರವಾಗಿ 10 ವರ್ಷಗಳು ಕಳೆದಿದ್ರೂ ಇದುವರೆಗೂ ನೀರಿನ ಸಮಸ್ಯೆ ಮಾತ್ರ ಸರಿ ಹೋಗಿಲ್ಲ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಜಲಜೀವನ್ ಮಿಷನ್ (Jal Jeevan Mission) ಈಗಾಗಲೇ ಜಿಲ್ಲೆಯಲ್ಲಿ ಮುಕ್ತಾಯದ ಹಂತ ತಲುಪಿದ್ರೂ ವಡಗೇರಾ ಜನರಿಗೆ ಮಾತ್ರ ಒಂದು ಹನಿ ನೀರು ಸಿಕ್ಕಿಲ್ಲ. ಇನ್ನೂ ಇದೇ ವಡಗೇರಾ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲೂ ನೀರು ಪೂರೈಕೆಗೆ ಯೋಜನೆ ಆರಂಭಗೊಂಡಿದ್ರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಆರಂಭದಲ್ಲೇ ಅಲುಗಾಡುತ್ತಿದೆ INDIA ಕೂಟ – ಎಎಪಿ, ಕಾಂಗ್ರೆಸ್ ಮಧ್ಯೆ ಬಿರುಕು

    ಶಾಲೆಗೆ ಹೋಗಬೇಕಾದ ಮಕ್ಕಳು ನಿತ್ಯವೂ, ಶಾಲೆ ಬಿಟ್ಟು ನೀರು ತರುವುದಕ್ಕೆ ಹೋಗುವಂತಾಗಿದೆ. ಗ್ರಾಮದಿಂದಾಚೆ ಎರಡು ಕಿಲೋ ಮೀಟರ್ ದೂರದಲ್ಲಿರುವ ಬೋರ್ ವೆಲ್‍ಗೆ ಪೋಷಕರೊಟ್ಟಿಗೆ ಹೋಗಿ ಬೈಕ್, ಸೈಕಲ್ ಹಾಗೂ ತಳ್ಳೋ ಬಂಡಿಯಲ್ಲಿ ನೀರು ತರಬೇಕು. ಇಲ್ಲದಿದ್ರೆ ಜೀವಜಲಕ್ಕಾಗಿ ಬಾಯ್ತೆರೆದು ಕೂಡಬೇಕು. ತಾಲೂಕು ಕೇಂದ್ರದಲ್ಲಿಯೇ ನೀರಿಗಾಗಿ ಹಾಹಾಕಾರ ಇದ್ರೂ ಅಧಿಕಾರಿಗಳು ಎಚ್ಚೆತ್ತುಕೊಳ್ತಿಲ್ಲ. ಇನ್ನೂ ಗ್ರಾಮೀಣ ಭಾಗದಲ್ಲಿರುವ ಜನರಿಗೆ ಅದೇಗೆ ನೀರು ಕೊಡ್ತಾರೆ ಅಂತಾ ಜನರು ಆಕ್ರೋಶ ಹೊರ ಹಾಕ್ತಿದ್ದಾರೆ.

    ಕುಡಿಯುವ ನೀರಿನ ಸಮಸ್ಯೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದರೂ ಜನರಿಗೆ ನೀರು ತಲುಪುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣ ಅನ್ನೋದ್ರಲ್ಲಿ ಯಾವುದೇ ಅನುಮಾನವೂ ಇಲ್ಲ. ಇನ್ಮೇಲಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಜನರ ನೀರಿನ ದಾಹ ತೀರಿಸುವ ಕಡೆ ಗಮನಹರಿಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಳೆಗಾಲದಲ್ಲಿ ಧರಿಸಬಹುದಾದ ಆರಾಮದಾಯಕ ರೈನ್‍ಕೋಟ್‍ಗಳು

    ಮಳೆಗಾಲದಲ್ಲಿ ಧರಿಸಬಹುದಾದ ಆರಾಮದಾಯಕ ರೈನ್‍ಕೋಟ್‍ಗಳು

    ಳೆಗಾಲದಲ್ಲಿ ಜೋರಾಗಿ ಗಾಳಿ ಬೀಸುವುದು, ಭಾರೀ ಮಳೆಯಾಗಿ ಹಲವೆಡೆ ಪ್ರವಾಹ ಉಂಟಾಗುವುದನ್ನು ನಾವು ನೋಡಿರುತ್ತೇವೆ. ಅದರಲ್ಲಿಯೂ ವಿಶೇಷವಾಗಿ ಭಾರತದಲ್ಲಿ ಮಳೆಯನ್ನು ಪ್ರೀತಿಸುವುದರ ಜೊತೆಗೆ ದ್ವೇಷಿಸುವವರ ಸಂಖ್ಯೆ ಕೂಡ ಸಮವಾಗಿದೆ. ಅದರಲ್ಲಿಯೂ ಪ್ರಣಯ ಪಕ್ಷಿಗಳಿಗೆ ಮಳೆಗಾಲ ಬಹಳ ಅಚ್ಚುಮೆಚ್ಚು. ಆದರೆ ಎಲ್ಲಾದರೂ ಹೊರಡುವಾಗ ಮಳೆಯಲ್ಲಿ ಸಿಕ್ಕಿಹಾಕಿಕೊಂಡರೇ ಅಷ್ಟೇ ಕಿರಿಕಿರಿ ಕೂಡ ಉಂಟಾಗುತ್ತದೆ. ಎಷ್ಟೋ ಜನ ಮಳೆಗಾಲದಲ್ಲಿ ಛತ್ರಿಯನ್ನು ಉಪಯೋಗಿಸುತ್ತಾರೆ. ಛತ್ರಿ ನಿಮ್ಮ ಮೇಲ್ಭಾಗ ಮಾತ್ರ ತೇವವಾಗುವುದರಿಂದ ರಕ್ಷಿಸಿದರೆ, ನಿಮ್ಮ ಮೊಣಕಾಲಿನಿಂದ ಒದ್ದೆಯಾಗಿಸುತ್ತದೆ. ಇದರಿಂದ ನಿಮಗೆ ನಡೆದಾಡಲೂ ಸಹ ಕಷ್ಟವಾಗುತ್ತದೆ. ಅಲ್ಲದೇ ಮಳೆ ಬರುವ ಸಂದರ್ಭದಲ್ಲಿ ಬ್ಯಾಗ್‍ಗಳು, ವ್ಯಾಲೆಟ್‍ಗಳು ಅಥವಾ ಸ್ಮಾರ್ಟ್‍ಫೋನ್‍ಗಳ ಜೊತೆಗೆ ಛತ್ರಿಯನ್ನು ಹಿಡಿದಿಟ್ಟುಕೊಳ್ಳಲು ಮತ್ತಷ್ಟು ಕಿರಿಕಿರಿಯಾಗುತ್ತದೆ. ಈ ಎಲ್ಲದಕ್ಕೂ ಪರಿಹಾರ ಅಂದರೆ ರೈನ್ ಕೋಟ್. ಮಳೆಗಾಲದಲ್ಲಿ ರೈನ್ ಕೋಟ್ ಧರಿಸುವುದು ಬಹಳ ಉತ್ತಮವಾಗಿದೆ.

    ಮಳೆಗಾಲಗಳು ಛತ್ರಿಗಳಿಗಿಂತಲೂ ಹೆಚ್ಚಾಗಿ ರೈನ್‍ಕೋಟ್‍ಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಇದು ನಿಮ್ಮ ಬ್ಯಾಗ್ ಅಲ್ಲದೇ ತಲೆಯಿಂದ ಪಾದದವರೆಗೂ ನಿಮ್ಮನ್ನು ಮಳೆಯಿಂದ ರಕ್ಷಿಸುತ್ತದೆ. ಅಲ್ಲದೇ ರೈನ್ ಕೋಟ್‍ನಲ್ಲಿ ಹಲವಾರು ವೆರೈಟಿ ಡಿಸೈನ್, ಸೈಜ್, ಅನೇಕ ನ್ಯೂ ಪ್ಯಾಟನ್‍ಗಳು ದೊರೆಯುತ್ತದೆ. ಈ ಕುರಿತಂತೆ ನಿಮಗೆ ತಿಳಿಯದೇ ಇರುವ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ.

    ಪುರುಷರ ರೈನ್ ಕೋಟ್
    ಪುರುಷರ ಈ ರೈನ್ ಕೋಟ್ ನಿಮಗೆ ಕೆಳಗಿನವರೆಗೂ ರಕ್ಷಣೆ ನೀಡುತ್ತದೆ. ಇದರಲ್ಲಿ ಜಾಕೆಟ್ ಜೊತೆಗೆ ಬಾಟಮ್ ಕೂಡ ಬರುತ್ತದೆ. ಈ ರೇನ್‍ಕೋಟ್ ನಿಮಗೆ ಮೇಲಿನ ಮತ್ತು ಕೆಳಗಿನವರೆಗೂ ರಕ್ಷಣೆ ನೀಡುತ್ತದೆ. ಇದು ಜಾಕೆಟ್ ಜೊತೆಗೆ ಬಾಟಮ್‍ನೊಂದಿಗೆ ಬರುತ್ತದೆ. ಈ ಜಾಕೆಟ್ ಇದು ಡ್ರಾಸ್ಟಿಂಗ್ ಮತ್ತು ಎಲಾಸ್ಟಿಕ್ ವೆಸ್ಟ್ ನೊಂದಿಗೆ ಬರುತ್ತದೆ. ಇದನ್ನು ನೀವು ನಿಮಗೆ ಹೇಗೆ ಬೇಕೋ ಹಾಗೇ ಅಡ್ಜೆಸ್ಟ್ ಮಾಡಿಕೊಳ್ಳಬಹುದು. ಇದು 100% ನಿಮ್ಮನ್ನು ಮಳೆ ಹಾಗೂ ಗಾಳಿಯಿಂದ ರಕ್ಷಣೆ ನೀಡುತ್ತದೆ.

    ಮಹಿಳೆಯರ ವಾಟರ್‌ಪ್ರೂಫ್ ಜಾಕೆಟ್
    ಮಹಿಳೆಯರು ಯಾವಾಗಲೂ ಒಂದೇ ರೀತಿಯ ರೈನ್ ಕೋಟ್ ಮೇಲೆ ಅವಲಂಬಿತರಾಗಿರುವುದಿಲ್ಲ. ಹಲವಾರು ವೇಳೆ ರೈನ್ ಕೋಟ್ ಬದಲಾಯಿಸುತ್ತಿರಬೇಕಾಗುತ್ತದೆ. ಸದ್ಯ ಈ ನೀಡಲಾಗಿರುವ ರೈನ್ ಕೋಟ್ ಅನ್ನು ಸೈಕ್ಲಿಂಗ್ ಹಾಗೂ ಬೈಕ್‍ನಲ್ಲಿ ಸವಾರಿ ಮಾಡುವಾಗ ಧರಿಸಬಹುದಾಗಿದೆ. ಮಳೆ ಬರುವ ವೇಳೆ ರಸ್ತೆಯಲ್ಲಿ ಹೋಗುವಾಗ ಬಸ್, ಕಾರು ಅಥವಾ ಇತರೆ ವಾಹನಗಳು ಜೋರಾಗಿ ಸಂಚರಿಸು ವೇಲೆ ರಸ್ತೆ ಗುಂಡಿಯಲ್ಲಿರುವ ಕೊಚ್ಚೆ ನೀರು, ಮಳೆ ಹನಿಗಳಿಂದ ನಿಮ್ಮನ್ನು ರಕ್ಷಿಸುವುದರ ಜೊತೆಗೆ ನಿಮ್ಮ ಪ್ರಯಾಣವನ್ನು ಸರಾಗಗೊಳಿಸುತ್ತದೆ. ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧ ಕಿಡ್ನಾಪ್ ಕೇಸ್ ಕೂಡಾ ದಾಖಲಾಗಿದ್ದು, ತನಿಖೆ ನಡೀತಿದೆ: ಬೊಮ್ಮಾಯಿ

    ವಾಟರ್‌ಪ್ರೂಫ್ ಪಾಲಿಯೆಸ್ಟರ್ ರೈನ್ ಪೊಂಚೊ ವಿತ್ ಹುಡ್
    ವಾಟರ್‌ಪ್ರೂಫ್ ಪಾಲಿಯೆಸ್ಟರ್ ರೈನ್ ಪೊಂಚೊ ವಿತ್ ಹುಡ್ ಯುನಿಸೆಕ್ಸ್ ರೈನ್‍ಕೋಟ್ ಆಗಿದ್ದು, ಇದು ನಿಮ್ಮ ಜೊತೆಗೆ ನಿಮ್ಮ ಬ್ಯಾಗ್ ಅನ್ನು ಸಹ ತೇವದಿಂದ ರಕ್ಷಿಸುತ್ತದೆ. ಇದು ಪ್ಯಾಕಿಂಗ್ ಪೌಚ್‍ನೊಂದಿಗೆ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ. ಈ ರೈನ್ ಕೋಟ್ ಅನ್ನು ಸುಲಭವಾಗಿ ಧರಿಸಬಹುದಾಗಿದೆ.

    ಮೆನ್ ವಾಟರ್‌ಪ್ರೂಫ್ ಡಬಲ್ ಲೇಯರ್ ರಿವರ್ಸಿಬಲ್ ರೈನ್‍ಕೋಟ್
    ಈ ರಿವರ್ಸಿಬಲ್ ರೇನ್‍ಕೋಟ್ ಪುರುಷರಿಗೆಂದೇ ಮೀಸಲಾಗಿದೆ. ಇದು ಜಾಕೆಟ್ ಜೊತೆಗೆ ಬರುತ್ತದೆ ಮತ್ತು ಭಾರೀ ಮಳೆಯಾಗುತ್ತಿರುವ ವೇಳೆ ಕೂಡ ನಡೆಯಲು ಸಾಕಷ್ಟು ಆರಾಮದಾಯಕವಾಗಿರುತ್ತದೆ. ಈ ರೈನ್‍ಕೋಟ್ ಅನ್ನು ಭಾರತದಲ್ಲಿಯೇ ತಯಾರಿಸಲಾಗುತ್ತದೆ ಮತ್ತು ಇದು ಬೇಗನೆ ಒದ್ದೆಯಿಂದ ಒಣಗುತ್ತದೆ. ಇದನ್ನೂ ಓದಿ: ಸಾನ್ಯ ಒಳ ಉಡುಪಿನ ಬಗ್ಗೆ ಮಾತನಾಡಿದ್ದ ಉದಯ್- ಚಳಿ ಬಿಡಿಸಿದ ಕಿಚ್ಚ

    Live Tv
    [brid partner=56869869 player=32851 video=960834 autoplay=true]

  • ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಕೊಡಗಿನ ಮಿನಿ ನಯಾಗರ ಫಾಲ್ಸ್

    ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಕೊಡಗಿನ ಮಿನಿ ನಯಾಗರ ಫಾಲ್ಸ್

    ಮಡಿಕೇರಿ: ಕೊಡಗಿನ ಪ್ರಕೃತಿಯ ಮಡಿಲಲ್ಲಿರುವ ಪ್ರತಿಯೊಂದು ಸ್ಥಳಗಳು ಮನಮೋಹಕ. ಅದ್ರಲ್ಲೂ ಮಳೆಗಾಲ ಬಂದ್ರೆ ಮತ್ತಷ್ಟು ಸೌಂದರ್ಯದಿಂದ ಕಂಗೊಳಿಸೋ ಕರ್ನಾಟಕದ ಕಾಶ್ಮೀರದಲ್ಲಿ ನಿಸರ್ಗದ ಸಿರಿ ನೋಡುಗರಿಗೆ ಮುದನೀಡುತ್ತೆ. ಇಂತಹ ಸುಂದರ ತಾಣಗಳ ಸಾಲಿಗೆ ಸೇರೋದೆ ಚಿಕ್ಲಿಹೊಳೆ ಜಲಾಶಯ. ಇದನ್ನು ನೋಡಲು ಪುಟ್ಟದಾಗಿದ್ದರೂ ತನ್ನ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

    ಸುತ್ತಲೂ ನಿಸರ್ಗದ ಮಡಿಲು. ಕಣ್ಣು ಹಾಯಿಸಿದಲ್ಲೆಲ್ಲಾ ಕಂಗೊಳಿಸೋ ಹಸಿರ ಸಿರಿ. ಇದರ ನಡುವೆ ಹಾಲ್ನೊರೆಯಂತೆ ದುಮ್ಮಿಕ್ಕೋ ನೀರು, ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಜಲಾಶಯ ನೋಡುತ್ತಿರೋ ಜನ. ಹೌದು, ಇದು ಕೊಡಗಿನ ಪುಟ್ಟ ಜಲಾಶಯ ಚಿಕ್ಲಿಹೊಳೆಯ ಮನಮೋಹಕ ದೃಶ್ಯ ವೈಭವ. ಇದನ್ನೂ ಓದಿ: ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿದ್ದ ಪೋಲೆಂಡ್ ಪ್ರಜೆ ಅರೆಸ್ಟ್ 

    ಮಳೆಗಾಲದ ವಿಶೇಷ ಅತಿಥಿಯಾದ ಈ ಚಿಕ್ಲಿಹೊಳೆ ಜಲಾಶಯವನ್ನು ‘ಮಿನಿ ನಯಾಗರ ಫಾಲ್ಸ್’ ಅಂತಲೂ ಕರೀತ್ತಾರೆ. ಅರ್ಧ ವೃತ್ತಾಕಾರದಲ್ಲಿ ಐದಾರು ಅಡಿಗಳ ಎತ್ತರದಿಂದ ಹಾಲ್ನೊರೆಯಂತೆ ದುಮ್ಮಿಕ್ಕುವ ಈ ಸುಂದರ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದು. ಬೇಸಿಗೆಯಲ್ಲಿ ಬರಡಾಗಿ ಕಾಣೋ ಈ ಜಲಾಶಯದಲ್ಲಿ ಕಳೆದ ಕೆಲವು ದಿನಗಳಿಂದ ಆರಂಭವಾಗಿರುವ ಮಳೆಯಿಂದ ಜಲಪಾತವೊಂದು ಸೃಷ್ಟಿಯಾಗಿದೆ.

    ಹಸಿರ ಸಿರಿಯ ನಡುವೆ ದುಮ್ಮಿಕ್ಕೋ ಈ ಜಲಾಶಯವನ್ನು ನೋಡಲು ಜನರ ದಂಡೇ ಹರಿದುಬರುತ್ತಿದ್ದು, ಮಳೆಗಾಲದ ಮಜಾವನ್ನು ಜನ ಎಂಜಾಯ್ ಮಾಡ್ತಿದ್ದಾರೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಸಮೀಪವಿರೋ ಜಲಾಶಯಕ್ಕೆ ಮಳೆಗಾಲದಲ್ಲಿ ಜೀವಕಳೆ ಬರುತ್ತೆ. ಮಳೆಗಾಲದ ಐದಾರು ತಿಂಗಳು ನವವಧುವಿನಂತೆ ಕಂಗೊಳಿಸೋ ಜಲಾಶಯ ಚಿಕ್ಕದಾದರೂ ತನ್ನ ಸೌಂದರ್ಯದಿಂದಲೇ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಪಕ್ಕಾ ನಿಸರ್ಗದ ಮಡಿಲಿನಲ್ಲಿರೋ ಈ ಜಲಾಶಯ ಪ್ರಕೃತಿಮಾತೆಯ ತಿಲಕದಂತೆ ನಯನಮನೋಹರವಾಗಿ ಕಂಗೊಳಿಸುತ್ತಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಸಿಎಂ ಜೊತೆ ಚರ್ಚಿಸುವೆ ಎಂದ ಸುಧಾಕರ್ 

    ಸುತ್ತಲೂ ಹಸಿರಕಾನನ ಬೆಟ್ಟಗುಡ್ಡಗಳಿಂದಾವೃತವಾಗಿರೋ ಜಲಾಶಯ ಕಂಡು ಮೈಮರೆಯೋ ಜನರು ವೀಕೆಂಡ್‍ಗಳಲ್ಲಿ ಬಂದು ತಮ್ಮೆಲ್ಲ ನೋವನ್ನು ಮರೆತು ಖುಷಿಪಡ್ತಾರೆ. ಹೀಗೆ ಮಳೆಗಾಲದಲ್ಲಿ ಬಂದು ಸಾವಿರರು ಜನರ ಮನತಣಿಸೋ ಈ ಪುಟ್ಟ ಜಲರಾಶಿಯಲ್ಲಿ ಮೂಲಸೌಲಭ್ಯಗಳ ಕೊರತೆ ಕಾಡುತ್ತಿದೆ ಎನ್ನೊಂದು ಪ್ರವಾಸಿಗರ ಅಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗುಪ್ತಗಾಮಿನಿಯಾಗಿ ಹರಡುತ್ತಿರುವ ಕೊರೊನಾ – ಐದು ದಿನದಲ್ಲಿ 25 ಜನರಿಗೆ ಸೋಂಕು

    ಗುಪ್ತಗಾಮಿನಿಯಾಗಿ ಹರಡುತ್ತಿರುವ ಕೊರೊನಾ – ಐದು ದಿನದಲ್ಲಿ 25 ಜನರಿಗೆ ಸೋಂಕು

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಒಂದು ಕಡೆ ಪ್ರಕೃತಿ ಮುನಿಸಿಕೊಂಡು ಜಲಸ್ಟೋಟಗಳು ಆಗುತ್ತಿದ್ದು, ಜಿಲ್ಲೆಯ ಜನರು ಬೆಚ್ಚಿಬೀಳುತ್ತಿದ್ದಾರೆ. ಈ ವೇಳೆ ಯಾವುದೇ ಮುನ್ಸೂಚನೆ ಇಲ್ಲದೇ ಗುಪ್ತಗಾಮಿನಿಯಾಗಿ ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ನಿಧಾನವಾಗಿ ಏರಿಕೆಯಾಗುತ್ತಿದೆ.

    ಕಳೆದ ಐದು ದಿನಗಳಲ್ಲಿ ಬರೋಬ್ಬರಿ 25 ಕೋವಿಡ್ ಪ್ರಕರಣ ಕಂಡುಬಂದಿದ್ದು, ಜಿಲ್ಲೆಯ ಜನರು ಮತ್ತೊಂದು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಕೊಡಗಿನ ಜನರಿಗೆ ಮಳೆಗಾಲ ಆರಂಭವಾಯಿತು ಅಂದ್ರೆ ಒಂದಲ್ಲ ಒಂದು ಸಮಸ್ಯೆ ಎದುರಾಗಿ ಬೀಡುತ್ತದೆ. ಮಳೆ ಆರಂಭ ಆಯ್ತು ಅಂದ್ರೆ ಬೆಟ್ಟ ಕುಸಿತ, ಗುಡ್ಡ ಕುಸಿತವಾಗಿದೆ. ಪ್ರವಾಹ, ಭೂಕಂಪ ಸೇರಿದಂತೆ ಮಳೆಯ ಅವಾಂತರಗಳೇ ಜಾಸ್ತಿ ಇರುತ್ತದೆ. ಇದರ ಸಾಲಿಗೆ ಕೊಡಗಿನ ಜನರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಇದನ್ನೂ ಓದಿ: ಯಡಿಯೂರಪ್ಪ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದವಿಲ್ಲ: ವಿಜಯೇಂದ್ರ

    ವರ್ಷಗಟ್ಟಲೆ ಇಡೀ ದೇಶವನ್ನು ಕಾಡಿಸಿದ ಕೋವಿಡ್-19 ಇದೀಗಾ ಸದ್ದಿಲ್ಲದೇ ಕೊಡಗು ಜಿಲ್ಲೆಯ ಜನರನ್ನು ಕಾಡಲು ಮುಂದಾಗಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ ಐದು ದಿನಗಳಲ್ಲಿ 25 ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಆರೋಗ್ಯ ಇಲಾಖೆ ಟೆಸ್ಟಿಂಗ್ ಮಾಡುವ ಸಂದರ್ಭದಲ್ಲಿ ಜಿಲ್ಲೆಯ 25 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಹೀಗಾಗಿ ಆರೋಗ್ಯ ಇಲಾಖೆ ಮತ್ತಷ್ಟು ಜನರನ್ನು ಟೆಸ್ಟಿಂಗ್ ಮಾಡಲು ನಿರ್ಧಾರ ಮಾಡಿದೆ. ಈಗಾಗಲೇ ಈ ಸೋಂಕಿತರು ಆರೋಗ್ಯವಾಗಿದ್ರು. ಪಾಸಿಟಿವ್ ಇರುವ ಲಕ್ಷಣಗಳು ಕಂಡುಬಂದಿರುವ ಮನೆಯಲ್ಲೇ ಅವರನ್ನು ಇರಿಸಲಾಗಿದೆ ಎಂದು ಆರೋಗ್ಯ ಅಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.

    ಈಗಾಗಲೇ ವಾತಾವರಣದಲ್ಲಿ ಸಾಕಷ್ಟು ಏರುಪೇರು ಇರುವುದು ಜಿಲ್ಲೆಯಲ್ಲಿ ಕಳೆದ ಮೂರುನಾಲ್ಕು ದಿನಗಳಿಂದ ಮಳೆಯ ವಾತಾವರಣದ ಜೊತೆಗೆ ಬಿಸಿಲು ಚಳಿಯ ವಾತಾವರಣ ಕಂಡು ಬರುತ್ತಿದೆ. ಹೀಗಾಗಿ ಕೆಲವರಿಗೆ ಜ್ವರ-ಕೆಮ್ಮು-ಶೀತಗಳು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮುನ್ನಚೇರಿಕೆ ಕ್ರಮವಾಗಿ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ಟೆಸ್ಟ್ ಮಾಡಲು ಮುಂದಾಗುತ್ತಿದ್ದಾರೆ. ಇದನ್ನೂ ಓದಿ: Monkeypox; ಕೇರಳದಲ್ಲಿ 3ನೇ ಪ್ರಕರಣ ಪತ್ತೆ

    ದಿನ ನಿತ್ಯ ಸುಮಾರು 300 ರಿಂದ 500 ಜನರಿಗೆ ಟೆಸ್ಟಿಂಗ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಟೆಸ್ಟಿಂಗ್ ಹಾಗೂ ಆಸ್ಪತ್ರೆಗಳ ಬೇಡ್‍ಗಳನ್ನು ಮಿಸಲು ಇಟ್ಟಿಕೊಳ್ಳುವುದು ಸೂಕ್ತ ಹಾಗೂ ಜನರು ಈ ಹಿಂದೆ ಕೋವಿಡ್ ಬಂದಾಗ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದು ಮುಖ್ಯವಾಗಿದೆ ಎಂದು ಜಿಲ್ಲೆಯ ಜನರು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

    ಒಟ್ಟಿನಲ್ಲಿ ಮಳೆಗಾಲದ ಅವಾಂತರಗಳ ಜೊತೆಗೆ ಗುಪ್ತಗಾಮಿನಿಯಾಗಿ ಸದ್ದಿಲ್ಲದೇ ಕೊರೊನಾ ಮಹಾಮಾರಿ ಜಿಲ್ಲೆಯ ಜನರನ್ನು ಬೆನ್ನಟ್ಟಿದ್ದು, ಜಿಲ್ಲೆಯ ಜನರು ಒಂದಲ್ಲ ಒಂದು ಸಮಸ್ಯೆಗೆ ಒಳಗಾಗುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.

    Live Tv
    [brid partner=56869869 player=32851 video=960834 autoplay=true]

  • ಮಳೆಗಾಲದ ಸಿಂಪಲ್ ಲೈಫ್ ಸ್ಟೈಲ್‌ಗೆ ಇಲ್ಲಿದೆ 5 ಟಿಪ್ಸ್

    ಮಳೆಗಾಲದ ಸಿಂಪಲ್ ಲೈಫ್ ಸ್ಟೈಲ್‌ಗೆ ಇಲ್ಲಿದೆ 5 ಟಿಪ್ಸ್

    ಳೆಗಾಲ ಶುರುವಾಗಿದೆ, ಇದರಿಂದ ಸಿಲಿಕಾನ್ ಸಿಟಿ ಮಾತ್ರವಲ್ಲದೆ ಎಲ್ಲೆಡೆ ದಿನನಿತ್ಯದ ಲೈಫ್‌ಸ್ಟೈಲ್‌ ನಲ್ಲೂ ಬದಲಾವಣೆಯಾಗುತ್ತಿದೆ. ಹಾಗೆಂದು ಮಳೆ ಬಂದ ಕೂಡಲೇ ಮೊದಲಿನಂತೆ ಮುದುಡಿಕೊಂಡು ಮನೆಯೊಳಗೆ ಯಾರೂ ಇರುವುದಿಲ್ಲ. ಬದಲಾಗಿ ಸೀಸನ್‌ಗೆ ಒದಗುವುದಷ್ಟೇ ನಮ್ಮ ಕೆಲಸವೆಂದು ಮಳೆಗಾಲವನ್ನೂ ಕಲರ್‌ಫುಲ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.

    ಏಕೆಂದರೆ ತುಂತುರು ಮಳೆಯಿಂದ ಆರಂಭವಾಗುವ ಮಳೆ ಕೆಲವೊಮ್ಮೆ ಹೊರಗಡೆ ಹೆಜ್ಜೆ ಇಡಲು ಸಾಧ್ಯವಾಗದಂತೆ ಗಂಟೆಗಟ್ಟಲೆ ಸುರಿಯುತ್ತದೆ. ಕೆಲವರಿಗೆ ಮಳೆಯೊಂದಿಗೆ ತುಂಟಾಟ ಆಡಲು ಕಷ್ಟವಾದರೂ ಬಟ್ಟೆ ಒದ್ದೆಯಾದರೆ ಕಷ್ಟವೆಂದು ಸುಮ್ಮನಾಗುತ್ತಾರೆ. ಹಾಗಾಗಿ ಮನೆಯಿಂದ ಹೊರಗೆ ಹೋಗುವಾಗ ಮಳೆಯಿಂದ ಸಂರಕ್ಷಿಸಿಕೊಳ್ಳಲು ಕೆಲವು ವಿಷಯಗಳನ್ನು ಮರೆಯದೇ ಪಾಲಿಸುವುದು ಉತ್ತಮ. ಇದನ್ನೂ ಓದಿ: ಕಪಲ್ ರಿಂಗ್ ಉಡುಗೊರೆ ನೀಡಿ ವ್ಯಾಲೆಂಟೈನ್ಸ್ ಡೇ ಆಚರಿಸಿ

    SLIPPER

    1) ಮಳೆಯಲಿ ಕೊಡೆಯಿರಲಿ ಜೊತೆಯಲಿ
    ಮಳೆಗಾಲದಲ್ಲಿ ತುರ್ತು ಕೆಲಸಗಳಿಗೆ ಹೊರಗೆ ಹೋಗಬೇಕಾದ ಅಗತ್ಯತೆ ಇರುತ್ತದೆ. ಮಳೆ ನಿಂತಮೇಲೆ ಹೋಗುತ್ತೇನೆ ಎನ್ನುವುದು ಹೈಲಿ ಇಂಪಾಸಿಬಲ್, ಕಾಯುವ ಪೇಶೆನ್ಸ್ ಸಹ ಇರುವುದಿಲ್ಲ. ಆದ್ದರಿಂದ ಹೊರಗೆ ಹೋದಂತಹ ಸಂದರ್ಭದಲ್ಲಿ ಕೊಡೆ ನಿಮ್ಮ ಜೊತೆಗೆ ಇರಬೇಕು. ಇದಕ್ಕಾಗಿ ಮೊದಲಿನಂತೆ ಮಾರುದ್ದದ ಛತ್ರಿಗಳನ್ನು ಕೊಂಡೊಯ್ಯಬೇಕಿಲ್ಲ. ಹ್ಯಾಂಡ್‌ಬ್ಯಾಗ್ ಅಥವಾ ಕಾಲೇಜ್ ಬ್ಯಾಗ್‌ಗಳಲ್ಲೇ ಕ್ಯಾರಿ ಮಾಡಬಹುದಾದ ಛತ್ರಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ ಸ್ಪೆಷಲ್ – ಹುಡುಗಿಯರನ್ನ ಇಂಪ್ರೆಸ್ ಮಾಡಲು ಈ ಶೈಲಿಯ ಶರ್ಟ್, ಬ್ಲೇಜರ್‌ಗಳನ್ನು ಧರಿಸಿ

    RAIN COAT

    2) ರೇನ್‌ಕೋಟ್ ಮಸ್ಟ್ ಅಂಡ್ ಬೆಸ್ಟ್
    ಮಳೆಗಾಲದಲ್ಲಿ ಕೊಡೆಗಳಿಗಿಂತಲೂ ವಾಟರ್ ಪ್ರೂಫ್ ರೇನ್‌ಕೋಟ್ ಹೆಚ್ಚು ಸೂಕ್ತ. ಅದಕ್ಕೆಂದೇ ನಗರದ ಪ್ರಮುಖ ರಸ್ತೆಗಳಲ್ಲಿ, ವಿವಿಧ ಮೊಹಲ್ಲಾಗಳಲ್ಲಿ ತಲೆ ಎತ್ತಿರು ಶೆಡ್‌ಗಳಲ್ಲಿ ಅಗ್ಗದ ಬೆಲೆಗಳಿಗೆ ಕೋಟ್‌ಗಳು ಸಿಗುತ್ತವೆ. ಫುಲ್ ಲೆಂಥ್ ಹಾಗೂ ಹಾಫ್ ಲೆಂಥ್ ನಂತಹ ಕೋಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಫುಲ್ ಲೆಂಥ್ ಕೋಟ್‌ಗಳನ್ನು ಧರಿಸುವುದರಿಂದ ಬಟ್ಟೆ ಒದ್ದೆಯಾಗುವುದನ್ನು ತಪ್ಪಿಸಬಹುದು.

    SLIPPEE

    3) ಲೈಟ್‌ವೇಯ್ಟ್ ಸ್ಲಿಪ್ಪರ್ (ಪಾದರಕ್ಷೆ) ಧರಿಸಿ
    ನಾವು ಧರಿಸುವ ಪಾದರಕ್ಷೆ ಕೂಡ ಸೀಸನ್‌ಗೆ ಹೊಂದುವಂತಿರಬೇಕು. ಹೊರಗೆ ಹೋಗಿ ಬಂದಾಕ್ಷಣ ಪಾದರಕ್ಷೆಗಳನ್ನು ಒಣಗಿಸಬೇಕು. ಸಾಧ್ಯವಾದಷ್ಟು ಶೂಗಳಿಗಿಂತ ಓಪನ್ ಚಪ್ಪಲಿಗಳನ್ನು ಬಳಸುವುದು ಬೆಸ್ಟ್. ಇದನ್ನೂ ಓದಿ: ಮಹಿಳೆಯರಿಗಾಗಿ ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್

    RAIN SWETTER

    4) ಬೆಚ್ಚಗಿನ, ಹಗುರವಾದ ಉಡುಪು
    ಮಳೆಗಾಲದಲ್ಲಿ ಯಾವ ವೇಳೆ ಮಳೆ ಬರುತ್ತದೆ. ಎಲ್ಲಿ ನಾವು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತೇವೆ ಎಂಬುದು ಹೇಳಲಾಗುವುದಿಲ್ಲ. ಹಾಗಾಗಿ ಮಹಿಳೆಯರು ಹೊರಗೆ ಹೋಗುವಾಗ ಹೆಚ್ಚಿನ ಭಾರವಿರುವ ಸೀರೆ, ಲೆಹೆಂಗಾ, ಪುರುಷರು ಜೀನ್ಸ್, ಕೋಟ್ ಹಾಗೂ ಭಾರವಾದ ಶೂಗಳನ್ನು ಬಳಸುವುದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಬೇಕು. ಪುರುಷರು ಜುಬ್ಬ-ಪೈಜಾಮ್, ಕಾಟನ್ ಬಟ್ಟೆ ಹಾಗೂ ಸಂಜೆ ವೇಳೆಯಲ್ಲಿ, ಮನೆಯಲ್ಲಿರುವ ಸಂದರ್ಭದಲ್ಲಿ ಬೆಚ್ಚಗಿನ ಉಲ್ಲನದ ಬಟ್ಟೆಗಳನ್ನು ಧರಿಸುವುದು ಸೂಕ್ತ. ಮಳೆಯಲ್ಲಿ ನೆನೆದರೂ ಬೇಗನೆ ಒಣಗುವ ಬಟ್ಟೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

    RAIN BAG

    5) ಸ್ಟೈಲಿಶ್ ಪಕ್ಕಕ್ಕಿಡಿ ವಾಟರ್ ಪ್ರೂಫ್‌ಗೆ ಆದ್ಯತೆ ಕೊಡಿ
    ಎಲ್ಲದರಲ್ಲೂ ಸ್ಟೈಲಿಶ್‌ ಆಸದಯತೆ ಕೊಡುವ ಯುವಸಮೂಹ ಮಳೆಗಾಲದಲ್ಲಿ ಸಾಧ್ಯವಾದಷ್ಟು ಸ್ಟೈಲಿಶ್‌ ಅನ್ನು ಪಕ್ಕಕ್ಕೆ ಇಟ್ಟು ವಾಟರ್ ಪ್ರೂಫ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೌದು ಮಳೆಗಾಲದಲ್ಲಿ ಬಹುತೇಕರು ಸ್ಟೈಲಿಶ್‌ ಬ್ಯಾಗ್‌ಗಳನ್ನು ಬಳಸುತ್ತಾರೆ. ಇದರಿಂದ ಅವರು ಬಣ್ಣ ಮಾಸಬಹುದು, ಇಲ್ಲವೇ ನೀರು ಹೀರಿಕೊಂಡು ಬ್ಯಾಗ್‌ನಲ್ಲಿರುವ ವಸ್ತುಗಳು ಹಾಳಾಗಬಹುದು. ಹಾಗಾಗಿ ವಾಟರ್‌ಪ್ರೂಫ್ ಬ್ಯಾಗ್ ಬಳಸುವುದು ಒಳ್ಳೆಯದು ಜೊತೆಗೆ, ಮಹಿಳೆ ಹಾಗೂ ಪುರುಷರು ಸ್ಕಾರ್ಫ್ ಅಥವಾ ವಾಟರ್ ಪ್ರೂಫ್ ಬ್ಯಾಗ್ ಕೊಂಡೊಯ್ಯುವುದು ಬೆಸ್ಟ್. ಮಳೆ ಗಾಳಿ ಹೆಚ್ಚಾದಾಗ ಧರಿಸಬಹುದು. ಮಕ್ಕಳು ಹೊರಗೆ ಹೊಗು ಅಗ ಸ್ಕಾರ್ಫ್ ಕ್ಯಾರಿ ಮಾಡೋದ್ರಿಂದ ಅನುಕೂಲ ಮತ್ತು ಆರೋಗ್ಯವನ್ನೂ ಕಾಪಾಡಬಹುದು.

    ಮಾಹಿತಿ- ಧಾತ್ರಿ ಭಾರಧ್ವಾಜ್, ಮೈಸೂರು

  • ರಾಜ್ಯದಲ್ಲಿ ಚಳಿಗಾಲವೋ..? ಮಳೆಗಾಲವೋ..?- ಮಳೆಗಾಲ ಮುಗಿದ್ರೂ ತಗ್ಗದ ವರುಣಾರ್ಭಟ

    ರಾಜ್ಯದಲ್ಲಿ ಚಳಿಗಾಲವೋ..? ಮಳೆಗಾಲವೋ..?- ಮಳೆಗಾಲ ಮುಗಿದ್ರೂ ತಗ್ಗದ ವರುಣಾರ್ಭಟ

    ಬೆಂಗಳೂರು: ರಾಜ್ಯದಲ್ಲಿ ನಿರಂತರ ಮಳೆ ಜನರನ್ನು ಕಂಗಾಲು ಮಾಡಿದೆ. ಅದರಲ್ಲೂ ಅಕಾಲಿಕ ಮಳೆಯಿಂದಾಗಿ ರಾಜ್ಯದ ರೈತನ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಕೈಗೆ ಬಂದ ಫಸಲು ಇದೀಗ ಮಳೆ ಪಾಲಾಗಿದ್ದು ಅನ್ನದಾತನ ಸ್ಥಿತಿ ಕೇಳೋರೇ ಇಲ್ಲದಂತಾಗಿದೆ.

    ಹೌದು. ಇಷ್ಟೊತ್ತಿಗಾಗಲೇ ಮಳೆ ನಿಂತೋಗಿ ಚಳಿ ಆರಂಭವಾಗಬೇಕಿತ್ತು, ಬಿಸಿಲು ಜೋರಾಗಬೇಕಿತ್ತು. ಆದರೆ ಮಳೆಯೇ ನಿಂತಿಲ್ಲ. ವಾಯುಭಾರ ಕುಸಿತದಿಂದಾಗಿ ರಾಜ್ಯದೆಲ್ಲೆಡೆ ಮಳೆ ಆಗ್ತಾನೇ ಇದೆ. ಇದರಿಂದಾಗಿ ಅನ್ನದಾತ ಈಗ ತಲೆಮೇಲೆ ಕೈ ಹೊತ್ತು ಕೂತಿದ್ದಾನೆ.

    ರಾಯಚೂರಿನ ಮಾನ್ವಿ, ಸಿಂಧನೂರು, ದೇವದುರ್ಗದ ನೂರಾರು ಎಕರೆಯಲ್ಲಿ ಬೆಳೆದಿದ್ದ ಭತ್ತ ಹಾನಿಯಾಗಿದೆ. ಎಪಿಎಂಸಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಭತ್ತ ಹಾಳಾಗಿದೆ. ವಿವಿಧ ಜಿಲ್ಲೆಗಳು ಹಾಗೂ ತೆಲಂಗಾಣದಿಂದ ಬಂದಿರುವ ರೈತರ ಭತ್ತ ಮಾರಾಟಕ್ಕೂ ಮುನ್ನವೇ ನೀರುಪಾಲಾಗಿದೆ. ಭತ್ತದ ಜೊತೆಗೆ ಹತ್ತಿ, ಈರುಳ್ಳಿ ಸಹ ಮಳೆಗೆ ಒದ್ದೆಯಾಗಿದ್ದು ರೈತರಿಗೆ ನಷ್ಟವಾಗಿದೆ. ಭತ್ತದ ಬೆಲೆ ಏಕಾಏಕಿ ಕ್ವಿಂಟಾಲ್‍ಗೆ 1900 ರೂ ಇಂದ 1400 ರೂಪಾಯಿಗೆ ಇಳಿದಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಚಿಕ್ಕಮಗಳೂರಿನಲ್ಲಿ ಅನ್ನದಾತರ ಸ್ಥಿತಿ ಮಾತ್ರ ಯಾರಿಗೂ ಬೇಡವಾಗಿದೆ. ನಿರಂತರ ಮಳೆಗೆ ಕಾಫಿನಾಡು ತೊಯ್ದು ತೊಪ್ಪೆಯಾಗಿ ಹೋಗಿದೆ. ಅಡಿಕೆ-ಕಾಫಿಬೀಜ ಕುಯ್ಯೋಕಾಗ್ತಿಲ್ಲ. ಕೊಯ್ದರೂ ಒಣಗಿಸೋಕೆ ಜಾಗವಿಲ್ಲ. ಹಾಗಾಗಿ ಕಾಫಿಯೆಲ್ಲಾ ತೋಟದಲ್ಲೇ ಬಿದ್ದೋಗಿದೆ. ಅಲ್ಪಸ್ವಲ್ಪ ಸಿಕ್ಕ ಅಡಿಕೆ, ಕಾಫಿ ಬೀಜವನ್ನು ಒಲೆ, ಮನೆಯೊಳಗೆಲ್ಲಾ ಒಣಗಿಸುವಂತಾಗಿದೆ. ಅಡಿಕೆ ತೋಟದಲ್ಲಿ ನೀರು ನಿಂತಿದೆ. ಕಡೂರು-ಅಜ್ಜಂಪುರ ಭಾಗದಲ್ಲಿ ಈರುಳ್ಳಿ ಬೆಳೆ ನೆಲಕಚ್ಚಿದೆ. ಮಳೆಯಿಂದ ಕಾಳುಮೆಣಸು ಕೂಡ ಮಣ್ಣುಪಾಲಾಗಿದೆ. ದಾವಣಗೆರೆಯಲ್ಲಿ ಧಾರಾಕಾರ ಮಳೆಗೆ 500 ಎಕರೆಯಷ್ಟು ಬೆಳೆದಿದ್ದ ಭತ್ತ ನೆಲಸಮವಾಗಿದೆ. ಇದನ್ನೂ ಓದಿ: ಬೂಟ್ ಪಾಲಿಶ್‌ ಮಾಡಿ ಸರ್ಕಾರದ ಖಾತೆಗೆ ಹಣ ಜಮೆ ಮಾಡಲು ಮುಂದಾದ ಕರವೇ

    ಹರಿಹರ ತಾಲೂಕಿನ ಸಾಲುಕಟ್ಟೆ, ಕಡ್ಲೆಗುಂದಿ, ದೇವರಬೆಳಕೆರೆ ಸೇರಿದಂತೆ ಹಲವು ಕಡೆಗಳಲ್ಲಿ ಕೊಯ್ಲಿಗೆ ಬಂದ ಭತ್ತದ ಬೆಳೆ ಈಗ ಮಣ್ಣುಪಾಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆಗೆ ಬೆಳೆ ನಾಶವಾಗಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಹೊನ್ನಾವರ, ಕುಮಟಾ, ಅಂಕೋಲಾ, ಜೋಯಿಡಾ ಭಾಗದಲ್ಲಿ ಮಳೆಯಿಂದ ರೈತರ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಫಸಲಿಗೆ ಬಂದ ಭತ್ತ, ಅಡಿಕೆ, ಕಾಳಮೆಣಸು ಸೇರಿದಂತೆ ಹಲವು ಬೆಳೆ ನೀರಿನಲ್ಲಿ ಕೊಚ್ಚಿಹೋಗಿದೆ. 795 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆದಿದ್ದ 85 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳೆಗಳು ನೆಲಕಚ್ಚಿದೆ.

    ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದರಿಂದ ಇನ್ನೂ ನಾಲ್ಕು ದಿನಗಳ ಕಾಲ ಅಬ್ಬರದ ಮಳೆ ಸುರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರೈತರು ಬೆಳೆದ ಭತ್ತ ಕಟಾವಿಗೆ ಬಂದಿದ್ದರೆ ಅಡಿಕೆ ಹಣ್ಣಾಗಿದೆ. ಕಾಳುಮೆಣಸು, ಕಾಫಿಬೀಜ ಕೈಗೆ ಬರಬೇಕಿದೆ. ವರ್ಷವಿಡೀ ಬೆವರು ಸುರಿಸಿ ಹೊಲ-ತೋಟದಲ್ಲಿ ಬೆಳೆದ ಬೆಳೆಯನ್ನು ಅಕಾಲಿಕ ಮಳೆ ಆಹುತಿ ತೆಗೆದುಕೊಂಡಿದೆ. ರೈತರ ವರ್ಷದ ಕೂಳಿಗೆ ಕುತ್ತು ತಂದಿದೆ.

  • ಮಳೆಗಾಲದಲ್ಲೂ 1 ಕಿ.ಮೀ ಕಾಲ್ನಡಿಗೆಯಲ್ಲಿ ತೆರಳಿ ನೀರು ತರುತ್ತಿದ್ದಾರೆ ಗ್ರಾಮಸ್ಥರು

    ಮಳೆಗಾಲದಲ್ಲೂ 1 ಕಿ.ಮೀ ಕಾಲ್ನಡಿಗೆಯಲ್ಲಿ ತೆರಳಿ ನೀರು ತರುತ್ತಿದ್ದಾರೆ ಗ್ರಾಮಸ್ಥರು

    ಚಾಮರಾಜನಗರ: ಮಳೆಗಾಲದಲ್ಲೂ ಕುಡಿಯುವ ನೀರಿಗಾಗಿ ಸೋಲಿಗರು ಕಿಲೋಮೀಟರ್ ಗಟ್ಟಲೇ ಅಲೆದಾಡಿ ನೀರು ಹೊತ್ತು ತರುತ್ತಿದ್ದಾರೆ.

    ಹನೂರು ತಾಲೂಕಿನ ಉತ್ತೂರು ಗ್ರಾಪಂನ ಕತ್ತೆಕಾಲು ಪೋಡು ಹಾಗೂ ಹಿರಿಹಂಬಲ ಪೋಡುಗಳಲ್ಲಿ ಕಳೆದ 6 ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೊರಿದ್ದು, ಒಂದು ಕಿಮೀ ದೂರದ ಕಾಡುಹಾದಿಯಲ್ಲಿ ಹಳ್ಳದ ನೀರನ್ನು ಜನರು ಹೊತ್ತು ತರುತ್ತಿದ್ದಾರೆ. ಪೋಡಿನಲ್ಲಿ ನೀರು ಎತ್ತುವ ಮೋಟಾರ್ ಸುಟ್ಟು ಹೋಗಿದೆ ಎಂದು ಸಬೂಬು ಹೇಳಿಕೊಂಡು ರಿಪೇರಿ ಮಾಡಿಸದ ಪರಿಣಾಮ ಕಾಡಿನೊಳಗೆ ನಡೆದು ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಕಾಲುವೆಗೆ ಬಿದ್ದು 10 ವರ್ಷದ ಮಗು ಸಾವು 

    ಕಾಡು ಪ್ರಾಣಿಗಳ ಭಯ ಹಾಗೂ ಮಳೆಯಿಂದ ಕೆಸರಿನೊಳಗೆ ನಡೆದು ಹೋಗುವ ಗಿರಿಜನರ ಕಷ್ಟವನ್ನು ಪಂಚಾಯಿತಿ ಅಧಿಕಾರಿಗಳು ಬಗೆಹರಿಸದಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ನೀರನ್ನು ಹೊತ್ತು ತರಲು ಕೂಲಿ ಬಿಟ್ಟು ಜನರು ಹೋಗಬೇಕು. ಈ ಹಿನ್ನೆಲೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕಿದೆ.

  • ಕಡಲ ಅಬ್ಬರ, ಏಂಡಿ ಬಲೆಗೆ ಸಿಕ್ತು ರಾಶಿ-ರಾಶಿ ಮೀನು

    ಕಡಲ ಅಬ್ಬರ, ಏಂಡಿ ಬಲೆಗೆ ಸಿಕ್ತು ರಾಶಿ-ರಾಶಿ ಮೀನು

    – ಏನಿದು ಏಂಡಿ ಬಲೆ?

    ಕಾರವಾರ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಇಂದು ಕೂಡ ಮುಂದುವರಿದಿದೆ. ಮೀನುಗಾರರ ಸಾಂಪ್ರದಾಯಿಕ ಏಂಡಿ ಬಲೆಗೆ ರಾಶಿ, ರಾಶಿ ಮೀನು ಬಿದ್ದಿವೆ.

    ಕಾರವಾರ ಕಡಲ ತೀರಭಾಗದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಕಡಲಲ್ಲಿ ಮೀನುಗಾರಿಕೆ ಸಂಪೂರ್ಣ ನಿರ್ಬಂಧ ಇರುವುದರಿಂದ ಮೀನುಗಾರರು ಸಾಂಪ್ರದಾಯಿಕ ಏಂಡಿ ಬಲೆಯ ಮೀನುಗಾರಿಕೆ ಪ್ರಾರಂಭಿಸಿದ್ದಾರೆ. ಮಳೆಗಾಲದಲ್ಲಿ ಎರಡು ತಿಂಗಳು ಮೀನುಗಾರಿಕೆಗೆ ಸಂಪೂರ್ಣ ನಿಬರ್ಂಧ ಇರುತ್ತದೆ. ಹೀಗಾಗಿ ಮೀನು ಪ್ರಿಯರಿಗೆ ಒಣ ಮೀನು ಖರೀದಿ ಮಾಡಬೇಕು. ಒಣಮೀನಿನ ದರ ಸಹ ಅಧಿಕವಾಗಿರುವುದರಿಂದ ಮೀನು ತಿನ್ನುವ ಆಸೆ ಬಿಡಬೇಕಾಗುತ್ತದೆ.

    ಏನಿದು ಏಂಡಿ ಬಲೆ?:
    ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದರೆ ತೀರ ಭಾಗದಲ್ಲೇ ಬಲೆಗಳನ್ನು ಬೀಸಿ ಮೀನು ಹಿಡಿಯಬಹುದು. ಇದಕ್ಕೆ ಏಂಡಿ ಬಲೆ ಮೀನುಗಾರಿಕೆ ಎಂದು ಕರೆಯುತ್ತಾರೆ. ಈ ಮೀನುಗಾರಿಕೆಯು ಮಳೆಗಾಲದಲ್ಲಿ ಆದಾಯವಿಲ್ಲದೇ ಖಾಲಿ ಉಳಿಯುವ ಮೀನುಗಾರರಿಗೆ ಲಾಭ ತರುವ ಸಂಪ್ರದಾಯಿಕ ಕೆಲಸವಾಗಿದೆ. ಇದನ್ನೂ ಓದಿ: ಚಿನ್ನದ ಬೋಟ್ ಸಾಗಾಟ – ಐವರ ಬಂಧನ

    ಮಳೆಯ ಅಬ್ಬರದ ನಡುವೆ ಕಾರವಾರ ಕಡಲ ತೀರದಲ್ಲಿ ಇಂದು ಏಂಡಿ ಬಲೆ ಮೀನುಗಾರಿಕೆ ಪ್ರಾರಂಭವಾಗಿದೆ. ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಭರ್ಜರಿ ಮೀನುಗಳ ಬೇಟೆಯಲ್ಲಿ ಮೀನುಗಾರರು ತೊಡಗಿದ್ದು, ಜನ ಮುಗಿಬಿದ್ದು ಖರೀದಿಯಲ್ಲಿ ನಿರತರಾಗಿದ್ದಾರೆ. ಪ್ರತಿ ಬುಟ್ಟಿಗೆ ಇಂದು ಸೋಮವಾರವಾದ್ದರಿಂದ 400 ದರ ನಿಗದಿ ಮಾಡಲಾಗಿದೆ. ಅನ್ಯ ದಿನದಲ್ಲಿ ದುಪ್ಪಟ್ಟು ದರ ಸಹ ಇರಲಿದೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಕಡಲ ಭೋರ್ಗರೆತ ಮೀನುಗಾರರಿಗೆ ವರದಾನದಂತಾಗಿದ್ದು, ಅನ್ನಕ್ಕೆ ದಾರಿ ಮಾಡಿಕೊಟ್ಟಿದೆ. ಇದನ್ನೂ ಓದಿ:  ತನ್ನನ್ನು ಕಾಪಾಡುವಂತೆ ಕನ್ನಂಬಾಡಿ ಕೂಗಿ ಹೇಳುತ್ತಿದೆ: ಸುಮಲತಾ

    ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಇದರಿಂದಾಗಿ ಜೂನ್ ನಿಂದ ಜುಲೈ ಅಂತ್ಯದವರೆಗೂ ಮೀನುಗಳು ಮೊಟ್ಟೆ ಇಟ್ಟು ಮರಿಮಾಡುವ ಸಮಯವಾಗಿದ್ದು, ಕಡಲ ಅಬ್ಬರದ ವಾತಾವರಣ ಸಹ ಮೀನುಗಳಿಗೆ ಮರಿ ಮಾಡಲು ಪೂರಕವಾಗಿದೆ. ಹೀಗಾಗಿ ಈ ಬಾರಿ ಮೀನಿನ ಸಂಖ್ಯೆ ಸಹ ಏರಿಕೆಯಾಗುತಿದ್ದು, ಮೀನುಗಾರರಿಗೆ ಲಾಭದ ನಿರೀಕ್ಷೆ ಮೂಡಿಸಿದೆ.

  • ಮಳೆಗಾಲದಲ್ಲಿ ಅಂದವಾದ ತ್ವಚೆಯ ಮೇಲೆ ಇರಲಿ ನಿಮ್ಮ ಗಮನ

    ಮಳೆಗಾಲದಲ್ಲಿ ಅಂದವಾದ ತ್ವಚೆಯ ಮೇಲೆ ಇರಲಿ ನಿಮ್ಮ ಗಮನ

    ಳೆಗಾಲ ಅಂದ್ರೆ ಕೆಲವರಿಗೆ ತುಂಬಾ ಕಿರಿಕಿರಿ ಅನಿಸಿದ್ರೆ, ಇನ್ನೂ ಕೆಲವರಿಗೆ ತುಂಬಾ ಇಷ್ಟ. ಈ ಮಧ್ಯೆ ನಾವು ನಮ್ಮ ತ್ವಚೆಯ ಮೇಲೂ ಗಮನಹರಿಸಬೇಕಾದ ಅವಶ್ಯಕತೆ ಇದೆ. ಮಳೆಗಾಲದಲ್ಲಿ ಚರ್ಮದ ತುರಿಕೆ, ಅಲರ್ಜಿ, ಗುಳ್ಳೆ ಮೊದಲಾದ ಸಮಸ್ಯೆಗಳು ಎದುರಾಗುತ್ತವೆ. ಈ ರೀತಿಯ ಸಮಸ್ಯೆಗಳಿಂದ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಬಹುದಾದ ಕೆಲವೊಂದು ಸಲಹೆಗಳನ್ನು ಇಲ್ಲಿ ವಿವರಿಸಲಾಗಿದೆ.

    * ನಿಮ್ಮ ಚರ್ಮ ಒಣಗಿದಂತೆ ಅಥವಾ ತುರಿಕೆ ಕಂಡುಬಂದರೆ ಕೊಬ್ಬರಿ ಎಣ್ಣೆಯನ್ನು ಹಚ್ಚೊ ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಈ ರೀತಿಯ ಸಮಸ್ಯೆಯಿಂದ ಪಾರಾಗಬಹುದು.

    * ಸ್ನಾನ ಮಾಡಿದ ಬಳಿಕ ಮಾಯಿಸ್ಚರೈಸರ್ ಬಳಕೆ ಮಾಡಿ.

    * ನೀರು, ಜ್ಯೂಸ್ ಹೆಚ್ಚಾಗಿ ಕುಡಿಯಿರಿ. ಹೆಚ್ಚಾಗಿ ಬಿಸಿ ನೀರು ಕುಡಿಯುವುದು ಸೂಕ್ತ. ಅಲ್ಲದೆ ಮುಖವನ್ನು 3-4 ಬಾರಿ ತೊಳೆಯಿರಿ. ಹೀಗೆ ಮಾಡುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗಿ ಆಕರ್ಷಕ ತ್ವಚೆ ಕಾಂತಿ ಪಡೆಯಬಹುದು.

    * ಮುಖದಲ್ಲಿ ಮೊಡವೆ ಹಾಗೂ ಗುಳ್ಳೆಗಳಂತಹ ಸಮಸ್ಯೆಯಿದ್ದರೆ ಮುಲಾಮು ಹಚ್ಚುವ ಬದಲು ಅರಿಶಿಣ ಹಚ್ಚುವುದು ಹೆಚ್ಚು ಸೂಕ್ತ.

    * ನಿಮ್ಮದು ಆಯಿಲ್ ಸ್ಕಿನ್ ಆಗಿದ್ದರೆ ಬೇವಿನ ಎಲೆ ಕುದಿಸಿ ಬಳಿಕ ಆ ನೀರನ್ನು ಸೋಸಿ ತಣಿದ ಬಳಿಕ ಅದರಲ್ಲಿ ಮುಖ ತೊಳೆದುಕೊಳ್ಳಿ.

    * ಮುಖದಲ್ಲಿ ತುರಿಕೆ ಕಾಣಿಸಿಕೊಂಡರೆ 1 ಸ್ಪೂನ್ ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಗೆ ಸ್ವಲ್ಪ ಸಕ್ಕರೆ ಬೆರೆಸಿ ಹಚ್ಚಿ 2 ನಿಮಿಷ ಸ್ಕ್ರಬ್ ಮಾಡಿದರೆ ನಿಮ್ಮ ತ್ವಚೆ ಅಂದದ ಜೊತೆ ಮೃದುವಾಗುತ್ತದೆ.

    * ಆಲೂಗಡ್ಡೆಯನ್ನು ಕತ್ತರಿಸಿ, ಅದನ್ನು ಮೊಡವೆ ಮೇಲೆ ಮೆಲ್ಲನೆ ತಿಕ್ಕಿ, ನಂತರ ಆ ರಸ ಒಣಗಿದ ಮೇಲೆ ಮುಖ ತೊಳೆಯಿರಿ. ಹೀಗೆ ಮಾಡಿದರೆ ಆಕರ್ಷಕ ತ್ವಚೆ ಕಾಂತಿ ಪಡೆಯುವುದರಲ್ಲಿ ಎರಡು ಮಾತಿಲ್ಲ.

  • ಪ್ರವಾಸಿಗರನ್ನು ಸೆಳೆಯಲು ಬೆಟ್ಟವನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ- ಸ್ಥಳೀಯರಲ್ಲಿ ಆತಂಕ

    ಪ್ರವಾಸಿಗರನ್ನು ಸೆಳೆಯಲು ಬೆಟ್ಟವನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ- ಸ್ಥಳೀಯರಲ್ಲಿ ಆತಂಕ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪ, ಭೂಕುಸಿತ. ಸಾವು-ನೋವುಗಳು ಸಂಭವಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಬೆಟ್ಟಗುಡ್ಡಗಳಲ್ಲಿ ಯಂತ್ರೋಪಕರಣಗಳನ್ನು ಬಳಕೆ ಮಾಡಬಾರದು ಬೆಟ್ಟಗುಡ್ಡಗಳಲ್ಲಿ ರೆಸಾರ್ಟ್, ಕಟ್ಟಡ ಕಾಮಗಾರಿ ಮಾಡಬಾರದು ಎಂದು ಸರ್ಕಾರಕ್ಕೆ ವರದಿ ನೀಡಿದೆ. ಹೀಗಿದ್ದರೂ ಪ್ರವಾಸಿಗರನ್ನು ಸೆಳೆಯಲು ತೋಟಗಾರಿಕೆ ಇಲಾಖೆ ಬೆಟ್ಟಗಳನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ ಮಾಡಲು ಮುಂದಾಗಿದ್ದು, ಬೆಟ್ಟದ ಕೆಳಗೆ ವಾಸ ಮಾಡುವ ಜನರಿಗೆ ಇದೀಗ ಅತಂಕ ಶುರುವಾಗಿದೆ.

    ಮಳೆಗಾಲ ಆರಂಭವಾಯಿತು ಅಂದ್ರೆ ಕೊಡಗಿನ ಜನರಿಗೆ ಅತಂಕ ಶುರುವಾಗುತ್ತದೆ. ಕಳೆದ ಮೂರು ವರ್ಷದಿಂದ ಅರಂಭವಾಗಿರುವ ಜಲಪ್ರಳಯ ಭೂಕುಸಿತ ಇಲ್ಲಿಯ ಜನರನ್ನು ಬೆಚ್ಚಿಬೀಳಿಸಿದೆ. ಕಳೆದ ವರ್ಷ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಗಜಗಿರಿ ಬೆಟ್ಟ ಪ್ರದೇಶದಲ್ಲಿ ನಡೆದ ದುರಂತದಲ್ಲಿ ಅರ್ಚಕರಾದ ನಾರಾಯಣ್ ಅಚಾರ್ ಕುಟುಂಬವೇ ಭೂ ಸಮಾಧಿಯಾಗಿದ್ದನ್ನು ಯಾರೂ ಮರೆತ್ತಿಲ್ಲ. ಹೀಗಿದ್ದರೂ ಮಂಗಳೂರು ರಸ್ತೆಗೆ ಹೊಂದಿಕೊಂಡಿರುವ ರಾಜಸೀಟ್ ವ್ಯೂವ್ ಪಾಯಿಂಟ್ ಮಾಡಲು ಸುಮಾರು ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಟ್ಟ ಕೊರೆಯುವ ಕಾಮಗಾರಿಯನ್ನು ತೋಟಗಾರಿಕೆ ಇಲಾಖೆ ಅರಂಭ ಮಾಡಿದೆ. ಇದನ್ನೂ ಓದಿ: ಕೊಡಗಿನ ವಿವಿಧೆಡೆ ಮುಂದುವರಿದ ಮಳೆ- ಹೆಗ್ಗಳ ಗ್ರಾಮದಿಂದ ಕುಟುಂಬಗಳ ಸ್ಥಳಾಂತರ

    ನಾಲ್ಕು ಹಂತವಾಗಿ ಬೆಟ್ಟವನ್ನೇ ಕತ್ತರಿಸಿ ತೆಗೆಯುವ ಕಾಮಗಾರಿ ನಡೆಸುತ್ತಿದ್ದು, ಇದರಿಂದಾಗಿ ಬೆಟ್ಟದ ಕೆಳಗೆ ವಾಸಮಾಡುತ್ತಿರುವ ಹತ್ತಾರು ಕುಟುಂಬ ಭಯದಲ್ಲಿ ದಿನ ಕಳೆಯುತ್ತಿದೆ. ಬೆಟ್ಟ ಕುಸಿದು ಬಿದ್ದರೆ ಅಪಾಯ ಅಗುವ ಸಾಧ್ಯತೆ ಹೆಚ್ಚಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ಪೋಲು ಮಾಡಲಾಗುತ್ತಿದ್ದು, ಮಡಿಕೇರಿ ನಗರದಲ್ಲಿ ಒಂದು ರಸ್ತೆ ಕೂಡ ನಡೆದಾಡಲು ಸಮರ್ಪಕವಾಗಿಲ್ಲ. ಆದರೆ ರಾಜಾಸೀಟ್ ಗುಡ್ಡದಲ್ಲಿ ಕಾಂಕ್ರಿಟ್ ರಸ್ತೆ, ಮೆಟ್ಟಿಲು, ವ್ಯೂವ್ ಪಾಯಿಂಟ್, ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳೆವಣಿಗೆಯಾಗಿದ್ದು, ಕಾಂಕ್ರಿಟ್ ಕಾಡಿನ ಮೂಲಕ ರಭಸವಾಗಿ ಹರಿಯುವ ನೀರು ಗುಡ್ಡ ಕುಸಿಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲಿದೆ. ಇದನ್ನೂ ಓದಿ: ಕೊಡಗಿನ 47 ಪ್ರವಾಹ, 38 ಭೂಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಿದ ಜಿಲ್ಲಾಡಳಿತ

    ಬೆಟ್ಟ, ಗುಡ್ಡಗಳಲ್ಲಿ ಮರ, ಗಿಡ, ಹುಲ್ಲಿದ್ದರೆ ಮಳೆಯ ನೀರಿನಿಂದ ಅಪಾಯ ಸಂಭವಿಸುವುದಿಲ್ಲ. ಆದರೆ ಅಗೆದು ಸಮತೋಲನವನ್ನು ಹದಗೆಡಿಸಿದರೆ ಕುಸಿಯುವ ಭೀತಿ ಹೆಚ್ಚಾಗಿದೆ. ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ಪ್ರಕೃತಿ ವರವಾಗಿ ನೀಡಿರುವ ಪ್ರವಾಸಿತಾಣಗಳನ್ನು ಕುರೂಪಗೊಳಿಸುತ್ತಿರುವುದನ್ನು ಜಿಲ್ಲಾಡಳಿತ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೋಡಿಯು ಮೌನಕ್ಕೆ ಶರಣಾಗಿದ್ದಾರೆ. ಈ ಕುರಿತು ಸ್ಥಳೀಯ ಸಾರ್ವಜನಿಕರು ಎಚ್ಚರಿಕೆ ನೀಡಿದ್ದು, ಕಾಮಗಾರಿ ವಿರುದ್ಧ ನ್ಯಾಯಾಲಯದ ಮೋರೆ ಹೋಗುವುದಾಗಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಮೂರು ವರ್ಷದಿಂದ ಅಗುತ್ತಿರುವ ಅನಾಹುತಗಳ ಬಗ್ಗೆ ಜಿಲ್ಲಾಡಳಿತಕ್ಕೆ ಅರಿವು ಇದ್ದರೂ ಕೂಡ ಮತ್ತೆ ಬೆಟ್ಟ ಕೊರೆದು ಕಾಮಗಾರಿ ಮಾಡುತ್ತಿದೆ. ಒಂದು ವೇಳೆ ಬೆಟ್ಟ ಕುಸಿದು ದುರಂತ ಸಂಭವಿಸಿದರೆ ಜಿಲ್ಲಾಡಳಿತ ಮತ್ತು ಸರ್ಕಾರವೇ ನೇರ ಹೊಣೆ ಹೋರಬೇಕು ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.